ಅಕ್ಟೋಬರ್ ೧, ೨೦೧೪
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ನಡುವಯಸ್ಸಿನ ಆ ಅರಬಿ ಚಹರೆಯ ಸಿರಿಯನ್ ಗಗನಸಖಿ ತಳಹರಿದ ನನ್ನ ಹಳೆಯ ಬೂಟನ್ನು ನೋಡಿ ಮನಸ್ಸಿನಲ್ಲೇ ನಗುತ್ತಿದ್ದಳು. ಅವಳು ಇನ್ನಷ್ಟು ನಗಲಿ ಎನ್ನುವ ಹುನ್ನಾರದಿಂದ ನಾನು ಹರಿದ ಬೂಟನ್ನು ಮತ್ತಷ್ಟು ಮುಂದಕ್ಕೆ ಕಾಣುವಂತೆ ಕಾಲು ಉದ್ದ ಮಾಡಿ ಕೂತಿದ್ದೆ. ಎರಡನೇ ಮಹಾಯುದ್ಧದಲ್ಲಿ ಸೈನಿಕರನ್ನು ಒಯ್ಯುತ್ತಿದ್ದ ಹಡಗಿನ ಮಾದರಿಯ ಆ ವಿಮಾನ ಸಿರಿಯಾ ದೇಶದ ರಾಜಧಾನಿ ದಮಾಸ್ಕಸ್‌ನಿಂದ ಆಕಾಶಕ್ಕೆ ಏರಿ ಅರೇಬಿಯಾದ ಮರುಭೂಮಿಯ ಮೇಲೆ ಕತ್ತಲಲ್ಲಿ ನಕ್ಷತ್ರದಂತೆ ಭಾರತದ ಕಡೆ ಹಾರುತ್ತಿತ್ತು. ನಾವು ಭಾರತದ ನಾಲ್ಕು ಮಂದಿ ಬರಹಗಾರರು  ಹತ್ತು ವರ್ಷಗಳ ಹಿಂದೆ ಇಂತಹದೇ  ರಂಜಾನ್ ತಿಂಗಳ ನಡುವಿನ ಹತ್ತು ದಿನಗಳ ಕಾಲ ಸಿರಿಯಾ ಎಂಬ ಅರಬ್ ಗಣರಾಜ್ಯದಲ್ಲಿ ಓಡಾಡಿ ವಾಪಸಾಗುತ್ತಿದ್ದೆವು.ನನಗೆ ಒಳಗೊಳಗೇ ನಗು ಬರುತ್ತಿತ್ತು. ಒಂದು ಕಾಲದಲ್ಲಿ ಪರಮ ಸುಂದರಿಯಾಗಿರಬಹುದಾಗಿದ್ದ ಆ ಅಗಲ ಹೆಗಲಿನ, ದೊಡ್ಡ ಕಣ್ಣುಗಳ, ಉದ್ದಾನುದ್ದ ಅರೇಬಿಯನ್ ಗಗನಸುಖಿ. ಬಹುಶಃ ಯೌವನವಿಡೀ ಕಣ್ಣು ಮಿಟುಕಿಸಿ, ಮಿಟುಕಿಸಿ ಈಗ ಬೇಡವೆಂದು ಕೊಂಡರೂ ಅವಳ ಕಣ್ಣುಗಳು ಮಿಟುಕಿಸುವಂತೆ ನಾಟಕವಾಡಿ ಸುಮ್ಮನಾಗುತ್ತಿದ್ದವು. ಬಹುಶಃ ತಳಹರಿದ ನನ್ನ ಶೂಗಳನ್ನು ಕಂಡ ಆಕೆ ಈತ ವಿಸಾ ಇಲ್ಲದೆ ತನ್ನ ದೇಶದಿಂದ ಹೊರದಬ್ಬಲ್ಪಟ್ಟಿರುವ  ಯಾವನೋ ಒಬ್ಬಭಾರತೀಯ ನಿರಾಶ್ರಿತನಿರಬಹುದು ಎಂದು ಗದರಿಸಿ ಮಜಾ ಪಡೆದುಕೊಳ್ಳುವ ಹುನ್ನಾರದಲ್ಲಿರುವಂತೆ ಕಂಡಿತು.‘ನಾನೊಬ್ಬ ಭಾರತೀಯ ಬರಹಗಾರ, ನನ್ನ ಹೊಸ ಶೂಗಳನ್ನು ನಿಮ್ಮ ದೇಶದ ಪುರಾತನ ಮಸೀದಿಯೊಂದರ ಮುಂದಿನಿಂದ ಪಾಲಿಶ್ ಮಾಡುವ ಹುಡುಗರು...
 ಉತ್ತರಾಯಣ ಕಾಲಂ:ತಿರುಮಲೇಶರ ವಾರದ ಬರಹ

“ಕೆಂಡಸಂಪಿಗೆಯಲ್ಲಿ ಪ್ರಕಟವಾದ ನನ್ನ ಹಲವಾರು ಲೇಖನಗಳನ್ನು ಓದಿ ಪ್ರತಿಕ್ರಿಯೆ ನೀಡಿದವರಿಗೆ ಕೃತಜ್ಞತೆಗಳು. ಲೇಖಕರು ಬರೆಯುತ್ತಾರೆ; ಆದರೆ ಲೇಖನಗಳನ್ನು ಯಾರು ಓದುತ್ತಾರೆ ಎನ್ನುವ ಕುರಿತು ಗೊತ್ತಿರುವುದಿಲ್ಲ. ಅವರ ಅಭಿಪ್ರಾಯಗಳೂ ಗೊತ್ತಾಗುವುದಿಲ್ಲ. ಹಿಂದೆ ಮುದ್ರಣ ಯುಗದಲ್ಲಿ ಓದುಗರ ಕೆಲವು ಅಭಿಪ್ರಾಯಗಳು ಪತ್ರರೂಪದಲ್ಲಿ ಪ್ರಕಟವಾಗುತ್ತಿದ್ದುವು. ಈಗ ವೆಬ್‌ಜರ್ನಲುಗಳಲ್ಲಾದರೆ ಓದುಗರ ಪ್ರತಿಕ್ರಿಯೆಗಳು ಥಟ್ಟೆಂದು ಪ್ರಕಟವಾಗಲು ಅವಕಾಶವಿದೆ. ನನ್ನ ಲೇಖನಗಳಿಗೂ ಅಂಥ ಪ್ರತಿಕ್ರಿಯೆಗಳು ಬಂದು ಓದುಗರ ಅಭಿಪ್ರಾಯಗಳು ಗೊತ್ತಾಗುತ್ತಿವೆ. “ಕೆಂಡಸಂಪಿಗೆಯನ್ನು ಮೊದಲಿಂದಲೂ ಓದುತ್ತ ಬಂದಿರುವವರಿಗೆ ಗೊತ್ತಿದೆ, ಅನಾಮಿಕ ಇಲ್ಲವೇ ಗುಪ್ತನಾಮಿಕ ಓದುಗ ಪ್ರತಿಕ್ರಿಯೆಗಳಿಗೆ ನಾನು ವಿರೋಧಿಯಲ್ಲ. ಇದು ಮುಕ್ತವಾಗಿ ಅಭಿಪ್ರಾಯ ಪ್ರಕಟಿಸುವುದಕ್ಕೆ ಅನುಕೂಲವಾಗುತ್ತದೆ. ಇದರಿಂದ ಲೇಖಕರಿಗೇ ಒಳ್ಳೆಯದು. ಆದರೆ ಇಲ್ಲೊಂದು ಸೂಕ್ಷ್ಮ ಹೇಳಬೇಕಾಗುತ್ತದೆ: ವೆಬ್‌ಸೈಟ್ ಜರ್ನಲ್ ಒಂದು ಓದುಗರಿಗೆ ಇಂಥ ಅವಕಾಶ ಕೊಟ್ಟಿರುವಾಗ ಓದುಗರು ಅದನ್ನು ದುರುಪಯೋಗಪಡಿಸದೆ ಇರುವುದು ಮುಖ್ಯ. ಸ್ವಾತಂತ್ರ್ಯದ ಜತೆ ಜವಾಬ್ದಾರಿ ಕೂಡ ಇರುತ್ತದೆ. ದುರುಪಯೋಗ ಹೇಗೆ ಎಂದರೆ: ಲೇಖಕರ ಮೇಲೆ ವೈಯಕ್ತಿಕ ಧಾಳಿ...

 ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು
ವೈಶಾಲಿ ಹೆಗಡೆ ಅನುವಾದಿಸಿದ ಡರೋತಿ ಪಾರ್ಕರ್ ಕವಿತೆಗಳು
ಇದು ಕನ್ನಡದ ಹೊಸ ಕವಿತೆಗಳ ತಾಣ. ಬಿರಿದ ಕುಸುಮಗಳಿಂದ ಕಿಕ್ಕಿರಿದುಹೋಗಿರುವ ಖುಷಿಯ ಟೊಂಗೆಗಳಲ್ಲಿ ಸುಮ್ಮನೇ ಕುಳಿತಿರುವ ಒಂಟಿಹಕ್ಕಿಗಳು ಇಲ್ಲಿರುವ ಈ ಕವಿತೆಗಳು.ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು.ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ. ಕೆಲವೊಮ್ಮೆ ಜೋರು ಬಾಯಿಯ ಗಟ್ಟಿ ತೋಳಿನ ಕವಿತೆಗಳೂ ಇಲ್ಲಿರುತ್ತವೆ....
ಭೂತವಾದ ಬೆಳ್ಳಾರೆಯ ರಾಜಕುಮಾರ:ಲಕ್ಷ್ಮೀ.ಜಿ.ಪ್ರಸಾದ್ ಸರಣಿ

ತುಳುನಾಡಿನ ಭೂತ ಪದಕ್ಕೆ ಕನ್ನಡದ ಭೂತ ಅಥವಾ ದೆವ್ವ ಎಂಬ ಅರ್ಥವಿಲ್ಲ. ತುಳುನಾಡಿನ ಭೂತಗಳು ದುಷ್ಟ ಶಿಕ್ಷಣ ಶಿಷ್ಟ ರಕ್ಷಕ ಶಕ್ತಿಗಳು. ಇವು ತುಳುವರ ಆರಾಧ್ಯ ದೈವಗಳು.ಸಂಸ್ಕೃತದ ಪೂತಂ ಎಂದರೆ ಪವಿತ್ರವಾದದ್ದು ಎಂಬ ಪದವೇ ಕಾಲಾಂತರದಲ್ಲಿ ಬೂತೊ ಎಂದಾಗಿ ಸಂಸ್ಕೃತೀಕರಣಗೊಂಡು ಭೂತ ಎಂದಾಗಿರುವ ಸಾಧ್ಯತೆ ಇದೆ. ತುಳುನಾಡಿನ ಭೂತಗಳಲ್ಲಿ ಹೆಚ್ಚಿನವರು ಮಾನವ ಮೂಲವನ್ನು...

ನರಿ ಮರಿಯನ್ನು ತಂದು ಬೈಸಿಕೊಂಡೆ!:ಪೆಜತ್ತಾಯ ವಾರದ ಬರಹ

ಜಿಂಕೆಯ ಮರಿಯ ಮರಣವನ್ನು ಮರೆಯುವ ಮುನ್ನವೇ ನನಗೆ ಇನ್ನೊಂದು ಮರಿಯ ಪ್ರಸಂಗ ಇದುರಾಯಿತು. ಇದು ಕೂಡಾ ಸಾವಿರದ ಒಂಭೈನೂರ ಎಪ್ಪತ್ತನಾಲ್ಕನೆಯ ಇಸವಿಯ ಏಪ್ರಿಲ್ ತಿಂಗಳ ಸಮಯ.

ಹೊಸಾ ರೋಡಿನ ಕೆಲಸ

ನಮ್ಮಲ್ಲಿಯ ಅತೀ ಹಳೆಯ ಜನವಸತಿ ಇಲ್ಲದ ‘ಹಳೇ ತೋಟ’ ಎಂಬ ಕಾಫಿಯ ತಾಕು ಇದೆ. ಇದು ನಮ್ಮಲ್ಲಿಯ ಅತೀ ಎತ್ತರದ ಕಾಡಿನ ಬದಿಯ ತಾಕು. ಅದರ ವಿಸ್ತೀರ್ಣ ಸುಮಾರು ಇಪ್ಪತ್ತು...

 
 ಚಂಚಲ ಮೈ ಮುರಿತದ ಚೆಲುವು: ತೋಳ್ಪಾಡಿ ಲಹರಿ

ಈಗ ನಾವು ನೋಡಬೇಕಿರುವ ಹಾಡು ಈ ಹಿಂದಣ ಹಾಡಿನ ನೇರ ಮುಂದಿನ ಮಾತಿನಂತಿದೆ.ಅಂಥ ಅನುಸ್ಯೂತತೆ.ನಾವು ನೋಡಿದ್ದೆವು - ಸೃಷ್ಟಿ ಎಂಬ ಮಹಾ ಚಲನೆಯನ್ನು, ಹುಟ್ಟಿ ಬೆಳೆದು ಲಯ ಹೊಂದಿ ಮರು ಹುಟ್ಟುವ ಪಂಚಕೃತ್ಯಗಳಾಗಿ ನೋಡಿದರೆ, ಆ ಪಂಚಕೃತ್ಯಗಳ ಹಿಂದೆ ಒಂದು ಪ್ರೇರಕವಾದ ಸನ್ನೆ ಇದೆ ಎಂದು.  ಆ ಸನ್ನೆಗೊಂದು ಆಕಾರ ಕೊಟ್ಟರೆ, ಒಂದು ಭಾವವನ್ನು ಕಲ್ಪಿಸಿದರೆ - ಅದು ತಾಯಿ ಭಗವತಿಯ ಕಣ್ಣ ಸನ್ನೆ.  ಭ್ರೂವಿಕ್ಷೇಪ.  ಅದು ಇಚ್ಛಾ ಜ್ಞಾನ ಕ್ರಿಯಾ ಶಕ್ತಿಗಳ ಮುಪ್ಪುರಿಯಾದ ಈ ಸೃಷ್ಟಿಯ ನಿರಂತರ ಚಲನೆಗೆ ಮೂಲವಾದ ಸನ್ನೆ. ಚಲನೆಗೆ ಕಾರಣವಾದ ಆದ್ಯಸ್ಪಂದ! - ಇದು ಹಿಂದಿನ ಹಾಡಿನ ಭಾವ.ಈಗಿನ ಹಾಡು, ಈ ಸೃಷ್ಟಿಯನ್ನು ಮೂರು ಮುಖವಾಗಿ ನಿರ್ವಹಿಸುವ ಮೂರು ಮೂರ್ತಿಗಳ ನಿಲುವನ್ನು, ಅವರ ಭಾವಾವಸ್ಥೆಯನ್ನು, ಸೃಷ್ಟಿಯನ್ನು ನಿರ್ವಹಿಸುವುದೆಂದರೇನೆಂಬ ಹೊಳಹನ್ನು ನೀಡುವ ಹಾಡು.

ಹಾಡು ಹೀಗಿದೆ:ತ್ರಯಾಣಾಂ ದೇವಾನಾಂ ತ್ರಿಗುಣಜನಿತಾನಾಂ ತವಶಿವೇಭವೇತ್ ಪೂಜಾ ಪೂಜಾ ತವ ಚರಣಯೋರ್ಯಾವಿರಚಿತಾತಥಾಹಿ ತ್ವತ್ ಪಾದೋದ್ವಹನ ಮಣಿಪೀಠಸ್ಯ ನಿಕಟೇಸ್ಥಿತಾಹ್ಯೇತೇ ಶಶ್ವನ್ಮುಕುಲಿತ ಕರೆತ್ತಂಸಮಕುಟಾ: ||

ಕನ್ನಡದಲ್ಲಿ ಹೀಗಾಗಬಹುದು:

ತಾಯೆ ನಿನ್ನ ಅಡಿಗಳಲ್ಲಿ ನಡೆಸುವಂಥ ಪೂಜೆಯುಮೂರುಗುಣದಿ ಹುಟ್ಟನುಳ್ಳ ತ್ರಿಮೂರ್ತಿಗಳಿಗು ಸಲುವುದು.ನಿನ್ನ ಅಡಿಯ ಮುಡಿಯುವಂಥ ಮಣಿಪೀಠದ ಸನಿಯದಿಮುಗಿದ ಕೈಯೆ ಮಕುಟವಾಗಿ ಇರುವರವರು ನಿತ್ಯವು.

ಹೌದು.  ಮೂರು ಮೂರ್ತಿಗಳಿದ್ದಾರೆ.  ಸೃಷ್ಟಿ - ಸ್ಥಿತಿ - ಲಯಗಳೆಂಬ ಮೂರು ಅವಸ್ಥೆಗಳನ್ನವರು ನಿರ್ವಹಿಸುತ್ತಾರೆ.  ಈ ಮೂರು ಚಟುವಟಿಕೆಗಳು ಮೂರು ಗುಣಗಳ ಫಲಿತಗಳು.ಸೃಷ್ಟಿಯು ರಜಸ್ಸು, ಸ್ಥಿತಿಯು ಸತ್ತ್ವ ಮತ್ತು ಲಯವು ತಮ.ಈ ಮೂರು ಗುಣಗಳೇ ಮೈವೆತ್ತವರು ತ್ರಿಮೂರ್ತಿಗಳು.ಅವರು ನಿರ್ವಹಿಸುತ್ತಿರುವ ಕೆಲಸ ಅವರ ಸ್ವಭಾವವೇ ಆಗಿದೆ.ಅಂದರೆ - ಸ್ವಭಾವದ ಅಭಿವ್ಯಕ್ತಿಯೇ ಸೃಷ್ಟಿ; ಮತ್ತು ಸ್ವಭಾವದ ಅಭಿವ್ಯಕ್ತಿಗಾಗಿಯೇ ಸೃಷ್ಟಿ.ಇದೀಗ...

Font Help
Site Web
ಜನಮತ
ಕೆಂಡಸಂಪಿಗೆಯಲ್ಲಿ ನನ್ನ ಮೆಚ್ಚಿನ ಕೆಲಸ
 
 
Getting poll results. Please wait...
Sampige Feed
Follow Kendasampige on twitter
Kendasampige on Facebook
Spread Kendasampige