ಫೆಬ್ರವರಿ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ: ಚಳಿ ಕತ್ತಲು ಮತ್ತು ನೀಚತನ    
ಸುದರ್ಶನ್
ಶುಕ್ರವಾರ, 12 ಜೂನ್ 2009 (05:00 IST)
ಸಿಡ್ನಿಯನ್ನು ಇಬ್ಭಾಗಿಸಿ ಹರಿಯುವ ‘ಪ್ಯಾರಾಮಟ’

"ಮರೆತೇ ಬಿಟ್ಟಿದ್ದೆ! ಚಳಿಗಾಲ ಶುರುವಾಗಿ ಆಗಲೇ ಹತ್ತು ದಿನವಾಗಿದೆಯಲ್ಲ, ಅಯ್ಯೋ!" ಎಂದು ತನ್ನನ್ನೇ ಬಯ್ದುಕೊಂಡಂತೆ- ಈ ಚಳಿ ರಾತ್ರಿ ಬೆಳಗಾಗುವಾಗ ದಬ್ಬಕ್ಕನೆ ಅವುಚಿಕೊಂಡಿದೆ. ನಾನು ಹೇಳುತ್ತಿರುವುದು ತುಂಬಾ ನಾಟಕೀಯ ಅನಿಸಿದರೆ ಅದು ನನ್ನ ತಪ್ಪಲ್ಲ. ಏಕೆಂದರೆ, ಈ ವರ್ಷ ಸಿಡ್ನಿಗೆ ಚಳಿ ಆವರಿಸಿದ್ದೇ ಹಾಗೆ. ಈವತ್ತು ಬೆಳಿಗ್ಗೆ. ಹಚ್ಚವಾಗಿ ಕತ್ತರಿಸಿಟ್ಟ ಹುಲ್ಲಿನ ಮೇಲೆಲ್ಲಾ ದಟ್ಟವಾಗಿ ಇಬ್ಬನಿಗಟ್ಟಿದೆ. ಹೌದು ಐಸಾಗಿ ಒಂದು ಪದರ ಹರಡಿದೆ. ಹಲವು ದಿನಗಳ ಇಂತಹ ಫ್ರಾಸ್ಟಿನಡಿ ಹುಲ್ಲು ಕಳೆಗುಂದಿ ಸಾಯುತ್ತವೆ. ಇಬ್ಬನಿಯನ್ನು ತೊಲಗಿಸಬೇಕಾದ ಸೂರ್ಯ ತನ್ನ ಕೆಲಸ ಮರೆತು ಉತ್ತರದ ಬೇಸಿಗೆಯಲ್ಲಿ ಅಂಡಲೆಯುತ್ತಿದ್ದಾನೆ. ಅವನ ವಾರೆ ಬಿಸಿಲಿನ ನಿಸ್ತೇಜವನ್ನು ಇಬ್ಬನಿ ಪದರ ಅಣಕಿಸಿ ನಗುತ್ತಿರುವಂತೆ ಹರಡಿಕೊಂಡಿದೆ.

ಚಳಿಗಾಲದಲ್ಲಿ ಹಗಲುಗಳು ಚಿಕ್ಕವು. ಸಂಜೆ ಐದಕ್ಕೇ ದೀಪ ಹಚ್ಚಬೇಕು. ಮನೆಗೆ ಹಿಂದುರುಗುವ ದಾರಿಯೆಲ್ಲಾ ಕತ್ತಲು. ಹತ್ತು ವರ್ಷಕ್ಕಿಂತ ಹಿಂದಿನ ಮಾತು ಈವತ್ತು ತುಂಬಾ ನೆನಪಾಯಿತು. ನಾವು ಆಗಿದ್ದ ಅಪಾರ್ಟ್‌ಮೆಂಟ್ ಮನೆ ಸಿಡ್ನಿಯನ್ನು ಇಬ್ಭಾಗಿಸಿ ಹರಿಯುವ ‘ಪ್ಯಾರಾಮಟ’ ಎಂಬ ಹೊಳೆಯ ದಡದ ಪಕ್ಕದ ರಸ್ತೆಯಲ್ಲಿತ್ತು. ಮನೆಯಿಂದ ರೈಲ್ವೇ ಸ್ಟೇಷನ್ನಿಗೆ ಹೋಗಿ ಬರಲು ಒಂದು ಕಿರಿದಾದ ಕಾಲ್ಸೇತುವೆಯನ್ನು ದಾಟಿ ಹೋಗಿಬರಬೇಕಾಗಿತ್ತು. ಆ ಉದ್ದದ ಸೇತುವೆಯ ನಟ್ಟ ನಡುವಲ್ಲಿ ಮಾತ್ರ ಒಂದು ಪುಟ್ಟ ದೀಪ ಮಿಣಿಮಿಣಿ ಎನ್ನುತ್ತಿರುತ್ತಿತ್ತು. ಉಳಿದಂತೆ ಕತ್ತಲು. ಹೊಳೆಯ ಒಂದು ಪಕ್ಕದಲ್ಲಿ ಎತ್ತರದ ಕಟ್ಟಡಗಳು ಇದ್ದವು. ಅವುಗಳ ನಡುವಿನ ಒಂದು ಕಿರಿಯ ಓಣಿಯನ್ನು ಹೊಕ್ಕು ಸೇತುವೆ ತಲುಪಬೇಕಿತ್ತು. ಆ ಓಣಿಯಲ್ಲೂ ದೀಪವಿಲ್ಲ, ಕತ್ತಲು.

ಇಂತಹುದೇ ಒಂದು ಚಳಿಗಾಲದ ಸಂಜೆ ಕೆಲಸದಿಂದ ಹಿಂತಿರುಗುತ್ತಿದ್ದೆ. ರೈಲಿನಲ್ಲಿ ಓದುತ್ತಿದ್ದ ಯಾವುದೋ ಪುಸ್ತಕದ ಬಗ್ಗೆ ಯೋಚಿಸುತ್ತಾ ನನ್ನ ಲೋಕದಲ್ಲೇ ಮುಳುಗಿಹೋಗಿದ್ದೆ. ರಸ್ತೆಯಲ್ಲಿ ಹೆಚ್ಚು ಟ್ರಾಫಿಕ್ ಇಲ್ಲದ ಕಾರಣ ಹಾಗೆ ಮೈಮರೆಯುವುದು ಅಪಾಯಕಾರಿಯಲ್ಲ. ಕೊಂಚವೇ ಎಚ್ಚರವಿದ್ದು ಅತ್ತಿತ್ತ ನೋಡಿ ಹೋದರೆ ಸಾಕು. ಹೀಗೆ ಏನೋ ಯೋಚಿಸುತ್ತಾ ಸೇತುವೆಗೆ ಹೋಗುವ ಓಣಿಗೆ ತಿರುಗಿದೆ. ಅಲ್ಲಿಂದಲೇ ಕಾಣುವ ಸೇತುವೆ ನಡುವಿನ ದೀಪದ ಸಣ್ಣ ಬೆಳಕು ಇದ್ದೂ ಇಲ್ಲದಂತಿತ್ತು. ಆ ಉದ್ದದ ಓಣಿಯಲ್ಲಿ ಎರಡು ಹೆಜ್ಜೆ ಇಟ್ಟೊಡನೆ, ದೂರದ ಸೇತುವೆಯ ಶುರುವಿನಲ್ಲಿ ನನ್ನ ಅರ್ಧ ಎಚ್ಚರಕ್ಕೆ ಎರಡು ಮನುಷ್ಯಾಕೃತಿ ಕಂಡಿತು. ಯಾರೋ ಇರಲಿ ಎಂದುಕೊಂಡು ಮತ್ತೊಂದೆರಡು ಹೆಜ್ಜೆ ಹೋಗುತ್ತಲೂ ಅನುಮಾನವಾಯಿತು. ಮರಗಟ್ಟುವಂತಹ ಚಳಿಯಲ್ಲಿ, ಸಂಜೆಯ ಕತ್ತಲಲ್ಲಿ ಯಾರನ್ನೋ ಕಾಯುತ್ತಾ ನಿಂತಿರುವಂತೆ ಕಂಡಿತು. ನನ್ನ ನಡಿಗೆ ನಿಧಾನವಾಯಿತು.

ನನ್ನನ್ನು ನೋಡಿದ್ದೆ ಆ ಮನುಷ್ಯಾಕೃತಿಗಳು ಎಚ್ಚೆತ್ತುಕೊಂಡು ಚುರುಕಾದ ಹಾಗಾಯಿತು. ನನ್ನತ್ತ ತಿರುಗಿ ನಿಂತಂತಾಯಿತು. ನಾನು ನಿಂತುಬಿಟ್ಟೆ. ಯಾಕೋ ಸರಿಯಿಲ್ಲ ಅನಿಸಿತು. ಆ ಇಬ್ಬರು ಹುಡುಗರು ನನ್ನತ್ತ ತಿರುಗಿ ಹೆಜ್ಜೆಯಿಟ್ಟರು. ನಾನು ಒಂದೆರಡು ಕ್ಷಣ ಮರಗಟ್ಟಿ ನಿಂತುಬಿಟ್ಟೆ. ಹಿಂದೆ ತಿರುಗಿ ಹೋಗಲೇ? ಅಥವಾ ಮುಂದಕ್ಕೆ ಹೋಗಲೆ? ಅಥವಾ ನಿಂತಲ್ಲೇ ನಿಂತುಬಿಡಲೆ? ಎಂದೆಲ್ಲಾ ಯೋಚನೆ ತಲೆಯಲ್ಲಿ ಮಿಂಚಿಹೋಯಿತು. ಅದಕ್ಕೆಲ್ಲಾ ಉತ್ತರ ಕಂಡುಕೊಳ್ಳುವ ಮೊದಲೇ, ಯಾವುದೋ ಒಳದನಿಗೆ ಶರಣುಹೋಗಿ ತಿರುಗಿ ಹೊರಟು ಬಿಟ್ಟಿದ್ದೆ. ಹೆಜ್ಜೆ ಚುರುಕಾಗಿ ಹಾಕುತ್ತಿದ್ದೆ. ಇದೆಲ್ಲಾ ನಾನು ಪ್ರಜ್ಞಾಪೂರ್ವಕವಾಗಿ ಮಾಡುತ್ತಲೇ ಇರಲಿಲ್ಲ. ಎಲ್ಲಾ ಬೊಂಬೆ ಆಟದಂತೆ ನಡೆಯುತ್ತಿತ್ತು.

ಹೊಸದಾಗಿ ಕಟ್ಟಿರುವ ಅದೇ ಸೇತುವೆಓಣಿಯಿಂದ ಹೊರಬಂದು ಎತ್ತ ಹೋಗುವುದೆಂದು ನೋಡುತ್ತಾ ಒಮ್ಮೆ ಹಿಂದೆ ತಿರುಗಿದೆ. ಆ ಹುಡುಗರೂ ನನ್ನತ್ತ ಸರಸರ ಬರುತ್ತಿದ್ದರು. ಆ ನಿರ್ಜನ ರಸ್ತೆಯ ಇನ್ನೊಂದು ಪಕ್ಕ ಅಷ್ಟು ದೂರದಲ್ಲಿ ಒಂದು ರೆಸ್ಟೋರೆಂಟ್ ಕಂಡಿತು. ಓಡುತ್ತ ರಸ್ತೆ ದಾಟಿ ಅದನ್ನು ಹೊಕ್ಕುಬಿಟ್ಟೆ. ಅಲ್ಲಿದ್ದ ವೇಟ್ರೆಸ್ಸಿಗೆ ಯಾರೋ ನನ್ನನ್ನು ಅಟ್ಟಿಸಿಕೊಂಡು ಬರುತ್ತಿದ್ದಾರೆ ಮನೆಗೆ ಫೋನ್ ಮಾಡಬೇಕು ಅಂತ ಕೇಳಿಕೊಂಡೆ. ಪರಿಸ್ಥಿತಿ ಅರ್ಥವಾದವಳಂತೆ ಫೋನತ್ತ ಕೈಚಾಚಿ ಮಾಡು ಅಂದಳು. ನನ್ನ ಹೆಂಡತಿಗೆ ಫೋನ್ ಮಾಡಿ ನಡೆದದ್ದು ಹೇಳುತ್ತಿರುವಾಗ ಗಾಜಿನ ಕಿಟಕಿಯ ಮೂಲಕ ನನ್ನತ್ತ ನೋಡುತ್ತಾ ಅವರಿಬ್ಬರು ಹಾದು ಹೋಗಿದ್ದು ಕಂಡಿತು. ಅವರ ನೋಟ ‘ಬಾ ಮಗನೆ ಹೊರಗೆ, ನೋಡ್ಕೋತೀವಿ’ ಅನ್ನೋ ಹಾಗಿತ್ತು. ತುಸು ಹೊತ್ತು ಅಲ್ಲೇ ಕಾದಿದ್ದು, ಹೆಂಡತಿ ಬಂದು ಪಿಕ್ ಮಾಡುವಾಗ ಅವರಿಬ್ಬರೂ ಎತ್ತಲೋ ಕಾಣೆಯಾಗಿದ್ದರು. ಬಹುಶಃ ನಾನು ಸೇತುವೆಯತ್ತ ಮುಂದೆ ಹೋಗಿದ್ದರೆ ಬಡಿದು ನನ್ನ ಬಳಿಯಿರುವುದೆಲ್ಲಾ ಕಿತ್ತುಕೊಳ್ಳುತ್ತಿದ್ದರೋ, ದುಡ್ಡು ಕೇಳುತ್ತಿದ್ದರೋ, ಸಿಗರೇಟು ಕೇಳುತ್ತಿದ್ದರೋ ಯಾರಿಗೆ ಗೊತ್ತು. ಆದರೆ ಅಂದಿನಿಂದ ಪ್ರತಿದಿನವೂ ಸ್ಟೇಷನ್ನಿನಿಂದ ಪಿಕ್ ಮಾಡುತ್ತೇನೆ ಎಂಬ ಹೆಂಡತಿಯ ಒತ್ತಾಯವನ್ನು ಒಪ್ಪಿಕೊಂಡರೂ ನನಗೆ ಅದು ಅಗತ್ಯವೆನಿಸಿರಲಿಲ್ಲ. ಆಮೇಲೂ ಹಲವು ಸಲ ಕತ್ತಲಲ್ಲಿ ಅಲ್ಲಿಯೇ ಹಾದು ಬಂದಿದ್ದೇನೆ.

ನನಗೆ ಅಂದು ಇದ್ದ ಸಾಧನ ಸವಲತ್ತು ಇಲ್ಲದವರ ಬಗ್ಗೆ ಯೋಚಿಸುವಾಗ ಅಭದ್ರತೆಯ ಅರ್ಥ ಆಗುತ್ತದೆ. ಆ ಅಭದ್ರತೆಯೇ ನೀಚ ಕೆಲಸವನ್ನು ಮಾಡಿಸುತ್ತದೆ. ಅಲ್ಲದೆ, ನೀಚತನಕ್ಕೆ ತುತ್ತಾದವರಿಗೆ ಸ್ವಾರೋಪಿತ ಅವಮಾನವನ್ನೂ ಅದೇ ಅಭದ್ರತೆಯೇ ಲೇಪಿಸುತ್ತದೆ. ಇಂಡಿಯನ್ ಹುಡುಗರು ತುತ್ತಾಗುತ್ತಿರುವ ನೀಚತನಕ್ಕೆ ಹಲವು ಮುಖಗಳು, ಹಲವು ಕೋನಗಳು ಮೆಲ್ಲನೆ ಒಂದೊಂದಾಗಿ ತೆರೆದುಕೊಳ್ಳುತ್ತಿದೆ. ಇಡೀ ಪೋಲಿಸಿಂಗ್ ಹಾಗು ಎಲ್ಲ ಸಾಮಾನ್ಯರ ರಕ್ಷಣೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ನಾವಿನ್ನೂ ಹೆಚ್ಚು ಕೆಲಸ ಮಾಡಬೇಕೆಂದು ಪೋಲೀಸರು ಒಪ್ಪಿಕೊಳ್ಳುವಂತಾಗಿದೆ. ಇವೆಲ್ಲಾ ಹೀಗಿರಬೇಕಾಗಿಲ್ಲ. ಹೀಗಿರದೇ ಇರಲು ಸಾಧ್ಯವಿದೆ ಎಂಬ ಒತ್ತಡ ಎಲ್ಲ ಕಡೆ ಕಾಣುತ್ತಿದೆ. ಇದರಿಂದ ಹುಟ್ಟುವ ಪರಿಹಾರಕ್ಕೆ ಮಾತ್ರ ಇಲ್ಲಿಯ ನಗರವಾಸಿಗಳು ತಾಳ್ಮೆಯಿಂದ ಕಾಯಬೇಕಷ್ಟೆ. ಈಗ ಆ ಹಳೆಯ ಸೇತುವೆಯನ್ನು ಹೊಸದಾಗಿ ಕಟ್ಟಿದ್ದಾರೆ. ಅಲ್ಲದೆ, ಸಣ್ಣ ಹಗಲುಗಳು ಹಾಗು ಬೇಗ ಕತ್ತಲಾಗುವ ಸವಾಲು ಚಳಿಗಾಲದಲ್ಲಿ ಮಾತ್ರ.

[ಚಿತ್ರಗಳು-ಸಂಗ್ರಹದಿಂದ]

ಪುಟದ ಮೊದಲಿಗೆ
 
Votes:  2     Rating: 5    
 
 
ಸಂಬಂಧಿಸಿದ ಲೇಖನಗಳು
  ಪಟ್ಟಣಪುರಾಣ: ಮಣ್ಣ ಇಟ್ಟಿಗೆ ಕೊಳ್ಳಿರೋ
  ತರೀಕೆರೆ ಏರಿಯಾ: ಬಂಗಾಳದ ಪುಖೂರ್ ಕೆರೆಗಳು
  ಸ್ಟೋನ್ ಹಿಲ್ ಡೈರಿ: ಎಮ್ಮಯ ಹೆಮ್ಮೆಯ ರಾಜಾಮೀಸೆ
  ಮಹಾರಾಷ್ಟ್ರದಲ್ಲೇನಾಗುತ್ತಿದೆ?-ಪ್ರೇಮಶೇಖರ ಕಾಲಂ
  ಕೆ.ಟಿ.ಗಟ್ಟಿ ಬಿಸಿಲುಕೋಲು: ಸಿನ್ಸಿನಾಟಿಯ ಸೌಂದರ್ಯ
  ಕಟ್ಟಿಕೊಳ್ಳುವ ತಲ್ಲಣದಲ್ಲಿ ಹೆಕ್ಕಿ ತೆಗೆದ ಸಾಲುಗಳು
  ಶಂಕರ ಪರ್ವತದಿಂದ ಕಂಡ ಶ್ರೀನಗರ
  ಯೋಗೀಂದ್ರ ಕಾಲಂ- ಹಿಮಪಾತದ ಹೊತ್ತಲ್ಲಿ ಇಂಗ್ಲೆಂಡ್ ಸಮಾಚಾರ
  ಸ್ಟೋನ್ ಹಿಲ್ ಡೈರಿ: ಹೇಳಿ, ನಾನು ಬದುಕಿರುವೆನೇ?
  ಪ್ರೇಮಶೇಖರ ಕಾಲಂ- ನೇಪಾಲವೂ ಮಗ್ಗುಲ ಮುಳ್ಳಾಗುತ್ತಿದೆಯೇ?
  ಸತೀಶ್ ಬರೆಯುವ ಕಾಶ್ಮೀರದ ಚಿತ್ರ-೭
  ಕವಲಕ್ಕಿ ಡೈರಿ - ಹಾವು ಕಡಿತದ ಕಥೆಗಳು
  ವಸ್ತಾರೆ ಕಾಲಂ- ವಾಸ್ತುಶಿಲ್ಪಿಯ ವಾಸ್ತವ ಪುರಾಣ
  ತರೀಕೆರೆ ಏರಿಯಾ-ಮನೆಯ ನೆಮ್ಮದಿ , ಸಂತೆಯ ಸ್ವಾತಂತ್ರ್ಯ
  ಕೆ.ಟಿ. ಗಟ್ಟಿ ಬಿಸಿಲುಕೋಲು: ಯಾವ ದೇಶ ಪ್ರೇಕ್ಷಣೀಯ?
  ನವರಾತ್ರಿ ಕಳೆದು ನರಸಿಂಹದಾಸರ ನೆನಪು
  ಆಸ್ಟ್ರೇಲಿಯಾ ಪತ್ರ: ಸಿಡ್ನಿ ಆಗಸದಲ್ಲಿ ಧೂಳ ಲೀಲೆ
  ಹಲ್ಲಿಯ ತಲೆ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ?
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು-೬
  ‘ಪುಸ್ತಕ ಪ್ರೀತಿ’: ಮಾಧವ ಕುಲಕರ್ಣಿಯವರ ‘ಪಾತಾಳ ಗರಡಿ’
  ವಸ್ತಾರೆ ಕಾಲಂ: ದೈವಕೌಪೀನೇಯಮ್
  ಪುಸ್ತಕ ಪ್ರೀತಿ: ರವೀಂದ್ರನಾಥರ ‘ಮೂರು ಸಾಲು ಮರ’
  ಪೂರ್ವಾಂಚಲ ಪುರಾಣ: ಚಾಂಗ್ ಜನರ ನಡುವೆ
  ಸದ್ದಿಲ್ಲದೆ ಹಾರಾಡುವ ಏರ್ ಬಸ್ ಸುಂದರಿ: ಯೋಗೀಂದ್ರ ಬರಹ
  ಕವಲಕ್ಕಿ ಡಾಕ್ಟರ ಡೈರಿ : ಧನುರ್ವಾಯು ಪುರಾಣ
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು- ೫
  ಸುದರ್ಶನ್ ಕಾಲಂ: ಈಡಾ ಎಂಬ ಪಳೆಯುಳಿಕೆಯ ಹುಡುಗಿ
  ತೀರಿಹೋದ ವೆಸ್‍ಲೀ ಎಂಬ ಪೊಲೀಸ್ ಆಫೀಸರ್: ವಸ್ತಾರೆ ಅಂಕಣ
  ಸ್ಟೋನ್ ಹಿಲ್ ಡೈರಿ:ಇಡ್ಲಿ-ಪ್ರತಿಭೆ, ಪರಂಪರೆಯ ಪಾತ್ರೆ
  ಬಿಸಿಲುಕೋಲು: ಹುಟ್ಟಿದರೆ ಮಗುವಾಗಿ ಇಲ್ಲಿ ಹುಟ್ಟಬೇಕು!
  ಯೋಗೀಂದ್ರ ಕಾಲಂ: ಆಗಸ್ಟ್ ತಿಂಗಳ ಖಾಲಿ ಬೇಸಗೆ ಕಾಲ
  ಡಿ.ಪಿ. ಸತೀಶ್ ಬರೆಯುತ್ತಾರೆ: ಕಾಶ್ಮೀರದ ಪಂಡಿತರ ಕಷ್ಟಸುಖ
  ನೀಲಿ ಬೆಳಕು: ನನ್ನ ಪ್ರೀತಿಯ ಮುಲ್ಲಾ
  ಹಂದಿಜ್ವರದ ಹೊತ್ತಲ್ಲಿ ಮರಣವ್ಯಾಧಿಗಳ ನೆನಪು
  ಬಿಸಿಲುಕೋಲು: ಇದೇನು ಮಸಣವೋ ಇಲ್ಲ ವನರಾಶಿಯೋ...
  ಒಂಭತ್ತನೇ ತರಗತಿಯ ತೊಂಭತ್ತರ ಅಜ್ಜ ಅಯ್ಯೋ ತೀರಿಹೋದರಲ್ಲ...
  ಪುಸ್ತಕ ಪ್ರೀತಿ: ಆನಂದ ಲಕ್ಕೂರು ಕವಿತೆಗಳು
  ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು -೩
  ಪೂರ್ವಾಂಚಲ ಪುರಾಣ: ನಾಗಾ ನದಿಯ ಕೊಳ್ಳದಲ್ಲಿ
  ಬಣ್ಣಗಳ ಹಿಂದಿನ ನಿಜದ ಬಣ್ಣ: ಕೃತಿ ಬರಹ
  ವರ್ಡ್ಸ್ ವರ್ತನ ಸರೋವರದ ಸಿರಿಗನ್ನಡಿಯಲ್ಲಿ
  ತರೀಕೆರೆ ಏರಿಯಾ: ಮುಂದುವರಿದ ನಾಯಿಪುರಾಣ
  ಅಲ್ಲಿಯಗಿಡ ಇಲ್ಲಿ ಹೂಬಿಟ್ಟು ಇಲ್ಲಿನ ಬಳ್ಳಿ ಅಲ್ಲಿ ನೆಟ್ಟು
  ಡಿ ಪಿ ಸತೀಶ್ ಅಂಕಣ: ಮುಂದುವರಿದ ಕಾಶ್ಮೀರದ ಚಿತ್ರಗಳು
  ಕವಲಕ್ಕಿ ಡಾಕ್ಟರ ಡೈರಿ: ಕಾಮ ಪ್ರೇಮ ಕಷ್ಟ ಸುಖ
  ಬಿಸಿಲುಕೋಲು: ಅಮೆರಿಕಾದಲ್ಲಿ ಹೆರುವ ವಹಿವಾಟು
  ಎಸ್ ಮಂಜುನಾಥ್ ಬರೆದ ಅಪ್ಪು ಪೂಜಾರಿಯ ಚಿತ್ರ
  ಪುಸ್ತಕ ಪ್ರೀತಿ: ಮೊಗಳ್ಳಿ ಕವಿತೆಗಳ ‘ದೇವಸ್ಮಶಾನ’
  ವಸ್ತಾರೆ ಕಾಲಂ: ದೈನಂದಿನ ನ್ಯೂಟನುಭ್ರಾಂತುಗಳು
  ತರೀಕೆರೆ ಏರಿಯಾ: ನಾಯಿಪುರಾಣದ ಮೊದಲ ಕಂತು
  ಸ್ಟೋನ್ ಹಿಲ್ ಡೈರಿ: ಹುಲುಸು ಮನುಜನ ಕಟ್ಟುಕಟ್ಟಳೆಗಳು
  ಬಿಸಿಲುಕೋಲು: ಒಂದು ವಿಶ್ವವಿದ್ಯಾನಿಲಯದ ಕುರಿತು
  ಬ್ರಿಸ್ಟಲ್ ಪುರಾಣ: ಬಿಸಿಲು,ಬೀಚ್,ಬಿಯರ್ ಮತ್ತು ಬ್ರಿಟಿಷ್
  ಕವಲಕ್ಕಿ ದಿನಚರಿ: ಕೆಲವು ಬಸಿರ ಸಂಗತಿಗಳು
  ಪೂರ್ವಾಂಚಲ ಪುರಾಣ: ಮಿಥುನಗಳ ಹಳ್ಳಿಯಲ್ಲಿ