ಫೆಬ್ರವರಿ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಅತಿಥಿ ಸಂಪಾದಕೀಯ : ಹೋಮಿಯೋಪತಿ ಎಂದು ಮಗಳನ್ನೇ ಕೊಂದರೆ?    
ಸುದರ್ಶನ್
ಶನಿವಾರ, 1 ಆಗಸ್ಟ್ 2009 (05:24 IST)
ಶಿಕ್ಷೆಯ ಹೊಸ್ತಿಲಲ್ಲಿ ಭಾರತೀಯ ದಂಪತಿ

ನೋಡನೋಡುತ್ತಾ ತಿಂಗಳು ಸರಿದಿದೆ. ಕೆಂಡಸಂಪಿಗೆಗೆ ನಿಮ್ಮ ಸಹಕಾರ ಹಾಗು ಬೆಂಬಲ ಹೀಗೆ ಮುಂದುವರಿಯಲಿ ಎಂದು ಆಶಿಸುತ್ತಾ ಕಡೆಗೆ ಒಂದು ಚಂದದ ಸಂಪಾದಕೀಯ ಬರೆಯಬೇಕು ಅಂದುಕೊಂಡಿದ್ದೆ. ಆದರೆ ಇತ್ತೀಚೆಗೆ ಸುದ್ದಿ ಮಾಡಿದ ಒಂದು ಘಟನೆ ಮನಸ್ಸನ್ನು ಕಲಕಿತ್ತು. ಆ ಘಟನೆ ಹಾಗು ಅದರ ಬಗ್ಗೆ ನನ್ನ ಅನಿಸಿಕೆಯನ್ನು ನಿಮ್ಮೊಡನೆ ಹಂಚಿಕೊಳ್ಳುವುದು ಹೆಚ್ಚು ಅರ್ಥಪೂರ್ಣ ಅನಿಸಿತು.

ಹನ್ನೊಂದು ತಿಂಗಳ ಮಗುವಿನ ಸಾವಿಗೆ ಸಂಬಂಧಿಸಿದಂತೆ ಸಿಡ್ನಿಯ ನ್ಯಾಯಾಲಯದಲ್ಲಿ ಕೇಸೊಂದು ವಿಚಾರಣೆಗೆ ಬಂದಿತ್ತು. ಆ ಮಗುವಿನ ಭಾರತೀಯ ತಂದೆತಾಯಿಯ ವಿರುದ್ಧ ಕೇಸು ದಾಖಲಾಗಿತ್ತು. ವಿಚಾರಣೆ ನಡೆದು, ಕಡೆಗೆ ಆ ಮಗುವಿನ ಸಾವಿಗೆ ಹೆತ್ತವರೇ ಕಾರಣ ಎಂದು ತೀರ್ಪಾಯಿತು. ಶಿಕ್ಷೆ ಏನೆಂದು ಇನ್ನು ನಿರ್ಣಯವಾಗಬೇಕಿದೆ.

ಆ ಮಗುವಿಗೆ ಎಕ್ಸಿಮಾ ಎಂಬ ಚರ್ಮದ ತೊಂದರೆ ಇತ್ತು. ಮಗುವಿನ ತಂದೆ ಹೋಮಿಯೋಪತಿ ಪ್ರಾಕ್ಟಿಷನರ್ ಆಗಿದ್ದರಿಂದ ಮಗುವಿಗೆ ಹೋಮಿಯೋಪತಿ ಮದ್ದನ್ನೇ ಕೊಡುತ್ತಾ ಹೋದರು. ಸ್ಥಳೀಯ ಡಾಕ್ಟರ್ ಒಬ್ಬರು ಚರ್ಮದ ಸ್ಪೆಷಲಿಸ್ಟರನ್ನು ಕಾಣಲು ಪತ್ರ ಬರೆದುಕೊಟ್ಟರೂ ತೋರಿಸದೇ ಹೋದರು. ಅಷ್ಟರಲ್ಲಿ ಸಂಬಂಧಿಕರ ಮದುವೆಗೆಂದು ಭಾರತಕ್ಕೆ ಭೇಟಿಯಿತ್ತರು. ಮದುವೆ ಗದ್ದಲದಲ್ಲಿ ಅಳುವ ಮಗುವನ್ನು ಕೇಳುವವರಿಲ್ಲದೆ ಅದರ ಸ್ಥಿತಿ ಉಲ್ಬಣಿಸುತ್ತಾ ಹೋಯಿತು. ಹೋಮಿಯೋಪತಿ ಮದ್ದು ಮುಂದುವರೆಯಿತು. ಹಿಂದಿರುಗಿ ಸಿಡ್ನಿಗೆ ಬರುವಾಗ ದಾರಿಯುದ್ದಕ್ಕೂ ಮಗು ಕಿರುಚಿಕೊಳ್ಳುತ್ತಲೇ ಇತ್ತಂತೆ. ಪ್ಲೇನಿನಲ್ಲಿದ್ದವರು ಕೋರ್ಟಿನಲ್ಲಿ "ಹಾಗೆ ಮಗು ಅಳುವುದನ್ನು ನಾವು ಹಿಂದೆಂದೂ ಕೇಳಿರಲಿಲ್ಲ" ಎಂದು ಸಾಕ್ಷಿ ನುಡಿದರು.

ಸಿಡ್ನಿಗೆ ಹಿಂತಿರುಗಿದ ಮೇಲೆ ಮಗುವಿನ ಕಡೆಗಾಲದಲ್ಲಿ ಆಸ್ಪತ್ರೆಗೆ ಕೊಂಡೊಯ್ದಾಗ, ಅದರ ಒಂದು ಕಣ್ಣಿನ ದೃಷ್ಟಿ ಪೂರ್ಣವಾಗಿ ಕಳಕೊಂಡಿತ್ತು. ಚರ್ಮದ ತೊಂದರೆಯಿಂದಾಗಿ ಹಲವು ಇನ್ಫೆಕ್ಷನ್ ತಗುಲಿ ನಾಕೈದು ದಿನದಲ್ಲಿ ಅಸುನೀಗಿತು. ಡಾಕ್ಟರೊಬ್ಬರು ಮಗುವನ್ನು ಯಾಕೆ ಸ್ಪೆಷಲಿಸ್ಟ್ ಬಳಿ ಕರೆದೊಯ್ಯಲಿಲ್ಲ ಎಂದು ಕೇಳಿದಾಗ ಆ ತಾಯಿ ಏನೂ ಹೇಳದೆ ಗಳಗಳ ಅತ್ತಳಂತೆ. ಮಗುವಿನ ತಂದೆ "ಅಲೋಪತಿ ಮದ್ದು ಕೊಟ್ಟಿದ್ದರೆ, ಮಗು ನೋವಿನಲ್ಲೇ ಇನ್ನೂ ಹೆಚ್ಚು ದಿನ ನರಳುತ್ತಿತ್ತು ಅಷ್ಟೆ" ಎಂದು ಕಟುವಾಗಿ ನುಡಿದನಂತೆ.

ವಿಚಾರಣೆಯ ಹೊತ್ತಲ್ಲಿ "ತಂದೆ ತಾಯಿ ಭಾರತದವರು. ಅವರು ಹೋಮಿಯೋಪತಿ ಮದ್ದು ಕನ್ವೆನ್ಷನಲ್ ಮದ್ದುಗಳ ಹಾಗೆ ಅಂದುಕೊಂಡಿದ್ದನ್ನು ತಪ್ಪೆಂದು ಪರಿಗಣಿಸಬಾರದು" ಎಂದು ಅವರ ಪರ ವಕೀಲ ಹೇಳಿದ್ದು ಕೇಳಿ ಹೌದೇ ಅನಿಸಿತು. ನಂತರ ಭಾರತದಲ್ಲಿ ನೂರಾರು ಸಂಖ್ಯೆಯಲ್ಲಿ ಹೋಮಿಯೋಪತಿ ಕಾಲೇಜುಗಳಿವೆ ಎಂದು ಗೊತ್ತಾಗಿ ಆಶ್ಚರ್ಯವಾಯಿತು. ಆ ಕಾಲೇಜುಗಳಲ್ಲಿ ಏನು ಹೇಳಿಕೊಡುತ್ತಾರೋ ಅವರ ಪಠ್ಯಕ್ರಮವೇನೋ ಗೊತ್ತಿಲ್ಲ. ಆದರೆ, ಹೋಮಿಯೋಪತಿಯ ಮೂಲ ಸಂಗತಿಗಳನ್ನು ಗಮನಿಸಿದವರಿಗೆ ಅದರಲ್ಲಿರುವ ಮೌಢ್ಯ ಕಾಣಿಸದೇ ಹೋಗದು. ಒಂದಂಶದ ಮದ್ದನ್ನು ಹತ್ತಾರು ಸಾವಿರ ಅಂಶ ನೀರಿನಲ್ಲಿ ಕರಗಿಸಿ ಮದ್ದನ್ನು ದುರ್ಬಲ ಮಾಡಿ ಕೊಡುವ ಪದ್ಧತಿ ಅದು. ಅಷ್ಟೊಂದು ನೀರಾಗಿಸಿದರೆ ಪರಿಣಾಮ ಹೇಗಾಗುತ್ತದೆ ಎಂಬ ಪ್ರಶ್ನೆಗೆ "ನೀರಿಗೆ ಮದ್ದಿನ ನೆನಪಿರುತ್ತದೆ" ಎಂಬಂತ ಉತ್ತರ ಕೊಡುವ ಪದ್ಧತಿ ಅದು. ‘ಲೈಕ್ ಫಾರ್ ಲೈಕ್’ ಎಂಬ ಅಪಾಯಕಾರಿ ಸಿದ್ಧಾಂತದ ಆಧಾರದ ಮೇಲೆ ಕಲ್ಪಿಸಿಕೊಂಡಿರುವ ಪದ್ಧತಿ ಅದು. ರೋಗ ಉಲ್ಪಣವಾಗುವುದೇ ಗುಣವಾಗುವುದರ ಸಂಕೇತ ಎಂದು ವರ್ಣಿಸುವ ಪದ್ಧತಿ ಅದು. ಇದನ್ನೆಲ್ಲಾ ಆ ಕಾಲೇಜುಗಳಲ್ಲಿ ವಿಜ್ಞಾನ ಎಂದು ಹೇಳಿಕೊಡುತ್ತಾರೆಯೆ? ಮೂಲಭೂತವಾಗಿ ವಿಜ್ಞಾನದಲ್ಲಿರಬೇಕಾದ ಸಂಶೋಧನೆ, ಫಲಿತಾಂಶ, ನಿರ್ಣಯವನ್ನು ಹೋಮಿಯೋಪತಿಯ ಸಂದರ್ಭದಲ್ಲಿ ಹೇಗೆ ದಾಖಲಿಸಿದ್ದಾರೆ? ಇವೆಲ್ಲ ಪ್ರಶ್ನೆಗಳಿಗೆ ಆ ಕಾಲೇಜುಗಳಲ್ಲಿ ಏನು ಉತ್ತರ ಕೊಡತ್ತಾರೋ?

ಹೋಮಿಯೋಪತಿ ಮದ್ದಿನ ಸೀಸೆಗಳುಜನರಿಗೆ ಪ್ರಾಥಮಿಕ ಆರೋಗ್ಯ ಸೌಕರ್ಯ ಸಿಕ್ಕದಿದ್ದಾಗ, ಆರೋಗ್ಯಕ್ಕೆ ಕುತ್ತು ಬಂದ ಹೊತ್ತಲ್ಲಿ ತಜ್ಞರ ಸೌಕರ್ಯ ನಿಲುಕದಾಗ ಹಲವು ಬಗೆಯ ಮೂಢೋಪಚಾರಗಳು ಹರಡುವುದು ಸಾಮಾನ್ಯ. ಅಂತಹ ಪರಿಸ್ಥಿತಿಯಲ್ಲಿ ಮೂಢೋಪಚಾರಗಳಿಗೆ ಮೊರೆ ಹೋಗುವವರಿಗೆ ಹಾಗೆ ಮಾಡಬೇಡಿ ಅನ್ನುವುದು ತಪ್ಪಾಗುತ್ತದೆ. ಜಗತ್ತಿನ ಮುಂದುವರಿದ ದೇಶಗಳಲ್ಲೂ ಅಲೋಪತಿ ಡಾಕ್ಟರರು ಜನರೊಂದಿಗೆ ಹೆಚ್ಚು ವೇಳೆ ಕಳೆಯಲಾಗದೇ ಇರುವುದು ಹೋಮಿಯೋಪತಿ ತಳವೂರಲು ಕಾರಣವಾಗಿದೆಯಂತೆ. ಎಕ್ಸಿಮಾದಂತ ಗುಣಪಡಿಸಲಾಗದ, ಆದರೆ ತಹಬಂದಿಯಲ್ಲಿ ಇಡಲಷ್ಟೇ ಸಾಧ್ಯವಿರುವ ವ್ಯಾಧಿಯಿರುವಾಗ ಹೋಮಿಯೋಪತಿ ಆಕರ್ಷಕವಾಗಿ ಕಾಣುವುದು ಹೌದು. ಆದರೆ ಅದರಿಂದ ಗುಣವಾಗುತ್ತದೆ ಎನ್ನುವುದು ಎಷ್ಟು ಜವಾಬ್ದಾರಿಯುತವಾದ ಮಾತು?

ಎಲ್ಲ ಪಾಶ್ಚಿಮಾತ್ಯ ವಿಚಾರಗಳ ಬಗ್ಗೆ ಅತಿರೇಕದ ಅನುಮಾನ, ಎಲ್ಲದರಲ್ಲೂ ಪಿತೂರಿಗಳನ್ನೇ ಕಾಣುವ ಮನೋಭಾವ ಈ ಸಮಸ್ಯೆಯ ಒಂದು ಮಗ್ಗುಲಷ್ಟೆ. ಆರೋಗ್ಯೋಪಚಾರ ತೀವ್ರ ವ್ಯಾಪಾರೀಕರಣಗೊಂಡಿರುವುದು ಸಮಸ್ಯೆಯ ಮತ್ತೊಂದು ಮಗ್ಗಲು. ಇವರೆಡರ ಪೂರ್ಣ ಲಾಭ ಪಡಕೊಂಡು ಹೋಮಿಯೋಪತಿಯಂತಹ ಔಷಧ ಪದ್ಧತಿ ಬೇರೂರಲು ತೊಡಗುತ್ತವೆ. ಒಂದು ಕಡೆ - ಯಾವುದೇ ಬಗೆಯ ಔಷಧೋಪಚಾರವಾದರೂ ಜನರಿಗೆ ಸತ್ಯ ಹೇಳುವ, ಇರುವುದನ್ನು ಪ್ರಚುರ ಪಡಿಸುವ ಕೆಲಸದ ಅಗತ್ಯವಿದೆ. ಇನ್ನೊಂದು ಕಡೆ ಜನರಿಗೆ ಅಗತ್ಯವಾದ ಸವಲತ್ತುಗಳನ್ನು ಕೊಡುವ ಜವಾಬ್ದಾರಿಯನ್ನು ಸರ್ಕಾರಗಳಿಗೆ ಪ್ರಜ್ಞಾವಂತರೂ ಸದಾ ನೆನಪಿಸುತ್ತಲೇ ಇರಬೇಕಾಗುತ್ತದೆ. "ಆಲ್ಟರ್ನೇಟ್ ಸೈನ್ಸ್" ಎಂಬ ಫಲಕದಡಿ ಮೂಢಾಚಾರಗಳನ್ನು ಬೆಂಬಲಿಸುವ ತಪ್ಪನ್ನು ನಮ್ಮ ಪ್ರಜ್ಞಾವಂತರೂ ಮಾಡತೊಡಗಿದರೆ ಅದು ದಿಟವಾಗಿಯೂ ಕಳವಳಕಾರಿ ಸಂಗತಿ.

ನಮಸ್ಕಾರ.

[ಚಿತ್ರಗಳು-ಸಂಗ್ರಹದಿಂದ]

ಪುಟದ ಮೊದಲಿಗೆ
 
Votes:  8     Rating: 4    
 
 
ಸಂಬಂಧಿಸಿದ ಲೇಖನಗಳು
  ದೆಹಲಿಯ ಚಳಿಗೆಂದು ರೇಣುಕಾ ಬರೆದದ್ದು
  ಇಂಟರ್ ಸಿಟಿ ಟ್ರೈನಿನಲ್ಲೊಬ್ಬ ಕನ್ನಡ ಪುಸ್ತಕೋದ್ಯಮಿ
  ಸುದ್ದಿ ಮಾಧ್ಯಮಗಳು ಮತ್ತು ಹೊಣೆಗಾರಿಕೆ
  ಅವತಾರ ನೋಡಿ ವೈಶಾಲಿ ಬರೆದದ್ದು
  ಕ್ರಿಕೆಟಿನ ತವರುಮನೆಯ ಕಳವಳಗಳು: ಯೋಗೀಂದ್ರ ಬರಹ
  ಹಾರಲಾರದ ಹಕ್ಕಿ- ಒಂದು ಸೂಫಿ ಕಥೆ
  ನಿರ್ದೇಶಕ ಅಭಯಸಿಂಹರಿಗೆ ಪ್ರೇಕ್ಷಕ ಬರೆದ ಪತ್ರ
  ಮಹಾಲಿಂಗೇಶ್ವರ ಭಟ್ ಬರೆದ ಪ್ರೇಮ ಕವಿತೆ
  `ರಣ್' ಚಿತ್ರದಲ್ಲೂ ಸತ್ಯ ಸತ್ತಿಲ್ಲವೆ?
  ಪ್ರೇಮಶೇಖರರ `ಕನ್ನಡಿ' : ಭಾನುವಾರ ದೆಹಲಿಯಲ್ಲಿ ಬಿಡುಗಡೆ
  ರಾಷ್ಟ್ರಪ್ರಶಸ್ತಿಯ ಗುಬ್ಬಚ್ಚಿಗಳು : ಅಭಯಸಿಂಹ ಬರಹ
  ಕುಸುಮ ರೋಗವೂ ಟೀವಿ ಸ್ಟೋರೀನೂ: ಪ್ರಿಯಾ ಬರಹ
  ‘ಇವಳನ್ನು ಹುಚ್ಚಿ ಎಂದು ಒಪ್ಪಲಾರೆ' : ಗಂಗಾಧರಯ್ಯ ಬರಹ
  ಗಣರಾಜ್ಯೋತ್ಸವ ಮತ್ತು ದೇವನೂರು: ಒಂದು ಮಾತುಕತೆ
  ಗಣ ರಾಜ್ಯೋತ್ಸವ ಸ್ಪೆಷಲ್- ಆರು ದಶಕಗಳ ಗಣತಂತ್ರ
  ಲಂಕೇಶರ ಲಘು ಕಥಾಪ್ರಸಂಗಗಳು- ಬಸವರಾಜು ಬರಹ
  ಲಂಕೇಶರ ಲಘು ಕಥಾಪ್ರಸಂಗಗಳು- ಬಸವರಾಜು ಬರಹ
  ಈಗ ವಿಷ್ಣು ಇಲ್ಲ; ಮಾರ್ಕೆಟ್ ಇದೆ
  ಮಗನಿಗೇ ಶಿಷ್ಯನಾದ ಓಶೋರ ತಂದೆ- ರಾಘು ಬರಹ
  ಫೇಸ್ಬುಕ್ಕಲ್ಲಿ ಇಲ್ಲ ಅಂದ್ರೆ ಬದುಕೀನೇ ಇಲ್ವಾ?
  ತಿರುಮಲೇಶ್ ಅನುವಾದಿಸಿದ ಬ್ರೌನಿಂಗ್ ಕವಿತೆ
  ಕಾಮ್ರೇಡ್ ನೀಲಾ ಕಂಡ `ಕೆಂಪು ಬಸುದಾ'
  ಚಾಮಯ್ಯ ಮೇಷ್ಟರೂ ಹೋಗಿಬಿಟ್ಟರು
  ಕಣ್ಣುಮುಚ್ಚಿದ ಕಾಮ್ರೇಡ್ ಬಸು- ಅನಂತಮೂರ್ತಿ ಹೇಳಿದ್ದು
  ಭಾನುವಾರದ ವಿಶೇಷ- ಸಂಧ್ಯಾದೇವಿ ಬರೆದ ಕವನ ಕಥನ
  ಹೈಟಿಯಲ್ಲಿ ಕೊಲೆಗಡುಕಿ ವಸುಂಧರೆ
  `ಗೌಡ್ರು ಬಯ್ದಿದ್ದು ಒಂದ್ಸಲ... ಆದರೆ ನೀವು?'
  ಸಂಕ್ರಾಂತಿಯ ನೆಪದಲ್ಲಿ ಕಿರಂ ಸಿಟ್ಟು
  ಪಟೇಲ್ ಮಂಜಯ್ಯನವರು ಮೊಮ್ಮಗಳಿಗೆ ಬರೆದ ಪತ್ರ
  ಕನ್ನಡದ ಪಾಪುಗೆ 90 ವರ್ಷ
  ಕೆಟ್ಟ ಮಾತಾಡಿ ಗಮನ ಸೆಳೆದ ಗೌಡರು
  ಒಂದು ಮಂದಹಾಸದಂತೆ ಮತ್ತೆ ಕೆಂಡಸಂಪಿಗೆ
  ಸಂಕ್ರಾಂತಿಯ ಕಂಪಿಗೆ ಮತ್ತೆ ಕೆಂಡಸಂಪಿಗೆ
  ಪರಮಾಣು ವಿದ್ಯುತ್ ಪರಿಸರ ಸ್ನೇಹಿಯೇ?
  ಸ್ವರ್ಗದ ಬಾಗಿಲು: ಒಂದು ಸೂಫಿ ಕಥೆ
  ಕರುನಾಡ ಕಲಾವಿದನಿಗೆ ಸಿಂಗಪುರದಿಂದ ಮೂರ್ತಿ ಬರೆದ ಪತ್ರ
  ಫೇಸ್ ಬುಕ್ಕಿನಲ್ಲಿ ಗೊರಿಲ್ಲಾ ಗೆಳೆಯರು
  ಯುರೋಪ್ ಪ್ರವಾಸದ ಕಸಾನುಭೂತಿ
  ಎಡಚರಿಗೊಂದು ಸಂತಸದ ಹೊಸ ಚಡ್ಡಿ
  ‘ಮಾನ್ಸೆಂಟೋ’ ಅವಾಂತರಗಳು: ಒಂದು ಸಾಕ್ಷ್ಯಚಿತ್ರ
  ಮುಕುಂದ ಜೋಶಿ ಅನುವಾದಿಸಿದ ಹಿಂದಿ ಕವಿತೆ
  ಗೂಗಲ್ ಗೆ ಚೀನಾದಲ್ಲಿ ಗಿರಾಕಿಗಳೇ ಇಲ್ಲ
  ಅಹೋಬಲ ಶಂಕರರ ಕುರಿತು ಉಮಾ: ಇನ್ನಷ್ಟು
  ನಾನು ಕಂಡ ಅಹೋಬಲ ಶಂಕರ: ಉಮಾ ಸಂಪಾದಕೀಯ
  ಬಿಜೆಪಿಗೆ ಜಿನ್ನಾ ಎಂಬ ‘ಜಿನ್ನು’ ಹಿಡಿದಿದೆಯೇ?
  ಧಾರವಾಡದ ಕರ್ನಾಟಕ ಇತಿಹಾಸ ಸಂಶೋಧನ ಮಂಡಲ: ಒಂದು ಪರಿಚಯ
  ಸೂಫಿ ಕಥೆ: ‘ಬಗ್ದಾದಿಗೆ ಬಂದ ಮೃತ್ಯು ದೂತ’
  ಎತ್ತರದ ಹುಡುಗನ ಕಷ್ಟಗಳು
  ರಾಮಚಂದ್ರ ದೇವ ಬರೆದ ಒಂದು ಹಳೆಯ ಕವಿತೆ
  ಇನ್ನು ನಾವು ಬಲ್ಬಿಗೆ ವಿದಾಯ ಹೇಳಬಹುದೇ?
  ನೂರಏಳರ ಅಜ್ಜಿಗೆ ಇಪ್ಪತ್ಮೂರನೇ ಮದುವೆಯಾಗುವಾಸೆ!
  ಅನುಪಮಾ ಅನುವಾದಿಸಿದ ನಾಮದೇವ್ ಕವಿತೆ
  ಚೀನಾ: ದುಡಿವವರ ಕೈಗೆ ಅಂತರ್ಜಾಲ ಬಲ
  ಉಮಾ ಸಂಪಾದಕೀಯ:ತಿಮ್ಮಯ್ಯನೂ, ರಾಮಾಗಳೂ,ಲಿಂಗ ಲೆಕ್ಕಾಚಾರಗಳೂ
  ನಗರದ ದೃಶ್ಯಗಳು, ಕಾಡಿನ ಸದ್ದುಗಳು: ರಾಜೇಶ್ವರಿ ಬರಹ