ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ: ಕಲಿಯಲು ಬಂದವರ ಮೇಲೆ ಹಲ್ಲೆ    
ಸುದರ್ಶನ್
ಶನಿವಾರ, 30 ಮೇ 2009 (08:18 IST)
ಹಲ್ಲೆಯ ವಿರುದ್ಧ ಪ್ರತಿಭಟನೆ
ಹೋದ ವರ್ಷದಿಂದ ಮೆಲ್ಬರ್ನಿನಲ್ಲಿ ಇಂಡಿಯದ ವಿದ್ಯಾರ್ಥಿಗಳ ಮೇಲೆ ಹೆಚ್ಚುತ್ತಿರುವ ಹಲ್ಲೆಗಳು ಸುದ್ದಿ ಮಾಡಿದೆ. ಇಂಡಿಯದಿಂದ ಬಂದು ಓದುತ್ತಿರುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಹೆಚ್ಚಾಗುತ್ತಿರುವ ಹೊತ್ತಲ್ಲಿ ಇದು ಎಲ್ಲರ ತಲೆ ಕೆಡಿಸಿದೆ. ಇಂಡಿಯನ್ ವಿದ್ಯಾರ್ಥಿ ಸಂಘಗಳಿಂದ ಹಿಡಿದು ಯೂನಿವರ್ಸಿಟಿ, ಮೆಲ್ಬರ್ನಿನ ಪೊಲೀಸ್, ರಾಜ್ಯ ಸರ್ಕಾರ ಸೇರಿದಂತೆ ಆಸ್ಟ್ರೇಲಿಯದ ಸರ್ಕಾರದವರೆಗೆ ಎಲ್ಲರೂ ಇದರ ಬಗ್ಗೆ ಮಾತಾಡಿದ್ದಾರೆ. ತಮ ತಮಗೆ ಕಂಡಂತೆ, ಸರಿ ಹೊಂದುವಂತೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ.

ಅಂಕಿ-ಅಂಶಗಳ ಪ್ರಕಾರ ಇಂಡಿಯದ ವಿದ್ಯಾರ್ಥಿಗಳ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿರುವುದು ದಿಟ. ಆದರೆ ಅದು ಜನಾಂಗೀಯ ಹಲ್ಲೆ ಎಂದು ಹೇಳಲಾಗದು ಎಂದು ಹೇಳುತ್ತಲೇ ಪೊಲೀಸರು ಇಂಡಿಯ ರೆಫೆರನ್ಸ್ ಗ್ರೂಪ್ ಎಂಬುದನ್ನು ರಚಿಸಿದರು. ಅದರಲ್ಲಿ ಇಂಡಿಯನ್ ಸಮುದಾಯದ ಮುಖಂಡರನ್ನು ಒಟ್ಟುಗೂಡಿಸಿ ಅವರೊಡನೆ ಚರ್ಚಿಸಿದರು. ಇದರಿಂದ ಪೊಲೀಸರು ಹೊಸದೇನಾದರೂ ಕಲಿಯುವಂತಾದರೆ ಒಳ್ಳೆಯದಾಗುವುದೇನೋ ಹೌದು. ಆದರೆ ಇಂಡಿಯನ್ ಸಮುದಾಯದ ಜತೆ ನಡೆದ ಸಂಗತಿಯೇ ಬೇರೆ.

ಆ ರೆಫೆರನ್ಸ್ ಗುಂಪಿನೊಡನೆ ನಡೆದ ಸಂವಾದದ ನಂತರ ಪೋಲೀಸರು ಹೇಳಿದ ಮಾತುಗಳು ನಗೆಪಾಟಲಾಗಿದ್ದವು. "ಇಂಡಿಯದ ವಿದ್ಯಾರ್ಥಿಗಳು ಟ್ರೈನು ಬಸ್ಸುಗಳಲ್ಲಿ ತಮ್ಮ ಭಾಷೆಯಲ್ಲಿ ಜೋರಾಗಿ ಮಾತಾಡ ಕೂಡದು, ಐಪಾಡ್, ಲ್ಯಾಪ್‌ಟಾಪ್‌, ಮೊಬೈಲಿನಂತಹ "ಶ್ರೀಮಂತ ಸರಕು"ಗಳನ್ನು ತೋರಿಸಿಕೊಂಡು ಓಡಾಡದಿದ್ದರೆ ಒಳ್ಳೆಯದು" ಹೀಗಲ್ಲಾ ಮಾತುಗಳನ್ನು ಆಡಿದರು. ಹಲ್ಲೆಗೊಳಗಾದವರ ನಡತೆಯನ್ನೇ ತಿದ್ದುವ ಪೊಲೀಸರ ಮಾತುಗಳನ್ನು ಪತ್ರಿಕೆಗಳು ಎತ್ತಾಡಿ ಇದೆಂತಹ ಹುಚ್ಚು ಎಂದು ಗೇಲಿ ಮಾಡಿದರು. ಈ ಮಾತುಗಳನ್ನು ಕಾಕೇಷಿಯನ್ ಮಂದಿಗಾಗಲಿ ಇನ್ನಾವುದೇ ಸಮುದಾಯದ ಮಂದಿಗಾಗಲಿ ಹೇಳಿದ್ದರೆ ದೊಡ್ಡ ರಾದ್ಧಾಂತವಾಗುತ್ತಿತ್ತೇನೋ. ಆಸ್ಟ್ರೇಲಿಯದಲ್ಲಿ ಹಲ್ಲೆಗೆ ಒಳಗಾದವರನ್ನೇ ತಿದ್ದಲು ಹೊರಡುವುದು ಒಂದು ಹಳೆಯ ಖಯಾಲಿ. ಅದನ್ನು ಹೊಸ ಹೊಸ ಹೆಸರಲ್ಲಿ, ಹೊಸ ಹೊಸ ರೂಪದಲ್ಲಿ ಮಾಡುತ್ತಲೇ ಇದ್ದಾರೆ. ಅಬಾರಿಜಿನಿಗಳ ಸಮುದಾಯದಿಂದ ಹಿಡಿದು ವಲಸೆ ಬರುತ್ತಿರುವ ಎಲ್ಲ ಸಮುದಾಯಗಳೊಂದಿಗೂ ಇದನ್ನು ಮಾಡಿದ್ದಾರೆ. ಈ ಹೊಸ ಪ್ರಯತ್ನ ಪಡೆಯುತ್ತಿರುವ ರೂಪ ನೋಡಿ ದಡಬಡಿಸಿದ ಪೊಲೀಸರು ತಟ್ಟನೆ ಇದು ಇಂಡಿಯನ್ ಸಮುದಾಯದ ಮುಖಂಡರ ಅಭಿಪ್ರಾಯವೇ ಹೊರತು ತಮ್ಮದಲ್ಲ ಎಂದು ಹೇಳಿಬಿಟ್ಟರು. ಇದು ಹೌದಾದರೆ, ಆ ಸಮುದಾಯದ ಮುಖಂಡರು ಇನ್ನೆಂತವರು ಇರಬಹುದು ಎಂದು ಬಿಡಿಸಿ ಹೇಳಬೇಕಾಗಿಲ್ಲ.

ಇಂಡಿಯದ ಪತ್ರಿಕೆಗಳಲ್ಲಿ ಇದರ ಬಗ್ಗೆ ಸುದ್ದಿ ಬರತೊಡಗಿದ್ದು ಯೂನಿವರ್ಸಿಟಿಗೆ ಹಾಗು ಸರ್ಕಾರಕ್ಕೆ ಮತ್ತೂ ಪೀಕಲಾಟಕ್ಕೆ ಇಟ್ಟುಕೊಂಡಿತು. ತಾವು ಕೈಗೊಂಡ ಕೆಲಸ ಹಾಗು ಮಾಡಿರುವ ಬದಲಾವಣೆಗಳ ಬಗ್ಗೆ ಒತ್ತಿ ಒತ್ತಿ ಹೇಳಲಾರಂಭಿಸಿದರು. ಇದೆಲ್ಲಾ ಮಾತುಕತೆ ನಡೆದಿರುವಾಗ ಅಲ್ಲಲ್ಲಿ ಹಲ್ಲೆಗಳು ನಡೆದೇ ಇತ್ತು. ಈ ವಾರವಷ್ಟೇ ಟ್ರೈನಿನಲ್ಲಿ ಇಂಡಿಯದ ಹುಡುಗನೊಬ್ಬನ ಹತ್ತಿರ ಸಿಗರೇಟು ಕೇಳಿ, ಅವನು ಇಲ್ಲ ಎಂದಾಗ ನಾಕಾರು ಪುಂಡರು ಅವನಿಗೆ ಹೊಡೆದಿದ್ದಾರೆ. ಹೊಡಿಸಿಕೊಂಡ ಹುಡುಗನ ಪ್ರಕಾರ ಎಷ್ಟೇ ಬೇಡಿಕೊಂಡರೂ ಸುತ್ತಮುತ್ತಲಿದ್ದ ಯಾರೂ ಸಹಾಯಕ್ಕೆ ಬರಲಿಲ್ಲವಂತೆ. ಪುಂಡರು ಓಡಿ ಹೋದ ಮೇಲೆ ಇವನನ್ನು ಆಸ್ಪತ್ರೆಗೆ ಕರೆದೊಯ್ದರು. ಈತನೇನೋ ಪೊಲೀಸರಿಗೆ ದೂರಿತ್ತ. ಹಲವರು ತಮ್ಮ ವೀಸಾಕ್ಕೆ ತೊಂದರೆ ಆದೀತು ಎಂದು ಅದೂ ಮಾಡುವುದಿಲ್ಲ. ಪೊಲೀಸರ ಕೆಲಸ ಮತ್ತಷ್ಟು ಕಠಿಣವಾಗುತ್ತಾ ಹೋಗುತ್ತದೆ.

ಒಂದು ಮುಕ್ತ ಸಮಾಜದಲ್ಲಿ ಯಾರಾದರೂ ಎಷ್ಟು ಹೊತ್ತಿಗಾದರೂ ದಿಗಿಲಿಲ್ಲದೆ ಓಡಾಡುವಂತಿರಬೇಕು. ಹಾಗೆಂದ ಮಾತ್ರಕ್ಕೆ ಕೆಡುಕುಗಳು ಇರುವುದೇ ಇಲ್ಲ ಎಂದಲ್ಲ. ಆದರೆ ಅದರ ಭಯದಲ್ಲೇ ಓಡಾಡುವಂತಿರಬಾರದು ಅಷ್ಟೆ. ಈ ಇಂಡಿಯನ್ ವಿದ್ಯಾರ್ಥಿಗಳ ಸಂದರ್ಭದಲ್ಲಿ, ಓದಲು ಬಂದವರು ಪಾರ್ಟ್‌-ಟೈಮ್ ಕೆಲಸ ಮಾಡಿಕೊಂಡಿರುವುದು ಸರ್ವೇ ಸಾಮಾನ್ಯ. ಹಗಲು ಕಾಲೇಜಿಗೆ ಹೋಗುವುದರಿಂದ, ಕೆಲಸಗಳು ಕಡಿಮೆಯಾಗುತ್ತಿರುವುದರಿಂದ ಇರುಳು ಕೆಲಸಗಳಿಗೆ ಹೋಗುವುದೂ ಸಾಮಾನ್ಯ. ಅಂತಹವರು ಯಾವ ಸಮುದಾಯದವರೇ ಆಗಿರಲಿ, ಅವರ ರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕಾದ ಪೊಲೀಸರು ಅದನ್ನು ಬಿಟ್ಟು ಸಮುದಾಯದ ಜತೆ ಸಂವಾದ ಎಂದೆಲ್ಲಾ ಹೊತ್ತು ಸವಲತ್ತು ದಂಡ ಮಾಡುತ್ತಿರುವುದು ನಾಟಕವಾಗಿಯೇ ಕಾಣುತ್ತದೆ.

ರೈಲಿನಲ್ಲಿ ಹಲ್ಲೆಗೆ ಒಳಗಾದ ವಿಧ್ಯಾರ್ಥಿ ಸೌರಭ್ ಶರ್ಮಫ್ಯೂಡಲ್ ಮನಸ್ಥಿತಿಯಿಂದ ಈ ನಮ್ಮ ಮುಖಂಡರು ಇನ್ನೂ ಹೊರಬಂದೇ ಇಲ್ಲವೇನೋ ಅನಿಸುತ್ತದೆ. ನಮ್ಮ ಸಮುದಾಯದ ಹುಡುಗರು ತಮ್ಮ ನುಡಿಯಲ್ಲಿ ಜೋರಾಗಿ ಮಾತಾಡಬಾರದು, ತಗ್ಗಿಬಗ್ಗಿ ನಡೆಯಬೇಕು ಎಂದು ಹೇಳುವುದು ಮುಜುಗರ ಹುಟ್ಟಿಸುವ ಸಂಗತಿಯಲ್ಲವೆ? ಆಸ್ಟ್ರೇಲಿಯಕ್ಕೆ ಬಂದು ನೆಲೆಸಿರುವವರು ಎರಡನೇ ದರ್ಜೆಯ ಪ್ರಜೆಗಳಂತೆ ನಡೆದುಕೊಳ್ಳಬೇಕೆ? ಅವರ ಮಾತುಗಳು "ಗೌಡರ ಮುಂದೆ ತಗ್ಗಿ ಬಗ್ಗಿ ನಡಿ, ಎದೆ ನಿಮಿರಿಸಿ ನಡೆಯಬೇಡ" ಎಂದು ದಾಸ್ಯವನ್ನು ಉಪದೇಶಿಸುವಂತಿದೆ. ಆ ಮಾತುಗಳ ಮೂಲಕ ನಮ್ಮ ಈ ಮುಖಂಡರು ತಮ್ಮ ನೈತಿಕ ದಿವಾಳಿತನವನ್ನು ಮತ್ತೆ ಬಯಲು ಮಾಡಿಕೊಂಡಿದ್ದಾರೆ. ನಮ್ಮ ಹುಡುಗರನ್ನು ಕಾಪಾಡುವುದು ಪೊಲೀಸರ ಕೆಲಸ. ಅದನ್ನು ಅವರು ಪೂರೈಸಿಲ್ಲ. ಅದು ಪೊಲೀಸರ ಜವಾಬ್ದಾರಿ ಎಂದು ಹೇಳುವ ಎದೆಗಾರಿಕೆ ತೋರಿಸಿಲ್ಲ.

ಈ ಹಿಂದೆ ಭಯೋತ್ಪಾದಕ ಎಂದು ಆಪಾದಿತನಾದ ಡಾ. ಹನೀಫ್‌ನ ವಿಷಯದಲ್ಲೂ ಹೀಗೆಯೇ ಆಗಿತ್ತು. ಆಸ್ಟ್ರೇಲಿಯಾದ ಅಗಲಕ್ಕೂ ಆತನೊಡನೆ ಪೊಲೀಸರು ಮಾಡುತ್ತಿರುವುದು ತಪ್ಪು ಎಂಬ ಹುಯಿಲೆದ್ದಿತು. ಆತನನ್ನು ಆಧಾರವಿಲ್ಲದೆ ಹಿಂಸಿಸುತ್ತಿದ್ದೀರ ಎಂದು ಎಲ್ಲರೂ ಬೊಬ್ಬೆ ಹೊಡೆಯುತ್ತಿದ್ದರು. ಆರೋಪಿ ಯಾರೇ ಆಗಿದ್ದರೂ ಒಂದು ಸಮಾಜ ತನ್ನ ಪೊಲೀಸ್ ಪಡೆ ಮತ್ತು ನ್ಯಾಯಾಲಯದ ನಡವಳಿಕೆಯ ಬಗ್ಗೆ ನಿರ್ಲಕ್ಷ್ಯ ತಾಳುವುದು ಅಪಾಯಕಾರಿ. ಅದು ಅಲ್ಲಿ ಕೆಲಸ ಮಾಡುತ್ತಿದ್ದ ಕಾಳಜಿ. ಆದರೆ ಇಂಡಿಯದ ಸಂಘಗಳ ಸಂಯುಕ್ತ ಕೂಟದವರು ಮಾತ್ರ ಆತನನ್ನು ಪೊಲೀಸರು ನಡೆಸಿಕೊಂಡ ಬಗ್ಗೆ ಯಾವುದೇ ಆತಂಕ ತೋರಿಸಲಿಲ್ಲ. ಬದಲಿಗೆ "ರೇಡಿಯೋ, ಟೀವಿ, ಪತ್ರಿಕೆಗಳು ಹನೀಫನನ್ನು ಇಂಡಿಯನ್ ಡಾಕ್ಟರ್ ಎಂದು ಕರೆಯಕೂಡದು" ಎಂದು ಗೊಣಗಿ ಸುಮ್ಮನಾಗಿದ್ದರು.ಅಷ್ಟೆ!
ಪುಟದ ಮೊದಲಿಗೆ
 
Votes:  0     Rating: 0    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು