ಫೆಬ್ರವರಿ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಧಾರವಾಡದ ಕರ್ನಾಟಕ ಇತಿಹಾಸ ಸಂಶೋಧನ ಮಂಡಲ: ಒಂದು ಪರಿಚಯ    
ಸುನಾಥ ಧಾರವಾಡ
ಶನಿವಾರ, 19 ಸೆಪ್ಟೆಂಬರ್ 2009 (05:24 IST)
ಕನ್ನಡ ಸಾಹಿತ್ಯ ಹಾಗೂ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಇವು ಧಾರವಾಡದ ಎರಡು ಪ್ರಾಣನಾಡಿಗಳು. ಈ ಎರಡು ಪ್ರವಾಹಗಳ ಸಂಗಮದಿಂದಾಗಿ ಧಾರವಾಡ ಪಟ್ಟಣವು ಉತ್ತರ ಕರ್ನಾಟಕದ ಸಾಂಸ್ಕೃತಿಕ ಹೃದಯವೆಂದು ಖ್ಯಾತಿ ಪಡೆದಿದೆ. ಜೊತೆಜೊತೆಗೇ ಅನೇಕ ಸಾಂಸ್ಕೃತಿಕ ಸಂಸ್ಥೆಗಳೂ ಸಹ ಈ ಖ್ಯಾತಿಗೆ ತಮ್ಮ ಕೊಡುಗೆಯನ್ನು ನೀಡಿವೆ. ಇಂತಹ ಸಂಸ್ಥೆಗಳಲ್ಲಿ ಕರ್ನಾಟಕ ಇತಿಹಾಸ ಸಂಶೋಧನ ಮಂಡಲವು ಆದ್ಯ ಸ್ಥಾನವನ್ನು ಪಡೆದಿದೆ. ಕರ್ನಾಟಕ ಇತಿಹಾಸ ಸಂಶೋಧನ ಮಂಡಲವು ಜನ್ಮ ತಳೆದದ್ದು ಒಂದು ಐತಿಹಾಸಿಕ ಒತ್ತಡದಲ್ಲಿ. ಇದರ ಹುಟ್ಟಿಗೆ ಕಾರಣರಾದವರು ಪುಣೆಯ ಡೆಕ್ಕನ್ ಕಾಲೇಜಿನ ಕೆಚ್ಚೆದೆಯ ಕನ್ನಡ ವಿದ್ಯಾರ್ಥಿಗಳು. ಆ ಕತೆ ಹೀಗಿದೆ:

ಸ್ವಾತಂತ್ರ್ಯಪೂರ್ವದಲ್ಲಿ ಕನ್ನಡನಾಡು ನಾಲ್ಕು ತುಂಡುಗಳಾಗಿ ಹರಿದುಹಂಚಿ ಹೋದದ್ದು ಎಲ್ಲರಿಗೂ ಗೊತ್ತಿದ್ದ ಸಂಗತಿಯೇ. ಕನ್ನಡ ಅರಸರ ಆಳಿಕೆಯಲ್ಲಿದ್ದ ಮೈಸೂರು ಸಂಸ್ಥಾನದಲ್ಲಿ ಮಾತ್ರ ಕನ್ನಡವು ರಾಜಭಾಷೆಯಾಗಿತ್ತು. ಆದರೆ ಬ್ರಿಟಿಷರ ಆಳಿಕೆಯಲ್ಲಿದ್ದ ಮುಂಬಯಿ ಕರ್ನಾಟಕದಲ್ಲಿ ಮರಾಠಿಯದೇ ಮೇಲುಗೈ. ಅದರಂತೆ ಮದ್ರಾಸ ಕರ್ನಾಟಕದಲ್ಲಿ ತಮಿಳು ಭಾಷೆಗೇ ಏಕೈಕ ಮನ್ನಣೆ ಹಾಗೂ ನಿಜಾಮ ಕರ್ನಾಟಕದಲ್ಲಿ ಉರ್ದು ಹಾಗೂ ತೆಲಗು ಭಾಷೆಗಳ ಯಜಮಾನಿಕೆ.

ಈ ಸಮಯದಲ್ಲಿ ಆಂಗ್ಲ ಆಡಳಿತವು ಭಾರತೀಯ ಇತಿಹಾಸವನ್ನು ಅರಿತುಕೊಳ್ಳಲು ವೈಜ್ಞಾನಿಕ ವ್ಯವಸ್ಥೆಯನ್ನು ಅಂದರೆ ಶಿಲಾಶಾಸನಗಳು, ಹಸ್ತಪ್ರತಿಗಳು, ಪುರಾತನ ನಾಣ್ಯಗಳು ಹಾಗೂ ಉತ್ಖನನ ಇಂತಹ ಸಾಧನಗಳನ್ನು ಬಳಸಲಾರಂಭಿಸಿತು. ಈ ಪ್ರಯತ್ನಗಳಿಂದ ದಕ್ಷಿಣ ಭಾರತದ ಪ್ರಾಚೀನ ಇತಿಹಾಸವು ಬೆಳಕಿಗೇನೊ ಬಂದಂತಾಯಿತು. ಆದರೆ ಕನ್ನಡಿಗರಲ್ಲದ ಪರಭಾಷಿಕ ತಜ್ಞರು ಈ ಇತಿಹಾಸವೆಲ್ಲವೂ ಮರಾಠಿ ಹಾಗೂ ತೆಲಗು ಭಾಷಿಕರದು ಎನ್ನುವ ನಿಲವನ್ನು ತಳೆದಿದ್ದರು. ಉದಾಹರಣೆಗೆ ಪುಣೆಯ ನಿವಾಸಿ ಡಾಕ್ಟರ್ ರಾಮಕೃಷ್ಣ ಗೋಪಾಳ ಭಾಂಡಾರಕರ ಎನ್ನುವ ಪ್ರಸಿದ್ಧ ಇತಿಹಾಸತಜ್ಞರು ‘ದಕ್ಷಿಣಾಪಥದ ಪ್ರಾಚೀನ ಇತಿಹಾಸ’ ಎಂಬ ಗ್ರಂಥವನ್ನು ಬರೆದು ಅದರಲ್ಲಿ ಚಾಲುಕ್ಯರು ಹಾಗು ರಾಷ್ಟ್ರಕೂಟರು ಮರಾಠಿ ಭಾಷಿಕರು ಎಂದು ಘೋಷಿಸಿದ್ದರು.

ಇಸವಿ ೧೯೧೨-೧೩ರಲ್ಲಿ ಶ್ರೀ ನಾರಾಯಣ ಶ್ರೀನಿವಾಸ ರಾಜಪುರೋಹಿತರು ‘ಕೇಸರಿ’ ಎನ್ನುವ ಮರಾಠಿ ಪತ್ರಿಕೆಯಲ್ಲಿ “ಮಹಾರಾಷ್ಟ್ರ ಮತ್ತು ಕರ್ನಾಟಕ” ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಏಳು ಲೇಖನಗಳನ್ನು ಬರೆದು, ಚಾಲುಕ್ಯರು, ರಾಷ್ಟ್ರಕೂಟರು ಹಾಗು ದೇವಗಿರಿಯ ಯಾದವರು ಇವರೆಲ್ಲ ಕನ್ನಡ ಅರಸರೆನ್ನುವದನ್ನು ಪ್ರಮಾಣಪೂರ್ವಕವಾಗಿ ಸ್ಥಾಪಿಸಿದರು.

ಈ ರೀತಿಯಾಗಿ ಕನ್ನಡಿಗರು ತಮ್ಮ ಕುರುಹನ್ನು ಮತ್ತೆ ಸ್ಥಾಪಿಸಲು ಹಾಗೂ ತಮ್ಮ ಇತಿಹಾಸವನ್ನು ಸಮರ್ಥಿಸಲು ಹೋರಾಡಬೇಕಾಯಿತು. ಮುಂಬಯಿ ಕರ್ನಾಟಕದಲ್ಲಿ ಶ್ರೀ ಆಲೂರು ವೆಂಕಟರಾಯರು ಈ ಪ್ರಯತ್ನಗಳಿಗೆ ಮುಂದಾಳುಗಳಾದರು. ಪುಣೆಯ ಡೆಕ್ಕನ್ ಕಾಲೇಜಿನಲ್ಲಿ, ಇಸವಿ ೧೯೧೪ರಲ್ಲಿ ಆಲೂರು ವೆಂಕಟರಾಯರು “ಕರ್ನಾಟಕದ ಗತವೈಭವ” ಎನ್ನುವ ವಿಷಯದ ಮೇಲೆ ಮಾತನಾಡಿದರು. ಅವರ ಭಾಷಣದಿಂದ ಪ್ರಭಾವಿತರಾದ ಡೆಕ್ಕನ್ ಕಾಲೇಜಿನ ಕನ್ನಡ ವಿದ್ಯಾರ್ಥಿಗಳು ನೂರು ರೂಪಾಯಿ ದೇಣಿಗೆ ಕೂಡಿಸಿ, ಇವರ ಕೈಯಲ್ಲಿಟ್ಟು ಕರ್ನಾಟಕ ಇತಿಹಾಸದ ಸಂಶೋಧನೆಗಾಗಿ ಒಂದು ಸಂಸ್ಥೆಯನ್ನು ಸ್ಥಾಪಿಸಲು ಬಿನ್ನವಿಸಿದರು. ಈ ರೀತಿಯಾಗಿ ಕರ್ನಾಟಕ ಇತಿಹಾಸ ಸಂಶೋಧನ ಮಂಡಲವು ೧೯೧೪ರಲ್ಲಿ, ಶ್ರೀ ಆಲೂರು ವೆಂಕಟರಾಯರ ಅಧ್ಯಕ್ಷತೆಯಲ್ಲಿ ಧಾರವಾಡದಲ್ಲಿ ಜನ್ಮ ತಳೆಯಿತು.

ಕರ್ನಾಟಕ ಇತಿಹಾಸ ಸಂಶೋಧನ ಮಂಡಲವು ಇತಿಹಾಸ ಸಂಶೋಧನೆ ಹಾಗು ಪ್ರಸಾರ ಇವುಗಳನ್ನು ತನ್ನ ಧ್ಯೇಯವಾಗಿರಿಸಿಕೊಂಡು ಕಾರ್ಯಪ್ರವೃತ್ತವಾಯಿತು. ಈ ನಿಟ್ಟಿನಲ್ಲಿ ಮಂಡಲವು ಅನೇಕ ಐತಿಹಾಸಿಕ, ಸಂಶೋಧನಾತ್ಮಕ ಗ್ರಂಥಗಳನ್ನು ಪ್ರಕಟಿಸಿತು. ಅವುಗಳಲ್ಲಿ ಪ್ರಮುಖವಾದ ಕೆಲವು ಕೃತಿಗಳು ಇಂತಿವೆ:
(೧) ಆಲೂರು ವೆಂಕಟರಾಯರ ಕೃತಿಗಳು:
ವಿದ್ಯಾರಣ್ಯ ಚರಿತ್ರೆ, ಕರ್ನಾಟಕದ ಗತವೈಭವ, ಕರ್ನಾಟಕದ ವೀರರತ್ನಗಳು.
(೨) ಖ್ಯಾತ ಸಂಶೋಧಕ ಪಿ.ಬಿ.ದೇಸಾಯಿಯವರ ಕೃತಿಗಳು:
ಶಾಸನ ಪರಿಚಯ, ವಿಜಯನಗರ ಸಾಮ್ರಾಜ್ಯ.
(೩) ಡಾಕ್ಟರ್ ವರದರಾಜ ಉಮರ್ಜಿಯವರ ಕೃತಿಗಳು:
ಕರ್ನಾಟಕ ಪ್ರಾಕೃತ ಕವಿಚರಿತೆ, ಕನ್ನಡ ಭಾಷೆಯ ಉಗಮ ಮತ್ತು ಬೆಳವಣಿಗೆ.
(೪) ಆರ್.ಎಸ್. ಪಂಚಮುಖಿಯವರ ಕೃತಿಗಳು:
ಕರ್ನಾಟಕದ ಇತಿಹಾಸ, ಕರ್ನಾಟಕದ ಅರಸು ಮನೆತನಗಳು, ಕರ್ನಾಟಕ ಸ್ಕಲ್ಪಚರ್ಸ್(ಇಂಗ್ಲೀಷಿನಲ್ಲಿ).

ಸ್ವಲ್ಪ ಕಾಲದಲ್ಲಿಯೇ ಮಂಡಲವು ತನ್ನ ಕಾರ್ಯರಂಗವನ್ನು ವಿಸ್ತರಿಸಿತು. ಪ್ರಾಚೀನ ಹಸ್ತಪ್ರತಿಗಳನ್ನು ಹಾಗೂ ಗ್ರಂಥಗಳನ್ನು ಸಂಪಾದಿಸಿ, ಸಂಶೋಧಿಸಿ, ಪ್ರಕಟಿಸುವ ಉದ್ದೇಶದಿಂದ ಮಂಡಲದಲ್ಲಿ  ‘ಪ್ರಾಚ್ಯವಿದ್ಯಾ ಸಂಶೋಧನ ಕೇಂದ್ರ’ ಎನ್ನುವ ವಿಭಾಗವನ್ನು ತೆರೆಯಲಾಯಿತು. ಈ ವಿಭಾಗದಿಂದ ಇದುವರೆಗೆ ತಾಂಬೂಲಮಂಜರಿ, ಕೃಷಿ ಪಾರಾಶರ, ಪಾಕದರ್ಪಣ, ಜ್ಞಾನ ಭೈಷಜ್ಯ ಮಂಜರಿ, ಸುನೀತಿ ಭಾಗವತ ಹಾಗೂ ಸನ್ನೀತಿ ರಾಮಾಯಣ ಎನ್ನುವ ಗ್ರಂಥಗಳನ್ನು ಸಂಶೋಧಿಸಿ ಪ್ರಕಟಿಸಲಾಗಿದೆ. ಇದಲ್ಲದೆ ಕೇಂದ್ರ ಸರಕಾರದ ಧನಸಹಾಯದಿಂದ, ಪ್ರಾಚೀನ ಕಾಲದ ಪದಾರ್ಥವಿಜ್ಞಾನ, ರಸಾಯನಶಾಸ್ತ್ರ, ಆರೋಗ್ಯಶಾಸ್ತ್ರ, ಕೃಷಿವಿಜ್ಞಾನ ಹಾಗೂ ಸಸ್ಯವಿಜ್ಞಾನಗಳ ಪಾರಿಭಾಷಿಕ ಪದಗಳ ಐದು ಕೋಶಗಳನ್ನೂ ಸಹ ಸಿದ್ಧಪಡಿಸಲಾಗಿದೆ.

ಧಾರವಾಡದ ಕರ್ನಾಟಕ ಇತಿಹಾಸ ಸಂಶೋಧನ ಮಂಡಲಕರ್ನಾಟಕದ ಇತಿಹಾಸದ ಸಂಶೋಧನೆ ಹಾಗು ಪ್ರಸಾರ ಇವು ಮಂಡಲದ ಪ್ರಮುಖ ಧ್ಯೇಯಗಳಾಗಿವೆ. ಆದರೆ ಮಂಡಲವು ಇಷ್ಟಕ್ಕೆ ತನ್ನ ಕಾರ್ಯರಂಗವನ್ನು ಸೀಮಿತಗೊಳಿಸಿಲ್ಲ. ಕನ್ನಡಿಗರು ತಮ್ಮ ಅಸ್ಮಿತೆಯನ್ನು ಅರಿಯಬೇಕು; ಕನ್ನಡಿಗರಲ್ಲಿ ತಮ್ಮ ಇತಿಹಾಸದ ಅರಿವು ಬರಬೇಕು ಎನ್ನುವದು ಈ ಮಂಡಲದ ಆಶಯವಾಗಿದೆ. ಆದುದರಿಂದ ಕರ್ನಾಟಕ ಇತಿಹಾಸ ಸಂಶೋಧನ ಮಂಡಲವು ಕಾಲಕಾಲಕ್ಕೆ ಐತಿಹಾಸಿಕ ಸಮ್ಮೇಲನಗಳನ್ನು ಹಾಗೂ ವಿಚಾರಸಂಕಿರಣಗಳನ್ನು ಏರ್ಪಡಿಸುತ್ತಲಿದೆ. ತತ್ಕಾಲೀನ ಸಂಶೋಧನೆಗಳನ್ನು ಬೆಳಕಿಗೆ ತರುವ ಉದ್ದೇಶದಿಂದ Karnataka Historical Review ಎನ್ನುವ ಪತ್ರಿಕೆಯನ್ನೂ ಪ್ರಕಟಿಸುತ್ತಿದೆ.

ಉತ್ತರ ಕರ್ನಾಟಕದಲ್ಲಿ ಅಖಿಲ ಕರ್ನಾಟಕ ಐತಿಹಾಸಿಕ ಸಮ್ಮೇಲನಗಳನ್ನು ಮೊಟ್ಟಮೊದಲು ಏರ್ಪಡಿಸಿದ ಕೀರ್ತಿ ಕರ್ನಾಟಕ ಇತಿಹಾಸ ಸಂಶೋಧನ ಮಂಡಲಕ್ಕೆ ಸಲ್ಲುತ್ತದೆ. ೧೯೧೬, ೧೯೧೭ ಹಾಗು ೧೯೧೮ರಲ್ಲಿ ಮೂರು ಸಮ್ಮೇಲನಗಳು ಜರುಗಿದವು. ಈ ಸಮ್ಮೇಲನಗಳಿಗೆ ಕ್ರಮವಾಗಿ ಶ್ರೀ ಆಲೂರು ವೆಂಕಟರಾಯರು, ಶ್ರೀ ದೇಶಪಾಂಡೆ ರಾಮಚಂದ್ರರಾಯರು ಹಾಗು ಮೈಸೂರು ಆರ್ಕಿಯಾಲಾಜಿಕಲ್ ಇಲಾಖೆಯ ನಿರ್ದೇಶಕರಾಗಿದ್ದ  ಶ್ರೀ ರಾವಬಹಾದ್ದೂರ ಆರ್. ನರಸಿಂಹಾಚಾರ್ಯರು ಅಧ್ಯಕ್ಷರಾಗಿದ್ದರು.

ಈ ಸರಪಣಿಯಲ್ಲಿ ಮಂಡಲದ ಅತ್ಯಂತ ಹೆಮ್ಮೆಯ ಕಾರ್ಯವೆಂದರೆ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ೬೦೦ನೆಯ ವರ್ಷದ ಸ್ಮಾರಕೋತ್ಸವ. ಈ ಉತ್ಸವವನ್ನು ೧೯೩೬ರಲ್ಲಿ ಹಂಪೆಯಲ್ಲಿ ಅತಿ ವೈಭವದಿಂದ ಆಚರಿಸಲಾಯಿತು. ಇದು ಹಂಪಿಯಲ್ಲಿ ಜರುಗಿದ ಪ್ರಪ್ರಥಮ ಉತ್ಸವ. ಸರಕಾರದ ಸಹಾಯವಿಲ್ಲದೆ, ಕೇವಲ ಸಾರ್ವಜನಿಕರ ಉತ್ಸಾಹ ಹಾಗು ನೆರವಿನಿಂದ ಜರುಗಿದ ಈ ಉತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಸಾವಿರಾರು ಜನರು ಸ್ವಯಂಪ್ರೇರಣೆಯಿಂದ ಭಾಗವಹಿಸಿದ್ದೇ ಒಂದು ದಾಖಲೆಯಾಗಿದೆ.

ಸಂಶೋಧನಾ ಕಾರ್ಯಗಳ ಜೊತೆಗೆ ಭಾರತೀಯ ಲಿಪಿಶಾಸ್ತ್ರವನ್ನು ಬೋಧಿಸುವ, ವಿಶೇಷವಾಗಿ ಕನ್ನಡ ಲಿಪಿಶಾಸ್ತ್ರದ ಬೆಳವಣಿಗೆಯನ್ನು ಕಲಿಸುವ ಉದ್ದೇಶದಿಂದ ಸ್ನಾತಕೋತ್ತರ ಮಟ್ಟದ ಎರಡು ಶಿಬಿರಗಳನ್ನು ಶ್ರೀ ಆರ್.ಎಸ್. ಪಂಚಮುಖಿಯವರ ನೇತೃತ್ವದಲ್ಲಿ ನಡೆಸಲಾಗಿತ್ತು. ಈ ಶಿಬಿರಗಳಿಗೆ ಚೆನ್ನೈ, ಮುಂಬಯಿ, ನಾಸಿಕ ಮೊದಲಾದ ಸ್ಥಳಗಳಿಂದ ಅಭ್ಯರ್ಥಿಗಳು ಆಗಮಿಸಿದ್ದರು.

ಕರ್ನಾಟಕ ರಾಜ್ಯೋದಯದ ಸುವರ್ಣ ಮಹೋತ್ಸವದ ಅಂಗವಾಗಿ, ಐವತ್ತು ಸಂಶೋಧನಾ ಕೃತಿಗಳನ್ನು ಪ್ರಕಟಿಸುವ ಯೋಜನೆಯನ್ನು ಕರ್ನಾಟಕ ಇತಿಹಾಸ ಸಂಶೋಧನ ಮಂಡಲವು ೨೦೦೬ರಲ್ಲಿ ಕೈಗೆತ್ತಿಕೊಂಡಿತು. ಮಂಡಲದ ಸದ್ಯದ ಅಧ್ಯಕ್ಷರಾದ ಶ್ರೀ ಆ.ರಾ. ಪಂಚಮುಖಿಯವರು ಕರ್ನಾಟಕದ ಖ್ಯಾತ ಸಂಶೋಧಕರನ್ನು ಸಂಪರ್ಕಿಸಿ, ಅವರಿಂದ ಕರ್ನಾಟಕದ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲುವ ಸಂಶೋಧನಾ ಕೃತಿಗಳನ್ನು ಆಹ್ವಾನಿಸಿದರು. ಈ ಕೃತಿಗಳ ವೈವಿಧ್ಯ ಹಾಗೂ ಹರಹು ಅಪಾರವಾದದ್ದು. ಇವುಗಳನ್ನು ಸ್ಥೂಲವಾಗಿ ಈ ರೀತಿಯಾಗಿ ವಿಭಾಗಿಸಬಹುದು:
(೧) ಇತಿಹಾಸ, (೨) ಶಾಸನ, (೩) ಸಂಸ್ಕೃತಿ, ಧರ್ಮ, ಕಲೆ, (೪) ಜಾನಪದ ಸಾಹಿತ್ಯ, (೫) ಶಿವಶರಣರು ಮತ್ತು ವಚನಸಾಹಿತ್ಯ, (೬) ದಾಸಸಾಹಿತ್ಯ, (೭) ಇತರ ವಿಷಯಗಳು

ಈ ಐವತ್ತು ಕೃತಿಗಳನ್ನು ದಿ: ೧೩-೩-೨೦೦೯ರಂದು ಬೆಂಗಳೂರಿನಲ್ಲಿ ಜರುಗಿದ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಪತಿಗಳಾದ ಶ್ರೀ ಜಗದೀಶ ಶೆಟ್ಟರ ಅವರು ಬಿಡುಗಡೆ ಮಾಡಿದರು. ಈ ಕೃತಿಗಳಲ್ಲಿ ಖ್ಯಾತ ಸಂಶೋಧಕರಾದ ಎಸ್. ಕೆ. ಜೋಶಿ, ಪಿ.ಬಿ.ದೇಸಾಯಿ, ಶಾಲಿನಿ ಭಟ್ಟ,, ಕೆ.ವಸಂತಲಕ್ಷ್ಮಿ, ಜ್ಯೋತ್ಸ್ನಾ ಕಾಮತ, ಕೆ. ಆರ್. ಗಣೇಶ, ಚೆನ್ನಕ್ಕ ಪಾವಟೆ, ಶ್ರೀನಿವಾಸ ಪಾಡಿಗಾರ ಹಾಗೂ ಇತರರು ಸೇರಿದ್ದಾರೆ.

ಕೃತಿಗಳ ಬಗೆಗೆ ಹೆಚ್ಚಿನ ತಿಳಿವನ್ನು ಕರ್ನಾಟಕ ಇತಿಹಾಸ ಸಂಶೋಧನ ಮಂಡಲದ ಪ್ರಸಕ್ತ ಅಧ್ಯಕ್ಷರಾದ ಶ್ರೀ ಆ. ರಾ. ಪಂಚಮುಖಿ, ಕರ್ನಾಟಕ ಇತಿಹಾಸ ಸಂಶೋಧನ ಮಂಡಲ, ಆಲೂರು ವೆಂಕಟರಾವ ವೃತ್ತ, ಧಾರವಾಡ ಇವರಿಂದ ಪಡೆಯಬಹುದು.
ಪುಟದ ಮೊದಲಿಗೆ
 
Votes:  2     Rating: 5    
 
 
ಸಂಬಂಧಿಸಿದ ಲೇಖನಗಳು
  ದೆಹಲಿಯ ಚಳಿಗೆಂದು ರೇಣುಕಾ ಬರೆದದ್ದು
  ಇಂಟರ್ ಸಿಟಿ ಟ್ರೈನಿನಲ್ಲೊಬ್ಬ ಕನ್ನಡ ಪುಸ್ತಕೋದ್ಯಮಿ
  ಸುದ್ದಿ ಮಾಧ್ಯಮಗಳು ಮತ್ತು ಹೊಣೆಗಾರಿಕೆ
  ಅವತಾರ ನೋಡಿ ವೈಶಾಲಿ ಬರೆದದ್ದು
  ಕ್ರಿಕೆಟಿನ ತವರುಮನೆಯ ಕಳವಳಗಳು: ಯೋಗೀಂದ್ರ ಬರಹ
  ಹಾರಲಾರದ ಹಕ್ಕಿ- ಒಂದು ಸೂಫಿ ಕಥೆ
  ನಿರ್ದೇಶಕ ಅಭಯಸಿಂಹರಿಗೆ ಪ್ರೇಕ್ಷಕ ಬರೆದ ಪತ್ರ
  ಮಹಾಲಿಂಗೇಶ್ವರ ಭಟ್ ಬರೆದ ಪ್ರೇಮ ಕವಿತೆ
  `ರಣ್' ಚಿತ್ರದಲ್ಲೂ ಸತ್ಯ ಸತ್ತಿಲ್ಲವೆ?
  ಪ್ರೇಮಶೇಖರರ `ಕನ್ನಡಿ' : ಭಾನುವಾರ ದೆಹಲಿಯಲ್ಲಿ ಬಿಡುಗಡೆ
  ರಾಷ್ಟ್ರಪ್ರಶಸ್ತಿಯ ಗುಬ್ಬಚ್ಚಿಗಳು : ಅಭಯಸಿಂಹ ಬರಹ
  ಕುಸುಮ ರೋಗವೂ ಟೀವಿ ಸ್ಟೋರೀನೂ: ಪ್ರಿಯಾ ಬರಹ
  ‘ಇವಳನ್ನು ಹುಚ್ಚಿ ಎಂದು ಒಪ್ಪಲಾರೆ' : ಗಂಗಾಧರಯ್ಯ ಬರಹ
  ಗಣರಾಜ್ಯೋತ್ಸವ ಮತ್ತು ದೇವನೂರು: ಒಂದು ಮಾತುಕತೆ
  ಗಣ ರಾಜ್ಯೋತ್ಸವ ಸ್ಪೆಷಲ್- ಆರು ದಶಕಗಳ ಗಣತಂತ್ರ
  ಲಂಕೇಶರ ಲಘು ಕಥಾಪ್ರಸಂಗಗಳು- ಬಸವರಾಜು ಬರಹ
  ಲಂಕೇಶರ ಲಘು ಕಥಾಪ್ರಸಂಗಗಳು- ಬಸವರಾಜು ಬರಹ
  ಈಗ ವಿಷ್ಣು ಇಲ್ಲ; ಮಾರ್ಕೆಟ್ ಇದೆ
  ಮಗನಿಗೇ ಶಿಷ್ಯನಾದ ಓಶೋರ ತಂದೆ- ರಾಘು ಬರಹ
  ಫೇಸ್ಬುಕ್ಕಲ್ಲಿ ಇಲ್ಲ ಅಂದ್ರೆ ಬದುಕೀನೇ ಇಲ್ವಾ?
  ತಿರುಮಲೇಶ್ ಅನುವಾದಿಸಿದ ಬ್ರೌನಿಂಗ್ ಕವಿತೆ
  ಕಾಮ್ರೇಡ್ ನೀಲಾ ಕಂಡ `ಕೆಂಪು ಬಸುದಾ'
  ಚಾಮಯ್ಯ ಮೇಷ್ಟರೂ ಹೋಗಿಬಿಟ್ಟರು
  ಕಣ್ಣುಮುಚ್ಚಿದ ಕಾಮ್ರೇಡ್ ಬಸು- ಅನಂತಮೂರ್ತಿ ಹೇಳಿದ್ದು
  ಭಾನುವಾರದ ವಿಶೇಷ- ಸಂಧ್ಯಾದೇವಿ ಬರೆದ ಕವನ ಕಥನ
  ಹೈಟಿಯಲ್ಲಿ ಕೊಲೆಗಡುಕಿ ವಸುಂಧರೆ
  `ಗೌಡ್ರು ಬಯ್ದಿದ್ದು ಒಂದ್ಸಲ... ಆದರೆ ನೀವು?'
  ಸಂಕ್ರಾಂತಿಯ ನೆಪದಲ್ಲಿ ಕಿರಂ ಸಿಟ್ಟು
  ಪಟೇಲ್ ಮಂಜಯ್ಯನವರು ಮೊಮ್ಮಗಳಿಗೆ ಬರೆದ ಪತ್ರ
  ಕನ್ನಡದ ಪಾಪುಗೆ 90 ವರ್ಷ
  ಕೆಟ್ಟ ಮಾತಾಡಿ ಗಮನ ಸೆಳೆದ ಗೌಡರು
  ಒಂದು ಮಂದಹಾಸದಂತೆ ಮತ್ತೆ ಕೆಂಡಸಂಪಿಗೆ
  ಸಂಕ್ರಾಂತಿಯ ಕಂಪಿಗೆ ಮತ್ತೆ ಕೆಂಡಸಂಪಿಗೆ
  ಪರಮಾಣು ವಿದ್ಯುತ್ ಪರಿಸರ ಸ್ನೇಹಿಯೇ?
  ಸ್ವರ್ಗದ ಬಾಗಿಲು: ಒಂದು ಸೂಫಿ ಕಥೆ
  ಕರುನಾಡ ಕಲಾವಿದನಿಗೆ ಸಿಂಗಪುರದಿಂದ ಮೂರ್ತಿ ಬರೆದ ಪತ್ರ
  ಫೇಸ್ ಬುಕ್ಕಿನಲ್ಲಿ ಗೊರಿಲ್ಲಾ ಗೆಳೆಯರು
  ಯುರೋಪ್ ಪ್ರವಾಸದ ಕಸಾನುಭೂತಿ
  ಎಡಚರಿಗೊಂದು ಸಂತಸದ ಹೊಸ ಚಡ್ಡಿ
  ‘ಮಾನ್ಸೆಂಟೋ’ ಅವಾಂತರಗಳು: ಒಂದು ಸಾಕ್ಷ್ಯಚಿತ್ರ
  ಮುಕುಂದ ಜೋಶಿ ಅನುವಾದಿಸಿದ ಹಿಂದಿ ಕವಿತೆ
  ಗೂಗಲ್ ಗೆ ಚೀನಾದಲ್ಲಿ ಗಿರಾಕಿಗಳೇ ಇಲ್ಲ
  ಅಹೋಬಲ ಶಂಕರರ ಕುರಿತು ಉಮಾ: ಇನ್ನಷ್ಟು
  ನಾನು ಕಂಡ ಅಹೋಬಲ ಶಂಕರ: ಉಮಾ ಸಂಪಾದಕೀಯ
  ಬಿಜೆಪಿಗೆ ಜಿನ್ನಾ ಎಂಬ ‘ಜಿನ್ನು’ ಹಿಡಿದಿದೆಯೇ?
  ಸೂಫಿ ಕಥೆ: ‘ಬಗ್ದಾದಿಗೆ ಬಂದ ಮೃತ್ಯು ದೂತ’
  ಎತ್ತರದ ಹುಡುಗನ ಕಷ್ಟಗಳು
  ರಾಮಚಂದ್ರ ದೇವ ಬರೆದ ಒಂದು ಹಳೆಯ ಕವಿತೆ
  ಇನ್ನು ನಾವು ಬಲ್ಬಿಗೆ ವಿದಾಯ ಹೇಳಬಹುದೇ?
  ನೂರಏಳರ ಅಜ್ಜಿಗೆ ಇಪ್ಪತ್ಮೂರನೇ ಮದುವೆಯಾಗುವಾಸೆ!
  ಅನುಪಮಾ ಅನುವಾದಿಸಿದ ನಾಮದೇವ್ ಕವಿತೆ
  ಚೀನಾ: ದುಡಿವವರ ಕೈಗೆ ಅಂತರ್ಜಾಲ ಬಲ
  ಉಮಾ ಸಂಪಾದಕೀಯ:ತಿಮ್ಮಯ್ಯನೂ, ರಾಮಾಗಳೂ,ಲಿಂಗ ಲೆಕ್ಕಾಚಾರಗಳೂ
  ನಗರದ ದೃಶ್ಯಗಳು, ಕಾಡಿನ ಸದ್ದುಗಳು: ರಾಜೇಶ್ವರಿ ಬರಹ
  ತುರ್ತು ನಿಗಾ ಘಟಕದಲ್ಲಿ ಪಾಣಿಗ್ರಹಣ