ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಮಾಧವಿಕುಟ್ಟಿಯ ಬಾಲ್ಯದ ನೆನಪುಗಳು    
ನಾ.ದಾಮೋದರ ಶೆಟ್ಟಿ.
ಮಂಗಳವಾರ, 2 ಜೂನ್ 2009 (01:26 IST)
ಕಮಲಾದಾಸರ ‘ಬಾಲ್ಯದ ನೆನಪುಗಳು’
ಭಾರತೀಯ ಕಾದಂಬರಿ ಸಾಹಿತ್ಯದ ಇತಿಹಾಸದಲ್ಲಿ ಕಮಲಾದಾಸ್ ಯಾನೆ ಮಾಧವಿ ಕುಟ್ಟಿ ಯಾನೆ ಕಮಲಾ ಸುರಯ್ಯಾ ಒಂದು ಅವಿಸ್ಮರಣೀಯ ಹೆಸರು. ತನ್ನ ಬದುಕನ್ನು ಆಧಾರವಾಗಿಟ್ಟುಕೊಂಡು ಕಥೆ, ಕವನ, ಕಾದಂಬರಿಗಳನ್ನು ಈ ಮಟ್ಟಿಗೆ ಸತ್ಯಕ್ಕೆ ಹತ್ತಿರವಾಗಿ, ಆದರೆ ಆತ್ಮಕಥೆ ಎಂಬುದಾಗಿ ಹೇಳಲಾಗದ ರೀತಿಯಲ್ಲಿ, ಕಾದಂಬರಿಯೆಂದು ಪೂರ್ಣಪ್ರಮಾಣದಲ್ಲಿ ಒಪ್ಪಿಕೊಳ್ಳಲಾಗದ ರೀತಿಯಲ್ಲಿ ಕೃತಿ ರಚನೆ ಮಾಡುತ್ತ -ಇದೀಗ ದೂರಕ್ಕೆ- ಸಾಗಿದವರು.

ತನ್ನ ಕಥೆಯಾಗಲಿ, ಬಾಲ್ಯದ ನೆನಪುಗಳಾಗಲಿ ಶಿರೋನಾಮೆಯ ಮೂಲಕ ಅವು ಯಾವ ಸಾಲಿಗೆ ಸೇರಬಹುದೆಂದು ಅರಿಯಬಹುದಾದರೂ ಅವು ಪ್ರಕಟಪಡಿಸುವ ಶೈಲಿ ಕಾದಂಬರಿಯದ್ದು.
‘ಬಾಲ್ಯದ ನೆನಪುಗಳು’ ಕೃತಿಯಲ್ಲಿ ಕೃತಿಕಾರ್ತಿ ತನ್ನ ಬಾಲ್ಯದಲ್ಲಿ ಘಟಿಸಿಹೋದ ಅನೇಕ ಚದುರಿದ ಚಿತ್ರಗಳನ್ನು ಒಂದೆಡೆ ಶಿಸ್ತಾಗಿ ಪೋಣಿಸಿ ಕೊಡುವ ಪ್ರಯತ್ನ ಮಾಡುತ್ತಾರೆ. ಶಾಲಾದಿನಗಳು ಕೊಲ್ಕತ್ತಾದಲ್ಲಿ ಕಳೆದುದರಿಂದ ನಗರ ಸಂಸ್ಕೃತಿಯ ಅಂಶಗಳೂ, ಕೂಸಾಗಿದ್ದಾಗ ಅಥವಾ ರಜಾ ದಿವಸಗಳಲ್ಲಿ ತಾಯಿಯ ಮನೆಯಲ್ಲಿ ಸಾಕಷ್ಟು ಕಾಲ ಕಳೆದದ್ದರಿಂದ ಹಳ್ಳಿಯ ಸಂಸ್ಕೃತಿಯೂ ಇದರಲ್ಲಿ ಮಿಳತಗೊಳ್ಳುವುದು ಸಾಧ್ಯವಾಗಿದೆ.

ಮುಖ್ಯವಾಗಿ ಎರಡು ಮನೆತನಗಳನ್ನು ಆಧಾರವಾಗಿಟ್ಟುಕೊಂಡು ನಾಡ ಘಟನೆಗಳನ್ನು ಹೆಣೆಯಲಾಗಿದೆ. ಒಂದು ಕಮಲಾ ದಾಸ್ ಹುಟ್ಟಿದ ನಾಲಪ್ಪಾಟ್ಟ್ ಮನೆತನ. ಇನ್ನೊಂದು, ತಾನು ಆಮೇಲೆ ಮದುವೆಯಾಗಿ ಹೋಗಿ ಸೇರಿದ ಅಂಬಾಳತ್ತ್ ಮನೆತನ. ಎರಡೂ ಅಕ್ಕಪಕ್ಕದಲ್ಲೇ ಇದ್ದುದರಿಂದ ಕಮಲಾದಾಸ್ ಅವರೆಲ್ಲರ ಮಧ್ಯದಲ್ಲಿಯೇ ಬೆಳೆದರು.

ಕಮಲಾದಾಸ್ ಘಟನೆಗಳನ್ನು ಪೋಣಿಸುವ ರೀತಿನಿಮಿತ್ತವಾಗಿ ಎಲ್ಲೂ ಓದುಗರಿದೇ ಆಯಾಸವೆನ್ನಿಸುವುದಿಲ್ಲ. ಸರಳ, ನೇರ ಅವರ ಬರವಣಿಗೆಯ ರೀತಿ. ಚಿಕ್ಕವಳಿದ್ದಾಗ ಅವರ ಮನೆಗೆ ಬಳೆ ಮಾರಿಕೊಂಡು ಬರುತ್ತಿದ್ದಾತ ಬಗೆಬಗೆಯ ಬಳೆಗಳಿಂದ ಆಕೆಯನ್ನು ಸಿಂಗರಿಸುತ್ತಿದ್ದುದು, ಓಟ್ಟಂತುಳ್ಳಲ್ ಪ್ರದರ್ಶಿಸಲೆಂದು ಬಂದಾತ ಆಕೆಯ ಕೈಯಿಂದಲೇ ಒಂದು ಬಳೆಯನ್ನು ನೆನಪಿಗೆ ಎಂದು ಬಿಡಿಸಿ ತೆಗೆದುಕೊಂಡದ್ದು, ಆ ವಿಚಿತ್ರ ವರ್ತನೆಯ ಕುರಿತು ಮನೆಯ ವಾತಾವರಣ ಕಲುಷಿತಗೊಂಡದ್ದು, ಆಕೆಯ ಹಲ್ಲು ತೆಗೆಯುವ ಪ್ರಸಂಗ ಮತ್ತು ಅದರ ಹಿನ್ನೆಲೆಯ ಮೂಢನಂಬಿಕೆ ಕುರಿತಾದ ಚರ್ಚೆ, ಕೊರವಂಜಿ ಬಂದಾಗಿನ ಆಕೆಯ ಕುತೂಹಲ, ಕೊರವಂಜಿಯ ಬದುಕಿನ ಝಲಕು- ಇಂತಹ ಅನೇಕ ಘಟನೆಗಳ ಜೊತೆಗೆ ಬದುಕು ಸಾಗುವ ವಿಧಾನವನ್ನು ಕಮಲಾ ದಾಸ್ ಕುತೂಹಲಕ್ಕೆ ಚ್ಯುತಿ ಬರದ ಹಾಗೆ ವಿಶದಪಡಿಸುತ್ತಾರೆ.
 
ಕಮಲಾದಾಸ್ಮಕ್ಕಳು ಆಡುತ್ತಿದ್ದ ರಾತ್ರಿಪೆಟ್ಟು ಎಂಬ ಹೆಸರಿನ ಆಟ. ಕತ್ತಲಾದ ಮೇಲೆ ಮಕ್ಕಳೆಲ್ಲ ಬೇರೆಬೇರೆ ಕಡೆಗಳಲ್ಲಿ ಅಡಗಿಕುಳಿತು ತಾನು ಸಿಕ್ಕಿಬೀಳದಂತೆ ಎಚ್ಚರವಹಿಸುತ್ತ ಇನ್ನೊಬ್ಬನಿಗೆ ಏಟು ಕೊಡುವುದು, ಚಿಮುಟುವುದು ಇತ್ಯಾದಿ. ಮಕ್ಕಳೆಲ್ಲ ಸೇರಿ ಹೊನ್ನೆಕಾಯಿಯಲ್ಲಿ ಸೆಂಟ್ ತಯಾರಿಸಿದ್ದಂತೂ ಬಹುರೋಚಕ ಘಟನೆ. ಕಮಲಾದಾಸ್ ಚಿಕ್ಕವಳಿದ್ದಾಗ ಪ್ರಶ್ನೆಗಳ ಸುರಿಮಳೆ ಮೂಲಕ ಮನೆಮಂದಿಯನ್ನು ತಬ್ಬಿಬ್ಬುಗೊಳಿಸುವ ಹಲವಾರು ಘಟನೆಗಳು ಅಲ್ಲಲ್ಲಿ ಎಡತಾಕುತ್ತವೆ.

ಇದು ಒಂದು ಮಗ್ಗುಲಾದರೆ ಕೊಲ್ಕತ್ತಾದಲ್ಲಿನ ಆಕೆಯ ಬದುಕು ಅನೇಕ ಸಿಕ್ಕುಗಳಿಂದ ಕೂಡಿದ್ದುದಾಗಿ ಚಿತ್ರಿತವಾಗಿದೆ. ಆರು ಕೋಣೆಯ ಕೊಲ್ಕತ್ತಾದ ಮನೆ. ಕೆಲಸದವರೇ ಎಲ್ಲದಕ್ಕೂ. ಆ ಕೆಲಸದವರ ಪ್ರಣಯ, ತನ್ನ ಎತ್ತರದ ಕೊಠಡಿಯಿಂದ ರಸ್ತೆ ನೋಡುತ್ತಿದ್ದ ಹುಡುಗಿ ಕಮಲಾಳನ್ನು ನಿತ್ಯವೂ ನೋಡುತ್ತಿದ್ದ ಕಾಷಾಯ ವಸ್ತ್ರಧಾರಿಯೊಬ್ಬ ಅಲ್ಲಿಂದಲೇ ಮಾಡಿ ತೋರಿಸುತ್ತಿದ್ದ ಕೆಲವು ಆಂಗಿಕ ಚೇಷ್ಟೆಗಳು, ಅದನ್ನು ಕಂಡ ಕೆಲಸದಾಕೆ ತಬ್ಬಿಬ್ಬಾಗಾಗುವುದು, ಹಳ್ಳಿಯಿಂದ ನಗರಕ್ಕೆ ಬಂದ ಅದೆಷ್ಟೋ ಮಂದಿ ಬದುಕು ನಿಭಾಯಿಸಲು ಹೆಣಗುವುದು, ಕಮಲಾದಾಸರ ತಂದೆಯ ಮರ್ಜಿ, ತಂದೆಗೆ ಹೆದರಿ ಬದುಕು ನಿಭಾಯಿಸುವ ಪರಿ- ಇತ್ಯಾದಿಗಳನ್ನು ಹೂವಿನಂತೆ ಆರಳಿಸುವ ಪರಿ ಚೇತೋಹಾರಿಯಾಗಿದೆ.

‘ಬಾಲ್ಯಕಾಲ ಸ್ಮರಣಗಳ್’ ಎಂಬ ಮಲಯಾಳ ಹೆಸರುಳ್ಳ ಈ ಕೃತಿಯನ್ನು ನ್ಯಾಷನಲ್ ಬುಕ್ ಟ್ರಸ್ಟ್ ‘ಬಾಲ್ಯದ ನೆನಪುಗಳು’ ಎಂಬ ಹೆಸರಿತ್ತು ಕನ್ನಡದಲ್ಲಿ ಪ್ರಕಟಿಸಿದೆ. ಕಮಲಾ ಸುರಯ್ಯಾ ಎಂಬ ಹೆಸರು ಬಂದ ಹೊಸತರಲ್ಲಿ ಈ ಕನ್ನಡಾನುವಾದ ಮುದ್ರಣಗೊಂಡುದೊಂದು ಕಾಕತಾಳೀಯ ವಿಚಾರ.
ಪುಟದ ಮೊದಲಿಗೆ
 
Votes:  3     Rating: 1.33    
 
 
ಸಂಬಂಧಿಸಿದ ಲೇಖನಗಳು
  ಸಹ್ಯಾದ್ರಿ ನಾಗರಾಜ್ ಬರೆದ ದಿನದ ಕವಿತೆ
  ಕೃಷ್ಣ ಜನ್ಮಾಷ್ಟಮಿಗೆ ಹೇಮಾ ಕವಿತೆಗಳು
  ಸಂಧ್ಯಾ ಬರೆದ ದಿನದ ಕವಿತೆ
  ಪ್ರಾಚೀ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ವೈದೇಹಿ `ಸೂರ್ಯ ಸಾಂಗತ್ಯ'
  ಬೊಳುವಾರು ಗಾಂಧಿ ಕತೆಗೆ ಕೇಂದ್ರ ಸಾಹಿತ್ಯ ಸಮ್ಮಾನ
  ನಾ.ಡಿಸೋಜಾ ಬರೆದ ಒಂದು ‘ಲೈನ್’ ಪ್ರಕರಣ
  ಅರವಿಂದ ಬರೆದ ದಿನದ ಕವಿತೆ
  ವಿವೇಕ ಶಾನಭಾಗ ಕಂಡ ಜಯಂತ ಕಾಯ್ಕಿಣಿ `ಸ್ವಪ್ನದೋಷ'
  ಜಯಂತ ಕಾಯ್ಕಿಣಿ ಕತೆ `ಸ್ವಪ್ನ ದೋಷ'
  ಕೃತಿಯೂ, ಕರ್ತಾರನ ಪೂರ್ವಗ್ರಹಗಳೂ
  ನಾಗಶ್ರೀ ಶ್ರೀರಕ್ಷ ಬರೆದ ದಿನದ ಕವಿತೆ
  ಬೆಡ್ ರೂಮಿಂದ ಈಚೆಗ ಬರದ ಭೈರಪ್ಪನವರ ಕವಲು
  ಸರ್ಜಾಶಂಕರ್ ಬರೆದ ಹರಳಿಮಠ ಪುರಾಣ
  ಭೈರಪ್ಪ ಎಂದರೆ ಏಕೆ ಕನಲುವಿರಿ?:ಸುಪ್ರೀತ್ ಬರಹ
  ರವಿಪ್ರಕಾಶ್ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ರಾಜೀವ್ ನಾಯಕರ ಕತೆ `ಎಸ್ಸೆಮ್ಮೆಸ್'
  ವಿಜಯಕಾಂತ ಪಾಟೀಲರ ಎರಡು ಕವಿತೆಗಳು
  ಸುಧೀರ್ ಕಾರ್ಕಳ ಬರೆದ ಬಿಯರ್ ಕವಿತೆ
  ಕನ್ನಂಬಾಡಿ ಶಿವಶಂಕರ್ ಕವಿತೆಗಳು
  ಎಸ್.ಬಿ.ಜೋಗುರ ಕತೆ `ಮತ್ಸ್ಯ ವೃತ್ತಾಂತ'
  ವೈಶಾಲಿ ಹೆಗಡೆ ಬರೆದ ನಾಲ್ಕು ಚುಟುಕುಗಳು
  ರಶೀದ್ ಅನುವಾದಿಸಿದ ಒಂದು ಫ್ರೆಂಚ್ ಕವಿತೆ
  ಭಾನುವಾರದ ವಿಶೇಷ: ನಾ. ಡಿಸೋಜ ಕತೆ `ಮೂರು ಕೈ'
  ಹೊನ್ನವಳ್ಳಿ ಆರ್. ದಿಲೀಪ ಬರೆದ ಹತ್ತು ಹೊಳಹು
  ವೈಶಾಲಿ ಕನ್ನಡದಲ್ಲಿ ರಿಲ್ಕ್ ಮತ್ತು ಝೆನ್
  ‘ಹೊಸತೇನೂ ಹೇಳದ ಭೈರಪ್ಪನವರ ‘ಕವಲು’
  ರಜನಿ ಭಟ್ ಕತೆ `ಮಾರಪ್ಪನು ಹಾಗು ಸೋಡಾ ಕುಪ್ಪಿಯೂ..'
  ಎನ್.ಶಂಕರ್ ಬರೆದ ದಿನದ ಕವಿತೆ
  ತಿರುಮಲೇಶ್ ಕನ್ನಡಿಸಿದ ಎಜ್ರಾ ಪೌಂಡ್ ಕವಿತೆಗಳು
  ನನ್ನ ಗೆಳೆಯ ವೆಂಕಟ್, ನನ್ನ ಗಂಡ ವೆಂಕಟ್
  ವೆಂಕಟ್ ಮೋಂಟಡ್ಕ ಬರೆದ ಅಪೂರ್ಣ ಕಥೆ
  ದಿವ್ಯಪ್ರಕಾಶ್ ಬರೆದ ದಿನದ ಕವಿತೆ
  ವಿನಾಯಕ ಭಟ್ ತದ್ದಲಸೆ ಬರೆದ ದಿನದ ಕವಿತೆ
  ರಾಘವೇಂದ್ರ ಹೆಗಡೆ ಬರೆದ ದಿನದ ಕವಿತೆ
  ನಾಗರಾಜ ವಸ್ತಾರೆ ಬರೆದ ನಾಲ್ಕು ಕವಿತೆಗಳು
  ವೈಶಾಲಿ ಹೆಗಡೆ ಕತೆ `ಬೋಳುಮರಕ್ಕೊಂದು ಬಾನು'
  ರೇವನ್ ಜೇವೂರ್ ಬರೆದ ಹನಿಗವಿತೆಗಳು
  ಹರ್ಷಾದ್ ವರ್ಕಾಡಿ ಬರೆದ ದಿನದ ಕವಿತೆ
  ಆನಂದ ಈ.ಕುಂಚನೂರ ಬರೆದ ದಿನದ ಕವಿತೆ
  ಬಾಗೇಶ್ರೀ ಅನುವಾದಿಸಿದ ಬಿಲ್ಕಿಸ್ ಕವಿತೆ
  ವಿಶ್ವ ಶರ್ಮ ಬರೆದ ದಿನದ ಕವಿತೆ
  ಭಾಗೀರಥಿ ಹೆಗಡೆ ಬರೆದ ಕತೆ `ವಂದೇ ಮಾತರಂ'
  ಪದ್ಮನಾಭ ಭಟ್ ಶೇವ್ಕಾರ್ ಬರೆದ ಒಂದಿಷ್ಟು ಕವಿತೆಗಳು
  ರಮೇಶ್ ಸೋಗೆಮನೆ ಬರೆದ ದಿನದ ಕವಿತೆ
  ಎಸ್.ಕುಮಾರ್ ಅನುವಾದಿಸಿದ ಕ್ಯೂಬನ್ ಕವಿತೆ
  ಅನು ಪಾವಂಜೆ ಬರೆದ ದಿನದ ಕವಿತೆ
  ಕವಿ ಮತ್ತು ಕುಣಿಕೆದಾರನ ಯುಗದ ಕುಂದೇರಾ
  ಡಿ.ಎಸ್.ರಾಮಸ್ವಾಮಿ ಬರೆದ ದಿನದ ಕವಿತೆ
  ಬಸವಣ್ಣೆಪ್ಪ ಕಂಬಾರ ಬರೆದ ದಿನದ ಕವಿತೆ
  ಲಕ್ಷ್ಮಿ ಟಿ.ಎನ್. ಬರೆದ ದಿನದ ಕವಿತೆ
  ‘ಮಾಸ್ತಿ’ ಹುಟ್ಟು ಹಬ್ಬಕ್ಕೆ ನಿಸಾರ್ ಬರೆದ ಕವಿತೆ
  ಕಲಿಗಣನಾಥ ಗುಡದೂರು ಬರೆದ ಕತೆ `ಗಾಂಧಿಕಟ್ಟೆ'
  ನಾಗಶ್ರೀ ಶ್ರೀರಕ್ಷ ಬರೆದ ದಿನದ ಕವಿತೆ
  ನಾಗರಾಜ ವಸ್ತಾರೆ ಬರೆದ ಎರಡು ಕವಿತೆಗಳು