ಸೆಪ್ಟೆಂಬರ್ ೭, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಸುಮಿತ್ರಾ ಆತ್ಮಕಥೆ : ಒಂದು ದೋಸೆಗಾಗಿ ಎಷ್ಟೆಲ್ಲಾ....    
ಸುಮಿತ್ರಾ ಹಲವಾಯಿ
ಸೋಮವಾರ, 17 ಆಗಸ್ಟ್ 2009 (05:47 IST)

ನಮ್ಮಪ್ಪ ತೀರ ಕಿರಿಕಿರಿ ಮಾಡಿ ತಿಂಡಿ ತಿಂದು ಚಹ ಕುಡಿದು ಹೋದ ಮೇಲೆ ನಮಗೆ ತಿಂಡಿ ಸಿಗುತ್ತಿತ್ತು. ದೋಸೆ ಮಾಡಿದ್ದರೆ ಮೊದಲು ನನ್ನ ತಮ್ಮನಿಗೆ. ಅವನಾದ ಮೇಲೆ ತಂಗಿ-ಅನಂತ ನನ್ನ ಪಾಳಿ ಕೊನೆಗೆ ಬರುತ್ತಿತ್ತು. ಕೆಲವೊಮ್ಮೆ ನಾನು ಮನೆಯಲ್ಲಿರುತ್ತಿರಲಿಲ್ಲ. ಯಾವಾಗಲೋ ನೆನಪಾದಾಗ ಬಂದು ನನ್ನ ಪಾಲಿನ ತಿಂಡಿ ಕೇಳುತ್ತಿದ್ದೆ. ಆಗ ಅಡಿಗೆ ಮನೆಯಲ್ಲಿದೆ ಹೋಗಿ ತಿನ್ನು ಎನ್ನುತ್ತಿದ್ದಳು, ಬೇರೆ ಕೆಲಸದಲ್ಲಿರುತ್ತಿದ್ದ ಅಮ್ಮ. ಅಲ್ಲಿ ಹೋಗಿ ನೋಡಿದರೆ ಇರುತ್ತಿರಲಿಲ್ಲ. ಯಾರೋ ಮಕ್ಕಳು ಬಂದಾಗ ಕೊಟ್ಟಿರುತ್ತಿದ್ದರು. ಅಥವಾ ಅಣ್ಣ ಅನಂತ ಎರಡನೆ ಸುತ್ತು ತಿಂದು ಹೋಗಿರುತ್ತಿದ್ದ.
‘ತಿಂಡಿ ಏನಾಯಿತು?’ ಎಂದು ಕೇಳಿದರೆ
‘ಇಲಿ ತಿಂತು’ ಅನ್ನುತ್ತಿದ್ದ ಅನಂತ.

ಇರಬಹುದು ಎಂದು ತಿಳಿದು ಸುಮ್ಮನಾಗುತ್ತಿದ್ದೆ. ನನಗೆ ಹೊರಗಡೆ ಬೇಕಾದಷ್ಟು ಸ್ನೇಹಿತರಿದ್ದ ಕಾರಣ ಮನೆಯಲ್ಲೇ ತಿನ್ನ ಬೇಕೆಂದೇನೂ ಇರಲಿಲ್ಲ. ಆದರೂ ಒಮ್ಮೊಮ್ಮೆ ನನ್ನ ಪಾಲಿನ ತಿಂಡಿಗಾಗಿ ನಾನು ಹಕ್ಕು ಸಾಧಿಸಿ ಪಡೆಯಬೇಕಾಗುತ್ತಿತ್ತು. ಅದು ಯಾಕೋ ಏನೋ ಯಾರಿಗೂ ನನ್ನಮ್ಮನಿಗೂ ಕೂಡ ನನ್ನ ಊಟ-ತಿಂಡಿಯ ಬಗ್ಗೆ ವಿಶೇಷ ಕಾಳಜಿ ಇರಲಿಲ್ಲ.

ಏನಾದರೂ ಉಪಾಯ ಮಾಡಿ ನಾನೇ ಮೊದಲು ತಿಂಡಿ ತಿನ್ನಬೇಕೆಂದು ಯೋಚಿಸುತ್ತಿದ್ದೆ. ದೋಸೆ ಮಾಡಿದ ದಿನ ಎಲ್ಲರೂ ತಿಂದು ಏಳುವವರೆಗೆ ತೀರ ತಡವಾಗುತ್ತಿತ್ತು. ತಮ್ಮ ಗೋವಿಂದ ಎಲ್ಲ ವಿಷಯಕ್ಕೂ ಬಹಳ ಹೆದರುತ್ತಿದ್ದ. ನನ್ನನ್ನು ಅನೇಕ ವಿಷಯ ಕುರಿತು ಪ್ರಶ್ನೆ ಕೇಳುತ್ತಿದ್ದ. ನನಗೆ ಗೊತ್ತಿದ್ದ ಕೆಲವನ್ನು ಗೊತ್ತಿಲ್ಲದ್ದನ್ನು ನನ್ನ ಕಲ್ಪನೆ ಸೇರಿಸಿ ಅವನಿಗೆ ಉತ್ತರ ಹೇಳಿ ಸಮಾಧಾನ ಪಡಿಸುತ್ತಿದ್ದೆ. ಅವನಿಗೆ ತಿಳಿಸಿ ಒಳ್ಳೆಯ ರೀತಿಯಲ್ಲಿ ಹೇಳುತ್ತಿದ್ದೆನಾದ್ದರಿಂದ ಯಾವಾಗಲೂ ನನ್ನ ಹತ್ತಿರವೇ ಆತ ತನ್ನ ಸಂದೇಹ ನಿವಾರಣೆಗೆ ಬರುತ್ತಿದ್ದ. ಅಲ್ಲದೆ ಗೋವಿಂದನನ್ನು ನಾನು ಸದಾ ಎತ್ತಿಕೊಂಡು ತಿರುಗುತ್ತಿದ್ದೆ. ಹೀಗೊಮ್ಮೆ ಆತ
‘ಸುಮಿ ಮಳೆ ಹೆಂಗೆ ಬರ‍್ತದೆ?’ ಎಂದು ಕೇಳಿದಾಗ ನನಗೇನೂ ಅಷ್ಟು ಗೊತ್ತಿರಲಿಲ್ಲ. ಆಕಾಶಕ್ಕೆ ಮೊಳೆಯಿಂದ ಹೊಡೆದು ತೂತು ಕೊರೀತಾರೆ. ಆ ತೂತಿನ  ಹಿಂದೆ ಮೋಡ ಇರ‍್ತದೆ. ಆ ಮೋಡದ ನೀರು ಆಕಾಶದ ತೂತಿನಿಂದ ಕೆಳಗೆ ಸುರೀತದೆ ಅಂತಿದ್ದೆ.
‘ಆಕಾಶಕ್ಕೆ ಮೊಳೆ ಯಾರು ಹೋಡೀತಾರೆ.....?’
‘ದೇವ ಲೋಕದ ಆಚಾರಿಗಳು’
‘ಅಷ್ಟು ಮೇಲೆ ಹೆಂಗೆ ಹೋಗ್ತಾರೆ?’

ಅಂದಾಗ ನನ್ನ ಹತ್ತಿರ ಉತ್ತರವಿರುತ್ತಿರಲಿಲ್ಲ. ಮಳೆ ಬಂದು ಅಂಗಳದಲ್ಲಿ ನಿಂತ ನೀರಲ್ಲಿ ಆಕಾಶ ಕಾಣುತ್ತಿತ್ತು. ಅದನ್ನ  ಅವನಿಗೆ ತೋರಿಸಿ ‘ಇಲ್ಲಿ ನೀರಲ್ಲಿ ಕಾಲಿಟ್ರೆ ಸೀದಾ ಆ ನೀಲಿ ಆಕಾಶ     ಕಾಣ್ತದಲ್ಲಾ ಅಲ್ಲಿಗೆ ಹೋಗಿ ಬಿಡ್ತಾರೆ. ನೀ ಕಾಲು ಇಟ್ಟು ನೋಡು ಬೇಕಾದ್ರೆ’ ಅನ್ನುತ್ತಿದ್ದೆ. ಅವನು ಹೆದರುತ್ತಿದ್ದ.
ನಾನು ಕಾಲಿಟ್ಟು ‘ಆಕಾಶಕ್ಕೆ ಹೋಗ್ಲೀ.......?’ ಅಂತ ಕೇಳ್ತಿದ್ದೆ.
‘ಕೆಳಗೆ ಹೆಂಗ ಬರ‍್ತೀ......?’ ಅಂತಿದ್ದ.
‘ಕೆಳಗೆ ಬರ‍್ಲಿಕ್ಕೆ ಆಗದಿಲ್ಲ ಅಲ್ಲೇ ಇರ‍್ಬೇಕು.’ ಅಂತಿದ್ದೆ.
ಅದಕ್ಕೆ ಅವ ‘ಬ್ಯಾಡಾ ಬ್ಯಾಡಾ ನೀ ಕಾಲಿಡ ಬ್ಯಾಡಾ. ನೀ ಆಕಾಶಕ್ಕೆ ಹೋಗಬ್ಯಾಡಾ’ ಅಂತ ಅಳ್ತಿದ್ದ. ಹೆದರಪುಕ್ಕಲ ಗೋವಿಂದನ ಈ ಘಟನೆ ನಾ ಮೊದ್ಲು ದೋಸೆ ತಿನ್ನುವ ಉಪಾಯ ಸೂಚಿಸಿಬಿಟ್ಟಿತು. ಸಂಜೆ ಸೂರ್ಯ ಮುಳುಗುವ ಹೊತ್ತು ಗೋವಿಂದನಿಗೆ ಕೆಂಪು ಆಕಾಶ ತೋರಿಸಿ
‘ಅಲ್ನೋಡು ಗೋವಿಂದಾ, ಆಕಾಶ ಎಷ್ಟು ಕೆಂಪಾಗಿದೆ ಯಾಕೆ ಗೊತ್ತಾ?’
‘ಇಲ್ಲ ಯಾಕಿಷ್ಟು ಕೆಂಪಾಗಿದೆ?’
‘ಅಲ್ಲಿ ದೊಡ್ಡ ಕಡಾಯಿ ಇಟ್ಟು ಕೊತಕೊತ ನೀರಲ್ಲಿ ಪಾಪಿಗಳನ್ನೆಲ್ಲಾ ಹಾಕಿ ಬೇಯಿಸ್ತಿದ್ದಾರೆ. ಬೇಯಿಸಬೇಕಾದರೆ ಅವರ ರಕ್ತ ಎಲ್ಲಾ ಕೊತಕೊತ ಕುದ್ದು ಹೊರಗೆಲ್ಲಾ ಚೆಲ್ಲಿ ಆಕಾಶ ಕೆಂಪಾಗಿಬಿಟ್ಟಿದೆ.’
‘ಅಂದ್ರೆ........ ಪಾಪಿಗಳು ಯಾರು?’ ಅಂತ ಕೇಳ್ತಿದ್ದ.
‘ಪಾಪಾ ಮಾಡದವ್ರು......... ಮೊದಲೇ ದೋಸೆ ತಿ೦ತಾರಲ್ಲ ಅವ್ರು.. ನಮ್ಮನೇಲಿ ಯಾರು ಮೊದ್ಲು ದೋಸೆ ತಿ೦ತಾರೆ?’
‘ಗಣಪೂಮಾವಾ.......’

ಅಪ್ಪ೦ಗೆ ನಾವು ಮಾವಾ ಅ೦ತಿದ್ವಿ. ಅ೦ದ್ರೆ ಅವನ ಅಕ್ಕನ ಮಕ್ಕಳು ಅಪ್ಪನನ್ನು ಹಾಗೆ ಕರೆಯುತ್ತಿದ್ದರು.

‘ಅ೦ವಾ ದೊಡ್ಡಾ೦ವ, ಸಣ್ಣ ಹುಡುಗ್ರಲ್ಲಿ ಯಾರು ಮೊದ್ಲು ತಿ೦ತಾರೆ...?’ ಅ೦ದ ತಕ್ಷಣ ಗೋವಿ೦ದ ‘ಹೋ......’ ಎ೦ದು ಜೋರಾಗಿ ಅಳಲು ಪ್ರಾರ೦ಭಿಸುತ್ತಿದ್ದ. ಆಗ ನಾನು ಅವನಿಗೆ ತಿಳಿಸಿ ಹೇಳ್ತಿದ್ದೆ.
‘ದೇವ್ರ ಧ್ಯಾನ ಮಾಡಿದ್ರೆ ಪಾಪ ಬರದಿಲ್ಲ. ಅದಕ್ಕೆ ನಾಳೆ ಬೆಳಿಗ್ಗೆ ನೀನು ಓ೦ ನಮಃ ಶಿವಾಯ ಅ೦ತ ತಲೆ ಕೆಳಗೆ ಮಾಡಿ ನಿ೦ತು ಧ್ಯಾನ ಮಾಡು’
‘ತಲೆ ಕೆಳಗಾದ್ರೆ ನಾನು ಬಿದ್ದು ಹೋಗ್ತೇನಲ್ಲಾ?’ ಅ೦ತಿದ್ದ.
‘ನಾ ನಿಲ್ಲಸ್ತೇನಿ ನೀ ಬೀಳ್ದ ೦ಗೆ’ ಅ೦ತಿದ್ದೆ. ಅವನು ಒಪ್ಪುತ್ತಿದ್ದ.

ಮದುವೆಯಾದಾಗಮಾರನೆ ದಿನ ನಾನು ಶ೦ಕ್ರಣ್ಣನ ಸಹಾಯದಿ೦ದ ಮೂರು ನಾಲ್ಕು ದಿ೦ಬುಗಳನ್ನು ಇಟ್ಟು ಮೂಲೆಯಲ್ಲಿ ತಲೆ ದಿ೦ಬಿನ ಮೇಲೆ ಗೋವಿ೦ದನ ತಲೆ ಇಡಿಸಿ ಕಾಲೆತ್ತಿ ನಿಲ್ಲಿಸುತ್ತಿದ್ದೆ. ಅವನು ಬಿದ್ದು ಹೋಗದ ಹಾಗೆ ಶ೦ಕರ ಸೈಡಿನಲ್ಲಿ ದಿ೦ಬು ಇಡುತ್ತಿದ್ದ. ಓ೦ ನಮಃ ಶಿವಾಯ ಅ೦ತ ಅವನಿ೦ದ ಹೇಳ್ಸಿ ನಾವು ದೋಸೆ ತಿನ್ಲಿಕ್ಕೆ ಹೋಗ್ತಿದ್ವಿ. ಗೋವಿ೦ದನ್ನ ಕಾಣದೆ ಅಮ್ಮ ಕೇಳುತ್ತಿದ್ದಳು. ನಾವು ದೋಸೆ ತಿನ್ನಬೇಕ೦ತೆ ಅವನು ಆಮೇಲೆ ತಿ೦ತಾನ೦ತೆ ಅ೦ತಿದ್ದೆ ನಾನು. ಆದ್ರೆ ಅಮ್ಮನಿಗೆ ನನ್ನ ಮಾತಿನಲ್ಲಿ ನ೦ಬಿಕೆ ಬರದೆ ನಮಗೆ ತಿ೦ಡಿ ಕೊಡ್ತಿದ್ದಿಲ್ಲ ಮೊದ್ಲು ಅವನಿಗೆ ತಿನ್ನಸ್ಬೇಕು ಸಣ್ಣ ಹುಡುಗ ಅ೦ತ ತಾನೇ ಬರ‍್ತಿದ್ಲು, ಅವನ್ನ ಕರ‍್ಕೊ೦ಡು ಹೋಗ್ಲಿಕ್ಕೆ. ಅವನ ಸ್ಥಿತಿ ನೋಡಿ.

‘ಅಲಲಾ ಚಿನ್ನಾರಿ ಪುಟ್ಟಿ ದೇವರ ಧ್ಯಾನ ಮಾಡ್ತತಲ್ಲೆ. ದೋಸೆ ತಿ೦ದ್ಕ೦ಡು ಧ್ಯಾನಾ ಮಾಡು ಮಗಾ......!!’ ಅ೦ತ ಅವನ್ನ ಎತ್ಕೊ೦ಡು ಹೋಗ್ತಿದ್ಲು. ಅವನು ‘ನ೦ಗೆ ದೋಸೆ ಬ್ಯಾಡಾ ದೋಸೆ ಬ್ಯಾಡಾ, ನಾ ನರಕಕ್ಕೆ ಹೋಗ್ತೇನಿ ದೋಸೆ ಬ್ಯಾಡಾ’ ಅ೦ತ ಅಳ್ತಿದ್ದ. ‘ತಿ೦ಡಿ ತಿನ್ನು. ಸರಿಯಾಗಿ ಕೂತ್ಗ೦ಡು ಧ್ಯಾನಾ ಮಾಡು ಸಣ್ಣ ಹುಡ್ಗಾ ಹ೦ಗೆಲ್ಲಾ ತಲೆಕೆಳಗಾಗಿ ನಿಲ್‌ಬಾರ್ದು.’ ಅಮ್ಮ ಎಷ್ಟು ಹೇಳಿದ್ರೂ ಕೇಳ್ದೆ ಅ೦ವ ಅಳ್ತಿದ್ದಾ. ದೋಸೆ ತಿ೦ತಿರ‍್ಲಿಲ್ಲ. ಇಷ್ಟೆಲ್ಲ ರಾದ್ಧಾ೦ತ ಆಗುವಷ್ಟರಲ್ಲಿ ಅನಂತ ಕೂತ ಏನಾಗಿರಬಹುದೂಂತ ಗೆಸ್ ಮಾಡ್ತಿದ್ದ. ಅಂಗಳದ ನೀರಲ್ಲಿ ಕಾಲಿಡು ಅಂತಿದ್ದಾಗ ಅಲ್ಲೇ ಕೂಡ ಅನಂತ ಲಕ್ಷ ಕೊಟ್ಟಿರ‍್ತಿದ್ದ. ಅಮ್ಮಂಗೆಲ್ಲ ವರದಿ ಒಪ್ಪಿಸುತ್ತಿದ್ದ. ಎಲ್ಲಾ ವಿಷಯ ಗೊತ್ತಾದ್ಮೇಲೆ ಅಮ್ಮ ಗೋವಿಂದನ್ನ ಕರಕ್ಕೊಂಡು ಹೋಗಿ ತಾನೇ ಅಂಗಳದ ನೀರಲ್ಲಿ ಕಾಲಿಟ್ಟು ನಿಂತು ತೋರಿಸಿ ಕಡ್ಡಿಕಸಬರಿಗೆ ಇಂದ ಅಂಗಳದ ನೀರನ್ನೆಲ್ಲಾ ಗುಡಿಸಿ ಮೋರಿಗೆ ಬಿಟ್ಟು ಅವನ ಹೆದರಿಕೆ ಓಡಿಸ್ತಿದ್ಲು. ಹೀಗೆ ಮೊದಲು ದೋಸೆ ತಿನ್ನಲು ನಾನು ಮಾಡಿದ ಉಪಾಯವೆಲ್ಲ ಹದಗೆಟ್ಟು ಹೋಗ್ತಿತ್ತು.

‘ಸಣ್ಣ ಪುಟವ್ರರನ್ನೆಲ್ಲಾ ಹೆದ್ರಸ್ತಿಯೇನೆ ಶನಿ ಲೌಡಿ ನಿನ್ನ ಒದ್ದು ಮನೆಯಿಂದ ಹೊರಗೆ ಹಾಕ್ತೇನಿ.’ ಅಂತ ತೀರಾ ಸಿಟ್ಟಿನಿಂದ ಅಮ್ಮ ಕೂಗಾಡಿದ್ಲು. ದೋಸೆ-ಗೀಸೆ ಏನೂ ಇಲ್ದೆ ನಾ ಓಡಿ ಹೋಗ್ತಿದ್ದೆ.

ಎಲ್ಲರೂ ಸಿಡಿಪಿಡಿ ಮಾಡಿ ಬಯ್ದು ಅಂದೂ ಮಾಡಿದಾಗ ನನಗೆ ದುಃಖವಾಗುತ್ತಿತ್ತು. ನನ್ನನ್ನು ಯಾರೂ ಪ್ರೀತಿಸುವದಿಲ್ಲ ಯಾಕಂದ್ರೆ ನಾನು ಈ ಮನೆಯ ಹುಡುಗಿಯಲ್ಲ ಎಂದು ಯೋಚಿಸುತ್ತಿದ್ದೆ. ನನ್ನ ಅಣ್ಣ ತಂಗಿ ತಮ್ಮ ಎಲ್ಲರೂ ಬೆಳ್ಳಗೆ ನೋಡಲು ತುಂಬಾ ಚೆನ್ನಾಗಿದ್ದಾರೆ. ನನ್ನ ಸ್ವಭಾವ ಕೂಡ ಉಳಿದ ಮಕ್ಕಳಂತಿಲ್ಲ. ಬಣ್ಣ ಕೂಡ ಇಲ್ಲ. ನಾನು ನಮ್ಮಮ್ಮನ ಮಗಳಲ್ಲ ಅನ್ನಿಸುತ್ತಿತ್ತು.  ನಾನೂ ಎಲ್ಲ ಅಂಶಗಳಲ್ಲೂ ನನ್ನ ತಾಯಿಯನ್ನು ಹೋಲುತ್ತೇನೆ. ಮಕ್ಕಳು ತಾಯಿ ತಂದೆಯನ್ನಲ್ಲವೇ ಹೋಲುವರು ದಡ್ಡಿಯಾದ ನನಗೆ ಅಷ್ಟೂ ತಿಳೀತಿರ‍್ಲಿಲ್ಲ.
‘ಸಣ್ಣಮ್ಮ ನಿಮ್ಮ ಎಲ್ಲ ಮಕ್ಳೂ ಚೆಂದಿದ್ದಾರೆ ಸುಮಿ ಒಬ್ಳೇ ಯಾಕೆ ಹಂಗೆ?’ ಅಂತ ಯಾರಾದ್ರೂ ಕೇಳಿದ್ರೆ  
‘ಅವಳ್ನ ಕೊಟ್ಗೆ ಶೆಗಣಿ ಬಳಲಿಕ್ಕೆ ಬರ‍್ತಾಳಲ್ಲ ಸುಬ್ಬಿ ಹತ್ರ ತಂಗಡಿದ್ವಿ ಅದ್ಕೆ ಅವ್ಳು ಹಂಗಿದ್ದಾಳೆ.’  ಅಂತ ನನ್ನ ಸೋದರತ್ತೆ ತಮಾಷೆಗೆ ಹೇಳುತ್ತಿದ್ದಳು. ಆದರೆ ನಾನು ಅದನ್ನ ನಿಜವೆಂದೆ ನಂಬಿದ್ದೆ.

ಮತ್ತೆ ಮತ್ತೆ ಅಣ್ಣನನ್ನು ಕೇಳುತ್ತಿದ್ದೆ.
‘ಶಂಕ್ರಾ ನಾನು ನಿಮ್ಮನೆ ಹುಡುಗಿ ಅಲ್ಲೇನೋ....?’
‘ನೀ ನಮ್ಮನೆ  ಹುಡ್ಗೀನೆ....’
‘ಮತ್ತೆ ಎಲ್ಲರೂ ನನ್ನ ತೌಡು ಕೊಟ್ಟು ತಗಂಡಿದ್ದು ಅಂತಾರಲ್ಲಾ....?’
‘ಅದಾ..... ಅದು ಭಾಳ ವರ್ಷದ ಕೆಳಗೆ’
‘ಸುಬ್ಬಿ ಮಗಳಾದ್ರೆ ಮತ್ತೆ ನಂಗೆ ಅಡಿಗೆ ಮನೇಲೆ ಊಟ ಹಾಕ್ತಾರಲ್ಲೋ....’
‘ನಿಂಗೆ ಸ್ನಾನ ಮಾಡ್ಸಿ ಗೋಮೂತ್ರಾ ಕುಡಿಸಿ, ಒಳಗೆ ಕರ‍್ಕಂಡಿದೇವಲ್ಲ ಅದ್ಕೆ ಈಗ ನೀ ನಮ್ಮನೆ ಹುಡ್ಗಿನೇ. ಆದ್ರೆ ನೀ ಸುಬ್ಬಿ ಮಗಳು !!’
ನಾನು ಅಲ್ಲ ಅನ್ನುತ್ತಿದ್ದೆ.
‘ನೋಡು ನಮ್ಮೆಲ್ರ ಕೈ ನೋಡು ಎಷ್ಟು ಬೆಳ್ಳಗಿದೆ. ನಿಂದು ನೋಡು ಎಷ್ಟು ಕಪ್ಪಗಿದೆ.’
‘ಹಂಗೆ ಒಬ್ಬೊಬ್ರು ಕೈ ಕಪ್ಪಿರ‍್ತದೆ. ಸಣ್ಣಿನೂ ಕಪ್ಪಿದ್ದಾಳಲ್ಲಾ.....?’ಅಂತಿದ್ದೆ.

ಬೆಳಗಾವಿಯಲ್ಲಿ ಕೊಳಲು ವಾದನ ನಾ ಅಮ್ಮನ ಮಗಳೇ ಅಂತ ಖಾತ್ರಿ ಮಾಡಿಕೊಳ್ಳಲು. ಅದಕ್ಕೆ ಅಣ್ಣ
‘ಬಣ್ಣ ಒಂದೇ ಅಲ್ಲ. ನಾವೆಲ್ಲ ಜಾಣರಿದ್ದೇವಿ. ನೀ ಎಷ್ಟು ದಡ್ಡಿ.     ನಮ್ಮನೇಲಿ ಯಾರಾದ್ರೂ ಬೇರೆಯವ ಹತ್ರ ಜಗಳಾ-ದೊಂಬಿಗೆ ಹೋಗ್ತಾರಾ?’
‘ಇಲ್ಲಾ’
ಮತ್ತೆ ನೀ ಹುರ್ ರ್ರಂತಅಂತ ಜಗಳಕ್ಕೆ ಹೋಗ್ತಿ. ಶಾಲೇಲಿ ಹೊಡೆದಾಟ ಮಾಡ್ತಿ. ನಮ್ಮ ಅಮ್ಮನ ಮಕ್ಳು ಯಾರೂ ಜಗಳಾ -ಹೊಡದಾಟಾದವ್ರಲ್ಲ...’ ಅಂತಿದ್ದ.

ಹೌದಲ್ಲ ನನ್ನ ಇವರ ಸ್ವಭಾವದಲ್ಲಿ ಎಷ್ಟು ವ್ಯತ್ಯಾಸ ಇದೆ. ಅವ್ರೆಲ್ಲಾ ಜಾಣರು. ನಾ ದಡ್ಡಿ. ಹೊಸೂರಿಂದ ಶೆಗಣಿ ಬಳಿಸುವ ಸುಬ್ಬಿ ಬರ‍್ತಿದ್ಲು. ನಾನು ಶಾಲೆಗೆ ರಜೆ ಇದ್ದ ದಿನ ಸುಬ್ಬಿ ಜೊತೆಗೇ     ಅವಳ ಮನೆಗೆ ಹೋಗ್ತಿದ್ದೆ.
‘ಸುಬ್ಬಿ ನಾ ನಿನ್ನ ಮನೇಲಿ ಉಳೀತೇನೆ.
‘ಒಡೇರು ಶಿಟ್ಟ್ ಮಾಡ್ಕಂತ್ರು. ಸೊಮಮ್ಮಾ, ವಳ್ಕಂಡ್ರೆ ನಾ ನಿಮ್ಮ ಗನಾ ನೋಡ್ಕಂತೆ ಬಿಡಿ.’
‘ಸುಬ್ಬಿ ನಾ ನಿನ್ನ ಮಗಳೇನೇ.....?’
‘ಅಲ್ಲ ನೀವು ಸಣ್ಣಮ್ಮನ ಮೊಗೀನೇ.’
‘ಮತ್ತೆ ಎಲ್ಲರೂ ನಿನ್ನ ಮಗಳು ನಿಂಗೆ ತೌಡು ಕೊಟ್ರು ನನ್ನ ತಗಂಡ್ರಂತೆ ಅಂತ ಹೇಳ್ತರಲ್ಲೆ.’
‘ಅಯ್ಯೊ ಅಮ್ಮಯ್ಯಾ ಕುಶಾಲ್ ಮಾಡ್ ತ್ರು ಕಾಣಿ’

ಅಂತ ನನಗೆ ನಾನು ಈ ಜೋಯ್ಸರ ಮನೆಯವಳೇ ಹೌದು ಅಂತಾ ನಾನಾ ರೀತಿಯಿಂದ ತಿಳಿಸಿ ಹೇಳ್ತಿದ್ಲು. ಕೆಟ್ಟ ಬೆವರಿನ ವಾಸನೆಯ ಕರಿಯ ಸುಬ್ಬಿ ನನ್ನನ್ನು ಅಪ್ಪಿಕೊಂಡು ಲಟ ಲಟ ಲಟ ಲಟಿಕೆ ಮುರಿದು ಎಲೆ ಅಡಿಕೆ ನನ್ನ ಮುಖದಿಂದ ನೀವಾಳಿಸಿ ದೃಷ್ಟಿ ತಾಕ್ತು ಅಂತ ದೂರ ಒಗೀತಿದ್ಲು. ಅವಳ ಬೆಚ್ಚನೆಯ ಅಪ್ಪುಗೆ ನಿರ್ವ್ಯಾಜ ಪ್ರೀತಿ ನನಗೆ ಬಹಳ ಹಿತವೆನಿಸುತ್ತಿತ್ತು. ಮನೆಯಲ್ಲಿ ಊಟ ಸಿಗದಿದ್ದರೆ ಹೋಟೆಲ್ಲಿಗೆ ಹೋಗುತ್ತೇವೆ ಅಲ್ಲವೇ? ನನ್ನನ್ನು ಮನೆಯಲ್ಲಿ ಯಾರೂ ಪ್ರೀತಿಸುತ್ತಿರಲಿಲ್ಲ. ನನಗೆ ಸಿಗದ ಪ್ರೀತಿಯನ್ನು ಹುಡುಕಿಕೊಂಡು ನಾನು ಎಲ್ಲೆಲ್ಲೋ ತಿರುಗುತ್ತಿದ್ದೆ.

(ಮುಂದುವರಿಯುವುದು)

[ ಸುಮಿತ್ರಾ ಮೋತಿಲಾಲ ಹಲವಾಯಿ ಆತ್ಮಕಥನ-೬

ಪುಟದ ಮೊದಲಿಗೆ
 
Votes:  5     Rating: 5    
 
 
ಸಂಬಂಧಿಸಿದ ಲೇಖನಗಳು
  ಖೇಣಿ ಪುರಾಣ:ಕಾರಂಜಾ ರಾಜಕಾರಣ!
  ತರೀಕೆರೆ ಹೊಸ ತಲೆಮಾರಿನ ಲೇಖಕರು: ವಿಕ್ರಮ ವಿಸಾಜಿ
  ಭಾಗವತ ೨೮:ಹಾಲೂಡುತ್ತ ಬಿಡುಗಡೆಗೊಂಡ ಪೂತನಾ
  ಗೂಬೆ ಹಿಡಿದ ಹುಡುಗ, ಬೆಕ್ಕು ತಂದ ಹುಡುಗಿ
  ಮೂರ್ತಿ ಚರಿತೆ: ಕನ್ನಡದ ನೆಲದಲ್ಲಿ
  ಮುಂಗಾರು ಕೊಂಡಿ ಕಳಚಿಕೊಂಡಿತು
  ಹೊಸ ತಲೆಮಾರಿನ ಲೇಖಕರು: ದೇವು ಪತ್ತಾರ
  ಭಾಗವತ೨೭:ಮೋಹವ ಹರಿಯುವ ಭಗವಂತ
  ಮೂರ್ತಿ ಚರಿತೆ: ಕ್ಷಣದಲ್ಲೇ ಪರಿಹಾರ!
  ವಡ್ಡರ್ಸೆ ೧೩: ‘ಚೆಲುವ ಕನ್ನಡನಾಡು' ಚಿಂದಿ!
  ತರೀಕೆರೆ ಹೊಸ ತಲೆಮಾರಿನ ಲೇಖಕರು: ಶೈಲಜ ಹಿರೇಮಠ
  ಭಾಗವತ ೨೫:ದಶರಥರಾಮನೂ, ಕೊಡಲಿರಾಮನೂ
  ಜೋಯಪ್ಪ ಸರಣಿ: ಕೊರೆದ ಚಿಪ್ಪು ಹಂದಿ
  ಮೂರ್ತಿ ಚರಿತೆ: ಸುರೈಯ್ಯಾ ಇಂದ ಕರಿಶ್ಮಾವರೆಗೆ
  ವಡ್ಡರ್ಸೆ ಸರಣಿ:ಮುಂಗಾರಿಗೆ ಕಾಸಿನ ಕಷ್ಟಗಳು
  ಭಾಗವತ:ತಿರುಪೆ ಎತ್ತಿದ ಭಗವಂತ
  ವಿ.ಕೆ.ಮೂರ್ತಿ ಚರಿತೆ: ಮದರಾಸಿನ ನೆನಪುಗಳು
  ಹೊಸ ತಲೆಮಾರಿನ ಲೇಖಕರು: ಬಿ.ಎಂ.ರಶೀದ್
  ವಡ್ಡರ್ಸೆ ಸರಣಿ-೧೧: ಕರಾವಳಿಯಲ್ಲಿ ಹರಿದ `ವರಶೆ' ಚಿಂತನೆ
  ತೋಳ್ಪಾಡಿ ಭಾಗವತ:ನರಮೃಗ ರೂಪದ ಭಗವಂತ
  ಮೂರ್ತಿ ಚರಿತೆ:ಶುರುವಾಯಿತು ಬಣ್ಣದ ಯುಗ
  ಚುನಾವಣೆಗಳನ್ನು ಗೆಲ್ಲದ ಖೇಣಿ ಕುಟುಂಬ
  ತರೀಕೆರೆ ಬರೆಯುವ ಹೊಸ ತಲೆಮಾರಿನ ಲೇಖಕರು: ವಿನಯಾ
  ವಡ್ಡರ್ಸೆ ಸರಣಿ-೧೦: ಬಸವಣ್ಣನ ಬುಲೆಟ್ ಸವಾರಿ
  ಭಾಗವತ:ಹಾಲ್ಗಡಲನ್ನು ಕಡೆದ ಕಥೆ
  ಅವರಿವರ ಕಣ್ಣಲ್ಲಿ ಕಂಡ ಮೂರ್ತಿ:ಉಮಾ ಸರಣಿ
  ಹೊಸ ತಲೆಮಾರಿನ ಲೇಖಕರು: ಮಂಜುನಾಥ್ ಲತಾ
  ಏಳು ಜನರ ತಂಡ ಪತ್ರಿಕೆ ತರುವಲ್ಲಿ ಸಫಲವಾಯಿತು
  ಗುರುವಿನ ಪ್ಯಾಂಟ್ ಕೇಳಿದ ಶಿಷ್ಯ!
  ಭಾಗವತ:ಭಗವಂತ ಮೀನಾದ ಕಥೆ
  ವಿ.ಕೆ.ಮೂರ್ತಿ ಚರಿತೆ: `ಗುರುದತ್ ಗಯಾ' ಎಂದ ಗುರುಸ್ವಾಮಿ
  ಖೇಣಿ ಪುರಾಣ 21: ರಾಜಕೀಯಕ್ಕೆ ಖೇಣಿ ಕುಟುಂಬ
  ತರೀಕೆರೆ ಹೊಸ ತಲೆಮಾರಿನ ಲೇಖಕರು:ಪೀರ್ ಬಾಶಾ
  ವಡ್ಡರ್ಸೆ ೮:ರಾಮಪ್ಪಣ್ಣನವರ ಮನೆಯ ಕೋಲ
  ಭಾಗವತ ೨೧:ಜಡಭರತನಾದ ಭರತಚಕ್ರವರ್ತಿ
  ವಿ.ಕೆ.ಮೂರ್ತಿ ಚರಿತೆ:ಎಂದೆಂದೂ ಕಾಡುವ ಛೋಟಿ ಬಹೂ
  ಖೇಣಿ ಪುರಾಣ:ಅಲ್ದೆ ಗುಂಡಪ್ಪ 'ಚೋರ ಚರಿತೆ'
  ವಡ್ಡರ್ಸೆ ಸರಣಿ-೭: ಎಡವಟ್ಟಾದ ಯಂತ್ರದ ಥಿಯರಿ
  ಹೊಸ ತಲೆಮಾರಿನ ಲೇಖಕರು: ಚಿದಾನಂದ ಸಾಲಿ
  ಭಾಗವತ:ಕಣ್ಣು ಕೊಟ್ಟು ನೋಟವನ್ನೂ ಕೊಟ್ಟ ಭಗವಂತ
  ಮೂರ್ತಿಚರಿತೆ:ಗ್ರೀಸ್,ಗ್ರೆಗರಿಪೆಕ್,ಗನ್ಸ್ಆಫ್ ನ್ಯಾವರೋನ್.
  ಕಹಿಯೋ ಸಿಹಿಯೋ ನೆನೆದರೆ ಜುಂ ಅನ್ನುವ ಪ್ರಸಂಗ
  ವಡ್ಡರ್ಸೆ ೬: ಕರಾವಳಿಯಲ್ಲಿ ಮುಂಗಾರು ತಲ್ಲಣ
  ಹೊಸ ತಲೆಮಾರಿನ ಲೇಖಕರು: ತಾರಿಣಿ ಶುಭದಾಯಿನಿ
  ಭಾಗವತ ೧೯:ಅಜಾಮಿಳನ ಮಗ ನಾರಾಯಣ
  ವಿ.ಕೆ.ಮೂರ್ತಿ ಚರಿತೆ:`..ಫೂಲ್' ಒಂದು ಅಪೂರ್ವ ಕೃತಿ
  ಖೇಣಿ ಪುರಾಣ- 19: ಕಲ್ಯಾಣದ ಆರಂಭ; ಮಂಟೇಸ್ವಾಮಿಯ ಅಂತ್ಯ
  ತರೀಕೆರೆ ಬರೆವ ಹೊಸಲೇಖಕರು:ಮಹಾಂತೇಶ ನವಲಕಲ್
  ವಡ್ಡರ್ಸೆ ಸರಣಿ-೫: ಬೆಂಬಲಕ್ಕೆ ಬಂದ ಇಂದೂಧರ
  ಭುವಿಯ ತಳದಲ್ಲಿರುವುದು ಹರಿವನೀರೂ,ಕುದಿವ ಲಾವಾರಸವೂ
  ವಿ.ಕೆ.ಮೂರ್ತಿ ಚರಿತೆ:ಬಿಸಿಲು ಕೋಲಿನ ಮಾಯೆ
  ಖೇಣಿ ಪುರಾಣ-18:ರೇಷ್ಮೆ ಕುಟುಂಬದ ಚೇತನ ಕಲ್ಲಪ್ಪ
  ಚೆನ್ನಿ ಕಥಾಕಾಲ:ಟೋನಿ ಮಾರಿಸನ್ ಬರೆದ ಗುಲಾಮ ಕಥನ
  ಚೆನ್ನಿ ಕಥಾಕಾಲ:ಅರೆ ಇರುಳಿನ ಮಕ್ಕಳು
  ವಡ್ಡರ್ಸೆ ಸರಣಿ-೪: ವಡ್ಡರ್ಸೆ ಭಾಷಣ ವರದಿ ಮಾಡುವ ಸ್ಪರ್ಧೆ