ಫೆಬ್ರವರಿ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ: ಕಾಳಗ ಗೆದ್ದವರ ಯಾತನೆಗಳು    
ಸುದರ್ಶನ್
ಶುಕ್ರವಾರ, 3 ಏಪ್ರಿಲ್ 2009 (05:00 IST)
ಕದನಕ್ಕೆ ಸಿಕ್ಕ ಬಾಲಕಿ
ಪೋಸ್ಟ್ ಟ್ರಾಮಾಟಿಕ ಸ್ಟ್ರೆಸ್ ಡಿಸಾರ್ಡರ್ (PTSD) ವಿಯಟ್ನಾಂ ಕಾಳಗದಿಂದ ತಿರುಗಿ ಬಂದವರನ್ನು ಕಾಡುತ್ತಿತ್ತು. ಅದಕ್ಕೂ ಹಿಂದಿನ ಕಾಳಗಗಲ್ಲಿ ಅದಿರಲಿಲ್ಲವೆಂದಲ್ಲ. ಸಾವಿರಾರು ವರ್ಷಗಳ ಹಿಂದೆಯೇ ಅದರ ಮಾತು ಬಂದಿದೆ. ಆದರೆ ಅದನ್ನು ಗುರುತಿಸಿ ಅದಕ್ಕೊಂದು ಹೆಸರು ಕೊಟ್ಟು, ಪರಿಹಾರವನ್ನು ರೂಪಿಸುವ ಕೆಲಸ ಮಾತ್ರ ಇತ್ತೀಚಿನದು. ಈಗ ಇರಾಕ್, ಅಫ್ಘಾನಿಸ್ತಾನದ ಕಾಳಗದಿಂದ ಮರಳಿದವರಲ್ಲೂ ಅದು ಇದ್ದೇ ಇದೆ. ಯುದ್ಧದಲ್ಲಿ ಮುಂಜಾನೆ ಜತೆಗಿದ್ದ ನಗುವ ಗೆಳೆಯ ಮಧ್ಯಾಹ್ನ ಕಣ್ಣೆದುರೇ ವೈರಿ ಬಾಂಬಿಗೆ ತುತ್ತಾಗಿ ಸಾವಿರ ತುಂಡಾದ ಅನುಭವ ಜೀವನ ಪರ್ಯಂತ ಜತೆಗೆ ಉಳಿಯುವಂತದು. ಮರಳಿದ ಮೇಲೂ ಅದನ್ನು ಸಂಬಾಳಿಸಿಕೊಂಡು ಒಟ್ಟಾಗಿ ಉಳಿಯುವುದು ಸುಲಭದ ಮಾತೇನಲ್ಲ. ತನ್ನ ಗೆಳೆಯನ ಸಾವಿಗೆ ತಾನೇ ಕಾರಣವೇನೋ ಎಂಬ ಅಪರಾಧೀ ಭಾವ - ಅದೆಷ್ಟೇ ಬುಡವಿಲ್ಲದ್ದು ಆಗಿದ್ದರೂ - ಸೇರಿಕೊಂಡರೆ ಹಗಲಿರುಳೂ ಅವರಿಗೆ ನರಕಯಾತನೆ. ಇದನ್ನು ಹಲವರು, ಹಲವಾರು ಬಾರಿ, ಹಲವು ಬಗೆಗಳಲ್ಲಿ ತೋಡಿಕೊಂಡಿದ್ದಾರೆ, ವಿವರಿಸಿದ್ದಾರೆ ಹಾಗು ಮನದಟ್ಟು ಮಾಡಿದ್ದಾರೆ. ಆದರೂ ಕಾಳಗಗಳು ಮಾತ್ರ ಆಗುತ್ತಲೇ ಇರುತ್ತದೆ.

ಇತ್ತೀಚಿನ ಇರಾಕ್, ಅಫ್ಘಾನಿಸ್ತಾನದ ಕಾಳಗದಲ್ಲಿ ಕೆಲವರ ನೋವು ಇನ್ನೊಂದು ಹೆಜ್ಜೆ ಮುಂದೆ ಹೋಗಿದೆ. ಅಮೆರಿಕ, ಬ್ರಿಟಿಷ್, ಆಸ್ಟ್ರೇಲಿಯದ ಸೈನಿಕ ತುಕಡಿಗಳು ಹೆಗಲಿಗೆ ಹೆಗಲು ಕೊಟ್ಟುಕೊಂಡು ಈ ಯುದ್ಧಗಳಲ್ಲಿ ಪಾಲ್ಗೊಂಡಿದ್ದವಲ್ಲ - ಅದು ಈ ಸಂಕೀರ್ಣತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಈ ದೇಶಗಳ ಯುದ್ಧ-ಸಂಸ್ಕೃತಿಯ ಬೇರೆತನಗಳು ಹಲವು ಬಗೆಗಳಲ್ಲಿ ಮರಳಿದ ಸೈನಿಕರನ್ನು ಕಾಡಿದೆ. ಅಮೆರಿಕ, ಬ್ರಿಟನ್ನಿನ ಇಂಟಲಿಜನ್ಸ್ ಆಧಾರದ ಮೇಲೆ ನಡೆದ ಚಕಮಕಿಗಳಲ್ಲಿ ಆಗಬಾರದ ಸಂಗತಿಗಳು ನಡೆದು ಹೋಗಿದೆ. ಅದು ಈ PTSDಗೆ ಮತ್ತಷ್ಟು ಆಳ ಮತ್ತು ನೋವನ್ನು ದಯಪಾಲಿಸಿದೆ. ವೈರಿ ಸೈನಿಕರನ್ನು ಕೊಲ್ಲುತ್ತಿದ್ದೇನೆಂದು ಬಗೆದು - ಮಕ್ಕಳುಮರಿ, ಹೆಂಗಸರ ಮೇಲೆ ಗುಂಡು ಹಾರಿಸಿ ಕೊಂದ ಅಪರಾಧಿ ಭಾವ ಹಲವರನ್ನು ಕಿತ್ತು ತಿನ್ನುತ್ತಿದೆ. ಗೆಲುವೆಂಬುದೇ ಇಲ್ಲದ ಇಂದಿನ ಕಾಳಗಗಳಲ್ಲಿ ಈ ಯಾತನೆ ನೂರ್ಮಡಿಯಾಗುತ್ತದೆ ಕೂಡ.

ಇರಾಕಿನಿಂದ ಮರಳಿದ ಸೈನಿಕನೊಬ್ಬ ಹೋದ ವರ್ಷ ಸಿಡ್ನಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ. ಒಬ್ಬನೇ ಒಂದು ಹೋಟಲಿನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ನಟ್ಟಿರುಳು ಜೀವ ತೆಗೆದುಕೊಂಡ. ಮುಂಚಿಂದಲೂ ಇದರ ಬಗ್ಗೆ ಅರಿವಿದ್ದರೂ ಅವನ ಸಾವು ಹಲವು ಬಾಗಿಲುಗಳನ್ನು ತಟ್ಟಿತು. ಹಲವು ಸೈನಿಕರು ಮುಕ್ತವಾಗಿ ತಮ್ಮ ಯುದ್ಧದ ಅನುಭವದ ಬಗ್ಗೆ, ಯಾತನೆಯ ಬಗ್ಗೆ, ಬದುಕಿನ ದಾರುಣತೆಯ ಬಗ್ಗೆ ಮಾತಾಡ ತೊಡಗಿದರು. ಸೈನ್ಯದ ಅಧಿಕಾರಿಗಳು ಅವರ ಮಾತನ್ನು ಕೇಳಲೇ ಬೇಕಾಯಿತು. ಆಗ ನಡೆದ ವಿಚಾರಣೆಯಲ್ಲಿ ಹಲವು ಸಂಗತಿಗಳು ಹೊರಬಿದ್ದವು.

ಜಾಗತಿಕ ಆರ್ಥಿಕ ಮುಗ್ಗಟ್ಟಿನ ನಡುವೆ ಸೈನಿಕರಿಗೆ ಬೇಕಾದ ಸೈಕಲಾಜಿಕಲ್ ನೆರವಿಗೆ ಕುತ್ತು ಬಂದಿದೆ. ಇರಬೇಕಾದಷ್ಟು ನೆರವು ಸಂಪನ್ಮೂಲ ಇಲ್ಲದೆ ಪರಿಹಾರ ಹಿನ್ನೆಲೆಗೆ ಸರಿದಿದೆ. ಯಾರದೋ ಇಂಟಲಿಜನ್ಸಿನ ತಪ್ಪಿನಿಂದ ಮನೆಯೊಂದರ ಮೇಲೆ ಗುಂಡುಹಾರಿಸಿದ ಸೈನಿಕ ಈಗ ಹಗಲಿರುಳು ನರಳುವಂತಾಗಿದೆ. ಒಂದು ತಾಯಿಯ ದೇಹದ ಪಕ್ಕ ರಕ್ತ ತುಂಬಿದ ಮುಖ ಮುಚ್ಚಿಕೊಂಡು ಕೂಗುತ್ತಿದ್ದ ಪುಟ್ಟ ಬಾಲಕನ ಚಿತ್ರ ಆ ಸೈನಿಕನ ದಿನನಿತ್ಯದ ಸಂಗಾತಿಯಾಗಿಬಿಟ್ಟಿದೆ. ಸದಾ ಕತ್ತಿಯಲಗಿನ ಮೇಲೆ ಅವನ ಬದುಕು ನಡೆಯುತ್ತಿದೆ. ಹೆಂಡತಿ ಮಕ್ಕಳು ಅವನು ಯಾವಾಗ ಸ್ನಾಪ್ ಆಗಿ ಜೀವ ತೆಕ್ಕೊಳ್ಳುತ್ತಾನೋ ಎಂದು ಪ್ರತಿಕ್ಷಣವೂ ಭಯದಲ್ಲೇ ಕಾಯುವಂತಾಗಿದೆ. ಎದುರಿಗಿರುವ ತನ್ನ ಮಕ್ಕಳ ತಂದೆ ಯಾವ ಕ್ಷಣದಲ್ಲಾದರೂ ಇಲ್ಲವಾಗಬಹುದೆಂಬ ಹಿಂಸೆ ಅವರ ಸಂಗಾತಿಗಳನ್ನು ಕಾಡುತ್ತದೆ.

ಯುದ್ಧ ನಂತರದ ಭೀಕರತೆಇವರೆಲ್ಲಾ ಯುದ್ಧಕ್ಕೆ ಹೋಗುವ ಮುನ್ನ ತಮ್ಮ ಸಂಗಾತಿಗಳ ಜತೆ ಚೆಲ್ಲಾಡುತ್ತಿದ್ದ ಹುಡುಗಾಟದ ಹುಡುಗರು. ಆದರೆ ಯುದ್ಧದಿಂದ ಮರಳಿದಾಗ ಗುರುತಿಲ್ಲದಂತೆ ಬದಲಾಗಿ ಹೋಗಿರುವುದು ಆ ಸೈನಿಕ ಹುಡುಗರ ಸಂಗಾತಿಗಳ ಕಹಿ ಅನುಭವ. ಆ ಹಿಂದೆ ತಮ್ಮ ಜತೆಗಿದ್ದ ಹುಡುಗ - ಈ ಮರಳಿದವನಲ್ಲಿ ಇಲ್ಲದ್ದು ಅವರನ್ನು ತಲ್ಲಣಗೊಳಿಸಿದೆ. ಆ ಹುಡುಗನ ಕರಾಳ ನೆರಳಂತಿರುವ ಈ ಮನುಷ್ಯನ ಜತೆ ಬದುಕುವುದು ಕೆಲವರಿಗೆ ಅಸಹನೀಯವಾದರೆ, ಹಲವರಿಗೆ ಶಿಕ್ಷೆಯಾಗಿರುತ್ತದೆ. ಆ ಸತ್ತ ಹುಡುಗಾಟದ ಹುಡುಗನಿಗೆ ಸದಾ ಶೋಕತಪ್ತರಾಗಿ ಬದುಕುವುದನ್ನು ಆ ಸೈನಿಕರ ಸಂಗಾತಿಗಳು ಕಲಿಯಬೇಕಾಗುತ್ತದೆ. ಸದಾ ಒಳಗೊಳಗೇ ಅಳುವುದು ಅವರ ವ್ಯಕ್ತಿತ್ವದ ಅಂಶವಾಗಿ ಬಿಡುತ್ತದೆ.

ಇರಾಕಿನಲ್ಲಿ ಕಡಿಮೆಯೆಂದರೂ ಹತ್ತುಲಕ್ಷ ಸಿವಿಲಿಯನ್ನರು ತಮ್ಮ ಬಾಗಿಲಿಗೆ ಬಂದ ಯುದ್ಧದಲ್ಲಿ ಸತ್ತಿದ್ದಾರೆ. ಅವರನ್ನು "collateral" ಎಂದು ಕರೆದು ಕೈತೊಳೆದುಕೊಳ್ಳುವಾಗ ಒಂದು ಸಂಗತಿ ಮತ್ತಷ್ಟು ಘೋರವಾಗುತ್ತದೆ. ಸಂಪನ್ಮೂಲಕ್ಕೇನೂ ಕಡಿಮೆಯಿಲ್ಲದ ಸಿರಿವಂತ ದೇಶಗಳ ಸೈನಿಕರ ಈ ದುರ್ಗತಿಗೆ ಮರುಕಪಡುವುದು ಸರಿಯೇ. ಆದರೆ ಇರಾಕಿನ, ಅಫ್ಘಾನಿಸ್ತಾನದ ಊರು ಹಳ್ಳಿಗಳಲ್ಲಿ ನಮ್ಮನಿಮ್ಮಂತಿದ್ದ ಜನರ ನೋವು ಯಾತನೆಗೆ ಇನ್ನೂ ಯಾವುದೇ ಹೆಸರು ಕೊಟ್ಟಿಲ್ಲ, ಅವರ ನೋವಿನ ಆಳವನ್ನು ಅಳೆದಿಲ್ಲ. ಯಾತನೆಗೆ ಪರಿಹಾರವೇನೆಂಬ ಮಾತಂತೂ ಇಲ್ಲವೇ ಇಲ್ಲ.
ಪುಟದ ಮೊದಲಿಗೆ
 
Votes:  3     Rating: 4.33    
 
 
ಸಂಬಂಧಿಸಿದ ಲೇಖನಗಳು
  ಪಟ್ಟಣಪುರಾಣ: ಮಣ್ಣ ಇಟ್ಟಿಗೆ ಕೊಳ್ಳಿರೋ
  ತರೀಕೆರೆ ಏರಿಯಾ: ಬಂಗಾಳದ ಪುಖೂರ್ ಕೆರೆಗಳು
  ಸ್ಟೋನ್ ಹಿಲ್ ಡೈರಿ: ಎಮ್ಮಯ ಹೆಮ್ಮೆಯ ರಾಜಾಮೀಸೆ
  ಮಹಾರಾಷ್ಟ್ರದಲ್ಲೇನಾಗುತ್ತಿದೆ?-ಪ್ರೇಮಶೇಖರ ಕಾಲಂ
  ಕೆ.ಟಿ.ಗಟ್ಟಿ ಬಿಸಿಲುಕೋಲು: ಸಿನ್ಸಿನಾಟಿಯ ಸೌಂದರ್ಯ
  ಕಟ್ಟಿಕೊಳ್ಳುವ ತಲ್ಲಣದಲ್ಲಿ ಹೆಕ್ಕಿ ತೆಗೆದ ಸಾಲುಗಳು
  ಶಂಕರ ಪರ್ವತದಿಂದ ಕಂಡ ಶ್ರೀನಗರ
  ಯೋಗೀಂದ್ರ ಕಾಲಂ- ಹಿಮಪಾತದ ಹೊತ್ತಲ್ಲಿ ಇಂಗ್ಲೆಂಡ್ ಸಮಾಚಾರ
  ಸ್ಟೋನ್ ಹಿಲ್ ಡೈರಿ: ಹೇಳಿ, ನಾನು ಬದುಕಿರುವೆನೇ?
  ಪ್ರೇಮಶೇಖರ ಕಾಲಂ- ನೇಪಾಲವೂ ಮಗ್ಗುಲ ಮುಳ್ಳಾಗುತ್ತಿದೆಯೇ?
  ಸತೀಶ್ ಬರೆಯುವ ಕಾಶ್ಮೀರದ ಚಿತ್ರ-೭
  ಕವಲಕ್ಕಿ ಡೈರಿ - ಹಾವು ಕಡಿತದ ಕಥೆಗಳು
  ವಸ್ತಾರೆ ಕಾಲಂ- ವಾಸ್ತುಶಿಲ್ಪಿಯ ವಾಸ್ತವ ಪುರಾಣ
  ತರೀಕೆರೆ ಏರಿಯಾ-ಮನೆಯ ನೆಮ್ಮದಿ , ಸಂತೆಯ ಸ್ವಾತಂತ್ರ್ಯ
  ಕೆ.ಟಿ. ಗಟ್ಟಿ ಬಿಸಿಲುಕೋಲು: ಯಾವ ದೇಶ ಪ್ರೇಕ್ಷಣೀಯ?
  ನವರಾತ್ರಿ ಕಳೆದು ನರಸಿಂಹದಾಸರ ನೆನಪು
  ಆಸ್ಟ್ರೇಲಿಯಾ ಪತ್ರ: ಸಿಡ್ನಿ ಆಗಸದಲ್ಲಿ ಧೂಳ ಲೀಲೆ
  ಹಲ್ಲಿಯ ತಲೆ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ?
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು-೬
  ‘ಪುಸ್ತಕ ಪ್ರೀತಿ’: ಮಾಧವ ಕುಲಕರ್ಣಿಯವರ ‘ಪಾತಾಳ ಗರಡಿ’
  ವಸ್ತಾರೆ ಕಾಲಂ: ದೈವಕೌಪೀನೇಯಮ್
  ಪುಸ್ತಕ ಪ್ರೀತಿ: ರವೀಂದ್ರನಾಥರ ‘ಮೂರು ಸಾಲು ಮರ’
  ಪೂರ್ವಾಂಚಲ ಪುರಾಣ: ಚಾಂಗ್ ಜನರ ನಡುವೆ
  ಸದ್ದಿಲ್ಲದೆ ಹಾರಾಡುವ ಏರ್ ಬಸ್ ಸುಂದರಿ: ಯೋಗೀಂದ್ರ ಬರಹ
  ಕವಲಕ್ಕಿ ಡಾಕ್ಟರ ಡೈರಿ : ಧನುರ್ವಾಯು ಪುರಾಣ
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು- ೫
  ಸುದರ್ಶನ್ ಕಾಲಂ: ಈಡಾ ಎಂಬ ಪಳೆಯುಳಿಕೆಯ ಹುಡುಗಿ
  ತೀರಿಹೋದ ವೆಸ್‍ಲೀ ಎಂಬ ಪೊಲೀಸ್ ಆಫೀಸರ್: ವಸ್ತಾರೆ ಅಂಕಣ
  ಸ್ಟೋನ್ ಹಿಲ್ ಡೈರಿ:ಇಡ್ಲಿ-ಪ್ರತಿಭೆ, ಪರಂಪರೆಯ ಪಾತ್ರೆ
  ಬಿಸಿಲುಕೋಲು: ಹುಟ್ಟಿದರೆ ಮಗುವಾಗಿ ಇಲ್ಲಿ ಹುಟ್ಟಬೇಕು!
  ಯೋಗೀಂದ್ರ ಕಾಲಂ: ಆಗಸ್ಟ್ ತಿಂಗಳ ಖಾಲಿ ಬೇಸಗೆ ಕಾಲ
  ಡಿ.ಪಿ. ಸತೀಶ್ ಬರೆಯುತ್ತಾರೆ: ಕಾಶ್ಮೀರದ ಪಂಡಿತರ ಕಷ್ಟಸುಖ
  ನೀಲಿ ಬೆಳಕು: ನನ್ನ ಪ್ರೀತಿಯ ಮುಲ್ಲಾ
  ಹಂದಿಜ್ವರದ ಹೊತ್ತಲ್ಲಿ ಮರಣವ್ಯಾಧಿಗಳ ನೆನಪು
  ಬಿಸಿಲುಕೋಲು: ಇದೇನು ಮಸಣವೋ ಇಲ್ಲ ವನರಾಶಿಯೋ...
  ಒಂಭತ್ತನೇ ತರಗತಿಯ ತೊಂಭತ್ತರ ಅಜ್ಜ ಅಯ್ಯೋ ತೀರಿಹೋದರಲ್ಲ...
  ಪುಸ್ತಕ ಪ್ರೀತಿ: ಆನಂದ ಲಕ್ಕೂರು ಕವಿತೆಗಳು
  ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು -೩
  ಪೂರ್ವಾಂಚಲ ಪುರಾಣ: ನಾಗಾ ನದಿಯ ಕೊಳ್ಳದಲ್ಲಿ
  ಬಣ್ಣಗಳ ಹಿಂದಿನ ನಿಜದ ಬಣ್ಣ: ಕೃತಿ ಬರಹ
  ವರ್ಡ್ಸ್ ವರ್ತನ ಸರೋವರದ ಸಿರಿಗನ್ನಡಿಯಲ್ಲಿ
  ತರೀಕೆರೆ ಏರಿಯಾ: ಮುಂದುವರಿದ ನಾಯಿಪುರಾಣ
  ಅಲ್ಲಿಯಗಿಡ ಇಲ್ಲಿ ಹೂಬಿಟ್ಟು ಇಲ್ಲಿನ ಬಳ್ಳಿ ಅಲ್ಲಿ ನೆಟ್ಟು
  ಡಿ ಪಿ ಸತೀಶ್ ಅಂಕಣ: ಮುಂದುವರಿದ ಕಾಶ್ಮೀರದ ಚಿತ್ರಗಳು
  ಕವಲಕ್ಕಿ ಡಾಕ್ಟರ ಡೈರಿ: ಕಾಮ ಪ್ರೇಮ ಕಷ್ಟ ಸುಖ
  ಬಿಸಿಲುಕೋಲು: ಅಮೆರಿಕಾದಲ್ಲಿ ಹೆರುವ ವಹಿವಾಟು
  ಎಸ್ ಮಂಜುನಾಥ್ ಬರೆದ ಅಪ್ಪು ಪೂಜಾರಿಯ ಚಿತ್ರ
  ಪುಸ್ತಕ ಪ್ರೀತಿ: ಮೊಗಳ್ಳಿ ಕವಿತೆಗಳ ‘ದೇವಸ್ಮಶಾನ’
  ವಸ್ತಾರೆ ಕಾಲಂ: ದೈನಂದಿನ ನ್ಯೂಟನುಭ್ರಾಂತುಗಳು
  ತರೀಕೆರೆ ಏರಿಯಾ: ನಾಯಿಪುರಾಣದ ಮೊದಲ ಕಂತು
  ಸ್ಟೋನ್ ಹಿಲ್ ಡೈರಿ: ಹುಲುಸು ಮನುಜನ ಕಟ್ಟುಕಟ್ಟಳೆಗಳು
  ಬಿಸಿಲುಕೋಲು: ಒಂದು ವಿಶ್ವವಿದ್ಯಾನಿಲಯದ ಕುರಿತು
  ಬ್ರಿಸ್ಟಲ್ ಪುರಾಣ: ಬಿಸಿಲು,ಬೀಚ್,ಬಿಯರ್ ಮತ್ತು ಬ್ರಿಟಿಷ್
  ಕವಲಕ್ಕಿ ದಿನಚರಿ: ಕೆಲವು ಬಸಿರ ಸಂಗತಿಗಳು
  ಪೂರ್ವಾಂಚಲ ಪುರಾಣ: ಮಿಥುನಗಳ ಹಳ್ಳಿಯಲ್ಲಿ