ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಅತಿಥಿ ಸಂಪಾದಕರ ಐಡಿಯಾಗೆ ಇನ್ನೂ ಎರಡು ಅನುವಾದಗಳು    
ಸಂಪಾದಕ
ಸೋಮವಾರ, 20 ಜುಲೈ 2009 (03:10 IST)
ಮಡದಿಯೊಂದಿಗೆ ಎಲಿಯಟ್

ಕೆಂಡಸಂಪಿಗೆಯ ಅತಿಥಿ ಸಂಪಾದಕರ ಈ ವಾರದ ಐಡಿಯಾಕ್ಕೆ ಸಾಕಷ್ಟು ಅನುವಾದಗಳು ಬರುತ್ತಿವೆ. ಅನಿಲ ಜೋಶಿ ಹಾಗೂ ವರಾಹ ತಮ್ಮ ಅನುವಾದವನ್ನು ಕಳುಹಿಸಿದ್ದಾರೆ. ಕವಿತೆಯೊಂದರ ಸಾಧ್ಯತೆಗಳು ನೂರಾದರೆ ಅನುವಾದದ ಸಾಧ್ಯತೆಗಳು ನೂರಾರು ಎಂಬ ಜಾಣ ನುಡಿಯೊಂದಿದೆ. ಜಾಣರಾದ ನಮ್ಮ ಓದುಗರು ಈ ಕವಿತೆಯ ಇನ್ನೂ ಹಲವು ಭಾಷಾಂತರಗಳನ್ನು ನಮಗೆ ಕಳುಹಿಸಬಹುದು. editor@kendasampige.com ಈ ಮೇಲ್ ವಿಳಾಸಕ್ಕೆ ಮೇಲಾಯಿಸುವುದು ಕಠಿಣ ಎಂದಾದರೆ ಕವಿತೆಯ ಕೆಳಗಿರುವ ಪ್ರತಿಕ್ರಿಯೆಯ ಲಿಂಕನ್ನ ಕ್ಲಿಕ್ಕಿಸಿಯೂ ನೀವು ನಿಮ್ಮ ಅನುವಾದವನ್ನು ಕಳುಹಿಸಬಹುದು.

ಈಗ ಮೊದಲಿಗೆ ಅನಿಲ ಜೋಶಿ ಹಾಗೂ ವರಾಹ ಅವರ ಅನುವಾದವನ್ನು ನೋಡಿ. ನಂತರ ನೀಲಾಂಜಲಾ,ಮಾಯ್ಸ, ಮೀನೂಶಿಶಿರಾ, ಟೀನಾ,  ಎಂ.ಡಿ. ಅವರ ಅನುವಾದಗಳು. ಆನಂತರ ಪ್ರತಿಭಾ ಅವರ ಅನುವಾದ. ಅದರ ಕೆಳಗೆ ಎಲಿಯಟ್ಟನ ಮೂಲ ಕವಿತೆಯಿದೆ. ಓದಿ.ಹೇಗನಿಸಿತು ಹೇಳಿ. ನೀವೂ ಅನುವಾದಿಸಿ ಕಳಿಸಿ.

ಒಲವಿನ ಮಡದಿಗೆ

ಋಣಿ ನಾನವಳಿಗೆ,
ಎಚ್ಚರದಿ ಇಂದ್ರಿಯಗಳ ಹುರಿಗೊಳಿಸುತ
ನನ್ನೊಳು ಪುಟಿವ ಆನಂದದ ಸೆಲೆಗಾಗಿ
ನಮ್ಮ ಶಾಂತ ನಿದ್ರೆಯ ಕಾಪಿಡುವ
ಉಸಿರಾಟಗಳ ಏಕ ಲಯಕ್ಕಾಗಿ
ಪ್ರೇಮಿಗಳಾಗಿ ಸೂಸುವ ಪರಸ್ಪರರ ಕಂಪಿಗಾಗಿ
ಆಡದಲೆ ಆಲೋಚನೆಗಳು ಅವೇ ಆಗುವ ಪರಿಗಾಗಿ
ಅಂತೆ, ಅರ್ಥದ ಹಂಗಿಲ್ಲದ ಮಾತುಗಳಿಗಾಗಿ.

ಬಿರು ಚಳಿಗಾಲದ ಗಾಳಿ ಶೋಷಿಸಲಾರದು
ಉರಿ ಬೇಸಗೆಯ ಸೂರ್ಯ ಸೊರಗಿಸಲಾರ
ಗುಲಾಬಿ ತೋಟದ ಗುಲಾಬಿಗಳ; ಅದು ನಮ್ಮದು, ಕೇವಲ ನಮ್ಮದು

ಅರ್ಪಣೆಯ ತೆರೆದಿಟ್ಟಿದ್ದು ಇತರರಿಗಾಗಿ, ಆದರೆ
ಈ ಆಪ್ತ ಮಾತೆಲ್ಲ ನಿನಗೇ ಹೇಳಿದ್ದು, ಎಲ್ಲರೆದುರೆ

-ಅನಿಲ ಜೋಶಿ

******

ನನ್ನ ಮಡದಿಗೆ

ಈ ಜಿಗಿಯುವ ಸಂಭ್ರಮ ಇದು ನಿನ್ನಿಂದಲೇ.
ಎಚ್ಚರವು ಎಚ್ಚೆತ್ತ ಪ್ರಜ್ಞೆ
ನಿದ್ದೆಯ ಆಲಸವನ್ನಾಳುವ ಜೋಡಿ ಉಸಿರ ಲಯ
ಒಬ್ಬರೊಬ್ಬರ ಗಂಧದ ಪ್ರೇಮಿಗಳು

ಆಡದೆ ತಿಳಿಯುವ ಮೌನ ಮಾತು
ಅರ್ಥ ಬೇಡದ ಅದೇ ಅದೇ ತೊದಲು

ಮಬ್ಬು ಚಳಿಗೆ ಮಸುಕದಿವು
ಬಿರು ಬಿಸಿಲಿಗೆ ಒಣಗವು
ಈ ತೋಟದ ಗುಲಾಬಿಗಳು
ನಮ್ಮವು
ಮಾತ್ರ

ಆದರೆ ತಿಳಕೋ: ಈ ಘೋಷಣೆಗಳೆಲ್ಲ ಅವರಿವರ ಓದಿಗೆ
ನಿನಗೆ ಗಟ್ಟಿಯಾಗಿ ಹೇಳಿದ ಗುಟ್ಟುಗಳು

-ವರಾಹ

********

ಸಖಿಗೆ

ಯಾರಿಂದಾಗಿ ನನ್ನಲ್ಲಿ ಸುಖದ ಅಲೆಗಳೆಳುತ್ತವೆಯೊ
ಜೊತೆಯಾಗಿ ನಡೆವಾಗ ಅವು ವರ್ಧಿಸುತ್ತವೆಯೊ
ಸುಖನಿದ್ದೆಯಲ್ಲೂ ಉಸಿರ ಲಯಗಳು ಸಮಬದ್ಧತೆಗೊಳ್ಳುತ್ತದೆಯೊ
ಅಂತಹ ಪ್ರೇಮಿಗಳ ದೇಹ ಗಂಧವು ಪರಸ್ಪರ ಮಿಲಿತಗೊಂಡಿದ್ದು
ಅಂತವರ ಸಮಭಾವಗಳು ಮಾತಿಲ್ಲದೆ ಒಂದಾಗುವವು
ಮಾತಿನವು ಹೊರಬಂದು ಲಹರಿಗಳಾಗಿ ತೇಲಿಹೋಗುವವು

ಹೀಗೆಂದ ಮಾತ್ರಕೆ ನಮ್ಮೀ ತೋಟದ ಗುಲಾಬಿಗಳನ್ನು
ಯಾವ ಕುರ್ಗಾಳಿಯೂ ಉದುರಿಸದು
ಯಾವ ಬಿರಿ ಬಿಸಿಲು ಬಾಡಿಸದು
ಈ ಗುಲಾಬಿಗಳು ಯಾವತ್ತಿಗೂ ನಮ್ಮವೇ, ನಮ್ಮದೇ ಆಗಿದೆ

ಹಾಗಾಗಿ ಈ ಅರ್ಪಣೆ ಉಳಿದವರಿಗೆ, ಓದಲೆಂದು
ನಿಜವೆಂದರೆ, ಇದು
ಅಂತರಂಗಿಕವಾಗಿ ಸ್ವತಃ ನಾನೇ ನಿನ್ನಲ್ಲಿ ಬಹಿರಂಗವಾಗಿ ಭಿನ್ನವಿಸಿದ್ದು

-ನೀಲಾಂಜಲಾ

*******

ಲೇ ಇದು ನಿನಗೇನೇ ಕಣೇ!

ಒಲುಮೆಯಲಿ ನಲಿವಿನ ಚಿಲುಮೆ ನೀನು
ಬಾಳ ಜತೆನಡಿಗೆಯಲಿ ಹುರುಪು ನೀನು
ನಿದಿರೆಯಲಿ ನಂಬುಗೆಯ ಇಂಬು ನೀನು
ನಮ್ಮ ಉಸಿರಿಗೆ ಲಯದ ಉಸಿರು ನೀನು

ಪ್ರೀತಿಯಲಿ ನಮ್ಮೀ ಮೈಗಳು ನುಲಿದು
ಬೆರೆತು ಸೂಸುವ ಪ್ರೇಮಗಂಧ ನೀನು
ಅರುಹದೇ ಅರಿತ ನಮ್ಮೀ ಮನ ನೀನು
ಇನಿನುಡಿಯ ಹುರಳಿರದ ಕನವರಿಕೆ ನೀನು

ಯಾವ ಕುಳಿರು ಮುಳಿಸದ ಬೆಚ್ಚುಗೆ ನೀನು
ಯಾವ ಬೇಗೆ ಮುನಿಸದ ತಂಪುಗೆ ನೀನು
ನಮ್ಮಾ ಹೂದೋಟದ ಚೆಂಗುಲಾಬಿಗಳು
ನಮ್ಮದೇ ಬರೀ ನಮ್ಮಬ್ಬಿರದೇ ನಿನ್ನಾಣೆ

ರಟ್ಟುಮಾಡಿ ಉಲಿದ ಈ ಒಸುಗೆ
ಬೇರೆಯವರು ನೋಡುವುದಕ್ಕೆ
ಕೇಳುವುದಕ್ಕೆ ಹಾಡುವುದಕ್ಕಾದರೂ
ಒಳಗುಟ್ಟು ಬರೀ ನಿನಗೇನೇ ಕಣೇ!

-ಮಾಯ್ಸ

*****

ಮಡದಿಗೆ

ಯಾರಿಂದಾಗಿ ನನ್ನ ನಲಿವಿನ ಚಿಲುಮೆ
ಎಚ್ಚರದಲ್ಲಿ ನನ್ನ ಬುದ್ಧಿ ಪುಟಿದೇಳಿಸುವುದೋ
ಆರಾಮದ ನಿದ್ದೆಯಲ್ಲಿ ಮೈತಟ್ಟಿ ಕಾಯುವುದೋ,
ಅಂತವಳೊಡನೆ ಸಾಂಗತ್ಯದ ಉಸಿರಾಟ.
ಒಬ್ಬರಿನ್ನೊಬ್ಬರ ಮೈವಾಸನೆ ಮುತ್ತುವ ಪ್ರೇಮಿಗಳು
ಮಾತಿನ ಗರ್ಜಿಲ್ಲದೆ ಒಂದನ್ನೇ ಕಲ್ಪಿಸುತ್ತೇವೆ
ಅರ್ಥದ ಗರ್ಜಿಲ್ಲದೆ ಏಕ ಬಡಬಡಿಸುತ್ತೇವೆ...

ನಮ್ಮದಾದ,
ನಮ್ಮದು ಮಾತ್ರವೇ ಆದ
ಗುಲಾಬಿವನದ ಗುಲಾಬಿಗಳನ್ನು
ಯಾವ ಚಳಿಯ ಕುಳಿರ್ಗಾಳಿಯೂ ದಡ್ಡು ಹಿಡಿಸಲಾರದು
ಯಾವ ಮಂಕು ಟ್ರಾಪಿಕ್ ಬಿಸಿಲೂ ಒಣಗಿಸಲಾರದು

ಆದರೆ ಈ ಅರ್ಪಣೆ ಬೇರೆಯವರು ಓದಿಕೊಳ್ಳಲಿಕ್ಕಾಗಿ:
ಇವು ನಿನಗಾಗಿ ಸಾರ್ವಜನಿಕದಲ್ಲಿ ಉಸುರಿದ ಅಪ್ತ ನುಡಿಗಳು.

-ಮೀನೂ

********

ನನ್ನ ಪತ್ನಿಗೊಂದು ಸಮರ್ಪಣೆ

ಯಾರಿಗೆ ಋಣಿಯಾಗಿರಲಿ ಈ ಜಿಗಿಯುವ ಮಧುರ ಭಾವನೆಗೆ
ಯಾವುದು ಹಗಲಿನಲಿ ನನ್ನೀ ಪಂಚೇಂದ್ರಿಯಗಳ ಜಾಗೃತಿ ಗೊಳಿಸಿ
ನಿದ್ರೆಯಲಿ ಛಂದೋಬದ್ಧತೆಯಲಿ ನಾವು
ಒಂದೇ ಲಯದಲಿ ಉಸಿರಾಡುವಂತೆ ಮಾಡಿಸುವುದೋ.
ಯಾವುದು ಪರಸ್ಪರ ದೇಹಗಳ ಕಂಪು ಹೊತ್ತ ಪ್ರಣಯಿಗಳು
ಮೌನದಲೇ ಒಂದೇ ಯೋಚನೆಗಳ ಯೋಚಿಸುವಂತೆ ಮಾಡುವುದೋ,
ಹಾಗೂ ಅದೇ ಅರ್ಥವಿಹೀನ ಮಾತುಗಳನಾಡಿಸುವುದೋ...

ಥಂಡಾಗಿಸದು ಸಿಡುಕಿನ ಶಿಶಿರದ ಕೊರೆ ಗಾಳಿ
ಬಾಡಿಸದು ಮೌನದ ರಣ ಬಿಸಿಲು
ನಮ್ಮದೇ ಆದ, ನಮ್ಮೀ ಒಲವಿನ ಹೂ ತೋಟದ ಗುಲಾಬಿಯ.

ಆದರೀ ಬಹಿರಂಗ ಅರ್ಪಣೆ ಇತರರಿಗೆ ಓದಲು:
ಅವು ನಿನಗೋಸುಗ ಅರುಹಿದ ನಮ್ಮ ಸ್ವಂತ ಮಾತುಗಳು.

-ಶಿಶಿರಾ

*****

ನನ್ನ ಮಡದಿಗೊಂದು ಅರ್ಪಣೆ

ಇದು ಅವಳ ಕೊಡುಗೆ
ನಾವು ಬೆಳಗಾಗೇಳುತ್ತಿದ್ದಂತೆಯೆ ಉಲ್ಲಸಿತವಾಗುವ ಮೈಮನಗಳ
ಚಂಗನೆ ಜಿಗಿದೇಳುವ ಸಂತಸ
ನಮ್ಮ ನಿದ್ದೆಗಳ ಮಿಳಿತ ಉಸಿರಾಟಗಳನಾಳುವ ಲಯಬದ್ಧತೆ
ಒಬ್ಬರನಾವರಿಸಿದ ಇನ್ನೊಬ್ಬರ ಮೈ ಘಮಲು
ಮಾತೆ ಬೇಕಿರದ ಒಮ್ಮನಸ ಯೋಚನೆಗಳು
ಅರ್ಥಗಳೆ ಬೇಕಿರದ ಒಂದೆ ಥರದ ಒದರಾಟಗಳು

ಯಾವ ತುಂಟ ಚಳಿಗಾಲವೂ ಮರಗಟ್ಟಿಸಲಾಗದು
ಎಂಥಾ ಜೋಬದ್ರ ಬೇಸಗೆಯೂ ಬಾಡಿಸಲಾಗದು
-ಈ ಗುಲಾಬಿತೋಟದ ಗುಲಾಬಿಗಳು ಬರೆ ನಮ್ಮವು ಮಾತ್ರ

ಈ ಅರ್ಪಣೆ ಬಾಕಿ ಇತರರ ಓದಿಗೆ
ಜಾಹೀರುಮಾಡಿ ಅರುಹಿದ ಗುಟ್ಟಿನ ಮಾತುಗಳು
ಇದೋ ನಿನಗೆ.

-ಟೀನಾ

*******

ನನ್ನಾಕಿಗೊಂದರ್ಪಣೆ

ಅನಂತತೆಯ ಈ ಮುದವು ಅವಳಿಗೆ ಮುಡಿಪು
ನಾವು ಕಣ್ತೆರೆಯುವ ವೇಳೆಯಲಿ ನನ್ನೀ ಭಾವಗಳನು ತೀವ್ರವಾಗಿಸುವ
ಸುಖದ ಗಳಿಗೆಗಳಲಿ ಲಯಗೊಳ್ಳುವ ಹೃದಯದ ಸ್ವತಂತ್ರ ಬಡಿತಗಳ,
ಉಸಿರಲೂ ಒಂದಾಗುವ.
ದೇಹದ ಘಮ ಅದಲುಬದಲಾದ ಪ್ರೇಮಿಗಳ
ಮಾತಿಲ್ಲದೆಯೂ ಒಂದೇ ವಿಚಾರ ಮಾಡುವ,
ಅರ್ಥವ ಬೇಡದೇ ಒಂದೇ ಮಾತನು ತೊದಲುವ...

ಕೊರೆಯುವ ಚಳಿಗಾಳಿಯೂ ನಲುಗಿಸದು
ಎಂತಹ ಕಡುಬಿಸಿಲೂ ಬಾಡಿಸದು
ನಮ್ಮದೇ ಕೇವಲ ನಮ್ಮದೇ ಆದ ಹೂದೋಟದ ಗುಲಾಬಿಗಳನು

ಇತರರು ಓದಲೆಂದೇ ಈ ಅರ್ಪಣೆ:
ನಿನಗಾಗಿ ನನ್ನಲ್ಲಿರುವ ಆಪ್ತ ಭಾವಗಳು ಬಹಿರಂಗವಾಗಲೆಂದು

-ಎಮ್.ಡಿ


*******

ಹೆಂಡತಿಗೊಂದು ಅರ್ಪಣೆ

ಅವಳೇ ಕಾರಣ ಈ ನಲಿಯುವ ಖುಷಿಗೆ
ನಮ್ಮ ಎಚ್ಚರದ ಗಳಿಗೆಗಳಲ್ಲಿ ನನ್ನ ಇಂದ್ರಿಯಗಳ ಬಡಿದೆಬ್ಬಿಸುವ
ನಿದ್ರಾ ಕಾಲದಲ್ಲಿ ನಮ್ಮ ವಿರಮಿಸುವ ಲಯವ ಕಾಪಾಡುವ
ಒಂದಾಗಿ ಉಸಿರಾಡುವ
ಪ್ರಣಯಿಗಳು ಪರಸ್ಪರ ದೇಹ ಗಂಧವನು ಆಘ್ರಾಣಿಸುವ
ಮಾತಿಲ್ಲದೆಯೇ ಒಂದೇ ಕುರಿತು ಆಲೋಚಿಸುವ
ಅರ್ಥದ ಹಂಗಿಲ್ಲದೆಯೇ ಒಂದೇ ಮಾತು ಗಳಹುವ

ಯಾವ ಶಿಶಿರದ ಕೊರೆಯುವ ಚಳಿಯೂ ಮುದುಡಿಸದ
ಯಾವ ಸುಡುವ ಸೂರ್ಯನೂ ಬಾಡಿಸದ
ಗುಲಾಬಿ ತೋಟದ ಎಲ್ಲ ಗುಲಾಬಿಗಳೂ ನಮ್ಮದೇ, ನಮ್ಮದು ಮಾತ್ರವೇ

ಆದರೆ ಈ ಅರ್ಪಣೆ ಇತರರ ಓದಿಗಾಗಿ
ಇವು ನಿನಗಾಗಿ ಬಹಿರಂಗವಾಗಿ ಹೇಳಿದ ಖಾಸಗೀ ಮಾತುಗಳು

ಇಂಗ್ಲಿಷ್ ಮೂಲ: ಟಿ.ಎಸ್.ಎಲಿಯೆಟ್
ಕನ್ನಡಕ್ಕೆ: ಪ್ರತಿಭಾ ನಂದಕುಮಾರ್

*******

ಮೂಲ ಕವಿತೆ

A DEDICATION TO MY WIFE

To whom I owe the leaping delight
That quickens my senses in our wakingtime
And the rhythm that governs the repose of our sleepingtime,
the breathing in unison.
Of lovers whose bodies smell of each other
Who think the same thoughts without need of speech,
And babble the same speech without need of meaning...

No peevish winter wind shall chill
No sullen tropic sun shall wither
The roses in the rose-garden which is ours and ours only

But this dedication is for others to read:
These are private words addressed to you in public

 

ಪುಟದ ಮೊದಲಿಗೆ
 
Votes:  3     Rating: 3.67    
 
 
ಸಂಬಂಧಿಸಿದ ಲೇಖನಗಳು
  ಯಡಿಯೂರಪ್ಪನವರು ಬೀದರಿಗೆ ಬಂದ ವೃತ್ತಾಂತವು
  ಧಾರಾಳ ಮಾತು ನಮಗೇ ಆಪತ್ತು!
  ಏಳು ಕಲಾವಿದೆಯರ ಏಳು ವರ್ಣಗಳು
  ರಾಮ ಭಕ್ತ ಹನುಮನೋ, ಹನುಮ ಭಕ್ತ ರಾಮನೋ
  `ಅಲ್ನೋಡಿ ಕಲೀರಿ' ಅಂದ್ರೇನು ದರ್ಶನ್?
  ಹುಲ್ಲಿನ ಮೇಲೆ ಕೂತ ಹುಡುಗ ರಾಮುಲು
  ಜಾಗತೀಕರಣ ನೀತಿಕಥಾ-6: ಗುರುಚರಿತೆ
  ನ್ಯೂಯಾರ್ಕ್ ಜಿಮ್ ಬಳ್ಳಾರಿ ದೇವರ ನೋಡಲು ಬಂದ ಕಥೆ!
  ಶಿಕ್ಷಣ ಮೀಸಲು ನೀತಿಯನ್ನು ನೀವೂ ಬೆಂಬಲಿಸಿ
  ಯೋಗರಾಜ್ ಭಟ್ ಬರೆದ `ಪಂಚರಂಗಿ' ಕವಿತೆಗಳು
  ನೋವೆಂದರೆ ಅಳು ಮಾತ್ರವೇ? :ಹರೀಶ್ ಬರಹ
  ರಾಖೀ ಹಬ್ಬದ ದಿನ ವಿಲಾಸಣ್ಣನ ನೆನಪು
  ಭಿಕ್ಷುಕರು ಮತ್ತು ಸಾಹಿರ್ ಸಾಲುಗಳು: ದಿವಾಕರ್ ಬರಹ
  ಕನ್ನಡ ಯುವ ಬರಹಗಾರರಿಗೆ ಟೊಟೊ ಪುರಸ್ಕಾರ
  ಕನ್ನಡದ ಜಗನ್ಮೋಹಿನಿ ಹರಿಣಿಯೊಂದಿಗೆ ಒಂದಷ್ಟು ಹರಟೆ
  ಪೆಜತ್ತಾಯ ಬರೆದ ತ್ರಿಚಕ್ರಿ ಗೋವಿಂದ ಭಟ್ಟರ ಕಥೆ
  ಜಾಗತೀಕರಣ ನೀತಿಕಥಾ-5: ಕಲ್ಲು ಸಿಕ್ಕರೆ ಕೊಳ್ಳಿರೋ...
  ಏನೂ ನನ್ನದಲ್ಲವೆಂಬ ಸ್ವಾತಂತ್ರ್ಯ:ನಾಗಶ್ರೀ ನಂಬಿರುವುದು
  ಸ್ವಾತಂತ್ರ್ಯ ಅಂದ್ರೆ ಏನು?:ಸುಶ್ರುತ ಕೇಳಿದ ಪ್ರಶ್ನೆಗಳು
  ಮೆಟ್ರೋ ಬದಿಯಲ್ಲೇ ಮಲ್ಲಿಗೆ ದಂಡೆಯ ಪರಿಮಳ
  ಗುಬ್ಬಚ್ಚಿಗಳಿಗೆ ಸ್ವಾತಂತ್ರ್ಯದ ಕಾಳು: ಹೇಮಾ ಬರಹ
  ಸ್ವಾತಂತ್ರದ ಮೊದಲ ಕ್ಷಣಗಳು:ಅಯ್ಯಂಗಾರ್ ನೆನಪುಗಳು
  ಕೆಂಡಸಂಪಿಗೆ ಕಮೆಂಟಿಗರು ಮೊನ್ನೆಯಿಂದಲೇ ಸ್ವತಂತ್ರರು!
  ಹಳ್ಳಿ ಹೈಕಳಿಗೆ ಬೇಡದ ಕನ್ನಡ ಶಾಲೆ: ಪೆಜತ್ತಾಯ ಚಿಂತನೆ
  ಅನು ಪಾವಂಜೆ ಬರೆದ ಅಜ್ಜನ ಮನೆಯ ನೆನಪುಗಳು
  ಒಬ್ಬ ಅತಿಸಾಮಾನ್ಯನ ಗೊಣಗಾಟ : ಸುದರ್ಶನ್ ಬರಹ
  ಮುಂಬೈನ ಮಂಕಿ ಬ್ರಿಡ್ಜ್ ನಲ್ಲೊಬ್ಬ ಪತಿತ ಪಾವನ ತಿರುಕ
  ಗ್ರೆಗರಿಯವರ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಾರೆ?
  ಅಮೇರಿಕಾ ದೇಶದ ಅಂಗಳದ ಅಂಗಡಿಗಳು
  ಗವಾಕ್ಷಿಯಲ್ಲಿ ಬಂದಿರುವ ಡಬ್ಬಿಂಗ್ ಪಿಶಾಚಿ!
  ಮಹಾನುಭಾವ ಬಿ.ಆರ್.ಪಂತುಲು:ಬಸವರಾಜು ಬರಹ
  ನಾನೂ ಲಾಂಗ್ ಜಂಪ್ ಹಾರಿದೆ: ಆರ್.ಜಿ.ಭಟ್ ಬರಹ
  ಆಸ್ಟ್ರೇಲಿಯಾ ಪತ್ರ: ದೇವರ ನಂಬದ ಸ್ತ್ರೀ ಪ್ರಧಾನಿ
  ತೆಂಗಿನ ಜುಟ್ಟೂ ತಮ್ಮನ ಜುಟ್ಟೂ: ಪರೀಕ್ಷಿತಾ ಬರಹ
  ಸ್ಯಾನ್ ಬಾರ್ನ್ ಪ್ರಾಯೋಗಿಕ ಕೃಷಿ ಕ್ಷೇತ್ರ: ವೆಂಕಟೇಶ್ ಬರಹ
  ಸವಣೂರಿನ ಭಂಗಿಗಳು ತೋರಿಸಿದ ಸತ್ಯಗಳು
  ಗ್ರೆಗರಿ ಕಳಕೊಂಡದ್ದು,ಎಂ ಆರ್ ಪಿ ಎಲ್ ಕಳೆದುಕೊಂಡದ್ದು
  ನಾರೀಕೇರಳ...ಮಳೆ,ಸುದ್ದಿರಾಜಕೀಯ:ಕನಕ ಬರಹ
  ಜಾಗತೀಕರಣ ನೀತಿಕಥಾ- ಕತೆಯೆಂಬ ಕತೆ
  ಇಟ್ಟಿಗೆ ಮಣ್ಣಿನ ರಾಶಿಯ ಮುಂದೆ..:ಲಕ್ಷ್ಮಿ ಕುಡ್ಲ ಬರಹ
  ಅಕ್ರಮ ಗಣಿ ಕಂಡರೂ ನಾವು ಯಾಕೆ ಕುರುಡರು?
  ಮಂಗಳೂರಲ್ಲಿ ಪತ್ರಾವೋ ಉಪವಾಸ ಕುಂತಿದ್ದರು...
  ಗ್ರೆಗರಿ ಪತ್ರಾವೊಗಾಗಿ ವೈದೇಹಿ ಮೊರೆ
  ಗ್ರೆಗರಿ ಪತ್ರಾವೋ ಮನೆಗೆ ಜೆ.ಸಿ.ಬಿ. ಎರಗಿದ ಕಥೆ
  ಅರವತ್ತರ ಉಲ್ಲಾಸದಲ್ಲಿ ನಸೀರುದ್ದೀನ್ ಷಾ: ಬಸು ಬರಹ
  ಜಾಗತೀಕರಣ ನೀತಿಕಥಾ 3: ಸಿಐಡಿ ಹೇಳಿದ ಕತೆ
  ಆಸ್ಟ್ರೇಲಿಯಾ ಓಲೆ: ಓದಲು ಬಂದು ತಾಯಾದವರ ಕಥೆ
  ಗಣಿಯಿಂದ ಹೊರಬರುತ್ತಿರುವ ದುರ್ನಾತಗಳು
  ಆಳುವವರೂ,ಆಳಿಸಿಕೊಳ್ಳುವವರೂ,ಪ್ರಜಾಪ್ರಭುತ್ವವೂ....
  ಈ ಗೋಕಾಕ್ ಎಂದರೆ ಯಾರು? ಹೃಷಿಕೇಶ್ ಬರಹ
  ಫುಟ್ಬಾಲ್, ಮಂಡೇಲಾ ಮತ್ತು ಒಂದು ಕವಿತೆ
  ಅಹಲ್ಯೆಯಾಗಬೇಕಿದ್ದವಳು ಏಡಿ ಹಿಡಿದದ್ದು....
  ರಾಧಜ್ಜಿ ಸೀಕರ್ಣೆ ಬೇಡಾ ಅಂದ ಕಥೆ
  ಬದಲಾದ ಕಾಲಮಾನ: ರಾಜೇಶ್ವರಿ ತೇಜಸ್ವಿ ಬರಹ
  ಈ ಪೈಶಾಚಿಕತೆಗೆ ಕೊನೆಯೇ ಇಲ್ಲವೇ?