ಸೆಪ್ಟೆಂಬರ್ ೭, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಯೋಗೀಂದ್ರ ಕಾಲಂ- ಹಿಮಪಾತದ ಹೊತ್ತಲ್ಲಿ ಇಂಗ್ಲೆಂಡ್ ಸಮಾಚಾರ    
ಯೋಗೀಂದ್ರ ಮರವಂತೆ
ಶನಿವಾರ, 23 ಜನವರಿ 2010 (06:14 IST)
ಮನೆ, ಮನ- ಹಿಮಮಯ

ವರ್ಷದ  ಹಿಂದೆ ಶುರು ಆದ ರಿಸೆಷನ್ನಿಂದ ಯಾವಾಗ ಹೇಗೆ ಹೊರ ಬಂದೇವು ಎನ್ನುವ ಬ್ರಿಟನ್ನಿನ ಸಮಸ್ಯೆ ಮತ್ತು ಚರ್ಚೆ ಇನ್ನೂ ಮುಗಿದೇ ಇಲ್ಲ .

ತಮ್ಮ ಆರ್ಥಿಕ ವ್ಯವಸ್ಥೆ ಹೊರಗಿನಿಂದ ಥಳಥಳಿಸಿದರೂ ಒಳಗಿನಿಂದ ಎಷ್ಟು ದುರ್ಬಲ ಎಂದು ಜನರು ಮನಗಂಡಿದ್ದಾರೆ. ಕೆಲಸ ಕಳೆದುಕೊಂಡ ಲಕ್ಷಾಂತರ ಜನರು,ಇನ್ನೊಂದು ಕಡೆ ತಮ್ಮ ಕೆಲಸವನ್ನು ಕಸಿದುಕೊಳ್ಳುತ್ತಿರುವ ಹೊರಗುತ್ತಿಗೆ ಮತ್ತು ಸುತ್ತಲಿನ ಯೂರೋಪಿನವರ ಮತ್ತು ಸ್ವಲ್ಪ ದೂರದ ಏಷಿಯಾದವರ ವಲಸೆಗಳ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವಾಗಲೇ ಹಿಮ ಸುರಿದದ್ದು; ಹಗಲು ಹೊತ್ತಿನಲ್ಲೂ ನೆಲಮಟ್ಟದ ಉಷ್ಣತೆ ನೀರಿನ ಘನೀಭವಿಸುವ ಉಷ್ಣತೆಗಿಂತ ಕೆಳಗೆ ಇರುವುದರಿಂದ ಸುರಿದ ಹಿಮ ಕರಗದೆ ನಿಂತದ್ದು; ವಾರದಿಂದ ಇಡೀ ಬ್ರಿಟನ್ ಹಿಮದ ಮುಸುಕು ಹೊದ್ದು ಒಳಗೇ ಗುದ್ದಾಡುತ್ತಿದೆ. ಮಾಡಿನ ಮೇಲೆ ಮನೆ ಮಾಡಿ ಕುಳಿತಿರುವ ಹಿಮದ ಪದರಗಳು ಇಳಿಯುವ ಸೂಚನೆ ಕಂಡು ಬರುತ್ತಿಲ್ಲ.

ಊರುಗಳ ಪ್ರಮುಖ ರಸ್ತೆಗಳನ್ನು ಸಂಚಾರಯೋಗ್ಯವಾಗಿಡಲು ಸ್ಥಳೀಯ ಸರಕಾರಗಳು ಹೋರಾಡುತ್ತಿವೆ. ಉಳಿದೆಲ್ಲ ಚಿಕ್ಕ ಪುಟ್ಟ ಮಾರ್ಗಗಳು ಅಡ್ಡ ರಸ್ತೆಗಳು ಹಿಮ ತುಂಬಿಕೊಂಡು ತಮ್ಮನ್ನು ಕೇಳುವವರೇ ಇಲ್ಲ ಎಂದು ಕುದಿಯುತ್ತಿವೆ. ಹಿಮ ಬೀಳಬಹುದೆಂಬ ಮುನ್ಸೂಚನೆ ಸಿಕ್ಕಿದ ಕೂಡಲೇ ರಸ್ತೆಗಳಿಗೆ ಹರಳು ಉಪ್ಪು (grit salt) ಹಾಕುವುದೊಂದು ಪದ್ಧತಿ. ಇದು ಹಿಮ ಕರಗಲು ಸಹಾಯ ಮಾಡುತ್ತದೆ.

ಈ ಸಲ ವ್ಯಾಪಕವಾಗಿ ಸುರಿದ ಹಿಮದಿಂದ ಉಪ್ಪಿಗೆ ಬೇಡಿಕೆ ಹೆಚ್ಚಿ ಅಂಗಡಿಗಳಲ್ಲಿ ಅಡುಗೆ ಉಪ್ಪು ಸಹ ಸಿಗುತ್ತಿಲ್ಲ! ಪುರಸಭೆಗಳು ತಮ್ಮ ತಮ್ಮ ಕ್ಷೇತ್ರಗಳಿಗೋಸ್ಕರ ಉಪ್ಪು ಸಂಗ್ರಹದಲ್ಲಿ ತೊಡಗಿದ್ದರೆ, ಜನಸಾಮಾನ್ಯರು ತಮ್ಮ ತಮ್ಮ ಆಸುಪಾಸುಗಳನ್ನು ಚೊಕ್ಕವಾಗಿಡಲು ಯದ್ವಾ ತದ್ವಾ ಉಪ್ಪು ಖರೀದಿಸಿ ಅಂಗಳಕ್ಕೆ ರಸ್ತೆಗೆ ಚೆಲ್ಲುತ್ತಿದ್ದಾರೆ. ಮೊನ್ನೆ ಮೊನ್ನೆಯ ತನಕವೂಮನೆಗಳು, ಹೂವಿನ ಗಿಡಗಳ ಮೇಲೆ ಹಿಮ ಪೆಟ್ರೋಲ್ ಇತ್ಯಾದಿ ಇಂಧನಗಳನ್ನು ಮಿತವಾಗಿ ಬಳಸಿ ಎನ್ನುತ್ತಿದ್ದ ಸರಕಾರ ಮತ್ತು ಅದರ ಪಂಡಿತ ವರ್ಗ ದಯವಿಟ್ಟು ಉಪ್ಪಿನ ಬಳಕೆ ಕಡಿಮೆ ಮಾಡಿ ಎನ್ನುತ್ತಿದೆ. ಉಗ್ರಾಣದಿಂದ ಕಳ್ಳರು ಉಪ್ಪಿನ ಮೂಟೆಗಳನ್ನು ಕಳ್ಳತನ ಮಾಡಿ ಸಮಯಪ್ರಜ್ಞೆಯಿಂದ ವರ್ತಿಸುತ್ತಿದ್ದಾರೆ. ಪೊಲೀಸರಿಗೆ ವಾರದಿಂದ ಬರುತ್ತಿರುವ ದೂರುಗಳಲ್ಲಿ ಹೆಚ್ಚಿನವು ಉಪ್ಪಿನ ಕಳ್ಳತನದ ಬಗ್ಗೆಯೇ ಆಗಿವೆ.

ದೇಶದ ಉದ್ದಗಲಕ್ಕೆ ಸಾವಿರಾರು ಶಾಲೆ ಕಾಲೇಜುಗಳಿಗೆ ಮಂಜು ಕರಗುವವರೆಗೂ ರಜೆ ಘೋಷಿಸಲಾಗಿದೆ. ಮಕ್ಕಳು ಸಿಕ್ಕಿದ ಅವಕಾಶದಲ್ಲಿ  ಹೊರಗೆ ಬಂದು ಯಥೇಚ್ಚವಾಗಿ ಹಿಮದ ಚೆಂಡಾಟ ಆಡುತ್ತಿದ್ದಾರೆ, ಹಿಮ ಮನುಷ್ಯನ ಗೊಂಬೆ ನಿರ್ಮಿಸುತ್ತಿದ್ದಾರೆ. ಮಂಜುಗಡ್ಡೆ ಎಂದರೆ ರೆಫ್ರಿಜಿರೇಟರಿನಲ್ಲಿ ನೋಡಿದ ಅನುಭವವೇ ಹೆಚ್ಚಿರುವ ನನ್ನಂತಹವರು ಕ್ಯಾಮೆರ ಹಿಡಿಕೊಂಡು ಬೀದಿ ಬೀದಿ ಸುತ್ತಿ ಫೋಟೋ ತೆಗೆಯುತ್ತಿದ್ದಾರೆ. ಮಂತ್ರ ತಂತ್ರಗಳ ಬಲ ಇಲ್ಲದೆ ಸರೋವರಗಳ ಮೇಲೆ ಜನರು ಓಡಾಡುತ್ತಿದ್ದಾರೆ. ಹಾಗೆ ಓಡಾಡಿದವರಲ್ಲಿ ಲೆಸ್ಟರ್ ನಗರದ ಕೆರೆಯೊಂದರ ಘನೀಭವಿಸಿದ ಮೇಲ್ಪದರ ಬಿರುಕು ಬಿಟ್ಟು ಸಹೋದರರಿಬ್ಬರು ಮುಳುಗಿ ಮಡಿದಿದ್ದಾರೆ. ಬಸ್ಸು ರೈಲುಗಳ ಸಂಚಾರ ದಾಕ್ಷಿಣ್ಯ ಇಲ್ಲದೆ ಸ್ಥಗಿತಗೊಂಡಿವೆ, ದೂರ ತೀರದ ವಿಮಾನಗಳು ಅತಿ ಜಾಗರೂಕತೆಯಲ್ಲಿ ಹತ್ತಿ ಇಳಿಯುತ್ತಿವೆ. ಸಾಗಾಣಿಕೆ  ವ್ಯವಸ್ಥೆ  ಇಲ್ಲದ ಕಾರಣ ಸಾವಿರಗಟ್ಟಲೆ ಲೀಟರು ಹಾಲನ್ನು ಮುಟ್ಟಿಸಬೇಕಾದ ಜಾಗಕ್ಕೆ ಮುಟ್ಟಿಸಲಾಗದೆ ವ್ಯರ್ಥವಾಗಿ ನೆಲಕ್ಕೆ ಚೆಲ್ಲಲಾಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡು ತತ್ತರಿಸುತ್ತಿದ್ದರೆ ವನ್ಯಜೀವಿಗಳೂ ಈ ವಿಷಮ ಪರಿಸ್ಥಿತಿಯಲ್ಲಿ ಬಳಲುತ್ತಿವೆ. ಹಿಮ ಕರಗುವುದರೊಳಗೆ ಇಂಗ್ಲೆಂಡಿನ ಕೆಲವು ಅಪೂರ್ವ ವನ್ಯಜೀವಿಗಳು ಕಣ್ಮರೆ ಆಗಬಹುದಂತೆ.

ಮಾತೆತ್ತಿದರೆ ಇತಿಹಾಸದ ಕಂತೆಯನ್ನು ಬಿಡಿಸಿ ಹಾಸುವ ಆಂಗ್ಲರು ೨೦೧೦ನೆಯ ಜನವರಿಯ ಹಿಮಪಾತವನ್ನು ತಮ್ಮ ಚರಿತ್ರೆಯ ಪುಟದೊಳಗೆ  ಗಟ್ಟಿಯಾಗಿ ಸೇರಿಸಿಕೊಂಡಿದ್ದಾರೆ. ೧೯೬೩ರ ಚಳಿಗಾಲದ ನಂತರದ ಭೀಕರ ಚಳಿಗಾಲ ‘ಇದೇ ಸೈ' ಎಂದು  ಅನುಭವಸ್ಥರು ಹಿರಿಯರು ತಮ್ಮ ತಲೆಕೂದಲೊಳಗೆ ಬೆರಳಾಡಿಸುತ್ತ ಅನುಭವವನ್ನು ಕದಡಿ ನೆನಪಿಸಿಕೊಳ್ಳುತ್ತಿದ್ದಾರೆ.ಮಕ್ಕಳು ನಿರ್ಮಿಸಿದ ಮನುಷ್ಯರೂಪದ ಹಿಮಗೊಂಬೆಗಳು

ರಿಸೆಷನ್, ವಲಸೆ, ಹೊರಗುತ್ತಿಗೆ ಇತ್ಯಾದಿ ಇತ್ಯಾದಿಗಳು ಮತ್ತೆ ಮತ್ತೆ ಹೊಸ ರೂಪ-ವೇಷದಲ್ಲಿ ಎದುರಾಗುವುದನ್ನು ನೆನೆಯುತ್ತ ಹಿಮಪಾತದ ಮೇಲೆ ಓಡಾಡುವುದು ಮೆಲ್ಲಗೆ ಶುರು ಆಗಿದೆ. ಹೊಸ ಪ್ರಪಂಚಕ್ಕೆ ಪರಿಚಿತವಾದ ಮಕ್ಕಳ ಕಲಿಕೆಯ ನಡಿಗೆಯಂತೆ ಹಿಮದ ರಾಶಿಯ ಮೇಲೆ ಎಲ್ಲರ ನಡಿಗೆ. ಆಗಷ್ಟೇ ಬರೆಯಲು ಕಲಿತ ಮಗುವೊಂದು ಸ್ಲೇಟಿನಲ್ಲಿ ಬರೆದ- ಯಾವ ಕ್ಷಣದಲ್ಲೂ ಅಳಿಸಿ ಹೋಗುವ ಅಳುಕಿನಲ್ಲೇ ಮೂಡುವ ವಿವಿದ ಆಕಾರದ ಅಕ್ಷರಗಳಂತೆ, ಹಿಮದ ರಾಶಿಯ ಮೇಲೆ  ಗುರುತುಗಳು ಕಾಣಿಸುತ್ತಿವೆ; ಅಜ್ಜ ಅಜ್ಜಿಯರ ಅಲುಗಾಡುವ ಹೆಜ್ಜೆಗಳು ಮೊಮ್ಮಕ್ಕಳ ಮರಿಮಕ್ಕಳ ತುಂಟ ನಡಿಗೆಗಳು, ಎಲ್ಲ ಸ್ತರದ ಎಲ್ಲ ತರದ ಮನುಷ್ಯರ ಹೆಜ್ಜೆಗಳು ಹಿಮದ ರಾಶಿಯ ಮೇಲೆ ಸ್ಪಷ್ಟವಾಗಿ ಮೂಡಿವೆ. ಒಂದೊಂದು ಹೆಜ್ಜೆಯ ಗುರುತು ಒಂದೊಂದು ದಿಕ್ಕು ಹಿಡಿದು ನಡೆದಂತೆ ಇದ್ದರೂ ಎಲ್ಲ ಹೆಜ್ಜೆ ಗುರುತುಗಳು ಒಬ್ಬರದೇ ಅನಿಸುವಷ್ಟು ಏಕತಾನತೆ ಇದೆ; ಒಬ್ಬರ ಹೆಜ್ಜೆಯ ಗುರುತೇ ಬೇರೆ ಬೇರೆ ಜಾಡಿನಲ್ಲಿ ಹೊಗಿರಲಿಕ್ಕೆ ಇರಬಹುದಾದ ಅನಿವಾರ್ಯತೆಯೂ ಇದೆ.

(ಚಿತ್ರಗಳು: ಯೋಗೇಂದ್ರ)

ಪುಟದ ಮೊದಲಿಗೆ
 
Votes:  3     Rating: 3.33    
 
 
ಸಂಬಂಧಿಸಿದ ಲೇಖನಗಳು
  ಶುಕ್ರವಾರದ ಸಂಜೆಗೆ ಬ್ರಿಸ್ಟಲ್ ಪ್ರೇಮ ಶಾಯರಿ
  ಜಿಕೆಆರ್ ಪುಸ್ತಕ ಪ್ರೀತಿ-ರಾಜೀವ ‘ಗುರ್ಬಾಣಕ್ಕಿ'
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ