ಸುದರ್ಶನ್ ಬರೆದ ದಿನದ ಕವಿತೆ  |
ಸುದರ್ಶನ್
|
ಗುರುವಾರ, 4 ಸೆಪ್ಟೆಂಬರ್ 2008 (05:42 IST)
|
ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ದಿನಕ್ಕೊಂದು ಕವಿತೆಯ ಈ ದಿನ ಕವಿತೆ ಬರೆದವರು ಸುದರ್ಶನ್.
ಥಾಯ್ಲಾಂಡಿನ ಮಾವುತರ ಚೌತಿ - ೨೦೦೮
ಮಾವುತರು ಚೌತಿಯಂದು ಚಂದ್ರನನ್ನು ಕದ್ದು ನೋಡಿದರಂತೆ ಚಂದ್ರನನ್ನೇ ತರಲಾರದವರು ಚಂದ್ರನ ಬಿಳಿಯೊಂದನ್ನಿಷ್ಟು ತಂದು ಹಂಚಲು ಹೊಂಚಿ ಆನೆಗಳ ಆಕ್ರೋಶಕ್ಕೆ ಕಾರಣವಾಗಿದ್ದಾರಂತೆ ರಾಜರಂಬಾರಿ ಒಪ್ಪದ ಆನೆ ಮಾವುತನಿಗೇನು ಹೊಸತೇ - ಅಂಕುಶ ಕೈಗೆತ್ತಿಕೊಂಡಿದ್ದಾರಂತೆ.
ಈ ಸಲದ ಚೌತಿಯ ಹೊತ್ತಿಗೆ ಮಾತ್ರ ಕೈಯಲ್ಲಿನ ಲಡ್ಡುಗೆ ಬಾಯಿಗಾಗದೆ ಸೊಂಡಿಲಡಿಯ ನಗು ಹಾರಿ ಯಾಕೀತ ಮುರಿದ ಹಲ್ಲಿಗೆ ಅಳುವ ಆನೆಯಾಗಿದ್ದಾನೆ ಸಂಪೂರ್ಣ?
ಕಿವಿ ಬೀಸುತ್ತಿರುವ ಥಾಯ್ಲಾಂಡಿನ ಆನೆಗೆ ಅಂಕುಶದ ಭಯವಿಲ್ಲ ಮಾವುತನಿಗೆ ಉಳಗಾಲವಿಲ್ಲ ಈ ಸಲದ ಚೌತಿಗೆ ಸೊಂಡಿಲಡಿಯ ನಗುವಿಗೆ.
ವಿಸರ್ಜನೆಯ ಮಾತಿರಲಿ ಈಗಿನ್ನೂ ದರ್ಶನ ಆರಿರದ ಹಸಿ ಮಣ್ಣಿನ ದಿಟ ಬಣ್ಣ ಮೊಗದಲ್ಲಿ ಉಂಡುಬ್ಬಿದ ಉದರದಲ್ಲಿ ಇಲಿಯ ಬಾಲದ ಕೊನೆಯಲ್ಲಿ.
|
| ಪುಟದ ಮೊದಲಿಗೆ |
 |
|
|
|
|
|
|