ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ - ಸಿಡ್ನಿಯ ಯುವ ದಿನದಲ್ಲಿ ಪೋಪ್ ಬಿಡಾರ    
ಸುದರ್ಶನ್
ಬುಧವಾರ, 9 ಜುಲೈ 2008 (06:13 IST)
ಬರುವ ವಾರ ಜಾಗತಿಕ ಯುವ ದಿನ ಸಿಡ್ನಿಯಲ್ಲಿ ನಡೆಯಲಿದೆ. ವಾರವಿಡೀ ನಡೆಯುವ ಉತ್ಸವಕ್ಕೆ ಜಗತ್ತಿನ ಮೂಲೆ ಮೂಲೆಯಿಂದ ಜವ್ವನಿಗರು ಈ ಊರಿಗೆ ಬರುತ್ತಾರೆ. ಸಿಡ್ನಿವಾಸಿಗಳಿಗೆ ಒಂದು ಕಡೆ ಉತ್ಸಾಹವಾದರೆ, ಮತ್ತೊಂದು ಕಡೆ ಆತಂಕ. ಒಂದು ವಾರ ರೈಲು, ಬಸ್ಸುಗಳು ಉತ್ಸವಿಗಳಿಂದ ತುಂಬಿಕೊಂಡು ದೈನಂದಿಕಕ್ಕೆ ದೊಡ್ಡ ತೊಡರಾಗುತ್ತದೆ. ಕೆಲವೇ ದಿನಗಳಾದ್ದರಿಂದ ಸಹಿಸಿಕೊಳ್ಳುವುದಕ್ಕೆ ಅಡ್ಡಿಯಿಲ್ಲ. ಅಲ್ಲದೆ, ಇದರಿಂದ ಸಿಡ್ನಿಗೆ ಜಾತ್ರೆಯ ಕಳೆಬರುವುದೇನೋ ನಿಜ. ಆದರೆ ಈ ಜಾತ್ರೆಯ ಹಿಂದಿನ ಶಕ್ತಿಯ ಬಗ್ಗೆ ಮಾತ್ರ ಹಲವರು ಮುಜುಗರ ಪಡುತ್ತಿದ್ದಾರೆ.

ಯಾರೋ ನಂಬಿಕಸ್ತ ಧರ್ಮಿಷ್ಟರು ಒಟ್ಟಿಗೆ ಸೇರಿ ಮಾಡಿಕೊಳ್ಳುವ ಉತ್ಸವ. ಕ್ಯಾಥೊಲಿಕ್ ಚರ್ಚು ಇದಕ್ಕೆ ಕೋಟ್ಯಾಂತರ ಡಾಲರ್‍ ಸುರಿಯುತ್ತಿದೆ. ಒಂದೆರಡು ವಾರದ ಮಟ್ಟಿಗೆ ಸಿಡ್ನಿಯ ವ್ಯವಹಾರಸ್ತರಿಗೆ ಒಂದಷ್ಟು ಹೆಚ್ಚು ಲಾಭವಾಗುತ್ತದೆ. ಇವೆಲ್ಲಾ ನಿಜ ಮತ್ತು ಯಾರೂ ತಲೆಕೆಡಿಸಿಕೊಳ್ಳಬೇಕಾದ ವಿಷಯವೇ ಅಲ್ಲ. ಹಾಗಂದು ಸುಮ್ಮನಾಗಬಹುದು. ಇದೆಲ್ಲಾ ಎಲ್ಲಿ ಗೋಜಲಿಗಿಟ್ಟುಕೊಳ್ಳುತ್ತದೆ ಎನ್ನುವುದು ಮಾತ್ರ ಬಲೇ ಆಸಕ್ತಿಯ ಸಂಗತಿ.

ಈ ಉತ್ಸವಕ್ಕೆ ಇಲ್ಲಿಯ ರಾಜ್ಯ ಸರ್ಕಾರ ಸುಮಾರು ಎಂಬತ್ತು ಮಿಲಿಯನ್ ಡಾಲರಿನಷ್ಟು ದುಡ್ಡು ಸುರಿಯುತ್ತಿದೆ. ಅದು ಪ್ರಜೆಗಳ ದುಡ್ಡು, ಹೀಗೆ ಬಳಸುವುದು ಸರಿಯೇ ಎಂದು ಹುಯಿಲೆದ್ದಿತು. ಒಲಂಪಿಕ್ಸಿಗೆ, ಏಪೆಕ್ ಸಮ್ಮಿಟ್ಟಿಗೆ ಕೂಡ ಈ ರೀತಿಯ ದುಡ್ಡು ಖರ್ಚು ಮಾಡಿದ್ದುಂಟು. ಅದು ಸಹಜ ಮತ್ತು ಹೊಸತೇನಲ್ಲ. ಇದರಿಂದ ಟೂರಿಸಂ ಮೂಲಕ ಸಿಡ್ನಿಗೆ ಒಳ್ಳೆಯದೇ ಆಗುತ್ತದೆ ಎಂದು ಧರ್ಮಾದಾಚೆ ಉಳಿಯಬೇಕಾದ ಸರ್ಕಾರದವರೆಲ್ಲಾ ಒಕ್ಕೊರಲಿನಿಂದ ಹಾಡಿದರು. ಹೋಗಲಿ ಬಿಡಿ.

ಆದರೆ ಜನರನ್ನು ನಿಜವಾಗಿಯೂ ಕಿಚಾಯಿಸಿದ್ದು ಮಾತ್ರ ಸರ್ಕಾರ ತರಾತುರಿಯಲ್ಲಿ ಪಾಸು ಮಾಡಿದ ಒಂದು ಕಾಯಿದೆ. ಆ ಕಾಯ್ದೆಯಡಿಯಲ್ಲಿ ಈ ಉತ್ಸವದ ಹೊತ್ತಲ್ಲಿ ಯಾರಾದರೂ ಉತ್ಸವಿಗಳಿಗೆ ಅನಾದರ ಅಥವಾ ಕಸಿವಿಸಿ ಉಂಟುಮಾಡಿದರೆ, ಎಚ್ಚರಿಸಿದ ಮೇಲೂ ಹಾಗೆ ಮಾಡುವುದನ್ನು ನಿಲ್ಲಿಸದಿದ್ದರೆ ಅವರಿಗೆ ೫೫೦೦ ಡಾಲರಿನಷ್ಟು ಜುಲ್ಮಾನೆ ವಿಧಿಸಬಹುದು. ಪ್ರಜಾಪ್ರಭುತ್ವದ ಮೂಲಭೂತ ಹಕ್ಕೊಂದನ್ನು ಕಿತ್ತುಕೊಳ್ಳುವ ಹುನ್ನಾರ ಎಂದು ಎಲ್ಲರೂ ಸಿಡಿಮಿಡಿಗೊಂಡಿದ್ದಾರೆ.

ಈ ಉತ್ಸವಕ್ಕೆ ಪೋಪ್ ಕೂಡ ಬರುತ್ತಿದ್ದಾರೆ. ಹೋಮೋಸೆಕ್ಸುಯಾಲಿಟಿ ಬಗ್ಗೆ, ಕಾಂಡೊಮ್‌ಗಳ ಬಗ್ಗೆ, ಹೆಂಗಸರ ಸಮಾನತೆಯ ಬಗ್ಗೆ ಚರ್ಚಿನ ನಿಲುವು ಎಷ್ಟು ಅನಾದಿ ಕಾಲಕ್ಕೆ ಸಲ್ಲುವಂಥದ್ದು ಎಂದು ಎಲ್ಲರಿಗೂ ಗೊತ್ತಿರುವ ವಿಷಯವೇ. ಚರ್ಚಿನ ನಿಲುವನ್ನು ವಿರೋಧಿಸುವವರು ಮತ್ತು ಮುಖ್ಯವಾಗಿ ಚರ್ಚಿನ ಆಶ್ರಯದಲ್ಲಿ ನಡೆದ ಎಷ್ಟೋ ಲೈಂಗಿಕ ಅತ್ಯಾಚಾರಗಳಿಂದ ವ್ಯಕ್ತಿತ್ವ ಹಾಗು ಬದುಕು ನುಚ್ಚುನೂರಾದ ಎಷ್ಟೋ ಮಂದಿ ಪೋಪಿನೆದುರು ಧಿಕ್ಕಾರ ಕೂಗಲು ಇದು ಸದವಕಾಶ. ಮತ್ತು ಅದೊಂದು ಮೂಲಭೂತ ಹಕ್ಕು ಕೂಡ. ಗೇ ಜನಾಂಗದವರಿಂದ ಕೆಣಕುವಂತಹ ವೇಷಭೂಷಣ ತೊಟ್ಟು ಮೆರವಣಿಗೆ ಮಾಡುವ ಯೋಜನೆ ಇದೆ. ಹಲವಾರು ಸಂಘಟನೆಗಳು ಇದೇ ಹೊತ್ತಲ್ಲಿ ವಿಶೇಷ ಚಳುವಳಿಗಳನ್ನು ಹಮ್ಮಿಕೊಂಡಿದೆ. ಈ ಕಾಯ್ದೆ ಆ ಎಲ್ಲ ಹಕ್ಕನ್ನು ಕಿತ್ತುಕೊಳ್ಳಲೆಂದೇ ರೂಪಿಸಿದಂತಿದೆ.

ಆದರೆ ಈ ಕಾಯ್ದೆ ಬೂಮರಾಂಗಿನಂತೆ ಸರ್ಕಾರಕ್ಕೆ ಬಂದೆರಗಿದ್ದು ಮಾತ್ರ ನಗೆಪಾಟಲಿನ ವಿಷಯ. ಒಂದು ಕಡೆ ಚರ್ಚಿನ ವಿರುದ್ಧವಷ್ಟೇ ಅಲ್ಲದೆ ಈ ಕಾಯ್ದೆಯನ್ನೂ ಧಿಕ್ಕರಿಸಲು ಹೆಚ್ಚೆಚ್ಚು ಜನ ಮುಂದಾಗುತ್ತಿದ್ದಾರೆ. ಪೋಲೀಸರಿಗೆ ಸಹಾಯ ಮಾಡಬೇಕಾಗಿದ್ದ ಎಷ್ಟೋ ಸ್ವಯಂಸೇವಕ ಸಂಘಟನೆಗಳು ಈ ಕಾಯ್ದೆಯಿಂದಾಗಿ ಹಿಂದೇಟು ಹಾಕುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಚರ್ಚಿನವರೇ ಎಷ್ಟೋ ಮಂದಿ ಈ ಕಾಯ್ದೆ ಅನಾವಶ್ಯಕ, ಜನರ ಹಕ್ಕನ್ನು ಹತ್ತಿಕ್ಕುವ ದುರುಳ ಸಾಧನ ಎಂದು ಹೀಗಳೆದಿದ್ದಾರೆ. ಸರ್ಕಾರ ಮಾತ್ರ ಪೋಲೀಸರಿಗೆ ಬೇಕಾದ ಹೆಚ್ಚಿನ ಅಧಿಕಾರವನ್ನು ಕೊಡಲು ಈ ಕಾಯಿದೆ ಅನಿವಾರ್ಯ ಎಂದು ಮೊಂಡು ಹಿಡಿದ ಮಕ್ಕಳಂತೆ ಗೊಣಗುತ್ತಿದ್ದಾರೆ.

ಈ ಎಲ್ಲ ಗೊಣಗಾಟ ಮತ್ತು ಕಿತ್ತಾಟದ ನಡುವೆ ಊರಿಗೆ ಪೋಪಿನ ಸರ್ಕಸ್ ಬಂದು ಬೀಡು ಬಿಡಲಿದೆ. ಆಗ ಎಲ್ಲ ಕಡೆಯವರೂ ಹುಚ್ಚೇಳುತ್ತಾರೆ. ಚಾಕು ನುಂಗುವ, ಬೆಂಕಿ ಉಗುಳುವ, ಹಗ್ಗ ಹತ್ತುವ, ಚಾವಟಿ ಬೀಸುವ ಮತ್ತು ಮುಖ್ಯವಾಗಿ ಬಣ್ಣದ ವೇಷದ ಕೋಡಂಗಿಗಳೂ ಸೇರಿದಂತೆ ಊರಿನ ಬೀದಿ ತುಂಬಾ ಹಲವಾರು ಬಗೆಯ ಸರ್ಕಸ್ ಪ್ರಾಣಿಗಳು ಅಲೆದಾಡುತ್ತವೆ ಅದನ್ನು ಕಾತರದಿಂದ ಎದುರು ನೋಡುತ್ತಾ ಕೂತಿದ್ದೇನೆ.
ಪುಟದ ಮೊದಲಿಗೆ
 
Votes:  0     Rating: 0    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು