ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ: ಸಿಡ್ನಿಯಲ್ಲಿ ಕರುಣಿಸೋ ರಂಗಾ    
ಸುದರ್ಶನ್
ಗುರುವಾರ, 16 ಅಕ್ಟೋಬರ್ 2008 (03:28 IST)
ಭೀಮಸೇನ ಜೋಷಿ

ನನ್ನ ಬಾಲ್ಯ ಕಳೆದದ್ದು ಬೆಂಗಳೂರಿನ ಸಿಟಿ ಮಾರ್ಕೆಟ್, ಕಲಾಸಿಪಾಳ್ಯ ಪ್ರದೇಶದ ಅಂಚಿನಲ್ಲಿದ್ದ ಪುಟ್ಟಕೋಣೆಗಳ ಚಿಕ್ಕ ಮನೆಯಲ್ಲಿ. ಮಧ್ಯಮವರ್ಗದ ಮನಸ್ಸುಳ್ಳ ಮನೆಯಲ್ಲಿ ಕೆಳಮಧ್ಯಮವರ್ಗದ ಸವಾಲುಗಳ ನಡುವೆ ಕಳೆಯಿತು. ಈ ಸವಾಲನ್ನು ಕೆಲವರು ‘ಕಷ್ಟ' ಎಂದು ಕರೆಯುತ್ತಾರೆ. ಆದರೆ ಕೈಗೆಟುಕದ ಚಿಕ್ಕಚಿಕ್ಕ ಕನಸಿದ್ದರೂ ನಮಗೆ ಹಾಗನಿಸುತ್ತಿರಲಿಲ್ಲ. ಅಜ್ಜಿ ಮನೆಯ ತಾತ-ಅಜ್ಜಿಯರ ಪ್ರೀತಿ, ಸೋದರ ಮಾವಂದಿರ ಕುಕ್ಕುಲತೆ ಆ ‘ಕಷ್ಟ'ಗಳನ್ನು ಸಹ್ಯಮಾಡಿದ್ದು ನಿಜವಾದರೂ, ಅದಕ್ಕಿಂತ ಮಿಗಿಲಾಗಿದ್ದು ಬೇರೊಂದಿತ್ತು. ಅದು ಸೆಲ್ಫ್-ಪಿಟಿ ಹಿಂಬಾಗಿಲಿನಿಂದಲೂ ನುಸುಳದಂತ ಅಪ್ಪ-ಅಮ್ಮನ ಕಟ್ಟೆಚ್ಚರದ ಪಾಲನೆ.

ಅಪ್ಪ ಈವತ್ತಿಗೂ ಕೆಲವೊಮ್ಮೆ ಆಜ್ಞೇಯತಾವಾದಿ ಆಗಿಯೂ, ಕೆಲವೊಮ್ಮೆ ಯಾವುದೋ ‘ಪ್ರಕೃತಿ ಶಕ್ತಿ' ಇದೆಯೆಂಬ ನಂಬಿಕೆಯನ್ನೂ ಉಳಿಸಿಕೊಂಡವರು. ವಿಕಾಸವಾದ ಮತ್ತು ದೈವಿಕ ಕಲ್ಪನೆಯ ಒಲ್ಲದ ಲಗ್ನ ಎಂದು ಅದನ್ನು ಅರಿಯುತ್ತೇನೆ. ಅವರಿಂದ ಪ್ರಭಾವಿತರಾದ ಅಮ್ಮ ಈಗಲೂ ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆಯಿಲ್ಲದೆ, ಆದರೆ ‘ನಂಬಬೇಕೇನೋ' ‘ನಂಬಿದರೆ ಒಳ್ಳೆಯದೇನೋ' ಎಂಬ ತೊಳಲಾಟದಲ್ಲಿ ಇರುವವರು.

ಆ ಚಿಕ್ಕಮನೆಯಲ್ಲಿ ಬೆಳಗಾ ಮುಂಚೆ ಕೇಳುತ್ತಿದ್ದ ಸಿಟಿ ಮಾರ್ಕೆಟ್ ಮಸೀದಿಯ ನಮಾಜಿನ ಕರೆ ಮೈದಡವಿ ಎಬ್ಬಿಸುತ್ತಿತ್ತು. ಅದೆಂದೂ ಬೇಡದ್ದು ಅನಿಸುತ್ತಿರಲಿಲ್ಲ. ಆ ಕರೆಯುವ ದನಿ ಅದಕ್ಕೆ ತುಸು ಕಾರಣವಾದರೆ, ಕೇಳುವ ಕಿವಿಯೂ ತುಸು ಕಾರಣವಾಗಿತ್ತು. ಮುಂಜಾನೆಯ ನಸುಗತ್ತಲಲ್ಲಿ ಹಾಲು ತರಲು ಅಪ್ಪ ಮಫ್ಲರ್ ಸುತ್ತಿಕೊಂಡು ಹೊರಟರೆ, ಅಮ್ಮ ಮಜ್ಜಿಗೆ ಕಡಿಯಲು ಕೂರುತ್ತಿದ್ದರು. ಅಡುಗೆ ಮನೆಯ ಮೂಲೆಯ ಗೋಡೆಗೆ ಬಡಿದಿದ್ದ ಎರಡು ಕಬ್ಬಿಣದ ಹುಕ್ಕಿಗೆ ಕಟ್ಟಿದ ಬಿಳಿ ಹಗ್ಗದ ಕುಣಿಕೆ. ಅದರೊಳಗೆ ಗರಗರ ತಿರುಗುವ ಕಡಗೋಲು. ಮಜ್ಜಿಗೆಯ ಬುರ್‍ಬುರ್‍ ಸದ್ದು. ಅದರೊಟ್ಟಿಗೆ ಅಮ್ಮ ಗುನುಗುತ್ತಿದ್ದ ‘ಕರುಣಿಸೋ ರಂಗ' ಪದ.

ಅಮ್ಮ ಚಂದವಾಗಿ ಹಾಡಿದರೂ ತಮ್ಮನ್ನು ಗಾಯಕಿ ಅಂದುಕೊಂಡಿಲ್ಲ. ಬೇಂದ್ರೆಯವರ ‘ಏಳು ಚಿನ್ನ ಬೆಳಗಾಯ್ತು ಅಣ್ಣ' ಪದ್ಯಕ್ಕೆ ಅವರು ಹಾಕಿಕೊಂಡ ತಮ್ಮದೇ ಮಟ್ಟು ನನಗೆ ಈವತ್ತಿಗೂ ಪ್ರಿಯ ಎಂದರೆ ‘ಅಯ್ಯೋ ಹೋಗೋ' ಎಂದು ಬಾಯಿಗೆ ಕೈ ಅಡ್ಡ ಮಾಡಿ ನಗುತ್ತಾರೆ. ಆದರೆ, ನಮ್ಮ ಬಾಲ್ಯ ಜೀವನದ ಸವಾಲುಗಳನ್ನು ದೇವರ ಮುಂದೆ ಅಳುಕಿನಿಂದಲೇ ಇಡುವಂತೆ ಅವರು ಅಂದು ‘ಕರುಣಿಸೋ ರಂಗ' ಹಾಡುತ್ತಿದ್ದರು ಎಂದು ನನಗೆ ಯಾವಾಗಲೂ ಅನಿಸಿದೆ. ‘ಆ ಎಲ್ಲಾ ಪುರಾಣದ ಪಾತ್ರಗಳಂತೆ ಹಲವು ಬಗೆಗಳಲ್ಲಿ ನಾನು ಬೇಡಲಾರೆ' ಎಂಬುದನ್ನು ಅವರು ಕಂಡುಕೊಂಡಂತೆ ಅನಿಸುತ್ತಿತ್ತು. ಅವರ ಆ ಭಾವ, ಹಾಡಿನ ಸಾಲಿಗಿಂತ ಅವರು ಹಾಡುತ್ತಿದ್ದ ಮಟ್ಟಿನಲ್ಲಿ, ಆ ಮಟ್ಟನ್ನು ತೆರೆದಿಡುತ್ತಿದ್ದ ದನಿಯಲ್ಲಿ, ಆ ದನಿಯನ್ನು ಹೊರಡಿಸುತ್ತಿದ್ದ ಮನಸ್ಸಿನ ಆಳದ ಮುಜುಗರದಲ್ಲಿ ಇತ್ತೆಂದು ನನಗೆ ಈಗ ಅನಿಸುತ್ತದೆ. ಇಲ್ಲದಿದ್ದರೆ, ಅಷ್ಟು ಆಳಕ್ಕೆ ಆ ಹಾಡು ನನ್ನ ಮನಸ್ಸಿನಲ್ಲಿ ಕೂರಲು ಹೇಗೆ ಸಾಧ್ಯ ಎಂದು ಕೇಳಿಕೊಳ್ಳುತ್ತೇನೆ.

ಇದೆಲ್ಲಾ ನೆನಪಾದದ್ದು, ಪ್ರಸಿದ್ಧ ಗಾಯಕ ಭೀಮಸೇನ ಜೋಷಿ ಅದೇ ಪದವನ್ನು ಧಿಮಾಕಿನಿಂದಲೋ ಎಂಬಂತೆ ಹಾಡುವುದನ್ನು ಕೇಳಿದಾಗ. ‘ಬೇರೆಲ್ಲ ಭಕ್ತರಂತೆ ಬೇಡಲಾರೆ - so what -  ಕರುಣಿಸೋ ರಂಗಾ' ಎಂದು ದೇವರ ಕತ್ತಿನ ಪಟ್ಟಿ ಹಿಡಿದಂತೆ ಇದೆಯಲ್ಲಾ ಅನಿಸಿದಾಗ. ಅವರ ಹಾಡಿಗೇನು ಉಪಪಾಠ ಎಂದು ಹುಡುಕ ಹೊರಟು ಖಾಲಿ ಕೈಯಲ್ಲಿ ಹಿಂದಿರುಗಿದಾಗ. ಸಿಡ್ನಿಯಲ್ಲಿ ನಮ್ಮ ಮಕ್ಕಳಿಗೆ ಸಿರಿವಂತಿಕೆಯ ನಡುವೆ ಸವಾಲಿನ ಬದುಕನ್ನು ಕಟ್ಟಿಕೊಡುವುದು ಹೇಗೆಂದು ಯೋಚಿಸುವಾಗ. ಸೆಲ್ಫ್-ಪಿಟಿಯ ಅಪಾಯ ಎಲ್ಲಾವಾಗಲೂ ಇದೆ ಎಂದು ಅನಿಸಿದಾಗ.

ಪುಟದ ಮೊದಲಿಗೆ
 
Votes:  5     Rating: 3.4    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು