ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಜೋಗಿ ಕಾಲಂ ಶುರು - ಭೈರಪ್ಪ ಹೀಗೆ ಎಂದು ಈಗ ಗೊತ್ತಾಗುತ್ತಿದೆ    
ಜೋಗಿ
ಶುಕ್ರವಾರ, 24 ಅಕ್ಟೋಬರ್ 2008 (07:58 IST)

ಹಳೆಯ ಗುಮಾನಿ ನಿಜವಾಗಿದೆ. ಉಪ್ಪಿನಂಗಡಿ ಎಂಬ ಅರೆಪಟ್ಟಣದಲ್ಲಿ ಕುಳಿತು ಕನ್ನಡದ ಲೇಖಕರ ಎಲ್ಲಾ ಕೃತಿಗಳನ್ನು ಓದುತ್ತಾ, ಚರ್ಚಿಸುತ್ತಾ ಇರುವಾಗೆಲ್ಲ ನಮಗೆ ವಿಚಿತ್ರ ಅನುಮಾನವಾಗಿ ಕಾಡುತ್ತಿದ್ದವರು ಭೈರಪ್ಪ. ಅವರ ಕಾದಂಬರಿಗಳನ್ನು ಓದುವಾಗಲೆಲ್ಲ ಅವು ಕಾದಂಬರಿಗಳಲ್ಲ, ಲೆಕ್ಕಾಚಾರ ಹಾಕಿ ಸೂತ್ರಬದ್ಧವಾಗಿ ಬರೆದ ಬರಹಗಳು ಎಂದು ಅನೇಕ ಸಾರಿ ಅನ್ನಿಸಿತ್ತು. ಕನ್ನಡದ ಅನೇಕ ಲೇಖಕರ ಹಾಗೆ ಅವರೂ ಕೂಡ ಓದಿ ಮರೆತುಬಿಡಬಹುದಾದ ಲೇಖಕ ಎಂಬ ಕಾರಣಕ್ಕೆ ಅದರ ಬಗ್ಗೆ ನಾವ್ಯಾರೂ ಗಂಭೀರವಾಗಿ ಯೋಚಿಸಿರಲೂ ಇಲ್ಲ. ಯಾವತ್ತೂ ಅವರ ಕಾದಂಬರಿಗಳಾಗಲೀ, ಪಾತ್ರಗಳಾಗಲೀ ನಮ್ಮ ಮೇಲೆ ಪ್ರಭಾವ ಬೀರಿದ್ದಿಲ್ಲ. ಕುವೆಂಪು ಹಾಗೆ ಕಾಡಲಿಲ್ಲ, ಅನಂತಮೂರ್ತಿಯವರ ಹಾಗೆ ಪ್ರಭಾವಿಸಲಿಲ್ಲ, ಲಂಕೇಶರ ಹಾಗೆ ಚಿಂತನೆಗೂ ಹಚ್ಚಲಿಲ್ಲ. ಆಲನಹಳ್ಳಿ ಕೃಷ್ಣ ಕಾದಂಬರಿಗಳಲ್ಲಿ ಇರುವ ಕನಿಷ್ಠ ಪ್ರಾಮಾಣಿಕತೆಯೂ ಭೈರಪ್ಪ ಕಾದಂಬರಿಗಳಲ್ಲಿ ಕಾಣಿಸಿರಲಿಲ್ಲ. ಅವರೊಬ್ಬ ಅತ್ಯುತ್ತಮ ಗಣಿತದ ವಿದ್ಯಾರ್ಥಿಯಂತೆ ನಮಗೆ ಕಾಣಿಸುತ್ತಿದ್ದರು ಅಷ್ಟೇ. ಈ ಪಾತ್ರ ಹೀಗೆ, ಇನ್ನೊಂದು ಪಾತ್ರ ಹಾಗೆ, ಅವರೆಡೂ ಸಂಧಿಸಿದಾಗ ಹೀಗಾಗುತ್ತದೆ ಎಂದು ಲೆಕ್ಕಾಚಾರ ಹಾಕಿಯೇ ಅವರು ಬರೆಯುತ್ತಾರೆ ಎಂದು ನಾವೆಲ್ಲ ಮಾತಾಡಿಕೊಳ್ಳುತ್ತಿದ್ದೆವು. ಚಕಿತಗೊಳಿಸುವ, ಬೆರಗಾಗಿಸುವ, ನಿಚ್ಚಳ ಮುಂಜಾವದ ಹಾಗೋ, ಪ್ರಖರ ಸಂಜೆಯ ಹಾಗೋ ಮುದಗೊಳಿಸುವ ಸಂಗತಿಗಳೇ ಅವರ ಕೃತಿಗಳಲ್ಲಿಲ್ಲವಲ್ಲ ಎಂದು ಅಚ್ಚರಿಯೂ ಆಗುತ್ತಿತ್ತು. ಅದೊಂಥರ ಪ್ಲಾಸ್ಟಿಕ್ ಹೂವಿನಂಥ ಬರಹಗಳು.

ಹೀಗೆಲ್ಲ ಅಂದುಕೊಂಡು ಓದುತ್ತಿರುವ ಹೊತ್ತಿಗೆ ಬೆಂಗಳೂರಿನ ಜಾತಿ ರಾಜಕೀಯ ನಮಗೆ ಗೊತ್ತಿರಲಿಲ್ಲ. ಶಿವರುದ್ರಪ್ಪ, ಸಿದ್ಧಲಿಂಗಯ್ಯ, ಕಣವಿ, ಲಂಕೇಶ್, ದಿವಾಕರ್, ಪ್ರತಿಭಾ, ರಾಮಾನುಜನ್, ಗಿರಡ್ಡಿ, ಅಲನಹಳ್ಳಿ, - ಮುಂತಾಗಿ ನಾವು ಮೆಚ್ಚುವ ಅಸಂಖ್ಯಾತ ಲೇಖಕರು ಯಾವ ಜಾತಿಗೆ ಸೇರಿದವರು ಅನ್ನುವುದೂ ಗೊತ್ತಿರಲಿಲ್ಲ. ಜಾತಿಯಾಗಲೀ, ತಾತ್ವಿಕತೆಯಾಗಲೀ, ದೇಶೀಯತೆಯಾಗಲೀ ನಮಗೆ ಯಾವತ್ತೂ ಮುಖ್ಯವಾಗಿರಲಿಲ್ಲ. ಮಾನವೀಯವಾಗಿ ಮುದಗೊಳಿಸುವ, ಬೆರಗಾಗಿಸುವ ಬರಹಗಳೇ ಆಗ ನಮ್ಮನ್ನು ಆಕರ್ಷಿಸುತ್ತಿದ್ದದ್ದು. ಬ್ಲೇಕನ ಕವಿತೆಗಳನ್ನೋ, ಭೈರನ್ನಿನ ಪದ್ಯಗಳನ್ನೋ, ಎಲಿಯಟ್‌ನ ಲೇಖನಗಳನ್ನೋ ಓದುವಷ್ಟೇ ನಿರ್ಲಿಪ್ತವಾಗಿ ನಮಗೆ ಕನ್ನಡದ ಲೇಖಕರನ್ನೂ ಓದುವುದು ಸಾಧ್ಯವಿತ್ತು. ನಮಗಿಷ್ಟವಾಯಿತು ಅಥವಾ ಇಲ್ಲ- ಇವನ್ನು ಮೀರಿದ ಮತ್ತೊಂದು ಮಾನದಂಡವೇ ಇಲ್ಲದ ವಯೋಮಾನ ಅದು. ತಾತ್ವಿಕ ಕಾರಣಗಳನ್ನು ಮುಂದಿಟ್ಟು ಒಂದು ಕೃತಿಯನ್ನು ಸಮರ್ಥಿಸಿಕೊಳ್ಳಬೇಕಾದ ಅಗತ್ಯ ನನಗಿವತ್ತಿಗೂ ಕಂಡಿಲ್ಲ. ಅದನ್ನೆಲ್ಲ ಉಡುಪಿಯ ಪ್ರಕಾಂಡ ಪಂಡಿತರಿಗೆ ಬಿಟ್ಟುಬಿಡೋಣ.

ಆದರೆ ಭೈರಪ್ಪನವರಿಗೆ ಲಕ್ಷಾಂತರ ಓದುಗರಿದ್ದಾರೆ ಅನ್ನುವುದು ಗೊತ್ತಿತ್ತು. ಆ ಕಾರಣಕ್ಕೆ ಅವರ ಬಗ್ಗೆ ಪ್ರೀತಿಯೂ ಇತ್ತು. ಕನ್ನಡದ ಓದುಗರನ್ನು ಬೆಳೆಸಿದ ಕೆಲವೇ ಕೆಲವು ಲೇಖಕರ ಪಟ್ಟಿಯಲ್ಲಿ ಅವರೂ ಇದ್ದಾರೆ. ಆದರೆ ಕ್ರಮೇಣ ಅವರ ಕಾದಂಬರಿಗಳನ್ನು ಮೆಚ್ಚುವವರು ಯಾರು ಅನ್ನುವುದು ಗೊತ್ತಾಗಿ ಗಾಬರಿಯೂ ಆಯ್ತು.

ನಮ್ಮೆಲ್ಲರ ಸಮಸ್ಯೆಯೂ ಅದೇ. ನಮಗೆ ಒರಿಜಿನಲ್ ಚಿಂತಕರು ಬೇಕಾಗಿಲ್ಲ. ಸ್ಟಾಕ್ ಚಿಂತನೆಗಳನ್ನು ಬೇರೆ ಬೇರೆ ರೂಪದಲ್ಲಿ ಹೊರಬಿಡುವವರು ಬೇಕು. ಲಕ್ಸ್ ಸಾಬೂನನ್ನು ಕಾಲಕಾಲಕ್ಕೆ ಬೇರೆ ಬೇರೆ ಪ್ಯಾಕಿಂಗ್‌ಗಳಲ್ಲಿ ಕೊಡುವಂತೆ, ಗೋವಿನ ಪಾವಿತ್ರ್ಯವನ್ನು ಸಾರಲು ಗೋಮೂತ್ರಕ್ಕೆ ವೈದ್ಯಕೀಯ ಗುಣಗಳನ್ನು ಆರೋಪಿಸುವಂತೆ ಹಳೆಯ ಸನಾತನ ಚಿಂತನೆಯನ್ನು ಆಧುನಿಕ ಪರಿಭಾಷೆಯಲ್ಲಿ ಹೇಳುವವರ ಹುಡುಕಾಟದಲ್ಲಿ ಒಂದು ಸಮೂಹವೇ ಇದೆ. ಅಂಥವರ ಪಾಲಿಗೆ ಭೈರಪ್ಪನವರ ಚಿಂತನೆಗಳು ಆಪ್ಯಾಯಮಾನ ಅನ್ನಿಸುತ್ತವೆ. ಅದು ಸಹಜ ಕೂಡ. ಆಧುನಿಕವಾದದ್ದು ಕರ್ಮಠವೂ ಆಗಿದ್ದಾಗ ಇಷ್ಟವಾಗಿಯೇ ಆಗುತ್ತದೆ.

ಪರಭಾಷಾ ದಾಳಿ, ಪರಧರ್ಮೀಯರ ದಬ್ಬಾಳಿಕೆ, ಮತಾಂತರದ ಪಿಡುಗು, ಸನಾತನ ಧರ್ಮದ ಸಾತತ್ಯ, ಮಿಷನರಿಗಳ ಪ್ರಚೋದನೆಗಳ ಬಗ್ಗೆ ರೋಷದಿಂದ ಮಾತಾಡುವವರಿಗೆ ಹೊಸ ಪರಿಭಾಷೆಗಳನ್ನೂ ಆಯುಧಗಳನ್ನೂ ಒದಗಿಸಿದವರು ಭೈರಪ್ಪ. ಅವರ ವಾದವೆಲ್ಲ ಕತೆಗಳ ರೂಪದಲ್ಲಿ ಇದ್ದದ್ದರಿಂದ ಅದರ ಸತ್ಯಾಸತ್ಯತೆಯನ್ನು ಪ್ರಶ್ನಿಸುವ ಹಾಗೇ ಇರಲಿಲ್ಲ. ಕಾದಂಬರಿಯ ಧೋರಣೆಯ ಕುರಿತು ಆಕ್ಷೇಪ ಎತ್ತಬಹುದಾಗಿತ್ತಾದರೂ, ಅದು ಕೃತಿಕಾರನ ದೃಷ್ಟಿಕೋನ ಅಲ್ಲ, ಪಾತ್ರದ ಮನಸ್ಥಿತಿ ಎಂದು ಪಾರಾಗುವುದೂ ಕಷ್ಟವಿರಲಿಲ್ಲ. ದೊಡ್ಡ ದನಿಯಲ್ಲಿ ಮಾತಾಡುವ ಲೇಖಕ ಎಲ್ಲರ ದಿಕ್ಕುತಪ್ಪಿಸುವ ಹಾಗೆ, ಮೌನವಾಗಿ ಕುಳಿತವನೂ ದಿಕ್ಕುತಪ್ಪಿಸುತ್ತಾನೆ. ಭೈರಪ್ಪ ಇವರೆಡನ್ನೂ ಮಾಡುತ್ತಾ ಬಂದವರು. ಮಾತಾಡಬೇಕಾಗಿದ್ದಾಗ ಮೌನವಾಗಿದ್ದು, ಮೌನವಾಗಿರಬೇಕಾದ ಘಳಿಗೆಯಲ್ಲಿ ಮಾತಾಡಿದವರು ಅವರು.

ಸಹಬಾಳ್ವೆ, ಸಹಜೀವನ, ಸ್ನೇಹ, ಪ್ರೀತಿ ಇವೆಲ್ಲ ಅಂಕಿಅಂಶಗಳ ಆಧಾರದಲ್ಲೋ ಇತಿಹಾಸದ ಅಡಿಗಲ್ಲಿನ ಮೇಲೋ ನಿಂತದ್ದಲ್ಲ. ನಮ್ಮ ಸ್ನೇಹವಲಯ ಚಿಕ್ಕದು, ಜಗತ್ತು ವಿಶಾಲವಾಗುತ್ತಾ ಹೋದ ಹಾಗೆ, ಸಂಪರ್ಕ ಮಾಧ್ಯಮ ಹೆಚ್ಚುತ್ತಾ ಹೋದಹಾಗೆ, ನಾವೇನೂ ಬಹುದೊಡ್ಡ ಬಳಗವೊಂದನ್ನು ಕಟ್ಟಿಕೊಳ್ಳಲಿಲ್ಲ. ಹೀಗಾಗಿ ಚರಿತ್ರೆಯಲ್ಲಿ ಏನಾಯಿತು ಅನ್ನುವುದು ಇವತ್ತು ಮುಖ್ಯವಲ್ಲ. ಎಂದೋ ಆದ ಅನ್ಯಾಯಕ್ಕೆ ನಾವಿಂದು ಸೇಡು ತೀರಿಸಿಕೊಳ್ಳಲು ಪಣತೊಡುವ ಅಗತ್ಯವೂ ಇಲ್ಲ.

ಅಮೆರಿಕಾದಲ್ಲಿ ಇಷ್ಟು ಮಂದಿ ಮತಾಂತರ ಆಗುತ್ತಾರೆ, ಇಲ್ಲಿ ಅಷ್ಟು ಮಂದಿ ಆಗುತ್ತಾರೆ. ಆಮೇಲೆ ಅವರ ಸಂಖ್ಯೆ ಇಷ್ಟಾಗುತ್ತದೆ. ನಮ್ಮ ಸಂಖ್ಯೇ ಅಷ್ಟೇ ಇರುತ್ತದೆ ಎಂಬಿತ್ಯಾದಿ ಹುಂಬ ವಾದಗಳನ್ನು ಮುಂದಿಟ್ಟುಕೊಂಡು ಹೊರಡುವವರನ್ನು ಕಂಡಾಗ ಅಸಹ್ಯವಾಗುತ್ತದೆ. ಎಷ್ಟು ನಿರ್ಲಜ್ಜವಾಗಿ ಮತ್ತು ಎಷ್ಟು ಭಂಡತನದಿಂದ ಇವರೆಲ್ಲ ಜಾತೀಯತೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುತ್ತಿದ್ದಾರೆ. ಭೈರಪ್ಪ ಹೀಗೆ ಮಾತಾಡುವುದು ಹೇಗೆ ಸಾಧ್ಯವಾಯಿತು. ಅವರಿಗೆ ವಯಸ್ಸಾಯಿತು, ಸೃಜನಶೀಲವಾಗಿ ಬರೆಯುವ ಶಕ್ತಿ ಕುಂದಿದೆ ಎಂದೆಲ್ಲ ಹೇಳಿಬಿಡುವುದು ಸುಲಭ. ಆದರೆ ಇದು ಅದಷ್ಟೇ ಅಲ್ಲ.

ಜನಿವಾರವೋ, ಶಿವದಾರವೋ ಇನ್ಯಾವುದೇ ಸಂಕೇತವೋ ,ಅದನ್ನು ಧರಿಸುವುದು ಅವರವರ ಇಷ್ಟ. ನಿಮಗಿಷ್ಟವಾದದ್ದನ್ನು ನೀವು ಹಾಕಿಕೊಳ್ಳಿ. ಆದರೆ ಒಂದು ದೇಶಕ್ಕೇ ಜನಿವಾರ ತೊಡಿಸಲಿಕ್ಕೋ, ನಾಮ ಹಾಕಲಿಕ್ಕೋ ಹೊರಡಬೇಡಿ.

ಆಗ ನೀವು ಮನುಷ್ಯರಂತೆ ಕಾಣಿಸುವುದಿಲ್ಲ ಮತ್ತು ಮನುಷ್ಯರಲ್ಲದವರು ಬರೆದದ್ದನ್ನು ಓದುವುದರಲ್ಲಿ ನಮಗಂತೂ ಆಸಕ್ತಿಯಿಲ್ಲ.

[photo courtesy - www.eng.auburn.edu]

[ಈ ಲೇಖನಕ್ಕೆ ಬಂದಿರುವ ಪ್ರತಿಕ್ರಿಯೆಗಳನ್ನೂ, ಚರ್ಚೆಗಳನ್ನೂ ಇಲ್ಲಿಗೆ ಮುಗಿಸುತ್ತಿದ್ದೇವೆ. - ಸಂ]

ಪುಟದ ಮೊದಲಿಗೆ
 
Votes:  64     Rating: 3.91    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು