ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಅನಿವಾಸಿ ಸುದರ್ಶನ್ ಬರೆದ ಜುಲೈ ತಿಂಗಳ ಅತಿಥಿ ಸಂಪಾದಕೀಯ    
ಸುದರ್ಶನ್
ಬುಧವಾರ, 1 ಜುಲೈ 2009 (11:29 IST)
ಇಲ್ಲಿ ಆಸ್ಟ್ರೇಲಿಯದಲ್ಲಿ ಜುಲೈ ಒಂದು ಹೊಸ ಆರ್ಥಿಕ ವರ್ಷದ ಪ್ರಾರಂಭ. ಜನವರಿ ಒಂದರಂದು ಕಳೆದ ಕೆಟ್ಟ ವರ್ಷವನ್ನು ಮರೆಯುವ ಪ್ರಯತ್ನದಲ್ಲಿ ಹೊಸ ವರ್ಷಕ್ಕೆ ಆತಂಕದಿಂದ ಎದುರು ನೋಡುವುದು ಹಳೆಯ ಸಂಪ್ರದಾಯ. ನ್ಯೂ ಇಯರ್‍ ಪಾರ್ಟಿಯೆಂದು ವರ್ಷ ಜಾರುವುದನ್ನು ಮತ್ತಿನಲ್ಲಿ ಕಳೆಯುವುದು ಕೆಟ್ಟ ಗಳಿಗೆಗಳಲ್ಲಿ ಸಮಂಜಸವೇನೋ ಅನಿಸುತ್ತದೆ. ಆದರೆ ಆರ್ಥಿಕ ಹೊಸವರ್ಷಕ್ಕೆ ಮೋಜು, ಕುಣಿತ, ಕುಡಿತವಿರಲಿ ಕಾಲುಗಳು ಅದುರುತ್ತಿದೆ, ತಿಂದದ್ದು ನುಂಗಲಾಗುತ್ತಿಲ್ಲ, ಕುಡಿದದ್ದು ಒಳಗಿಳಿಯುತ್ತಿಲ್ಲ. ತೊಂಡುದನದಂತೆ ಹಾಯಬೇಕಾಗಿದ್ದ ಕನಸುಗಳೂ ಕಂಗೆಟ್ಟು ಕೂತಿವೆ. ಇಂತಹ ಹೊಸ ತಿಂಗಳು ಕೆಂಡಸಂಪಿಗೆಗೆ ‘ಅತಿಥಿ ಸಂಪಾದಕ’ನಾಗಿ ಏನೇನು ಮಾಡಬೇಕು, ಮಾಡಬಹುದು, ಏನು ಮಾಡಿದರೆ ಚೆಂದ ಎಂಬೆಲ್ಲಾ ಗೊಂದಲದಲ್ಲೇ ನಗುತ್ತಾ ಬರುತ್ತಿದ್ದೀನಿ.

ಗೊಂದಲದಲ್ಲಿ ಸ್ಪಷ್ಟವಾಗಿ ನುಡಿಯುವವರು ಜಾಣರಾಗಿ ಕಾಣುತ್ತಾರೆ. ಅವರು ಹೇಳುತ್ತಿರುವುದು ಜಾಣ ಮಾತಾಗಲಿ, ನಿಜವಾಗಲಿ ಆಗಬೇಕಾಗೇನೂ ಇರುವುದಿಲ್ಲ. ಏಕೆಂದರೆ ಈಗೀಗಲಂತೂ ದಿಟ್ಟವಾಗಿ ಹೇಳುವುದನ್ನೇ ಬಂಡವಾಳ ಮಾಡಿಕೊಂಡವರು ನಿಮಗೆ ಸುತ್ತಲೂ ಕಂಡೇ ಕಾಣುತ್ತಾರೆ. ಗೊಂದಲ, ಜಾಣತನ, ದಿಟ್ಟತನ, ನಿಜನುಡಿ ಇವೆಲ್ಲದರ ಆಚೆ ಏನೆಲ್ಲಾ ಪರಿಗಣಿಸಿ ವಿವೇಕದ ಮಾತಾಡುತ್ತಿದ್ದಾರೆ ಅನ್ನುವುದು ಮುಖ್ಯವಾಗುತ್ತದೆ. ಹಲವು ಸಲ ಮಾತುಗಳ ಅವಶ್ಯಕತೆ ಹಾಗು ಪ್ರಾಮುಖ್ಯದ ಅಳತೆಗೋಲಿಗೆ ದಿಟ್ಟನಕ್ಕಿಂತ - ಅನುಮಾನ ಉಳಿಸಿಕೊಂಡ ವಿವೇಕವೇ ಹೆಚ್ಚು ಸಮಂಜಸ ಅನಿಸುತ್ತದೆ. ಇಲ್ಲದಿದ್ದರೆ ಮಾತುಗಳ ಆರ್ಭಟ ಕಿವಿ ತುಂಬಿ ನಮ್ಮ ಉಳಿದ ಇಂದ್ರೀಯಗಳು ಹಿಮ್ಮೆಟ್ಟಿಬಿಡುವ ಸಾಧ್ಯತೆ ಹೆಚ್ಚಾಗುತ್ತದೆ. ಸೋಂಕು, ನೋಟ, ರುಚಿ ಹಾಗು ಎಲ್ಲಕ್ಕಿಂತ ಅತಿ ಹೆಚ್ಚು ಪರಿಣಾಮಕಾರಿ ಹಾಗು ದೀರ್ಘಕಾಲ ಉಳಿಯುವ ಪರಿಮಳಕ್ಕೆ ಕುರುಡಾಗಿ ಬಿಡುವಲ್ಲಿಗೆ ಬಂದು ನಿಲ್ಲುತ್ತೇವೆ. ಅಂತಹ ಘೋರ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಕೆಂಡಸಂಪಿಗೆ ಮುಖ್ಯವಾಗುತ್ತದೆ.

ಜಾಗತಿಕ ಪರಿಸರದ ಎಲ್ಲ ಸವಲತ್ತುಗಳನ್ನೂ ಬಳಸಿಕೊಂಡು ಅದರ ದಬ್ಬಾಳಿಕೆಗೆ ಅಧೀನರಾಗದ ಹಾಗೆ ಇರುವುದು ದೊಡ್ಡ ಸವಾಲೇ ಎನ್ನಬೇಕು. ಆ ಸವಲತ್ತುಗಳು ಯಾರೊಬ್ಬರ ಸ್ವತ್ತೂ ಅಲ್ಲದಿರುವುದರಿಂದ ಅದನ್ನು ಸಾಮೂಹಿಕವಾಗಿ ವಿವೇಕದಿಂದ ಬಳಸಿಕೊಳ್ಳುವುದು ನಮ್ಮ ಜವಾಬ್ದಾರಿ. ಇದನ್ನು ಕೆಂಡಸಂಪಿಗೆಯ ಮೂಲಕ ಹೇಗೆ ನಿಭಾಯಿಸುತ್ತೇವೆ ಎಂದು ಎಚ್ಚರಿಕೆಯಿಂದ ನೋಡಿಕೊಳ್ಳಬೇಕಾಗಿದೆ. ಕೂಗಾಡುವ ಇಂದಿನ ಮಾಧ್ಯಮಗಳಿಗೆ ದಿಟ್ಟವಾಗಿರುವುದು ಮುಖ್ಯ. ಹೇಳುತ್ತಿರುವುದು ಸುಳ್ಳೇ ಆಗಿರಬಹುದು. ಆದರೆ ಕೆಂಡಸಂಪಿಗೆಯಂತಹ ಅಂತರ್ಜಾಲ ತಾಣಗಳಲ್ಲಿ - ಅದು ಓದುಗರಿಗೆ ಕೊಡುವ ದನಿಯಿಂದಾಗಿ ಅತ್ಯಂತ ಮಹತ್ವವಿರುತ್ತದೆ. ಮಾಧ್ಯಮದ ಸುಳ್ಳು, ದಬ್ಬಾಳಿಕೆ, ಕುಟಿಲತೆ ಇಲ್ಲಿ ನಡೆಯುವುದಿಲ್ಲ. ಓದುಗರು ನಡೆಯಗೊಡುವುದಿಲ್ಲ. ಕೆಂಡಸಂಪಿಗೆಯಂತಹ ತಾಣ ನಮ್ಮ ಎಚ್ಚರದ ಮನಸ್ಸಿಗೆ ಬೆಂಬಲವಾಗಬೇಕಾದರೆ ಅದರಲ್ಲಿ ಬರಹಗಾರರಷ್ಟೇ ಜವಾಬ್ದಾರಿ ಓದುಗರಿಗೂ ಇರುವುದನ್ನು ಮನಗಾಣಬೇಕಾಗುತ್ತದೆ.

ಜಗತ್ತಿನ ಮೂಲೆ ಮೂಲೆಯಿಂದ ಅಂಕಣಕಾರರನ್ನು ಒಟ್ಟುಗೂಡಿಸಿ, ಇಂಡಿಯದ ಹಳ್ಳಿ ಊರು ನಗರದ ಬರಹಗಾರರ ಜತೆ ಬರೆಯುವ ಅವಕಾಶ ಕೊಡುವುದು ನನ್ನಂತಹ ಅನಿವಾಸಿಗಳಿಗೆ ಅತ್ಯಂತ ಮಹತ್ವಪೂರ್ಣವಾದ್ದು. ಹಾಗೆಯೇ ಓದುವವರಿಗೂ ಇದು ಕೊಡುವ ಹರಹು ಬಹುಶಃ ಕೆಂಡಸಂಪಿಗೆಯಂತಹ ಅಂತರ್ಜಾಲ ಪತ್ರಿಕೆಯಿಂದ ಮಾತ್ರ ಸಾಧ್ಯ. ಇದು ಬಹುಶಃ ೨೧ನೇ ಶತಮಾನದ ವಿಶಿಷ್ಟ ಕೊಡುಗೆ ಎಂದರೆ ತಪ್ಪಾಗಲಾರದು. ಆದರೆ ಈ ಕೊಡುಗೆಯನ್ನು ಲೋಲುಪತೆಗೆ ಹಾಗು ವಿಜೃಂಭಣೆಗೆ ಬಳಸಿಕೊಂಡರೆ ಒಂದು ಐತಿಹಾಸಿಕ ಅವಕಾಶದಿಂದ ನಾವು ವಂಚಿತರಾಗುತ್ತೇವೆ. ಬೇರುಗಳನ್ನು ಹುಡುಕಿಕೊಳ್ಳುವಷ್ಟೇ ಮುಖ್ಯವಾಗಿ ಟಿಸಲಿನ ದಿಕ್ಕುಗಳಿಗೂ ಮನಸ್ಸುಕೊಡುವುದಕ್ಕೆ ಮರೆಯಬಾರದು. ಆ ನಿಟ್ಟಿನಲ್ಲಿ ದಾಖಲಾಗದೇ ಅಳಿಯಬಹುದಾದ ಯತ್ನಗಳಿಗೆ ಕೆಂಡಸಂಪಿಗೆ ದನಿಯಾಗುವುದು ಮುಖ್ಯವಾಗುತ್ತದೆ.
ಪುಟದ ಮೊದಲಿಗೆ
 
Votes:  10     Rating: 2.8    
 
 
ಸಂಬಂಧಿಸಿದ ಲೇಖನಗಳು
  ಯಡಿಯೂರಪ್ಪನವರು ಬೀದರಿಗೆ ಬಂದ ವೃತ್ತಾಂತವು
  ಧಾರಾಳ ಮಾತು ನಮಗೇ ಆಪತ್ತು!
  ಏಳು ಕಲಾವಿದೆಯರ ಏಳು ವರ್ಣಗಳು
  ರಾಮ ಭಕ್ತ ಹನುಮನೋ, ಹನುಮ ಭಕ್ತ ರಾಮನೋ
  `ಅಲ್ನೋಡಿ ಕಲೀರಿ' ಅಂದ್ರೇನು ದರ್ಶನ್?
  ಹುಲ್ಲಿನ ಮೇಲೆ ಕೂತ ಹುಡುಗ ರಾಮುಲು
  ಜಾಗತೀಕರಣ ನೀತಿಕಥಾ-6: ಗುರುಚರಿತೆ
  ನ್ಯೂಯಾರ್ಕ್ ಜಿಮ್ ಬಳ್ಳಾರಿ ದೇವರ ನೋಡಲು ಬಂದ ಕಥೆ!
  ಶಿಕ್ಷಣ ಮೀಸಲು ನೀತಿಯನ್ನು ನೀವೂ ಬೆಂಬಲಿಸಿ
  ಯೋಗರಾಜ್ ಭಟ್ ಬರೆದ `ಪಂಚರಂಗಿ' ಕವಿತೆಗಳು
  ನೋವೆಂದರೆ ಅಳು ಮಾತ್ರವೇ? :ಹರೀಶ್ ಬರಹ
  ರಾಖೀ ಹಬ್ಬದ ದಿನ ವಿಲಾಸಣ್ಣನ ನೆನಪು
  ಭಿಕ್ಷುಕರು ಮತ್ತು ಸಾಹಿರ್ ಸಾಲುಗಳು: ದಿವಾಕರ್ ಬರಹ
  ಕನ್ನಡ ಯುವ ಬರಹಗಾರರಿಗೆ ಟೊಟೊ ಪುರಸ್ಕಾರ
  ಕನ್ನಡದ ಜಗನ್ಮೋಹಿನಿ ಹರಿಣಿಯೊಂದಿಗೆ ಒಂದಷ್ಟು ಹರಟೆ
  ಪೆಜತ್ತಾಯ ಬರೆದ ತ್ರಿಚಕ್ರಿ ಗೋವಿಂದ ಭಟ್ಟರ ಕಥೆ
  ಜಾಗತೀಕರಣ ನೀತಿಕಥಾ-5: ಕಲ್ಲು ಸಿಕ್ಕರೆ ಕೊಳ್ಳಿರೋ...
  ಏನೂ ನನ್ನದಲ್ಲವೆಂಬ ಸ್ವಾತಂತ್ರ್ಯ:ನಾಗಶ್ರೀ ನಂಬಿರುವುದು
  ಸ್ವಾತಂತ್ರ್ಯ ಅಂದ್ರೆ ಏನು?:ಸುಶ್ರುತ ಕೇಳಿದ ಪ್ರಶ್ನೆಗಳು
  ಮೆಟ್ರೋ ಬದಿಯಲ್ಲೇ ಮಲ್ಲಿಗೆ ದಂಡೆಯ ಪರಿಮಳ
  ಗುಬ್ಬಚ್ಚಿಗಳಿಗೆ ಸ್ವಾತಂತ್ರ್ಯದ ಕಾಳು: ಹೇಮಾ ಬರಹ
  ಸ್ವಾತಂತ್ರದ ಮೊದಲ ಕ್ಷಣಗಳು:ಅಯ್ಯಂಗಾರ್ ನೆನಪುಗಳು
  ಕೆಂಡಸಂಪಿಗೆ ಕಮೆಂಟಿಗರು ಮೊನ್ನೆಯಿಂದಲೇ ಸ್ವತಂತ್ರರು!
  ಹಳ್ಳಿ ಹೈಕಳಿಗೆ ಬೇಡದ ಕನ್ನಡ ಶಾಲೆ: ಪೆಜತ್ತಾಯ ಚಿಂತನೆ
  ಅನು ಪಾವಂಜೆ ಬರೆದ ಅಜ್ಜನ ಮನೆಯ ನೆನಪುಗಳು
  ಒಬ್ಬ ಅತಿಸಾಮಾನ್ಯನ ಗೊಣಗಾಟ : ಸುದರ್ಶನ್ ಬರಹ
  ಮುಂಬೈನ ಮಂಕಿ ಬ್ರಿಡ್ಜ್ ನಲ್ಲೊಬ್ಬ ಪತಿತ ಪಾವನ ತಿರುಕ
  ಗ್ರೆಗರಿಯವರ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಾರೆ?
  ಅಮೇರಿಕಾ ದೇಶದ ಅಂಗಳದ ಅಂಗಡಿಗಳು
  ಗವಾಕ್ಷಿಯಲ್ಲಿ ಬಂದಿರುವ ಡಬ್ಬಿಂಗ್ ಪಿಶಾಚಿ!
  ಮಹಾನುಭಾವ ಬಿ.ಆರ್.ಪಂತುಲು:ಬಸವರಾಜು ಬರಹ
  ನಾನೂ ಲಾಂಗ್ ಜಂಪ್ ಹಾರಿದೆ: ಆರ್.ಜಿ.ಭಟ್ ಬರಹ
  ಆಸ್ಟ್ರೇಲಿಯಾ ಪತ್ರ: ದೇವರ ನಂಬದ ಸ್ತ್ರೀ ಪ್ರಧಾನಿ
  ತೆಂಗಿನ ಜುಟ್ಟೂ ತಮ್ಮನ ಜುಟ್ಟೂ: ಪರೀಕ್ಷಿತಾ ಬರಹ
  ಸ್ಯಾನ್ ಬಾರ್ನ್ ಪ್ರಾಯೋಗಿಕ ಕೃಷಿ ಕ್ಷೇತ್ರ: ವೆಂಕಟೇಶ್ ಬರಹ
  ಸವಣೂರಿನ ಭಂಗಿಗಳು ತೋರಿಸಿದ ಸತ್ಯಗಳು
  ಗ್ರೆಗರಿ ಕಳಕೊಂಡದ್ದು,ಎಂ ಆರ್ ಪಿ ಎಲ್ ಕಳೆದುಕೊಂಡದ್ದು
  ನಾರೀಕೇರಳ...ಮಳೆ,ಸುದ್ದಿರಾಜಕೀಯ:ಕನಕ ಬರಹ
  ಜಾಗತೀಕರಣ ನೀತಿಕಥಾ- ಕತೆಯೆಂಬ ಕತೆ
  ಇಟ್ಟಿಗೆ ಮಣ್ಣಿನ ರಾಶಿಯ ಮುಂದೆ..:ಲಕ್ಷ್ಮಿ ಕುಡ್ಲ ಬರಹ
  ಅಕ್ರಮ ಗಣಿ ಕಂಡರೂ ನಾವು ಯಾಕೆ ಕುರುಡರು?
  ಮಂಗಳೂರಲ್ಲಿ ಪತ್ರಾವೋ ಉಪವಾಸ ಕುಂತಿದ್ದರು...
  ಗ್ರೆಗರಿ ಪತ್ರಾವೊಗಾಗಿ ವೈದೇಹಿ ಮೊರೆ
  ಗ್ರೆಗರಿ ಪತ್ರಾವೋ ಮನೆಗೆ ಜೆ.ಸಿ.ಬಿ. ಎರಗಿದ ಕಥೆ
  ಅರವತ್ತರ ಉಲ್ಲಾಸದಲ್ಲಿ ನಸೀರುದ್ದೀನ್ ಷಾ: ಬಸು ಬರಹ
  ಜಾಗತೀಕರಣ ನೀತಿಕಥಾ 3: ಸಿಐಡಿ ಹೇಳಿದ ಕತೆ
  ಆಸ್ಟ್ರೇಲಿಯಾ ಓಲೆ: ಓದಲು ಬಂದು ತಾಯಾದವರ ಕಥೆ
  ಗಣಿಯಿಂದ ಹೊರಬರುತ್ತಿರುವ ದುರ್ನಾತಗಳು
  ಆಳುವವರೂ,ಆಳಿಸಿಕೊಳ್ಳುವವರೂ,ಪ್ರಜಾಪ್ರಭುತ್ವವೂ....
  ಈ ಗೋಕಾಕ್ ಎಂದರೆ ಯಾರು? ಹೃಷಿಕೇಶ್ ಬರಹ
  ಫುಟ್ಬಾಲ್, ಮಂಡೇಲಾ ಮತ್ತು ಒಂದು ಕವಿತೆ
  ಅಹಲ್ಯೆಯಾಗಬೇಕಿದ್ದವಳು ಏಡಿ ಹಿಡಿದದ್ದು....
  ರಾಧಜ್ಜಿ ಸೀಕರ್ಣೆ ಬೇಡಾ ಅಂದ ಕಥೆ
  ಬದಲಾದ ಕಾಲಮಾನ: ರಾಜೇಶ್ವರಿ ತೇಜಸ್ವಿ ಬರಹ
  ಈ ಪೈಶಾಚಿಕತೆಗೆ ಕೊನೆಯೇ ಇಲ್ಲವೇ?