ಫೆಬ್ರವರಿ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಅತಿಥಿ ಸಂಪಾದಕೀಯ: ಹೊರಗೆ ಕೂತು ಕನ್ನಡದಲ್ಲಿ ಬರೆಯುವುದು    
ಸುದರ್ಶನ್
ಶನಿವಾರ, 4 ಜುಲೈ 2009 (06:49 IST)
ಅವರ ಕಣ್ಣಲ್ಲಿ, ನಮ್ಮ ಕಣ್ಣೆಲ್ಲಿ?
ದೇಶದ ಹೊರಗೆ ಕೂತು ಕನ್ನಡದಲ್ಲಿ ಬರೆದ ಮೇಲೆ, ಇದರಲ್ಲೇನೂ ಇಲ್ಲವಲ್ಲ ಅನಿಸಿ ಹಲವು ಸಲ ಪಕ್ಕಕ್ಕೆ ಇಟ್ಟಿದ್ದಿದೆ. ಏಕೆಂದರೆ ಎಲ್ಲೇ ಕೂತು ಏನೇ ಬರೆದರೂ ಮಹಾನ್ ದರ್ಶನವಲ್ಲದಿದ್ದರೂ, ಬದುಕಿನ ಹೊಸ ಪದರವೋ, ಹೊಸ ಪರಿಸರವೋ ತೆರೆದುಕೊಳ್ಳುವಂತಿದೆ ಅನಿಸುವುದು ಕನಿಷ್ಟ. ಈಗೀಗ ನನ್ನಂತವರು ಹೊರಗೆ ಕೂತು ಕನ್ನಡದಲ್ಲಿ ಬರೆಯುವುದು ಹೆಚ್ಚಿದೆ. ಅದಕ್ಕೆ ಸ್ವಂತ ಬ್ಲಾಗುಗಳೂ, ಜಾಲತಾಣಗಳೂ ಹಲವಿವೆ. ಮುಂಚೆಂದಿಗಿಂತಲೂ ಹೆಚ್ಚು ಕನ್ನಡದ ಓದಿಗೆ ಅವು ಸಿಗುತ್ತಿವೆ. ಇವನ್ನೆಲ್ಲಾ ಮೀರಿ ನೋಡಬೇಕಾದ ಗಳಿಗೆಯೂ ಬಂದಿದೆ.

ನನ್ನ ಅಜ್ಜಿ ತಾತ ದಕ್ಷಿಣ ಕನ್ನಡದಿಂದ ಬೆಂಗಳೂರಿಗೆ ಗುಳೆಬಂದವರು. ಹೊಟ್ಟೆ ಪಾಡು, ಹೊಸ ಅವಕಾಶ ಎಲ್ಲವೂ ಅದಕ್ಕೆ ಕಾರಣವಿದ್ದಿರಬೇಕು. ಬೆಂಗಳೂರಿನ "ಹೌದು ರೀ, ಇಲ್ಲಾ ರೀ" ಎಂದು ಎಲ್ಲಕ್ಕೂ ರೀ ಸೇರಿಸುವ ರೀತಿಯನ್ನು ನನ್ನಜ್ಜಿ ಆಡಿಕೊಂಡು ನಗುತ್ತಿದ್ದುದು ನೆನಪಾಗುತ್ತಿದೆ. ಹೋಟೆಲಿಟ್ಟು, ಮಕ್ಕಳನ್ನು ಬೆಳೆಸಿ, ಓದಿಸಿ, ಹೋಟಲು ಮುಚ್ಚಿ, ಕಡೆಗೆ ಊರಿನ ಆಸ್ತಿಯನ್ನು ಮಾರಬೇಕಾದಾಗ ಗಳಗಳನೆ ಅತ್ತದ್ದು ನೆನಪಾಗುತ್ತಿದೆ. ಅವರ ಮಕ್ಕಳು ಅಮೆರಿಕಾಕ್ಕೂ, ನಾನು ಆಸ್ಟ್ರೇಲಿಯಕ್ಕೂ ಹೊರಟಾಗ ನನ್ನಜ್ಜಿ ತಾತ ಏನೋ ಕಳಕೊಂಡವರಂತೆ ಅಳುತ್ತಲೇ ಬೀಳ್ಕೊಟ್ಟದ್ದು ನೆನಪಾಗುತ್ತಿದೆ. ನನ್ನಪ್ಪನೂ ಕೆಲಸದ ಪತ್ರ ಹಿಡಿದು ಬಂದಿಳಿದಾಗ ಬೆಂಗಳೂರಿನ ವಲಸಿಗರಲ್ಲಿ ಒಬ್ಬರಾದುದು ನೆನಪಾಗುತ್ತಿದೆ. ಮುಂದೆ ಮದುವೆಯಾಗಿ, ಸಂಸಾರ ಹೂಡಿ, ನಮ್ಮನ್ನು ಬೆಳೆಸಿ, ಓದಿಸಿ ನಾವು ಅಲ್ಲಿಂದ ವಲಸೆ ಹೋಗುವುದಕ್ಕೆ ಸಿದ್ಧಮಾಡಿದುದೂ ಮರೆಯುವಂತದ್ದಲ್ಲ.

ಮನುಷ್ಯನ ಚರಿತ್ರೆಯ ಅತಿ ಹಳೆಯ ಪುಟದಿಂದಲೂ ನಾವು ವಲಸೆ ಹೋಗುತ್ತಿದ್ದೇವೆ. ಹೊಸ ಜಾಗದಲ್ಲಿ ಬೇರುಬಿಡುತ್ತಿದ್ದೇವೆ, ಬೇರೆಯವರ ಬೇರುಗಳೊಡನೆ ಬೆಸೆದುಕೊಳ್ಳುತ್ತಿದ್ದೇವೆ. ಆದರೆ ಹಿಂದಿನಂತೆ, ಹೋದವರು ಕಳೆದುಹೋಗದೆ ಬಿಟ್ಟ ತಾಯ್ನೆಲಕ್ಕೆ ಕೊಂಡಿ ಉಳಿಸಿ ಬೆಳೆಸಿಕೊಳ್ಳುತ್ತಿದ್ದೇವೆ. ಇದು ಮಾತ್ರ ಹೊಸದಿರಬಹುದು. ಅದಕ್ಕೆ ನಮಗೀಗ ಇರುವ ಸಾಧನಗಳು ನೆರವಿಗೆ ಬರುತ್ತಿವೆ ಕೂಡ.

ಹಿಂದೊಮ್ಮೆ ಬೆಂಗಳೂರಿನ ಬಟ್ಟೆ ಅಂಗಡಿ ಒಂದರಲ್ಲಿ ಒಬ್ಬ ಹರೆಯದ ಸೇಲ್ಸ್ ಹುಡುಗ ಸಿಕ್ಕಿದ್ದ. ಆಸ್ಟ್ರೇಲಿಯದಿಂದ ಬಂದವನೆಂದು ಗೊತ್ತಾದೊಡನೆ ನನ್ನ ಬೆನ್ನಿಗೆ ಬಿದ್ದಿದ್ದ. ತಮಿಳು ಮಿಶ್ರಿತ ಹರಕು ಮುರುಕು ಕನ್ನಡ ಮಾತಾಡುತ್ತಿದ್ದ. "ನನ್ನನ್ನು ಆಸ್ಟ್ರೇಲಿಯಕ್ಕೆ ಕರೆಸಿಕೊಂಡುಬಿಡಿ. ನಿಮಗೆ ಭಾರವಾಗುವುದಿಲ್ಲ." ಎಂದು ದುಂಬಾಲು ಬಿದ್ದಿದ್ದ. ಅಂಗಡಿಯ ಹೊರಗೂ ಅಷ್ಟು ದೂರ ಬಂದು ತನ್ನ ಕತೆಯನ್ನು ಹೇಳಿಕೊಂಡಿದ್ದ. ಅದೆಲ್ಲಾ ಅಷ್ಟು ಸುಲಭವಲ್ಲ ಮಾರಾಯ ಎಂದು ಎಷ್ಟು ಹೇಳಿದರೂ "ಅಲ್ಲಿಗೆ ಬಂದಿಳಿದೊಡನೆ ಕಾಣೆಯಾಗಿಬಿಡುತ್ತೇನೆ" ಎಂದ. "ನೋಡಪ್ಪ ನಂತರ ನಾವಿಬ್ಬರೂ ಜೈಲಿನ ಕಂಬಿ ಎಣಿಸಬೇಕಾಗುತ್ತದೆ" ಎಂದು ಹೇಳಿ "ಏನಾದರೂ ಓದು, ಕೆಲಸ ಹುಡುಕು ಆಮೇಲೂ ದೇಶ ಬಿಡಬೇಕು ಅನಿಸಿದರೆ ಅವಕಾಶಗಳು ಇರುತ್ತವೆ ಆತುರ ಪಡಬೇಡ." ಎಂದು ಸಮಾಧಾನ ಮಾಡಿ ಕಳಿಸಿದ್ದೆ.

ತಮಿಳುನಾಡಿನ ಯಾವುದೋ ಊರಿಂದ ಹೊಟ್ಟೆಪಾಡಿಗೋ, ಹೊಸ ಅವಕಾಶ ಹುಡುಕಿಕೊಂಡೋ ಬಂದಿರುವ ಅಂತವನು ಎಲ್ಲೆಲ್ಲೂ ಸಿಗುತ್ತಾರೆ. ಇಂದಿನ ಬೆಂಗಳೂರಿನ ತುಂಬಾ ಅಂತವರು ಇದ್ದಾರೆ. ಐಟಿ-ಬಿಟಿ ಗದ್ದಲದಲ್ಲಿ ಒಂದು ಕಾಲದಲ್ಲಿ ಮುಂಬೈಗೆ ಹೋದ ಹಾಗೆ ಈಗ ಬೆಂಗಳೂರಿಗೆ ದೇಶದ ಮೂಲೆ ಮೂಲೆಯಿಂದ ವಲಸಿಗರು ಬಂದು ನೆಲೆಗೆ ತಡಕಾಡುತ್ತಿದ್ದಾರೆ. ಕೆಲವರು ಗೆಲ್ಲುತ್ತಾರೆ. ಕೆಲವರು ಸೋಲುತ್ತಾರೆ. ಕೆಲವರು ಹಿಂದಿರುಗುತ್ತಾರೆ. ಇದು ಊರು ಬಿಟ್ಟ ನಮ್ಮೆಲ್ಲರ ಕತೆ.

ಸಿಡ್ನಿಯ ಒಪೇರಾ ಹೌಸ್ ನಲ್ಲಿನ ಸೂರ್ಯಾಸ್ತಆಸ್ಟ್ರೇಲಿಯದ ಹಲವು ವಿಶ್ವವಿದ್ಯಾಲಯಗಳು ಪ್ರತಿ ವರ್ಷ ವಲಸಿಗರ ಬರವಣಿಗೆಯ ಸಂಕಲನವನ್ನು ಹೊರತರುತ್ತವೆ. ಅದರಲ್ಲಿ ಗುಳೆ ಬಂದವರ ಬಹು-ಸಂಸ್ಕೃತಿಯನ್ನು ಬಿಂಬಿಸುವ ಬರಹಗಳಲ್ಲದೆ, ಅವರು ಆಸ್ಟ್ರೇಲಿಯವನ್ನು ನೋಡುವ ರೀತಿಯ ಬಗ್ಗೆ ಅಪಾರ ಕುತೂಹಲವಿರುತ್ತದೆ. ಈಸ್ಟ್-ಯೂರೋಪಿಯನ್ನರಿಂದ ಹಿಡಿದು ಮಿಡ್ಲ್-ಈಸ್ಟ್, ಇಂಡಿಯ ಉಪಖಂಡ, ಏಶಿಯಾದ ಎಲ್ಲ ಕಡೆಯವರಿಂದಲೂ ಬರಹಗಳಿರುತ್ತವೆ. ಹಳೆಯ ಆಸ್ಟ್ರೇಲಿಯನ್ನರನ್ನು ಹೊಸದಾಗಿ ಬಂದವರು ಹೇಗೆ ನೋಡುತ್ತಾರೆ, ಇಂಗ್ಲೀಷನ್ನು ಹೇಗೆಲ್ಲಾ ಜಗ್ಗಿಸಿ ಬಗ್ಗಿಸುತ್ತಾರೆ ಎಂಬುದೂ ಅಲ್ಲಿಯ ಒಂದು ವೈಶಿಷ್ಟ್ಯ.

ಕನ್ನಡ ನೆಲದಲ್ಲಿ ಬಂದು ನೆಲೆಯೂರಿ, ಬೇರು ಬಿಟ್ಟು, ನಂತರ ಕನ್ನಡದಲ್ಲಿ ನಮ್ಮ ಹಾಗೇ ಬರೆಯುವವರು ನಿಮಗೆ ಹಲವರು ಸಿಗುತ್ತಾರೆ. ಆದರೆ ಹೊಸದಾಗಿ ಬಂದವರು, ಕನ್ನಡ ನೆಲಕ್ಕಿನ್ನೂ ಹೊಂದಿಕೊಳ್ಳದವರು, ನಮ್ಮನ್ನು ಫ್ರೆಶ್ ಆಗಿ ನೋಡುವವರು ನಮ್ಮ ಬಗ್ಗೆ ಏನಂದುಕೊಳ್ಳುತ್ತಾರೆ, ಏನನ್ನುತ್ತಾರೆ ಎಂಬುದೂ ದಾಖಲಾಗಬೇಕಲ್ಲವೆ? ಅದರಲ್ಲಿ ನಮ್ಮನ್ನು ನಾವೇ ಹೊಸದಾಗಿ ನೋಡಿಕೊಳ್ಳುವ ವಿಶಿಷ್ಟ ಸಂದರ್ಭ ಒದಗಿ ಬರುತ್ತದಲ್ಲವೆ? ಭಾಷೆ ಶುದ್ಧವಾಗಿರಬೇಕಾಗಿಲ್ಲ. ಆದರೆ ಬದುಕಿನ ಶುದ್ಧ ಕ್ಷಣಗಳು, ಒಳನೋಟಗಳು ಕಾಣ ಸಿಗುತ್ತವಲ್ಲವೆ? ಹರಕು-ಮುರುಕು ಕನ್ನಡವಾದರೂ ನಮ್ಮ ನೆಲ, ನಮ್ಮ ನಡವಳಿಕೆ ಅವರಿಗೆ ಹೇಗೆ ಕಾಣುತ್ತವೆ ಎಂಬ ಕುತೂಹಲ ನಮಗಿರಬೇಕಲ್ಲವೆ? ನಾಡು ನುಡಿಯ ರಾಜಕೀಯದ ಬೇಲಿಯನ್ನು ಮೀರಿ ಈ ಕೆಲಸ ಆಗಬೇಕಲ್ಲವೆ? ಹೊರಗೆ ಹೋಗಿ ಅನಿವಾಸಿಗಳಾಗಿ ಬರೆಯುವ ಕನ್ನಡಿಗರ ಬಗ್ಗೆಗಿನ ಕುತೂಹಲದಷ್ಟೇ, ನಮ್ಮ ನಡುವಿನ ಅನಿವಾಸಿ ಬದುಕಿನ ತವಕ ತಲ್ಲಣಗಳು ನಮಗೆ ದಕ್ಕುವುದು ಹೇಗೆ ಎಂದು ಯೋಚಿಸಬೇಕಾಗಿದೆ.
ಪುಟದ ಮೊದಲಿಗೆ
 
Votes:  7     Rating: 3.29    
 
 
ಸಂಬಂಧಿಸಿದ ಲೇಖನಗಳು
  ದೆಹಲಿಯ ಚಳಿಗೆಂದು ರೇಣುಕಾ ಬರೆದದ್ದು
  ಇಂಟರ್ ಸಿಟಿ ಟ್ರೈನಿನಲ್ಲೊಬ್ಬ ಕನ್ನಡ ಪುಸ್ತಕೋದ್ಯಮಿ
  ಸುದ್ದಿ ಮಾಧ್ಯಮಗಳು ಮತ್ತು ಹೊಣೆಗಾರಿಕೆ
  ಅವತಾರ ನೋಡಿ ವೈಶಾಲಿ ಬರೆದದ್ದು
  ಕ್ರಿಕೆಟಿನ ತವರುಮನೆಯ ಕಳವಳಗಳು: ಯೋಗೀಂದ್ರ ಬರಹ
  ಹಾರಲಾರದ ಹಕ್ಕಿ- ಒಂದು ಸೂಫಿ ಕಥೆ
  ನಿರ್ದೇಶಕ ಅಭಯಸಿಂಹರಿಗೆ ಪ್ರೇಕ್ಷಕ ಬರೆದ ಪತ್ರ
  ಮಹಾಲಿಂಗೇಶ್ವರ ಭಟ್ ಬರೆದ ಪ್ರೇಮ ಕವಿತೆ
  `ರಣ್' ಚಿತ್ರದಲ್ಲೂ ಸತ್ಯ ಸತ್ತಿಲ್ಲವೆ?
  ಪ್ರೇಮಶೇಖರರ `ಕನ್ನಡಿ' : ಭಾನುವಾರ ದೆಹಲಿಯಲ್ಲಿ ಬಿಡುಗಡೆ
  ರಾಷ್ಟ್ರಪ್ರಶಸ್ತಿಯ ಗುಬ್ಬಚ್ಚಿಗಳು : ಅಭಯಸಿಂಹ ಬರಹ
  ಕುಸುಮ ರೋಗವೂ ಟೀವಿ ಸ್ಟೋರೀನೂ: ಪ್ರಿಯಾ ಬರಹ
  ‘ಇವಳನ್ನು ಹುಚ್ಚಿ ಎಂದು ಒಪ್ಪಲಾರೆ' : ಗಂಗಾಧರಯ್ಯ ಬರಹ
  ಗಣರಾಜ್ಯೋತ್ಸವ ಮತ್ತು ದೇವನೂರು: ಒಂದು ಮಾತುಕತೆ
  ಗಣ ರಾಜ್ಯೋತ್ಸವ ಸ್ಪೆಷಲ್- ಆರು ದಶಕಗಳ ಗಣತಂತ್ರ
  ಲಂಕೇಶರ ಲಘು ಕಥಾಪ್ರಸಂಗಗಳು- ಬಸವರಾಜು ಬರಹ
  ಲಂಕೇಶರ ಲಘು ಕಥಾಪ್ರಸಂಗಗಳು- ಬಸವರಾಜು ಬರಹ
  ಈಗ ವಿಷ್ಣು ಇಲ್ಲ; ಮಾರ್ಕೆಟ್ ಇದೆ
  ಮಗನಿಗೇ ಶಿಷ್ಯನಾದ ಓಶೋರ ತಂದೆ- ರಾಘು ಬರಹ
  ಫೇಸ್ಬುಕ್ಕಲ್ಲಿ ಇಲ್ಲ ಅಂದ್ರೆ ಬದುಕೀನೇ ಇಲ್ವಾ?
  ತಿರುಮಲೇಶ್ ಅನುವಾದಿಸಿದ ಬ್ರೌನಿಂಗ್ ಕವಿತೆ
  ಕಾಮ್ರೇಡ್ ನೀಲಾ ಕಂಡ `ಕೆಂಪು ಬಸುದಾ'
  ಚಾಮಯ್ಯ ಮೇಷ್ಟರೂ ಹೋಗಿಬಿಟ್ಟರು
  ಕಣ್ಣುಮುಚ್ಚಿದ ಕಾಮ್ರೇಡ್ ಬಸು- ಅನಂತಮೂರ್ತಿ ಹೇಳಿದ್ದು
  ಭಾನುವಾರದ ವಿಶೇಷ- ಸಂಧ್ಯಾದೇವಿ ಬರೆದ ಕವನ ಕಥನ
  ಹೈಟಿಯಲ್ಲಿ ಕೊಲೆಗಡುಕಿ ವಸುಂಧರೆ
  `ಗೌಡ್ರು ಬಯ್ದಿದ್ದು ಒಂದ್ಸಲ... ಆದರೆ ನೀವು?'
  ಸಂಕ್ರಾಂತಿಯ ನೆಪದಲ್ಲಿ ಕಿರಂ ಸಿಟ್ಟು
  ಪಟೇಲ್ ಮಂಜಯ್ಯನವರು ಮೊಮ್ಮಗಳಿಗೆ ಬರೆದ ಪತ್ರ
  ಕನ್ನಡದ ಪಾಪುಗೆ 90 ವರ್ಷ
  ಕೆಟ್ಟ ಮಾತಾಡಿ ಗಮನ ಸೆಳೆದ ಗೌಡರು
  ಒಂದು ಮಂದಹಾಸದಂತೆ ಮತ್ತೆ ಕೆಂಡಸಂಪಿಗೆ
  ಸಂಕ್ರಾಂತಿಯ ಕಂಪಿಗೆ ಮತ್ತೆ ಕೆಂಡಸಂಪಿಗೆ
  ಪರಮಾಣು ವಿದ್ಯುತ್ ಪರಿಸರ ಸ್ನೇಹಿಯೇ?
  ಸ್ವರ್ಗದ ಬಾಗಿಲು: ಒಂದು ಸೂಫಿ ಕಥೆ
  ಕರುನಾಡ ಕಲಾವಿದನಿಗೆ ಸಿಂಗಪುರದಿಂದ ಮೂರ್ತಿ ಬರೆದ ಪತ್ರ
  ಫೇಸ್ ಬುಕ್ಕಿನಲ್ಲಿ ಗೊರಿಲ್ಲಾ ಗೆಳೆಯರು
  ಯುರೋಪ್ ಪ್ರವಾಸದ ಕಸಾನುಭೂತಿ
  ಎಡಚರಿಗೊಂದು ಸಂತಸದ ಹೊಸ ಚಡ್ಡಿ
  ‘ಮಾನ್ಸೆಂಟೋ’ ಅವಾಂತರಗಳು: ಒಂದು ಸಾಕ್ಷ್ಯಚಿತ್ರ
  ಮುಕುಂದ ಜೋಶಿ ಅನುವಾದಿಸಿದ ಹಿಂದಿ ಕವಿತೆ
  ಗೂಗಲ್ ಗೆ ಚೀನಾದಲ್ಲಿ ಗಿರಾಕಿಗಳೇ ಇಲ್ಲ
  ಅಹೋಬಲ ಶಂಕರರ ಕುರಿತು ಉಮಾ: ಇನ್ನಷ್ಟು
  ನಾನು ಕಂಡ ಅಹೋಬಲ ಶಂಕರ: ಉಮಾ ಸಂಪಾದಕೀಯ
  ಬಿಜೆಪಿಗೆ ಜಿನ್ನಾ ಎಂಬ ‘ಜಿನ್ನು’ ಹಿಡಿದಿದೆಯೇ?
  ಧಾರವಾಡದ ಕರ್ನಾಟಕ ಇತಿಹಾಸ ಸಂಶೋಧನ ಮಂಡಲ: ಒಂದು ಪರಿಚಯ
  ಸೂಫಿ ಕಥೆ: ‘ಬಗ್ದಾದಿಗೆ ಬಂದ ಮೃತ್ಯು ದೂತ’
  ಎತ್ತರದ ಹುಡುಗನ ಕಷ್ಟಗಳು
  ರಾಮಚಂದ್ರ ದೇವ ಬರೆದ ಒಂದು ಹಳೆಯ ಕವಿತೆ
  ಇನ್ನು ನಾವು ಬಲ್ಬಿಗೆ ವಿದಾಯ ಹೇಳಬಹುದೇ?
  ನೂರಏಳರ ಅಜ್ಜಿಗೆ ಇಪ್ಪತ್ಮೂರನೇ ಮದುವೆಯಾಗುವಾಸೆ!
  ಅನುಪಮಾ ಅನುವಾದಿಸಿದ ನಾಮದೇವ್ ಕವಿತೆ
  ಚೀನಾ: ದುಡಿವವರ ಕೈಗೆ ಅಂತರ್ಜಾಲ ಬಲ
  ಉಮಾ ಸಂಪಾದಕೀಯ:ತಿಮ್ಮಯ್ಯನೂ, ರಾಮಾಗಳೂ,ಲಿಂಗ ಲೆಕ್ಕಾಚಾರಗಳೂ
  ನಗರದ ದೃಶ್ಯಗಳು, ಕಾಡಿನ ಸದ್ದುಗಳು: ರಾಜೇಶ್ವರಿ ಬರಹ