ಫೆಬ್ರವರಿ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ: ‘ನೋಡಿ ಅವರಲ್ಲೂ ಒಳ್ಳೆಯವರಿರುತ್ತಾರೆ!’    
ಸುದರ್ಶನ್
ಶುಕ್ರವಾರ, 12 ಡಿಸೆಂಬರ್ 2008 (03:14 IST)
ಸಿಡ್ನಿಯ ದಿನಸಿ ಅಂಗಡಿ

ಆಸ್ಟ್ರೇಲಿಯದಲ್ಲಿ ಲೆಬನಾನಿನಿಂದ ಬಂದ ಜನರಿದ್ದಾರೆ. ಹೆಚ್ಚಾಗಿ ಕಾರು ರಿಪೇರಿ ಶಾಪೋ ಅಥವಾ ದಿನಸಿ ಅಂಗಡಿಯೋ ಇಟ್ಟುಕೊಂಡಿದ್ದಾರೆ. ಎಂಬತ್ತರ ದಶಕದ ಲೆಬನಾನ್ ಯುದ್ಧದ ಹೊತ್ತಿನಲ್ಲಿ ತಮ್ಮ ಹಾಗೂ ಮಕ್ಕಳ ಜೀವ ಕಾಪಾಡಿಕೊಳ್ಳಲು ಗುಳೆ ಬಂದವರು. ಹೆಚ್ಚಿನವರು ಮುಸಲ್ಮಾನರಾದರೆ, ಕ್ರಿಶ್ಚಿಯನ್ನರೂ ಇದ್ದಾರೆ. ಮುಸಲ್ಮಾನರೆಂದರೆ ಸಿಡಿಮಿಡಿಯೆನ್ನುವ ಲೋಕದಲ್ಲಿ ಲೆಬನಾನಿನ ಮುಸಲ್ಮಾನರಿಂದ ತಮಗೂ ಇಲ್ಲದ ಸಂಕಟ ಎಂದು ಅಲ್ಲಿನ ಕ್ರಿಶ್ಚಿಯನ್ನರು ಗೊಣಗುತ್ತಾರೆ. ಹಾಗೆಯೇ ಹಲವಾರು ಲೆಬನೀಸರು ಒಳ್ಳೆ ಕೆಲಸಗಳಲ್ಲೂ ಇದ್ದಾರೆ. ಅವರ ಮುಂದಿನ ತಲೆಮಾರಿನ ಮಕ್ಕಳು ಎಲ್ಲರಂತೆ ನಾಡಿನ ಉಳಿದವರೊಂದಿಗೆ ಒಡನಾಡಿಕೊಂಡು, ತಮ್ಮ ಕೆಲಸಗಳಲ್ಲಿ ಮುಂದವರಿದಿರುವುದೂ ಇದೆ.

ಲೆಬನೀಸರೆಲ್ಲರೂ ನಮ್ಮಂತೆ ತರಕಾರಿ ತುಂಬಾ ಬಳಸುತ್ತಾರೆ, ಹಿಂದಿ ಚಿತ್ರಗಳನ್ನು ತಪ್ಪದೆ ನೋಡಿ ನಲಿಯುತ್ತಾರೆ. ಅದರ ಹಾಡುಗಳಿಗೆ ಕಾಲು ಕುಣಿಸುತ್ತಾ ತಮ್ಮದಾಗಿಸಿಕೊಳ್ಳುತ್ತಾರೆ. ಆದರೂ ಇವರ ಬಗ್ಗೆ ಇಂಡಿಯಾದವರ ಗಮನ ಮತ್ತು ನಿಲುವು ತುಂಬಾ ವಿಚಿತ್ರವಾದ್ದು.

ಹಲವಾರು ವರ್ಷಗಳ ಹಿಂದಿನ ಮಾತು. ಆಗತಾನೆ ಇಂಡಿಯಾದಲ್ಲಿ ಟಿವಿಕ್ರಾಂತಿ ಶುರುವಾಗಿತ್ತು. ಅಲ್ಲಿಯ ಟಿವಿ ಹಿಡಿಯಲೋಸುಗ ದೊಡ್ಡ ಡಿಶ್ ಆಂಟೆನಾ ಹಾಕಲು ಗೆಳೆಯನೊಬ್ಬನ ಮನೆಯಲ್ಲಿ ನಾವೆಲ್ಲಾ ಒಟ್ಟುಗೂಡಿದ್ದೆವು. ಅದಕ್ಕೆ ಬೇಕಾದ ಕಬ್ಬಿಣದ ಪೈಪೊಂದನ್ನು ಕತ್ತರಿಸಿಕೊಂಡು ಬರಲು ವರ್ಕ್‌ಶಾಪಿಗೆ ಹೋಗಬೇಕಾಗಿ ಬಂತು. ಆ ವರ್ಕ್‌ಶಾಪಿನಲ್ಲಿ ಭೇಟಿಯಾದ ಒಬ್ಬ ಲೆಬನೀಸಿನವ ಮಾತುಕತೆಯಾಡುತ್ತಾ ಎಲ್ಲರನ್ನೂ ನಗಿಸುತ್ತಿದ್ದ. ಕುಳ್ಳಗೆ, ಕರಿಬಿಳಿ ಮೀಸೆಯ, ಒರಟು ಕೈಗಳ ಐವತ್ತು ದಾಟಿದವ. ನಮ್ಮೊಡನಿದ್ದ ಒಬ್ಬನಿಗೆ ಕಿಡ್ನಿ ಕೆಟ್ಟು ಡಯಾಲಿಸಿಸಿಗೆ ಪ್ರತಿ ವಾರ ಹೋಗುತ್ತಾನೆ ಎಂದು ಅವನಿಗೆ ಗೊತ್ತಾಯಿತು. ಕೂಡಲೆ ಆ ಬೇನೆಗೆ ಯಾವುದೋ ತರಕಾರಿ ಒಳ್ಳೆಯದು ಎಂದು ಹೇಳತೊಡಗಿದ. ಅವನದು ಹರುಕುಮುರುಕು ಇಂಗ್ಲೀಷು, ಆ ತರಕಾರಿಯ ಹೆಸರು ಗೊತ್ತಿರಲಿಲ್ಲ. ಸರಿ, ಆ ತರಕಾರಿಯ ಬಣ್ಣನೆ ಶುರು ಮಾಡಿದ. ಅದರ ಉದ್ದ, ಗಾತ್ರ, ಬಣ್ಣ ಬೆಳೆಯುವ ಪರಿ ಏನು ಹೇಳಿದರೂ ಅವನು ಯಾವ ತರಕಾರಿ ಹೇಳುತ್ತಿದ್ದಾನೆ ಎಂದು ಯಾರಿಗೂ ತಿಳಿಯಲಿಲ್ಲ. ಪೈಪಿನ ಕೆಲಸ ಮುಗಿದಿದ್ದರೂ, ಹೊರಡಲು ಬಿಡವೊಲ್ಲ. ನಮಗಂತು ಅವನಿಂದ ತಪ್ಪಿಸಿಕೊಂಡರೆ ಸಾಕಾಗಿತ್ತು. ಅವನೋ ಪಟ್ಟುಬಿಡದೆ ಹೇಗೇಗೋ ಕೈಬೀಸುತ್ತಾ, ಅದರಿಂದ ಅಡುಗೆ ಮಾಡುವುದನ್ನೆಲ್ಲಾ ವಿವರಿಸುತ್ತಾ ಹೋದ. ಕಡೆಗೆ ಎಲ್ಲವೂ ವಿಫಲವಾದಾಗ ತನ್ನ ಮನೆಯ ಅಡ್ರೆಸ್ ಕೊಟ್ಟು ಅಲ್ಲಿಗೆ ಬಾ, ಹಿತ್ತಲಲ್ಲಿ ಬೆಳೆದಿದೆ ಕೊಡುತ್ತೇನೆ ಅಂದ.

ಡಿಶ್ ಮೇಲಕ್ಕೇರಿಸಿ ಇಂಡಿಯಾ ಟಿವಿ ನೋಡಿ ನಲಿಯುತ್ತಾ ನಮಗೆ ಅವನ ಮಾತು ಮರೆತೇ ಹೋಯಿತು. ನಮ್ಮ ಗೆಳೆಯನೂ ಮರೆತನೋ ಅಥವಾ ಯಾರು ಹೋಗುತ್ತಾರೆ ಎಂದೋ ಅವನಲ್ಲಿಗೆ ಹೋಗಲೇ ಇಲ್ಲ. ಎರಡು ದಿನ ಕಾದ ಅವನು, ಇವನು ಯಾಕೆ ಬರಲಿಲ್ಲ ಎಂದು ಚಡಪಡಿಸಿದನಂತೆ. ನಾವು ಮಾತು ಮಾತಿಗೆ ಹೇಳಿದ್ದ ಅಡ್ರೆಸ್ಸಿನ ಅಂದಾಜಿನ ಮೇಲೆ ಅಲೆದೂ ಅಲೆದೂ ನಮ್ಮ ಗೆಳೆಯನ ಮನೆ ಹುಡುಕಿಕೊಂಡು ಬಂದನಂತೆ. ಯಾಕೆ ಬರಲಿಲ್ಲ ಎಂದು ದಬಾಯಿಸದನಂತೆ. ತನ್ನ ಹಿತ್ತಲಲ್ಲಿ ಬೆಳೆದಿದ್ದ ತರಕಾರಿಯನ್ನು ಅವರ ಮುಂದೆ ರಾಶಿ ಹಾಕಿದನಂತೆ. ಅದನ್ನು ಹೇಗೆ ಬೇಯಿಸಬೇಕು, ಹೇಗೆ ತಿನ್ನಬೇಕು ಎಂದು ಗಂಟೆ ಕಾಲ ಹೇಳಿದನಂತೆ. ನಂತರ ಟೀ ಕುಡಿದು ಬೈ ಹೇಳಿ ಹೊರಟುಹೋದನಂತೆ. ಇದನ್ನೆಲ್ಲಾ ನಮಗೆ ಹೇಳಿದ ಗೆಳೆಯ ‘ನೋಡಿ ಅವರಲ್ಲೂ ಒಳ್ಳೆಯವರಿರುತ್ತಾರೆ' ಎಂದಿದ್ದ! ನಾನು ಅವಕ್ಕಾಗಿದ್ದೆ.

ನಾನ್-ವೆಜ್ ತಿನ್ನದ ನಮ್ಮ ಎಷ್ಟೋ ಜನ ಸಂಪ್ರದಾಯಸ್ತರು ಲೆಬನೀಸರ ಅಂಗಡಿಗಳಿಗೆ ಹೋಗುವುದಿಲ್ಲ. ತಲೆಯಲ್ಲಿ ಏನೇನೋ ತುಂಬಿಕೊಂಡು ಆ ಅಂಗಡಿಗಳತ್ತ ಸುಳಿಯಲು ಹಿಂಜರಿಯುತ್ತಾರೆ. ಆದರೆ ಇಲ್ಲೊಂದು ತಮಾಷೆ ನೋಡಿ. ಲೆಬನೀಸರ ದಿನಸಿ ಅಂಗಡಿಯಲ್ಲಿ ಗೋಡಂಬಿ, ದ್ರಾಕ್ಷಿ, ಬಾದಾಮಿ, ಖರ್ಜೂರ ಚೆನ್ನಾಗಿ ಇರುತ್ತದೆ. ಕಡಿಮೆ ಬೆಲೆಗೂ ಸಿಗುತ್ತದೆ. ಅವನ್ನೇ ಬಣ್ಣದ ಡಬ್ಬದಲ್ಲಿ ತುಂಬಿ ಎರಡರಷ್ಟು ಬೆಲೆಗೆ ಸೂಪರ್ ಮಾರ್ಕೆಟ್ಟುಗಳಲ್ಲಿ ಮಾರುತ್ತಾರೆ. ಆ ಮೋಸವನ್ನು ನಮ್ಮವರು ಬಲು ಬೇಗ ಅರಿತುಕೊಳ್ಳುವ ಜಾಣರು. ಆದರೂ ಲೆಬನೀಸಂಗಡಿಗೆ ಹೋಗಕೂಡದು ಎಂದು ತಾಕೀತು ಮಾಡುವ ಭಾರತೀಯ ಗಂಡಂದಿರಿದ್ದಾರೆ. ಅಲ್ಲಿಂದ ತಂದ ಬಾದಾಮಿ ಗೋಡಂಬಿ ಕೇಜಿಗಟ್ಟಲೆ ತಿನ್ನಿಸಿ ಬೇರೆಯವರು ತಮ್ಮ ಮಕ್ಕಳನ್ನು ದಷ್ಟಪುಷ್ಟವಾಗಿ ಬೆಳೆಸುತ್ತಾರೆ ಎಂದು ಪರಿತಪಿಸುವ ಅವರ ಹೆಂಡತಿಯರಿದ್ದಾರೆ. ಆ ಹೆಂಡತಿಯರು ‘ಹೋದರೆ ಏನೀಗ' ಎಂದು ಹತ್ತಿರದವರ ಜತೆ ಅಸಹನೆಯಿಂದ ಗುಸುಗುಸು ಅಂದುಕೊಳ್ಳುತ್ತಾರೆ. ಕಡೆಗೆ ತಡೆಯಲಾರದೆ ಗಂಡನ ಕಣ್ಣುತಪ್ಪಿಸಿ, ಬೇರೆಲ್ಲಿಂದಲೋ ತಂದೆ ಎಂದು ಸುಳ್ಳು ಹೇಳುತ್ತಾರೆ. ಲೆಬನೀಸಂಗಡಿಯಿಂದಲೇ ತಂದು ತಮ್ಮ ಮಕ್ಕಳಿಗೂ ತಿನ್ನಿಸಿ ನೆಮ್ಮದಿಪಡುತ್ತಾರೆ. ಈ ನಮ್ಮ ತಾಯಂದಿರಿಗೆ ಆ ಅಂಗಡಿಯವ ಲೆಬನೀಸನೋ ಮುಸಲ್ಮಾನನೋ ಅನ್ನುವದಕ್ಕಿಂತ ತಮ್ಮ ಮಕ್ಕಳು ದಷ್ಟಪುಷ್ಟವಾಗಿ ಬೆಳೆಯುವುದು ಬೇಕಾಗಿರುತ್ತದೆ.

[ಚಿತ್ರಗಳು-ಲೇಖಕರವು]

ಪುಟದ ಮೊದಲಿಗೆ
 
Votes:  4     Rating: 4.75    
 
 
ಸಂಬಂಧಿಸಿದ ಲೇಖನಗಳು
  ಪಟ್ಟಣಪುರಾಣ: ಮಣ್ಣ ಇಟ್ಟಿಗೆ ಕೊಳ್ಳಿರೋ
  ತರೀಕೆರೆ ಏರಿಯಾ: ಬಂಗಾಳದ ಪುಖೂರ್ ಕೆರೆಗಳು
  ಸ್ಟೋನ್ ಹಿಲ್ ಡೈರಿ: ಎಮ್ಮಯ ಹೆಮ್ಮೆಯ ರಾಜಾಮೀಸೆ
  ಮಹಾರಾಷ್ಟ್ರದಲ್ಲೇನಾಗುತ್ತಿದೆ?-ಪ್ರೇಮಶೇಖರ ಕಾಲಂ
  ಕೆ.ಟಿ.ಗಟ್ಟಿ ಬಿಸಿಲುಕೋಲು: ಸಿನ್ಸಿನಾಟಿಯ ಸೌಂದರ್ಯ
  ಕಟ್ಟಿಕೊಳ್ಳುವ ತಲ್ಲಣದಲ್ಲಿ ಹೆಕ್ಕಿ ತೆಗೆದ ಸಾಲುಗಳು
  ಶಂಕರ ಪರ್ವತದಿಂದ ಕಂಡ ಶ್ರೀನಗರ
  ಯೋಗೀಂದ್ರ ಕಾಲಂ- ಹಿಮಪಾತದ ಹೊತ್ತಲ್ಲಿ ಇಂಗ್ಲೆಂಡ್ ಸಮಾಚಾರ
  ಸ್ಟೋನ್ ಹಿಲ್ ಡೈರಿ: ಹೇಳಿ, ನಾನು ಬದುಕಿರುವೆನೇ?
  ಪ್ರೇಮಶೇಖರ ಕಾಲಂ- ನೇಪಾಲವೂ ಮಗ್ಗುಲ ಮುಳ್ಳಾಗುತ್ತಿದೆಯೇ?
  ಸತೀಶ್ ಬರೆಯುವ ಕಾಶ್ಮೀರದ ಚಿತ್ರ-೭
  ಕವಲಕ್ಕಿ ಡೈರಿ - ಹಾವು ಕಡಿತದ ಕಥೆಗಳು
  ವಸ್ತಾರೆ ಕಾಲಂ- ವಾಸ್ತುಶಿಲ್ಪಿಯ ವಾಸ್ತವ ಪುರಾಣ
  ತರೀಕೆರೆ ಏರಿಯಾ-ಮನೆಯ ನೆಮ್ಮದಿ , ಸಂತೆಯ ಸ್ವಾತಂತ್ರ್ಯ
  ಕೆ.ಟಿ. ಗಟ್ಟಿ ಬಿಸಿಲುಕೋಲು: ಯಾವ ದೇಶ ಪ್ರೇಕ್ಷಣೀಯ?
  ನವರಾತ್ರಿ ಕಳೆದು ನರಸಿಂಹದಾಸರ ನೆನಪು
  ಆಸ್ಟ್ರೇಲಿಯಾ ಪತ್ರ: ಸಿಡ್ನಿ ಆಗಸದಲ್ಲಿ ಧೂಳ ಲೀಲೆ
  ಹಲ್ಲಿಯ ತಲೆ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ?
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು-೬
  ‘ಪುಸ್ತಕ ಪ್ರೀತಿ’: ಮಾಧವ ಕುಲಕರ್ಣಿಯವರ ‘ಪಾತಾಳ ಗರಡಿ’
  ವಸ್ತಾರೆ ಕಾಲಂ: ದೈವಕೌಪೀನೇಯಮ್
  ಪುಸ್ತಕ ಪ್ರೀತಿ: ರವೀಂದ್ರನಾಥರ ‘ಮೂರು ಸಾಲು ಮರ’
  ಪೂರ್ವಾಂಚಲ ಪುರಾಣ: ಚಾಂಗ್ ಜನರ ನಡುವೆ
  ಸದ್ದಿಲ್ಲದೆ ಹಾರಾಡುವ ಏರ್ ಬಸ್ ಸುಂದರಿ: ಯೋಗೀಂದ್ರ ಬರಹ
  ಕವಲಕ್ಕಿ ಡಾಕ್ಟರ ಡೈರಿ : ಧನುರ್ವಾಯು ಪುರಾಣ
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು- ೫
  ಸುದರ್ಶನ್ ಕಾಲಂ: ಈಡಾ ಎಂಬ ಪಳೆಯುಳಿಕೆಯ ಹುಡುಗಿ
  ತೀರಿಹೋದ ವೆಸ್‍ಲೀ ಎಂಬ ಪೊಲೀಸ್ ಆಫೀಸರ್: ವಸ್ತಾರೆ ಅಂಕಣ
  ಸ್ಟೋನ್ ಹಿಲ್ ಡೈರಿ:ಇಡ್ಲಿ-ಪ್ರತಿಭೆ, ಪರಂಪರೆಯ ಪಾತ್ರೆ
  ಬಿಸಿಲುಕೋಲು: ಹುಟ್ಟಿದರೆ ಮಗುವಾಗಿ ಇಲ್ಲಿ ಹುಟ್ಟಬೇಕು!
  ಯೋಗೀಂದ್ರ ಕಾಲಂ: ಆಗಸ್ಟ್ ತಿಂಗಳ ಖಾಲಿ ಬೇಸಗೆ ಕಾಲ
  ಡಿ.ಪಿ. ಸತೀಶ್ ಬರೆಯುತ್ತಾರೆ: ಕಾಶ್ಮೀರದ ಪಂಡಿತರ ಕಷ್ಟಸುಖ
  ನೀಲಿ ಬೆಳಕು: ನನ್ನ ಪ್ರೀತಿಯ ಮುಲ್ಲಾ
  ಹಂದಿಜ್ವರದ ಹೊತ್ತಲ್ಲಿ ಮರಣವ್ಯಾಧಿಗಳ ನೆನಪು
  ಬಿಸಿಲುಕೋಲು: ಇದೇನು ಮಸಣವೋ ಇಲ್ಲ ವನರಾಶಿಯೋ...
  ಒಂಭತ್ತನೇ ತರಗತಿಯ ತೊಂಭತ್ತರ ಅಜ್ಜ ಅಯ್ಯೋ ತೀರಿಹೋದರಲ್ಲ...
  ಪುಸ್ತಕ ಪ್ರೀತಿ: ಆನಂದ ಲಕ್ಕೂರು ಕವಿತೆಗಳು
  ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು -೩
  ಪೂರ್ವಾಂಚಲ ಪುರಾಣ: ನಾಗಾ ನದಿಯ ಕೊಳ್ಳದಲ್ಲಿ
  ಬಣ್ಣಗಳ ಹಿಂದಿನ ನಿಜದ ಬಣ್ಣ: ಕೃತಿ ಬರಹ
  ವರ್ಡ್ಸ್ ವರ್ತನ ಸರೋವರದ ಸಿರಿಗನ್ನಡಿಯಲ್ಲಿ
  ತರೀಕೆರೆ ಏರಿಯಾ: ಮುಂದುವರಿದ ನಾಯಿಪುರಾಣ
  ಅಲ್ಲಿಯಗಿಡ ಇಲ್ಲಿ ಹೂಬಿಟ್ಟು ಇಲ್ಲಿನ ಬಳ್ಳಿ ಅಲ್ಲಿ ನೆಟ್ಟು
  ಡಿ ಪಿ ಸತೀಶ್ ಅಂಕಣ: ಮುಂದುವರಿದ ಕಾಶ್ಮೀರದ ಚಿತ್ರಗಳು
  ಕವಲಕ್ಕಿ ಡಾಕ್ಟರ ಡೈರಿ: ಕಾಮ ಪ್ರೇಮ ಕಷ್ಟ ಸುಖ
  ಬಿಸಿಲುಕೋಲು: ಅಮೆರಿಕಾದಲ್ಲಿ ಹೆರುವ ವಹಿವಾಟು
  ಎಸ್ ಮಂಜುನಾಥ್ ಬರೆದ ಅಪ್ಪು ಪೂಜಾರಿಯ ಚಿತ್ರ
  ಪುಸ್ತಕ ಪ್ರೀತಿ: ಮೊಗಳ್ಳಿ ಕವಿತೆಗಳ ‘ದೇವಸ್ಮಶಾನ’
  ವಸ್ತಾರೆ ಕಾಲಂ: ದೈನಂದಿನ ನ್ಯೂಟನುಭ್ರಾಂತುಗಳು
  ತರೀಕೆರೆ ಏರಿಯಾ: ನಾಯಿಪುರಾಣದ ಮೊದಲ ಕಂತು
  ಸ್ಟೋನ್ ಹಿಲ್ ಡೈರಿ: ಹುಲುಸು ಮನುಜನ ಕಟ್ಟುಕಟ್ಟಳೆಗಳು
  ಬಿಸಿಲುಕೋಲು: ಒಂದು ವಿಶ್ವವಿದ್ಯಾನಿಲಯದ ಕುರಿತು
  ಬ್ರಿಸ್ಟಲ್ ಪುರಾಣ: ಬಿಸಿಲು,ಬೀಚ್,ಬಿಯರ್ ಮತ್ತು ಬ್ರಿಟಿಷ್
  ಕವಲಕ್ಕಿ ದಿನಚರಿ: ಕೆಲವು ಬಸಿರ ಸಂಗತಿಗಳು
  ಪೂರ್ವಾಂಚಲ ಪುರಾಣ: ಮಿಥುನಗಳ ಹಳ್ಳಿಯಲ್ಲಿ