ಫೆಬ್ರವರಿ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಅತಿಥಿ ಸಂಪಾದಕೀಯ: ಹಾಡು ಹಕ್ಕಿಗೂ ಬೇಕೆ ಆಡಂಬರ?    
ಸುದರ್ಶನ್
ಶುಕ್ರವಾರ, 17 ಜುಲೈ 2009 (08:25 IST)
ಸಂಗೀತ ಗೋಷ್ಟಿಯೊಂದರಲ್ಲಿ ಸಂಗೀತಾ ಕಟ್ಟಿ

ನಮ್ಮ ಪ್ರತಿಕ್ರಿಯೆಗಳು ನಮಗೇ ಫ್ಯನಾಟಿಕ್ ಅನಿಸಿದಾಗ ತುಸು ತಡೆದು ಯೋಚಿಸುವುದು ಒಳ್ಳೆಯದು. ನಾನು ನಿಜವಾಗಿಯೂ ತೀವ್ರವಾದಿಯಾಗಿ ಪ್ರತಿಕ್ರಿಯಿಸುತ್ತಿದ್ದೇನೆಯೇ ಎಂದು ಕೇಳಿಕೊಳ್ಳಬೇಕಾಗುತ್ತದೆ. ಕೆಲವು ಸಂದರ್ಭದಲ್ಲಿ ಫ್ಯನಾಟಿಕ್ ಆಗಬೇಕಾಗುತ್ತದೆ. ಆಗಿಯೂ ಮನಸ್ಸಿನ ಸ್ವಾಸ್ಥ್ಯ ಹಾಗು ಹದ ಉಳಿಸಿಕೊಳ್ಳಬೇಕಾಗುತ್ತದೆ. ಅಂತ ಒಂದು ಸಂದರ್ಭ ಇತ್ತೀಚೆಗೆ ಸಿಡ್ನಿಯಲ್ಲಿ ನನಗೆ ಒದಗಿಬಂದಿತ್ತು.

ಕನ್ನಡ ಸಂಘದ ಕಾರ್ಯಕ್ರಮಕ್ಕೆ ಕನ್ನಡದ ಹೆಸರಾಂತ ಗಾಯಕಿ ಶ್ರೀಮತಿ ಸಂಗೀತ ಕಟ್ಟಿ ಕುಲಕರ್ಣಿಯವರನ್ನು ಕರೆಸಿದ್ದರು. "ಅನ್ ಈವನಿಂಗ್ ಆಫ್ ಕನ್ನಡ ಮ್ಯೂಸಿಕ್" ಎಂದು ಪ್ರಚಾರವೂ ಮಾಡಿದ್ದರು. ಕಟ್ಟಿಯವರು ಮೊದಲಿಗೆ ಒಂದು ಗಂಟೆ ಕನ್ನಡದ ಭಜನೆ, ಭಕ್ತಿಗೀತೆ, ಭಾವಗೀತೆ ಹಾಗು ಜನಪದ ಗೀತೆಗಳನ್ನು ಹಾಡಿದರು. ಅವರು ಹಾಡಿದ ಬಗೆಯ ಕುರಿತು ಮುಂದೆ ಹೇಳುತ್ತೇನೆ. ಆದರೆ ನಂತರದ ನಾಲ್ಕು ಗಂಟೆಗಳು ಅವರು ಸಂಗೀತದ ರಾಗಗಳನ್ನು ಪಾಠ ಮಾಡುವ ಕಾರ್ಯಕ್ರಮವನ್ನು ಯಾರನ್ನೂ ಕೇಳದೇ ತಾವಾಗಿಯೇ ರೂಪಿಸಿಕೊಂಡಿದ್ದರಂತೆ. ಅದರಲ್ಲಿ ಒಂದಾದ ಮೇಲೊಂದರಂತೆ ಹಿಂದಿ ಚಲನಚಿತ್ರದ ಹಾಡುಗಳನ್ನು ಹಾಡುತ್ತಾ ಹೋದರು. ನಾವೊಂದಷ್ಟು ಜನ "ಕನ್ನಡ ಹಾಡು ಹಾಡಿ" ಎಂದು ಕೂಗಬೇಕಾಗಿ ಬಂತು. ಅದಕ್ಕೆ "ಮ್ಯೂಸಿಕ್ ಯ್ಯೂನಿವರ್ಸಲ್ ಲ್ಯಾಂಗ್ವೇಜ್, ಅದಕ್ಕೆ ಭಾಷೆಯ ಹಂಗಿಲ್ಲ" ಎಂದು ಭಾಷಣ ಬಿಗಿದರು. ಕನ್ನಡದ ಹಾಡು ಕೇಳುವುದು ಕೂಪಮಂಡೂಕತನ ಎಂಬಂತೆ ಮಾತಾಡಿದರು. ಅಲ್ಲಿದ್ದ ಕನ್ನಡದವರೆಲ್ಲಾ ಚಪ್ಪಾಳೆ ತಟ್ಟಿ ಅವರನ್ನು ಅನುಮೋದಿಸಿದರು. ಸರಿಹೋಯಿತು ಎಂದು ಎದ್ದು ಬರಬೇಕಾಯಿತು.

ಒಬ್ಬ ಕಲಾವಿದರಿಗೆ ತಾನು ಕೂತ ವೇದಿಕೆ, ಎದುರಿಗಿರುವ ಕೇಳುಗರ ಬಗ್ಗೆ ಇರಬೇಕಾದ ಮೂಲಭೂತ ಪ್ರಜ್ಞೆ ಹೇಗೆ ಕೆಲಸಮಾಡುತ್ತಿದೆ ಎಂದು ಅಚ್ಚರಿಯಾಯಿತು. ತಮಿಳು ಸಂಘದಲ್ಲಿ ನಾಕು ಗಂಟೆ ಹಿಂದಿ ಚಿತ್ರಗೀತೆ ಹಾಡಿ ಏಗಬಲ್ಲರೆ? ಅಥವಾ ಹಿಂದಿ ಸಂಘದಲ್ಲಿ ನಾಕು ಗಂಟೆ ಕನ್ನಡ ಚಿತ್ರಗೀತೆ ಹಾಡಿ ಏಗಬಲ್ಲರೆ? ಅಲ್ಲಿ "ಮ್ಯೂಸಿಕ್ ಯ್ಯೂನಿವರ್ಸಲ್ ಲ್ಯಾಂಗ್ವೇಜ್" ಎಂದು ಭಾಷಣ ಬಿಗಿದು ನಿಲ್ಲಬಲ್ಲರೆ ಎಂದು ಯೋಚಿಸುವಂತಾಯಿತು. ಕನ್ನಡ, ಹಿಂದಿ, ಕರ್ನಾಟಿಕ್, ಹಿಂದುಸ್ತಾನಿಗಳ ಸುತ್ತಲೇ ಗಿರ್ಕಿ ಹೊಡೆಯುವ ಇವರ ಸಂಗೀತದ ಯ್ಯೂನಿವರ್ಸಾಲಿಟಿಯ ಬಗ್ಗೆಯೂ ನಗು ಬಂದಿತು.

ನನ್ನ ಪುಟ್ಟ ಮಗಳು ಕಾರಿನಲ್ಲಿ ಬಾಬ್ ಮಾರ್ಲಿಯ "ನೋ ವುಮನ್ ನೋ ಕ್ರೈ" ಹಾಡನ್ನು ಕೇಳುತ್ತಾ ದನಿಗೂಡಿಸುವ ಹಾಗು ಹಿಂದುಸ್ತಾನಿ ಸಂಗೀತದ ಕ್ಲಾಸಿಗೆ ಹೋಗುವ ವಾಸ್ತವ ನಮ್ಮದು. ಸಿ.ಅಶ್ವತ್‌ರಷ್ಟೇ ಮುಖ್ಯವಾಗಿ (ಕೆಲವೊಮ್ಮೆ ಹೆಚ್ಚೇ ಮುಖ್ಯವಾಗಿ) ಅಪ್ಪಗೆರೆ ತಿಮ್ಮರಾಜು, ಪಿಚ್ಚಳ್ಳಿ ಶ್ರೀನಿವಾಸ್ ನಮಗೆ ಕಾಣುತ್ತಾರೆ. ಎಚ್.ಎಲ್.ನಾಗೇಗೌಡರ ಮೂಲ ಜಾನಪದ ಮುದ್ರಿಕೆಗಳು "ಕ್ಯಾಸೆಟ್ ಜಾನಪದ ಗೀತೆ"ಗಳಿಗಿಂತ ಹೆಚ್ಚು ಸೊಗಸು ಅನಿಸುತ್ತದೆ. ಇಲ್ಲಿಗೆ ಬಂದ ಮೇಲಂತೂ ಮಾಲಿ ದೇಶದ ಅಲಿ ಫರ್ಕ ತೂರೆ, ಸಬ್‌ಸಹಾರ ಸಂಗೀತದ ಗುಂಪು ತಿನಾರಿವೆನ್, ಅಮೇರಿಕದ ಕರಿಯ ಬ್ಲೂಸ್ ಸಂಗೀತಗಾರ ಜಾನ್ ಲೀ ಹುಕರ್, ಆಫ್ರಿಕಾದ ಹಾಡುಗಾರ್ತಿ ಒಮುವ ಸಂಗಾರೆ, ಪಾಕಿಸ್ತಾನದ ನುಸ್ರತ್ ಫತೇ ಅಲಿ ಖಾನ್ ಜತೆಗೆ, ಪರ್ವೀನ್ ಸುಲ್ತಾನ, ಮಲ್ಲಿಕಾರ್ಜುನ ಮನ್ಸೂರ, ಕಾಳಿಂಗರಾಯ, ಅನಂತಸ್ವಾಮಿ, ಬಿ.ವಿ.ಕಾರಂತ ಎಲ್ಲರ ಸಂಗೀತವೂ ನಮ್ಮ ಸಂಗೀತದ ಅಭಿರುಚಿಯನ್ನು ರೂಪಿಸುತ್ತವೆ. ಜಾನ್ ಲೀ ಹುಕರ್ ಹಾಗು ಕಾಳಿಂಗರಾಯರ ಸಂಗೀತದ ನಡುವಿನ ಬೇರೆತನ ಹಾಗು ಒಂದೆತನಗಳನ್ನು ಮನಸ್ಸು ಹುಡುಕುತ್ತದೆ. "ಮ್ಯೂಸಿಕ್ ಯ್ಯೂನಿವರ್ಸಲ್ ಲ್ಯಾಂಗ್ವೇಜ್" ಎಂಬ ತಾತ್ವಿಕ ನಿಲುವಿನ ಹಂಗಿಲ್ಲದೆ ಇವೆಲ್ಲಾ ನಡೆದಿರುತ್ತದೆ.

ಇವೆಲ್ಲದರ ನಡುವೆ ಒಂದೆರಡು ಗಂಟೆ ಕನ್ನಡ ಹಾಡು ಕೇಳಲು ಮಕ್ಕಳನ್ನು ಕರಕೊಂಡು ಹೋಗಿ ಕನ್ನಡದ ಕಾರ್ಯಕ್ರಮದಲ್ಲಿ ಕೂತಾಗ ಕನ್ನಡ ಹಾಡನ್ನು ಅಪೇಕ್ಷಿಸುವುದು ತಪ್ಪೆ? ಕನ್ನಡವಿಲ್ಲದಾಗ, ಕನ್ನಡ ಹಾಡಿ ಎಂದು ಕೂಗುವುದು ತೀವ್ರವಾದಿಯಾಗಿ ಯಾಕೆ ಅನಿಸಬೇಕು? ಕನ್ನಡದ ವೇದಿಕೆಯಲ್ಲಿ ಕನ್ನಡ ಹಾಡು ಕೇಳುವುದು ಒಂದು ಸರಳ ಹಾಗು ನಿಚ್ಚಳ ಸಂಗತಿಯಲ್ಲವೆ? ಅದಕ್ಕೆ ಯಾಕೆ ಕೂಗಬೇಕಾಗಿ ಬರುತ್ತದೆ ಎಂಬುದೇ ಬೇಸರದ ಸಂಗತಿ.

*******

ಸಿ ಅಶ್ವಥ್ ಗಾಯನಬೇಂದ್ರೆಯ "ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತ" ಹಾಡನ್ನು ಕಟ್ಟಿಯವರು ಹತ್ತಾರು ನಿಮಿಷ ಹಿಗ್ಗಿಸಿ ಹಾಡಿ ಮುಗಿಸಿದಾಗ, ಅವರ ಸಂಗೀತದ ಸರ್ಕಸ್ ನಡುವೆ ಆ ಹಾಡಿನ "ನಂಜು" ನಮಗೆ ಏರುವುದಿರಲಿ ಅದರ ಭಾವವೇ ತಟ್ಟಲಿಲ್ಲ. ಸಂಗೀತಗಾರರು ಭಾವಗೀತೆಗಳನ್ನು ಹಾಡುವ ಬಗ್ಗೆಯೇ ಹಲವಾರು ಅನುಮಾನಗಳು ಹುಟ್ಟಿಕೊಂಡವು. ಸಂಗೀತದ "ಪರಿಶುದ್ಧ" ರೂಪದಲ್ಲಿ ಇರುವ ಆನಂದ ಇವರಿಗೆ ಭಾವಗೀತೆಗಳಲ್ಲಿ ಸಿಕ್ಕುವುದಿಲ್ಲವಂತೆ. ಹಾಗಾದರೆ, ಅರೆ ಮನಸ್ಸಿನಿಂದ ಭಾವಗೀತೆಗಳ ಗೋಜಿಗೆ ಹೋಗುವುದಾದರೂ ಯಾಕೆ? ಕನ್ನಡದ ಸೊಗಸಾದ ಹಾಡುಗಳನ್ನು "ಪರಿಶುದ್ಧ" ಸಂಗೀತಮಯ ಮಾಡಿ ಕೆಡಿಸುವುದಾದರೂ ಯಾಕೆ? ಬಹುಶಃ ಇದನ್ನು ಕನ್ನಡದ ಹಲವಾರು ಸಂಗೀತಗಾರರನ್ನು ಕೇಳಬೇಕಾದ ಪ್ರಶ್ನೆ. ಕಟ್ಟಿಯವರೂ ಸಂದರ್ಶನದಲ್ಲಿ ತಮ್ಮ ಅಳಲನ್ನು ತೋಡಿಕೊಂಡದ್ದು ಹೀಗೆ : "ಶಾಸ್ತ್ರೀಯ ಸಂಗೀತ ತಂದು ಕೊಡುವ ತೃಪ್ತಿ ಏನಾದರೂ ಸುಗಮ ಸಂಗೀತದಿಂದ ಬರುವುದಿಲ್ಲ. ಆದರೆ ಜನಕ್ಕಾಗಿ ಸುಗಮ ಸಂಗೀತವನ್ನು ಹಾಡಬೇಕಾಗಿದೆ. ಶಾಸ್ತ್ರೀಯ ಸಂಗೀತಕ್ಕೆ ಶ್ರೋತೃಗಳು ಕಡಿಮೆ." ಮತ್ತೊಂದು ಕಾರಣ ನಮ್ಮ ಗುರುಗಳ ಆದೇಶ - ಯಾವ ಸಂಗೀತ ಪ್ರಕಾರವನ್ನೂ ನಿರ್ಲಕ್ಷಿಸಬೇಡ, ಎಲ್ಲವನ್ನೂ ಹಾಡು." ಎಂಬುದಕ್ಕೆ ಬೇರೆ ಕಟ್ಟುಬಿದ್ದು ಹಾಡುತ್ತಾರಂತೆ. ಭಾವಗೀತೆ ಹಾಡುವುದು ಎರಡನೇ ದರ್ಜೆಯ ಕೆಲಸ ಎಂಬಂತಿರುವ ಈ ನಿಲುವು ಕನ್ನಡದ ಹಾಡುಗಳಿಗೆ, ಕವಿಗಳಿಗೆ ಹಾಗು ಭಾವಪ್ರಪಂಚಕ್ಕೆ ಎಸಗಿದ ಅವಮಾನವೇ ತಾನೆ?

ಒಂದು ಸಂಗೀತ ಪ್ರಕಾರದಲ್ಲಿ ಮಾಡಿದ ಕೆಲಸ ಸಮಾಧಾನ ಕೊಡುವ ನಂಬಿಕೆಯಿಲ್ಲದೆ, ಗುರುಗಳ ಆದೇಶಕ್ಕಾಗಿ ಹಾಡುವ ಕಲಾವಿದರನ್ನು "ದಯವಿಟ್ಟು ನಿಮಗಿಷ್ಟವಾದ ಶಾಸ್ತ್ರೀಯ ಸಂಗೀತದಲ್ಲೇ ಹಾಡಿ. ಅರೆ ಮನಸ್ಸಿನಿಂದ ಭಾವಗೀತೆಗಳನ್ನು ಹಾಡಿ ಅದನ್ನು ಕೆಡಿಸಬೇಡಿ" ಎಂದು ವಿನಂತಿಸಿಕೊಳ್ಳುವುದರಲ್ಲಿ ತಪ್ಪಿಲ್ಲ ಅನಿಸುತ್ತದೆ. ಯಕ್ಷಗಾನದ ಭಾಗವತಿಕೆಯನ್ನು ಕಲಿತಿದ್ದ ಕಾಳಿಂಗರಾಯರ ಹಾಗೇ ಎಚ್.ಕೆ. ನಾರಾಯಣರೂ, ಮೈಸೂರು ಅನಂತಸ್ವಾಮಿಯೂ, ಬಿ.ವಿ.ಕಾರಂತರೂ ಶಾಸ್ತ್ರೀಯ ಸಂಗೀತವನ್ನು ಕಲಿತವರೇ. ಆದರೂ ಭಾವಗೀತೆಗಳನ್ನು ಹಾಡುವಾಗ ಕವಿಯ ಆಶಯಕ್ಕೆ, ಸಾಲಿನ ಅರ್ಥಕ್ಕೆ ಇಂಬುಕೊಡುವಂತೆ ಹಾಡಿದವರೇ. ಹಾಡಿನಲ್ಲಿ ತಮ್ಮ ಸಂಗೀತ ಲೋಲುಪತೆಯ ಪ್ರದರ್ಶನ ಮಾಡಿದವರಲ್ಲ. ಇವರೆಲ್ಲರ ಕಾಯಕದ ನೆನಪಿನಲ್ಲೇ ಇಂದಿನ ಭಾವಗೀತೆಗಳನ್ನೂ ಅವು ಮುಂದಡಿಯಿಡುವ ಪರಿಯನ್ನು ಗಮನಿಸಬೇಕಾಗಿದೆ.

ಹಾಗೆಂದ ಮಾತ್ರಕ್ಕೆ, ಅಂದಿನ ಅವರೆಲ್ಲಾ ಹಾಡಿದಂತೆಯೇ ಇಂದೂ ಹಾಡುತ್ತಿರಬೇಕೆಂದೇನೂ ಅಲ್ಲ. ಅವು ಹಳಸಲಾಗುತ್ತವೆ. ಹೊಸ ಸನ್ನಿವೇಶದ, ಹೊಸ ಸಂದರ್ಭದ ಭಾವಗೀತೆಗಳನ್ನು ಕೈಗೆತ್ತಿಕೊಂಡು ಅವುಗಳನ್ನು ಹೊಸದಾಗಿ ನೋಡಬಲ್ಲ ಕಲಾವಿದರು ನಮಗೆ ಬೇಕಲ್ಲವೆ? ಯಾವ ಹಾಡನ್ನು ಎತ್ತಿಕೊಳ್ಳಬೇಕು, ಯಾಕೆ ಆ ಹಾಡನ್ನು ಹಾಡಬೇಕೆಂಬ ಪ್ರಶ್ನೆಗಳನ್ನು ಕಲಾವಿದರು ಉತ್ತರಿಸಿಕೊಳ್ಳಬೇಕಲ್ಲವೆ? ಕಂಡುಕೊಂಡ ಉತ್ತರವನ್ನು ಎದೆಗಾರಿಕೆಯಿಂದ ನಮ್ಮ ಎದುರು ಇಡಬೇಕಲ್ಲವೇ? ಭಾವಗೀತೆಗಳನ್ನು ಕೆಳದರ್ಜೆಯಲ್ಲಿಡುವ, "ಜನಕ್ಕಾಗಿ ಹಾಡುವ" ಕಲಾವಿದರಿಂದ ಬದ್ಧವಾದ, ಪ್ರಬುದ್ಧವಾದ, ನಿಷ್ಠೆ ಹಾಗು ನಿಷ್ಟುರವಾದ ಯತ್ನಗಳನ್ನು ಅಪೇಕ್ಷಿಸುವುದು ತಪ್ಪೇನೋ.

ಕಲಾವಿದರ ನಿಷ್ಠೆ ಹಾಗು ನಿಷ್ಟುರತೆಯ ಬಗ್ಗೆ ನಾನು ಕೇಳಿದ ಒಂದು ಸಂಗತಿಯಿದು. ಎಂಬತ್ತರ ದಶಕದಲ್ಲಿ ಸಿದ್ಧಲಿಂಗಯ್ಯನವರ "ಹೊಲೆ ಮಾದಿಗರ ಹಾಡು" ಪದ್ಯಗಳಿಗೆ ಸಂಗೀತ ರೂಪಿಸಲು ಬಿ.ವಿ.ಕಾರಂತರನ್ನು ಕೇಳಿದರಂತೆ. ಸರಿ ಎಂದು ಆ ಪದ್ಯಗಳಿಗೆ ಹೊಂದುವ ಧ್ವನಿಯಂತಹ ಹಾಡುಗಾರರನ್ನು ಹುಡುಕತೊಡಗಿದರಂತೆ. ಅಂತಹ ಕಂಠವಿರುವ ಹಾಡುಗಾರರು ಸಿಕ್ಕದೆ ಆ ಪ್ರಾಜೆಕ್ಟನ್ನು ಕೈಬಿಟ್ಟರಂತೆ. ಕಡೆಯವರೆಗೂ ಅವರು ಅದನ್ನು ಹಾಡಿಸಲೇ ಇಲ್ಲ. ಸೊಗಸಾಗಿ ಮಧುರ ಕಂಠದಿಂದ ಹಾಡಬಲ್ಲ ಹಲವಾರು ಹಾಡುಗಾರರು ನಮಗೆ ಸಿಕ್ಕುತ್ತಾರೆ. ಆದರೆ ಕಾರಂತರಿಗೆ ಅದು ಸಾಕಾಗಲಿಲ್ಲ. ಅವರಂತೆ ಒಂದು ಪದ್ಯದ ಹಿನ್ನೆಲೆಗೆ ಹೊಂದುವಂತ ದನಿ, ಶೈಲಿಯನ್ನು ರೂಪಿಸುವ ಎದೆಗಾರಿಕೆಯ ಕಲಾವಿದರು ಇಂದು ನಮಗೆ ಸಿಗುತ್ತಾರೆಯೆ?

ಕನ್ನಡ ಭಾವಗೀತ ಪ್ರಪಂಚದಲ್ಲಿ ಹೊಸ ಬಗೆಯ ದನಿಗಳು, ಹೊಸ ಆವಿಷ್ಕಾರಗಳನ್ನು ಅಪೇಕ್ಷಿಸುವ ಕಾಲವಿದು. ಪಾಶ್ಚಿಮಾತ್ಯ ಸಂಗೀತದ ಅನುಕರಣೆಯೇ ಹೊಸ ಆವಿಷ್ಕಾರ ಎನ್ನುವುದನ್ನು ಮೀರಲೇಬೇಕಾಗುತ್ತದೆ. ಎಲ್ಲ ಬಗೆಯ ಸಂಗೀತದಿಂದ ಪ್ರಭಾವಿತರಾಗಿಯೂ ನಮ್ಮ ನೆಲದ, ನಮ್ಮ ದನಿಯ ಪ್ರಯತ್ನಗಳು ನಮ್ಮಲ್ಲಿಂದು ಆಗಬೇಕಲ್ಲವೇ? ಅದಿಲ್ಲದಾಗಲೇ ಬರೇ ಸಂಗೀತದ ಆಡಂಬರ, ಕೂಗಾಟ, ಕಿರುಚಾಟಗಳೇ ಭಾವಗೀತ ಪ್ರಪಂಚದ ಮುಖ್ಯ ಸ್ಥಾಯಿಗಳಾಗಿ ಬಿಡುವ ಅಪಾಯವಿದೆ.

[ಚಿತ್ರಗಳು-ಸಂಗ್ರಹದಿಂದ]

ಪುಟದ ಮೊದಲಿಗೆ
 
Votes:  2     Rating: 5    
 
 
ಸಂಬಂಧಿಸಿದ ಲೇಖನಗಳು
  ದೆಹಲಿಯ ಚಳಿಗೆಂದು ರೇಣುಕಾ ಬರೆದದ್ದು
  ಇಂಟರ್ ಸಿಟಿ ಟ್ರೈನಿನಲ್ಲೊಬ್ಬ ಕನ್ನಡ ಪುಸ್ತಕೋದ್ಯಮಿ
  ಸುದ್ದಿ ಮಾಧ್ಯಮಗಳು ಮತ್ತು ಹೊಣೆಗಾರಿಕೆ
  ಅವತಾರ ನೋಡಿ ವೈಶಾಲಿ ಬರೆದದ್ದು
  ಕ್ರಿಕೆಟಿನ ತವರುಮನೆಯ ಕಳವಳಗಳು: ಯೋಗೀಂದ್ರ ಬರಹ
  ಹಾರಲಾರದ ಹಕ್ಕಿ- ಒಂದು ಸೂಫಿ ಕಥೆ
  ನಿರ್ದೇಶಕ ಅಭಯಸಿಂಹರಿಗೆ ಪ್ರೇಕ್ಷಕ ಬರೆದ ಪತ್ರ
  ಮಹಾಲಿಂಗೇಶ್ವರ ಭಟ್ ಬರೆದ ಪ್ರೇಮ ಕವಿತೆ
  `ರಣ್' ಚಿತ್ರದಲ್ಲೂ ಸತ್ಯ ಸತ್ತಿಲ್ಲವೆ?
  ಪ್ರೇಮಶೇಖರರ `ಕನ್ನಡಿ' : ಭಾನುವಾರ ದೆಹಲಿಯಲ್ಲಿ ಬಿಡುಗಡೆ
  ರಾಷ್ಟ್ರಪ್ರಶಸ್ತಿಯ ಗುಬ್ಬಚ್ಚಿಗಳು : ಅಭಯಸಿಂಹ ಬರಹ
  ಕುಸುಮ ರೋಗವೂ ಟೀವಿ ಸ್ಟೋರೀನೂ: ಪ್ರಿಯಾ ಬರಹ
  ‘ಇವಳನ್ನು ಹುಚ್ಚಿ ಎಂದು ಒಪ್ಪಲಾರೆ' : ಗಂಗಾಧರಯ್ಯ ಬರಹ
  ಗಣರಾಜ್ಯೋತ್ಸವ ಮತ್ತು ದೇವನೂರು: ಒಂದು ಮಾತುಕತೆ
  ಗಣ ರಾಜ್ಯೋತ್ಸವ ಸ್ಪೆಷಲ್- ಆರು ದಶಕಗಳ ಗಣತಂತ್ರ
  ಲಂಕೇಶರ ಲಘು ಕಥಾಪ್ರಸಂಗಗಳು- ಬಸವರಾಜು ಬರಹ
  ಲಂಕೇಶರ ಲಘು ಕಥಾಪ್ರಸಂಗಗಳು- ಬಸವರಾಜು ಬರಹ
  ಈಗ ವಿಷ್ಣು ಇಲ್ಲ; ಮಾರ್ಕೆಟ್ ಇದೆ
  ಮಗನಿಗೇ ಶಿಷ್ಯನಾದ ಓಶೋರ ತಂದೆ- ರಾಘು ಬರಹ
  ಫೇಸ್ಬುಕ್ಕಲ್ಲಿ ಇಲ್ಲ ಅಂದ್ರೆ ಬದುಕೀನೇ ಇಲ್ವಾ?
  ತಿರುಮಲೇಶ್ ಅನುವಾದಿಸಿದ ಬ್ರೌನಿಂಗ್ ಕವಿತೆ
  ಕಾಮ್ರೇಡ್ ನೀಲಾ ಕಂಡ `ಕೆಂಪು ಬಸುದಾ'
  ಚಾಮಯ್ಯ ಮೇಷ್ಟರೂ ಹೋಗಿಬಿಟ್ಟರು
  ಕಣ್ಣುಮುಚ್ಚಿದ ಕಾಮ್ರೇಡ್ ಬಸು- ಅನಂತಮೂರ್ತಿ ಹೇಳಿದ್ದು
  ಭಾನುವಾರದ ವಿಶೇಷ- ಸಂಧ್ಯಾದೇವಿ ಬರೆದ ಕವನ ಕಥನ
  ಹೈಟಿಯಲ್ಲಿ ಕೊಲೆಗಡುಕಿ ವಸುಂಧರೆ
  `ಗೌಡ್ರು ಬಯ್ದಿದ್ದು ಒಂದ್ಸಲ... ಆದರೆ ನೀವು?'
  ಸಂಕ್ರಾಂತಿಯ ನೆಪದಲ್ಲಿ ಕಿರಂ ಸಿಟ್ಟು
  ಪಟೇಲ್ ಮಂಜಯ್ಯನವರು ಮೊಮ್ಮಗಳಿಗೆ ಬರೆದ ಪತ್ರ
  ಕನ್ನಡದ ಪಾಪುಗೆ 90 ವರ್ಷ
  ಕೆಟ್ಟ ಮಾತಾಡಿ ಗಮನ ಸೆಳೆದ ಗೌಡರು
  ಒಂದು ಮಂದಹಾಸದಂತೆ ಮತ್ತೆ ಕೆಂಡಸಂಪಿಗೆ
  ಸಂಕ್ರಾಂತಿಯ ಕಂಪಿಗೆ ಮತ್ತೆ ಕೆಂಡಸಂಪಿಗೆ
  ಪರಮಾಣು ವಿದ್ಯುತ್ ಪರಿಸರ ಸ್ನೇಹಿಯೇ?
  ಸ್ವರ್ಗದ ಬಾಗಿಲು: ಒಂದು ಸೂಫಿ ಕಥೆ
  ಕರುನಾಡ ಕಲಾವಿದನಿಗೆ ಸಿಂಗಪುರದಿಂದ ಮೂರ್ತಿ ಬರೆದ ಪತ್ರ
  ಫೇಸ್ ಬುಕ್ಕಿನಲ್ಲಿ ಗೊರಿಲ್ಲಾ ಗೆಳೆಯರು
  ಯುರೋಪ್ ಪ್ರವಾಸದ ಕಸಾನುಭೂತಿ
  ಎಡಚರಿಗೊಂದು ಸಂತಸದ ಹೊಸ ಚಡ್ಡಿ
  ‘ಮಾನ್ಸೆಂಟೋ’ ಅವಾಂತರಗಳು: ಒಂದು ಸಾಕ್ಷ್ಯಚಿತ್ರ
  ಮುಕುಂದ ಜೋಶಿ ಅನುವಾದಿಸಿದ ಹಿಂದಿ ಕವಿತೆ
  ಗೂಗಲ್ ಗೆ ಚೀನಾದಲ್ಲಿ ಗಿರಾಕಿಗಳೇ ಇಲ್ಲ
  ಅಹೋಬಲ ಶಂಕರರ ಕುರಿತು ಉಮಾ: ಇನ್ನಷ್ಟು
  ನಾನು ಕಂಡ ಅಹೋಬಲ ಶಂಕರ: ಉಮಾ ಸಂಪಾದಕೀಯ
  ಬಿಜೆಪಿಗೆ ಜಿನ್ನಾ ಎಂಬ ‘ಜಿನ್ನು’ ಹಿಡಿದಿದೆಯೇ?
  ಧಾರವಾಡದ ಕರ್ನಾಟಕ ಇತಿಹಾಸ ಸಂಶೋಧನ ಮಂಡಲ: ಒಂದು ಪರಿಚಯ
  ಸೂಫಿ ಕಥೆ: ‘ಬಗ್ದಾದಿಗೆ ಬಂದ ಮೃತ್ಯು ದೂತ’
  ಎತ್ತರದ ಹುಡುಗನ ಕಷ್ಟಗಳು
  ರಾಮಚಂದ್ರ ದೇವ ಬರೆದ ಒಂದು ಹಳೆಯ ಕವಿತೆ
  ಇನ್ನು ನಾವು ಬಲ್ಬಿಗೆ ವಿದಾಯ ಹೇಳಬಹುದೇ?
  ನೂರಏಳರ ಅಜ್ಜಿಗೆ ಇಪ್ಪತ್ಮೂರನೇ ಮದುವೆಯಾಗುವಾಸೆ!
  ಅನುಪಮಾ ಅನುವಾದಿಸಿದ ನಾಮದೇವ್ ಕವಿತೆ
  ಚೀನಾ: ದುಡಿವವರ ಕೈಗೆ ಅಂತರ್ಜಾಲ ಬಲ
  ಉಮಾ ಸಂಪಾದಕೀಯ:ತಿಮ್ಮಯ್ಯನೂ, ರಾಮಾಗಳೂ,ಲಿಂಗ ಲೆಕ್ಕಾಚಾರಗಳೂ
  ನಗರದ ದೃಶ್ಯಗಳು, ಕಾಡಿನ ಸದ್ದುಗಳು: ರಾಜೇಶ್ವರಿ ಬರಹ