ಫೆಬ್ರವರಿ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ: ಪರವೂರಲ್ಲಿ ನಮ್ಮತನ    
ಸುದರ್ಶನ್
ಸೋಮವಾರ, 29 ಜೂನ್ 2009 (00:00 IST)
ಆಸ್ಟ್ರೇಲಿಯಾ ಪೊಲೀಸರೊಂದಿಗಿನ ಮಾತುಕತೆಯಲ್ಲಿ ಇಂಡಿಯನ್ನರು
ಹೋದ ವರ್ಷದಿಂದ ಮೆಲ್ಬರ್ನಿನಲ್ಲಿ ಇಂಡಿಯದ ವಿದ್ಯಾರ್ಥಿಗಳ ಮೇಲೆ ಹೆಚ್ಚುತ್ತಿರುವ ಹಲ್ಲೆಗಳು ಸುದ್ದಿ ಮಾಡಿದೆ. ಇಂಡಿಯದಿಂದ ಬಂದು ಓದುತ್ತಿರುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಹೆಚ್ಚಾಗುತ್ತಿರುವ ಹೊತ್ತಲ್ಲಿ ಇದು ಎಲ್ಲರ ತಲೆ ಕೆಡಿಸಿದೆ. ಇಂಡಿಯನ್ ವಿದ್ಯಾರ್ಥಿ ಸಂಘಗಳಿಂದ ಹಿಡಿದು ಯೂನಿವರ್ಸಿಟಿ, ಮೆಲ್ಬರ್ನಿನ ಪೊಲೀಸ್, ರಾಜ್ಯ ಸರ್ಕಾರ ಸೇರಿದಂತೆ ಆಸ್ಟ್ರೇಲಿಯದ ಸರ್ಕಾರದವರೆಗೆ ಎಲ್ಲರೂ ಇದರ ಬಗ್ಗೆ ಮಾತಾಡಿದ್ದಾರೆ. ತಮ ತಮಗೆ ಕಂಡಂತೆ, ಸರಿ ಹೊಂದುವಂತೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ.

ಅಂಕಿ-ಅಂಶಗಳ ಪ್ರಕಾರ ಇಂಡಿಯದ ವಿದ್ಯಾರ್ಥಿಗಳ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿರುವುದು ದಿಟ. ಆದರೆ ಅದು ಜನಾಂಗೀಯ ಹಲ್ಲೆ ಎಂದು ಹೇಳಲಾಗದು ಎಂದು ಹೇಳುತ್ತಲೇ ಪೊಲೀಸರು ಇಂಡಿಯ ರೆಫೆರನ್ಸ್ ಗ್ರೂಪ್ ಎಂಬುದನ್ನು ರಚಿಸಿದರು. ಅದರಲ್ಲಿ ಇಂಡಿಯನ್ ಸಮುದಾಯದ ಮುಖಂಡರನ್ನು ಒಟ್ಟುಗೂಡಿಸಿ ಅವರೊಡನೆ ಚರ್ಚಿಸಿದರು. ಇದರಿಂದ ಪೊಲೀಸರು ಹೊಸದೇನಾದರೂ ಕಲಿಯುವಂತಾದರೆ ಒಳ್ಳೆಯದಾಗುವುದೇನೋ ಹೌದು. ಆದರೆ ಇಂಡಿಯನ್ ಸಮುದಾಯದ ಜತೆ ನಡೆದ ಸಂಗತಿಯೇ ಬೇರೆ.

ಆ ರೆಫೆರನ್ಸ್ ಗುಂಪಿನೊಡನೆ ನಡೆದ ಸಂವಾದದ ನಂತರ ಪೋಲೀಸರು ಹೇಳಿದ ಮಾತುಗಳು ನಗೆಪಾಟಲಾಗಿದ್ದವು. "ಇಂಡಿಯದ ವಿದ್ಯಾರ್ಥಿಗಳು ಟ್ರೈನು ಬಸ್ಸುಗಳಲ್ಲಿ ತಮ್ಮ ಭಾಷೆಯಲ್ಲಿ ಜೋರಾಗಿ ಮಾತಾಡ ಕೂಡದು, ಐಪಾಡ್, ಲ್ಯಾಪ್‌ಟಾಪ್‌, ಮೊಬೈಲಿನಂತಹ "ಶ್ರೀಮಂತ ಸರಕು"ಗಳನ್ನು ತೋರಿಸಿಕೊಂಡು ಓಡಾಡದಿದ್ದರೆ ಒಳ್ಳೆಯದು" ಹೀಗಲ್ಲಾ ಮಾತುಗಳನ್ನು ಆಡಿದರು. ಹಲ್ಲೆಗೊಳಗಾದವರ ನಡತೆಯನ್ನೇ ತಿದ್ದುವ ಪೊಲೀಸರ ಮಾತುಗಳನ್ನು ಪತ್ರಿಕೆಗಳು ಎತ್ತಾಡಿ ಇದೆಂತಹ ಹುಚ್ಚು ಎಂದು ಗೇಲಿ ಮಾಡಿದರು. ಈ ಮಾತುಗಳನ್ನು ಕಾಕೇಷಿಯನ್ ಮಂದಿಗಾಗಲಿ ಇನ್ನಾವುದೇ ಸಮುದಾಯದ ಮಂದಿಗಾಗಲಿ ಹೇಳಿದ್ದರೆ ದೊಡ್ಡ ರಾದ್ಧಾಂತವಾಗುತ್ತಿತ್ತೇನೋ. ಆಸ್ಟ್ರೇಲಿಯದಲ್ಲಿ ಹಲ್ಲೆಗೆ ಒಳಗಾದವರನ್ನೇ ತಿದ್ದಲು ಹೊರಡುವುದು ಒಂದು ಹಳೆಯ ಖಯಾಲಿ. ಅದನ್ನು ಹೊಸ ಹೊಸ ಹೆಸರಲ್ಲಿ, ಹೊಸ ಹೊಸ ರೂಪದಲ್ಲಿ ಮಾಡುತ್ತಲೇ ಇದ್ದಾರೆ. ಅಬಾರಿಜಿನಿಗಳ ಸಮುದಾಯದಿಂದ ಹಿಡಿದು ವಲಸೆ ಬರುತ್ತಿರುವ ಎಲ್ಲ ಸಮುದಾಯಗಳೊಂದಿಗೂ ಇದನ್ನು ಮಾಡಿದ್ದಾರೆ. ಈ ಹೊಸ ಪ್ರಯತ್ನ ಪಡೆಯುತ್ತಿರುವ ರೂಪ ನೋಡಿ ದಡಬಡಿಸಿದ ಪೊಲೀಸರು ತಟ್ಟನೆ ಇದು ಇಂಡಿಯನ್ ಸಮುದಾಯದ ಮುಖಂಡರ ಅಭಿಪ್ರಾಯವೇ ಹೊರತು ತಮ್ಮದಲ್ಲ ಎಂದು ಹೇಳಿಬಿಟ್ಟರು. ಇದು ಹೌದಾದರೆ, ಆ ಸಮುದಾಯದ ಮುಖಂಡರು ಇನ್ನೆಂತವರು ಇರಬಹುದು ಎಂದು ಬಿಡಿಸಿ ಹೇಳಬೇಕಾಗಿಲ್ಲ.

ಇಂಡಿಯದ ಪತ್ರಿಕೆಗಳಲ್ಲಿ ಇದರ ಬಗ್ಗೆ ಸುದ್ದಿ ಬರತೊಡಗಿದ್ದು ಯೂನಿವರ್ಸಿಟಿಗೆ ಹಾಗು ಸರ್ಕಾರಕ್ಕೆ ಮತ್ತೂ ಪೀಕಲಾಟಕ್ಕೆ ಇಟ್ಟುಕೊಂಡಿತು. ತಾವು ಕೈಗೊಂಡ ಕೆಲಸ ಹಾಗು ಮಾಡಿರುವ ಬದಲಾವಣೆಗಳ ಬಗ್ಗೆ ಒತ್ತಿ ಒತ್ತಿ ಹೇಳಲಾರಂಭಿಸಿದರು. ಇದೆಲ್ಲಾ ಮಾತುಕತೆ ನಡೆದಿರುವಾಗ ಅಲ್ಲಲ್ಲಿ ಹಲ್ಲೆಗಳು ನಡೆದೇ ಇತ್ತು. ಈ ವಾರವಷ್ಟೇ ಟ್ರೈನಿನಲ್ಲಿ ಇಂಡಿಯದ ಹುಡುಗನೊಬ್ಬನ ಹತ್ತಿರ ಸಿಗರೇಟು ಕೇಳಿ, ಅವನು ಇಲ್ಲ ಎಂದಾಗ ನಾಕಾರು ಪುಂಡರು ಅವನಿಗೆ ಹೊಡೆದಿದ್ದಾರೆ. ಹೊಡಿಸಿಕೊಂಡ ಹುಡುಗನ ಪ್ರಕಾರ ಎಷ್ಟೇ ಬೇಡಿಕೊಂಡರೂ ಸುತ್ತಮುತ್ತಲಿದ್ದ ಯಾರೂ ಸಹಾಯಕ್ಕೆ ಬರಲಿಲ್ಲವಂತೆ. ಪುಂಡರು ಓಡಿ ಹೋದ ಮೇಲೆ ಇವನನ್ನು ಆಸ್ಪತ್ರೆಗೆ ಕರೆದೊಯ್ದರು. ಈತನೇನೋ ಪೊಲೀಸರಿಗೆ ದೂರಿತ್ತ. ಹಲವರು ತಮ್ಮ ವೀಸಾಕ್ಕೆ ತೊಂದರೆ ಆದೀತು ಎಂದು ಅದೂ ಮಾಡುವುದಿಲ್ಲ. ಪೊಲೀಸರ ಕೆಲಸ ಮತ್ತಷ್ಟು ಕಠಿಣವಾಗುತ್ತಾ ಹೋಗುತ್ತದೆ.

ಒಂದು ಮುಕ್ತ ಸಮಾಜದಲ್ಲಿ ಯಾರಾದರೂ ಎಷ್ಟು ಹೊತ್ತಿಗಾದರೂ ದಿಗಿಲಿಲ್ಲದೆ ಓಡಾಡುವಂತಿರಬೇಕು. ಹಾಗೆಂದ ಮಾತ್ರಕ್ಕೆ ಕೆಡುಕುಗಳು ಇರುವುದೇ ಇಲ್ಲ ಎಂದಲ್ಲ. ಆದರೆ ಅದರ ಭಯದಲ್ಲೇ ಓಡಾಡುವಂತಿರಬಾರದು ಅಷ್ಟೆ. ಈ ಇಂಡಿಯನ್ ವಿದ್ಯಾರ್ಥಿಗಳ ಸಂದರ್ಭದಲ್ಲಿ, ಓದಲು ಬಂದವರು ಪಾರ್ಟ್‌-ಟೈಮ್ ಕೆಲಸ ಮಾಡಿಕೊಂಡಿರುವುದು ಸರ್ವೇ ಸಾಮಾನ್ಯ. ಹಗಲು ಕಾಲೇಜಿಗೆ ಹೋಗುವುದರಿಂದ, ಕೆಲಸಗಳು ಕಡಿಮೆಯಾಗುತ್ತಿರುವುದರಿಂದ ಇರುಳು ಕೆಲಸಗಳಿಗೆ ಹೋಗುವುದೂ ಸಾಮಾನ್ಯ. ಅಂತಹವರು ಯಾವ ಸಮುದಾಯದವರೇ ಆಗಿರಲಿ, ಅವರ ರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕಾದ ಪೊಲೀಸರು ಅದನ್ನು ಬಿಟ್ಟು ಸಮುದಾಯದ ಜತೆ ಸಂವಾದ ಎಂದೆಲ್ಲಾ ಹೊತ್ತು ಸವಲತ್ತು ದಂಡ ಮಾಡುತ್ತಿರುವುದು ನಾಟಕವಾಗಿಯೇ ಕಾಣುತ್ತದೆ.

ಮೆಲ್ಬೋರ್ನ್ ರೈಲು ನಿಲ್ದಾಣಫ್ಯೂಡಲ್ ಮನಸ್ಥಿತಿಯಿಂದ ಈ ನಮ್ಮ ಮುಖಂಡರು ಇನ್ನೂ ಹೊರಬಂದೇ ಇಲ್ಲವೇನೋ ಅನಿಸುತ್ತದೆ. ನಮ್ಮ ಸಮುದಾಯದ ಹುಡುಗರು ತಮ್ಮ ನುಡಿಯಲ್ಲಿ ಜೋರಾಗಿ ಮಾತಾಡಬಾರದು, ತಗ್ಗಿಬಗ್ಗಿ ನಡೆಯಬೇಕು ಎಂದು ಹೇಳುವುದು ಮುಜುಗರ ಹುಟ್ಟಿಸುವ ಸಂಗತಿಯಲ್ಲವೆ? ಆಸ್ಟ್ರೇಲಿಯಕ್ಕೆ ಬಂದು ನೆಲೆಸಿರುವವರು ಎರಡನೇ ದರ್ಜೆಯ ಪ್ರಜೆಗಳಂತೆ ನಡೆದುಕೊಳ್ಳಬೇಕೆ? ಅವರ ಮಾತುಗಳು "ಗೌಡರ ಮುಂದೆ ತಗ್ಗಿ ಬಗ್ಗಿ ನಡಿ, ಎದೆ ನಿಮಿರಿಸಿ ನಡೆಯಬೇಡ" ಎಂದು ದಾಸ್ಯವನ್ನು ಉಪದೇಶಿಸುವಂತಿದೆ. ಆ ಮಾತುಗಳ ಮೂಲಕ ನಮ್ಮ ಈ ಮುಖಂಡರು ತಮ್ಮ ನೈತಿಕ ದಿವಾಳಿತನವನ್ನು ಮತ್ತೆ ಬಯಲು ಮಾಡಿಕೊಂಡಿದ್ದಾರೆ. ನಮ್ಮ ಹುಡುಗರನ್ನು ಕಾಪಾಡುವುದು ಪೊಲೀಸರ ಕೆಲಸ. ಅದನ್ನು ಅವರು ಪೂರೈಸಿಲ್ಲ. ಅದು ಪೊಲೀಸರ ಜವಾಬ್ದಾರಿ ಎಂದು ಹೇಳುವ ಎದೆಗಾರಿಕೆ ತೋರಿಸಿಲ್ಲ.

ಈ ಹಿಂದೆ ಭಯೋತ್ಪಾದಕ ಎಂದು ಆಪಾದಿತನಾದ ಡಾ. ಹನೀಫ್‌ನ ವಿಷಯದಲ್ಲೂ ಹೀಗೆಯೇ ಆಗಿತ್ತು. ಆಸ್ಟ್ರೇಲಿಯಾದ ಅಗಲಕ್ಕೂ ಆತನೊಡನೆ ಪೊಲೀಸರು ಮಾಡುತ್ತಿರುವುದು ತಪ್ಪು ಎಂಬ ಹುಯಿಲೆದ್ದಿತು. ಆತನನ್ನು ಆಧಾರವಿಲ್ಲದೆ ಹಿಂಸಿಸುತ್ತಿದ್ದೀರ ಎಂದು ಎಲ್ಲರೂ ಬೊಬ್ಬೆ ಹೊಡೆಯುತ್ತಿದ್ದರು. ಆರೋಪಿ ಯಾರೇ ಆಗಿದ್ದರೂ ಒಂದು ಸಮಾಜ ತನ್ನ ಪೊಲೀಸ್ ಪಡೆ ಮತ್ತು ನ್ಯಾಯಾಲಯದ ನಡವಳಿಕೆಯ ಬಗ್ಗೆ ನಿರ್ಲಕ್ಷ್ಯ ತಾಳುವುದು ಅಪಾಯಕಾರಿ. ಅದು ಅಲ್ಲಿ ಕೆಲಸ ಮಾಡುತ್ತಿದ್ದ ಕಾಳಜಿ. ಆದರೆ ಇಂಡಿಯದ ಸಂಘಗಳ ಸಂಯುಕ್ತ ಕೂಟದವರು ಮಾತ್ರ ಆತನನ್ನು ಪೊಲೀಸರು ನಡೆಸಿಕೊಂಡ ಬಗ್ಗೆ ಯಾವುದೇ ಆತಂಕ ತೋರಿಸಲಿಲ್ಲ. ಬದಲಿಗೆ "ರೇಡಿಯೋ, ಟೀವಿ, ಪತ್ರಿಕೆಗಳು ಹನೀಫನನ್ನು ಇಂಡಿಯನ್ ಡಾಕ್ಟರ್ ಎಂದು ಕರೆಯಕೂಡದು" ಎಂದು ಗೊಣಗಿ ಸುಮ್ಮನಾಗಿದ್ದರು.ಅಷ್ಟೆ!
ಪುಟದ ಮೊದಲಿಗೆ
 
Votes:  2     Rating: 5    
 
 
ಸಂಬಂಧಿಸಿದ ಲೇಖನಗಳು
  ಪಟ್ಟಣಪುರಾಣ: ಮಣ್ಣ ಇಟ್ಟಿಗೆ ಕೊಳ್ಳಿರೋ
  ತರೀಕೆರೆ ಏರಿಯಾ: ಬಂಗಾಳದ ಪುಖೂರ್ ಕೆರೆಗಳು
  ಸ್ಟೋನ್ ಹಿಲ್ ಡೈರಿ: ಎಮ್ಮಯ ಹೆಮ್ಮೆಯ ರಾಜಾಮೀಸೆ
  ಮಹಾರಾಷ್ಟ್ರದಲ್ಲೇನಾಗುತ್ತಿದೆ?-ಪ್ರೇಮಶೇಖರ ಕಾಲಂ
  ಕೆ.ಟಿ.ಗಟ್ಟಿ ಬಿಸಿಲುಕೋಲು: ಸಿನ್ಸಿನಾಟಿಯ ಸೌಂದರ್ಯ
  ಕಟ್ಟಿಕೊಳ್ಳುವ ತಲ್ಲಣದಲ್ಲಿ ಹೆಕ್ಕಿ ತೆಗೆದ ಸಾಲುಗಳು
  ಶಂಕರ ಪರ್ವತದಿಂದ ಕಂಡ ಶ್ರೀನಗರ
  ಯೋಗೀಂದ್ರ ಕಾಲಂ- ಹಿಮಪಾತದ ಹೊತ್ತಲ್ಲಿ ಇಂಗ್ಲೆಂಡ್ ಸಮಾಚಾರ
  ಸ್ಟೋನ್ ಹಿಲ್ ಡೈರಿ: ಹೇಳಿ, ನಾನು ಬದುಕಿರುವೆನೇ?
  ಪ್ರೇಮಶೇಖರ ಕಾಲಂ- ನೇಪಾಲವೂ ಮಗ್ಗುಲ ಮುಳ್ಳಾಗುತ್ತಿದೆಯೇ?
  ಸತೀಶ್ ಬರೆಯುವ ಕಾಶ್ಮೀರದ ಚಿತ್ರ-೭
  ಕವಲಕ್ಕಿ ಡೈರಿ - ಹಾವು ಕಡಿತದ ಕಥೆಗಳು
  ವಸ್ತಾರೆ ಕಾಲಂ- ವಾಸ್ತುಶಿಲ್ಪಿಯ ವಾಸ್ತವ ಪುರಾಣ
  ತರೀಕೆರೆ ಏರಿಯಾ-ಮನೆಯ ನೆಮ್ಮದಿ , ಸಂತೆಯ ಸ್ವಾತಂತ್ರ್ಯ
  ಕೆ.ಟಿ. ಗಟ್ಟಿ ಬಿಸಿಲುಕೋಲು: ಯಾವ ದೇಶ ಪ್ರೇಕ್ಷಣೀಯ?
  ನವರಾತ್ರಿ ಕಳೆದು ನರಸಿಂಹದಾಸರ ನೆನಪು
  ಆಸ್ಟ್ರೇಲಿಯಾ ಪತ್ರ: ಸಿಡ್ನಿ ಆಗಸದಲ್ಲಿ ಧೂಳ ಲೀಲೆ
  ಹಲ್ಲಿಯ ತಲೆ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ?
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು-೬
  ‘ಪುಸ್ತಕ ಪ್ರೀತಿ’: ಮಾಧವ ಕುಲಕರ್ಣಿಯವರ ‘ಪಾತಾಳ ಗರಡಿ’
  ವಸ್ತಾರೆ ಕಾಲಂ: ದೈವಕೌಪೀನೇಯಮ್
  ಪುಸ್ತಕ ಪ್ರೀತಿ: ರವೀಂದ್ರನಾಥರ ‘ಮೂರು ಸಾಲು ಮರ’
  ಪೂರ್ವಾಂಚಲ ಪುರಾಣ: ಚಾಂಗ್ ಜನರ ನಡುವೆ
  ಸದ್ದಿಲ್ಲದೆ ಹಾರಾಡುವ ಏರ್ ಬಸ್ ಸುಂದರಿ: ಯೋಗೀಂದ್ರ ಬರಹ
  ಕವಲಕ್ಕಿ ಡಾಕ್ಟರ ಡೈರಿ : ಧನುರ್ವಾಯು ಪುರಾಣ
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು- ೫
  ಸುದರ್ಶನ್ ಕಾಲಂ: ಈಡಾ ಎಂಬ ಪಳೆಯುಳಿಕೆಯ ಹುಡುಗಿ
  ತೀರಿಹೋದ ವೆಸ್‍ಲೀ ಎಂಬ ಪೊಲೀಸ್ ಆಫೀಸರ್: ವಸ್ತಾರೆ ಅಂಕಣ
  ಸ್ಟೋನ್ ಹಿಲ್ ಡೈರಿ:ಇಡ್ಲಿ-ಪ್ರತಿಭೆ, ಪರಂಪರೆಯ ಪಾತ್ರೆ
  ಬಿಸಿಲುಕೋಲು: ಹುಟ್ಟಿದರೆ ಮಗುವಾಗಿ ಇಲ್ಲಿ ಹುಟ್ಟಬೇಕು!
  ಯೋಗೀಂದ್ರ ಕಾಲಂ: ಆಗಸ್ಟ್ ತಿಂಗಳ ಖಾಲಿ ಬೇಸಗೆ ಕಾಲ
  ಡಿ.ಪಿ. ಸತೀಶ್ ಬರೆಯುತ್ತಾರೆ: ಕಾಶ್ಮೀರದ ಪಂಡಿತರ ಕಷ್ಟಸುಖ
  ನೀಲಿ ಬೆಳಕು: ನನ್ನ ಪ್ರೀತಿಯ ಮುಲ್ಲಾ
  ಹಂದಿಜ್ವರದ ಹೊತ್ತಲ್ಲಿ ಮರಣವ್ಯಾಧಿಗಳ ನೆನಪು
  ಬಿಸಿಲುಕೋಲು: ಇದೇನು ಮಸಣವೋ ಇಲ್ಲ ವನರಾಶಿಯೋ...
  ಒಂಭತ್ತನೇ ತರಗತಿಯ ತೊಂಭತ್ತರ ಅಜ್ಜ ಅಯ್ಯೋ ತೀರಿಹೋದರಲ್ಲ...
  ಪುಸ್ತಕ ಪ್ರೀತಿ: ಆನಂದ ಲಕ್ಕೂರು ಕವಿತೆಗಳು
  ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು -೩
  ಪೂರ್ವಾಂಚಲ ಪುರಾಣ: ನಾಗಾ ನದಿಯ ಕೊಳ್ಳದಲ್ಲಿ
  ಬಣ್ಣಗಳ ಹಿಂದಿನ ನಿಜದ ಬಣ್ಣ: ಕೃತಿ ಬರಹ
  ವರ್ಡ್ಸ್ ವರ್ತನ ಸರೋವರದ ಸಿರಿಗನ್ನಡಿಯಲ್ಲಿ
  ತರೀಕೆರೆ ಏರಿಯಾ: ಮುಂದುವರಿದ ನಾಯಿಪುರಾಣ
  ಅಲ್ಲಿಯಗಿಡ ಇಲ್ಲಿ ಹೂಬಿಟ್ಟು ಇಲ್ಲಿನ ಬಳ್ಳಿ ಅಲ್ಲಿ ನೆಟ್ಟು
  ಡಿ ಪಿ ಸತೀಶ್ ಅಂಕಣ: ಮುಂದುವರಿದ ಕಾಶ್ಮೀರದ ಚಿತ್ರಗಳು
  ಕವಲಕ್ಕಿ ಡಾಕ್ಟರ ಡೈರಿ: ಕಾಮ ಪ್ರೇಮ ಕಷ್ಟ ಸುಖ
  ಬಿಸಿಲುಕೋಲು: ಅಮೆರಿಕಾದಲ್ಲಿ ಹೆರುವ ವಹಿವಾಟು
  ಎಸ್ ಮಂಜುನಾಥ್ ಬರೆದ ಅಪ್ಪು ಪೂಜಾರಿಯ ಚಿತ್ರ
  ಪುಸ್ತಕ ಪ್ರೀತಿ: ಮೊಗಳ್ಳಿ ಕವಿತೆಗಳ ‘ದೇವಸ್ಮಶಾನ’
  ವಸ್ತಾರೆ ಕಾಲಂ: ದೈನಂದಿನ ನ್ಯೂಟನುಭ್ರಾಂತುಗಳು
  ತರೀಕೆರೆ ಏರಿಯಾ: ನಾಯಿಪುರಾಣದ ಮೊದಲ ಕಂತು
  ಸ್ಟೋನ್ ಹಿಲ್ ಡೈರಿ: ಹುಲುಸು ಮನುಜನ ಕಟ್ಟುಕಟ್ಟಳೆಗಳು
  ಬಿಸಿಲುಕೋಲು: ಒಂದು ವಿಶ್ವವಿದ್ಯಾನಿಲಯದ ಕುರಿತು
  ಬ್ರಿಸ್ಟಲ್ ಪುರಾಣ: ಬಿಸಿಲು,ಬೀಚ್,ಬಿಯರ್ ಮತ್ತು ಬ್ರಿಟಿಷ್
  ಕವಲಕ್ಕಿ ದಿನಚರಿ: ಕೆಲವು ಬಸಿರ ಸಂಗತಿಗಳು
  ಪೂರ್ವಾಂಚಲ ಪುರಾಣ: ಮಿಥುನಗಳ ಹಳ್ಳಿಯಲ್ಲಿ