ಫೆಬ್ರವರಿ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ-ಬತ್ತಲಾಗಿಯೂ ಬಯಲು ಸಿಕ್ಕಲಿಲ್ಲ    
ಸುದರ್ಶನ್
ಶನಿವಾರ, 5 ಏಪ್ರಿಲ್ 2008 (08:16 IST)

ಸಿಡ್ನಿಯ ಮೊದಲ ಫೈನಲ್‌ನಲ್ಲಿ ತೆಂಡುಲ್ಕರ್ ಸೆಂಚುರಿ ಹೊಡೆದರು. ಇಂಡಿಯ ಮ್ಯಾಚ್ ಗೆದ್ದು ಎದೆಯುಬ್ಬಿಸಿತು. ಮಾರನೇ ದಿನ ಆಸ್ಟ್ರೇಲಿಯಾದ ಮಾಧ್ಯಮಗಳು ಹರ್ಭಜನ್ ಕಂಕುಳು ಕೆರಕೊಂಡದ್ದನ್ನು ಅನುಮಾನಿಸಿ ದೊಡ್ಡ ಸುದ್ದಿ ಮಾಡಿದವು. ಎರಡನೇ ಫೈನಲ್  ಕೂಡ ಗೆದ್ದ ಇಂಡಿಯಾ ಏಕದಿನ ಸರಣಿಯನ್ನೇ ಗೆದ್ದು ಕುಣಿದಾಡಿತು. ಅದರ ಮಾರನೇ ದಿನ, ಆಂಡ್ರೂ ಸೈಮಂಡ್ಸ್  ಬೆತ್ತಲೆಯಾಗಿ ಓಡಿಬಂದ ಪ್ರೇಕ್ಷಕನನ್ನು ತಡೆದು ಉರುಳಿಸಿದ್ದನ್ನು ದೊಡ್ಡ ಸುದ್ದಿ ಮಾಡಿದರು. ಅಂದ ಹಾಗೆ, ಇಂಡಿಯ ಗೆದ್ದಿತು ಎಂದು ಕಡೆಯ ಪ್ಯಾರಾದಲ್ಲಿ ಚಿಕ್ಕದಾಗಿ ಸೇರಿಸಿದರು. ಇದಕ್ಕೆಲ್ಲಾ ಸಿಟ್ಟಾಗುತ್ತೇವೆ, ಸೇಡು ತೀರಿಸಿಕೊಂಡೆವೆಂದು ಒಳಗೊಳಗೇ ನಗುತ್ತೇವೆ. ಹರ್ಭಜನ್ ವಿಷಯದಲ್ಲಿ ಏನೆಲ್ಲಾ ಮಾಡಿ ಕಡೆಗೂ ಅವನ ಮಾನ ಉಳಿಸಿದ ಸಂಗತಿ ನೆನಪಾಗಿ ಆ ನಗುವಿಗೆ ಗೆದ್ದ ಕಳೆ ಸೇರಿಕೊಳ್ಳುತ್ತದೆ.

ಅದೆಲ್ಲಾ ಇರಲಿ. ಆದರೆ ಆಂಡ್ರೂ ಸೈಮಂಡ್ಸನಿಂದ ಗುದ್ದಿಸಿಕೊಂಡ ಬೆತ್ತಲೆಯವನ ಸಮಾಚಾರ ಒಂದೆರಡು ದಿನ ಮುಂದುವರೆಯಿತು. ಅವನು ಬ್ರಿಸ್ಬೆನ್ನಿನ ಕೋರ್ಟಲ್ಲಿ ಹಾಜರಾದ. ಗಂಟೆ ಆಡಿಸಿಕೊಂಡು ದೋಣುಕುಂಡಿಯಾಗಿ ಓಡಿದ್ದಕ್ಕೆ ಒಂದೂವರೆ ಸಾವಿರ ಡಾಲರ್‍ ದಂಡವಾಯಿತು. ಆದರೆ ಅವನ ಹೆಸರಿಗೆ ಯಾವುದೇ ಕನ್ವಿಕ್ಷನ್ ದಾಖಲಾಗಲಿಲ್ಲ.

ಹಿಂದೆಲ್ಲಾ ಸೆಂಚುರಿ ಹೊಡೆದಾಗ, ಪಂದ್ಯ ಮುಗಿದಾಗ ಜನ ಕ್ರೀಡಾಂಗಣಕ್ಕೆ ಲಗ್ಗೆ ಇಡುವುದು ನೋಡಿದ್ದೇವೆ. ತಮ್ಮ ನೆಚ್ಚಿನ ಆಟಗಾರರ ಬೆನ್ನು ತಟ್ಟುವುದು ನೋಡಿದ್ದೇವೆ. ಅವರೊಡನೆ ಪೆವಿಲಿಯನ್‌ವರೆಗೂ ಕುಣಿಯುತ್ತಾ ಹೋಗುವುದು ನೋಡಿದ್ದೇವೆ. ಆದರೀಗ ಕ್ರಿಕೆಟ್ ಅತ್ಯಂತ ಹಣದ ವಹಿವಾಟಿನ ಆಟವಾಗಿ ಬದಲಾದ ಮೇಲೆ ಅವೆಲ್ಲ ಇಲ್ಲ. ಎಲ್ಲವೂ ಕಟ್ಟುನಿಟ್ಟಾಗಿ, ಬಂದೋಬಸ್ತಿನಲ್ಲಿ ನೋಡುಗರನ್ನು ದೂರದಲ್ಲೇ ಇಟ್ಟು ಆಟ ನಡೆಯುತ್ತದೆ. ಆಟಗಾರರನ್ನು ಹತ್ತಿರದಿಂದ ನೋಡಬೇಕನಿಸಿದವರು ಮನೆಯಲ್ಲಿ ಟೀವಿಯಲ್ಲಿ ಕ್ಲೋಸಪ್ ನೋಡಬೇಕಷ್ಟೆ. ನನಗಂತೂ ಮಕ್ಕಳನ್ನಾದರೂ ಕ್ರೀಡಾಂಗಣಕ್ಕೆ ಲಗ್ಗೆ ಇಡಲು ಬಿಡಬೇಕು ಎಂದು ಹಲವು ಸಲ ಅನಿಸಿದೆ. ಆ ಉತ್ಸಾಹ ಮತ್ತು ನೆನಪು ಅವರನ್ನು ತುಂಬಾ ದಿನ ಹುರಿದುಂಬಿಸಬಲ್ಲುದು ಎಂಬ ಆಸೆ.

ಆತ ಬಟ್ಟೆತೊಟ್ಟುಕೊಂಡೇ ಕೋರ್ಟಿನಿಂದ ಹೊರಬಂದು ಟೀವಿ ರೇಡಿಯೋಗೆ ವಿವರಿಸಿದ- "ಬಿಯರ್‍ ಕುಡಿದಿದ್ದೆ. ಗೆಳೆಯರ ಶರತ್ತೊಂದಕ್ಕೆ ಮಾರುತ್ತರ ಕೊಡಬೇಕಾಗಿತ್ತು. ನಾನು ಅದನ್ನು ಮಾಡಲೇಬೇಕಾಗಿತ್ತು. ನೀವು ಒಂದೇ ಸಲ ಬದುಕುವುದು" ಎಂದು ಹೇಳಿ ಹೊರಟುಬಿಟ್ಟ. ರೇಡಿಯೋ ಹಾಗು ಟೀವಿಯವರು ಅವನನ್ನು ಬೆನ್ನಟ್ಟಿ ಮಾತಾಡಿಸಿದರು. ಅವನ ಬದುಕಿನ, ಯೋಚನೆಯ ವಿವರಗಳಲ್ಲಿ ಏನಾದರೂ ರೋಚಕವಾದದ್ದು ಇದೆಯೇ ಎಂದು ತಡಕಾಡಿದರು. ಆ ತಡಕಾಟದ ಪರಿಣಾಮವಾಗಿ ಟೀವಿ ಒಂದಕ್ಕೆ ಸಂದರ್ಶನ ಕೊಟ್ಟು ಏಳೂವರೆ ಸಾವಿರ ಡಾಲರ್‌ಗಳನ್ನು ಪಡೆದ. ಕೂಡಿ ಕಳೆದು ಅವನಿಗೆ ಆರು ಸಾವಿರ ಲಾಭವೇ ಆಯಿತು. ಕನ್ವಿಕ್ಷನ್ ಏನಾದರೂ ದಾಖಲು ಮಾಡಿದ್ದರೆ ಅವನು ಸಂದರ್ಶನ ಕೊಟ್ಟು ದುಡ್ಡು ಪಡೆಯುವುದು ಕಾನೂನು ಬಾಹಿರವಾಗುತ್ತಿತ್ತು. ಈಗ ಹಾಗಿಲ್ಲ. ಅವನು ನಗುತ್ತಲೇ ಇದ್ದ. ಎಲ್ಲಿಯೂ ನಾಚಿಕೆ ಹಾಗು ಮಾನದ ಬಗ್ಗೆ ಪ್ರಶ್ನೆಯಾಗಲಿ ಚರ್ಚೆಯಾಗಲಿ ನಡೆದಂತೆ ಕಾಣಲಿಲ್ಲ. ಇಂಥವು ಪಾಶ್ಚಿಮಾತ್ಯರ ಹುಚ್ಚಾಟ ಎಂದು ತಳ್ಳಿಹಾಕುವ ಮೊದಲು, ಕನಸು ಮನಸ್ಸಿನಲ್ಲೂ ಅವನಂತೆ ಮಾಡಲಾರದವರೇ ಇಲ್ಲಿ ಹೆಚ್ಚು ಎಂಬುದೂ ನೆನಪಿಡಬೇಕು.

ಇನ್ನೊಂದು ಬಗೆಯಲ್ಲೂ ಇದನ್ನು ನೋಡಬಹುದು. ಆಟದ ಸುತ್ತುಮುತ್ತ ಬಂದೋಬಸ್ತು ಹಾಗು ಕಟ್ಟುನಿಟ್ಟು ಮಿತಿಮೀರಿದೆ. ಇದರಿಂದಾಗಿಯೇ ಬಟ್ಟೆ ಬಿಚ್ಚಿಕೊಂಡು ಓಡುವ ಸ್ಟ್ರೀಕರ್‍ ಪ್ರವೃತ್ತಿ ಹೆಚ್ಚುತ್ತಿದೆಯೆ ಎಂದೂ ಕೇಳಬಹುದು. ಮಾಡಕೂಡದೆಂದು ವಿಧಿಸಿದ್ದನ್ನು ಮಾಡುವುದು ನಮ್ಮೆಲ್ಲರ ಗುಣ. ಮಾನ-ಅವಮಾನ ಇವೆಲ್ಲವನ್ನು ಮೀರಿದ ಮಾತಿದು. ಮನುಷ್ಯನ ಮಾನದ ಮಿತಿ ಸದಾ ಪ್ರಶ್ನೆಗೊಳಗಾಗುತ್ತಿರುವ ಇಂದಿನ ಜಗತ್ತಿನಲ್ಲಿ ಬೆತ್ತಲೆ ಓಡುವುದನ್ನು ಹೇಗೆ ನೋಡುವುದು? ಬೆತ್ತಲೆ ಓಡಿದವನ ಮಾನ ನಿಜವಾಗಿಯೂ ಹೋಯಿತೆ? ಅಷ್ಟು ಸಣ್ಣ ವಿಷಯಕ್ಕೆ ಮಾನ ಹೋಗಬಹುದೆ? ವಿಕೃತವಾದ ಹಲವು ಬಗೆಯ ಕೋಟಲೆಯನ್ನು ಸುತ್ತಲಿನವರಿಗೆ ಕೊಡುತ್ತಿರುವ ಮಂದಿ ನಮ್ಮ ನಡುವೆಯೇ ಇರುವಾಗ? ಅದೂ ಮಾನವಂತರಾಗಿಯೇ ಬದುಕುತ್ತಿರುವಾಗ? ಬೇರೆಯವರಿಗೆ ತೊಂದರೆ ಕೊಡದೆ ತನ್ನ ಸ್ವೇಚ್ಛೆಯನ್ನು ಬಳಸುವುದಕ್ಕೆ ಸದಾ ಅವಕಾಶವಿರುವುದು ಒಳ್ಳೆಯದೆ. ಸಂಪ್ರದಾಯವಾದೀ ಸಮಾಜಕ್ಕೂ ಈ ಮಾತು ಒಪ್ಪುತ್ತದೆ. ಮುಕ್ತ ಮನಸ್ಸನ್ನು ಹಾಗೂ ಸೃಜನಶೀಲ ಮನಸ್ಸನ್ನು ರೂಪಿಸುವುದಕ್ಕೆ ಇವು ಅಮೂಲ್ಯ ಸವಲತ್ತುಗಳು. ಕೆಲವೊಮ್ಮೆ ಅತಿರೇಕ ಅನಿಸಿದರೂ ಕೂಡ.

ಪುಟದ ಮೊದಲಿಗೆ
 
Votes:  4     Rating: 4.25    
 
 
ಸಂಬಂಧಿಸಿದ ಲೇಖನಗಳು
  ಪಟ್ಟಣಪುರಾಣ: ಮಣ್ಣ ಇಟ್ಟಿಗೆ ಕೊಳ್ಳಿರೋ
  ತರೀಕೆರೆ ಏರಿಯಾ: ಬಂಗಾಳದ ಪುಖೂರ್ ಕೆರೆಗಳು
  ಸ್ಟೋನ್ ಹಿಲ್ ಡೈರಿ: ಎಮ್ಮಯ ಹೆಮ್ಮೆಯ ರಾಜಾಮೀಸೆ
  ಮಹಾರಾಷ್ಟ್ರದಲ್ಲೇನಾಗುತ್ತಿದೆ?-ಪ್ರೇಮಶೇಖರ ಕಾಲಂ
  ಕೆ.ಟಿ.ಗಟ್ಟಿ ಬಿಸಿಲುಕೋಲು: ಸಿನ್ಸಿನಾಟಿಯ ಸೌಂದರ್ಯ
  ಕಟ್ಟಿಕೊಳ್ಳುವ ತಲ್ಲಣದಲ್ಲಿ ಹೆಕ್ಕಿ ತೆಗೆದ ಸಾಲುಗಳು
  ಶಂಕರ ಪರ್ವತದಿಂದ ಕಂಡ ಶ್ರೀನಗರ
  ಯೋಗೀಂದ್ರ ಕಾಲಂ- ಹಿಮಪಾತದ ಹೊತ್ತಲ್ಲಿ ಇಂಗ್ಲೆಂಡ್ ಸಮಾಚಾರ
  ಸ್ಟೋನ್ ಹಿಲ್ ಡೈರಿ: ಹೇಳಿ, ನಾನು ಬದುಕಿರುವೆನೇ?
  ಪ್ರೇಮಶೇಖರ ಕಾಲಂ- ನೇಪಾಲವೂ ಮಗ್ಗುಲ ಮುಳ್ಳಾಗುತ್ತಿದೆಯೇ?
  ಸತೀಶ್ ಬರೆಯುವ ಕಾಶ್ಮೀರದ ಚಿತ್ರ-೭
  ಕವಲಕ್ಕಿ ಡೈರಿ - ಹಾವು ಕಡಿತದ ಕಥೆಗಳು
  ವಸ್ತಾರೆ ಕಾಲಂ- ವಾಸ್ತುಶಿಲ್ಪಿಯ ವಾಸ್ತವ ಪುರಾಣ
  ತರೀಕೆರೆ ಏರಿಯಾ-ಮನೆಯ ನೆಮ್ಮದಿ , ಸಂತೆಯ ಸ್ವಾತಂತ್ರ್ಯ
  ಕೆ.ಟಿ. ಗಟ್ಟಿ ಬಿಸಿಲುಕೋಲು: ಯಾವ ದೇಶ ಪ್ರೇಕ್ಷಣೀಯ?
  ನವರಾತ್ರಿ ಕಳೆದು ನರಸಿಂಹದಾಸರ ನೆನಪು
  ಆಸ್ಟ್ರೇಲಿಯಾ ಪತ್ರ: ಸಿಡ್ನಿ ಆಗಸದಲ್ಲಿ ಧೂಳ ಲೀಲೆ
  ಹಲ್ಲಿಯ ತಲೆ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ?
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು-೬
  ‘ಪುಸ್ತಕ ಪ್ರೀತಿ’: ಮಾಧವ ಕುಲಕರ್ಣಿಯವರ ‘ಪಾತಾಳ ಗರಡಿ’
  ವಸ್ತಾರೆ ಕಾಲಂ: ದೈವಕೌಪೀನೇಯಮ್
  ಪುಸ್ತಕ ಪ್ರೀತಿ: ರವೀಂದ್ರನಾಥರ ‘ಮೂರು ಸಾಲು ಮರ’
  ಪೂರ್ವಾಂಚಲ ಪುರಾಣ: ಚಾಂಗ್ ಜನರ ನಡುವೆ
  ಸದ್ದಿಲ್ಲದೆ ಹಾರಾಡುವ ಏರ್ ಬಸ್ ಸುಂದರಿ: ಯೋಗೀಂದ್ರ ಬರಹ
  ಕವಲಕ್ಕಿ ಡಾಕ್ಟರ ಡೈರಿ : ಧನುರ್ವಾಯು ಪುರಾಣ
  ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು- ೫
  ಸುದರ್ಶನ್ ಕಾಲಂ: ಈಡಾ ಎಂಬ ಪಳೆಯುಳಿಕೆಯ ಹುಡುಗಿ
  ತೀರಿಹೋದ ವೆಸ್‍ಲೀ ಎಂಬ ಪೊಲೀಸ್ ಆಫೀಸರ್: ವಸ್ತಾರೆ ಅಂಕಣ
  ಸ್ಟೋನ್ ಹಿಲ್ ಡೈರಿ:ಇಡ್ಲಿ-ಪ್ರತಿಭೆ, ಪರಂಪರೆಯ ಪಾತ್ರೆ
  ಬಿಸಿಲುಕೋಲು: ಹುಟ್ಟಿದರೆ ಮಗುವಾಗಿ ಇಲ್ಲಿ ಹುಟ್ಟಬೇಕು!
  ಯೋಗೀಂದ್ರ ಕಾಲಂ: ಆಗಸ್ಟ್ ತಿಂಗಳ ಖಾಲಿ ಬೇಸಗೆ ಕಾಲ
  ಡಿ.ಪಿ. ಸತೀಶ್ ಬರೆಯುತ್ತಾರೆ: ಕಾಶ್ಮೀರದ ಪಂಡಿತರ ಕಷ್ಟಸುಖ
  ನೀಲಿ ಬೆಳಕು: ನನ್ನ ಪ್ರೀತಿಯ ಮುಲ್ಲಾ
  ಹಂದಿಜ್ವರದ ಹೊತ್ತಲ್ಲಿ ಮರಣವ್ಯಾಧಿಗಳ ನೆನಪು
  ಬಿಸಿಲುಕೋಲು: ಇದೇನು ಮಸಣವೋ ಇಲ್ಲ ವನರಾಶಿಯೋ...
  ಒಂಭತ್ತನೇ ತರಗತಿಯ ತೊಂಭತ್ತರ ಅಜ್ಜ ಅಯ್ಯೋ ತೀರಿಹೋದರಲ್ಲ...
  ಪುಸ್ತಕ ಪ್ರೀತಿ: ಆನಂದ ಲಕ್ಕೂರು ಕವಿತೆಗಳು
  ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು -೩
  ಪೂರ್ವಾಂಚಲ ಪುರಾಣ: ನಾಗಾ ನದಿಯ ಕೊಳ್ಳದಲ್ಲಿ
  ಬಣ್ಣಗಳ ಹಿಂದಿನ ನಿಜದ ಬಣ್ಣ: ಕೃತಿ ಬರಹ
  ವರ್ಡ್ಸ್ ವರ್ತನ ಸರೋವರದ ಸಿರಿಗನ್ನಡಿಯಲ್ಲಿ
  ತರೀಕೆರೆ ಏರಿಯಾ: ಮುಂದುವರಿದ ನಾಯಿಪುರಾಣ
  ಅಲ್ಲಿಯಗಿಡ ಇಲ್ಲಿ ಹೂಬಿಟ್ಟು ಇಲ್ಲಿನ ಬಳ್ಳಿ ಅಲ್ಲಿ ನೆಟ್ಟು
  ಡಿ ಪಿ ಸತೀಶ್ ಅಂಕಣ: ಮುಂದುವರಿದ ಕಾಶ್ಮೀರದ ಚಿತ್ರಗಳು
  ಕವಲಕ್ಕಿ ಡಾಕ್ಟರ ಡೈರಿ: ಕಾಮ ಪ್ರೇಮ ಕಷ್ಟ ಸುಖ
  ಬಿಸಿಲುಕೋಲು: ಅಮೆರಿಕಾದಲ್ಲಿ ಹೆರುವ ವಹಿವಾಟು
  ಎಸ್ ಮಂಜುನಾಥ್ ಬರೆದ ಅಪ್ಪು ಪೂಜಾರಿಯ ಚಿತ್ರ
  ಪುಸ್ತಕ ಪ್ರೀತಿ: ಮೊಗಳ್ಳಿ ಕವಿತೆಗಳ ‘ದೇವಸ್ಮಶಾನ’
  ವಸ್ತಾರೆ ಕಾಲಂ: ದೈನಂದಿನ ನ್ಯೂಟನುಭ್ರಾಂತುಗಳು
  ತರೀಕೆರೆ ಏರಿಯಾ: ನಾಯಿಪುರಾಣದ ಮೊದಲ ಕಂತು
  ಸ್ಟೋನ್ ಹಿಲ್ ಡೈರಿ: ಹುಲುಸು ಮನುಜನ ಕಟ್ಟುಕಟ್ಟಳೆಗಳು
  ಬಿಸಿಲುಕೋಲು: ಒಂದು ವಿಶ್ವವಿದ್ಯಾನಿಲಯದ ಕುರಿತು
  ಬ್ರಿಸ್ಟಲ್ ಪುರಾಣ: ಬಿಸಿಲು,ಬೀಚ್,ಬಿಯರ್ ಮತ್ತು ಬ್ರಿಟಿಷ್
  ಕವಲಕ್ಕಿ ದಿನಚರಿ: ಕೆಲವು ಬಸಿರ ಸಂಗತಿಗಳು
  ಪೂರ್ವಾಂಚಲ ಪುರಾಣ: ಮಿಥುನಗಳ ಹಳ್ಳಿಯಲ್ಲಿ