ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ-ನೀಲು ಮತ್ತು ನೀಲಿಗಣ್ಣಿನ ಚೆಲುವೆ    
ಸುದರ್ಶನ್
ಗುರುವಾರ, 27 ಮಾರ್ಚ್ 2008 (03:47 IST)

ರೈಲಿನಲ್ಲಿ ಕೂತು ನೀಲುವೊಂದನ್ನು ಲ್ಯಾಪ್‌ಟಾಪಿನಲ್ಲಿ ತಿದ್ದುತ್ತಿದ್ದೆ. ಯಾವುದೋ ಪದ ಸರಿಹೋಗದೆ ಚಡಪಡಿಸಿದೆ. ಕಡೆಗೆ ಬೇಕಾದ ಪದ ಸಿಕ್ಕು ಖುಷಿಪಟ್ಟೆ. ಆ ಖುಷಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ತಿದ್ದುವ ಅಪಾಯವಿದೆ. ನೀಲು ತಾಜಾತನ ಕಳೆದುಕೊಳ್ಳುಬಹುದು. ತಿದ್ದಬೇಕು, ತಿದ್ದಿದಂತಿರಬಾರದು. ತಾಜಾ ನಗುವಿರಬೇಕು ಎಂದು ನನಗೆ ನಾನೇ ದೊಡ್ಡ ವಿಮರ್ಶಕನಂತೆ ಹೇಳಿಕೊಂಡೆ.

ಅಷ್ಟು ಹೊತ್ತಿಗೆ ಅಲ್ಲಿಗೆ ನೀಲಿಗಣ್ಣಿನ ಚೆಲುವೆ ಒಬ್ಬಳು ಬಂದು ಪಕ್ಕದಲ್ಲೇ ಕೂತಳು. ಬೀಚಿಂದ ಬಂದಿರಬೇಕು. ಮೈ ಮುಚ್ಚುವ ಉಡುಗೆಯೇನೂ ತೊಟ್ಟಿರಲಿಲ್ಲ. ನಕ್ಕೆ. ಆಕೆಯೂ ನಕ್ಕಳು. ಎಷ್ಟೋ ಹೊತ್ತು ಲ್ಯಾಪ್‌ಟಾಪ್‌ ದಿಟ್ಟಿಸುತ್ತಾ ಕೂತಿದ್ದು ನಂತರ ಒಂದೇ ಒಂದು ಪದ ಆಚೀಚೆ ಮಾಡುತ್ತಿದ್ದುದನ್ನು ದಿಟ್ಟಿಸುತ್ತಲೇ ಇದ್ದಳು. ನನಗೇನೋ ಕಸಿವಿಸಿಯಾಗಿ ತಲೆಯೆತ್ತಿ ನೋಡಿ ನಕ್ಕೆ. ಅಷ್ಟರಲ್ಲಿ ಅವಳ ನಲ್ಲ ಬಂದು ಅವಳ ಪಕ್ಕದಲ್ಲಿ ಕೂತ. ಅಜಾನುಬಾಹು. ಪುಂಡನಂತೆ ಕಾಣುತ್ತಿದ್ದ.

ಅವನು ಬಂದು ಕೂತಿದ್ದೇ ಈ ಹುಡುಗಿಗೆ ಏನಾಯಿತೋ - ಏನು ಬರೆಯುತ್ತಿದ್ದೀಯ ಎಂದು ಕೇಳಿದಳು, ನೀಲು ಅಂತ ಪುಟ್ಟ ಪದ್ಯಗಳು ಅಂದೆ... ಊಊಊ ಪೊಯೆಟ್ರಿಯಾ... ಎಂದು ಉದ್ಗರಿಸಿದಳು. ಅಷ್ಟರಲ್ಲಿ ಆಕೆಯ ಬ್ಯಾಗಿನ ಜಿಪ್ಪನ್ನು ಅವಳ ನಲ್ಲ ಎಳೆಯಲು ಹೋಗಿ ಕಿತ್ತುಬಿಟ್ಟ. ಕೂಡಲೆ ಆಕೆ ಬ್ಯಾಗನ್ನು ಆತನ ಕೈಗೆ ಕೊಟ್ಟು ಸರಿ ಮಾಡು ಎಂದು ನನ್ನತ್ತ ತಿರುಗಿದಳು. ಯಾವ ಭಾಷೆ ಇದು ಎಂದು ಕೇಳಿದಳು. ಕನ್ನಡ ಎಂದೆ. ಮುಗ್ಧವಾಗಿ ಏನೋ ಕೇಳಬೇಕೆಂದಿದ್ದವಳಿಗೆ ಕೆನಡಾ ಅಲ್ಲ ಅಂದೆ. ಜೋರಾಗಿ ನಕ್ಕಳು. ತನ್ನ ನಲ್ಲನಿಗೆ- ಇವನು ಮೈಂಡ್ ರೀಡ್ ಮಾಡಬಲ್ಲ ಎಂದು ತಮಾಷೆ ಮಾಡಿದಳು. ಅವನು ಜಿಪ್ ಸರಿಮಾಡುತ್ತಲೇ ನನ್ನತ್ತ ಕಿರು ನೋಟ ಬೀರಿ ನಕ್ಕ. ಬಹಳಷ್ಟು ಸಲ ಕೇಳಲ್ಪಟ್ಟ ಪ್ರಶ್ನೆ ಅದು ಅಷ್ಟೆ ಅಂತ ನಕ್ಕೆ.

ಇದ್ದಕಿದ್ದಂತೆ ನನ್ನ ಲ್ಯಾಪ್‌ಟಾಪ್‌ ಸ್ಕ್ರೀನ್‌ನ ಮೇಲೆ ತನ್ನ ನೀಳ ಬೆರಳುಗಳನ್ನು ಆಡಿಸಿದಳು. ಅಕ್ಷರಗಳು ತುಂಬಾ ಮುದ್ದಾಗಿವೆ ಅಂದಳು. ಅವಳ ನಲ್ಲ ನಮ್ಮತ್ತ ಒಮ್ಮೆ ನೋಡಿ ಬ್ಯಾಗ್ ರಿಪೇರಿಗೆ ತಿರುಗಿದ. ನಾನು ನೀಲು ತಿದ್ದಲು ತೊಡಗಿದೆ. ಆಕೆ ತಿರುಗಿ ತನ್ನ ನಲ್ಲನ ಕೆಲಸ ನೋಡ ತೊಡಗಿದಳು. ಅಲ್ಲಿಗೆ ಮಾತು ನಿಂತಿತು. ಜಿಪ್ ಸರಿಯಾಗಿ ತನ್ನ ಜಾಗದಲ್ಲಿ ಕೂರದೆ ಕಷ್ಟ ಕೊಡುತ್ತಿತ್ತು. ಇಬ್ಬರೂ ಒಬ್ಬರನ್ನೊಬ್ಬರು ನೋಡಿಕೊಂಡರು. ಆಕೆ ನಿರಾಳದಿಂದ ಕಿಟಕಿಯಾಚೆ ನೋಡುತ್ತಾ ಏನೋ ಯೋಚನೆಯಲ್ಲಿ ಮಗ್ನಳಾದಳು. ಏನೋ ಕೇಳಬೇಕೆಂದು ನನ್ನತ್ತ ಒಂದೆರಡು ಬಾರಿ ನೋಡಿ ತಡಕೊಂಡಳು. ನಂತರ ತಟ್ಟನೆ. ನಿನ್ನ ನೀಲು ಓದಿ ಹೇಳುತ್ತೀಯ. ನನಗೆ ಕೇಳಬೇಕು ಅಂದಳು. ನಿನಗೆ ಅರ್ಥವಾಗುವುದಿಲ್ಲ ಅಂದ್ದದ್ದಕ್ಕೆ ಪರವಾಗಿಲ್ಲ ಹೇಗೆ ಕೇಳುತ್ತದೆ ಎಂದು ಕುತೂಹಲ, ಓದು ಅಂತ ಒತ್ತಾಯಿಸಿದಳು. ಆಕೆಯ ನಲ್ಲ ತನ್ನ ರಿಪೇರಿ ಕೆಲಸ ಬಿಟ್ಟು ನನ್ನತ್ತ ನೋಡತೊಡಗಿದ.

ಒಳ್ಳೆ ಪೀಕಲಾಟಕ್ಕೆ ಬಂತೆನಿಸಿತು.. ನನ್ನ ಪದ್ಯಗಳನ್ನು ಓದುವುದು ನನಗೆ ಅಷ್ಟು ಸುಲಭವಲ್ಲ. ಇಬ್ಬರೂ ನನ್ನತ್ತ ಶುರು ಮಾಡು ಎಂಬಂತೆ ಕಾಯುತ್ತಾ ನೋಡಿದರು. ಗಾಳಿ ಹೆಪ್ಪುಗಟ್ಟಿದಂತಾಯಿತು. ಬರೆಯುತ್ತಿದ್ದ ನಾಕಾರು ನೀಲುಗಳಲ್ಲಿ ಒಂದನ್ನು ಆರಿಸಿಕೊಂಡು ಮೆಲ್ಲನೆ ಓದಿದೆ. ಕೇಳಿ ಒಂದೆರಡು ಕ್ಷಣ ಕೈ ಬಾಯಿಗಿಟ್ಟು ಎಷ್ಟು ಚೆಂದ ಕೇಳುತ್ತದೆ ಅಂದಳು. ಆ ಪದ್ಯದ ಅರ್ಥ ಏನು ಅಂದಳು. ಇದೊಳ್ಳೇ ಗ್ರಹಚಾರ ಎಂದು ಕೊಂಡು ಗೊತ್ತಿಲ್ಲ ಅಂದೆ. ತಮಾಷಿ ಮಾಡ್ತೀಯ ಅಂದಳು. ಇಲ್ಲ ಬೇಕಾದರೆ ಪದಗಳ ಇಂಗ್ಲಿಷ್ ಅರ್ಥ ಹೇಳ್ತೀನಿ ನಿನಗೆ ಅರ್ಥ ಆಗಬಹುದು ಅಂತ ಅರ್ಥ ಹೇಳಿದೆ. ಓ.... ಎಷ್ಟು ಚೆನ್ನಾಗಿದೆ ಎಂದು ಮತ್ತೆ ಉದ್ಗರಿಸಿದಳು. ಅಷ್ಟು ಹೊತ್ತಿಗೆ ನನ್ನ ಸ್ಟೇಷನ್ ಬಂತು. ಲ್ಯಾಪ್‌ಟಾಪ್ ಮುಚ್ಚಿದೆ. ಗುಡ್‌ಲಕ್ - ಚೆನ್ನಾಗಿ ಬರೆಯುತ್ತೀಯ ಅಂದಳು. ನಾನು ನ್ಯೂಜೀಲಾಂಡಿನವಳು, ನಾಕಾರು ವರ್ಷದಿಂದ ಇಲ್ಲಿದ್ದೇವೆ ಎಂದು ಆ ನೀಲಿಗಣ್ಣಿನ ಚೆಲುವೆ ಕಣ್ಣರಳಿಸಿ ನೈಸ್ ಟು ಮೀಟು ಯು ಅಂದು ಕೈಕುಲುಕಿದಳು. ನಾನು ನಕ್ಕು ಬೈ ಎನ್ನುತ್ತಾ ಇಳಿದೆ.

ಇದಕ್ಕೆಲ್ಲಾ ಏನು ಅರ್ಥ ಹಚ್ಚುತ್ತೀರ? ಎಲ್ಲಿಗೆ ಸಲ್ಲಿಸುತ್ತೀರ?

ಹಿಂದಿನ ಪ್ರತಿಕ್ರಿಯೆಗಳು

rashmi:

January 12th, 2008 at 10:28 pm
gottillada hudugi asht bega athmiyaa Agi namma kannadada bagge kelidallalla IT'S GOOD nimma nirupane chennagide

ಅಹರ್ನಿಶಿ ಶ್ರೀಧರ್:

January 13th, 2008 at 3:02 pm
ಸುದರ್ಶನ್ ಅವರೆ,

ನಿಮ್ಮ ಸಿಡ್ನಿ ಚೆಲುವೆಗೊ೦ದು ನೀಲು..........

"ಸಿಡ್ನಿ"ಯಲ್ಲಿ
"ಸಿಡಿಮಿಡಿ"ಗೊಳ್ಳದೆ
ತು೦ಡು "ಮಿಡಿ"ಯಲ್ಲಿ
ಕನ್ನಡಕ್ಕಾಗಿ "ಮಿಡಿ"ದ
ನ್ಯೂಜಿಲೆ೦ಡ್
ನಲ್ಲೆಗೊ೦ದು
ಅನಿವಾಸಿ ಕನ್ನಡಿಗನ
ನಮನ.

basavakumar t.n:

January 13th, 2008 at 4:45 pm
preethiya sudarshan
hudugiyaru hudugara jothe eruvaaga swalpa vichitravaagi vartisuttare,kelavomme arthavagada bhasheyannu innobba yuvakanininda kelisisikondu avala nallana hotte urisirabahud,nimage hagannisallilava?
neevu australiaada moolanivasigala bagge bareyiri.
dhayavaadagalu
basavakumar.mangalore.

ಶ್ರೀನಿಧಿ.ಡಿ.ಎಸ್:

January 13th, 2008 at 11:19 pm
ಆಹಾ.. ಒಂದು ನವಿರು ಬರಹ, ಲೈಫೇ ಹೀಂಗೇ ಸಾರ್, ಸುಮ್ ಸುಮ್ನೆ ಖುಷಿ ಕೊಟ್ಟು ಹಾಂಗೇ ಹೋಗ್ತಾ ಇರತ್ತೆ, ನೀವಿಳಿದ ರೈಲಿವ ತರ!

ಹೇಗಿದೆ ಸಿಡ್ನಿ:)ಜಾಗೃತರಾಗಿದ್ದೀರೋ?:)

ನೂರ್ ಜಹಾನ್:

January 14th, 2008 at 1:07 pm
ಬಹಳ ಜಾಣತನದಿ೦ದ ನನ್ನತರದ ಬಡಪಾಯಿಗಳೆಲ್ಲ ನಿಮ್ಮ ನೀಲುವನ್ನು ಮೆಚ್ಚುವ೦ತೆ ಮಾಡಿಬಿಟ್ಟಿರಿ.ಆಸ್ಟ್ರೇಲಿಯಾದನೀಲಿಗಣ್ಣಿನ ಚೆಲುವೆಯೇ ಮೆಚ್ಚಿದ ಮೇಲೆ?

naveen rao:

January 17th, 2008 at 11:59 am
ನಿಮ್ಮ ಪದ್ಯ ಚೆನ್ನಾಗಿರಲೇಬೇಕು. ಹಾಗಿಲ್ಲದಿದ್ದರೆ ನೀಲಿಗಣ್ಣಿನವಳು ನಿಮ್ಮ ನೀಲು'ನ ಅಷ್ಟೊಂದು ಇಷ್ಟ ಪಡುತ್ತಿರಲಿಲ್ಲ.

ಧನ್ಯವಾದಗಳು.
ನವೀನ್ ರಾವ್, ಬೆಂಗಳೂರು.

ಪುಟದ ಮೊದಲಿಗೆ
 
Votes:  1     Rating: 5    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು