ಕ್ವಾಲಿಫಿಕೇಷನ್ ಇದ್ದ ಮಾತ್ರಕ್ಕೆ ವ್ಯಕ್ತಿ ಶ್ರೇಷ್ಠವೆಂದು ಅಲ್ಲ!!: ಬಸವನಗೌಡ ಹೆಬ್ಬಳಗೆರೆ ಸರಣಿ
ಹೆಚ್ಚೆಚ್ಚು ಓದಿದಂತೆ ಶಿಕ್ಷಣವು ನಮ್ಮಲ್ಲಿ ಉದಾರತೆಯನ್ನು ಬೆಳೆಸಬೇಕಿತ್ತು. ಹೃದಯ ವೈಶಾಲ್ಯತೆಯನ್ನು ಬೆಳೆಸಬೇಕಿತ್ತು. ಎಲ್ಲರೊಡನೆ ಹೊಂದಿಕೊಂಡು ಹೋಗುವ ಗುಣವನ್ನು ಬೆಳೆಸಬೇಕಿತ್ತು. ಆದರೆ ಕ್ವಾಲಿಫಿಕೇಶನ್ ಅನ್ನುವುದು ನಮ್ಮಲ್ಲಿ ಅಹಂಕಾರವನ್ನು ಬೆಳೆಸುತ್ತಿದೆ. ನಮ್ಮಲ್ಲಿ ಸಂಕುಚಿತತೆಯನ್ನು ಮೂಡಿಸುತ್ತಿದೆ. ಹೊಂದಾಣಿಕೆಯ ಕೊರತೆಯನ್ನು ಮೂಡಿಸುತ್ತಿದೆ. ಕೆಲವರು ಈ ಮನೋಭಾವ ತೋರುವುದಿಲ್ಲವಾದರೂ ಬಹುತೇಕರು ಇದೇ ರೀತಿಯ ಮನೋಭಾವ ತೋರುತ್ತಾರೆಂಬುದು ನನ್ನ ಅನುಭವಕ್ಕೆ ಬಂದಿದೆ. ಕೆಲವರು ಇದಕ್ಕೆ ವ್ಯತಿರಿಕ್ತ ಇದ್ದಿರಬಹುದು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ಮೂರನೆಯ ಕಂತು ನಿಮ್ಮ ಓದಿಗೆ

