ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಅನಂತಮೂರ್ತಿ ಅನುವಾದಿಸಿದ ಇಂಗ್ಲಿಷ್ ಕವಿತೆ    
ಯು ಆರ್ ಅನಂತಮೂರ್ತಿ
ಶನಿವಾರ, 7 ಫೆಬ್ರವರಿ 2009 (04:01 IST)
ಡೆನಿಸ್ ಲೆವೆರಟಾವ್

ಡಾ.ಯು.ಆರ್.ಅನಂತಮೂರ್ತಿಯವರು ಇದೀಗ ಹೊಸ ಹುಮ್ಮಸ್ಸಿನಿಂದ ಕವಿತೆಗಳನ್ನು ಬರೆಯಲು ಆರಂಭಿಸಿದ್ದಾರೆ. ಇದು ನಮಗೂ ಖುಷಿಯ ವಿಷಯ.

ಹೊಸದಾಗಿ ಬರೆಯುವವರೂ ಬೆರಗಾಗುವಂತೆ, ಎಲ್ಲ ಬಗೆಯ ಓದುಗರೂ ಆರಾಮಕುರ್ಚಿಯಿಂದ ಬೆನ್ನು ಸಡಿಲಿಸಿಕೊಂಡು ತಲೆಯೆತ್ತಿ ಓದುವಂತೆ ಮಾಡುತ್ತಿರುವ ಈ ಹೊಸ ಕವಿತೆಗಳು ಆಧುನಿಕ ಭಾರತದ ಹಿರಿಯ ಬರಹಗಾರನೊಬ್ಬನ ಇಳಿ ವಯಸ್ಸಿನ ಸಂಕೋಚ, ಸಡಗರ ಹಾಗೂ ಹೆದರಿಕೆಗಳನ್ನು ಸಹಜ ಹರಿವಿನ ಕನ್ನಡದಲ್ಲಿ ದಾಖಲಿಸುತ್ತಿವೆ. ಈವತ್ತು ಈ ಜಾಗದಲ್ಲಿ ಯು ಆರ್ ಅನಂತಮೂರ್ತಿ ಅನುವಾದಿಸಿದ ಇಂಗ್ಲಿಷ್ ಕವಿತೆಯೊಂದನ್ನ ಪ್ರಕಟಿಸುತ್ತಿದ್ದೇವೆ.

ಇಷ್ಟಾರ್ ಎಂಬ ಬ್ಯಾಬಿಲೋನಿಯನ್ ಮಾತೃದೇವತೆಗೆ ಒಂದು ಹಾಡು

ಚಂದ್ರ ಹಂದಿ,
ಅವಳು ಗುಟುರುವುದು ನನ್ನ ಗಂಟಲಿನಿಂದ
ನನ್ನ ಒಳಗೆಲ್ಲ ಬೆಳಗುವಹಾಗೆ ಅವಳು ಹೊಳೆಯುತ್ತ ಹೋದಂತೆ
ಅಂತರಾಳದ ನನ್ನ ಕೆಸರು ಸಂಭ್ರಮಿಸಿ
ಕಾಂತಿಯುಕ್ತ ಬೆಳ್ಳಿಗುಳ್ಳೆಗಳಾಗಿ ಹೊಮ್ಮಿ ಚಿಮ್ಮುತ್ತವೆ.

ನಾನು ಗಂಡು ಹಂದಿ
ಮತ್ತು ಕವಿ

ಅವಳು ತನ್ನ ಧವಳ ತುಟಿಗಳನ್ನು ತೆರೆದು ನನ್ನನ್ನು ನುಂಗಲೆಂದು ಅಗಲಿಸಿದಾಗ
ನಾನು ಅವನ್ನು ಕಚ್ಚಿಬಿಡುತ್ತೇನೆ
ಆಗ ಚಂದ್ರಲೋಕದಲ್ಲಿ ಹರ್ಷೋದ್ಗಾರ.

ಬಯಕೆಯ ನಿಶೆಯಲ್ಲಿ ನಾವಾಗ ತುಯ್ದಾಡುವುದು
ಗುಟುರುವುದು
ಗುಟುರುತ್ತ ಹೊಳೆಯುವುದು.

ಮೂಲ ಇಂಗ್ಲಿಷ್ : ಡೆನಿಸ್ ಲೆವೆರಟಾವ್
ಭಾವಾನುವಾದ: ಯು.ಆರ್. ಅನಂತಮೂರ್ತಿ

[ ಡೆನಿಸ್ ಲೆವೆರಟಾವ್ ಅಮೆರಿಕಾದ ಈ ಕಾಲದ ಮುಖ್ಯ ಕವಿಗಳಲ್ಲಿ ಒಬ್ಬರು. ನಾನು ೮೦ರ ದಶಕದಲ್ಲಿ ಬಾಸ್ಟನ್ ನ ಟಫ್ಟ್ಸ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನಾಗಿದ್ದಾಗ ನನ್ನ ಸಹೋದ್ಯೋಗಿಯಾಗಿದ್ದ ಈಕೆ ತಮ್ಮ ಮನೆಯಲ್ಲಿ ಯುವಕ ಯುವತಿಯರಿಗೆ ಸತ್ಯಾಗ್ರಹ ಮಾಡುವುದು ಹೇಗೆ, ಹಿಂಸೆಗೆ ಪ್ರತಿಹಿಂಸೆ ಮಾಡದಂತೆ, ಜೀವನ ಪ್ರೀತಿ ಉತ್ಸಾಹ ಕಳೆಯದಂತೆ ಬದುಕುವುದು ಹೇಗೆ, ಪೋಲೀಸರ ಬಲಾತ್ಕಾರಕ್ಕೆ ಜಗ್ಗದಂತೆ ಕೂತಲ್ಲೇ ಕೂತಿರುವುದು ಹೇಗೆ- ಇತ್ಯಾದಿಗಳನ್ನು ಕಲಿಸುವ ಶಾಲೆಯನ್ನು ನಡೆಸುತ್ತ ಇದ್ದರು. ಯೋಗ, ಹಾಡು, ಕವಿತೆ, ಕಥನ- ಇವೇ ಸತ್ಯಾಗ್ರಹ ಶಾಲೆಯ ಪಠ್ಯಗಳು, ಅಪ್ಪಟ ಗಾಂಧಿವಾದಿಯಾದ ಇವರು ಮಾರ್ಟಿನ್ ಲ್ಯೂಥರ್ ಕಿಂಗ್ ನ ಚಳುವಳಿಯಲ್ಲೂ ವಿಯಟ್ನಾಂ ಮೇಲಿನ ಯುದ್ಧದ ವಿರೋಧಿಯಾಗಿಯೂ ತನ್ನ ಗಂಡನ ಜೊತೆ ಸಕ್ರಿಯರಾಗಿದ್ದವರು. ಇವರು ಯಾವ ಶಾಲೆಗೂ ಹೋಗದೆ, ಯಾವ ಡಿಗ್ರಿಯನ್ನು ಪಡೆಯದೆ ಸ್ವಾಧ್ಯಾಯನಿರತರಾಗಿ ಬೆಳೆದವರು. ತನ್ನ ಅನುಭಾವಿ ಅಪ್ಪನ ಮಾರ್ಗದರ್ಶನದಲ್ಲಿ ಬೆಳೆದ ಇವರು ರಾಜಕೀಯವಾಗಿ ಕ್ರಿಯಾಶೀಲರಾದರೂ, ಅವರ ಕಾವ್ಯ ಅನುಭಾವದ ನೆಲೆಯದು. ಘೋಷಣೆಯದಲ್ಲ. ನನ್ನಮೇಲೆ ವೈಯಕ್ತಿಕವಾಗಿ ತುಂಬ ಪ್ರಭಾವ ಬೀರಿದವರಲ್ಲಿ ಅಪ್ಪಟವಾದ ಸಂವೇದನಾ ಶೀಲರಾದ ನಿರ್ಭಯರೂ ನಿರಹಂಕಾರಿಯೂ ಆದ ಇವರೊಬ್ಬರು. ]

ಪುಟದ ಮೊದಲಿಗೆ
 
Votes:  8     Rating: 2.75    
 
 
ಸಂಬಂಧಿಸಿದ ಲೇಖನಗಳು
  ಯಡಿಯೂರಪ್ಪನವರು ಬೀದರಿಗೆ ಬಂದ ವೃತ್ತಾಂತವು
  ಧಾರಾಳ ಮಾತು ನಮಗೇ ಆಪತ್ತು!
  ಏಳು ಕಲಾವಿದೆಯರ ಏಳು ವರ್ಣಗಳು
  ರಾಮ ಭಕ್ತ ಹನುಮನೋ, ಹನುಮ ಭಕ್ತ ರಾಮನೋ
  `ಅಲ್ನೋಡಿ ಕಲೀರಿ' ಅಂದ್ರೇನು ದರ್ಶನ್?
  ಹುಲ್ಲಿನ ಮೇಲೆ ಕೂತ ಹುಡುಗ ರಾಮುಲು
  ಜಾಗತೀಕರಣ ನೀತಿಕಥಾ-6: ಗುರುಚರಿತೆ
  ನ್ಯೂಯಾರ್ಕ್ ಜಿಮ್ ಬಳ್ಳಾರಿ ದೇವರ ನೋಡಲು ಬಂದ ಕಥೆ!
  ಶಿಕ್ಷಣ ಮೀಸಲು ನೀತಿಯನ್ನು ನೀವೂ ಬೆಂಬಲಿಸಿ
  ಯೋಗರಾಜ್ ಭಟ್ ಬರೆದ `ಪಂಚರಂಗಿ' ಕವಿತೆಗಳು
  ನೋವೆಂದರೆ ಅಳು ಮಾತ್ರವೇ? :ಹರೀಶ್ ಬರಹ
  ರಾಖೀ ಹಬ್ಬದ ದಿನ ವಿಲಾಸಣ್ಣನ ನೆನಪು
  ಭಿಕ್ಷುಕರು ಮತ್ತು ಸಾಹಿರ್ ಸಾಲುಗಳು: ದಿವಾಕರ್ ಬರಹ
  ಕನ್ನಡ ಯುವ ಬರಹಗಾರರಿಗೆ ಟೊಟೊ ಪುರಸ್ಕಾರ
  ಕನ್ನಡದ ಜಗನ್ಮೋಹಿನಿ ಹರಿಣಿಯೊಂದಿಗೆ ಒಂದಷ್ಟು ಹರಟೆ
  ಪೆಜತ್ತಾಯ ಬರೆದ ತ್ರಿಚಕ್ರಿ ಗೋವಿಂದ ಭಟ್ಟರ ಕಥೆ
  ಜಾಗತೀಕರಣ ನೀತಿಕಥಾ-5: ಕಲ್ಲು ಸಿಕ್ಕರೆ ಕೊಳ್ಳಿರೋ...
  ಏನೂ ನನ್ನದಲ್ಲವೆಂಬ ಸ್ವಾತಂತ್ರ್ಯ:ನಾಗಶ್ರೀ ನಂಬಿರುವುದು
  ಸ್ವಾತಂತ್ರ್ಯ ಅಂದ್ರೆ ಏನು?:ಸುಶ್ರುತ ಕೇಳಿದ ಪ್ರಶ್ನೆಗಳು
  ಮೆಟ್ರೋ ಬದಿಯಲ್ಲೇ ಮಲ್ಲಿಗೆ ದಂಡೆಯ ಪರಿಮಳ
  ಗುಬ್ಬಚ್ಚಿಗಳಿಗೆ ಸ್ವಾತಂತ್ರ್ಯದ ಕಾಳು: ಹೇಮಾ ಬರಹ
  ಸ್ವಾತಂತ್ರದ ಮೊದಲ ಕ್ಷಣಗಳು:ಅಯ್ಯಂಗಾರ್ ನೆನಪುಗಳು
  ಕೆಂಡಸಂಪಿಗೆ ಕಮೆಂಟಿಗರು ಮೊನ್ನೆಯಿಂದಲೇ ಸ್ವತಂತ್ರರು!
  ಹಳ್ಳಿ ಹೈಕಳಿಗೆ ಬೇಡದ ಕನ್ನಡ ಶಾಲೆ: ಪೆಜತ್ತಾಯ ಚಿಂತನೆ
  ಅನು ಪಾವಂಜೆ ಬರೆದ ಅಜ್ಜನ ಮನೆಯ ನೆನಪುಗಳು
  ಒಬ್ಬ ಅತಿಸಾಮಾನ್ಯನ ಗೊಣಗಾಟ : ಸುದರ್ಶನ್ ಬರಹ
  ಮುಂಬೈನ ಮಂಕಿ ಬ್ರಿಡ್ಜ್ ನಲ್ಲೊಬ್ಬ ಪತಿತ ಪಾವನ ತಿರುಕ
  ಗ್ರೆಗರಿಯವರ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಾರೆ?
  ಅಮೇರಿಕಾ ದೇಶದ ಅಂಗಳದ ಅಂಗಡಿಗಳು
  ಗವಾಕ್ಷಿಯಲ್ಲಿ ಬಂದಿರುವ ಡಬ್ಬಿಂಗ್ ಪಿಶಾಚಿ!
  ಮಹಾನುಭಾವ ಬಿ.ಆರ್.ಪಂತುಲು:ಬಸವರಾಜು ಬರಹ
  ನಾನೂ ಲಾಂಗ್ ಜಂಪ್ ಹಾರಿದೆ: ಆರ್.ಜಿ.ಭಟ್ ಬರಹ
  ಆಸ್ಟ್ರೇಲಿಯಾ ಪತ್ರ: ದೇವರ ನಂಬದ ಸ್ತ್ರೀ ಪ್ರಧಾನಿ
  ತೆಂಗಿನ ಜುಟ್ಟೂ ತಮ್ಮನ ಜುಟ್ಟೂ: ಪರೀಕ್ಷಿತಾ ಬರಹ
  ಸ್ಯಾನ್ ಬಾರ್ನ್ ಪ್ರಾಯೋಗಿಕ ಕೃಷಿ ಕ್ಷೇತ್ರ: ವೆಂಕಟೇಶ್ ಬರಹ
  ಸವಣೂರಿನ ಭಂಗಿಗಳು ತೋರಿಸಿದ ಸತ್ಯಗಳು
  ಗ್ರೆಗರಿ ಕಳಕೊಂಡದ್ದು,ಎಂ ಆರ್ ಪಿ ಎಲ್ ಕಳೆದುಕೊಂಡದ್ದು
  ನಾರೀಕೇರಳ...ಮಳೆ,ಸುದ್ದಿರಾಜಕೀಯ:ಕನಕ ಬರಹ
  ಜಾಗತೀಕರಣ ನೀತಿಕಥಾ- ಕತೆಯೆಂಬ ಕತೆ
  ಇಟ್ಟಿಗೆ ಮಣ್ಣಿನ ರಾಶಿಯ ಮುಂದೆ..:ಲಕ್ಷ್ಮಿ ಕುಡ್ಲ ಬರಹ
  ಅಕ್ರಮ ಗಣಿ ಕಂಡರೂ ನಾವು ಯಾಕೆ ಕುರುಡರು?
  ಮಂಗಳೂರಲ್ಲಿ ಪತ್ರಾವೋ ಉಪವಾಸ ಕುಂತಿದ್ದರು...
  ಗ್ರೆಗರಿ ಪತ್ರಾವೊಗಾಗಿ ವೈದೇಹಿ ಮೊರೆ
  ಗ್ರೆಗರಿ ಪತ್ರಾವೋ ಮನೆಗೆ ಜೆ.ಸಿ.ಬಿ. ಎರಗಿದ ಕಥೆ
  ಅರವತ್ತರ ಉಲ್ಲಾಸದಲ್ಲಿ ನಸೀರುದ್ದೀನ್ ಷಾ: ಬಸು ಬರಹ
  ಜಾಗತೀಕರಣ ನೀತಿಕಥಾ 3: ಸಿಐಡಿ ಹೇಳಿದ ಕತೆ
  ಆಸ್ಟ್ರೇಲಿಯಾ ಓಲೆ: ಓದಲು ಬಂದು ತಾಯಾದವರ ಕಥೆ
  ಗಣಿಯಿಂದ ಹೊರಬರುತ್ತಿರುವ ದುರ್ನಾತಗಳು
  ಆಳುವವರೂ,ಆಳಿಸಿಕೊಳ್ಳುವವರೂ,ಪ್ರಜಾಪ್ರಭುತ್ವವೂ....
  ಈ ಗೋಕಾಕ್ ಎಂದರೆ ಯಾರು? ಹೃಷಿಕೇಶ್ ಬರಹ
  ಫುಟ್ಬಾಲ್, ಮಂಡೇಲಾ ಮತ್ತು ಒಂದು ಕವಿತೆ
  ಅಹಲ್ಯೆಯಾಗಬೇಕಿದ್ದವಳು ಏಡಿ ಹಿಡಿದದ್ದು....
  ರಾಧಜ್ಜಿ ಸೀಕರ್ಣೆ ಬೇಡಾ ಅಂದ ಕಥೆ
  ಬದಲಾದ ಕಾಲಮಾನ: ರಾಜೇಶ್ವರಿ ತೇಜಸ್ವಿ ಬರಹ
  ಈ ಪೈಶಾಚಿಕತೆಗೆ ಕೊನೆಯೇ ಇಲ್ಲವೇ?