ಫೆಬ್ರವರಿ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ದಿನದ ತಾಣ: ಸಮಾಚಾರ್.ಕಾಂ    
ಸಂಪಾದಕ
ಬುಧವಾರ, 30 ಸೆಪ್ಟೆಂಬರ್ 2009 (09:22 IST)

ಇದು ನಿಮ್ಮ ಮೆಚ್ಚಿನ ವೆಬ್ ತಾಣಗಳಿಗೆ ಮೀಸಲಾದ ಪುಟ. ಜಗತ್ತಿನಲ್ಲಿರುವ ಎಲ್ಲ ಭಾಷೆಗಳ ಕೋಟ್ಯಾನುಕೋಟಿ ವೆಬ್ ತಾಣಗಳಲ್ಲಿ ನಿಮ್ಮ ಇಷ್ಟದ ತಾಣ ಯಾವುದು?. ನಮಗೆ ಬರೆಯಿರಿ. ಜೊತೆಗೆ ಈ ತಾಣ ಯಾವ ಕಾರಣಗಳಿಗಾಗಿ ನಿಮಗಿಷ್ಟ ಎಂದೂ ಬರೆಯಿರಿ. ಜೊತೆಗೆ ಆ ತಾಣದ ವಿಳಾಸವನ್ನೂ ಕಳುಹಿಸಿ. ಯಾರಿಗೆ ಗೊತ್ತು ನಿಮ್ಮ ಇಷ್ಟದ ತಾಣ ಕೆಂಡಸಂಪಿಗೆಯ ಮೂಲಕ ಇನ್ನೂ ಒಂದಿಷ್ಟು ಮಂದಿಗೆ ಇಷ್ಟವಾಗಬಹುದು.

ಸಮಾಚಾರ್.ಕಾಂ

ಭಾರತೀಯ ಸುದ್ದಿ ಜಗತ್ತಿನ ತಾಜಾ ಸುದ್ದಿ ಸಮಾಚಾರಗಳ ಹುಡುಕಾಟಕ್ಕೆ ಸೂಕ್ತವಾದ ತಾಣ. ಸಿಫಿ.ಕಾಂ ಮಾಲೀಕತ್ವದ ಸುದ್ದಿತಾಣ ಸಮಾಚಾರ್.ಕಾಂ ನಲ್ಲಿ ದೇಶದ ದಿನದ ಸುದ್ದಿಗಳತ್ತಲೊಮ್ಮೆ ಕಣ್ಣು ಹಾಯಿಸಬಹುದು. ಭಾರತದ ಪ್ರಮುಖ ಪತ್ರಿಕೆಗಳ ಪ್ರಮುಖ ಸುದ್ದಿಗಳ ಲಿಂಕುಗಳನ್ನ ಈ ತಾಣ ನೀಡುತ್ತದೆ. 

ಒರಿಸಿನಲ್.ಕಾಂ

ಅಂತರ್ಜಾಲದಲ್ಲಿ ಪುಕ್ಕಟೆ ಗೇಮ್ ಗಳನ್ನು ಹುಡುಕುತ್ತಿರುವವರಿಗೆ ಇಲ್ಲಿದೆ ಸೂಕ್ತ ತಾಣ. ಸುಲಭವಾಗಿ ಆಡಬಲ್ಲ ಹತ್ತಾರು ಉಚಿತ ಗೇಮ್ ಗಳು ಇಲ್ಲಿವೆ. ಮುಖಪುಟ ಹೊಕ್ಕು ನಿಮ್ಮಿಷ್ಟದ ಗೇಮ್ ನ ಚಿತ್ರದ ಮೇಲೆ ಕ್ಲಿಕ್ಕಿಸಿದರೆ ಸಾಕು. ಆಡಲು ರೆಡಿ.

ಸೆವನ್ ವಂಡರ್ಸ್ ಆಫ್ ದ ವರ್ಲ್ಡ್.ಕಾಂ

ಜಗತ್ತಿನ ಹೊಸ ಏಳು ಅದ್ಭುತಗಳ ಕುರಿತು ನಿಮಗೆ ತಿಳಿದಿರಬೇಕಲ್ಲಾ? ಇದರ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲೊಂದು ತಾಣವಿದೆ. ನಿಮಗಿಷ್ಟವಾದ ತಾಣಕ್ಕೆ ಮತ ಕೂಡ ಹಾಕಬಹುದು. ಆ ದೇಶಗಳ ಬಗ್ಗೆ ತಿಳಿದುಕೊಳ್ಳಬಹುದು. ಉಪಯುಕ್ತ ಕೊಂಡಿಗಳೂ ಇವೆ.

ಮೈಸೂರುದಸರಾ.ಕಾಂ

ದಸರಾ ಎಂದರೆ ಮೈಸೂರು ಎನ್ನುವಷ್ಟು ಒಂದಕ್ಕೊಂದು ಹೆಸರುವಾಸಿ. ಇದೇ ಸೋಮವಾರ ಅರಮನೆ ನಗರಿಯಲ್ಲಿ ಪ್ರತಿ ವರ್ಷದಂತೆ ಜಗತ್ ಪ್ರಸಿದ್ಧ ಜಂಭೂಸವಾರಿಯ ಮೆರವಣಿಗೆ. ಇನ್ನೂ ಹತ್ತು ಹಲವು ಕಾರ್ಯಕ್ರಮ ವೈವಿಧ್ಯಗಳ ಸಾಥ್. ಮೈಸೂರು ದಸರಾ ಹಬ್ಬದ ಸಂಭ್ರಮವನ್ನ ಸವಿಯಬಯಸುವವರು ಈ ದಸರಾ ವಿಶೇಷ ತಾಣಕ್ಕೆ ಭೇಟಿ ಕೊಡಿ.

ಪ್ಲಾಶ್ ಗೇಮ್ಸ್.ಕಾಂ

ನಿಮಗೆ ಕಂಪ್ಯೂಟರ್ ಗೇಮ್‌ಗಳೆಂದರೆ ಇಷ್ಟವಿದೆಯಾ? ಮಕ್ಕಳ ಜೊತೆಗೆ ನೀವೂ ಒಮ್ಮೊಮ್ಮೆ ಇಂತಹ ಆಟಗಳನ್ನು ಆಡುತ್ತೀರಾ? ಹಾಗಾದರೆ, ಇಲ್ಲೊಂದಿಷ್ಟು ಪ್ಲಾಸ್ ಗೇಮ್‌ಗಳಿವೆ ಪ್ರಯತ್ನಿಸಿ. 

ಗ್ರೀಟಿಂಗ್.ಕಾಂ

ನೆಚ್ಚಿನ ಗೆಳೆಯರಿಗೆ ಶುಭಾಷಯ ಕೋರಬೇಕೆ? ಮುನಿದ ಹುಡುಗಿಯನ್ನು ಒಲಿಸಿಕೊಳ್ಳಲು ಚಂದದೊಂದು ಗ್ರೀಟಿಂಗ್ ನೀಡಬೇಕೆ? ಆತ್ಮೀಯರ ಮದುವೆ, ಹುಟ್ಟುಹಬ್ಬಕ್ಕೆ ಹಾರೈಸಲು ಯೋಚಿಸುತ್ತಿದ್ದೀರಾ? ಹಾಗಾದರೆ ಈ ಗ್ರೀಟಿಂಗ್ ತಾಣಕ್ಕೊಮ್ಮೆ ಭೇಟಿ ನೀಡಿ. ಎಲ್ಲ ಬಗೆಯ ವೈವಿಧ್ಯಮಯ ಗ್ರೀಟಿಂಗ್ ಗಳು ಇಲ್ಲಿ ಒಟ್ಟಿಗೆ ಸಿಗುತ್ತವೆ.

ಇಂಡಿಯನ್ ಲೈಬ್ರರಿ.ಕಾಂ

ಭಾರತದ ವಿವಿಧ ಗ್ರಂಥಾಲಯಗಳು, ಅಂತರ್ಜಾಲದಲ್ಲಿ ಈ ಗ್ರಂಥಾಲಗಳು ಒದಗಿಸುತ್ತಿರುವ ಮಾಹಿತಿ ಸೇವೆ, ದೇಶದ ಬೇರೆ ಬೇರೆ ಗ್ರಂಥಾಲಯಗಳ ಕೊಂಡಿಗಳು ಈ ತಾಣದಲ್ಲಿದೆ. ಸಾಕಷ್ಟು ಮಾಹಿತಿಗಳು ಈ ತಾಣದಲ್ಲಿ ಲಭ್ಯವಿದೆ.  ಒಮ್ಮೆ ಭೇಟಿ ಕೊಡಿ.

ಫ್ರೆಂಡ್‌ಸ್ಟರ್. ಕಾಂ

ಫೆಂಡ್‌ಸ್ಟರ್ ಅನ್ನೋ ಈ ತಾಣ ವಿಶ್ವದ ಪ್ರಮುಖ ತಾಣಗಳಲ್ಲಿ ಒಂದು. ಆರ್ಕುಟ್, ಫೇಸ್ ಬುಕ್ ನಂತೆಯೇ ಇಲ್ಲೂ ನಿಮ್ಮ ಎಲ್ಲ ಗೆಳೆಯ-ಗೆಳತಿಯರ ಜೊತೆ ಮಾತಿನಿಂದ ಹಿಡಿದು ವಿಡಿಯೋವರೆಗೆ ಎಲ್ಲ ನೆನಪುಗಳನ್ನು ಹಂಚಿಕೊಳ್ಳಬಹುದು. ೭೫ ಮಿಲಿಯನ್ ಜನರಲ್ಲಿ ನಿಮಗಿಷ್ಟವಾದ ಸ್ನೇಹಿತರನ್ನು ಹುಡುಕಿಕೊಳ್ಳಬಹುದು.

ಇಂಟರ್‌ನ್ಯಾಷನಲ್ ಆರ್ಟ್.ಕಾಂ

ಚಿತ್ರಕಲೆ ಹಾಗೂ ಚಿತ್ರಪ್ರದರ್ಶನಗಳ ಕುರಿತು ತಿಳಿಯುವ ಆಸಕ್ತಿ ನಿಮಗಿದೆಯೇ? ಪ್ರಸಕ್ತ ಸಾಲಿನ ಅಂತಾರಾಷ್ಟ್ರೀಯ ಚಿತ್ರಕಲೆ ವಿಜೇತರು ಯಾರು ಮತ್ತು ಅವರ ಕಲಾಕೃತಿಗಳನ್ನು ನೋಡುವ ಕುತೂಹಲವಿದೆಯೇ? ಇಲ್ಲಿದೆ ಒಂದು ಅಪರೂಪದ ತಾಣ.

ಗಿನ್ನಿಸ್ ವರ್ಡ್ ರೆಕಾರ್ಡ್.ಕಾಂ

ಜಗತ್ತಿನ ಅತಿ ಎತ್ತರದ-ಅತಿ ಗಿಡ್ಡ ವ್ಯಕಿಗಳಾರು? ಯಾರು ದಡೂತಿ, ಯಾರು ಸಣಕಲ? ಯಾವ ದಾಖಲೆ, ಯಾವ ಸಾಹಸ ಯಾರು ಯಾರ ಹೆಸರಿನಲ್ಲಿದೆ? ತಿಳಿಯುವ ಕುತೂಹಲವೇ? ಹಾಗಿದ್ದರೆ ಗಿನ್ನಿಸ್ ರೆಕಾರ್ಡ್ ದಾಖಲೆಯ ಈ ತಾಣಕ್ಕೆ ಭೇಟಿ ನೀಡಿ.

ಡಿಜಿಟಲ್‌ಸ್ಪೈ.ಕಾಂ

ಮಾಹಿತಿ, ಮನೋರಂಜನೆ ಹಾಗೂ ತಾಂತ್ರಿಕ ವಿಷಯಗಳ ಬಗ್ಗೆ ಮಾಹಿತಿ ಒದಗಿಸುವ ಅಪರೂಪದ ತಾಣವಿದು. ಅಂತರ್ಜಾಲ ಬಳಕೆದಾರರಿಗೆ ಅಗತ್ಯ ಮಾಹಿತಿಗಳು ಇಲ್ಲಿವೆ.

ಮೈಸೂರುದಸರಾ.ಕಾಂ

ಇದೇ ತಿಂಗಳ ೧೯ರಿಂದ ೨೮ರವರೆಗೆ ಮೈಸೂರಿನಲ್ಲಿ ನಾಡಹಬ್ಬ ದಸರೆಯ ಸಂಭ್ರಮ. ಮೈಸೂರಿಗೆ ಭೇಟಿ ಕೊಟ್ಟು ಆನಂದಿಸಲು ತಕ್ಕ ಸಮಯ. ಮೈಸೂರು ದಸರಾ ಆಚರಣೆ, ಕಾರ್ಯಕ್ರಮಗಳ ಕುರಿತ ಸಮಸ್ತ ಮಾಹಿತಿ ಈ ದಸರಾ ವಿಶೇಷ ವೆಬ್ ತಾಣದಲ್ಲಿ ದೊರೆಯುತ್ತದೆ.

ಭುವನ್.ಇನ್

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಗೂಗಲ್ ಅರ್ಥ್ ನ ಹೊಸ ಆವೃತ್ತಿ. ಉಪಗ್ರಹಗಳ ಸಹಾಯದಿಂದ, ಉಪಖಂಡದ ಬಹುತೇಕ ಭಾಗಗಳನ್ನ ಹತ್ತಿರದಿಂದ ನೋಡುವ ಅವಕಾಶ ರಿಜಿಸ್ಟೆಡ್ ಬಳಕೆದಾರರಿಗುಂಟು. 

ಫಿಲ್ಮಂ.ಕಾಂ

ಜಾಗತಿಕ ಮಟ್ಟದ ಚಿತ್ರಗಳ ಸುದ್ದಿ-ಸಮಾಚಾರಗಳ ಕುರಿತ ಸಿನಿಮಾ ತಾಣ. ಒಂದಿಷ್ಟು ಸುದ್ದಿ, ಒಂದಿಷ್ಟು ಚಿತ್ರ, ಮತ್ತೊಂದಿಷ್ಟು ಗಾಸಿಪ್ ಎಲ್ಲದರ ಮಿಶ್ರಣ ಈ ಫಿಲ್ಮ್.ಕಾಂ.

ಐಫಾರ್‌ಯೂ.ಕಾಂ

ವೆಬ್‌ಡಿಸೈನಿಂಗ್, ಪ್ಲಾಶ್, 3D ಅನಿಮೇಷನ್ ಕುರಿತು ತಿಳಿದುಕೊಳ್ಳುವ ಕುತೂಹಲವಿದೆಯೇ? ಇದನ್ನು ಹೊಸದಾಗಿ ಕಲಿತುಕೊಳ್ಳುವ ಅಥವಾ ಈಗಾಗಲೇ ಕಲಿತಿರುವ ಜ್ಞಾನವನ್ನು ಅಪ್‌ಡೇಟ್ ಮಾಡಿಕೊಳ್ಳುವ ಆಸಕ್ತಿ ಇದೆಯೇ? ಹಾಗಾದರೆ ಇಲ್ಲಿದೆ ನಿಮಗೊಂದು ಅಪರೂಪದ ತಾಣ. ಪ್ರಯೋಗ ಮತ್ತು ಪ್ರಾತ್ಯಕ್ಷಿಕತೆಗೂ ಅವಕಾಶವಿದೆ. ಒಮ್ಮೆ ಭೇಟಿಕೊಟ್ಟು ನೋಡಿ.

ಡೌನ್ ಟು ಅರ್ಥ್.ಇನ್

ಹೊಸ ಬಗೆಯ ವಿಚಾರ ವಿಶ್ಲೇಷಣೆಗಳ ನಿಯತಕಾಲಿಕ. ವಿಜ್ಞಾನ ಮತ್ತು ಪರಿಸರ ಸಂಬಂಧಿ ವಿಷಯಗಳ ಬಗೆಗಿನ ಶೋಧ, ವಿಶ್ಲೇಷಣಾತ್ಮಕ ವರದಿಗಳನ್ನ ಇಲ್ಲಿ ಓದಬಹುದು. ದೇಶದ ಹೆಸರಾಂತ ನಿಯತಕಾಲಿಕಗಳಲ್ಲಿ ಒಂದು.

ಅಸ್ಟ್ರೋಥೀಮ್.ಕಾಂ

ಜಾತಕ, ಜೋತಿಷ್ಯದ ಕುರಿತು ನಿಮಗೆ ಆಸಕ್ತಿ ಇದೆಯೇ? ಪ್ರಪಂಚದ ಪ್ರಸಿದ್ಧ ಜನಪ್ರಿಯ ವ್ಯಕ್ತಿಗಳ ಜಾತಕವನ್ನು ನೋಡಬೇಕೇ? ಇಲ್ಲಿದೆ ಒಂದು ಅಪರೂಪದ ತಾಣ. ರಾಹು, ಕೇತು, ಗುಳಿಕಾಲ. ಯಮಗಂಡಗಾಲದ ಕುರಿತೂ ವಿವರಗಳಿವೆ.

ಡಿಡಿಇಂಡಿಯಾ.ಕಾಂ

ಭಾರತದ ಸರ್ಕಾರಿ ದೂರದರ್ಶನ ವಾಹಿನಿಯ ಅಧಿಕೃತ ವೆಬ್ ತಾಣ. ದೂರದರ್ಶನದ ವಿವಿಧ ಚಾನಲ್ಲುಗಳಿಂದ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳ ಪಟ್ಟಿ ಇಲ್ಲಿ ಸಿಗುತ್ತದೆ. ಅಲ್ಲದೇ ದೇಶದ ತಾಜಾ ಸುದ್ದಿ ಸಮಾಚಾರಗಳತ್ತ ಒಮ್ಮೆ ಕಣ್ಣು ಹಾಯಿಸಬಹುದು. ಸುದ್ದಿ ಪ್ರಸಾರವನ್ನ ನೇರವಾಗಿ ವೀಕ್ಷಿಸಬಹುದು. ಇನ್ನಿತರ ಯಾವುದೇ ಮಾಹಿತಿ ಬೇಕಿದ್ದರೂ ಹುಡುಕಬಹುದು.

ಇಂಡಿಯನ್ ಚೈಲ್ಡ್.ಕಾಂ

ಅಂತರ್ಜಾಲದಲ್ಲಿ ಮಕ್ಕಳಿಗೆ ಮನರಂಜನೆ ಮಾಹಿತಿ ಎಲ್ಲವೂ ಎಲ್ಲಿ ಸಿಗುತ್ತೆ ಅಂತ ಹುಡುಕುತ್ತಿರುವವರು ಈ ತಾಣಕ್ಕೊಮ್ಮೆ ಭೇಟಿ ನೀಡಿ. ಮಕ್ಕಳಿಗೆ ಇಷ್ಟವಾಗೋ ಹಾಡು ಆಟಗಳಿಂದ ಹಿಡಿದು ಮಕ್ಕಳ ಅಂತರ್ಜಾಲ ಸುರಕ್ಷತೆ ಬಗೆಗಿನ ಟಿಪ್ಸ್ ಇತ್ಯಾದಿ ಎಲ್ಲವೂ ಇಲ್ಲಿವೆ. 

ಎನ್ ಡಿ ಟಿವಿ.ಕಾಂ

ದೇಶೀಯ, ಅಂತರಾಷ್ಟ್ರೀಯ ತಾಜಾ ಸುದ್ದಿ ಸಮಾಚಾರಗಳನ್ನ ನೀಡುವಂತಹ ತಾಣ. ಎನ್ ಡಿ ಟಿವಿ ವಾಹಿನಿಯ ಅಧಿಕೃತ ವೆಬ್ ತಾಣ. ಸುದ್ದಿ, ವರದಿ, ವಿಶ್ಲೇಷಣೆ ವಿಡಿಯೋ ಗಳಿಗಾಗಿ ಈ ತಾಣವನ್ನ ಕ್ಲಿಕ್ಕಿಸಬಹುದು.

ಸೈನ್ಸ್ ಡೈಲಿ.ಕಾಂ

ವಿಜ್ಞಾನದ ಈ ದಿನದ ಕೌತುಕಗಳು, ಹೊಸ ಅನ್ವೇಷಣೆಗಳು, ಸುದ್ದಿಸಮಾಚಾರಗಳನ್ನೊತ್ತ ತಾಣ. ವಿಜ್ಞಾನ, ಆರೋಗ್ಯ, ಪರಿಸರ, ತಂತ್ರಜ್ಞಾನ ಸಂಬಂಧಿ ತಾಜಾ ಸುದ್ದಿಗಳು, ವಿಶ್ಲೇಷಣಾತ್ಮಕ ವರದಿ-ಲೇಖನಗಳನ್ನ ಇಲ್ಲಿ ಹುಡುಕಬಹುದು.

ಕ್ಯಾನ್ಸರ್ ಫ್ಯಾಕ್ಟ್ಸ್.ಕಾಂ

ಕ್ಯಾನ್ಸರ್ ಸಂಬಂಧಿ ಕಾಯಿಲೆಗಳಿಗೆ ತುತ್ತಾದವರಿಗೆ, ಆ ರೋಗದ ಕುರಿತು ಚಿಕಿತ್ಸೆ, ಮಾಹಿತಿ ಹುಡುಕುತ್ತಿರುವವರಿಗೆ ಇದು ಸೂಕ್ತ ತಾಣ. ಕ್ಯಾನ್ಸರ್ ರೋಗದ ಬಗೆಗಳು, ಲಕ್ಷಣಗಳು ಅದಕ್ಕೆ ತೆಗೆದುಕೊಳ್ಳಬೇಕಾದ ಚಿಕಿತ್ಸಾ ವಿಧಾನಗಳು ಎಲ್ಲವನ್ನೂ ಇಲ್ಲಿ ವಿವರಿಸಲಾಗುತ್ತದೆ. ಕಾಯಿಲೆ ಕುರಿತಾದ ಮಾಹಿತಿಗಳಿಗಾಗಿ ಸಹಾಯವಾಣಿ ಕೂಡ ಇದೆ.

ಸೆಂಡ್ ಫ್ಲವರ್ ಇಂಡಿಯಾ.ಕಾಂ

ಇವತ್ತು ನಿಮ್ಮ ಪ್ರೀತಿಪಾತ್ರರ ಹುಟ್ಟುಹಬ್ಬ. ಆದರೆ ನೀವು ಮಾತ್ರ ಕೆಲಸದ ನಿಮಿತ್ತ ದೂರದೂರಿನಲ್ಲಿದ್ದೀರಿ. ಇಂತಹ ಹೊತ್ತಲ್ಲಿ, ಸಣ್ಣದೊಂದು ಹೂಗುಚ್ಛ ನೀಡಿ ಅವರನ್ನ ಖುಶಿ ಪಡಿಸಲೂ ಆಗುತ್ತಿಲ್ಲ ಅಂತ ಮನದೊಳಗೆ ಕೊರಗುತ್ತಿದ್ದೀರಾ? ಚಿಂತೆಯಿಲ್ಲ. ನಿಮ್ಮ ಅನುಕೂಲಕ್ಕೆಂದೇ ಇಲ್ಲೊಂದು ತಾಣ ಇದೆ. ಇಲ್ಲಿಂದ ನಿಮ್ಮ ಪ್ರೀತಿ ಪಾತ್ರರಿಗೆ ನೀವು ಬೇಕಾದ ಉಡುಗೊರೆ ಕಳಿಸಬಹುದು. ಶುಭಾಶಯ ಕೋರಬಹುದು. ಇದೆಲ್ಲ ಒಂದೇ ದಿನದಲ್ಲಿ ನಿಮ್ಮವರ ಮನೆ ಮುಟ್ಟುತ್ತೆ.  ಒಂದೇ ಕ್ಲಿಕ್ಕಿನಲ್ಲಿ ಇದೆಲ್ಲ ಸಾಧ್ಯವಷ್ಟೇ. 

ಯಾತ್ರಾ.ಕಾಂ

ದೂರದೂರಿಗೆ ಪ್ರಯಾಣ ಬೆಳೆಸುವ ಯೋಜನೆ ಇದೆಯಾ? ಹಾಗಿದ್ದರೆ ಈ ತಾಣಕ್ಕೊಮ್ಮೆ ಭೇಟಿ ಕೊಡಿ. ವಿಶ್ವದ ಐದು ಸಾವಿರಕ್ಕೂ ಹೆಚ್ಚು ನಗರಗಳ ಮಾಹಿತಿ ಇಲ್ಲಿದೆ. ಹೋಟೆಲ್ , ವಿಮಾನಗಳ ಟಿಕೆಟ್ ಬುಕ್ಕಿಂಗ್ ಸಹಿತ ಅಗತ್ಯ ಮಾಹಿತಿಗಳು ಇಲ್ಲಿ ಒಂದೆಡೆ ಸಿಗುತ್ತವೆ. ಜೊತೆಗೆ ವಿವಿಧ ರಜೆ ಪ್ಯಾಕೇಜ್ ಗಳು ಕೂಡ ಲಭ್ಯವಿದೆ.

ಟಿನಿಯುಆರ್ ಎಲ್.ಕಾಂ

ಉದ್ದುದ್ದದ ಯುಆರ್ ಎಲ್ ಗಳನ್ನ ಚಿಕ್ಕದಾಗಿ, ಸರಳಗೊಳಿಸಿಕೊಡುವ ಅಂತರ್ಜಾಲ ಸಾಧನ. ವಿಶೇಷವಾಗಿ ಟ್ವಿಟರ್ ನಂತಹ ತಾಣ ಬಳಸುವವರಿಗೆ ಹೆಚ್ಚು ಉಪಯುಕ್ತ. 

ಸಿಫಿ.ಕಾಂ

ದೇಶದ ಪ್ರಮುಖ ಸುದ್ದಿ ಕೇಂದ್ರಿತ ವೆಬ್ ತಾಣಗಳಲ್ಲಿ ಒಂದು. ಪ್ರಚಲಿತ ಸುದ್ದಿ ಸಮಾಚಾರಗಳು, ವಾಣಿಜ್ಯ ವ್ಯವಹಾರ, ಹಣಕಾಸು, ಕ್ರೀಡೆ ಮುಂತಾದ ವಿಭಾಗಗಳ ಎಲ್ಲ ಸುದ್ದಿ ಸಂಗ್ರಹ ಇಲ್ಲಿದೆ. ಕನ್ನಡ, ಹಿಂದಿ, ತೆಲಗು ಮುಂತಾದ ಸ್ಥಳೀಯ ಭಾಷೆಗಳಲ್ಲೂ ಸುದ್ದಿ ಸೇವೆಯನ್ನೂ ಈ ತಾಣ ಒದಗಿಸುತ್ತಿದೆ. 

ಫೆಸ್ಟಿವಲ್ಸ್ ಆಫ್ ಇಂಡಿಯಾ.ಇನ್

ಬಹುಧರ್ಮಗಳ ನಾಡು ಭಾರತದಲ್ಲಿ ಹಬ್ಬಗಳು ನೂರಾರು. ಈ ತಿಂಗಳಲ್ಲಿ ಯಾವ ಹಬ್ಬಗಳಿವೆ? ಯಾವ ಹಬ್ಬಗಳನ್ನ ಎಲ್ಲೆಲ್ಲಿ ಆಚರಿಸುತ್ತಾರೆ? ಅದರ ವಿಶೇಷಗಳೇನು? ಅಂತ ತಿಳಿಯಬಯಸಿದ್ದರೆ ಈ ತಾಣಕ್ಕೊಮ್ಮೆ ಭೇಟಿ ನೀಡಿ.

ರಂಗಶಾಲಾ.ಕಾಂ

ಭಾರತೀಯ ರಂಗಭೂಮಿಯ ಇತ್ತೀಚಿನ ಸುದ್ದಿ-ಸಮಾಚಾರ, ಕಾರ್ಯಚಟುವಟಿಕೆಗಳನ್ನು ತಿಳಿಯಬಯಸುವ ರಂಗಾಸಕ್ತರಿಗೆ ಇಲ್ಲಿದೆ ಒಂದು ಸೂಕ್ತ ತಾಣ. ದೇಶಾದ್ಯಂತ ನಡೆಯುವ ಪ್ರದರ್ಶನಾ ಕಲೆಗಳ ಮಾಹಿತಿಗಳನ್ನು ಇಲ್ಲಿ ಆಸಕ್ತರು ಹಂಚಿಕೊಳ್ಳುತ್ತಾರೆ. ಎಲ್ಲಿ, ಏನು ನಡೆಯುತ್ತಿದೆ? ಎಲ್ಲೆಲ್ಲಿ ಯಾವ ಯಾವ ನಾಟಕ, ಶಿಬಿರಗಳಿವೆ, ಯಾವ ತಂಡಗಳು ತಾಲೀಮಿನಲ್ಲಿ ತೊಡಗಿವೆ ಎಂಬಿತ್ಯಾದಿ ಸುದ್ದಿಗಳು ಇಲ್ಲಿ ಒಂದೆಡೆ ಸಿಗುತ್ತವೆ.

ವಿಕ್ರಾಂತಕರ್ನಾಟಕ.ಕಾಂ

ಕನ್ನಡದ ಪ್ರಮುಖ ವಾರಪತ್ರಿಕೆಗಳಲ್ಲಿ ಒಂದಾದ ‘ವಿಕ್ರಾಂತ ಕರ್ನಾಟಕ’ದ ವೆಬ್ ತಾಣ. ಹೊಸತಾದ-ಹಳೆಯ ಸಂಚಿಕೆಗಳ ಲೇಖನ-ದಾಖಲೆಗಳು, ಪಿಡಿಎಫ್ ಪ್ರತಿಗಳನ್ನ ಇಲ್ಲಿ ಓದಬಹುದು. ಪತ್ರಿಕೆಯ ಸಂಪರ್ಕಕ್ಕೂ ಈ ತಾಣ ಕೊಂಡಿಯಂತಿದೆ. 

ಮಾಮ್.ಕಾಂ

ಮ್ಯೂಸಿಯಂಗಳ ಮ್ಯೂಸಿಯಂ, ಆನ್ ಲೈನ್ ಮ್ಯೂಸಿಯಂ ಗ್ಯಾಲರಿ ಈ ಮಾಮ್.ಕಾಂ. ಜಗತ್ತಿನಾದ್ಯಂತ ಇರುವ ಸಂಗ್ರಹಾಲಯಗಳಲ್ಲಿ ನಡೆಯುವ ಚಟುವಟಿಕೆಗಳ ಪೂರ್ಣ ಮಾಹಿತಿ ಇಲ್ಲಿ ಸಿಗುತ್ತದೆ. ಅಂತೆಯೇ ವಿಶ್ವದ ಪ್ರಮುಖ ಮ್ಯೂಸಿಯಂಗಳು, ಅದರ ಸಂಪರ್ಕ ಕೊಂಡಿಗಳೂ ಇಲ್ಲಿ ಲಭ್ಯವಿದೆ.

ಡಬ್ಲ್ಯುಐಐ.ಇನ್

ಭಾರತದ ವನ್ಯಜೀವಿಗಳ ಬಗೆಗಿನ ಮಾಹಿತಿ-ಶಿಕ್ಷಣ ನೀಡುವ ಸರ್ಕಾರಿ ಸ್ವಾಮ್ಯದ ಶಿಕ್ಷಣ ಸಂಸ್ಥೆಯ ತಾಣ. ಭಾರತೀಯ ವನ್ಯಜೀವಿ ಸಂಸ್ಥೆಯ ಕಾರ್ಯಕ್ರಮಗಳು, ಯೋಜನೆಗಳು, ಕೋರ್ಸುಗಳು, ಶೋಧಗಳು ಇನ್ನಿತರ ಮಾಹಿತಿಗಳನ್ನು ಇಲ್ಲಿ ಕಾಣಬಹುದು.

ವೇಬ್ಯಾಕ್ ಮಶೀನ್.ಕಾಂ

ಅಂತರ್ಜಾಲದಲ್ಲಿ ಇತಿಹಾಸದ ಹಳೆಯ ದಾಖಲೆಗಳ ಹುಡುಕಾಟದಲ್ಲಿದ್ದೀರಾ? ಹಾಗದರೆ ಇದೋ ಇಲ್ಲಿದೆ ಸೂಕ್ತ ತಾಣ. ೧೯೯೬ರಿಂದ ಈವರೆಗಿನ ಹತ್ತು ಬಿಲಿಯನ್ ಗೂ ಹೆಚ್ಚು ಅಂತರ್ಜಾಲ ಪುಟಗಳು ಈ ಸರ್ಚ್ ಇಂಜಿನ್ನಿನಲ್ಲಿ ಹುಡುಕಾಟಕ್ಕೆ ಲಭ್ಯವಿದೆ.

ಇಂಡಿಯನ್ ಮಿರರ್.ಕಾಂ

ಭಾರತದ ಭೌಗೋಳಿಕ ಲಕ್ಷಣ, ಇತಿಹಾಸ, ಕಲೆ ಸಂಸ್ಕೃತಿಗಳ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳಬೇಕು ಎಂತಿದ್ದರೆ ಈ ತಾಣಕ್ಕೊಮ್ಮೆ ಭೇಟಿ ನೀಡಿ. ನಮ್ಮಲ್ಲಿನ ಆಚಾರ-ವಿಚಾರ, ಅಭ್ಯಾಸಗಳು, ಧರ್ಮ, ಹಬ್ಬ-ಹರಿದಿನ, ದೇಶೀಯ ಆಟಗಳು ಆಯುರ್ವೇದ ಹೀಗೆ ಎಲ್ಲದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಸಿಗುತ್ತದೆ.

ಎಒಎಲ್.ಕಾಂ

‘ಅಮೆರಿಕನ್ ಆನ್ ಲೈನ್’ ಜಗತ್ತಿನ ಪ್ರತಿಷ್ಠಿತ ಮೀಡಿಯಾ ಸಂಸ್ಥೆಗಳಲ್ಲಿ ಒಂದು. ಇದರ ಅಧಿಕೃತ ವೆಬ್ ತಾಣ ಇಲ್ಲಿದೆ. ಎಒಎಲ್ ನ ಎಲ್ಲ ಬಗೆಯ ಸುದ್ದಿಗಳು, ಇನ್ನಿತರ ಸೇವೆಗಳನ್ನ ಇಲ್ಲಿ ಕಾಣಬಹುದು. 

ನೇಚರ್.ಕಾಂ

ವಿಜ್ಞಾನ ಸಂಗತಿಗಳ ಕುರಿತ ಅಂತರರಾಷ್ಟ್ರೀಯ ವಾರಪತ್ರಿಕೆ. ಅನೇಕ ವಿಜ್ಞಾನ ವಿಸ್ಮಯಗಳ, ಪ್ರಯೋಗಗಳ, ಅನ್ವೇಷಣೆಗಳ ವಿಶ್ಲೇಷಣೆ, ವಿಮರ್ಶೆ ಇತ್ಯಾದಿಗಳನ್ನ ಇಲ್ಲಿ ಓದಬಹುದು.

ಇಎಸ್‌ಪಿಎನ್.ಕಾಂ

ಅಂತರ್ಜಾಲದೊಳಗೆ ಕ್ರೀಡಾ ಜಗತ್ತಿನ ತಾಜಾ ಸುದ್ದಿಗಳನ್ನು ಹುಡುಕುವವರಿಗೆ ಇದು ಹೇಳಿಮಾಡಿಸಿದಂತಹ ತಾಣ. ನಿಮ್ಮ ನೆಚ್ಚಿನ ಕ್ರೀಡೆಗಳಾದ ಕ್ರಿಕೆಟ್, ಫುಟ್ಬಾಲ್, ಟೆನಿಸ್ ಸಹಿತ ಎಲ್ಲ ಆಟೋಟಗಳ ಸುದ್ದಿ ಸಮಾಚಾರಗಳು ಇಲ್ಲಿ ಸಿಗುತ್ತದೆ. ವಿಶ್ವದಾದ್ಯಂತ ಇಂದು ಯಾವ ಯಾವ ಆಟಗಳು ಎಲ್ಲೆಲ್ಲಿ ನಡೆಯುತ್ತಿವೆ. ಗೆದ್ದವರ್ಯಾರು , ಸೋತವರ್ಯಾರು ಎಂಬುದೆಲ್ಲ ಇಲ್ಲಿ ಲಭ್ಯವಿದೆ.

ಹೀಗೊಂದು ಚಿತ್ರ ಸಂವಾದ


ಸಂವಾದ ಡಾಟ್ ಕಾಂ, ದೃಶ್ಯಮಾಧ್ಯಮದ ಅರ್ಥಪೂರ್ಣ ಚರ್ಚೆಗೆಂದೇ ಮೀಸಲಾಗಿರುವ ಅಂತರ್ಜಾಲ ತಾಣ. ಇದೇ ಭಾನುವಾರ ಹೀಗೊಂದು ಅರ್ಥಪೂರ್ಣ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದೆ. ಆಗಸ್ಟ್ ೯ರ ಮಧ್ಯಾಹ್ನ, ಕನ್ನಡದ ವಿಭಿನ್ನ ಪ್ರಯತ್ನ ‘ಕಬಡ್ಡಿ’ ಚಿತ್ರದ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ ನಡೆಯಲಿದೆ. ಕಬಡ್ಡಿ ಚಿತ್ರದ ಎಲ್ಲಾ ಕಲಾವಿದರು, ತಂತ್ರಜ್ಞರೂ ಅಂದು ಹಾಜರಿರುತ್ತಾರೆ. ಬೆಂಗಳೂರಿನ ಕಾರ್ಪೊರೇಶನ್ ಬಳಿಯಿರುವ ಬಾದಾಮಿ ಹೌಸ್ ನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ನೀವೂ ಭಾಗವಹಿಸಬಹುದು. ಸೀಮಿತ ಸಂಖ್ಯೆಯ ಮಂದಿಗಷ್ಟೇ ಅವಕಾಶ. ಹೆಚ್ಚಿನ ಮಾಹಿತಿಗೆ ಸಂವಾದ.ಕಾಂ ಗೆ ಭೇಟಿ ನೀಡಿ.

ಐಜಿಎನ್ ಒಯು .ಕಾಂ

ಅರ್ಧಕ್ಕೆ ನಿಂತ ಶಿಕ್ಷಣವನ್ನು ಮುಂದುವರಿಸಬಯಸಿದ್ದೀರಾ? ದೂರಶಿಕ್ಷಣದ ಮೂಲಕ ಹೆಚ್ಚು ಓದಬೇಕು ಅಂದುಕೊಳ್ಳುತ್ತಿದ್ದೀರಾ? ಅದಕ್ಕೊಂದು ಸೂಕ್ತ ಮಾಹಿತಿಯ ತಾಣ ಇಲ್ಲಿದೆ ನೋಡಿ. ದೇಶದ ಪ್ರಮುಖ ಮುಕ್ತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಅಧಿಕೃತ ವೆಬ್ ತಾಣವಿದು. ಈ ವಿಶ್ವವಿದ್ಯಾಲಯದ ವಿವಿಧ ಕೋರ್ಸುಗಳು, ನೋಂದಣಿ, ದಾಖಲಾತಿ, ಸ್ಥಳೀಯ ಕೇಂದ್ರಗಳ ಕುರಿತ ಎಲ್ಲ ಮಾಹಿತಿಗಳು ಇಲ್ಲಿ ದೊರಕುತ್ತವೆ.

ಇಂಡಿಯಾ ಟೈಮ್ಸ್.ಕಾಂ

ದೇಶದ ಬಹುಬಳಕೆಯ ವೆಬ್ ತಾಣಗಳಲ್ಲಿ ಒಂದು. ಸುದ್ದಿ, ಮನೋರಂಜನೆ, ವಾಣಿಜ್ಯ ವ್ಯವಹಾರ ಮುಂತಾದ ವಿಷಯಗಳ ಹುಡುಕಾಟಕ್ಕಾಗಿ ಈ ತಾಣವನ್ನ ಬಳಸಬಹುದು.   

ಕೆ ಎಸ್ ಆರ್ ಟಿ ಸಿ.ಕಾಂ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕೃತ ವೆಬ್ ತಾಣ. ಸಾರಿಗೆ ಸಂಸ್ಥೆಯ ಬಸ್ಸುಗಳ ಪ್ರಯಾಣದ ವೇಳಾ ಪಟ್ಟಿ, ದರ ಮುಂತಾದವುಗಳ ಬಗ್ಗೆ ತಿಳಿಯಲು,  ಆನ್ ಲೈನ್ ಬುಕ್ಕಿಂಗ್  ಅನುಕೂಲಕ್ಕಾಗಿ ಮಿಕ್ಕೆಲ್ಲ ಉದ್ದೇಶಕ್ಕಾಗಿ ಈ ತಾಣವನ್ನ ಬಳಸಬಹುದು. 

ಇಂಡ್ ಯಾ.ಕಾಂ

ಭಾರತೀಯ ಸಿನಿಮಾ ಜಗತ್ತಿನ ಅದರಲ್ಲೂ ಬಾಲಿವುಡ್ ಸುದ್ದಿ ಸಮಾಚಾರಗಳಿಗೆ ಹೆಚ್ಚಾಗಿ ಮೀಸಲಾಗಿರುವ ತಾಣ. ಹೊಸದಾಗಿ ನಿರ್ಮಾಣವಾಗುತ್ತಿರೋ ಚಿತ್ರಗಳು, ನಟನಟಿಯರು, ನಿರ್ದೇಶಕರ ಬಗೆಗಿನ ಗಾಸಿಪ್ ಗಳು , ದಿನದ ಪ್ರಮುಖ ಟೀವಿ ಶೋಗಳು ಇತ್ಯಾದಿ ಸಂಗತಿಗಳು ಇಲ್ಲಿವೆ.

ಯೂನಿವರ್ಸ್ ಟುಡೆ.ಕಾಂ


ಈ ದಿನ ವಿಜ್ಞಾನದಲ್ಲಿ ಏನು ವಿಶೇಷ? ಏನಾದರೂ ಹೊಸತು ಸಂಶೋಧನೆ ಆಯಿತಾ ಅಂತ ತಿಳಿದುಕೊಳ್ಳಬೇಕೆ? ದಿನದ ವಿಜ್ಞಾನದ ಹೊಸ ಪ್ರಯೋಗವನ್ನ ತಿಳಿಸುವಂತಹ ತಾಣ ಯೂನಿವರ್ಸ್ ಟುಡೆ.ಕಾಂ.

ಇಂಡಿಯನ್ ಫೋಟೋಗ್ರಫಿ.ಕಾಂ

ನಿಮಗೆ ಛಾಯಾಗ್ರಹಣದಲ್ಲಿ ಆಸಕ್ತಿ ಇದೆಯೇ? ಭಾರತದ ಪ್ರಸಿದ್ಧ ಛಾಯಾಗ್ರಾಹಣ ತಾಣಗಳನ್ನು ನೋಡಬೇಕೇ? ಹವ್ಯಾಸಿ ಹಾಗೂ ವೃತ್ತಿ ಛಾಯಾಗ್ರಹಣದ ಕುರಿತು ಬಗ್ಗೆ ತಿಳಿದುಕೊಳ್ಳಬೇಕೇ, ಇಲ್ಲಿದೆ ಒಂದು ಅಪರೂಪದ ತಾಣ

ಸ್ವಪ್ನಆನ್ ಲೈನ್.ಕಾಂ

ಪ್ರಮುಖ ಪುಸ್ತಕ ಪ್ರಕಾಶನಗಳಲ್ಲೊಂದಾದ ಸ್ವಪ್ನ ಬುಕ್ ಹೌಸ್ ನ ವೆಬ್ ತಾಣ. ಅಂತರ್ಜಾಲದಲ್ಲಿ ಕನ್ನಡ ಪುಸ್ತಕಗಳ ಮಾಹಿತಿ ಹುಡುಕಾಟದಲ್ಲಿರುವವರು, ಆನ್ ಲೈನ್ ನಲ್ಲಿ ಪುಸ್ತಕ ಕೊಳ್ಳಬಯಸುವ ಪುಸ್ತಕ ಪ್ರಿಯರು, ಆಡಿಯೋ, ವಿಡಿಯೋ ಸಿಡಿ, ಡಿವೀಡಿ ಖರೀದಿ ಮಾಡಬಯಸುವವರು ಒಮ್ಮೆ ಭೇಟಿ ಕೊಡಿ. 

ಪಬ್ಲಿಕ್ ಲೈಬ್ರರಿ ಆಫ್ ಸೈನ್.ಆರ್ಗ್

ವಿಶ್ವದ ವೈಜ್ಞಾನಿಕ ಹಾಗೂ ವೈದ್ಯಕೀಯ ಸಾಹಿತ್ಯವನ್ನ ಸಾರ್ವಜನಿಕವಾಗಿ ಒಂದೆಡೆ ನೀಡುವ ಉದ್ದೇಶ ಹೊಂದಿದ, ಲಾಭರಹಿತ ಒಕ್ಕೂಟದ ತಾಣ. ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳು, ವಿಚಾರಗಳ ಕುರಿತ ಮಾಹಿತಿ, ಅನಿಸಿಕೆಗಳನ್ನ ಇಲ್ಲಿ ಕಾಣಬಹುದು.

ಷೇರ್ ಖಾನ್.ಕಾಂ

ಹೆಸರೇ ಹೇಳುವಂತೆ ಷೇರುಪೇಟೆ ಸುದ್ದಿ ಸಮಾಚಾರಗಳ ಕುರಿತ ಕುರಿತ ತಾಣ. ಭಾರತೀಯ ಷೇರು-ಪೇಟೆಯ ಇಂದಿನ ಗಳಿಕೆ, ಸೂಚ್ಯಂಕಗಳ ಏರಿಕೆ-ಇಳಿಕೆ, ದಾಖಲೆ, ಷೇರು ವ್ಯಾಪಾರದ ಸ್ಥಿತಿಗತಿಗಳು ಇತ್ಯಾದಿ ವ್ಯವಹಾರ ಸಂಗತಿಗಳ ಕುರಿತು ಬೆಳಕು ಚೆಲ್ಲುವ ವೆಬ್ ತಾಣ. 

ಐಸಿಐಸಿಐಬ್ಯಾಂಕ್.ಕಾಂ

ದೇಶದ ಮೂರನೇ ಅತಿದೊಡ್ಡ ಬ್ಯಾಂಕಿನ ಅಧಿಕೃತ ವೆಬ್ ತಾಣ. ಹದಿನೇಳು ದೇಶಗಳಲ್ಲಿ ವ್ಯವಹಾರ ಹೊಂದಿರುವ ಐಸಿಐಸಿಐ ಬ್ಯಾಂಕಿನ ಸಮಸ್ತ ಬ್ಯಾಂಕಿಂಗ್ ವ್ಯವಹಾರಗಳ ಮಾಹಿತಿಗೆ ಈ ತಾಣಕ್ಕೆ ಭೇಟಿ ನೀಡಬಹುದು.

ಸೈರಸ್.ಕಾಂ

ಕೇವಲ ವಿಜ್ಞಾನ ಸಂಬಂಧಿ ವಿಷಯಗಳ ಹುಡುಕಾಟಕ್ಕಾಗಿ ಇರುವ ಸರ್ಚ್ ಇಂಜಿನ್. ೪೫೦ ದಶಲಕ್ಷ ವಿಜ್ಞಾನ ಸಂಬಂಧಿ ದಾಖಲೆಗಳ ನಡುವೆ ತಮಗಿಷ್ಟವಾದ ವಿಜ್ಞಾನಿಗಳು, ವಿಜ್ಞಾನ ಪತ್ರಿಕೆಗಳು, ವೈಜ್ಞಾನಿಕ ಚಿಂತನೆ-ವಿಮರ್ಶೆ-ಪರೀಕ್ಷೆ ಇತ್ಯಾದಿ ವಿಷಯಗಳ ಕುರಿತು ನಿಖರವಾಗಿ ಹುಡುಕಲು ಸಹಾಯ ಮಾಡುವ ಇಂಜಿನ್.

ಟ್ರೈಸೈನ್ಸ್.ಆರ್ಗ್

ನಿಮ್ಮ ಮನೆಯಲ್ಲಿ ವಿಜ್ಞಾನವನ್ನು ಇಷ್ಟಪಡುವ ಮಕ್ಕಳಿದ್ದಾರ? ಆಗಾಗ್ಗೆ  ಏನಾದರೊಂದು ಹೊಸ ಪ್ರಯೋಗ ಮಾಡುತ್ತಿರುತ್ತಾರ? ಹಾಗಾದರೆ ಅವರಿಗೆ ಈ ತಾಣ ತೋರಿಸಿ. ಟ್ರೈ ಸೈನ್ಸ್ ಹೆಸರೇ ಹೇಳುವಂತೆ ಮನೆಯಲ್ಲಿ ಮಾಡಬಹುದಾದ ಅನೇಕ ಸರಳ ವಿಜ್ಞಾನ ಪ್ರಯೋಗಗಳ ಮಾಹಿತಿಗಳನ್ನ ಒಳಗೊಂಡಿರುವ ತಾಣ. 

ಇಂಡಿಯಾಸೈಟ್.ಕಾಂ

ಭಾರತದಲ್ಲಿನ ಪ್ರಮುಖ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡುವ ವೆಬ್ ತಾಣ. ಪ್ರತಿ ಸ್ಥಳದ ಬಗ್ಗೆಯೂ ಸಣ್ಣದೊಂದು ಟಿಪ್ಪಣಿ ಇದೆ. ಪ್ರಮುಖ ನಗರಗಳಿಂದ ಇರುವ ದೂರ, ಸಾರಿಗೆ, ವಸತಿ ಇತ್ಯಾದಿ ವ್ಯವಸ್ಥೆ ಬಗ್ಗೆ ಮಾಹಿತಿ ಸಿಗುತ್ತದೆ. ಪ್ರವಾಸಿಪ್ರಿಯರಿಗೆ ಅಗತ್ಯವಾದ ಮಾಹಿತಿಗಳು ಇಲ್ಲಿವೆ.

ಸೈನ್ಸ್ ಮ್ಯಾಗ್.ಕಾಂ

ಜಗತ್ತಿನ ವಿಜ್ಞಾನ ಕೌತುಕಗಳ, ಇತ್ತೀಚಿನ ಬೆಳವಣಿಗೆ, ಶೋಧಗಳ ಬಗ್ಗೆ ತಿಳಿದುಕೊಳ್ಳಬೇಕಾದಲ್ಲಿ ಈ ವಿಜ್ಞಾನ ನಿಯತಕಾಲಿಕಕ್ಕೊಮ್ಮೆ ಭೇಟಿ ನೀಡಿ. ‘ಅಮೆರಿಕನ್ ಅಸೋಸಿಯೇಶನ್ ಫಾರ್ ದ ಅಡ್ವಾನ್ಸ್ ಮೆಂಟ್ ಆಫ್ ಸೈನ್ಸ್’ ಪ್ರಾಯೋಜಿತ ಈ ತಾಣದಲ್ಲಿ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಸುದ್ದಿ ಸಮಾಚಾರಗಳು, ವಿಶ್ಲೇಷಣೆ, ವರದಿಗಳು, ಇನ್ನೂ ಸಾಕಷ್ಟು ಲೇಖನಗಳಿವೆ.

ಸಮರಸ.ನೆಟ್

ಸಮರಸ-ಕನ್ನಡದ ಹೊಸ ಬಗೆಯ ವೆಬ್ ಪ್ರಯತ್ನ. ಹೊಸ ಯೋಜನೆಗಳೊಂದಿಗೆ, ಹೊಸ ಪ್ರಯತ್ನಗಳೊಂದಿಗೆ ಮೂಡಿ ಬರುತ್ತಿರುವ ಕನ್ನಡದ ವೆಬ್ ತಾಣ. ‘ಬರವಣಿಗೆಯಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಂದು, ಹೆಚ್ಚಿಸಿಕೊಂಡು, ಓದುಗರಿಗೆ ಅನೇಕ ವಿಷಯಗಳ (ನಾವು ಓದಿ, ಅನುಭವಿಸಿ ತಿಳಿದಿರುವ) ಮಾಹಿತಿಯನ್ನು ಕೊಡಲೆಂದು ಸೃಷ್ಟಿಯಾದದ್ದು ‘ಸಮರಸ’. ಎನ್ನುವುದು ಅದರ ಸಂಪಾದಕರ ನುಡಿ. ಒಮ್ಮೆ ಭೇಟಿ ಕೊಡಿ.

ಕನ್ನಡಬಳಗ.ಯುಕೆ

ಬ್ರಿಟನ್ನಿನಲ್ಲಿರುವ ಕನ್ನಡಿಗರ ಬಳಗದ ವೆಬ್ ತಾಣ. ಅನಿವಾಸಿಗಳ ಕನ್ನಡ ಕಾರ್ಯಕ್ರಮಗಳು, ಯೋಜನೆಗಳು, ಹಬ್ಬ ಹರಿದಿನಗಳ ಆಚರಣೆ, ಹಳೆಯ ನೆನಪುಗಳ ಮೆಲುಕುಗಳನ್ನ ಇಲ್ಲಿ ಕಾಣಬಹುದು. ನೀವೂ ಹಂಚಿಕೊಳ್ಳಬಹುದು.

ಐಬಿಎನ್-ಬಜೆಟ್ ೦೯

ಈ ಬಾರಿಯ ಬಜೆಟ್ ಯಾರಿಗೆಲ್ಲ ಲಾಭ? ಯಾರಿಗೆ ಹೆಚ್ಚಿನ ಹೊರೆ? ಯಾರಿಗೆ ಹೆಚ್ಚು ತೆರಿಗೆ? ಹೊಸ ಯೋಜನೆಗಳೇನು? ಎಂಬಿತ್ಯಾದಿ ಸುದ್ದಿಗಳನ್ನ ನೋಡುತ್ತಿದ್ದೀರಾ? ಹಾಗಾದರೆ ಐಬಿಎನ್ ನ ಈ ಬಜೆಟ್ ವಿಶೇಷ ಪುಟಕ್ಕೊಮ್ಮೆ ಭೇಟಿ ನೀಡಿ. 

ಕ್ರಿಕೆಟ್ ವುಮನ್.ಕಾಂ

ಕ್ರಿಕೆಟ್ ಎಂದರೆ ಅದು ಪುರುಷರಷ್ಟೇ ಆಡುವ ಆಟ ಎನ್ನುವ ಭಾವನೆಯೇ ಹೆಚ್ಚು. ಮಹಿಳಾ ಕ್ರಿಕೆಟ್ ಗೆ ಮನ್ನಣೆಯೇ ಇಲ್ಲ. ಹೀಗಿರುವ ಕಾಲದಲ್ಲಿ ಮಹಿಳೆಯರ ಕ್ರಿಕೆಟ್ ಕುರಿತ ಸುದ್ದಿಗೆಂದೇ ಒಂದು ವೆಬ್ ತಾಣವಿದೆ. ಅದುವೇ ಕ್ರಿಕೆಟ್ ವುಮನ್.ಕಾಂ.

ಮಹಿಳಾ ಕ್ರಿಕೆಟ್ ನ ಇತ್ತೀಚಿನ ಸರಣಿಗಳು, ಪಂದ್ಯಗಳು, ಫಲಿತಾಂಶಗಳು, ಇನ್ನಿತರ ಸುದ್ದಿ-ಸಮಾಚಾರಗಳ ಲಿಂಕುಗಳನ್ನು ಇಲ್ಲಿ ಕಾಣಬಹುದು.  

ಮ್ಯಾಜಿಕ್ ಬ್ರಿಕ್ಸ್.ಕಾಂ

ಆಸ್ತಿ ಮಾರುವುದು, ಕೊಳ್ಳುವುದು ಇತ್ಯಾದಿ ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ಸೂಕ್ತವಾದ ತಾಣ. ಭಾರತದ ಯಾವುದೇ ನಗರದಲ್ಲಿ ನಿಮಗೆ ಬೇಕಾದ ಮನೆ, ನಿವೇಶನ ಇತ್ಯಾದಿ ಮಾಹಿತಿಗಳಿಗೆ ಇಲ್ಲಿ ಹುಡುಕಬಹುದು. ವಿವಿಧ ಪ್ರಾಜೆಕ್ಟ್ ಗಳು, ಏಜೆಂಟರು ಮತ್ತು ಉದ್ದಿಮೆ ವಿಶ್ಲೇಷಕರ ವಿವರಗಳು ಒಂದೆಡೆ ಸಿಗುತ್ತೆ.

ಡಿಸ್ಕವರ್ ಇಂಡಿಯಾ.ಕಾಂ

ಭಾರತದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೇ? ನಮ್ಮ ನೆಲ, ಜಲ, ಸಂಸ್ಕೃತಿ, ಪ್ರವಾಸೋದ್ಯಮ, ವ್ಯವಹಾರ, ತಂತ್ರಜ್ಞಾನ ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ನೀಡುವ ಅಪರೂಪದ ತಾಣವೊಂದು ಇಲ್ಲಿದೆ.

ಇಂಡಿಯನ್ ರೆಸಿಫಿ.ಕಾಂ

ನಿಮಗೆ ಅಡುಗೆ ಮಾಡುವುದೆಂದರೆ ತುಂಬಾ ಇಷ್ಟದ ಕೆಲಸವೇ? ಹಾಗಾದರೆ ಇಲ್ಲಿದೆ ನಿಮಗೊಂದು ತಾಣ. ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ವಿವಿಧ ಭಕ್ಷ್ಯಗಳನ್ನು ತಯಾರಿಸುವುದು ಹೇಗೆ ಎನ್ನುವುದನ್ನು ಈ ತಾಣದಲ್ಲಿ ಸರಳವಾಗಿ ವಿವರಿಸಲಾಗಿದೆ.  ಒಮ್ಮೆ ಭೇಟಿ ಕೊಟ್ಟು ನೋಡಿ.

ರ್ಯಾಪಿಡ್ ಶೇರ್.ಕಾಂ

ಸುಲಭವಾಗಿ ಫೈಲ್ ಗಳನ್ನು ಅಪ್ ಕೋಡ್ ಮಾಡಲು ಅನುಕೂಲವಾಗುವ ಗೂಗಲ್ ನಂಥಹದ್ದೇ ಇನ್ನೊಂದು ವೇಗದ ಇಂಜಿನ್. ೨೦೦ ಎಂಬಿ ವರೆಗಿನ ಫೈಲ್ ಗಳನ್ನ ಅಪ್ ಲೋಡ್ ಮಾಡಬಹುದು. ಜೊತೆಗೆ ಗೇಮ್ , ನ್ಯೂಸ್ ಸರ್ಚ್ ನಂಥ ಇನ್ನಿತರ ಉಪಯೋಗಗಳಿರುವ ತಾಣ.

ಮೈಕಲ್ ಜಾಕ್ಸನ್.ಕಾಂ

ನಿನ್ನೆಯಷ್ಟೇ ನಮ್ಮನ್ನಗಲಿದ ಪಾಪ್ ತಾರೆ ಮೈಕಲ್ ಜಾಕ್ಸನ್ ವೆಬ್ ತಾಣ. ಜಾಕ್ಸನ್ ರ ಜನಪ್ರಿಯ, ಅಪರೂಪದ ಹಾಡುಗಳು, ವಿಡಿಯೋಗಳು, ಚಿತ್ರಗಳು ಎಲ್ಲವನ್ನೂ ಇಲ್ಲಿ ಕಾಣಬಹುದು. ಜಾಕ್ಸನ್ ಕುರಿತ ನಿಮ್ಮ ನೆನಪು, ಅನಿಸಿಕೆಗಳನ್ನು ಹಂಚಿಕೊಳ್ಳಬಹುದು. 

ಬಾಲಿವುಡ್ ಹಂಗಾಮ.ಕಾಂ

ಹಿಂದಿ ಚಿತ್ರಗಳು ಅಂದರೆ ನಿಮಗೆ ಇನ್ನಿಲ್ಲದ ಆಸಕ್ತಿ ಇದೆಯಾ ? ಹಾಗಾದರೆ ಈ ತಾಣಕ್ಕೊಮ್ಮೆ ತಪ್ಪದೇ ಭೇಟಿ ನೀಡಿ. ಬಾಲಿವುಡ್ ಲೋಕದ ಸಮಸ್ತ ಆಗುಹೋಗುಗಳು-ಸುದ್ದಿ ಸಮಾಚಾರಗಳು, ಬಿಡುಗಡೆಯಾಗಿರುವ ಚಿತ್ರಗಳು ಹೇಗಿವೆ? ಬಿಡುಗಡೆಯಾಗಲಿರುವ ಚಿತ್ರಗಳು ಯಾವುದಿವೆ? ಎಲ್ಲ ಮಾಹಿತಿ ಇಲ್ಲಿ ಲಭ್ಯ. ಮಾತ್ರವಲ್ಲ ಸಿನಿಮಾ ಮಂದಿಯ ಗಲ್ಲಿ ಗಾಸಿಪ್, ಬ್ಲಾಗ್ ಬರಹಗಳನ್ನು ಓದಬಹುದು. ಹೊಸ ಹೊಸ ಹಾಡುಗಳನ್ನೂ ಕೇಳಬಹುದು.

 ಕ್ಲೈಮೇಟ್.ಕಾಂ

ವಿಶ್ವದ ಪ್ರಮುಖ ಪರಿಸರ ಸ್ನೇಹಿ ತಾಣಗಳಲ್ಲಿ ಈ ತಾಣವೂ ಒಂದು. ವಾತಾವರಣ ಮತ್ತು ಜೀವಜಗತ್ತಿನ ನಡುವಣ ಸಮತೋಲನ ಕಾಯ್ದುಕೊಳ್ಳಲು ಪ್ರಾಯೋಗಿಕ ಸಲಹೆಗಳನ್ನು ಹುಡುಕುವಲ್ಲಿ ಶ್ರಮಿಸುತ್ತಿರುವ ಈ ತಾಣ ವಿಶ್ವ ಹವಾಗುಣದ ಬಗ್ಗೆ ಮತ್ತು ಪ್ರಸಕ್ತ ಹವಾಗುಣ ವಿದ್ಯಮಾನಗಳ ಬಗ್ಗೆ ಸಾಕಷ್ಟು ಉಪಯುಕ್ತ ಮಾಹಿತಿ ಹೊಂದಿದೆ.

ನೂಪುರ ಭ್ರಮರಿ.ಕಾಂ

ನೂಪುರ ಭ್ರಮರಿ ನರ್ತನ ಜಗತ್ತಿನ ಆಸಕ್ತರಿಗೆಂದೇ ಕಟ್ಟಿಕೊಂಡಿರುವ ಕನ್ನಡದ ವೆಬ್ ತಾಣ. ಇಂತಹದ್ದೊಂದು ವೆಬ್ ಅನ್ನು ರೂಪಿಸಿದ್ದಾರೆ ಕಳೆದ ಹದಿನೈದು ವರ್ಷಗಳಿಂದ ನೃತ್ಯ ಜಗತ್ತಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ, ಪತ್ರಿಕೋದ್ಯಮ ಉಪನ್ಯಾಸಕಿ ಬಿ.ಎನ್. ಮನೋರಮ. ಮುದ್ರಣ ಪತ್ರಿಕೆಯಾಗಿಯೂ ಹೊರ ಬರುತ್ತಿರುವ ನೂಪುರ ಭ್ರಮರಿ ನೃತ್ಯಕ್ಕೆ ಸಂಬಂಧಿಸಿದ ವೈವಿಧ್ಯಮಯ, ವಿಚಾರಪೂರ್ಣ ಬರಹಗಳಿಂದ ಕೂಡಿದೆ.

ರೇಡಿಯೋ ಬೆಂಗಳೂರು

ರೇಡಿಯೋ ಬೆಂಗಳೂರು ಉದ್ಯಾನ ನಗರಿಯ ರೇಡಿಯೋ ಪ್ರಿಯರು ರೂಪಿಸಿಕೊಂಡಿರುವ ತಾಣ. ಬೆಂಗಳೂರಿನ ಬಾನುಲಿ ಕೇಂದ್ರಗಳು, ಪ್ರಸಾರ-ಸುದ್ದಿಸಮಾಚಾರಗಳ ಜೊತೆಗೆ ಬಾನುಲಿ ಆಸಕ್ತರ ಸೋಷಿಯಲ್ ನೆಟ್ ವರ್ಕಿಂಗ್ ತಾಣ. ನಿತ್ಯ ಕೇಳುವ ಎಫ್ ಎಂಗಳ ಕುರಿತು ಸ್ವಲ್ಪ ಮಾತು.... ನೀವೂ ಸೇರಿಕೊಳ್ಳಿ.

ಕ್ಲಾಸಿಕಲ್ ಕನ್ನಡ.ಆರ್ಗ್

ಕನ್ನಡ ವೆಬ್ ಜಾಲಕ್ಕೊಂದು ವಿನೂತನ ಸೇರ್ಪಡೆ. ಕನ್ನಡ ಭಾಷೆಯ ಗುಣ, ಬೆಳವಣಿಗೆ ಮತ್ತು ಸಂಸ್ಕೃತಿಯ ಕುರಿತು ಮಾಹಿತಿ ನೀಡುವಂತಹ ಉಪಯುಕ್ತ ತಾಣ.  ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಿಂದ ಪ್ರಾರಂಭವಾಗುತ್ತಿರುವ ಹೊಸ ಅಂತರ್ಜಾಲ ತಾಣ. ಈಗಷ್ಟೇ ಆರಂಭವಾಗುತ್ತಿರುವ ಈ ಜಾಲ ನಾಡು, ನುಡಿ ಸಂಸ್ಕೃತಿ ಕುರಿತು ಉಪಯುಕ್ತ ಮಾಹಿತಿಗಳನ್ನು ಹೊಂದಿದ್ದು, ಇನ್ನು ಹೆಚ್ಚೆಚ್ಚು ಅಂಶಗಳು ಸದ್ಯದಲ್ಲೇ ಸೇರ್ಪಡೆಯಾಗಲಿವೆ. 

ಡಿಸ್ನಿ.ಕಾಂ

ಮೋಜು, ಮನರಂಜನೆಗೆ ಹೆಸರಾದ ಡಿಸ್ನಿಯ ಅಧಿಕೃತ ವೆಬ್ ತಾಣ. ಅಂತರ್ಜಾಲದಲ್ಲಿ ರಂಜನೆಯನ್ನ ಹುಡುಕುತ್ತಿರುವವರು ಈ ತಾಣಕ್ಕೊಮ್ಮೆ ಭೇಟಿ ನೀಡಿ.

ಎ ಟ್ರಿಪ್ ಟು ಇಂಡಿಯಾ.ಕಾಂ

ಸುಮ್ಮನೆ ಹೀಗೆ ದೇಶವೆಲ್ಲ ಸುತ್ತಬೇಕು ಅನ್ನುವ ಆಸೆ ಇದೆಯಾ? ಅದಕ್ಕೆ ಬೇಕಾದ ಮಾಹಿತಿಗಳು ಎಲ್ಲಿ ಸಿಗಬಹುದು ಅಂತ ಹುಡುಕುತ್ತಿದ್ದೀರಾ? ಹಾಗಾದರೆ ಈ ತಾಣಕ್ಕೊಮ್ಮೆ ಭೇಟಿ ನೀಡಿ. ದೇಶಾದ್ಯಂತ ಇರುವ ವಿವಿಧ ಪ್ರೇಕ್ಷಣೀಯ ಸ್ಥಳಗಳು, ಹೋಗಬೇಕಾದ ದಾರಿ, ಹೋಗಿಬರಲು ಇರುವ ವ್ಯವಸ್ಥೆ, ಉಳಿದುಕೊಳ್ಳಲು ಸೂಕ್ತವಾದ ಜಾಗ ಇತ್ಯಾದಿ ಎಲ್ಲದರ ಬಗ್ಗೆಯೂ ಮಾಹಿತಿ ಸಿಗುತ್ತದೆ.

ಮ್ಯಾಪ್ಸ್ ಆಫ್ ವರ್ಡ್.ಕಾಂ

ಭೂಗೋಳಶಾಸ್ತ್ರದಲ್ಲಿ ಆಸಕ್ತಿ ಇದೆಯಾ? ವಿಶ್ವದ ಪ್ರಮುಖ ನಗರಗಳ ಬಗ್ಗೆ ಮಾಹಿತಿ ಬೇಕಾಗಿದೆಯಾ? ಹಾಗಾದರೆ ಈ ತಾಣವನ್ನೊಮ್ಮೆ ನೋಡಿ ಬನ್ನಿ. ಹೆಸರೇ ಹೇಳುವಂತೆ ಜಗತ್ತಿನ ಪ್ರಮುಖ ದೇಶಗಳು ಮತ್ತು ನಗರಗಳ ನಕ್ಷೆಗಳು ಇಲ್ಲಿ ಸಿಗುತ್ತವೆ. ಜಗತ್ತಿನ ಪ್ರಮುಖ ಹೊಟೇಲ್ ಗಳು, ವಿಮಾನ ನಿಲ್ದಾಣಗಳು, ಕ್ರೀಡಾಕೂಟಗಳು ನಡೆಯುವ ಜಾಗಗಳು ಹೀಗೆ ವರ್ಗೀಕೃತ ಮ್ಯಾಪ್ ಗಳು ಕೂಡ ಲಭ್ಯವಿದೆ.

ಮನಿಕಂಟ್ರೋಲ್.ಕಾಂ

ಷೇರು ಮಾರುಕಟ್ಟೆ ಬಗ್ಗೆ ಆಸಕ್ತಿ ಇದೆಯಾ? ಇವತ್ತಿನ ಷೇರು ಬೆಲೆಗಳ ಕಥೆ ಏನು ಅಂತ ತಿಳಿದುಕೊಳ್ಳಬೇಕಾ? ಷೇರುಗಳಲ್ಲಿ ಬಂಡವಾಳ ಹೂಡಬೇಕು ಅಂತ ಯೋಚಿಸುತ್ತಿದ್ದೀರಾ? ಹಾಗಿದ್ದರೆ ಈ ತಾಣಕ್ಕೊಮ್ಮೆ ಭೇಟಿ ನೀಡಿ. ಭಾರತೀಯ ಷೇರು ಮಾರುಕಟ್ಟೆ ಬೆಳವಣಿಗೆ, ದರಗಳ ಕುರಿತು ಕ್ಷಣಕ್ಷಣಕ್ಕೂ ತಾಜಾ ಮಾಹಿತಿಗಳು ಸಿಗುತ್ತವೆ. ಜೊತೆಗೆ ಹೂಡಿಕೆ, ಹಣಕಾಸು ವ್ಯವಹಾರಗಳ ಕುರಿತ ವಿವರ, ವಿಶ್ಲೇಷಕರ ಸಲಹೆಗಳೂ ದೊರಕುತ್ತವೆ.

ಡಬ್ಲ್ಯುಎಚ್ ಒ.ಕಾಂ

ವಿಶ್ವ ಆರೋಗ್ಯ ಸಂಸ್ಥೆಯ ಅಧಿಕೃತ ವೆಬ್ ತಾಣ. ಆರೋಗ್ಯ ವಿಷಯಕ್ಕೆ ಸಂಬಂಧಿಸಿದ ಹೊಸ ಹೊಸ ಮಾಹಿತಿಗಳು, ಶೋಧಗಳು, ಡಬ್ಲ್ಯುಎಚ್ ಒನ ಹೊಸ ಯೋಜನೆ-ಕಾರ್ಯಕ್ರಮಗಳು ಎಲ್ಲದರ ಬಗ್ಗೆ ಮಾಹಿತಿ ನೀಡುವಂತಹ ಜಾಗತಿಕ ವೆಬ್ ತಾಣ. 

ಆರ್ ಬಿಐ.ಇನ್

ಭಾರತದ ಬ್ಯಾಂಕುಗಳ ಬ್ಯಾಂಕ್, ಭಾರತೀಯ ರಿಸರ್ವ್ ಬ್ಯಾಂಕಿನ ಅಧಿಕೃತ ವೆಬ್ ತಾಣ. ಆರ್ ಬಿಐ ನ ಹಣಕಾಸು ನೀತಿಗಳು, ಬಡ್ಡಿದರಗಳು, ಸಾಲ ಯೋಜನೆಗಳು, ಮುಖ್ಯ ಪ್ರಕಟಣೆಗಳು ಇನ್ನಿತರ ಮುಖ್ಯ ಸುದ್ದಿಗಳನ್ನ ತಿಳಿಯಬಹುದು.

ಟ್ರಾವೆಲ್.ಕಾಂ

ಜಾಗತಿಕ ಪ್ರವಾಸದ ಮಾರ್ಗದರ್ಶನಕ್ಕೆ ಉತ್ತಮ ಗೈಡ್. ಮೆಕ್ಸಿಕೋನಿಂದ ಮೈಸೂರಿನವರೆಗೆ ಐದು ಸಾವಿರಕ್ಕೂ ಹೆಚ್ಚು ನಗರಗಳ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ, ಸಂಬಂಧಪಟ್ಟ ಲಿಂಕ್ ಎಲ್ಲವೂ ಸಿಗುತ್ತದೆ. ವಿಮಾನ, ಕಾರು, ಹೋಟೆಲ್ ಬುಕ್ಕಿಂಗ್ ಇತ್ಯಾದಿ ಮಾಹಿತಿಗಳೂ ಸಿಗುತ್ತವೆ. 

ಇಂಡಿಯಾಎಜುಕೇಷನ್.ನೆಟ್

ಶಿಕ್ಷಣ ಸಂಬಂಧಿ ತಾಣಗಳನ್ನ ಹುಡುಕುತ್ತಿದ್ದರೆ ಇಲ್ಲಿದೆ ಒಂದು ಸೂಕ್ತ ತಾಣ. ಭಾರತದಲ್ಲಿನ ಪ್ರಮುಖ ವಿಶ್ವವಿದ್ಯಾಲಯಗಳು, ಕಾಲೇಜುಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಬಹುದು. ಅಲ್ಲದೇ ದೇಶಾದ್ಯಂತ ಬೇಡಿಕೆಯಲ್ಲಿರುವ ಕೋರ್ಸುಗಳ ಬಗ್ಗೆಯೂ ಮಾಹಿತಿ ದೊರೆಯುತ್ತದೆ. ಉದ್ಯೋಗಬೇಟೆಯಲ್ಲಿರುವವರಿಗೂ ಒಂದಿಷ್ಟು ಅವಕಾಶಗಳ ಪಟ್ಟಿ ಸಿಗುತ್ತದೆ.

ಎಕೋಇಂಡಿಯಾ.ಕಾಂ

ಈ ಬಾರಿಯ ರಜೆಯನ್ನು ಒಂದೊಳ್ಳೆ ಸ್ಥಳದಲ್ಲಿ ಕಳೆಯುವ ಯೋಚನೆಯಲ್ಲಿ ಇದ್ದೀರಾ? ನಿಸರ್ಗದ ರಮ್ಯ ತಾಣಗಳಿಗೆ ಭೇಟಿ ಕೊಡುವ ಉದ್ದೇಶವಿದೆಯಾ? ಹಾಗಾದರೆ ಇದೋ ಇಲ್ಲಿದೆ ನೋಡಿ ಒಂದೊಳ್ಳೆ ಮಾಹಿತಿಯುಕ್ತ ತಾಣ. ಭಾರತೀಯ ಪರಿಸರ ಪ್ರವಾಸೋದ್ಯಮ ಕುರಿತ ಸಂಪೂರ್ಣ ಮಾಹಿತಿಗಳು ಇಲ್ಲಿ ಸಿಗುತ್ತವೆ.

ಹೆಲ್ತ್ ಅಂಡ್ ಯೋಗ.ಕಾಂ

ಯೋಗದ ಬಗ್ಗೆ ಆಸಕ್ತಿ ಹೊಂದಿದ್ದೀರಾ? ಆ ಕುರಿತು ಏನಾದರೂ ಮಾಹಿತಿ ಸಿಗುತ್ತದೆ ಅಂತ ಹುಡುಕುತ್ತಿದ್ದೀರಾ? ಹಾಗಾದರೆ ಒಮ್ಮೆ ಈ ತಾಣಕ್ಕೆ ಭೇಟಿ ನೀಡಿ. ಯೋಗ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಬರಹಗಳು, ಯೋಗಭ್ಯಾಸ ಕುರಿತಾದ ತಂತ್ರಾಂಶಗಳು ಇನ್ನಿತರ ಮಾಹಿತಿಗಳು ಇಲ್ಲುಂಟು.

ಸ್ಪೇಸ್.ಕಾಂ

ನಿಮಗೆ ಸೌರಮಂಡಲ ರಚನೆಯ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದೆಯೇ? ಸೂರ್ಯ, ಚಂದ್ರ, ಧೂಮಕೇತು, ನಕ್ಷತ್ರಗಳ ಬಗ್ಗೆ ತಿಳಿದುಕೊಳ್ಳಬೇಕೇ? ಈ ತಾಣದ ಮೂಲಕ ನೀವು ಸೌರಮಂಡಲವನ್ನೊಮ್ಮೆ ಸುತ್ತಬಹುದು. ನಿಮಗಿಷ್ಟವಾದ ಗ್ರಹಗಳನ್ನು ನೋಡಿ, ಆ ಕುರಿತು ತಿಳಿದುಕೊಳ್ಳಬಹುದು.

ಇಂಡಿಯಾ ಕ್ರಾಫ್ಟ್ಸ್.ಕಾಂ

ಭಾರತೀಯ ಕುಶಲ ಉತ್ಪನ್ನಗಳ ಕುರಿತ ಅಗತ್ಯ ಮಾಹಿತಿ ಬೇಕಿದ್ದಲ್ಲಿ ಈ ತಾಣವನ್ನೊಮ್ಮೆ ಶೋಧಿಸಿ ನೋಡಿ. ಕರಕುಶಲ ಉತ್ಪನ್ನಗಳ ಕೊಳ್ಳುವಿಕೆ ಮತ್ತು ಮಾರಾಟ ಎರಡಕ್ಕೂ ಇಲ್ಲಿ ಅವಕಾಶವಿದೆ. ನಿಮ್ಮ ಆಸಕ್ತಿ, ಅಭಿರುಚಿಗೆ ಅನುಗುಣವಾದ ಉತ್ಪನ್ನಗಳನ್ನ ಹುಡುಕುವುದು ಸುಲಭ. ಜೊತೆಗೆ ದೇಶಾದ್ಯಂತ ನಡೆಯುವ ಕರಕುಶಲ ಮೇಳ, ವಸ್ತು ಪ್ರದರ್ಸನಗಳ ಬಗ್ಗೆಯೂ ಮಾಹಿತಿ ಸಿಗುತ್ತದೆ. 

ಗೇಮ್ ಸ್ಪೈ.ಕಾಂ

ಅಂತರ್ಜಾಲದಲ್ಲಿ ಹೊಸ ಬಗೆಯ, ವಿಭಿನ್ನ ವಿಡಿಯೋ ಗೇಮುಗಳ ಹುಡುಕಾಟದಲ್ಲಿ ಇರುವವರಿಗೆ ಸೂಕ್ತ ತಾಣ. ಈಗಷ್ಟೇ ಬಿಡುಗಡೆಯಾದ ಹೊಸ ಹೊಸ ಗೇಮುಗಳು, ಅವುಗಳನ್ನ ಆಡುವ ಬಗೆ ಇನ್ನಿತರ ಮಾಹಿತಿಗಳನ್ನ ಇಲ್ಲಿ ಕಾಣಬಹುದು. 

ಎನ್ ಡಿ ಟಿವಿ ಎಲೆಕ್ಷನ್ಸ್.ಕಾಂ

ಈ ಬಾರಿಯ ಚುನಾವಣೆಯ ಸುದ್ದಿಗಳಿಗೆಂದೇ ಎನ್ ಡಿ ಟಿವಿ ವಾಹಿನಿ ರೂಪಿಸಿದ ವಿಶೇಷ ವೆಬ್ ಪುಟ. ೨೦೦೯ರ ಲೋಕಸಭಾ ಚುನಾವಣೆಯ ಸಮಸ್ತ ಸುದ್ದಿ, ವಿಶ್ಲೇಷಣೆಗಳು, ಸೋಲು-ಗೆಲುವಿನ ಲೆಕ್ಕಾಚಾರ ಎಲ್ಲವನ್ನೂ ಇಲ್ಲಿ ಕಾಣಬಹುದು. 

ಮೂವೀಸ್.ಕಾಂ

ಸಿನಿಮಾಸಕ್ತರಿಗೆ ಅತ್ಯಂತ ಸೂಕ್ತವಾದ ತಾಣ. ಜಗತ್ತಿನಾದ್ಯಂತ ಬಿಡುಗಡೆಯಾಗುವ ಪ್ರಮುಖ ಚಿತ್ರಗಳ ಕುರಿತ ಮುನ್ನೋಟ ಇಲ್ಲಿದೆ. ಪ್ರದರ್ಶನಗೊಳ್ಳುತ್ತ ಇರೋ ಚಿತ್ರಗಳು, ಬಿಡುಗಡೆಯಾಗಲಿರುವ ಚಿತ್ರಗಳು, ಟಾಪ್ ರೇಟಿಂಗ್ ಚಿತ್ರಗಳು ಎಲ್ಲದರ ಬಗ್ಗೆಯೂ ಇಲ್ಲಿ ಮಾಹಿತಿ ಸಿಗುತ್ತೆ. ಒಟ್ಟಾರೆ ಜಾಗತಿಕ ಸಿನಿಮಾ ಪ್ರಪಂಚದ ಮಾಹಿತಿಗಳು ಇಲ್ಲಿವೆ. 

ಬೇಬಿಸೆಂಟರ್.ಕಾಂ

ನಿಮ್ಮ ಮುದ್ದು ಮಗುವಿನ ಆರೈಕೆಯ ಸಹಾಯಕ್ಕೆಂದೇ ಇರುವ ತಾಣ. ಗರ್ಭಾವಸ್ಥೆಯಲ್ಲಿರೋ ಮಗುವಿನ ಬೆಳವಣಿಗೆಯಿಂದ ಹಿಡಿದು ಅದು ಬೆಳೆದು ದೊಡ್ಡದಾಗುವವರೆಗೆ ಪೋಷಣೆ ಮಾಡುವ ವಿಧಾನಗಳ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ. ಜೊತೆಗೆ ಸಾಕಷ್ಟು ಸಲಹೆ-ಸೂಚನೆಗಳು ದೊರೆಯುತ್ತವೆ. ಬೇಕೆಂದರೆ, ಇಲ್ಲಿರುವ ಒಂದು ಲಕ್ಷ ಹೆಸರುಗಳಲ್ಲಿ ನಿಮ್ಮ ಮಗುವಿಗೆಂದು ಒಂದು ಚಂದದ ಹೆಸರನ್ನೂ ಹೆಕ್ಕಿ ತೆಗೆಯಬಹುದು. 

ವ್ಯಾನ್.ಕಾಂ

ಪ್ರಮುಖ ಸೋಷಿಯಲ್ ನೆಟ್ ವರ್ಕಿಂಗ್ ತಾಣಗಳಲ್ಲಿ ಒಂದು. ವ್ಯಾನ್ ಅಂದರೆ ‘ವೆರ್ ಆರ್ ಯು ನೌ’ ಅಂತ ಅರ್ಥ. ನೀವು ಈಗ ಎಲ್ಲಿದ್ದೀರಿ, ಎಲ್ಲಿಗೆ ಹೊರಡುತ್ತೀರಿ, ಅಲ್ಲಿರುವ ಜನರಿಂದ ನಿಮಗೆ ಬೇಕಾದ ಮಾಹಿತಿ, ಸಲಹೆ ಎಲ್ಲವನ್ನ ಪಡೆಯಬಹುದು. ಜೊತೆಗೆ ಪ್ರವಾಸಕ್ಕೆ ಬೇಕಾದ ತಯಾರಿಗಳ ಕುರಿತು ಅಗತ್ಯ ಮಾಹಿತಿಗಳೂ ದೊರೆಯುತ್ತವೆ. ನಿಮ್ಮಲ್ಲೇ ಮಾಹಿತಿಗಳ ವಿನಿಮಯವೂ ಆಗುತ್ತದೆ.

ಫಿಫಾ.ಕಾಂ


ಐಪಿಎಲ್, ಕ್ರಿಕೆಟ್ ಇತ್ಯಾದಿ ಗದ್ದಲಗಳ ನಡುವೆ ಮುಂದಿನ ವರ್ಷದ ಫುಟ್ಬಾಲ್ ವಿಶ್ವಕಪ್ ಸಿದ್ಧತೆ ಹೇಗೆ ನಡೆದಿದೆ? ನೀವು ಫುಟ್ಬಾಲ್ ಪ್ರಿಯರಾಗಿದ್ದು, ಇಂತಹದ್ದೊಂದು ಕುತೂಹಲ ನಿಮ್ಮನ್ನ ಕಾಡುತ್ತಿದ್ದರೆ ಫಿಫಾದ ಈ ಅಧಿಕೃತ ತಾಣಕ್ಕೊಮ್ಮೆ ತಪ್ಪದೇ ಭೇಟಿ ನೀಡಿ. ಫುಟ್ಬಾಲ್ ಜಗತ್ತಿನ ಸಮಗ್ರ ತಾಜಾ ಸುದ್ದಿಗಳು ಇಲ್ಲುಂಟು. 

ಜಪಕ್.ಕಾಂ

ನಿಮ್ಮ ಮನೆಯೊಳಗಿನ ಮಕ್ಕಳಿಗೆ ಕಾಲ ಕಳೆಯಲು ಸೂಕ್ತ ಅಂತರ್ಜಾಲ ತಾಣ. ನೆಟ್ಟಿನಲ್ಲಿ ಮಕ್ಕಳ ವಿಡಿಯೋ ಗೇಮ್ ಗಳನ್ನು ಹುಡುಕುತ್ತಿರುವವರು ಈ ತಾಣಕ್ಕೆ ಭೇಟಿ ನೀಡಬಹುದು. ನಿಮ್ಮನ್ನು ರಂಜಿಸಲೆಂದೇ ಇಲ್ಲಿ ಆರುನೂರಕ್ಕೂ ಹೆಚ್ಚು ಪುಕ್ಕಟೆ ಆನ್ ಲೈನ್ ವಿಡಿಯೂ ಗೇಮುಗಳಿವೆ. ನೀವು ಬೇಕಾದಷ್ಟು ಆಡಬಹುದು. ಹೆಚ್ಚು ಸ್ಕೋರ್ ಮಾಡಿ ಬಹುಮಾನ ಕೂಡ ಗೆಲ್ಲಬಹುದು.

ಐಪಿಎಲ್ ಟಿ೨೦.ಕಾಂ

ಐಪಿಎಲ್ ಕ್ರಿಕೆಟ್ಟಿನ ಮೋಜು ಸವಿಯಬಯಸುವವರಿಗೆ ಇಲ್ಲಿದೆ ಅದರ ಅಧಿಕೃತ ವೆಬ್ ತಾಣ. ಇಂಡಿಯನ್ ಪ್ರೀಮಿಯರ್ ಲೀಗ್ ನ ಈ ಆವೃತ್ತಿಯ ತಾಜಾ ಸುದ್ದಿಗಳು, ಸೋಲು-ಗೆಲುವುಗಳ ಲೆಕ್ಕಾಚಾರ, ಮುಂದಿನ ಪಂದ್ಯಗಳ ವೇಳಾಪಟ್ಟಿ, ತಂಡಗಳ ಬಲಾಬಲದ ವಿಮರ್ಶೆ, ಆಟಗಾರರ ಸಂದರ್ಶನ, ಚಿತ್ರಗಳು, ವಿಡಿಯೋಗಳು ಮುಂತಾದವುಗಳೆಲ್ಲವೂ ಇಲ್ಲಿ ಒಟ್ಟಾಗಿ ಸಿಗುತ್ತವೆ.

ಕಾರ್ ವಾಲೆ.ಕಾಂ

ಕಾರ್ ಪ್ರಿಯ ಜಾಲಿಗರಿಗೆ ಇದೊಂದು ಸೂಕ್ತ ತಾಣ. ಈಗಷ್ಟೆ ಮಾರುಕಟ್ಟೆಗೆ ಬಂದಿರುವ ಹೊಸ ವಿನ್ಯಾಸದ ಕಾರಿನಿಂದ ಹಳೆ ಕಾರುಗಳವರೆಗೆ ಎಲ್ಲ ವಿಧದ ಮಾಹಿತಿ ಸಿಗುತ್ತದೆ. ಕಾರುಗಳನ್ನು ಕೊಳ್ಳುವುದು, ಮಾರುವುದು ಇಲ್ಲವೇ ಅವುಗಳಿಗೆ ವಿಮೆ ಮಾಡಿಸುವುದರ ಬಗ್ಗೆ ಇಲ್ಲಿ ತಿಳಿಹೇಳಲಾಗುತ್ತದೆ. ಮಾತ್ರವಲ್ಲ ಕಾರು ಓಡಿಸುವುದು, ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಬಗ್ಗೆಯೂ ಒಂದಿಷ್ಟು ಟಿಪ್ಸ್ ದೊರೆಯುತ್ತದೆ.

ವರ್ಲ್ಡ್ ಡಿಜಿಟಲ್ ಲೈಬ್ರರಿ.ಆರ್ಗ್

ವಿಶ್ವಸಂಸ್ಥೆಯ ಅಂಗಸಂಸ್ಥೆ ಯುನೆಸ್ಕೋದ ಮಹತ್ವಾಕಾಂಕ್ಷೆಯ ಹೊಸ ವೆಬ್ ತಾಣ. ಜಗತ್ತಿನ ಎಲ್ಲ ಸಂಸ್ಕೃತಿಗಳಿಗೆ ಸೇರಿದ ದಾಖಲೆಗಳನ್ನ ಡಿಜಿಟಲೀಕರಣ ಗೊಳಿಸಿ ಅಂತರ್ಜಾಲದಲ್ಲಿ ನೀಡುವ ಯೋಜನೆಯ ತಾಣ. ಅತ್ಯಂತ ಪುರಾತನ, ಅಪರೂಪದ ಚಿತ್ರಗಳು, ಗ್ರಂಥಗಳು, ಭೂಪಟಗಳು ಮುಂತಾದವುಗಳನ್ನ ಇಲ್ಲಿ ಕಾಣಬಹುದು.

ಇಂಡಿಯನ್ ಹಾಲಿಡೆ.ಕಾಂ

ರಜಾ ದಿನಗಳಲ್ಲಿ ಪ್ರವಾಸ ಹೋಗುವುದು ಯಾರಿಗೆ ಇಷ್ಟವಿಲ್ಲ ಹೇಳಿ? ಆದರೆ ಪ್ರವಾಸ ಹೋಗುವುದು ಎಲ್ಲಿಗೆ? ಎಲ್ಲೆಲ್ಲಿ ಏನೇನು ನೋಡಬಹುದು? ಹೇಗೆ ಸಿದ್ದರಾಗಬೇಕು? ಮಾರ್ಗ ಹೇಗೆ? ಎಂಬಿತ್ಯಾದಿ ಮಾಹಿತಿಗಳಿಗೆ ಇಲ್ಲಿದೆ ಒಂದು ಅಪರೂಪದ ತಾಣ.

ಮೈಕ್ರೋಸಾಫ್ಟ್.ಕಾಂ

ಬಹುತೇಕ ಕಂಪ್ಯೂಟರ್ ಬಳಕೆದಾರರಿಗೆ ಬೇಕಾಗುವಂತ ತಾಣ. ಸಾಫ್ಟ್ ವೇರ್ ದಿಗ್ಗಜ ಮೈಕ್ರೋಸಾಫ್ಟ್ ಕಾರ್ಪೋರೇಶನ್ ನ ಅಧಿಕೃತ ತಾಣ. ಸಂಸ್ಥೆಯ ಎಲ್ಲ ಉತ್ಪನ್ನಗಳು, ಸಾಫ್ಟ್ ವೇರ್ ಗಳು, ಅದರ ಬಳಕೆಗೆ ಸಂಬಂಧಿಸಿದ ಮಾಹಿತಿ-ಮಾರ್ಗದರ್ಶನ, ಗ್ರಾಹಕ ಸಂಪರ್ಕ ಇನ್ನಿತರ ಮಾಹಿತಿಗಳು ಇಲ್ಲಿ ಲಭ್ಯ. 

ಕರ್ನಾಟಕ ಟೂರ್ಸ್ ಅಂಡ್ ಟ್ರಾವಲ್.ಕಾಂ

ಕರ್ನಾಟಕ ಪ್ರವಾಸೋದ್ಯಮದ ಬಗ್ಗೆ ಬೆಳಕು ಚೆಲ್ಲುವಂಥ ತಾಣ. ಕನ್ನಡದ ವಿವಿಧ ಪ್ರಮುಖ ಪ್ರವಾಸಿ ತಾಣಗಳು, ಪ್ರಮುಖ ಪಟ್ಟಣಗಳು, ಐತಿಹಾಸಿಕ ಸ್ಥಳಗಳು ಎಲ್ಲದರ ಬಗ್ಗೆ ಮಾಹಿತಿ ಸಿಗುತ್ತದೆ. ರಾಜ್ಯದಲ್ಲಿನ ಪ್ರಮುಖ ಮ್ಯೂಸಿಯಂಗಳು, ದೇವಸ್ಥಾನಗಳು, ವನ್ಯದಾಮಗಳು ಇತ್ಯಾದಿ ಬಗ್ಗೆ ವಿವರಣೆ ಇರುವಂಥ ಮಾಹಿತಿಯುಕ್ತ ತಾಣ.

ಬಿಎಸ್ ಎನ್ ಎಲ್.ಇನ್

ದೇಶದ ಅತಿದೊಡ್ಡ, ಸರ್ಕಾರಿ ಸ್ವಾಮ್ಯದ ದೂರವಾಣಿ ಸಂಸ್ಥೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ನ ವೆಬ್ ತಾಣ. ಬಿಎಸ್ ಎನ್ ಎಲ್ ಸೇವೆಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು, ವಿಚಾರಣೆಗಳು, ಚಾಲ್ತಿಯಲ್ಲಿರುವ ಹೊಸ ಹೊಸ ಆಫರ್ ಗಳು, ಬ್ರಾಡ್ ಬ್ಯಾಂಡ್ ಸಂಪರ್ಕ, ಗ್ರಾಹಕ ವಿಚಾರಣೆ ಎಲ್ಲಕ್ಕೂ ಈ ತಾಣವನ್ನ ಸಂಪರ್ಕಿಸಬಹುದು.

ನೌಕರಿ.ಕಾಂ

ಉದ್ಯೋಗ ಬೇಟೆಯಲ್ಲಿರುವ ಆಸಕ್ತರಿಗೆ ಸೂಕ್ತ ತಾಣ. ದೇಶದ ದೊಡ್ಡ ಉದ್ಯೋಗ ಸಂಬಂಧಿ ವೆಬ್ ತಾಣವಿದು. ನಿಮ್ಮ ಅರ್ಹತೆ, ಆಸಕ್ತಿಗೆ ಅನುಗುಣವಾಗಿ, ಪ್ರಸ್ತುತ ಲಭ್ಯವಿರುವ ಕೆಲಸಗಳನ್ನು ಹುಡುಕಿಕೊಳ್ಳುವ ಅವಕಾಶ ಇಲ್ಲುಂಟು. ಇದರ ಸದಸ್ಯರಾಗಿ ನೇರ ನಿಮ್ಮ ಈ-ಮೇಲುಗಳಿಗೆ ಅವಕಾಶಗಳ ಪಟ್ಟಿಯನ್ನ ಪಡೆಯುತ್ತಿರಬಹುದು. ನಿಮಗೆ ಬೇಕಾದ ವಿಭಾಗಗಳ ವರ್ಗೀಕೃತ ವಿಂಗಡನೆ ಇಲ್ಲಿದೆ.

ಸೀತಾಗೀತಾ.ಕಾಂ

ಮಹಿಳೆಯರಿಗಾಗಿಯೇ ನಡೆಸಲ್ಪಡುತ್ತಿರುವ ತಾಣ. ಸೌಂದರ್ಯ, ಆರೋಗ್ಯ, ಯೋಗ,  ಫ್ಯಾಶನ್, ಹೊಸ ಜೀವನ ಶೈಲಿ, ಸಾಮಾಜಿಕ ಸಂಬಂಧಗಳು ಇತ್ಯಾದಿಗಳ ಬಗ್ಗೆ ಒಂದಿಷ್ಟು ಉಪಯುಕ್ತ ಟಿಪ್ಸ್ ನೀಡುವಂಥ ವೆಬ್.

ಈಕನಸು.ಕಾಂ

ಮಂಗಳೂರಿನಿಂದ ಕನಸು ಕಾಣುತ್ತ ಈ ಕನಸನ್ನು ಆರಂಭಿಸಿದ್ದಾರೆ ಉತ್ಸಾಹಿ ತರುಣರು. ‘ಈಕನಸು.ಕಾಂ’ ಮಂಗಳೂರಿನ ಮೊದಲ ಕನ್ನಡ ಅಂತರ್ಜಾಲ ಪತ್ರಿಕೆ ಎಂಬ ಹೆಗ್ಗಳಿಕೆ ಹೊಂದಿದೆ. ಮಂಗಳೂರಿನ ಸಮಸ್ತ ಸುದ್ದಿ ಸಮಾಚಾರಗಳು, ದಿನದ ವಿಶೇಷಗಳು, ರಾಜ್ಯ-ರಾಜಕೀಯ, ಸಂಪಾದಕೀಯ, ಪುಸ್ತಕ ವಿಮರ್ಶೆ ಮುಂತಾದ ವೈವಿಧ್ಯಮಯ ವಿಭಾಗಗಳಿಂದ ಕೂಡಿರುವ ಪತ್ರಿಕೆ ಚಂದದ ವಿನ್ಯಾಸದೊಂದಿಗೆ ಚಂದವಾಗಿ ಮೂಡಿಬರುತ್ತಿದೆ. ಈ ಕನಸಿಗೊಮ್ಮೆ ಭೇಟಿ ಕೊಡಿ.

ಯುವಕವಿ

ಕನ್ನಡದ ಕವಿತೆಗಳ ಪ್ರಕಟಣೆಗಾಗಿ, ಮತ್ತು ಪರಸ್ಪರ ಕಾವ್ಯಚರ್ಚೆಗಾಗಿಯೇ ‘ಯುವಕವಿ’ ಎಂಬ ತಾಣ ಆರಂಭಿಸಿದ್ದಾರೆ ಉತ್ಸಾಹಿ ಕವಿ ರಾಘವೇಂದ್ರ ಮಹಾಬಲೇಶ್ವರ. ಮೊದಲನೆಯದಾಗಿ ‘ಈಗೀಗ ಅಷ್ಟು ಒಳ್ಳೆಯ, ಸೃಜನಶೀಲ ಕವಿತೆಗಳು ಬರುತ್ತಿಲ್ಲ’ ಎನ್ನುವ ದೂರಿನ ಬಗ್ಗೆ ಪ್ರಸ್ತಾಪಿಸಿರುವ ರಾಘವೇಂದ್ರ, ಕಾವ್ಯ ಬರೆಯುವ ಕಸುಬಿಗೊಬ್ಬ ಗುರು ಬೇಡವೇ? ಅಂತೊಂದು ಪ್ರಶ್ನೆ ಎತ್ತಿದ್ದಾರೆ. ಈಗಷ್ಟೇ ಶುರುವಾಗುತ್ತಿರುವ ಈ ಚರ್ಚೆಯಲ್ಲಿ ನೀವು ಪಾಲ್ಗೊಳ್ಳಿ. ಕಾವ್ಯಾಸಕ್ತರನ್ನ, ಕಾವ್ಯಗಳ ಕುರಿತ ಚರ್ಚೆಗಳನ್ನ ಬೆಂಬಲಿಸಿ.

ತೆಹಲ್ಕಾ.ಕಾಂ

ತನ್ನ ತನಿಖಾ ಮತ್ತು ವಿಶ್ಲೇಷಣಾತ್ಮಕ ವರದಿಗಳಿಂದ ಹೆಸರಾದ ತೆಹಲ್ಕಾ ಸುದ್ದಿಪತ್ರಿಕೆಯ ವೆಬ್ ತಾಣ. ದೇಶೀಯ, ಅಂತರಾಷ್ಟ್ರೀಯ ಸುದ್ದಿ ಸಂಗತಿಗಳ ಕುರಿತ ವಿಶ್ಲೇಷಣೆಗಳು, ಕುತೂಹಲಭರಿತ ವಿಶೇಷ ಮಾನವಾಸಕ್ತ ವರದಿಗಳು, ಸಂದರ್ಶನಗಳು, ಚರ್ಚೆಗಳು ಎಲ್ಲಕ್ಕೂ ವೇದಿಕೆ ತೆಹಲ್ಕಾ.ಕಾಂ.

ಇನ್ಫೋಸಿಸ್.ಕಾಂ

ಭಾರತದ ಮಾಹಿತಿ ತಂತ್ರಜ್ಞಾನ ದಿಗ್ಗಜ ಸಂಸ್ಥೆಗಳಲ್ಲೊಂದಾದ ಇನ್ಫೋಸಿಸ್ ನ ವೆಬ್ ತಾಣ. ಈ ಐಟಿ  ಕಂಪನಿಯ ವ್ಯವಹಾರಗಳ ಪರಿಪಾಠ ಇಲ್ಲಿದೆ. ಇನ್ಫೋಸಿಸ್ ನ ಹೊಸ ಹೊಸ ಆಫರ್ ಗಳು, ಶೋಧಗಳು, ಉದ್ಯೋಗ ಅವಕಾಶಗಳು, ಸುದ್ದಿ ಪ್ರಕಟಣೆಗಳು... ಎಲ್ಲದರ ಬಗ್ಗೆಯೂ ಮಾಹಿತಿ ಮಾಹಿತಿ ಸಿಗುತ್ತದೆ. 

ಎಕ್ಸ್ ಪ್ರೆಸ್ ಇಂಡಿಯಾ.ಕಾಂ

ದೇಶದ ಪ್ರಮುಖ ಸುದ್ದಿಮಾಧ್ಯಮದಲ್ಲೊಂದಾದ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ ಸುದ್ದಿತಾಣ. ಕ್ಷಣಕ್ಷಣದ, ತಾಜಾ ಸುದ್ದಿ ಸಮಾಚಾರಗಳು, ರಾಜಕೀಯ ವಿಶ್ಲೇಷಣೆ, ಕ್ರೀಡೆ, ವಾಣಿಜ್ಯ, ಮನರಂಜನೆ ಎಲ್ಲ ವಿಚಾರಗಳ ಆಗರ.

ದಿ ಹಿಂದೂ.ಕಾಂ

ತನ್ನ ವಸ್ತುನಿಷ್ಟ ವರದಿಗಾರಿಕೆಯಿಂದ ಹೆಸರುವಾಸಿಯಾಗಿರುವ ದೇಶದ ಪ್ರಮುಖ ಆಂಗ್ಲ ದೈನಿಕ ‘ದಿ ಹಿಂದೂ’ ವಿನ ಅಧಿಕೃತ ವೆಬ್ ತಾಣ. ಹಿಂದೂವಿನ ಈ-ಅವತರಣಿಕೆ,  ಪ್ರಚಲಿತ, ರಾಜಕೀಯ, ಕ್ರೀಡೆ, ಮನೋರಂಜನೆ , ವಾಣಿಜ್ಯ ಮುಂತಾದ ಕ್ಷೇತ್ರಗಳ ನಿರಂತರ, ತಾಜಾ ಸುದ್ದಿ ಸಮಾಚಾರಗಳಿಗಾಗಿ ಇತ್ತ ಒಮ್ಮೆ  ನೋಡಬಹುದು. ಸ್ಥಳೀಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಸುದ್ದಿಗಳು, ವಿಶ್ಲೇಷಣೆಗಳು, ವಿಶೇಷ ವರದಿಗಳು ಮುಂತಾದ ಲೇಖನಗಳು ಇಲ್ಲಿ ಸಿಗುತ್ತವೆ. 

ಇನ್.ಕಾಂ

ಇನ್.ಕಾಂ ಜಗತ್ತಿನ ಅತಿಚಿಕ್ಕ ಈ-ಮೇಲ್ ಐಡಿ ಸೇವೆ ಒದಗಿಸುವ ತಾಣ. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವೆಬ್ ತಾಣ. ನಿಮ್ಮದೇ ಆದ ಈ-ಮೇಲ್ ಐಡಿಗಳನ್ನು ಹೊಂದಿ ವ್ಯವಹರಿಸುವ ಅವಕಾಶದ ಜೊತೆಗೆ, ನಿಮ್ಮ ನೆಚ್ಚಿನ ಹಾಡುಗಳನ್ನು ಕೇಳುವ , ಚಿತ್ರಗಳನ್ನ ನೋಡುವ, ಸುದ್ದಿಗಳನ್ನ ನೋಡುವ, ವಿಡಿಯೋ ಗೇಮುಗಳನ್ನಾಡುವ, ಅಂತರ್ಜಾಲದ ಮೂಲಕವೇ ಶಾಪಿಂಗ್ ಮಾಡುವ ಅವಕಾಶಗಳೂ ಉಂಟು. 

ಜನಪ್ರತಿನಿಧಿ.ಕಾಂ

ಲೋಕಸಭೆ ಚುನಾವಣೆಯ ಕಾವು ಏರುತ್ತಿರುವ ಹೊತ್ತಲ್ಲೇ , ಜನರಿಂದ ಆಯ್ಕೆಯಾಗಿ ಜನರ ಪ್ರತಿನಿಧಿಯಾಗಿ ಹೋಗಿರುವ, ಹೋಗುವವರ ಕುರಿತ ಮಾಹಿತಿಗೆಂದೇ ಶುರುವಾಗಿದೆ ಜನಪ್ರತಿನಿಧಿ  ತಾಣ. ಸಂಪೂರ್ಣ ಕನ್ನಡಮಯ ತಾಣವಾಗಿ ರೂಪುಕೊಳ್ಳುತ್ತಿರುವ ಈ ವೆಬ್ ಈ ಬಾರಿಯ ಚುನಾವಣಾ ವಿಶೇಷವೇ ಸರಿ. ತಮ್ಮೀ ಪ್ರಯತ್ನದ ಬಗ್ಗೆ ಇದರ ಸಂಘಟಕರು ಹೇಳಿಕೊಂಡಿರುವುದು ಹೀಗೆ.

"ನಾಡನ್ನು ಮುನ್ನಡೆಸುವ ಸಲುವಾಗಿ ಶ್ರಮಿಸಿರುವ ಮಹನೀಯರು, ರಾಜಕೀಯ ದಿಗ್ಗಜರು ಹಾಗೂ ಹಿರಿಯ ಮುತ್ಸದ್ದಿಗಳ ಬಗ್ಗೆ ಸಾರ್ವಜನಿಕರಿಗೆ ಹಾಗೂ ಆಸಕ್ತರಿಗೆ ಸುಲಭವಾಗಿ ದೊರಕಿಸುವ ದಿಕ್ಕಿನಲ್ಲಿ ಲೋಕಸಭೆ, ರಾಜ್ಯಸಭೆ (ರಾಜ್ಯದಿಂದ ಆಯ್ಕೆಗೊಂಡವರು) ಹಾಗೂ ವಿಧಾನಸಭೆ, ವಿಧಾನ ಪರಿಷತ್, ಬೆಂಗಳೂರು ನಗರ ಪಾಲಿಕೆ ಸೇರಿದಂತೆ ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳು, ಜಿಲ್ಲಾ ಪಂಚಾಯತ್, ಹಾಗೂ ತಾಲ್ಲೂಕು ರಾಜಕಾರಣದಲ್ಲಿ ಸಕ್ರಿಯವಾಗಿರುವ ಚುನಾಯಿತ ಪ್ರತಿನಿಧಿಗಳ ಹಲವಾರು ಮಾಹಿತಿಗಳನ್ನು ಉದ್ದೇಶಿಸಿ ಜನಪ್ರತಿನಿಧಿ ಮೀಡಿಯಾ ಕಮ್ಯೂನಿಕೇಷನ್ ಈ ವೆಬ್ ತಾಣವನ್ನ ವಿನ್ಯಾಸ ಗೊಳಿಸುತ್ತಿದೆ."

ಈಗಷ್ಟೇ ಇದಕ್ಕೆ ಚಾಲನೆ ದೊರೆತಿದೆ. ಇನ್ನಷ್ಟೇ  ಹೆಚ್ಚಿನ ಸುದ್ದಿಗಳು ಬರಬೇಕಿದೆ. 

ರಂಗಾಯಣ.ಆರ್ಗ್

ಕರ್ನಾಟಕದ ಪ್ರಮುಖ ರಂಗ ಚಟುವಟಿಕೆ ಕೇಂದ್ರಗಳಲ್ಲಿ ಒಂದಾದ ಮೈಸೂರಿನ ರಂಗಾಯಣದ ವೆಬ್ ತಾಣ. ರಂಗಾಯಣದ ರಂಗ ಚಟುವಟಿಕೆಗಳ ಸುದ್ದಿ-ಸಮಾಚಾರಗಳು, ಹೊಸ ಪ್ರಯೋಗಗಳು, ಒಟ್ಟಾರೆ ರಂಗಭೂಮಿಯ ಸಂಗತಿಗಳ ಬಗ್ಗೆ ತಿಳಿಯಬಹುದು. ರಂಗಾಸಕ್ತರು ಒಮ್ಮೆ ಭೇಟಿ ನೀಡಬಹುದಾದ ತಾಣ.

ರಾಗ.ಕಾಂ

ಸಂಗೀತಪ್ರಿಯರಿಗೆ ಇದೋ ಇಲ್ಲಿದೆ ರಾಗಮಯ ತಾಣ. ಹಿಂದಿ, ಕನ್ನಡ, ತಮಿಳಿನಿಂದ ಹಿಡಿದು ಬೆಂಗಾಲಿ ಸಂಸ್ಕೃತದವರೆಗೆ ವಿವಿಧ ಭಾಷೆಗಳ ವೈವಿಧ್ಯಮಯ ಗೀತೆಗಳೆಲ್ಲ ಇಲ್ಲಿ ಒಟ್ಟಾಗಿ ಸಿಗುತ್ತದೆ. ಹಿಂದುಸ್ತಾನಿ ಸಂಗೀತ, ಭಕ್ತಿಗೀತೆಗಳಿಂದ ಸಿನಿಮಾ ಹಾಡುಗಳ ತನಕ ಎಲ್ಲವನ್ನೂ ಕೇಳಬಹುದು. ಬೇಕಾದ್ದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.

ಶ್ರೀಗಂಧ.ಕಾಂ

ಕನ್ನಡ ಸಿನಿಮಾ ಸಂಗತಿಗಳಿಗಂದೇ ಇರುವ ಗಂಧದ ತಾಣ, ಸಿನಿಮಾ ಸುದ್ದಿ ಕುರಿತ ಮುಖ್ಯ ಅಂಕಣಗಳು, ಚರ್ಚೆ, ಚಿತ್ರಪುಟಗಳ ಜೊತೆಗೇ ಕನ್ನಡದ ಒಂದಿಷ್ಟು ಸಿನಿಮಾಗಳನ್ನು, ಜನಪ್ರಿಯ ಧಾರವಾಹಿಗಳನ್ನು, ಹಾಡುಗಳನ್ನು ಅಂತರ್ಜಾಲ ಮುಖೇನ ವೀಕ್ಷಿಸುವ ಅವಕಾಶವನ್ನ ಈ ತಾಣ ಮಾಡಿಕೊಡುತ್ತದೆ. 

ಐಬಿಎನ್ ಪಾಲಿಟಿಕ್ಸ್.ಕಾಂ

ದೇಶದಲ್ಲಿ ಹೊಸತೊಂದು ರಾಜಕೀಯ ಸಮರಕ್ಕೆ ಮುನ್ನುಡಿಯಾಗಲಿರುವ ಈ ಬಾರಿಯ ಲೋಕಸಭಾ ಚುನಾವಣೆಗಳು ನಡೆಯಲಿರುವ ದಿನಾಂಕಗಳು ಪ್ರಕಟಗೊಂಡಿವೆ. ಈ ಹೊತ್ತಲ್ಲಿ ತಾಜಾ ರಾಜಕೀಯ ಸಮಾಚಾರಗಳನ್ನು ಹುಡುಕುತ್ತಿರುವವರಿಗೆ ಇಲ್ಲೊಂದು ಸೂಕ್ತ ತಾಣವಿದೆ. ಐಬಿಎನ್ ಸುದ್ದಿಸಂಸ್ಥೆಯ ಈ ತಾಣ ದೇಶದ ರಾಜಕೀಯ ಸುದ್ದಿ ಸಮಾಚಾರಗಳಿಗೆ ಮೀಸಲು. ದೇಶಿಯ ರಾಜಕಾರಣದ ಕುರಿತು ತಜ್ಞರಿಂದ  ನಾನಾ ದೃಷ್ಟಿಕೋನಗಳ ವಿಶ್ಲೇಷಣೆ, ವಿಶೇಷ ಸಂದರ್ಶನ, ವರದಿ ಇತ್ಯಾದಿಗಳನ್ನ ಇಲ್ಲಿ ಕಾಣಬಹುದು. 

ಕನ್ನಡ ಸ್ಟೋರ್.ಕಾಂ


ಕನ್ನಡದ ಚಿತ್ರಗಳು, ಗೀತಾಗುಚ್ಛಗಳು, ಉಪನ್ಯಾಸ ಮಾಲಿಕೆಗಳು ಇತ್ಯಾದಿ ಥರದ ಸಿಡಿ, ಡಿವಿಡಿ ಮುದ್ರಿಕೆಗಳನ್ನು ಆನ್ ಲೈನಿನಲ್ಲಿ ಮಾರುತ್ತಿರುವ ಕನ್ನಡದ ಅಂಗಡಿ, ಹೆಸರೇ ಕನ್ನಡ ಸ್ಟೋರ್. ಕನ್ನಡದ ಹಳೆಯ ಮತ್ತು ಹೊಚ್ಚ ಹೊಸತಾದ, ಜನಪ್ರಿಯ ಚಲನಚಿತ್ರಗಳು, ಹಾಡುಗಳು, ಭಕ್ತಿಗೀತೆಗಳು, ಭಾವಗೀತೆಗಳು, ಉಪನ್ಯಾಸ ಇತ್ಯಾದಿಗಳಿರುವ ಸಿಡಿ, ಡಿವಿಡಿಗಳನ್ನ ಇಲ್ಲಿ ಅಂತರ್ಜಾಲ ಮುಖೇನ ಖರೀದಿಸಬಹುದು. 

ಆಸ್ಕರ್.ಕಾಂ

ಅಂತು ಇಂತು ಸ್ಲಂ ಡಾಗಿಗೆ ಆಸ್ಕರ್ ಬಂತು. ಈ ಮೂಲಕ ಇತಿಹಾಸವೊಂದು ಸೃಷ್ಟಿಯಾಯ್ತು. ಇಂತಹದ್ದೊಂದು ಐತಿಹಾಸಿಕ ಕ್ಷಣಗಳನ್ನ, ಒಟ್ಟಾರೆ ಈ ಬಾರಿಯ ಆಸ್ಕರ್ ಪ್ರಶಸ್ತಿ ಸಮಾರಂಭದ ನಾನಾ ಮಜಲುಗಳನ್ನ ಮತ್ತೆ ಮತ್ತೆ ಸವಿಯಬೇಕು ಅನ್ನಿಸಿದರೆ ಆಸ್ಕರ್ ಅಕಾಡೆಮಿಯ ಈ ಅಧಿಕೃತ ತಾಣಕ್ಕೆ ಭೇಟಿ ಕೊಡಿ. 

ಇಂಡಿಯಾ ಬ್ಲಡ್ ಬ್ಯಾಂಕ್.ಕಾಂ 

ರಕ್ತದಾನ ಮಹಾದಾನ ಅನ್ನುತ್ತಾರೆ. ಅಂತಹ ದಾನದ ಮಾಹಿತಿ ಮತ್ತು ಸಹಾಯಕ್ಕಾಗಿ ಇರುವ ವೆಬ್ ತಾಣ. ದೇಶಾದ್ಯಂತ ಲಭ್ಯರಿರುವ ರಕ್ತದಾನಿಗಳು, ಬ್ಲಡ್ ಬ್ಯಾಂಕ್ ಗಳು, ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸಬೇಕಾದ ಸಂಸ್ಥೆಗಳ ಬಗ್ಗೆ ಮಾಹಿತಿ ದೊರೆಯುತ್ತದೆ.ಅಂತೆಯೇ ರಕ್ತ ದಾನ ಮಾಡುವುದು ಹೇಗೆ? ಯಾರೆಲ್ಲ ಮಾಡಬಹುದು? ಅದರಿಂದಾಗುವ ಪ್ರಯೋಜನಗಳ ಬಗ್ಗೆಯೂ ತಿಳಿಯಬಹುದು. ದಾನ ಮಾಡಲಿಚ್ಛಿಸುವವರು , ಪಡೆಯಲಿಚ್ಛಿಸುವವರ ನಡುವೆ ಕೊಂಡಿಯಂತೆ ಈ ತಾಣ ಕೆಲಸ ಮಾಡುತ್ತದೆ.

ಮೈ ಡಿಯರ್ ವಾಲೆಂಟೈನ್.ಕಾಂ

ಪ್ರೇಮಿಗಳ ದಿನದ ಈ ಹೊತ್ತಲ್ಲಿ ಪ್ರೇಮಿಗಳಿಗೆಂದೇ ಮೀಸಲಿರುವ ತಾಣವೊಂದರ ಪರಿಚಯ. ಪ್ರಪೋಸ್ ಮಾಡುವುದಕ್ಕೆ ಬೇಕಾದ ಸಿದ್ಧತೆಗಳಿಂದ ಹಿಡಿದು ಚಂದದೊಂದು ಉಡುಗೊರೆಯೊಂದಿಗೆ ಪ್ರೇಮಿಯನ್ನ ಒಲಿಸಿಕೊಳ್ಳುವವರೆಗೆ ಬೇಕಾದ ಟಿಪ್ಸ್ ಗಳು ಇಲ್ಲಿವೆ. ಪ್ರೇಮಪತ್ರ ಹೇಗೆ ಬರೆಯಬೇಕು, ಎಂತಹ ಉಡುಗೊರೆ ಕೊಡಬೇಕು ಅನ್ನುವುದರ ಬಗ್ಗೆ ಒಂದಿಷ್ಟು ಉಪಾಯಗಳಿವೆ. ಪ್ರೇಮಕವಿತೆಗಳು, ರೋಮ್ಯಾಂಟಿಕ್ ಹೇಳಿಕೆಗಳು, ಚಿಹ್ನೆಗಳು ಎಲ್ಲದರ ಬಗ್ಗೆಯೂ ವಿವರಣೆ ಸಿಕ್ಕುತ್ತದೆ. ಒಮ್ಮೆ ಭೇಟಿ ಕೊಟ್ಟು ನೋಡಿ.

ಇಂಡಿಯಾ ಹೌಸಿಂಗ್.ಕಾಂ

ಭಾರತೀಯ ರಿಯಲ್ ಎಸ್ಟೇಟ್ ವ್ಯವಹಾರಗಳ ಸುದ್ದಿ ಸಮಾಚಾರಗಳನ್ನು ಹುಡುಕುತ್ತಿರುವವರಿಗೆ ಸೂಕ್ತ ತಾಣ. ಆಸ್ತಿ-ಪಾಸ್ತಿಗಳ ಮಾರಾಟ, ಖರೀದಿಗಳ ಬಗ್ಗೆ ತಕ್ಕ ಮಾಹಿತಿ, ಅಂಕಿಅಂಶಗಳು ಸಿಗುತ್ತವೆ. ನಿಮ್ಮ ವೆಚ್ಚಕ್ಕೆ ತಕ್ಕಂತೆ ಒಂದು ಬೆಚ್ಚನೆ ಗೂಡು ಅರ್ಥಾತ್ ಮನೆ ಹೊಂದಲು, ಅದಕ್ಕೆ ಬೇಕಾದ ಹಣ ಹೊಂದಿಸಲು, ನಿರ್ಮಾಣಕ್ಕೆ ಬೇಕಾದ ಅಗತ್ಯ ಪರಿಕರಗಳ ನಿರ್ವಹಣೆ ಇತ್ಯಾದಿ ಬಗ್ಗೆ ಸಲಹೆ ಸಿಗುತ್ತದೆ. ದೇಶದ ಪ್ರತಿಷ್ಟಿತ ಆರ್ಕಿಟೆಕ್ಟ್ ಗಳು, ಹೌಸಿಂಗ್ ಫೈನಾನ್ಸ್, ಇನ್ಶೂರೆನ್ಸ್ ಕಂಪನಿಗಳು, ಬಿಲ್ಡರ್ ಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ದೊರಕುತ್ತದೆ. 

ದಿನದ ತಾಣದಲ್ಲಿ ಸೋಮಯಾಜಿ ಬೆಂಬಲಿಸಿ

ಮೊನ್ನೆ ಮೊನ್ನೆ ಮಂಗಳೂರಿನಲ್ಲಿ ನಡೆದ ಪಬ್ ಮೇಲಿನ ದಾಳಿ ಖಂಡಿಸಿ ಮಾತನಾಡಿದವರಲ್ಲಿ ಅಧ್ಯಾಪಕ ಪಟ್ಟಾಭಿರಾಮ ಸೋಮಯಾಜಿ ಕೂಡ ಒಬ್ಬರು. ಮಂಗಳೂರು ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕ ಸೋಮಯಾಜಿ ಶ್ರೀರಾಮ ಸೇನೆಯ ಪುಂಡಾಟಿಕೆ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಈಗ ಬಲಪಂಥೀಯ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ‘ಸರ್ಕಾರದ’ ವಿರುದ್ಧ ಮಾತನಾಡಿದ್ದಕ್ಕಾಗಿ ಅವರನ್ನ ಸೇವೆಯಿಂದ ವಜಾ ಗೊಳಿಸಿ ಅಂತ ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರು ಶಿಫಾರಸ್ಸು ಮಾಡುವ ಮಟ್ಟಕ್ಕೆ ಹೋಗಿದೆ. ಒಟ್ಟಾರೆ ಸೋಮಯಾಜಿ ಅಪಾಯದಲ್ಲಿದ್ದು, ಬಲಪಂಥೀಯರಿಂದ ಅವರನ್ನ ರಕ್ಷಿಸಿ ಅನ್ನುವ ಮನವಿಗಳು ಶುರುವಾಗಿವೆ.

ಇಂತಹ ಮನವಿಗಳನ್ನ ಸಲ್ಲಿಸಲಿಕ್ಕಾಗಿಯೇ ಐಪಿಟೀಶನ್ ಅನ್ನುವ ತಾಣ ಒಂದಿದೆ. ಇಲ್ಲಿ ನೀವು ಸೋಮಯಾಜಿಗಾದ ಅನ್ಯಾಯದ ವಿರುದ್ಧ ನಿಮ್ಮ ಅಹವಾಲುಗಳನ್ನು ಬರೆಯಬಹುದು, ಅದನ್ನ ಇನ್ನಿತರ ಗೆಳಯರಿಗೆ ಮೇಲ್ ಮಾಡಬಹುದು. ಆಸಕ್ತರು ಇದಕ್ಕೆ ಸಹಿ ಹಾಕಿ ಒಂದು ಅಭಿಯಾನ ಕೈಗೊಳ್ಳಬಹುದು.
 

ಜನರಲ್ ನಾಲೆಡ್ಜ್.ಕಾಂ

ನೀವು ಯಾವುದಾದರೂ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿದ್ದೀರಾ? ಅಥವಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಬಿಡಿಸುವುದು ನಿಮಗೆ ಇಷ್ಟದ ಕೆಲಸವಾ? ನಿಮ್ಮ ಬುದ್ಧಿಯನ್ನು ಪರೀಕ್ಷಿಸಲು ಇಲ್ಲಿದೆ ಒಂದು ಅಪರೂಪದ ತಾಣ. ಒಮ್ಮೆ ಭೇಟಿ ಕೊಟ್ಟು ನಿಮಗೆ ಎಷ್ಟು ಪ್ರಶ್ನೆಗಳಿಗೆ ಉತ್ತರ ಗೊತ್ತಿವೆ ಎಂದು ಪರೀಕ್ಷಿಸಿ ನೋಡಿ.

ಎಸ್ ಬಿಐಬ್ಯಾಂಕ್.ಕಾಂ

ದೇಶದ ಪ್ರತಿಷ್ಟಿತ ರಾಷ್ಟ್ರೀಕೃತ ಬ್ಯಾಂಕ್ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ ದ ಅಧಿಕೃತ ವೆಬ್ ತಾಣ. ಬ್ಯಾಂಕಿಂಗ್, ಹಣಕಾಸು ಸಂಬಂಧಿ ವ್ಯವಹಾರಗಳಿಗೆ ನೇರ ಸಂಪರ್ಕ ಕಲ್ಪಿಸುವ ಈ ತಾಣ ಎಸ್ ಬಿಐ ನ ಎಲ್ಲ ಎಲ್ಲ ಆನ್ ಲೈನ್ ವ್ಯವಹಾರಗಳನ್ನು ನಿರ್ವಹಿಸುತ್ತದೆ. 

ಪಾಸ್ ಪೋರ್ಟ್.ನಿಕ್.ಇನ್


ಪಾಸ್ ಪೋರ್ಟ್ ಇದನ್ನೆಲ್ಲ ಪಡೆದುಕೊಳ್ಳುವುದು ಹೇಗೆ? ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾವ ಯಾವ ದಾಖಲೆಗಳು ಬೇಕು? ಎಷ್ಟು ಖರ್ಚಾಗುತ್ತೆ? ಎಂಬಿತ್ಯಾದಿ ವಿವರಗಳನ್ನ ಹುಡುಕುತ್ತಿದ್ದರೆ ಈ ತಾಣಕ್ಕೊಮ್ಮೆ ತಮ್ಮದೇ ಭೇಟಿ ನೀಡಿ. ಈ ಎಲ್ಲ ವ್ಯವಹಾರಗಳಿಗೆ ಅಂತ ಇರುವ ವಿದೇಶಾಂಗ ವ್ಯವಹಾರಗಳ ಇಲಾಖೆಯ ಅಧಿಕೃತ ತಾಣವಿದು. ಈ ಎಲ್ಲದರ ಬಗ್ಗೆಯೂ ಅಗತ್ಯ ಮತ್ತು ವರ್ಗೀಕೃತ ಮಾಹಿತಿಗಳು ಇಲ್ಲಿ ಸಿಗುತ್ತದೆ. ಆನ್ ಲೈನಿನಲ್ಲಿ ಅರ್ಜಿ ಕೂಡ ದೊರೆಯುತ್ತದೆ. ಆಮೇಲೆ ನಿಮಗೆ ವೀಸಾ, ಪಾಸ್ ಪೋರ್ಟ್ ಸಿಕ್ಕಿತೋ ಇಲ್ಲವೋ ಅಂತ ಕೂಡ ಇಲ್ಲೇ ವಿಚಾರಿಸಿಕೊಳ್ಳುವ ಅನುಕೂಲವೂ ಇದೆ.

ಡಿಸೈನ್ ಮೈ ರೂಮ್.ಕಾಂ

ಒಳಾಂಗಣ ವಿನ್ಯಾಸದ ಕುರಿತು ನಿಮಗೆ ಆಸಕ್ತಿ ಇದೆಯೇ? ಮನೆಯನ್ನು ಅಂದವಾಗಿಟ್ಟುಕೊಳ್ಳುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳಬೇಕೇ? ಪಿಠೋಪಕರಣಗಳ ಆಯ್ಕೆಯಿಂದ ಹಿಡಿದು ಹೂದಾನಿಯನ್ನು ಎಲ್ಲಿಡಬೇಕು ಎನ್ನುವುದರ ಕುರಿತೂ ಇಲ್ಲಿ ಮಾಹಿತಿ ಇದೆ. ಈ ಅಪರೂಪದ ತಾಣ ಪ್ರವೇಶಿಸಿ, ಒಂದು ಕೋಣೆಯನ್ನು ಆಯ್ಕೆ ಮಾಡಿ ನೀವೇ ಅಲಂಕರಿಸಿ, ಆಶ್ಚರ್ಯ ನೋಡಿ.

 

ಗೇಮ್ ಸ್ಪಾಟ್.ಕಾಂ

ಅಂತರ್ಜಾಲದಲ್ಲಿ ವಿಡಿಯೋ ಗೇಮುಗಳಿಗೆ ಹೆಸರುವಾಸಿಯಾದ ತಾಣ. ಮನೋರಂಜಕ, ರೋಚಕವಾದ, ವಿನೋದದಿಂದ ಕೂಡಿದ ಹತ್ತಾರು ಆಸಕ್ತಿಕರ ಗೇಮುಗಳು ಇಲ್ಲಿವೆ. ಹೊತ್ತು ಕಳೆಯಲಿಕ್ಕೂ ಪ್ರಶಸ್ತ್ಯ ಜಾಗ.

ಅರಿವು.ಇನ್

ಆನ್ ಲೈನ್ ನಲ್ಲಿ ಕನ್ನಡ ಪುಸ್ತಕಗಳ ಮಾರಾಟ ತೀರ ಕಡಿಮೆ ಅಥವಾ ಅಪರೂಪ. ಇಂತಹದ್ದೊಂದು ಕೊರತೆಯನ್ನು ಕೊಂಚ ಮಟ್ಟಿಗಾದರೂ ನೀಗಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ ಅರಿವು ಎಂಬ ಈ ಕನ್ನಡದ ತಾಣ. ಆನ್ ಲೈನ್ ಆರ್ಡರ್ ಪುಸ್ತಕ ಮಾರಾಟ ಮಳಿಗೆಯ ಈ ತಾಣದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಪುಸ್ತಕ ಪ್ರಕಾಶಕರ ಪುಸ್ತಕಗಳು ಲಭ್ಯವಿದೆ. ಕನ್ನಡದ ೩೫೦೦ಕ್ಕೂ ಹೆಚ್ಚು ಪುಸ್ತಕಗಳು ಇಲ್ಲಿ ದೊರಕುತ್ತವೆ. ಇನ್ನಷ್ಟು ಪುಸ್ತಕಗಳನ್ನು ಸೇರಿಸುವ ಉತ್ಸಾಹ ಅದರದ್ದು. ಒಮ್ಮೆ ಭೇಟಿ ಕೊಡಿ ಅರಿವು.ಇನ್

ರೊಟೆನ್.ಕಾಂ

ಹಾಲಿವುಡ್ ಚಿತ್ರಗಳು, ಅದರ ನಿರ್ಮಾಣ, ಸೆಟ್ಟಿಂಗ್ಸ್, ಇತ್ತೀಚಿಗೆ ಬಿಡುಗಡೆಗೊಂಡ ಹೊಸ ಚಿತ್ರಗಳು, ಕಲಾವಿದರು, ಚಿತ್ರ ವಿಮರ್ಶೆಗಳು, ಟೀಕೆಗಳು, ಚರ್ಚೆಗಳು, ಇವೆಲ್ಲದರ ಕುರಿತು ಸಮಗ್ರ ಮಾಹಿತಿ ನೀಡುವ ತಾಣವೊಂದು ಇಲ್ಲಿದೆ. ಬಾಂಡ್ ಚಿತ್ರ ಸರಣಿಯ ಕುರಿತು ಅಚ್ಚರಿ ಹುಟ್ಟಿಸುವಷ್ಟು ಮಾಹಿತಿ ಇದೆ. ಹಾಲಿವುಡ್ ಚಿತ್ರಗಳ ಕುರಿತು ಆಸಕ್ತಿ ಇರಿಸಿಕೊಂಡವರಿಗೆ ಇದೊಂದು ಅಪರೂದ ತಾಣ.

ಗುಡ್ ಹೆಲ್ತ್ ಅಂಡ್ ಯು.ಕಾಂ

ಯಾವಾಗಲೂ ಆರೋಗ್ಯದಿಂದ ಇರಬೇಕು, ಲವಲವಿಕೆಯಿಂದ ಕೂಡಿರಬೇಕು ಅನ್ನುವುದು ಪ್ರತಿಯೊಬ್ಬರ ಆಸೆ. ಆದರೆ ನಮ್ಮೊಳಗಿನ ಆರೋಗ್ಯ ಹದಗೆಡದ ಹಾಗೇ ಕಾಪಾಡಿಕೊಳ್ಳುವುದು ಹೇಗೆ? ಕೆಟ್ಟಾಗ ಏನು ಮಾಡಬೇಕು? ಅಂತೆಲ್ಲ ಪ್ರಶ್ನೆಗಳಿದ್ದರೆ ಈ ಆರೋಗ್ಯ ಸಂಬಂಧಿ ತಾಣಕ್ಕೊಮ್ಮೆ ಭೇತಿ ನೀಡಿ. ಲಿಂಗ, ವಯಸ್ಸಿಗನುಗುಣವಾದ ಮಾಹಿತಿಗಳು, ಆರೋಗ್ಯ ಸಲಹೆಗಳು, ವಿವಿಧ ರೋಗಗಳ ಕುರಿತ ವಿವರ ಮತ್ತು ಅದಕ್ಕಿರುವ ಆಯುರ್ವೇದಿಯ ಪರಿಹಾರ, ವೈದ್ಯರುಗಳ ನೇರ ಸಲಹೆ ಎಲ್ಲವೂ ಒಂದೆಡೆ ಸಿಕ್ಕುತ್ತದೆ.

ಕನ್ನಡ ಗ್ರೀಟಿಂಗ್ಸ್.ಕಾಂ


ಸಂಕ್ರಾಂತಿ ಸಂಭ್ರಮವನ್ನು ಪರಸ್ಪರ ಶುಭಾಶಯಗಳೊಂದಿಗೆ ಹಂಚಿಕೊಳ್ಳಲು, ಕನ್ನಡದ್ದೇ ಆದ ಶುಭಾಶಯ ಪತ್ರಗಳು ಸಿಗುವ ತಾಣ. ಕನ್ನಡ-ಗ್ರೀಟಿಂಗ್ಸ್.ಕಾಂ ಕನ್ನಡಿಗರಿಗೆ ಸುಂದರವಾದ ಶುಭಾಶಯಗಳನ್ನು ಕಳುಹಿಸಲು ಒಂದು ಹೊಚ್ಚ ಹೊಸ ತಾಣ. ಇದು ಕನ್ನಡದಲ್ಲೆ ಅಚ್ಚು ಕಟ್ಟಾದ ಶುಭಾಶಯಗಳನ್ನು ಒದಗಿಸುವ ಒಂದು ಪ್ರಯತ್ನ. ಶುಭಾಶಯಗಳ ಮುಖಾಂತರ ಹಬ್ಬ, ಹುಟ್ಟುಹಬ್ಬ, ಪ್ರೀತಿ, ವಿರಹ, ಸ್ನೇಹ, ಮದುವೆ ಇತ್ಯಾದಿ ಯಾವುದೇ ವಿಷಯಗಳ ಮೇಲೆ ನೀವು ನಿಮ್ಮ ಸ್ನೇಹಿತರಿಗೆ ಹಾಗೂ ಬಂಧು ಮಿತ್ರರಿಗೆ ಶುಭ ಕೋರಬಹುದು.

ಪಾಗಲ್ ಗಾಯ್.ಕಾಂ

ಸ್ವಲ್ಪ ಭಿನ್ನವಾದ ಹೆಸರಿನ, ಆದರೂ ಒಂದಿಷ್ಟು ಆಳವಾದ ಮಾಹಿತಿಗಳನ್ನ ಒಳಗೊಂಡಿರುವ ತಾಣ. ಎಂಬಿಎ ಮುಂತಾದ ವಾಣಿಜ್ಯ ವಿಷಯಗಳ ವ್ಯಾಸಾಂಗಕ್ಕೆ ಬೇಕಾದ ಅಗತ್ಯ ಮಾಹಿತಿಗಳು ಇಲ್ಲಿ ಸಿಗುತ್ತವೆ. ಸಾಮಾನ್ಯ ಪ್ರವೇಶ ಪರೀಕ್ಷೆ (CAT) ಕುರಿತ ಅಗತ್ಯ ಮಾಹಿತಿಗಳನ್ನು ಈ ತಾಣ ಒಳಗೊಂಡಿದೆ. ಜೊತೆಗೆ ದೇಶದ ಪ್ರಮಖ ಬಿಸಿನೆಸ್ ಶಾಲೆಗಳ ಕುರಿತು ಮಾಹಿತಿ ಸಿಗುತ್ತದೆ.

ಚಿತ್ರಲೋಕ.ಕಾಂ


ಕನ್ನಡ ಚಿತ್ರ ಜಗತ್ತಿನ ಸುದ್ದಿ ಸಮಾಚಾರಗಳಿಗೆಂದೇ ಮೀಸಲಾದ ತಾಣ ಚಿತ್ರಲೋಕ.ಕಾಂ. ಇತ್ತೀಚೆಗಷ್ಟೆ ಬಿಡುಗಡೆಯಾಗಿರುವ, ಬಿಡುಗಡೆಗೆ ಕಾದಿರುವ ಕನ್ನಡ ಚಿತ್ರಗಳ ವಿವರಗಳ ಜೊತೆಗೆ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಕನ್ನಡ ಸಿನಿಮಾಗಳ ಬಗ್ಗೆ ತಾಜಾ ಮಾಹಿತಿಗಳು ಇಲ್ಲಿ ಸಿಗುತ್ತವೆ. ಜೊತೆಗೆ ಚಿತ್ರರಂಗದ ಗಲ್ಲಿ ಗಾಸಿಪ್, ನೆಚ್ಚಿನ ನಟನಟಿಯರ, ಕಲಾವಿದರು ತಂತ್ರಜ್ಝರ ಒಟ್ಟಾರೆ ಕನ್ನಡ ಚಿತ್ರರಂಗದ ಕುರಿತ ಸುದ್ದಿಗಳು ಇಲ್ಲಿವೆ.

ಎಲ್ ಕೆ ಅಡ್ವಾಣಿ.ಇನ್

ಬಿಜೆಪಿಯ ಪ್ರಧಾನಿ ಅಭ್ಯರ್ಥಿ , ಹಿರಿಯ ರಾಜಕಾರಣಿ ಎಲ್ ಕೆ ಅಡ್ವಾಣಿಯವರ ಅಧಿಕೃತ ವೆಬ್ ತಾಣವಿದು. ಅಡ್ವಾಣಿ ಬದುಕಿನ ಚಿತ್ರಣ, ಸಾಧನೆ ಮತ್ತು ಪ್ರಚಲಿತಕ್ಕೆ ಸಂಬಂಧಿಸಿ ಅವರ ಸ್ಪಂದನ ಇತ್ಯಾದಿಗಳು ಇಲ್ಲಿ ಪ್ರಕಟಗೊಳ್ಳುತ್ತವೆ. ಜೊತೆಗೆ ಬಿಜೆಪಿಯ ಲೋಕಸಭಾ ಚುನಾವಣೆಯ ಅಜೆಂಡಾ, ಸಿದ್ಧತೆ ಮುಂತಾದ ಸಂಗತಿ ಕುರಿತು ಮಾಹಿತಿ ಲಭ್ಯ.

ವಿಚಾರಮಂಟಪ.ನೆಟ್

ವಿಚಾರ ಮಂಟಪ- ಸಾಹಿತ್ಯ, ಸಂಸ್ಕೃತಿ ಮತ್ತು ಸಮಕಾಲೀನ ವಿಷಯಗಳ ಕುರಿತಾದ ಚರ್ಚೆಗೆಂದೇ ಮೀಸಲಿರುವ ಕನ್ನಡದ ತಾಣ. ಕನ್ನಡ ಸಾಹಿತ್ಯ, ಸಾಮಾಜಿಕ ವಿಚಾರಗಳು ಮತ್ತು ರಾಜ್ಯ ರಾಜಕೀಯ ಕುರಿತ ಚರ್ಚೆಗಳಿಗೆ ಇಲ್ಲೊಂದು ವೇದಿಕೆ ಇದೆ. ಜೊತೆಗೆ ಸಮಕಾಲೀನ ವಿಷಯಗಳ ಕುರಿತು ಮಾಧ್ಯಮದಲ್ಲಿ ನಡೆಯುತ್ತಿರುವ ಚರ್ಚೆಗಳನ್ನ ಒಂದೆಡೆ ಕಲೆ ಹಾಕುವ ಪ್ರಯತ್ನ ನಡೆಯುತ್ತಿದೆ. ಕನ್ನಡದ ತಾಣಗಳು, ಬ್ಲಾಗುಗಳ ಒಟ್ಟಾರೆ ಪಟ್ಟಿಯಿದೆ. ವಚನಗಳು ಸೇರಿದಂತೆ ಪ್ರಮುಖ ಕೃತಿಗಳು ಓದಲು ಲಭ್ಯವಿದೆ. ಇನ್ನೊಂದು ಹೆಜ್ಜೆ ಮುಂದಿಡುತ್ತಿರುವ ವಿಚಾರ ಮಂಟಪ ಈಗ ಅಂತರ್ಜಾಲದಲ್ಲಿ ಕನ್ನಡ ಬರಹಗಳಿಗೆ ಆಹ್ವಾನ ನೀಡಿದ್ದು, ಭಾರತದ ಗ್ರಾಮೀಣ ಬದುಕು ಮತ್ತು ಐಟಿ ಬಿಟಿ ಕುರಿತು ಪ್ರಬಂಧ ಸ್ಪರ್ಧೆಯನ್ನೂ ಏರ್ಪಡಿಸಿದೆ. ರವಿ ಕೃಷ್ಣಾರೆಡ್ಡಿ ಈ ಮಂಟಪದ ಉಸ್ತುವಾರಿ ಹೊತ್ತಿದ್ದಾರೆ. ಒಮ್ಮೆ ಭೇಟಿ ನೀಡಿ.

ಡಿಗ್ರೀಟಿಂಗ್ಸ್.ಕಾಂ

ಇದು ಕ್ರಿಸ್ಮಸ್ ಆಚರಣೆ ಮತ್ತು ಹೊಸ ವರ್ಷದ ಸಂಭ್ರಮದ ಕಾಲ. ಈ ದಿನಗಳಲ್ಲಿ ಪ್ರೀತಿಪಾತ್ರರಿಗೆ ಗ್ರೀಟಿಂಗ್ ಕಳುಹಿಸಿ ಶುಭಾಷಯ ಹೇಳುವುದು ಸಾಮಾನ್ಯ. ಅಂತೆಯೇ ನೆಟ್ಟಿನಲ್ಲಿ ಗ್ರೀಟಿಂಗ್ ಕಾರ್ಡುಗಳನ್ನು ಹುಡುಕುತ್ತಿದ್ದರೆ, ಇದೋ ಅದಕ್ಕೆಂದೇ ಇದೆ ಡಿಗ್ರೀಟಿಂಗ್ಸ್.ಕಾಂ. ಹಬ್ಬ ಆಚರಣೆಗೆ ಅನುಗುಣವಾಗಿ ಚಂದನೆಯ ಗ್ರೀಟಿಂಗ್ ಕಾರ್ಡುಗಳು ಇಲ್ಲಿ ಸಿಗುತ್ತವೆ.

99ಎಕರೆ.ಕಾಂ

ನಿಮ್ಮ ಯಾವುದಾದರೂ ಆಸ್ತಿಯನ್ನು ಮಾರಲು ಅಥವಾ ಕೊಂಡುಕೊಳ್ಳಲು ಇಚ್ಛಿಸುತ್ತಿದ್ದೀರಾ? ಅಥವಾ ಸ್ಥಿರ ಆಸ್ಥಿಗಳ ಮೇಲೆ ಬಂಡವಾಳ ತೊಡಗಿಸುವ ಯೋಜನೆ ಇದೆಯಾ? ಹಾಗಾದರೆ ಈ ತಾಣಕ್ಕೊಮ್ಮೆ ಭೇಟಿ ನೀಡಿ. ಭಾರತೀಯ ರಿಯಲ್ ಎಸ್ಟೇಟ್ ಉದ್ದಿಮೆಯ ಮಾಹಿತಿಗಳು, ಆ ಕುರಿತ ಸಲಹೆ ಸೂಚನೆಗಳು ಇಲ್ಲಿ ಸಿಗುತ್ತವೆ.

ಎಜುಕೇಷನ್ ಇಂಡಿಯಾ.ಕಾಂ

ಭಾರತದಲ್ಲಿ ಎಲ್ಲಿ ಯಾವ ಕಾಲೇಜುಗಳಿವೆ? ಎಲ್ಲಿ ಓದಿದರೆ ಚೆನ್ನ? ಯಾವ ಕೋರ್ಸಿಗೆ ಅವಕಾಶ ಹೆಚ್ಚಿದೆ? ಅಂತೆಲ್ಲ ಯೋಚಿಸುತ್ತಿದ್ದೀರಾ, ಹಾಗಾದ್ರೆ ಈ ‘ಏಜುಕೇಷನ್ ಇಂಡಿಯಾ’ ತಾಣಕ್ಕೊಮ್ಮೆ ತಪ್ಪದೇ ಭೇಟಿ ನೀಡಿ. ಆಸಕ್ತ ವಿದ್ಯಾರ್ಥಿಗಳು, ಪೋಷಕರು ಹಾಗೂ ದೇಶದ ಕಾಲೇಜುಗಳ ನಡುವಣ ಕೊಂಡಿಯಾಗಿ ಈ ತಾಣ ಕೆಲಸ ಮಾಡುತ್ತದೆ. ದೇಶಾದ್ಯಂತ ಇರುವ ಕಾಲೇಜುಗಳು, ಲಭ್ಯವಿರುವ ಕೋರ್ಸುಗಳ ಬಗ್ಗೆ ಮಾಹಿತಿ ಸಿಗುತ್ತದೆ. ಮಾತ್ರವಲ್ಲ ಈ ಕೋರ್ಸುಗಳಿಗೆ ದಾಖಲಾಗುವ ವಿಧಾನ, ಸಿಗಬಹುದಾದ ಎಜುಕೇಷನ್ ಲೋನ್, ಸ್ಕಾಲರ್ ಶಿಪ್ ಗಳ ಬಗೆಗೂ ತಿಳಿಯಬಹುದು. ದೇಶೀಯ ಮತ್ತು ವಿದೇಶಿ ವಿದ್ಯಾರ್ಥಿಗಳಿಬ್ಬರಿಗೂ ಅನುಕೂಲವಾಗುವಂಥ ವ್ಯವಸ್ಥೆ ಇದೆ. ಅಲ್ಲದೆ ಆನ್ ಲೈನ್ ಶಿಕ್ಷಣ ಮತ್ತು ದೂರಶಿಕ್ಷಣಗಳ ಬಗೆಗೂ ಸೂಕ್ತ ಮಾಹಿತಿ ಉಂಟು.

ನ್ಯೂಯಾರ್ಕ್ ಟೈಮ್ಸ್.ಕಾಂ

ಕೂತಲ್ಲೇ ಕೂತು ಅಮೆರಿಕಾ ದೇಶದ ಪತ್ರಿಕೆಯೊಂದನ್ನು ಓದಬಯಸುತ್ತೀರಾ? ಹೌದು ಎಂದಾದರೆ ಈ ತಾಣಕ್ಕೊಮ್ಮೆ ಭೇಟಿ ನೀಡಿ. ಜಗತ್ತಿನ ಪ್ರಸಿದ್ಧ ಸುದ್ದಿತಾಣಗಳಲ್ಲಿ ನ್ಯೂಯಾರ್ಕ್ ಟೈಮ್ಸ್ ನ ಈ ತಾಣ ಕೂಡ ಒಂದು. ಅಮೆರಿಕಾಕ್ಕೆ ಸಂಬಂಧಿಸಿದ ತಾಜಾ ಸುದ್ದಿಗಳು ಮಾತ್ರವಲ್ಲದೇ, ಜಗತ್ತಿನ ಪ್ರಮುಖ ಆಗುಹೋಗುಗಳ ಸುದ್ದಿತುಣುಕುಗಳು ಇಲ್ಲಿ ಓದಸಿಗುತ್ತವೆ. ರಾಜಕೀಯ, ಕ್ರೀಡೆ. ವಾಣಿಜ್ಯ... ಹೀಗೆ ಪ್ರತಿ ಕ್ಷೇತ್ರದ ವಿದ್ಯಮಾನಗಳ ವಿಶ್ಲೇಷಣಾತ್ಮಕ ಲೇಖನಗಳು, ವಿವರಣೆಗಳು ಇತ್ಯಾದಿಗಳನ್ನು ಓದಬಹುದು.

ಕ್ರಿಕೆಟ್ ನಿರ್ವಾಣ.ಕಾಂ

ಭಾರತೀಯ ಕ್ರಿಕೆಟ್ ತಂಡದ ಇಂದಿನ ರೋಚಕ ಟೆಸ್ಟ್ ಜಯದ ಸಮಸ್ತ ಸುದ್ದಿಯನ್ನು ತಿಳಿದುಕೊಳ್ಳಬಯಸುವಿರಾದರೆ ಈಗೋ ಇಲ್ಲಿದೆ ಒಂದು ಪ್ರಶಸ್ತ್ಯ ತಾಣ. ಭಾರತೀಯ ಕ್ರಿಕೆಟ್ ನ ಸುದ್ದಿ ಸಮಾಚಾರಗಳಿಗಾಗಿಯೇ ಮೀಸಲಾಗಿದೆ ಈ ‘ಕ್ರಿಕೆಟ್ ನಿರ್ವಾಣ.ಕಾಂ.’ ಅಂದಿನ ಪಂದ್ಯಗಳ ನೇರ ಸ್ಕೋರ್ ಅಂಕಿ-ಅಂಶ, ವಿಶ್ಲೇಷಕರ ವಿವರಣೆ, ಆಟಗಾರರ ಸಂದರ್ಶನ-ಅಭಿಪ್ರಾಯ, ಆಟಗಾರಿಕೆಯ ತಂತ್ರಗಳ ಜೊತೆಗೆ ದೇಶಿಯ ಮಟ್ಟದಿಂದ ಅಂತರಾಷ್ಟ್ರೀಯ ಮಟ್ಟದವರೆಗಿನ ಪಂದ್ಯಾವಳ ವಿವರ... ಒಟ್ಟಾರೆ ಕ್ರಿಕೆಟ್ ಜಗತ್ತಿನ ಸಮಸ್ತ ತಾಜಾ ಸುದ್ದಿಗಳು ಇಲ್ಲಿರುತ್ತವೆ.

ಮಾನ್ಸ್ಟರ್.ಕಾಂ

ಹೇಳಿಕೇಳಿ ಇದು ರಿಸೆಷನ್ ಗರ ಎಲ್ಲರ ಮನೆಯ ಕದ ಬಡಿಯುತ್ತಿರುವ ಕಾಲ. ಇಂತಹ ಹೊತ್ತಲ್ಲಿ ಇರುವ ಉದ್ಯೋಗ ಕಳೆದುಕೊಂಡು ಹೊಸ ಉದ್ಯೋಗಕ್ಕಾಗಿ ಅಲೆಯೋದು ಇದ್ದದ್ದೇ. ಹೀಗೆ ಕೆಲಸಕ್ಕಾಗಿ ಅಂತರ್ಜಾಲದಲ್ಲಿ ಜಾಲಾಡುವವರಿಗೆ ಮಾನ್ಸ್ಟರ್.ಕಾಂ ಒಂದು ಪ್ರಶಸ್ತ್ಯ ತಾಣ. ಭಾರತದಲ್ಲಿರುವ ಎಲ್ಲಾ ಪ್ರಮುಖ ಕಂಪನಿಗಳಲ್ಲಿ ಖಾಲಿ ಇರುವ ಉದ್ಯೋಗಗಳ ಮಾಹಿತಿ ಇಲ್ಲಿ ಸಿಗುತ್ತೆ. ಶಿಕ್ಷಣ, ಅನುಭವ, ವೃತ್ತಿ ಕ್ಷೇತ್ರಕ್ಕೆ ಅನುಗುಣವಾಗಿ ಕ್ಷಣದಲ್ಲಿ ಉದ್ಯೋಗಾವಕಾಶ ಹುಡುಕುವ ಅನುಕೂಲ ಇಲ್ಲುಂಟು. ಉದ್ಯೋಗ ಬೇಟೆಯಲ್ಲಿರುವವರು ಇದನ್ನ ಬಳಸಿಕೊಳ್ಳಬಹುದು.

ಲೈವ್‌ ಇಂಡಿಯಾ.ಕಾಂ

 ಹಳೆಯ ಹಾಡುಗಳನ್ನು ಕೇಳುವುದೆಂದರೆ ನಿಮಗೆ ಇಷ್ಟವೇ? ಆದರೆ ಅವುಗಳನ್ನು ಎಲ್ಲಿ ಕೇಳುವುದೆಂದು ಯೋಚಿಸುತ್ತಿರುವಿರಾ? ವಿವಿಧ ಬಾಷೆಗಳಲ್ಲಿ ಬಿತ್ತರವಾಗುವ ಎಫ್‌ಎಂ ಸ್ಟೇಶನ್‌ಗಳನ್ನು ನೀವು ಆನ್‌ಲೈನ್‌ನಲ್ಲಿ ಕೇಳಬಹುದು. ನಿಮ್ಮ ಗಣಕಯಂತ್ರಕ್ಕೆ ಇದನ್ನು ಡೌನ್‌ಲೋಡ್ ಕೂಡ ಮಾಡಿಕೊಳ್ಳಬಹುದು. ಭಾರತದಲ್ಲಿ ನಿಮಗಿಷ್ಟವಾದ ರೇಡಿಯೋ ಸ್ಟೇಶನ್ ಆಯ್ದುಕೊಂಡು ಹಾಡು ಕೇಳಬಹುದು.

ಕಿಡ್ ಬ್ಯಾಂಕ್.ಕಾಂ

ಮಕ್ಕಳಿಗೆ ಆಟದ ಮೂಲಕ ಪಾಠ ಕಲಿಸುವ ಹಾಗೂ ಅನೇಕ ವಿಷಯಗಳ ಕುರಿತು ಮಾಹಿತಿ ನೀಡುವ ತಾಣವೊಂದು ಇಲ್ಲಿದೆ. ಐಎನ್‌ಜಿ ವೇಶ್ಯ ಬ್ಯಾಂಕ್ ಮಕ್ಕಳದಿನಾಚರಣೆಯ ಅಂಗವಾಗಿ ರೂಪಿಸಿರುವ ಈ ಪೋರ್ಟಲ್‌ನಲ್ಲಿ ಮಕ್ಕಳು ತಮ್ಮ ತಂದೆತಾಯಿಗಳಿಗೆ ಗ್ರೀಟಿಂಗ್ಸ್ ಕಳುಹಿಸಬಹುದು. ನಾಣ್ಯ, ನೋಟುಗಳ ಇತಿಹಾಸದ ಬಗ್ಗೆಯೂ ತಿಳಿದುಕೊಳ್ಳಬಹುದು. ಭೂಮಿಯ ಬಗ್ಗೆ ಹಾಗೂ ಸೌರವ್ಯೂಹದ ಬಗ್ಗೆಯೂ ಚಿಣ್ಣರಿಗೆ ಉಪಯುಕ್ತ ಮಾಹಿತಿಗಳಿವೆ.

ಬೋಟ್‌.ಕಾಂ

ದೋಣಿ, ನಾಡದೋಣಿ, ರಸದೋಣಿ, ಬೋಟುಗಳು, ಹಡಗುಗಳ ಕುರಿತು ನಿಮಗೆ ಆಸಕ್ತಿ ಇದೆಯೇ? ಸಮುದ್ರದಲೆಯ ಮೇಲೆ ತೇಲುವ ಸಾವಿರಾರು ಬೋಟುಗಳ ಕುರಿತು ವೈವಿಧ್ಯಮಯ ಮಾಹಿತಿ ಈ ತಾಣದಲ್ಲಿದೆ. ದೇಶ ವಿದೇಶದ ಬೋಟುಗಳು ಅವುಗಳ ವೆಚ್ಚ ಹಾಗೂ ನಿರ್ವಹಣೆಯ ಕುರಿತೂ ಅಪರೂಪದ ಮಾಹಿತಿ ಇದೆ. ಆಸಕ್ತರು ಒಮ್ಮೆ ಈ ಬೋಟು ಹತ್ತಿ ಇಳಿಯಬಹುದು.

ಅಲ್ಟಾವಿಸ್ತಾ.ಕಾಂ

ಗೂಗಲ್ ಸರ್ಚ್ ಇಂಜಿನ್ ಬಗ್ಗೆ ನೀವು ಕೇಳೇ ಕೇಳಿರುತ್ತೀರಿ. ಇದೇ ಮಾದರಿಯಲ್ಲಿರವ ಆದರೆ ವಿಶ್ವದ ಎಲ್ಲಾ ಭಾಷೆಗಳಲ್ಲಿರುವ ಮಾಹಿತಿಯನ್ನು ಹುಡುಕಿ ಕೊಡುವ ಮತ್ತೊಂದು ಸರ್ಚ್ ಇಂಜಿನ್ ಇಲ್ಲಿದೆ. ಗೂಗಲ್‌ನಲ್ಲಿ ಹುಡುಕಿ ಸಿಗದಿದ್ದರೆ ಇಲ್ಲೂ ಒಮ್ಮೆ ಪ್ರಯತ್ನಿಸಬಹುದು. ಚಿತ್ರ - ಮಾಹಿತಿಯ ಜೊತೆಗೆ ಎಂಪಿಥ್ರೀ ಮ್ಯೂಸಿಕ್, ವಿಡಿಯೋ ತುಣುಕುಗಳನ್ನೂ ಹುಡುಕಬಹುದು.

ಡಿಜಿಟಲ್ ಸಲೂನ್.ಕಾಂ

ನಿಮಗೆ ಚಿತ್ರಗಳ ಬಗ್ಗೆ ಚಿತ್ರಕಲೆಯ ಬಗ್ಗೆ ಆಸಕ್ತಿ ಇದೆಯೇ? ಜಗತ್ತಿನ ಪ್ರಸಿದ್ಧ ಕಲಾವಿದರ ಪೇಟಿಂಗ್ಸ್‌ಗಳು ಇಲ್ಲಿವೆ. ಚಿತ್ರ ಒಂದು ಅರ್ಥ ಹಲವು ಎನ್ನುವ ಹಾಗಿರುವ ಈ ಪೇಟಿಂಗ್ಸ್‌ಗಳ ಹಿಂದೆ ಅಪರೂಪದ ಸೃಜನಶೀಲತೆ ಅರಳಿದೆ. ಜೊತೆಗೆ ಬೇಸರವಾದರೆ ಓದಿಕೊಳ್ಳಲು ಚಿತ್ರಕಾವ್ಯವೂ ಇದೆ.

ಒಮಿರು.ಕಾಂ

ತರಹೇವಾರಿ ಉಡುಪುಗಳನ್ನು ಕೊಳ್ಳುವುದರಲ್ಲಿ, ಧರಿಸುವುದರಲ್ಲಿ ಕುತೂಹಲವಿರುವ ವ್ಯಕ್ತಿಗಳು ನೀವಾ? ಹೊಸ ಡಿಸೈನ್, ನವ ನಾವೀನ್ಯ ಫ್ಯಾಶನ್ ಕುರಿತು ಆಸಕ್ತಿ ಹೊಂದಿರುವಿರಾ? ನಿಮಗಿದೆ ಇಲ್ಲೊಂದು ತಾಣ? ಮಾರುಕಟ್ಟೆಯಲ್ಲಿ ಲಭ್ಯವಿರುವ ಹೊಸ ಫ್ಯಾಶನನ್ನಿ ಉಡುಪುಗಳ ಬಗ್ಗೆ ಈ ತಾಣ ಪರಿಚಯ ನೀಡುತ್ತದೆ.

ನೇಷನ್ ಮಾಸ್ಟರ್.ಕಾಂ

ನಿಮಗೆ ಯಾವುದಾದರೂ ದೇಶ, ವಸ್ತು, ವಿಷಯದ ಬಗ್ಗೆ ನಿಖರ ಮಾಹಿತಿ, ಅಂಕಿ ಅಂಶ, ನಕಾಶೆಗಳು ಬೇಕೇ? ಇಲ್ಲಿದೆ ಒಂದು ಅಪರೂದ ತಾಣ. ಹಲವು ಕ್ಷೇತ್ರಕ್ಕೆ ಸಂಬಂಧಿಸಿದ ವಿಫುಲ ಮಾಹಿತಿಗಳ ಬಂಡಾರವೇ ಇಲ್ಲಿದೆ.

ವರ್ಡ್ ವೆಬ್‌.ಕಾಂ

ಅಂತರ್ಜಾಲ ಬಳಕೆದಾರರಿಗೆ ಹಲವು ರೀತಿಯಲ್ಲಿ ನೆರವಾಗುವ ಈ ಪದಕೋಶದಲ್ಲಿ ಸುಮಾರು ಮೂರು ಲಕ್ಷಗಳಿಗೂ ಹೆಚ್ಚು ಪದಗಳ ಅರ್ಥ, ಸಮಾನಾರ್ಥಕ, ವಿರುದ್ಧಾರ್ಥಕ, ನಾಮವಿಶೇಷಣ, ಉಚ್ಛಾರಣೆಯನ್ನೂ ಕೊಡಲಾಗಿದೆ. 6.2 ಎಂಬಿ ಗಾತ್ರದ ಈ ಪದಕೋಶವನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಗಣಕಯಂತ್ರದಲ್ಲಿ ಅನುಸ್ಥಾಪಿಸಬಹುದು.

ವಲ್ಡ್ ಹೆರಿಟೇಜ್.ಕಾಂ

ವಿಶ್ವಪರಂಪರೆಯ ತಾಣಗಳ ಬಗ್ಗೆ ಮಾಹಿತಿ ನೀಡುವ ತಾಣವೊಂದು ಇಲ್ಲಿದೆ. ಈ ತಾಣಗಳನ್ನು ಸಂರಕ್ಷಿಸಲು ಸ್ವಯಂ ಸೇವಕರಾಗಿ ದುಡಿಯುವ ಅವಕಾಶವೂ ಇಲ್ಲಿದೆ. ಹೆಚ್ಚಿನ ಮಾಹಿತಿಗಳಿಗಾಗಿ ಒಮ್ಮೆ ಭೇಟಿಕೊಟ್ಟು ನೋಡಿ.

ರೇಟೆಡ್ ಪೀಪಲ್.ಕಾಂ

ನಿಮ್ಮ ಮನೆಯ ಒಳಾಂಗಣ ವಿನ್ಯಾಸವನ್ನು ಆರ್ಕಿಟೆಕ್ಟರ್ ಒಬ್ಬರು ಸುಂದರವಾಗಿ ಮಾಡಿಕೊಟ್ಟಿದ್ದಾರೆ ಅಂದಿಟ್ಟುಕೊಳ್ಳಿ. ಕಂಪನಿಯೊಂದು ಉತ್ಪಾದಿಸುವ ಸರಕು ನಿಮಗೆ ತುಂಬಾ ಇಷ್ಟವಾಗಿದೆ ಎಂದುಕೊಳ್ಳಿ. ಹೀಗೆ ಗ್ರಾಹಕರು ಮತ್ತು ಉತ್ಪಾದಕರ ನಡುವೆ ಬಾಂಧವ್ಯ ಬೆಸೆಯುವ ಹಾಗೂ ಅವರನ್ನು ಪರಸ್ಪರ ಪರಿಚಯಿಸುವ ತಾಣವೊಂದು ಇಲ್ಲಿದೆ. ನಿಮಗಿಷ್ಟವಾದ ವ್ಯಕ್ತಿ ಹಾಗೂ ಅವರ ಕೆಲಸದ ಬಗ್ಗೆ ಎರಡು ಸಾಲು ಬರೆದು ಅವರಿಗೆ ರೇಟಿಂಗ್ ಕೊಡಬಹುದು. ಆ ಮೂಲಕ ಆ ವ್ಯಕ್ತಿಯನ್ನು ಇನ್ನಷ್ಟು ಜನರಿಗೆ ಪರಿಚಯಿಸಬಹುದು.

ಐಐಎಸ್ ಸಿ.ಕಾಂ

ಅಂತರ್ಜಾಲದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆ ಕುರಿತು ಹುಡುಕಾಟ ನಡೆಸುತ್ತಿದ್ದೀರಾ? ಇಲ್ಲಿದೆ ನೋಡಿ ಅದರ ಅಧಿಕೃತ ತಾಣ. ಇದೀಗ ಶತಮಾನೋತ್ಸವ ಸಂಭ್ರಮದಲ್ಲಿರುವ ಸಂಸ್ಥೆಯ ಸಂಪೂರ್ಣ ಕಾರ್ಯಚಟುವಟಿಕೆಗಳ ಮಾಹಿತಿ ಇಲ್ಲಿದೆ. ದಾಖಲಾತಿ, ಕೋರ್ಸುಗಳು, ಜೊತೆಗೆ ಹಲವಾರು ಸ್ಕಾಲರ್ ಶಿಪ್, ಫೆಲೋಶಿಪ್ ಇತ್ಯಾದಿ ಬಗ್ಗೆ ಇಲ್ಲಿ ಮಾಹಿತಿ ಪಡೆಯಬಹುದು. ಮಾತ್ರವಲ್ಲ ಸಂಸ್ಥೆಯ ಹೊಸ ಹೊಸ ಪರೀಕ್ಷೆ, ಶೋಧಗಳ ಸುದ್ದಿಗಳೂ ಇಲ್ಲಿ ಲಭ್ಯ.

ಬಿಎಸ್‌ಇ ಇಂಡಿಯಾ.ಕಾಂ

ನಿಮಗೆ ಷೇರು ಮಾರುಕಟ್ಟೆಯ ಬಗ್ಗೆ ಕುತೂಹಲ ಇದೆಯಾ? ಯಾವ ಕಂಪನಿಗಳ ಷೇರುಗಳು ಯಾವ ಮಟ್ಟದಲ್ಲಿದೆ, ಸೂಚ್ಯಂಕ ಏರಿಕೆ, ಕುಸಿತ, ಮುಕ್ತಾಯದ ಬಗ್ಗೆ ಆಸಕ್ತಿಗಳಿವೆಯಾ? ಯಾವ ಹೊತ್ತಿನಲ್ಲಿ ಷೇರು ಖರೀದಿಸಿದರೆ ಲಾಭ, ಯಾವ ಹೊತ್ತಲ್ಲಿ ಮಾರಿದರೆ ಲಾಭ, ನಷ್ಟವಾಗದಂತೆ ಹೇಗೆ ವ್ಯವಹಾರ ಮಾಡಬೇಕು ಎಂಬಿತ್ಯಾದಿ ಮಾಹಿತಿಗಾಗಿ ಇಲ್ಲಿದೆ ಮುಂಬಯಿ ಶೇರು ಪೇಟೆಯ ಅಧಿಕೃತ ಜಾಲತಾಣ. ಒಮ್ಮೆ ಭೇಟಿಕೊಟ್ಟು ನೋಡಿ.

ವರ್ಲ್ಡ್ ಪ್ಯಾಕ್ಟ್ ಬುಕ್.ಕಾಂ

ಆಫ್ಘಾನಿಸ್ತಾನದಲ್ಲಿ ಎಷ್ಟು ವಿಮಾನ ನಿಲ್ದಾಣಗಳಿವೆ? ಭಾರತದಲ್ಲಿ ಜನನ ಮರಣ ಪ್ರಮಾಣಗಳ ಸರಾಸರಿ ಎಷ್ಟು? ಜಗತ್ತಿನಲ್ಲಿ ಎಷ್ಟು ಭಾಷೆಗಳಿವೆ? ಅದನ್ನು ಎಷ್ಟು ಜನ ಮಾತನಾಡುತ್ತಾರೆ? ಹೀಗೆಲ್ಲಾ ನಿಮಗೆ ವಸ್ತು, ವಿಷಯವೊಂದರ ಕುರಿತು ನಿಖರ ಅಂಕಿ ಸಂಖ್ಯೆಗಳು ಬೇಕಿದ್ದರೆ ಇಲ್ಲಿದೆ ಒಂದು ಅಪರೂಪದ ತಾಣ. ವರ್ಲ್ಡ್ ಪ್ಯಾಕ್ಟ್ ಬುಕ್‌ನಲ್ಲಿ ಅಚ್ಚರಿ ಎನಿಸುವಷ್ಟು ಮಾಹಿತಿಗಳಿವೆ. ಪ್ರಸಕ್ತ ಸಾಲಿನ ಅಂಕಿ ಸಂಖ್ಯೆಗಳ ಮಾಹಿತಿಯನ್ನು ಡೌನ್‌ಲೋಡ್ ಕೂಡ ಮಾಡಿಕೊಳ್ಳಬಹುದು.

ಲಿಫಿಕಾರ್‌.ಕಾಂ

ಅಂತರ್ಜಾಲದಲ್ಲಿ ನೇರವಾಗಿ ಕನ್ನಡದಲ್ಲಿ ಟೈಪಿಸುವುದು ಹೇಗೆ ಎನ್ನುವುದು ಅನೇಕರ ಪ್ರಶ್ನೆ? ನುಡಿ, ಬರಹ ತಂತ್ರಾಶಗಳನ್ನು ಬಳಸದೇ ನೇರವಾಗಿ ಕನ್ನಡ ಟೈಪಿಸಲು ಇಲ್ಲಿದೆ ಒಂದು ಸರಳ ತಂತ್ರಾಂಶ. ಕನ್ನಡ ಮಾತ್ರವಲ್ಲ ಹಲವು ಭಾಷೆಗಳಲ್ಲಿ ಟೈಪಿಸುವ ಅವಕಾಶ ಇಲ್ಲಿದೆ. ಲಿಫಿಕಾರ್ ಎನ್ನುವ ಈ ಸರಳ ತಂತ್ರಾಂಶವನ್ನು ನಿಮ್ಮ ಗಣಕಯಂತ್ರಕ್ಕೆ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಇಂಟರ್‌ನ್ಯಾಷನಲ್ ಪೊಯೆಟ್ರಿ.ಕಾಂ

ಕವಿತೆಗಳು ನಿಮಗಿಷ್ಟವೇ? ಹಾಗಾದರೆ ಇಲ್ಲಿ ಅಂತಾರಾಷ್ಟ್ರೀಯ ಕವಿಗಳ ಒಂದು ತಾಣವಿದೆ. ನಿಮಗಿಷ್ಟವಾದ ದೇಶದ ನಿಮಗಿಷ್ಟವಾದ ಕವಿಗಳ ಪರಿಚಯ ಮತ್ತು ಅವರ ಕೆಲವು ಕವಿತೆಗಳೂ ಇವೆ. ಭಾರತದ ಪ್ರಾದೇಶಿಕ ಭಾಷೆಗಳ ಕವಿಗಳ ಪರಿಚಯವೂ ಇದೆ. ಕುತೂಹಲಕ್ಕೆ ಒಮ್ಮೆ ಭೇಟಿ ಕೊಟ್ಟು ನೋಡಿ.

ಡಿಸೈನ್ ಮೈ ರೂಮ್ .ಕಾಂ

ನೀವು ಮನೆ ಕಟ್ಟಿಸುತ್ತಿದ್ದೀರಾ? ನಿಮ್ಮ ಮನೆ, ನಿಮ್ಮ ಕೋಣೆ ಹೇಗಿರಬೇಕು ಎನ್ನುವುದು ನಿಮ್ಮ ಆಸೆ? ಒಳಾಂಗಣ ವಿನ್ಯಾಸ ಹೇಗಿರಬೇಕು? ದೇವರ ಕೋಣೆ, ಅಡುಗೆ ಕೋಣೆ, ಹಾಲ್ ಎಲ್ಲೆಲ್ಲಿ ಇದ್ದರೆ ಚೆನ್ನ? ಗೃಹೋಪಯೋಗಿ ವಸ್ತುಗಳು ಹೇಗಿರಬೇಕು? ಅಷ್ಟಕ್ಕೂ ಇದಕ್ಕೆಲ್ಲಾ ಎಷ್ಟು ಖರ್ಚಾಗುತ್ತದೆ? ಈ ತಾಣದಲ್ಲಿ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರವಿದೆ. ಒಮ್ಮೆ ಕುತೂಹಲಕ್ಕೆ ಭೇಟಿ ಕೊಟ್ಟು ನೋಡಿ.

ಫ್ರೀ ಡಿಕ್ಷನರಿ.ಕಾಂ

ಓದಿನ ನಡುವೆ ಪದಗಳ ಅರ್ಥ ತಿಳಿದುಕೊಳ್ಳಲು ನಿಘಂಟು ಬೇಕೇ ಬೇಕಲ್ಲವೇ? ವೈದ್ಯಕೀಯ, ವಿಜ್ಞಾನ, ತಂತ್ರಜ್ಞಾನ, ಕಾನೂನು, ಇತಿಹಾಸ ಹೀಗೆ ಒಂದೊಂದು ಕ್ಷೇತ್ರಕ್ಕೂ ಪ್ರತ್ಯೇಕವಾದ ನಿಘಂಟುಗಳಿವೆ. ಈ ತಾಣದಿಂದ ಸ್ವಾನೀಷ್, ಜರ್ಮನ್, ಇಟಾಲಿಯನ್, ಚೈನೀಸ್, ಪೋರ್ಚುಗಿಸ್, ಡಚ್, ಗ್ರೀಕ್ ಹೀಗೆ ಜಗತ್ತಿನ ಹಲವು ಭಾಷೆಗಳ ನಿಘಂಟನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು.

ಎನ್‌ಎಇಎಲ್.ಕಾಂ

ಇಂಗ್ಲಿಷ್ ಸಾಹಿತ್ಯದ ಕುರಿತು ನಿಮಗೆ ಆಸಕ್ತಿ ಇದೆಯೇ? ಹದಿನೇಳು, ಹದಿನೆಂಟು ಮತ್ತು ಇಪ್ಪತ್ತನೆಯ ಶತಮಾನದಲ್ಲಿ ರಚಿತವಾದ ಕೃತಿಗಳು, ಅದರಲ್ಲಿನ ಭಾಷಾ ಬಳಕೆ, ಬದಲಾದ ವಸ್ತು ವಿಷಯಗಳು ಇತ್ಯಾದಿಗಳ ಕುರಿತು ನಿಮ್ಮ ಕುತೂಹಲಕ್ಕೆ ಈ ತಾಣವನ್ನೊಮ್ಮೆ ನೋಡಿ.

ದೇಸಿ ಪಂಡಿತ್.ಕಾಂ

ಬ್ಲಾಗ್ ಕುರಿತು ನೀವು ಕೇಳೇ ಕೇಳಿರುತ್ತೀರಿ. ಕನ್ನಡದಲ್ಲೇ ಪ್ರತಿ ದಿನ ಎರಡು ಮೂರು ಹೊಸ ಬ್ಲಾಗ್‌ಗಳು ಹುಟ್ಟಿಕೊಳ್ಳುತ್ತಿವೆ. ಹಾಗಾದರೆ ಭಾರತದ ಇತರ ಪ್ರಾದೇಶಿಕ ಭಾಷೆಗಳಲ್ಲಿ ಒಟ್ಟು ಎಷ್ಟು ಬ್ಲಾಗ್‌ಗಳಿರಬಹುದು. ಆಯಾ ಭಾಷೆಗಳಲ್ಲಿ ಪ್ರತಿ ದಿನ ಪೋಸ್ಟ್ ಮಾಡಲಾಗುವ ಲೇಖನಗಳೆಷ್ಟು? ಅತ್ಯುತ್ತಮ ಲೇಖನ ಪ್ರಕಟಿಸುವ ಬ್ಲಾಗ್‌ಗಳು ಯಾವುದು? ದೇಸಿ ಪಂಡಿತ್‌ನಲ್ಲಿ ಕನ್ನಡ, ಹಿಂದಿ, ಬಾಂಗ್ಲಾ, ಮರಾಠಿ, ತೆಲುಗು ಭಾಷೆಗಳ ಬ್ಲಾಗ್‌ಗಳ ಪರಿಚಯವಿದೆ. ನೀವೂ ನೊಂದಾಯಿಸಿಕೊಂಡು ಒಳ್ಳೆಯ ಬ್ಲಾಗ್‌ಗಳನ್ನು ಇಲ್ಲಿ ಪರಿಚಯಿಸಬಹುದು.

ಬುಕ್ಸ್‌.ರೆಡಿಫ್.ಕಾಂ

ಭಾರತದಲ್ಲಿ ಪ್ರಕಟಗೊಳ್ಳುತ್ತಿರುವ ಉತ್ತಮ ಪುಸ್ತಕಗಳು, ಲೇಖಕರು, ಪುಸ್ತಕ ಪ್ರಕಾಶನ ಸಂಸ್ಥೆಗಳು, ಇತ್ಯಾದಿ ಮಾಹಿತಿಗಳ ಜೊತೆಗೆ ಆನ್‌ಲೈನ್‌ನಲ್ಲಿ ನಿಮ್ಮ ನೆಚ್ಚಿನ ಪುಸ್ತಕ ಕೊಳ್ಳುವ ವ್ಯವಸ್ಥೆಯೂ ಇಲ್ಲಿದೆ. ನಲವತ್ತು ಸಾವಿರ ಲೇಖಕರ 2.5 ಮಿಲಿಯನ್‌ಗೂ ಹೆಚ್ಚಿನ ಪುಸ್ತಕಗಳು ಇಲ್ಲಿವೆ. ಒಮ್ಮೆ ಭೇಟಿ ಕೊಟ್ಟು ನೋಡಿ.

ಯುಜಿಸಿ.ಎಸಿ.ಇನ್

ಯೂನಿವರ್ಸಿಟಿ ಗ್ರಾಂಟ್ಸ್ ಕಮೀಷನ್ ಕುರಿತು ನೀವು ಕೇಳಿರಬೇಕಲ್ಲ? ದೇಶದ ವಿಶ್ವವಿದ್ಯಾಲಯಗಳಿಗೆ ಧನ ಸಹಾಯ ಒದಗಿಸುವ ಯುಜಿಸಿ ಉನ್ನತ ಶಿಕ್ಷಣದ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸುತ್ತಿದೆ. ಶಿಕ್ಷಣಕ್ಕಾಗಿ ಯುಜಿಸಿ ನೀಡುವ ಧನಸಹಾಯಗಳು, ಫೆಲೋಶಿಫ್‌ಗಳು, ಯುಜಿಸಿ ನಡೆಸುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು, ಇತ್ಯಾದಿಗಳ ಕುರಿತು ಮಾಹಿತಿ ಈ ತಾಣದಲ್ಲಿದೆ.

ವೆನ್ ಈಸ್.ಕಾಂ

ಕ್ಯಾಲೆಂಡರ್‌ಗಳ ಕುರಿತು ನಿಮಗೆ ಕುತೂಹಲವಿದೆಯೇ? ಹಾಗಾದರೆ ಈ ತಾಣಕ್ಕೊಮ್ಮೆ ಭೇಟಿ ನೀಡಿ. ಎರಡು ಸಾವಿರದ ಹತ್ತರವರೆಗಿನ ಕ್ಯಾಲೆಂಡರ್ ಇಲ್ಲಿದೆ. ಕ್ರಿಶ್ಚಿಯನ್, ಬೌದ್ಧ, ಮುಸ್ಲಿಂ, ಹಾಗೂ ಇನ್ನಿತರ ಪಂಚಾಂಗಗಳಿವೆ. ಆಯಾ ಧರ್ಮದ ಸಂಬಂಧಿಸಿದ ವಿಶೇಷ ದಿನಗಳು, ಅವುಗಳ ವಿಶೇಷಗಳು, ರಜಾದಿನಗಳ ಕುರಿತೂ ಮಾಹಿತಿ ಇದೆ.

ಎಎಲ್ ಡೈಲಿ.ಕಾಂ

ಅತ್ಯುತ್ತಮ ಲೇಖನಗಳು, ವಿರ್ಮಶೆಗಳು, ಟೀಕೆ ಟಿಪ್ಪಣಿಗಳು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ವರದಿಗಳು, ಕಲೆ ಸಾಹಿತ್ಯದ ಕುರಿತು ನಡೆಯುತ್ತಿರುವ ಚರ್ಚೆಗಳು, ಹೊಸ ಪುಸ್ತಕಗಳು ಇವುಗಳೆಲ್ಲಾ ನಿಮಗೆ ಒಂದೆಡೆ ಸಿಗಬೇಕೇ? ಹಾಗಾದರೆ ಈ ತಾಣಕ್ಕೊಮ್ಮೆ ಭೇಟಿ ಕೊಟ್ಟು ನೋಡಿ. ಜಗತ್ತಿನಾದ್ಯಂತ ಇರುವ ಪ್ರಭಾವಿ ಮಾಸಿಕ/ಪಾಕ್ಷಿಕಗಳ ಕೊಂಡಿಯೂ ಇಲ್ಲಿದೆ.

ಫಾಂಟ್.ಕಾಂ

ನೀವು ಗಣಕಯಂತ್ರ ಬಳಕೆದಾರರಾ? ನಿಮ್ಮ ಆಪರೇಟಿಂಗ್ ಸಿಸ್ಟಮ್ ಯಾವುದೇ ಇರಲಿ, ಅದಕ್ಕೆ ಯಾವಾಗಲೂ ಫಾಂಟ್‌ಗಳದ್ದೇ ಸಮಸ್ಯೆ, ಕಾಡುತ್ತಿದೆಯಾ? ಹೊಸ ಹೊಸ ಫಾಂಟ್‌ಗಳನ್ನು ಹುಡುಕಲು, ಅದನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಲು ಇಲ್ಲಿದೆ ಒಂದು ಅಪರೂಪದ ತಾಣ. ಇಲ್ಲಿ ಏಳುಸಾವಿರದ ಐದುನೂರು ಫಾಂಟ್‌ಗಳಿವೆ. ಒಮ್ಮೆ ಹಾಗೆ ಸುಮ್ಮನೆ ನೋಡಿ.

ಮೈಸೂರುದಸರಾ.ಕಾಂ

ಮೈಸೂರು ದಸರಾ ನೋಡಿದ್ದೀರಾ? ಇದೇನು ಈ ರೀತಿ ಪ್ರೆಶ್ನೆ ಕೇಳುತ್ತೀರಲ್ಲಾ ಎನ್ನಬೇಡಿ. ದಸರಾ ಉತ್ಸವನ್ನು ನೀವೀಗ ನಿಮ್ಮ ಮನೆಯಲ್ಲೇ ಕುಳಿತು ನೋಡಬಹುದು. ಪ್ರಾರಂಭದಲ್ಲಿ ಸಾಕಷ್ಟು ಟೀಕೆಗೆ ಒಳಗಾಗಿದ್ದ ದಸರಾ ವೆಬ್‌ಸೈಟ್ ಈಗ ನವೀಕರಣಗೊಂಡಿದೆ. ಹೊಸ ಆವೃತ್ತಿಯಲ್ಲಿ ಗೂಗಲ್ ಟ್ರಾನ್ಸಲೇಟ್ ಬಳಸಿ ವಿಶ್ವದ ಮೂವತೈದು ಭಾಷೆಗಳಲ್ಲಿ ಮಾಹಿತಿ ಲಭ್ಯವಾಗುವಂತೆ ಮಾಡಿದ್ದಾರೆ. ಆದರೆ ಕನ್ನಡದಲ್ಲೇ ಮಾಹಿತಿ ಕಡಿಮೆ ಇದೆ. ಒಮ್ಮೆ ಹೊಸ ವೆಬ್‌ಸೈಟ್‌ಗೆ ಭೇಟಿಕೊಟ್ಟು ನೋಡಿ.

ಸಿಟಿಜನ್ ಜರ್ನಲಿಸ್ಟ್.ಕಾಂ

ಸಿಟಜನ್ ಜರ್ನಲಿಸಂ ಎಂಬ ಸಾರ್ವಜನಿಕ ಸಹಭಾಗಿತ್ವದ ಪತ್ರಿಕೋದ್ಯಮದ ಕುರಿತು ನೀವೂ ಕೇಳಿರಬೇಕಲ್ಲಾ, ಭಾರತದ ಮೊದಲ ಸಿಟಿಜನ್ ಜರ್ನಲಿಸಂ ಪೋರ್ಟಲ್ ಇಲ್ಲಿದೆ. ಈ ಜಾಲತಾಣ 2008 ರ ಯಂಗ್ ಇಂಡಿಯಾ ಸಿಟಿಜನ್ ಜರ್ನಲಿಸಂ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸುದ್ದಿ, ಚಿತ್ರ ಹಾಗೂ ದೃಶ್ಯ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿಗೊಮ್ಮೆ ಭೇಟಿ ನೀಡಿ. ನೀವೂ ಪತ್ರಕರ್ತರಾಗಿ ಭಾಗವಹಿಸಿ.

ಜರ್ನಿಮಾರ್ಟ್.ಕಾಂ

ಸದ್ಯಕ್ಕೆ ರಜೆ ಇದೆ. ಒಂದಿಷ್ಟು ದಿನ ಎಲ್ಲಿಗಾದರೂ ಪ್ರವಾಸ ಹೋಗಿ ಬರಬೇಕು ಅಂತ ಯೋಚಿಸುತ್ತಿದ್ದೀರಾ? ಹಾಗಾದರೆ ನಿಮ್ಮ ಅನುಕೂಲಕ್ಕೊಂದು ತಾಣ ಇಲ್ಲಿದೆ ನೋಡಿ. ಭಾರತದ ಒಳಗೆ ಅಥವಾ ವಿದೇಶಕ್ಕೆ ಎಲ್ಲಿಗೆ ಬೇಕಾದರೂ ಪ್ರವಾಸ ಕೈಗೊಳ್ಳಲು ಅಗತ್ಯವಾದ ಮಾಹಿತಿಗಳು, ನಿಮ್ಮ ಪ್ರಶ್ನೆಗೆ ತಕ್ಕ ಉತ್ತರಗಳು, ಪ್ಯಾಕೆಜ್ ಗಳು ಇಲ್ಲಿ ಲಭ್ಯ.

ಯೂನಿವರ್ಸಲ್ ಸ್ಟಾಂಪ್ಸ್.ಕಾಂ

ಹಳೆಯ ಅಂಚೆ ಚೀಟಿಗಳನ್ನು ಸಂಗ್ರಹಿಸುವ ಹವ್ಯಾಸ ಇದೆಯಾ? ಬಗೆಬಗೆಯ ಅಂಚೆಚೀಟಿಗಳನ್ನು ನೋಡುವ ಆಸಕ್ತಿ ಇದೆಯಾ? ಹಾಗಾದರೆ ಈ ಅಂಚೆಯ ತಾಣಕ್ಕೊಮ್ಮೆ ಭೇಟಿ ನೀಡಿ. ಐವತ್ತು ವರ್ಷಕ್ಕೂ ಹಳೆಯದಾದ ಅಂಚೆಚೀಟಿಗಳು ಇಲ್ಲಿವೆ. ಬೇಕಾದ್ದನ್ನು ಬೆಲೆ ತೆತ್ತು ಕೊಂಡುಕೊಳ್ಳಬಹುದು.

ಗ್ರಾಮರ್.ಕಾಂ

ನಿಮಗೆ ಸೊಡಕು ಬಿಡಿಸುವುದು ಇಷ್ಟವೇ? ಹಾಗೆಯೇ ಪದಗಳೊಂದಿಗೆ ಆಡುವ ಹವ್ಯಾಸವೂ ಇದೆಯೇ? ಹಾಗಾದರೆ ಇಲ್ಲಿದೆ ಒಂದು ಅಪರೂಪದ ತಾಣ. ಪದಮೂಲವನ್ನು ಹುಡುಕಿಕೊಂಡು ಹೋದಂತೆ ಹಲವು ಕುತೂಹಲಕರ ವಿಷಯಗಳೂ ತಿಳಿಯುತ್ತವೆ. ಸುಮ್ಮನೆ ಒಂದು ಪದವನ್ನು ಟೈಪಿಸಿ ಸರ್ಚಿಗೆ ಕೊಟ್ಟು ನೋಡಿ.

ಕಿಡ್ಸ್ ಪೇಜ್.ಕಾಂ

ನಿಮ್ಮ ಪುಟಾಣಿ ಮಕ್ಕಳಿಗೆ ಆಟವಾಡಲು, ಬಣ್ಣ ತುಂಬಲು, ಕಥೆ ಕೇಳಲು ಇಲ್ಲೊಂದು ಅಪರೂಪದ ತಾಣವಿದೆ. ಜೊತೆಗೆ ಮಕ್ಕಳಿಗೆ ಸಂಬಂಧಪಟ್ಟ ಅನೇಕ ಮಾಹಿತಿಗಳೂ ಇವೆ. ಮಕ್ಕಳಿಗೆ ಈ ತಾಣ ಇಷ್ಟವಾಗುತ್ತದೆ. ಆದರೆ ಮಕ್ಕಳನ್ನು ಕಂಪ್ಯೂಟರ್ ಗೇಮ್‌ನಿಂದ ಆದಷ್ಟು ದೂರವಿಡುವುದು ಒಳ್ಳೆಯದು.

ಮ್ಯಾಪ್ಸ್ ಆಫ್ ಇಂಡಿಯಾ.ಕಾಂ

ನೀವು ಭಾರತದ ಯಾವುದಾದರೊಂದು ನಗರಕ್ಕೆ ತುರ್ತಾಗಿ ಹೋಗಬೇಕಾಗಿ ಬಂದಿದೆ ಎಂದಿಟ್ಟುಕೊಳ್ಳಿ. ಅಲ್ಲಿ ಯಾವುದೋ ಒಂದು ಸಂಸ್ಥೆಯ ವಿಳಾಸ ಹುಡುಕಬೇಕಾಗಿರುತ್ತದೆ? ವಿಳಾಸ ಕೈಯಲ್ಲಿದೆ, ಆದರೆ ಕರಾರುವಕ್ಕಾಗಿ ಆ ಸ್ಥಳ ಎಲ್ಲಿದೆ ಅಂತ ಗೊತ್ತಿಲ್ಲ. ಇಲ್ಲಿದೆ ಒಂದು ಅಪರೂಪದ ತಾಣ. ವಿಳಾಸ ಇಲ್ಲದಿದ್ದರೂ ಪರವಾಗಿಲ್ಲ. ವಿಳಾಸದ ಜೊತೆಗೆ ಆ ಸ್ಥಳದ ನಕಾಶೆಯನ್ನೂ ಇಲ್ಲಿ ನೀಡಲಾಗಿರುತ್ತದೆ. ಜೊತೆಗೆ ಅಗತ್ಯ ಮಾಹಿತಿಗಳೂ. ಕುತೂಹಲಕ್ಕೆ ಒಮ್ಮೆ ಭೇಟಿ ಕೊಟ್ಟು ನೋಡಿ.

ಮೈಸೂರ್.ಕಾಂ

ದಸರೆಗೆ ಮೈಸೂರು ಅಣಿಯಾಗುತ್ತಿದೆ. ಮೈಸೂರಿನ ಬಗ್ಗೆ ತಿಳಿದುಕೊಳ್ಳಲು, ಇಲ್ಲಿನ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಪಡೆಯಲು ಇಲ್ಲಿದೆ ಒಂದು ಅಪರೂಪದ ತಾಣ. ಮೈಸೂರಿನ ಕಲೆ, ಸಾಹಿತ್ಯ, ರಾಜವಂಶಸ್ಥರು, ಶ್ರೀರಂಗಪಟ್ಟಣ, ನಂಜನಗೂಡಿನ ಕುರಿತ ಮಾಹಿತಿಗಳು, ಅಪರೂಪದ ವಸ್ತುಸಂಗ್ರಹಾಲಯಗಳು, ನಗರದ ಹೊಟೇಲ್‌ಗಳು ಇನ್ನೂ ಸಾಕಷ್ಟು ಮಾಹಿತಿಗಳು ಈ ತಾಣದಲ್ಲಿ ಲಭ್ಯ. ಕುತೂಹಲಕ್ಕೆ ಒಮ್ಮೆ ಭೇಟಿ ಕೊಟ್ಟು ನೋಡಿ.

ಬ್ಯಾಕ್‌ಪಾಕಿಟ್.ಕಾಂ

ನಿಮಗೆ ಸ್ವಂತದೊಂದು ಕಂಪನಿ ಇದೆಯೇ? ಅಥವಾ ಕಂಪನಿಯೊಂದರಲ್ಲಿ ದೊಡ್ಡ ಹುದ್ದೆಯಲ್ಲಿರುವಿರಾ? ಕಂಪನಿಯ ವ್ಯವಹಾರಗಳು, ಅದಕ್ಕೆ ಸಂಬಂಧಿಸಿದ ವಿವರಗಳು, ಹೊಸ ವ್ಯವಹಾರಿಕ ಯೋಜನೆಗಳು, ಆಯವ್ಯಯಗಳು, ಅಭಿಪ್ರಾಯಗಳು ಇತ್ಯಾದಿಗಳೆಲ್ಲವನ್ನೂ ಅಚ್ಚುಕಟ್ಟಾಗಿ ಜೋಡಿಸಿ, ನಿಮ್ಮ ತಂಡದೊಂದಿಗೆ ಚರ್ಚೆ ನಡೆಸಲು, ಅಂತದೊಂದು ಮಲ್ಟಿಮೀಡಿಯಾ ಸಿದ್ಧ ಪಾಠ ರೂಪಿಸಲು ಅನುಕೂಲವಾಗುವಂತ ಅಪರೂಪದ ತಾಣವೊಂದು ಇಲ್ಲಿದೆ. ಉಚಿತವಾಗಿ ಈ ತಂತ್ರಾಂಶವನನ್ನು ಡೌನ್ ಲೋಡ್ ಕೂಡ ಮಾಡಿಕೊಳ್ಳಬಹುದು.

ಮೆನಿಬುಕ್ಸ್.ನೆಟ್

ಇಂಗ್ಲಿಷ್ ಹಳೆಯ ಕ್ಲಾಸಿಕ್ ಕೃತಿಗಳನ್ನು ಹುಡುಕುವುದು ಸ್ವಲ್ಪ ಕಷ್ಟದ ಕೆಲಸವೆ. ಇನ್ನೂ ಬೇಕಾದ ಲೇಖನ ಕಥೆ, ಕವಿತೆಗಳನ್ನು ಎಲ್ಲಿ ಹುಡುಕುವುದು. ಅದಕ್ಕೊಂದು ಜಾಲತಾಣ ಇಲ್ಲಿದೆ. ಪ್ರಾಜೆಕ್ಟ್ ಗುಟೆನ್ ಬರ್ಗ ರೀತಿಯಲ್ಲೇ ಇಲ್ಲೂ ಸಾಕಷ್ಟು ಪುಸ್ತಕಗಳಿವೆ. ಈ ಪುಸ್ತಕಗಳು ನಿಮಗೆ ಬೇಕಾದ ಫಾರ್ಮೆಟ್‌ನಲ್ಲಿ ಲಭ್ಯ. ಪಿಡಿಎಫ್, ವರ್ಡ್ ಪ್ಯಾಡ್, ಇನ್ನೂ ಹತ್ತಾರು ಫಾರ್ಮೆಟ್‌ನಲ್ಲಿ ಪುಸ್ತಕಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.

ವಿಶ್ವದ ಕ್ಲಾಸಿಕ್‌ಗಳು ಎನಿಸಿಕೊಂಡು ಕಾದಂಬರಿಗಳು, ವಿವಿಧ ಭಾಷೆಗಳಿಂದ ಅನುವಾದಗೊಂಡ ಕೃತಿಗಳು ಇಲ್ಲಿ ಸಿಗುತ್ತವೆ. 20 ಹೆಚ್ಚು ವಿಭಾಗಗಳಲ್ಲಿ ಪುಸ್ತಕಗಳನ್ನು ವಿಂಗಡಿಸಲಾಗಿದೆ. ಒಮ್ಮೆ ಭೇಟಿ ಕೊಡಿ. ಬೇಕಾದ ಪುಸ್ತಕ ಡೌನ್ ಲೋಡ್ ಮಾಡಿಕೊಳ್ಳಿ. ಜತೆಗೆ ಕೆಲ ಪುಸ್ತಕಗಳ ಆಡಿಯೋ ಬುಕ್ ಕೂಡ ಈ ಸೈಟಿನಲ್ಲಿವೆ. ಇವೆಲ್ಲವೂ ಉಚಿತ. [ಈ ತಾಣವನ್ನು ಪರಿಚಯಿಸಿದವರು - ಕುಮಾರ್ ಎಸ್]

ಪ್ರೊ. ವೆಂಕಟಸುಬ್ಬಯ್ಯ ಆನ್‌ಲೈನ್ ನಿಘಂಟು

ನೀವು ಜಾಲಿಗರೇ? ಹಾಗಾದರೆ ನಿಮಗಿದೆ ಇಲ್ಲೊಂದು ಅಪರೂಪದ ಕನ್ನಡ ತಾಣ. ಇದು ಬೇರೆ ಯಾವುದೂ ಅಲ್ಲ, ಪ್ರೊ.ಜಿ. ವೆಂಕಟಸುಬ್ಬಯ್ಯ ಕನ್ನಡ- ಇಂಗ್ಲಿಷ್ ಆನ್‌ಲೈನ್ ನಿಘಂಟು. ಲೇಖನ ಓದುತ್ತಿರುವಾಗ ಯಾವುದಾದರೂ ಇಂಗ್ಲಿಷ್ ಪದಕ್ಕೆ ಕನ್ನಡ ಅರ್ಥ ಗೊತ್ತಾಗದಿದ್ದರೆ ಇಲ್ಲಿ ಪೇಸ್ಟ್ ಮಾಡಿ ಸರ್ಚಿಗೆ ಕೊಟ್ಟರೆ ಸಾಕು, ಕ್ಷಣಮಾತ್ರದಲ್ಲಿ ಅರ್ಥ ಹುಡುಕಿ ಕೊಡುತ್ತದೆ. ಜೊತೆಗೆ ಈ ತಾಣದ ಬಲ ತುದಿಯಲ್ಲಿ ಕನ್ನಡ ಬ್ಲಾಗುಗಳ ಕೊಂಡಿಯೂ ಇದೆ. ಒಮ್ಮೆ ಭೇಟಿ ಕೊಟ್ಟು ನೋಡಿ.

೯೯ ರೆಸ್ಯೂಮ್.ಕಾಂ

ಒಂದು ಮಾದರಿ ರೆಸ್ಯೂಮ್ ಹೇಗಿರಬೇಕು? ಏನನ್ನು ಒಳಗೊಂಡಿರಬೇಕು? ಅದಕ್ಕೊಂದು ಚೆಂದದ ಕವರ್ ಲೆಟರ್ ಬರೆಯುವುದು ಹೇಗೆ? ಬೇರೆ ಬೇರೆ ಹುದ್ಧೆಗಳಿಗೆ ಭಿನ್ನವಾದ ರೆಸ್ಯೂಮ್ ಸಿದ್ಧಪಡಿಸುವುದು ಹೇಗೆ, ಹೀಗೆ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಈ ತಾಣ ಉತ್ತರಿಸಲಿದೆ.

ಕಾರ್ಟೂನ್ ಸ್ಟೋಕ್.ಕಾಂ

ವ್ಯಂಗ್ಯಚಿತ್ರ ಯಾರಿಗೆ ಇಷ್ಟವಿಲ್ಲ ಹೇಳಿ. ನೂರು ಪದದಲ್ಲಿ ಹೇಳುವುದನ್ನು ಎರಡು ರೇಖೆ ಹೇಳಿಬಿಡುತ್ತದೆ. ಇಂತೊಂದು ತಾಣ ಇಲ್ಲಿದೆ. ರಾಜಕೀಯ, ವ್ಯವಹಾರ, ಇತಿಹಾಸ ಹೀಗೆ ಹಲವು ಕ್ಷೇತ್ರಕ್ಕೆ ಸಂಬಂಧಪಟ್ಟ ವ್ಯಂಗ್ಯ ಚಿತ್ರಗಳಿಗವೆ. ಖ್ಯಾತ ವ್ಯಂಗ್ಯಚಿತ್ರಕಾರರ ಪರಿಚಯವೂ ಇದೆ. ಒಮ್ಮೆ ಭೇಟಿ ಕೊಟ್ಟು ನೋಡಿ

ವೈಸಸ್ ಫ್ರಮ್ ದ ವಾಟರ್.ಕಾಂ

`ವೈಸಸ್ ಫ್ರಮ್ ದ ವಾಟರ್` ಎನ್ನುವ ಜಲ ಚಿತ್ರೋತ್ಸವ ಶನಿವಾರ, ೧೩-೦೯-೦೮ ರಂದು ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಸೆಂಟ್ರಲ್ ಕಾಲೇಜಿನ ಸಭಾಂಗಣದಲ್ಲಿ ಆರು ದಿನಗಳ ಕಾಲ ನಡೆಯಲಿದೆ. ಜಲಸಂರಕ್ಷಣೆ ಮತ್ತು ಜಲಸಾಕ್ಷರತೆ ಈ ಚಿತ್ರೋತ್ಸವದ ಪ್ರಮುಖ ಆಶಯ. ವಾಟರ್ ಫಿಲಂ ಫೆಸ್ಟಿವಲ್ ಕುರಿತು ತಿಳಿದುಕೊಳ್ಳಲು ಆಸಕ್ತಿ ಇರುವವರು ಈ ತಾಣ ನೋಡಬಹುದು.

ಕೆಎಸ್‌ಒಯು.ಕಾಂ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಹಲವು ವಿಷಯಗಳಲ್ಲಿ ಅಂಚೆ ಮೂಲಕ ಪದವಿ, ಡಿಪ್ಲೋಮಾ, ಹಾಗೂ ಸ್ನಾತಕೋತ್ತರ ತರಬೇತಿಗಳನ್ನು ನೀಡುತ್ತಿದೆ. ದೂರಶಿಕ್ಷಣದ ಮೂಲಕ ಶಿಕ್ಷಣ ಮುಂದುವರೆಸಬೇಕೆನ್ನುವ ಆಸೆ ನಿಮ್ಮದಾದರೆ ಇಲ್ಲಿದೆ ನಿಮಗೆ ಈ ಅಪರೂಪದ ತಾಣ. ಇತ್ತೀಚೆಗೆ ಕೆಎಸ್‌ಒಯುನ ಜಾಲತಾಣ ಕೂಡ ನವೀಕರಣಗೊಂಡಿದೆ. ಕ್ಷಣಮಾತ್ರದಲ್ಲಿ ನೀವು ಹುಡುಕುತ್ತಿರುವ ಕೋರ್ಸು, ಅದಕ್ಕೆ ಸಂಬಂಧಿಸಿದ ಮಾಹಿತಿಗಳು, ಪ್ರವೇಶಾತಿ ದಿನಾಂಕ, ಶುಲ್ಕ ಮತ್ತಿತರ ಮಾಹಿತಿಗಳು ಲಭ್ಯವಾಗುತ್ತದೆ. ಒಮ್ಮೆ ಭೇಟಿಕೊಟ್ಟು ನೋಡಿ.

ಏರ್ ಇಂಡಿಯಾ.ಕಾಂ
ಒಮ್ಮೆ ವಿಮಾನವೇರಿ ದೇಶವನ್ನು ಸುತ್ತಬೇಕೆನ್ನುವ ಆಸೆ ಮೂಡುತ್ತಿದೆಯಾ? ಇನ್ನು ತಡ ಯಾಕೆ ನೀವು ಕುಳಿತಲ್ಲಿಂದಲೇ ಏರ್ ಇಂಡಿಯಾ ಟಿಕೇಟುಗಳನ್ನು ಬುಕ್ ಮಾಡಬಹುದು. ಭಾರತದಿಂದ ಬೇರೆ ಬೇರೆ ದೇಶಗಳಿಗೆ ಏರ್ ಇಂಡಿಯಾ ಒದಗಿಸುತ್ತಿರುವ ವಿಮಾನಸೇವೆ, ದರ, ಹಾಗೂ ವಿಶೇಷ ರಿಯಾಯತಿ ಕೊಡುಗೆಗಳಿಗಾಗಿ ಈ ತಾಣ ನೋಡಿ.

ಜಿಬ್ ಜಾಬ್.ಕಾಂ

ಅಮೆರಿಕಾದ ಚುನಾವಣೆ ಸಮೀಪಿಸುತ್ತಿರೋ ಈ ಹೊತ್ತಲ್ಲಿ , ಅಲ್ಲಿ ಚುನಾವಣಾ ಖದರು ಹೇಗಿದೆ? ಅನ್ನೋದರಿಂದ ಹಿಡಿದು ವಿಶ್ವ ರಾಜಕೀಯ ರಂಗದ ವಿವಿಧ ಗಾಸಿಪ್ ಗಳ ವರೆಗೆ ಎಲ್ಲ ನಗತಕ್ಕ ರಾಜಕೀಯ ಕಸರತ್ತುಗಳ ತಮಾಷಾತ್ಮಕ ಚಿತ್ರಗಳು, ವಿಡಿಯೋ ತುಣುಕುಗಳು ಇತ್ಯಾದಿ ಎಲ್ಲವೂ ಇಲ್ಲಿದೆ. ಮೆಚ್ಚಿಕೊಂಡದ್ದನ್ನು ಇಷ್ಟಪಟ್ಟವರಿಗೆ ಮೇಲ್ ಕೂಡ ಮಾಡಬಹುದು. ನಗುವಿನ ಪ್ರಚಾರ ನೋಡಬನ್ನಿ.

ಗೆಟ್‌ ನೆಟ್‌ವೈಸ್.ಕಾಂ

ನಿಮಗೆ ಬರುವ ಅನವಶ್ಯಕ ಇ-ಮೇಲ್‌ಗಳನ್ನು ತಡೆಯುವುದು ಹೇಗೆ? ನಿಮ್ಮ ಗಣಕಯಂತ್ರಕ್ಕೆ ವೈರಸ್‌ಗಳು ಸೇರಿಕೊಳ್ಳದಂತೆ ಎಚ್ಚರಿಕೆ ವಹಿಸುವುದು ಹೇಗೆ? ಮಾಹಿತಿ ಹಾಗೂ ಖಾಸಗಿ ದಾಖಲೆಗಳನ್ನು ಸಂರಕ್ಷಿಸುವುದು ಹೇಗೆ? ಅಂತರ್ಜಾಲದಲ್ಲಿ ಮಾಹಿತಿ ಹುಡುಕುವಾಗ ವಹಿಸಬೇಕಾದ ಎಚ್ಚರಿಕೆಗಳೇನು? ಒಳ್ಳೆಯ ತಾಣಗಳಾವವು? ಇತ್ಯಾದಿ ಅನೇಕ ವಿಷಯಗಳ ಬಗ್ಗೆ ಈ ತಾಣ ಉಪಯುಕ್ತ ಮಾಹಿತಿ ನೀಡುತ್ತದೆ.

ವೆಡ್ಡಿಂಗ್ ಪ್ಲಾನರ್.ಕಾಂ

ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು ಅಂತಾರೆ. ಈಗೀಗ ವಿವಾಹವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಜವಾಬ್ದಾರಿಯನ್ನು ವೆಡ್ಡಿಂಗ್ ಪ್ಲಾನರ್‌ಗಳಿಗೆ ವಹಿಸಿ ಕೊಡುತ್ತಿದ್ದಾರೆ. ಹಣ ಖರ್ಚು ಮಾಡಲು ನೀವು ತಯಾರಿದ್ದಾರೆ ಭಾರತದಲ್ಲಿ ಇಂತಹ ಬೇಕಾದಷ್ಟು ನಿರ್ವಹಣ ಸಂಸ್ಥೆಗಳಿವೆ. ಆದರೆ ಇಂತಹ ವಿವಾಹ ನಿರ್ವಾಹಕರನ್ನು ಆರಿಸುವ ಮೊದಲು ಅವರ ಬಗ್ಗೆ ತಿಳಿದುಕೊಳ್ಳಿ. ನಿಮ್ಮ ಕುತೂಹಲಕ್ಕೆ ಇಲ್ಲೊಂದು ತಾಣವಿದೆ.

ಇಂಡಿಯನ್‌ಏಜ್.ಕಾಂ

ಭಾರತದ ಇತಿಹಾಸದಲ್ಲಿ ಇಂದಿನ ದಿನದ ವಿಶೇಷತೆ ಏನು? ಥಟ್ಟನೆ ಈ ಮಾಹಿತಿಗೆ ಉತ್ತರ ಹುಡುಕುವುದು ಎಲ್ಲಿ? ಚಿಂತೆ ಬಿಡಿ, ಇಲ್ಲೊಂದು ಅಪರೂಪದ ತಾಣವಿದೆ, ದಿನನಿತ್ಯದ ಇತಿಹಾಸದ ಮಾಹಿತಿಯನ್ನೊದಗಿಸುವ ತಾಣವಿದು. ಬೃಹತ್ ಮಾಹಿತಿ ಸಂಗ್ರಹ ಇಲ್ಲಿದೆ. ಕುತೂಹಲಕ್ಕೆ ಒಮ್ಮೆ ಭೇಟಿಕೊಟ್ಟು ನೋಡಿ.

ವರ್ಲ್ಡ್ ಬೆಸ್ಟ್ ವೆಬ್‌ಸೈಟ್.ಕಾಂ

ಜಗತ್ತಿನ ಕೋಟ್ಯಾನುಕೋಟಿ ಜಾಲತಾಣಗಳಲ್ಲಿ ಯಾವುದು ಒಳ್ಳೆಯದು? ಸುದ್ದಿ, ಮನೋರಂಜನೆ, ಶಿಕ್ಷಣ, ಮಾಹಿತಿ, ತಂತ್ರಜ್ಞಾನ ಈ ಕ್ಷೇತ್ರದಲ್ಲಿನ ಅತ್ಯುತ್ತಮ ಸೈಟ್ ಯಾವುದು ಎನ್ನುತ್ತೀರಾ? ಇಲ್ಲಿದೆ ಜಗತ್ತಿನ ಬೆಸ್ಟ್ ವೆಬ್‌ಸೈಟ್‌ಗಳ ಕೊಂಡಿ. ನಿಮ್ಮ ಕುತೂಹಲಕ್ಕೆ ಒಮ್ಮೆ ಭೇಟಿಕೊಟ್ಟು ನೋಡಿ.

ಇಂಡಿಯನ್ ಡಿಕ್ಷನರಿ.ಕಾಂ

ಭಾರತದ ವಿವಿಧ ಇಲಾಖೆಗಳು, ಪ್ರಧಾನಮಂತ್ರಿ, ರಾಷ್ಟ್ರಪತಿ, ರಾಜ್ಯಸಭೆ, ಲೋಕಸಭೆ, ಸರ್ವೋಚ್ಛ ನ್ಯಾಯಾಲಯದ ಜಾಲತಾಣಗಳ ಕೊಂಡಿ ಇಲ್ಲಿದೆ. ಸಾರ್ವಜಿಕ ಆಡಳಿತ, ಪ್ರವಾಸೋದ್ಯಮ, ಶಿಕ್ಷಣ, ವೈಜ್ಞಾನಿಕ ಕ್ಷೇತ್ರಗಳ ಮಾಹಿತಿಗಾಗಿ ನೀವು ಹುಡುಕುತ್ತಿದ್ದರೆ ಈ ತಾಣಕ್ಕೊಮ್ಮೆ ಭೇಟಿ ಕೊಟ್ಟು ನೋಡಿ.


ವರ್ಲ್ಡ್ ಪಬ್ಲಿಕ್ ಒಪಿನಿಯನ್.ಕಾಂ

ವಿಶ್ವದಾದ್ಯಂತ ನಡೆಯುವ ಪ್ರಚಲಿತ ಘಟನೆಗಳ ಕುರಿತು ಸಾಮಾನ್ಯ ಜನರ ಅಭಿಪ್ರಾಯ ಏನಿರಬಹುದು? ಕಾಶ್ಮೀರ ಸಮಸ್ಯೆ ಬಗ್ಗೆ ಬೇರೆ ದೇಶಗಳ ಜನ ಏನು ಹೇಳಬಹುದು? ಇರಾಕಿನಲ್ಲಿ ಅಮೆರಿಕಾ ಸೈನಿಕರ ಪಾರುಪತ್ಯೆ ಎಷ್ಟು ಸರಿ? ಇದೆಲ್ಲದರ ಬಗ್ಗೆ ತಿಳಿಯುವ ಕುತೂಹಲವೇ? ಹಾಗಾದರೆ ಈ ತಾಣಕ್ಕೊಮ್ಮೆ ಭೇಟಿ ಕೊಡಿ. ಪ್ರಪಂಚದ ಓದುಗ ಸಮುದಾಯದ ಧ್ವನಿಯಾಗುವ ಆಶಯ ಹೊತ್ತು ಈ ತಾಣ ಕೆಲಸ ಮಾಡುತ್ತಿದೆ.

ಇಂಡಿಯನ್ ಸ್ಪೋರ್ಟ್ಸ್.ಕಾಂ

ನಿಮಗೆ ಕ್ರೀಡೆಗಳು ಮತ್ತು ಕ್ರೀಡಾಪಟುಗಳೆಂದೆರೆ ಆಸಕ್ತಿ ಇದೆಯೇ? ಕ್ರೀಡೆಯಲ್ಲಿ ಭಾರತದ ಸಾಧನೆ? ಭಾರತೀಯ ಕ್ರೀಡಾಪಟುಗಳು, ವಿವಿಧ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟಗಳು, ಭಾರತದ ಕ್ರೀಡಾ ತಾಣಗಳ ಬಗ್ಗೆ ತಿಳಿದುಕೊಳ್ಳಬೇಕೇ ಇಲ್ಲಿದೆ ನೀವು ಹುಡುಕುತ್ತಿರುವ ಕೊಂಡಿ

ಇಂಡಿಯಾ ಫಾರ್ ಯೂ.ಕಾಂ


ಭಾರತದ ವಿವಿಧ ವಿಶ್ವವಿದ್ಯಾಲಯಗಳು, ಮೆಡಿಕಲ್, ಇಂಜಿನಿಯರಿಂಗ್, ಡೆಂಟಲ್ ಕಾಲೇಜುಗಳು, ನರ್ಸಿಂಗ್ ತರಬೇತಿ ನೀಡುವ ಸಂಸ್ಥೆಗಳು, ವಿವಿಧ ಮಹಾವಿದ್ಯಾಲಯಗಳ ಕುರಿತು ಮಾಹಿತಿಯನ್ನು ಈ ತಾಣ ನಿಮಗೆ ನೀಡುತ್ತದೆ. ಒಮ್ಮೆ ಭೇಟಿ ನೀಡಿ.

ನ್ಯಾಷನಲ್ ಜಿಯಾಗ್ರಾಫಿಕ್ಸ್. ಕಾಂ

ವನ್ಯ ಜಗತ್ತಿನ ಸಮಸ್ತ ಕೌತುಕಗಳು, ರೋಚಕ ಸುದ್ದಿ ತುಣುಕುಗಳು, ಹೊಸ ಹೊಸ ಶೋಧ-ಸಂಶೋಧನೆಗಳು ಮತ್ತು ಮಾಹಿತಿಯುಕ್ತ ಸುದ್ದಿಗಳ ಬಗ್ಗೆ ತಿಳಿಯಬೇಕಿದ್ದಲ್ಲಿ ಈ ತಾಣಕ್ಕೊಮ್ಮೆ ತಪ್ಪದೇ ಭೇಟಿ ನೀಡಿ. ಶಿಕ್ಷಣ, ಮಾಹಿತಿ ಮತ್ತು ಮನೋರಂಜನೆ ಎಲ್ಲಕ್ಕೂ ಇಲ್ಲಿ ಅವಕಾಶವಿದೆ.

ಸ್ಕಾಲರ್‌ಶಿಫ್ ಇಂಡಿಯಾ.ಕಾಂ

ಭಾರತದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲಭ್ಯವಿರುವ ವಿವಿಧ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿ ಒದಗಿಸುತ್ತದೆ ಈ ತಾಣ. ಮೆಡಿಕಲ್, ಇಂಜಿನಿಯರಿಂಗ್, ವ್ಯವಹಾರ ನಿರ್ವಹಣೆ, ಕಲಾಶಾಸ್ತ್ರ ಹೀಗೆ ಏನೇ ಒದುತ್ತಿರಲಿ, ಸರಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳು ನೀಡುವ ವಿದ್ಯಾರ್ಥಿ ವೇತನಗಳ ಕುರಿತು ತಿಳಿಯಲು ಈ ತಾಣವನ್ನೊಮ್ಮೆ ನೋಡಿ.

ಮಕಾನ್.ಕಾಂ

ಭಾರತದ ರಿಯಲ್ ಎಸ್ಟೇಟ್ ವ್ಯವಹಾರದ ತಾಜಾ ಸುದ್ದಿಗಳನ್ನ ಹುಡುಕುವವರಿಗೆ ಇನ್ನೊಂದು ವಾಣಿಜ್ಯ ತಾಣದ ಪರಿಚಯ. ಆಸ್ತಿಗಳ ಕೊಡು-ಕೊಳ್ಳುವಿಕೆ, ಬಾಡಿಗೆ, ಬೋಗ್ಯ ಇತ್ಯಾದಿ ವ್ಯವಹಾರಗಳಿಗಾಗಿ ಈ ತಾಣವನ್ನ ಬಳಸಿಕೊಳ್ಳಬಹುದು. ದೇಶದ ಪ್ರಮುಖ ನಗರಗಳಲ್ಲಿ ಆಸ್ತಿಗಳ ಬೆಲೆ, ನಿಮ್ಮ ವೆಚ್ಚಕ್ಕೆ, ಇಚ್ಛೆಗೆ ಸರಿದೂಗುವಂತ ಮನೆ/ನಿವೇಶನದ ಖರೀದಿ ಕುರಿತ ಮಾಹಿತಿಗೆ ಕೂಡ ಇಲ್ಲೊಮ್ಮೆ ಇಣುಕಬಹುದು. 

ಎಜುಕೇಶನ್ ಫಾರ್ ಫ್ರೀ.ಕಾಂ

ಎಜುಕೇಶನ್ ಫಾರ್ ಫ್ರೀ ಎನ್ನುವ ದ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯೊಂದಿಗೆ ಕೈಜೋಡಿಸಿ ನೀವೂ ಮಕ್ಕಳಿಗೆ ಪಾಠ ಮಾಡಬಹುದು. ಇದಕ್ಕಾಗಿ ನೀವು ವಾರದಲ್ಲಿ ಒಂದರ್ಥ ಗಂಟೆ ಮೀಸಲಿಟ್ಟರೂ ಸಾಕು. ಈ ಅಂತರ್ಜಾಲ ಶಿಕ್ಷಣದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ತಾಣಕ್ಕೊಮ್ಮೆ ಭೇಟಿ ಕೊಡಿ.

ವೆಬ್ ಎಂಡಿ.ಕಾಂ

ಆರೋಗ್ಯದ ಬಗ್ಗೆ ಸದಾ ಕಾಳಜಿ ಹೊಂದಿರುತ್ತಿರಾ? ಹಾಗಾದರೇ ಈ ಆರೋಗ್ಯ ಸಂಬಂಧಿ ತಾಣಕೊಮ್ಮೆ ತಪ್ಪದೇ ಭೇಟಿ ನೀಡಿ. ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಕುರಿತಾದ ಸಮಗ್ರ ಮಾಹಿತಿ ಇಲ್ಲುಂಟು. ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದ ವಿವರಗಳು, ವೈದ್ಯರ ಪರಿಹಾರೋಪಾಯಗಳು, ಒಂದಿಷ್ಟು ಹೆಲ್ತಿ ಟಿಪ್ಸ್ ಎಲ್ಲವೂ ಇಲ್ಲಿ ಸಿಗುತ್ತದೆ.


ಹೆಲ್ತ್ ಆಂಡ್ ಫ್ಯಾಮಿಲಿ ವೆಲ್‌ಫೇರ್.ಕಾಂ


ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯೋಜನೆಗಳ ಬಗ್ಗೆ ತಿಳಿದುಕೊಳ್ಳಬೇಕೇ? ವಿವಿಧ ಆರೋಗ್ಯ ಯೋಜನೆಗಳು ಅವುಗಳ ಮಾಹಿತಿಗಳು, ಆರೋಗ್ಯ ಅಭಿಯಾನ, ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಈ ತಾಣ ಮಾಹಿತಿ ನೀಡುತ್ತದೆ.

ಟೀಚರ್ಸ್.ಕಾಂ

ನೀವು ಶಿಕ್ಷಕರೇ, ಹಾಗಿದ್ದರೆ ನಿಮಗಿದೆ ಇಲ್ಲೊಂದು ಅಪರೂದ ತಾಣ. ಮಕ್ಕಳಿಗೆ ಹೇಗೆ ಪಾಠ ಮಾಡಬೇಕು ಎನ್ನುವುದರಿಂದ ಹಿಡಿದು ಒಂದಿಷ್ಟು ಬೋಧನಾ ಸಲಕರಣೆಗಳನ್ನೂ ಡೌನ್‌ಲೋಡ್ ಮಾಡಿಕೊಳ್ಳಬಹುದು. ವಿವಿಧ ಚಾರ್ಟ್, ನಕಾಶೆಗಳು, ಪವರ್ ಪಾಯಿಂಟ್ ಪ್ರಸಂಟೇಶನ್ ಕೂಡ ಲಭ್ಯವಿದೆ. ಜೊತೆಗೊಂದಿಷ್ಟು ಟಿಪ್ಸ್ ಕೂಡ ಇದೆ. ಒಮ್ಮೆ ಭೇಟಿಕೊಟ್ಟು ನೋಡಿ.

ಗ್ರೀಟಿಂಗ್ಸ್.ಕಾಂ

ಮದುವೆ, ಗೃಹಪ್ರವೇಶ, ಹುಟ್ಟು ಹಬ್ಬ, ರಾಷ್ಟ್ರೀಯ ಹಬ್ಬಗಳು, ವಾರ್ಷಿಕೋತ್ಸವ, ಪ್ರೀತಿ, ಸ್ನೇಹ ಹೀಗೆ ನೀವು ಇಷ್ಟಪಟ್ಟವರಿಗೆ ಇಷ್ಟಪಟ್ಟ ದಿನ ಚೆಂದದೊಂದು ಗ್ರೀಟಿಂಗ್ಸ್ ಕಳುಹಿಸಬೇಕಾ? ಹಾಗಾದರೆ ಇಲ್ಲಿದೆ ಒಂದು ತಾಣ, ನಿಮಗೆ ಬೇಕಾದ ಚಿತ್ರವನ್ನು ಆಯ್ದು ಇ ಮೇಲ್ ಮಾಡಿ, ಶುಭಾಶಯ ತಿಳಿಸಿ.

ಬೆಸ್ಟ್ ಇಂಡಿಯನ್ ಸೈಟ್ಸ್.ಕಾಂ

ಭಾರತದ ಅತ್ಯುತ್ತಮ ವೆಬ್‌ಸೈಟ್‌ಗಳನ್ನು ಹುಡುಕುವುದು ಹೇಗೆ ಎನ್ನುತ್ತೀರಾ? ಕಲೆ, ಸಾಹಿತ್ಯ, ಸಂಸ್ಕೃತಿ, ಜೀವನ ಶೈಲಿ, ಮನೋರಂಜನೆ, ಶಿಕ್ಷಣ, ಉದ್ಯೋಗವಕಾಶ, ವಿವಾಹ, ವ್ಯವಹಾರ ಹೀಗೆ ನೀವು ಇಷ್ಟಪಟ್ಟ ಕ್ಷೇತ್ರದ ಕುರಿತು ಉತ್ತಮ ಮಾಹಿತಿ ನೀಡುವ ಜಾಲತಾಣಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಎಜುಕೇಶನ್. ಇನ್
ನಮ್ಮ ದೇಶದ ಶೈಕ್ಷಣಿಕ ನೀತಿಗಳು, ಯೋಜನೆಗಳು, ವಿದ್ಯಾರ್ಥಿವೇತನಗಳ ಬಗ್ಗೆ ವಿವರ ಬೇಕೇ? ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣದ ಬಗ್ಗೆ ತಿಳಿದುಕೊಳ್ಳಬೇಕೇ? ಭಾರತ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಈ ತಾಣವನ್ನೊಮ್ಮೆ ನೋಡಿ.

ವೈನ್.ಕಾಂ

ವೈನ್ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಬೇಕೇ? ಮಧುಪಾನದ ಬಗ್ಗೆ ಒಂದಿಷ್ಟು ಟಿಪ್ಸ್‌ಗಳು ಬೇಕೇ? ನಿಮ್ಮ ಕುತೂಹಲಕ್ಕೆ ಇಲ್ಲಿದೆ ಒಂದು ತಾಣ. ಹಾಗೆ ಸುಮ್ಮನೆ ಭೇಟಿಕೊಟ್ಟು ನೋಡಿ.

ಇನ್‌ಕ್ರೆಡಿಬಲ್ ಇಂಡಿಯಾ.ಕಾಂ

ಒಮ್ಮೆ ಹೀಗೇ ಸುಮ್ಮನೆ ಈ ಭಾರತವನ್ನೆಲ್ಲಾ ಸುತ್ತಬೇಕೆನ್ನುವ ಆಸೆ ಮೂಡುತ್ತದೆ ಎಂದಿಟ್ಟುಕೊಳ್ಳೋಣ. ಎಲ್ಲಿ ತಂಗಬೇಕು, ಹೇಗೆ ಪ್ರಯಾಣಿಸಬೇಕು, ಊಟಕ್ಕೇನು ಮಾಡುವುದು, ಪ್ರವಾಸಿ ಮಾಹಿತಿ ಎಲ್ಲಿ ಸಿಗುತ್ತದೆ ಎಂದೆಲ್ಲಾ ಗೊಂದಲಕ್ಕೆ ಬೀಳುವುದು ಬೇಡ. ಭಾರತ ಸರಕಾರದ ಪ್ರವಾಸೋದ್ಯಮ ಇಲಾಖೆಯ ಜಾಲ ತಾಣ ಪ್ರವೇಶಿಸಿ, ನಿಮಗೆ ಬೇಕಾದ ಮಾಹಿತಿ ಇಲ್ಲಿ ಲಭಿಸುತ್ತದೆ.

ನ್ಯೂಸ್ ಮ್ಯಾಪ್.ಕಾಂ


ಜಗತ್ತಿನ ಭೂಪಟವನ್ನು ಹಾಸಿ ಹುಡುಕಿದರೆ ಸಾಸಿವೆ ಕಾಳಿನ ಗಾತ್ರದ ಹಳ್ಳಿಗಳ ಸುದ್ದಿಯೂ ಇಲ್ಲಿ ಲಭ್ಯವಿದೆ. ನ್ಯೂಸ್ ಮ್ಯಾಪ್ ಎನ್ನುವ ಈ ಅಪರೂಪದ ತಾಣದಲ್ಲಿ ಎಲ್ಲಾ ದೇಶಗಳ ಎಲ್ಲಾ ಸುದ್ದಿಗಳಿವೆ. ಹುಡುಕುವುದು ಸ್ವಲ್ಪ ಶ್ರಮದಾಯಕವಾದರೂ ಕೂತೂಹಲ ಕೆರಳಿಸುವ ತಾಣವಿದು. ಒಮ್ಮೆ ಭೇಟಿ ಕೊಟ್ಟು ನೋಡಿ.

ಆನ್‌ಲೈನ್ ಶಾಪಿಂಗ್.ಕಾಂ
ಅಂತರ್ಜಾಲದಲ್ಲಿ ಒಮ್ಮೆ ಆರಾಮವಾಗಿ ಶಾಪಿಂಗ್ ಮಾಡಬೇಕೇ? ಹಾಗಾದರೆ ಇ-ಬೆಗಿಂತ ಉತ್ತಮ ತಾಣ ಮತ್ಯಾವುದಿದೆ? ಮಕ್ಕಳಾಟಿಕೆಯಿಂದ ಸೊಳ್ಳೆಬತ್ತಿಯವರಗೆ ನೀವು ಇಲ್ಲಿ ಏನನ್ನು ಬೇಕಾದರೂ ಕೊಳ್ಳಬಹದು. ಕ್ರೆಡಿಟ್ ಕಾರ್ಡ್ ಕೈಯಲ್ಲಿದ್ದರೆ ಒಮ್ಮೆ ಭೇಟಿಕೊಟ್ಟು ನೋಡಿ. ಆನ್‌ಲೈನ್ ಶಾಪಿಂಗ್ ಆನಂದ ಸವಿಯಿರಿ. ನಿಮ್ಮ ಕುತೂಹಲಕ್ಕೆ ಕೊಂಡಿ ಇಲ್ಲಿದೆ.

ಹಣ ಉಳಿಸಿ.ಕಾಂ

ಹೇಗಾದರೂ ಮಾಡಿ ಒಂದಿಷ್ಟು ಹಣ ಉಳಿಸಬೇಕು ಎನ್ನುತ್ತೀರಾ? ಆದರೆ ಏನು ಮಾಡಲಿ ನನ್ನ ಕೈಯಲ್ಲಿ ದುಡ್ಡೇ ನಿಲ್ಲುವುದಿಲ್ಲ ಎಂಬ ಚಿಂತೆ ನಿಮ್ಮದೇ? ಚಿಂತೆ ಬಿಡಿ, ಹೇಗೆ ಹಣ ಉಳಿಸಬಹುದು ಎನ್ನುವುದನ್ನು ತಿಳಿದುಕೊಳ್ಳಲು ಇಲ್ಲಿದೆ ಒಂದು ಪ್ರಸಿದ್ಧ ಜಾಲತಾಣ.

ತತ್ವಜ್ಞಾನಿಗಳನ್ನು ಕೇಳಿ.ಕಾಂ

ನಿಮಗೆ ತತ್ವಶಾಸ್ತ್ರದ ಕುರಿತು ಆಸಕ್ತಿ ಇದೆಯಾ? ನಿಮ್ಮಲ್ಲೂ ಆನೇಕ ಪ್ರಶ್ನೆಗಳಿವೆಯಾ? ಹಾಗಾದರೆ ಇಲ್ಲಿದೆ ಒಂದು ಅಪರೂದ ತಾಣ. ನಿಮ್ಮ ಪ್ರಶ್ನೆಗೆ ತತ್ವಶಾಸ್ತ್ರದಲ್ಲಿ ಉನ್ನತ ಪದವಿ ಪಡೆದವರು ಉತ್ತರಿಸಲಿದ್ದಾರೆ. ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

ಕುಕ್ ಬುಕ್ಸ್.ಕಾಂ

ಹೊಸ ಹೊಸ ಅಡುಗೆಗಳನ್ನು ಕಲಿತುಕೊಳ್ಳುವುದು ಹೇಗೆ ಎನ್ನುತ್ತೀರಾ? ರೆಸಿಫಿ ಪುಸ್ತಕಗಳನ್ನು ಓದಿ ಓದಿ ಬೇಸರವಾಗಿದ್ದೀರಾ? ಇಲ್ಲೊಂದು ಅಪರೂಪದ ತಾಣವಿದೆ, ಕ್ಯಾಲಿಫೂರ್ನಿಯಾದ ಕುಕ್ ಒಬ್ಬರು ನಡೆಸುತ್ತಿರುವ ತಾಣ ಇದು. ಕುತೂಹಲಕ್ಕೆ ಒಮ್ಮೆ ಭೇಟಿಕೊಟ್ಟು ನೋಡಿ.

ಗುಡ್ ವೆಬ್‌ಸೈಟ್ಸ್‌.ಕಾಂ

ಮಿಲಿಯನ್ ಗಟ್ಟಲೆ ವೆಬ್‌ಸೈಟ್‌ಗಳಿರುವ ಅಂತರ್ಜಾಲದಲ್ಲಿ ಯಾವುದು ಒಳ್ಳೆಯ ತಾಣ ಎಂದು ಹುಡುಕುವುದು ಕಷ್ಟ. ಅದರಲ್ಲೂ ನಿಮಗೆ ಯಾವುದೋ ಒಂದು ವಿಷಯದ ಕುರಿತು ಮಾಹಿತಿ ಬೇಕಾಗಿರುತ್ತದೆ. ಸುಮ್ಮನೆ ಕ್ಲಿಕ್ಕಿಸಿದರೆ ನೂರಾರು ಲಿಂಕ್ಸ್‌ಗಳು ಓಪನ್ ಆಗುತ್ತದೆ. ಆದರೆ ಇಲ್ಲೊಂದು ಅಪರೂಪದ ತಾಣವಿದೆ. ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಒಳ್ಳೆಯ ತಾಣಗಳನ್ನು ಪಟ್ಟಿ ಮಾಡಿ ಇಲ್ಲಿ ನೀಡಲಾಗಿದೆ. ನಿಮ್ಮ ಸಮಯವೂ ಉಳಿಯುತ್ತದೆ, ಮಾಹಿತಿಯೂ ಬೇಗ ಲಭಿಸುತ್ತದೆ. ನಿಮ್ಮ ಮೊದಲ ಕುತೂಹಲಕ್ಕೆ ಕೊಂಡಿ ಇಲ್ಲಿದೆ.

ವರ್ಲ್ಡ್ ಅಟ್ಲಾಸ್‌ ಮ್ಯಾಪ್.ಕಾಂ

ಯಾವುದೇ ದೇಶ, ಯಾವುದೇ ಖಂಡ, ಯಾವುದೇ ದ್ವೀಪದ ಕುರಿತು ಭೌಗೋಳಿಕ ಮಾಹಿತಿ ಬೇಕಾ? ಅಂತರ್ಜಾಲದಲ್ಲೊಂದು ಅಟ್ಲಾಸ್ ಮ್ಯಾಪ್ ಇದೆ. ಹಲವು ವಿಶೇಷತೆಗಳಿರುವ ಈ ಜಾಲತಾಣಕ್ಕೊಮ್ಮೆ ಭೇಟಿ ಕೊಟ್ಟು ನೋಡಿ ವರ್ಲ್ಡ್ ಅಟ್ಲಾಸ್‌ ಮ್ಯಾಪ್

ಲುಲು.ಕಾಂ

ಇಲ್ಲಿ ಲುಲು ಎಂಬ ಜಾಲತಾಣವೊಂದಿದೆ. ಆದರೆ ಇದು ಲಾಲೂಗೆ ಸಂಬಂಧಪಟ್ಟಿದ್ದಲ್ಲ. ಇದೊಂದು ಸ್ಪೆಲ್ಪ್ ಪಬ್ಲಿಷಿಂಗ್ ಜಾಲ ತಾಣ. ಇಲ್ಲಿ ನೀವು ನಿಮ್ಮ ಪುಸ್ತಕದ ಮುಖಪುಟವನ್ನು ರೂಪಿಸಬಹುದು, ಬೇರೆ ಬೇರೆ ಡೀಸೈನ್ ಮಾಡಬಹುದು, ಮುದ್ರಿಸಬಹುದು, ಇತರರು ನಿಮ್ಮ ಪುಸ್ತಕ ಖರೀದಿಸುವಂತೆಯೂ ಮಾಡಬಹುದು. ನಿಮ್ಮ ಕುತೂಹಲಕ್ಕೆ ಕೊಂಡಿ ಇಲ್ಲಿದೆ.

ಎನ್‌ಎಚ್‌ಎಸ್.ಕಾಂ

ಆರೋಗ್ಯ ಸಂಬಂಧಿತ ಮಾಹಿತಿ ಒದಗಿಸುವ ಅಪರೂಪದ ತಾಣವೊಂದು ಇಲ್ಲಿದೆ. ಬ್ರಿಟಿಷ್ ನ್ಯಾಷನಲ್ ಹೆಲ್ತ್ ಸರ್ವೀಸ್ ನಡೆಸುವ ಈ ತಾಣ ಅಂತರ್ಜಾಲದಲ್ಲಿ ಬಹು ಜನಪ್ರೀಯ. ನಿಮ್ಮ ಕುತೂಹಲಕ್ಕೆ ಒಮ್ಮೆ ಲಾಗ್ ಇನ್ ಆಗಿ ನೋಡಿ.

ಅನ್‌ಸೈಕ್ಲೊಪೀಡಿಯಾ.ಕಾಂ

ಎನ್‌ಸೈಕ್ಲೊಪೀಡಿಯಾ ಗೊತ್ತು ಅನ್‌ಸೈಕ್ಲೊಪೀಡಿಯಾ ಗೊತ್ತಾ? ಇದೊಂದು ಶುದ್ಧ ತಲೆಹರಟೆಯ ತಾಣ. ಎಲ್ಲಾ ಸುಳ್ಳು ಸುದ್ದಿಗಳು. ಒಂದಿಷ್ಟು ತಮಾಷೆಯ ಲೇಖನಗಳು. ಮೇಲ್ನೋಟಕ್ಕೆ ಎನ್‌ಸೈಕ್ಲೊಪೀಡಿಯಾದಂತೆಯೇ ಕಾಣುವ ಈ ತಾಣದಲ್ಲಿ ನೀವು ಲೇಖನಗಳನ್ನು ಸೇರಿಸಬಹುದು. ಒಮ್ಮೆ ಸುಮ್ಮನೆ ಭೇಟಿಕೊಟ್ಟು ನೋಡಿ.

ಪಾಕಶಾಲೆ.ಕಾಂ

ಈವತ್ತು ಏನು ಅಡುಗೆ ಮಾಡಬೇಕೆಂದು ಯೋಚಿಸುತ್ತಿದ್ದೀರಾ? ಅಥವಾ ನನಗೆ ಅಡುಗೆ ಮಾಡಲೇ ಬರುವುದಿಲ್ಲ ಎನ್ನುವುದು ನಿಮ್ಮ ಚಿಂತೆಯಾ? ನಿಮ್ಮ ಚಿಂತೆಗೆ ಇಲ್ಲಿದೆ ಒಂದು ಪರಿಹಾರ. ಇಲ್ಲೊಂದು ಆನ್ ಲೈನ್ ಪಾಕಶಾಲೆಯಿದೆ. ಹೊಸ ರುಚಿಗಳನ್ನು ಕಲಿಸುವ ಪುಸ್ತಕಗಳು ಇಲ್ಲಿ ಲಭ್ಯವಿದೆ. ನೀವು ಇಚ್ಛಿಸಿದ್ದಲ್ಲಿ ಇಮೇಲ್ ಮೂಲಕ ರೆಸಿಫಿ ಟಿಪ್ಸ್‌ಗಳು ಲಭಿಸಲಿದೆ. ಒಮ್ಮೆ ಆನ್ ಲೈನ್ ಪಾಕಶಾಲೆಗೆ ಭೇಟಿ ಕೊಟ್ಟು ನೋಡಿ.

ಭಾರತದ ಭೂಪಟ.ಕಾಂ

ನಿಮಗೆ ಭಾರತದ ಭೂಪಟವನ್ನು ಅಂತರ್ಜಾಲದಲ್ಲಿ ನೋಡಬೇಕಾ? ಹಿಂದಿ, ಮಲಯಾಳಂ, ಮರಾಠಿ, ಕನ್ನಡ, ನೇಪಾಳಿ, ಓರಿಯಾ, ತೆಲುಗು ಹಾಗೂ ಇಂಗ್ಲೀಷ್‌ನಲ್ಲಿ ಈ ನಕ್ಷೆಗಳು ಲಭ್ಯವಿದೆ. ಜೊತೆಗೊಂದಿಷ್ಟು ಐತಿಹಾಸಿಕ ಹಾಗೂ ಬೌಗೋಳಿಕ ಮಾಹಿತಿಗಳೂ ಇವೆ. ಮಾಹಿತಿಗಾಗಿ ಕೊಂಡಿ ಇಲ್ಲಿದೆ.

ಬ್ಲಿಂಕ್ ಎಕ್ಸ್.ಕಾಂ

ವೀಡಿಯೋ ಕ್ಲಿಪ್ಪಿಂಗ್‌ಗಳನ್ನು ಅಂತರ್ಜಾಲದಲ್ಲಿ ಹುಡುಕಲು ಹಾಗೂ ಸಂಗ್ರಹಿಸಿಡಲು ಅಪರೂಪವಾದ ತಾಣವೊಂದು ಇಲ್ಲಿದೆ. ನೊಂದಾಯಿಸಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ

ಐಲಂಗ್.ಕಾಂ

ನಿಮ್ಮ ಬಳಿ ಐಪಾಡ್ ಇದೆಯಾ? ಆಗಾಗ್ಗ ಅದರಲ್ಲಿ ಏನಾದರೂ ಸಮಸ್ಯೆ ಕಾಣಿಸಿಕೊಳ್ಳುತ್ತಿದೆಯಾ? ಚಿಕ್ಕ ಪುಟ್ಟ ತಾಂತ್ರಿಕ ಸಮಸ್ಯೆಗಳನ್ನು ನೀವೇ ಬಗೆಹರಿಸಿಕೊಳ್ಳಬಹುದು. ಹೊಸ ಹೊಸ ಐಪಾಡ್‌ಗಳ ಬಗ್ಗೆ ಮಾಹಿತಿ ಬೇಕಾ? ಐಪಾಡ್ ಸಂಬಂಧಿತ ತಂತ್ರಾಂಶಗಳ ಕುರಿತೂ ಈ ತಾಣ ನಿಮಗೆ ಮಾಹಿತಿ ನೀಡುತ್ತದೆ.

ಪುಟ್‌ಬಾಲ್ 365.ಕಾಂ

ನೀವು ಪುಟ್‌ಬಾಲ್ ಅಭಿಮಾನಿಗಳಾ? ನಿಮ್ಮ ನೆಚ್ಚಿನ ಪುಟ್‌ಬಾಲ್ ತಂಡಗಳು ಹಾಗೂ ಆಟಗಾರರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದೆಯಾ? ಯೂರೋ ಕಪ್ ಪುಟ್‌ಬಾಲ್‌ ಪಂದ್ಯಾವಳಿಯ ರಸನಿಮಿಷಗಳನ್ನು ಕಣ್ತುಂಬಿಕೊಳ್ಳಬೇಕಾ? ಮತ್ತೆ ಯಾಕೆ ತಡ ಪುಟ್‌ಬಾಲ್ 365 ಜಾಲ ತಾಣ ಪ್ರವೇಶಿಸಿ.

ವಾಲೆಂಟಿಯರ್ ಮ್ಯಾಚ್. ಕಾಂ

ಹೊಸ ವರ್ಷದ ಸಂದರ್ಭ ಒಂದಿಷ್ಟು ಒಳಿತಿನ ಕೆಲಸಗಳನ್ನು ಮಾಡಬೇಕು ಅಂತ ಪ್ರತಿಜ್ಝೆ ಮಾಡಿದ್ದೀರಾ? ನೊಂದವರ ಕುರಿತು, ಹಾಳಾಗುತ್ತಿರುವ ಪರಿಸರದ ಕುರಿತು ಕಾಳಜಿ ಇದೆಯಾ? ಸ್ವಯಂಸೇವಕರಾಗಿ ಒಂದಿಷ್ಟು ಸೇವೆ ಮಾಡುವ ಆಸಕ್ತಿ ಇದೆಯಾ? ಹಾಗಾದರೆ ಈ ತಾಣಕ್ಕೊಮ್ಮೆ ಭೇಟಿ ಕೊಡಿ. ನಿಮ್ಮ ಹೆಸರನ್ನು ನೋಂದಾಯಿಸಿಕೊಂಡು, ನಿಮ್ಮ ಊರು, ನೀವು ಸ್ವಯಂಸೇವೆ ಮಾಡಬಯಸುವ ಕ್ಷೇತ್ರ ಎಲ್ಲದರ ಮಾಹಿತಿ ನೀಡಿ. ಬಳಿಕ ಅವರು ನಿಮ್ಮ ಆಸಕ್ತಿ, ಕೌಶಲ್ಯಗಳಿಗೆ ಅನುಗುಣವಾದ ಯೋಜನೆಗಳನ್ನು ನಿಮಗೆ ನೀಡುತ್ತಾರೆ. ಸಹಾಯ ಮಾಡುವ ಮನಸ್ಸಿದ್ದರೆ ಒಮ್ಮೆ ಇಲ್ಲಿಗೆ ಹೋಗಿ ಬನ್ನಿ.

ಪ್ರೈಂ ಲೊಕೇಶನ್.ಕಾಂ

ನಿಮಗೆ ಬ್ರಿಟನ್‌ನಲ್ಲೊಂದು ಸೈಟ್ ಬೇಕೇ? ಜಗತ್ತಿನ ಪ್ರಮುಖ ಪಟ್ಟಣಗಳಲ್ಲಿ ಎಲ್ಲೆಲ್ಲಿ ನಿವೇಶನಗಳು ಲಭ್ಯವಿದೆ? ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಿವೇಶನಗಳ ಬೆಲೆ ಹೇಗಿದೆ? ಸೈಟ್ ಕೊಳ್ಳಲೇಬೇಕಂತೇನಿಲ್ಲ. ಈ ವೆಬ್‌ಸೈಟ್‌ನ್ನು ಹಾಗೆ ಸುಮ್ಮನೆಯೂ ನೋಡಬಹುದು. http://www.primelocation.com/

ಗಿಫ್ಟ್.ಕಾಂ

ನೀವು ಯಾರಿಗಾದರೂ ಗಿಫ್ಟ್ ಕೊಡಬೇಕಾ? ವಯಸ್ಸು, ಲಿಂಗ, ವೃತ್ತಿಗೆ ಅನುಸಾರವಾಗಿ ಉಡುಗೊರೆಗಳ ಆಯ್ಕೆ ಹೇಗೆ ಮಾಡಬೇಕು ಎನ್ನುವುದಕ್ಕೆ ಈ ತಾಣ ಅಪರೂಪದ ಮಾಹಿತಿ ಒದಗಿಸುತ್ತದೆ. ಅಂಗಡಿಗೆ ಹೋಗಿ ದುಂದುವೆಚ್ಚದ ಗಿಫ್ಟ್‌ಗಳನ್ನು ಕೊಳ್ಳುವ ಮೊದಲು ಈ ತಾಣವನ್ನೊಮ್ಮೆ ನೋಡಿ. http://www.giftgen.co.uk/

ವೆದರ್.ಕಾಂ

ನಿಮ್ಮೂರಲ್ಲಿ ಈಗ ವಾತಾವರಣ ಹೇಗಿದೆ? ಮಳೆ ಸುರಿಯಬಹುದೇ? ಮುಂದಿನ ಇಪ್ಪತ್ನಾಲ್ಕು ಗಂಟೆಯೊಳಗೆ ಎಲ್ಲೆಲ್ಲಿ ಮಳೆ ಸುರಿಯಲಿದೆ? ಹಿಂಗಾರು-ಮುಂಗಾರು ಹೇಗಿದೆ? ಬಿರುಗಾಳಿ, ಚಂಡಮಾರುತ, ಸುನಾಮಿ ಏನಾದರೂ ಸಂಭವಿಸಬಹುದಾ? ಜಾಗತಿಕ ತಾಪಮಾನ ಎಲ್ಲೆಲ್ಲಿ ಎಷ್ಟೆಷ್ಟಿದೆ? ಈ ಎಲ್ಲದರ ಕರಿತು ನಿಮಗೆ ಮಾಹಿತಿ ಬೇಕಾ? ತಡ ಯಾಕೆ ವೆದರ್.ಕಾಂ ಪ್ರವೇಶಿಸಿ. http://www.weather.com/

ರಿಂಗ್‌ಸರ್ಫ್.ಕಾಂ

ಮನೆಯಲ್ಲಿ ಒಬ್ಬರೇ ಕುಳಿತು ಬೋರು ಹೊಡೆಯುತ್ತಿದೆಯಾ? ಯಾವುದಾದರೂ ಸಾಮೂಹಿಕ ಚರ್ಚೆಗಳಲ್ಲಿ ಭಾಗವಹಿಸಬೇಕು ಎನಿಸುತ್ತಿದೆಯಾ? ಅಥವಾ ನೀವೇ ಯಾವುದಾದರೂ ಗಂಭೀರ ವಿಷಯವನ್ನೆತ್ತಿಕೊಂಡು ಚರ್ಚೆ ಪ್ರಾರಂಭಿಸಬೇಕೆನ್ನುತ್ತೀರಾ? ಇಲ್ಲಿದೆ ಒಂದು ಅಪರೂಪದ ಸೋಷಿಯಲ್ ನೆಟ್‌ವರ್ಕಿಂಗ್ ತಾಣ. ನಿಮ್ಮ ಮನೆಯಲ್ಲೇ ಕುಳಿತು, ಬೇಸರವಾದಾಗ ಹರಟೆ ಹೊಡೆಯಲು, ಸಮಾನ ಮನಸ್ಕರೊಡನೆ ಸಂವಾದ ನಡೆಸಲು, ಓದಲು, ಬರೆಯಲು, ಇಲ್ಲಿ ನೊಂದಾಯಿಸಿಕೊಳ್ಳಬಹುದು. http://www.ringsurf.com/

ನಾಸಾ.ಕಾಂ

ಮೊನ್ನೆಯಷ್ಟೆ ಮಂಗಳಗ್ರಹಕ್ಕೆ ಅಂತರಿಕ್ಷ ನೌಕೆಯೊಂದು ಹೋಗಿತ್ತಲ್ಲ, ಅದೇನಾದ್ರು ಹೊಸ ಚಿತ್ರ ಕಳುಹಿಸಿತಾ? ಅಲ್ಲಿ ನಮ್ಮ ಹಾಗೇ ಜೀವಿಗಳು ಇದ್ದಾರಂತೆ ಹೌದ? ಹೀಗೆ ವಿಜ್ಝಾನ-ತಂತ್ರಜ್ಝಾನದ ಹೊಸ, ವಿಸ್ಮಯಕಾರಿ ಸಂಗತಿಗಳನ್ನು ತಿಳಿಯುವ ಕುತೂಹಲವೇ? ಹಾಗಾದರೆ ನಾಸಾದ ಈ ಅಧಿಕೃತ ತಾಣಕ್ಕೊಮ್ಮೆ ಭೇಟಿ ಕೊಟ್ಟು ಬನ್ನಿ. ನಾಸಾದ ಹೊಸ ಶೋಧಗಳು, ಯೋಜನೆಗಳ ಕುರಿತ ಸಮಗ್ರ ಮಾಹಿತಿ ಇಲ್ಲಿದೆ. http://www.nasa.gov/

ದೂರದ ದೇಶವೊಂದಕ್ಕೆ ಪ್ರವಾಸ ಹೋಗಲು ಯೋಚಿಸುತ್ತಿದ್ದೀರಾ? ಹೋಗುವುದೇನೋ ಸರಿ, ಆದರೆ ಕಾಣದ ಊರುಗಳಲ್ಲಿ ಯಾವುದಕ್ಕೂ ಯಾವುದೇ ಕೊರತೆ ಇಲ್ಲದೆ ಸುತ್ತುವುದು ಹೇಗಪ್ಪ ಅಂತ ಮತ್ತೆ ಶುರುವಾಯ್ತ? ಹಾಗಾದರೆ ಈ ತಾಣಕ್ಕೊಮ್ಮೆ ತಪ್ಪದೇ ಭೇಟಿ ನೀಡಿ. ಪ್ರವಾಸ ಕುರಿತ ಸಮಗ್ರ ಮಾಹಿತಿಗಳು ಇಲ್ಲುಂಟು. ನೀವು ಒಮ್ಮೆ ಇದರಲ್ಲಿ ಲಾಗ್ ಇನ್ ಆಗಿ, ಯಾವ ಬಗೆಯ ತಾಣಗಳನ್ನು ಇಷ್ಟಪಡುತ್ತೀರೆಂದು ಟೈಪಿಸಿದರೆ ಸಾಕು. ಆ ಕುರಿತ ಎಲ್ಲ ಮಾಹಿತಿಗಳು ನಿಮ್ಮ ಮುಂದೆ ಬರುತ್ತವೆ. ನಿಮ್ಮ ವೀಸಾ ಪಡೆಯುವುದರಿಂದ ಹಿಡಿದು, ಹೊರಡಲು ವಿಮಾನದ ಸಮಯ, ಅಲ್ಲಿ ಉಳಿಯಲೊಂದು ಮನೆ, ಸುತ್ತಲು ಬಾಡಿಗೆ ಕಾರು ಎಲ್ಲದರ ಕುರಿತು ಕುಳಿತಲ್ಲೇ ಮಾಹಿತಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಈ ಕೊಂಡಿ ಕ್ಲಿಕ್ಕಿಸಿ. http://www.dontforgetyourtoothbrush.com/howitworks.asp

ನಿಮಗೆ ಕೈತೋಟ ಮಾಡಲು ಆಸಕ್ತಿ ಇದೆಯಾ? ಹೂವುಗಳೆಂದರೆ ಇಷ್ಟವಾ? ಬೇರೆ ದೇಶಗಳ ಬೇರೆ ಬೇರೆ ರೀತಿಯ ಹೂವುಗಳು, ಅಲಂಕಾರಿಕ ಸಸ್ಯಗಳ ಕುರಿತು ಮಾಹಿತಿ ಬೇಕಾ? ಜಗತ್ತಿನೆಲ್ಲೆಡೆ ನಡೆಯುವ ಬೃಹತ್ ಫಲಪುಷ್ಪ ಪ್ರದರ್ಶನಗಳು, ಚೆಂದದ ಉದ್ಯಾನವನಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದೆಯಾ? ಮತ್ತೆ ಯಾಕೆ ತಡ, ಅಂತರ್ಜಾಲದಲ್ಲಿರುವ ಈ ಗಾರ್ಡನ್ ಪ್ರವೇಶಿಸಿ. http://www.rhs.org.uk/index.htm

ಜಗತ್ತಿನಲ್ಲಿ ಏನೇನು ನಡೆಯುತ್ತಿದೆ? ಈ ಘಟನೆಗಳಿಗೆ ಬೇರೆ ಬೇರೆ ದೇಶಗಳ ಲೇಖಕರ ಸ್ಪಂದನೆ ಹೇಗಿದೆ? ಪ್ರಪಂಚದ ಪ್ರಭಾವಿ ಹಾಗೂ ವೈಚಾರಿಕ ಮಾಸಿಕಗಳಲ್ಲಿ ಪ್ರಕಟಗೊಳ್ಳುವ ಇಂತಹ ಲೇಖನಗಳನ್ನು ಓದಬೇಕೇ? ಇವೆಲ್ಲವನ್ನೂ ಒಂದೆಡೆ ಲಭ್ಯವಾಗುವಂತೆ ಮಾಡಿದೆ ಆಲ್ ಡೈಲಿ.ಕಾಂ. ನಿಮ್ಮ ಓದಿನ ಕತೂಹಲಕ್ಕೆ ಈ ಕೊಂಡಿ ಕ್ಲಿಕ್ಕಿಸಿ. http://www.aldaily.com/

ರೇಡಿಯೋ ಲೊಕೇಟರ್.ಕಾಂ

ದೇಶ ವಿದೇಶಗಳ ರೇಡಿಯೋ ತಾಣಗಳ ಕುರಿತು ತಿಳಿದುಕೊಳ್ಳುವ ಆಸಕ್ತಿ ಇದೆಯಾ? ವೆಬ್ ರೇಡಿಯೋ ತಾಣಗಳ ಬಗ್ಗೆ ತಿಳಿದುಕೊಳ್ಳಬೇಕೇ? ಅಂತರ್ಜಾಲದಲ್ಲಿ ಎಷ್ಟು ಎಫ್‌ಎಂ ರೇಡಿಯೋ ತಾಣಗಳು ಲಭ್ಯವಿದೆ? ನಿಮ್ಮ ಕುತೂಹಲಗಳಿಗೆ ಇಲ್ಲಿದೆ ಒಂದು ಅಪರೂಪದ ತಾಣ. http://www.radio-locator.com/

ಕನ್ನಡ ಆಡಿಯೋ.ಕಾಂ

ಅಂತರ್ಜಾಲದಲ್ಲಿ ಕನ್ನಡ ಚಿತ್ರಗೀತೆಗಳನ್ನು ಕೇಳಬೇಕಾ? ಹಾಡು ಹೊಸತೇ ಇರಬಹುದು, ಹಳೆಯದೇ ಇರಬಹುದು, ಅದನ್ನು ಮತ್ತೆ ಮತ್ತೆ ಕೇಳಿ ಗುನುಗುನಿಸುವ ಆಸೆ ಆಗುತ್ತಿದೆಯಾ? ಮತ್ತೆ ಯಾಕೆ ತಡ. ಕನ್ನಡ ಆಡಿಯೋ.ಕಾಂನಲ್ಲಿ ಹಾಡುಗಳ ಬೃಹತ್ ಸಂಗ್ರಹವೇ ಇದೆ. ನಿಮಗಿಷ್ಟ ಬಂದ ಹಾಡನ್ನು ಆಯ್ಕೆ ಮಾಡಿಕೊಂಡು ಮನದಣಿಯೆ ಕೇಳಿಸಿಕೊಳ್ಳಿ. http://www.kannadaaudio.com/Songs/Moviewise/home/

ಮ್ಯೂಸಿಕ್ ಇಂಡಿಯಾ ಆನ್ ಲೈನ್.ಕಾಂ

ಶಾಸ್ತ್ರಿಯ ಸಂಗೀತದಿಂದ ಹಿಡಿದು ಹಿಂದೂಸ್ತಾನಿ ಸಂಗೀತದವರೆಗೆ ಎಲ್ಲವೂ ಒಂದೇ ಕಡೆ ಸಿಗುವುದಾದರೆ ಎಷ್ಟು ಚೆನ್ನ ಎಂದುಕೊಳ್ಳುತ್ತಿದ್ದೀರಾ? ಬಾಲಿವುಡ್‌ನಿಂದ ಸ್ಯಾಂಡಲ್‌ವುಡ್ ವರೆಗೆ ಈಗಷ್ಟೇ ಬಿಡುಗಡೆಯಾದ, ಬಿಡುಗಡೆಯೇ ಆಗದಿರುವ ಚಿತ್ರಗಳ ಹಾಡುಗಳನ್ನು ಹಾಗೆ ಸುಮ್ಮನೆ ಕೇಳುವ ಆಸೆಯೇ? ದಶಕಗಳ ಹಿಂದೆ ಕಾಡಿದ ಹಾಡನ್ನು ಮತ್ತೆ ಮತ್ತೆ ಕೇಳಿ ಗುನುಗುನಿಸುವ ಬಯಕೆಯೇ? ಹಾಗಾದರೆ ತಡ ಏಕೆ, ಮ್ಯೂಸಿಕ್ ಇಂಡಿಯಾ ಆನ್ ಲೈನ್ ಪ್ರವೇಶಿಸಿ, ಕೊಂಡಿ ಇಲ್ಲಿದೆ. http://www.musicindiaonline.com/

ಲೈವ್ ಪ್ಲಾಸ್ಮ.ಕಾಂ

ನಿಮಗೆ ಸಂಗೀತವಂದರೆ ಪಂಚಪ್ರಾಣವಾ? ವಿವಿಧ ಭಾಷೆಗಳ, ದೇಶಗಳ ವೈವಿಧ್ಯಮಯ ಸಂಗೀತವನ್ನು ಕೇಳುವ, ಆ ಕುರಿತು ತಿಳಿದುಕೊಳ್ಳುವ ಆಸಕ್ತಿ ಇದೆಯಾ? ಹಾಗಾದರೆ ಇಲ್ಲಿದೆ ಒಂದು ಅಪರೂಪದ ತಾಣ. ಸಂಗೀತವಷ್ಟೇ ಅಲ್ಲ ಜಗತ್ತಿನ ಬೇರೆ ಬೇರೆ ಭಾಷೆಗಳ ಚಲನಚಿತ್ರಗಳು, ನಿರ್ದೇಶಕರು, ನಟರು, ನಿರ್ಮಾಪಕರು ಇನ್ನೂ ಅನೇಕ ಮಾಹಿತಿಗಳಿಗೆ ಕೊಂಡಿ ಇಲ್ಲಿದೆ. http://www.liveplasma.com/

ವಾಕ್ ಇಟ್.ಕಾಂ

ಲಂಡನ್, ಬರ್ಮಿಂಗ್‌ಹ್ಯಾಮ್, ಎಡಿನ್‌ಬರ್ಗ್ ನಿಮ್ಮ ಪ್ರಯಾಣ ಎಲ್ಲಿಗೆ ಬೇಕಾದರೂ ಇರಬಹುದು. ಈ ಮಾರ್ಗಗಳ ನಡುವೆ ಸಂಚರಿಸುವ ಪ್ಲೈಟ್‌ಗಳ ಬಗ್ಗೆ ತಿಳಿದುಕೊಳ್ಳಬೇಕಾ, ಪ್ರಯಾಣ ದರ ಎಷ್ಟು, ರಿಯಾತಿ ಎಷ್ಟಿದೆ ಎಂಬಿತ್ಯಾದಿ ಮಾಹಿತಿ ಬೇಕಾ? ಇನ್ನು ತಡ ಯಾಕೆ? ಈ ಜಾಲ ತಾಣ ಪ್ರವೇಶಿಸಿ. http://www.walkit.com/

ಕ್ರಿಕ್‌ಇನ್ಪೋ.ಕಾಂ

ನೀವು ಕ್ರಿಕೆಟ್ ಪ್ರೇಮಿಗಳಾ? ಏಕಕಾಲಕ್ಕೆ ಬೇರೆ ಬೇರೆ ದೇಶಗಳಲ್ಲಿ ನಡೆಯುವ ಅಂತಾರಾಷ್ಟ್ರೀಯ ಪಂದ್ಯಗಳ ಸ್ಕೋರ್ ತಿಳಿಯುವ ಕಾತರ ಇದೆಯಾ? ಟಿವಿ ಪ್ರಸಾರ ಇಲ್ಲದಿದ್ದರೂ ಪರವಾಗಿಲ್ಲ. ನಿಮ್ಮ ಬಳಿ ಅಂತರ್ಜಾಲ ಸಂಪರ್ಕಿತ ಗಣಕಯಂತ್ರ ಇದ್ದರೆ ಸಾಕು. ಬಾಲ್ ಟು ಬಾಲ್ ಸ್ಕೋರ್‌ಗಳನ್ನು ನೀವು ಈ ತಾಣದಲ್ಲಿ ನೋಡಬಹುದು. ಕ್ರಿಕೆಟ್ ಜಗತ್ತಿನ ಸಂಪೂರ್ಣ ಇತಿಹಾಸವೂ ಇಲ್ಲಿ ಲಭ್ಯ. http://www.cricinfo.com/

ಗುಡ್ ರೀಡ್ಸ್.ಕಾಂ

ನಿಮ್ಮ ಓದಿನ ಹರಿವನ್ನು ವಿಸ್ತರಿಸಬೇಕೇ? ಅತ್ಯುತ್ತಮ ಪುಸ್ತಕಗಳನ್ನು ಹುಡುಕುವುದು ಹೇಗೆ, ಹುಡುಕಿದ್ದನ್ನು ವ್ಯವಸ್ಥಿತವಾಗಿ ಜೋಡಿಸಿಡುವುದು ಹೇಗೆ? ಆನ್‌ಲೈನ್ ಕ್ಯಾಟ್‌ಲಾಗ್ ಬಗ್ಗೆ ತಿಳಿದುಕೊಳ್ಳಬೇಕೇ? ಇಲ್ಲಿದೆ ಒಂದು ತಾಣ. http://www.goodreads.com/

ಫ್ಲಿಕ್ಕರ್.ಕಾಂ

ನೀವು ತೆಗೆದ ಚಿತ್ರಗಳನ್ನು ಅಂತರ್ಜಾಲದ ಮೂಲಕ ಜಗತ್ತಿಗೆ ತೋರಿಸುವ ಆಸೆ ಇದೆಯಾ? ನಿಮ್ಮ ಚಿತ್ರಗಳನ್ನು ಪ್ರದರ್ಶಿಸಲು, ಸಂಗ್ರಹಿಸಿಡಲು ಅಂತರ್ಜಾಲದಲ್ಲಿ ಪುಟ್ಟದೊಂದು ಸ್ಥಳ ಬೇಕಾ? ಇನ್ನು ತಡ ಯಾಕೆ ಫ್ಲಿಕ್ಕರ್.ಕಾಂ ಪ್ರವೇಶಿಸಿ ನೊಂದಾಯಿಸಿಕೊಳ್ಳಿ. ಅಪರೂಪವಾದ ವೆಬ್ ಆಲ್ಬಂ ತಾಣವಿದು. http://www.flickr.com/

ಬಿಬಿಸಿ ಐಪ್ಲೆಯರ‌್.ಕಾಂ

ಅಂತರ್ಜಾಲದಲ್ಲಿ ಟಿವಿ ಹಾಗೂ ರೇಡಿಯೋ ಕಾರ್ಯಕ್ರಮಗಳನ್ನು ಕೇಳಬೇಕಾ? ಇನ್ನು ತಡ ಯಾಕೆ ಬಿಬಿಸಿ ಆನ್ ಡಿಮ್ಯಾಂಡ್ ಟೆಲಿವಿಷನ್ ಪ್ರೋಗ್ರಾಂಗಳನ್ನು ಒದಗಿಸುತ್ತಿದೆ. ಲಾಗ್ ಇನ್ ಆಗಿ ನೊಂದಾಯಿಸಿಕೊಳ್ಳಿ. www.bbc.co.uk/iplayer

ಪಾಂಡೊ.ಕಾಂ

ಫೈಲ್ ಅಟ್ಯಾಚ್ ಮಾಡಲು ಹೆಚ್ಚಿನ ಸಮಯ ವ್ಯಯವಾಗುತ್ತಿದೆಯಾ? ಹತ್ತು - ಹದಿನೈದು ಫೋಟೋಗಳನ್ನು ಒಟ್ಟಿಗೆ ಇಮೇಲ್ ಮಾಡಬೇಕಾ? ಆಡಿಯೋ ವಿಡಿಯೋ ಫೈಲ್‌ಗಳನ್ನು ಶೀಘ್ರವಾಗಿ ರವಾನಿಸಲು ಇಲ್ಲಿದೆ ಒಂದು ಅಪರೂಪದ ತಾಣ. ಲಾಗ್ ಇನ್ ಆಗಿ ನೊಂದಾಯಿಸಿಕೊಳ್ಳಿ. http://www.pando.com/

ಸ್ಕ್ರೀನ್ ಆನ್‌ಲೈನ್.ಕಾಂ

ಬ್ರಿಟಿಷ್ ಫಿಲಂ ಇಂಡಸ್ಟ್ರಿಯ ಕುರಿತು ಸವಿವರ ಮಾಹಿತಿ ನೀಡುವ ಅಪರೂಪದ ಜಾಲತಾಣವಿದು. ಚಿತ್ರ ಜಗತ್ತಿನ ಸುದ್ದಿಗಳು, ಪ್ರಚಲಿತ ವಿದ್ಯಮಾನಗಳು ಇತ್ಯಾದಿ ಲೇಖನಗಳಿಂದ ಸಮೃದ್ಧವಾಗಿದೆ. ಚಿತ್ರರಂಗದ ಕುರಿತು ಆಸಕ್ತಿ ಬೆಳೆಸಿಕೊಂಡಿರುವವರು ನೋಡಬೇಕಾದ ತಾಣ. http://www.screenonline.org.uk/

ಯಾವಾಗ ಏನು.ಕಾಂ

ಬೇರೆ ಬೇರೆ ದೇಶಗಳಲ್ಲಿ ನಡೆಯುತ್ತಿರುವ ಸಂಗತಿಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದೆಯಾ? ಮನೋರಂಜನೆ, ಕ್ರೀಡೆ, ವಸ್ತುಪ್ರದರ್ಶನಗಳು, ಪ್ರಚಲಿತ ಘಟನೆಗಳು ಹೀಗೆ ನಿಮ್ಮ ಆಸಕ್ತಿಯ ಕ್ಷೇತ್ರ ಏನೇ ಇರಬಹುದು. ಈ ಜಾಲತಾಣ ಪ್ರವೇಶಿಸಿ ನಿಮಗೆ ಬೇಕಾದ ದೇಶವನ್ನು ಆಯ್ಕೆ ಮಾಡಿಕೊಂಡು ಪಟ್ಟಿಯಲ್ಲಿ ನೀಡಲಾಗಿರುವ ವಿಭಾಗವನ್ನು ಕ್ಲಿಕ್ಕಿಸಿದರೆ ಸಾಕು. ಪ್ರಪಂಚದಾದ್ಯಂತ ನಡೆಯುತ್ತಿರುವ ವಿವಿಧ ಸಂಗತಿಗಳ ಕುರಿತು ಮಾಹಿತಿ ಸಿಗುತ್ತದೆ. ಒಮ್ಮೆ ಪರಿಶೀಲಿಸಿ ನೋಡಲು ಕೊಂಡಿ ಇಲ್ಲಿದೆ. http://www.whatsonwhen.com/

ಎಬಿಇಬುಕ್ಸ್.ಕಾಂ

ಹಳೆಯ ಪುಸ್ತಕಗಳೆಂದೆರೆ ನಿಮಗೆ ಪಂಚಪ್ರಾಣವೇ? ಸೆಕೆಂಡ್ ಹಾಂಡ್ ಬುಕ್ ಮಾರುಕಟ್ಟೆಗಳಿಗೆ ಲಗ್ಗೆಯಿಟ್ಟು ಹಳೆಯ ಪುಸ್ತಕಗಳನ್ನು ಹುಡುಕಿ ತಂದು ಓದುವ ಹವ್ಯಾಸವಿದೆಯೇ? ಹಾಗಾದರೆ ನಿಮ್ಮ ಓದಿನ ದಾಹ ತಣಿಸಲು ಇಲ್ಲೊಂದು ಅಪರೂಪದ ತಾಣವಿದೆ. ಜಗತ್ತಿನ ಅಪರೂಪದ ಹಳೆಯ ಪುಸ್ತಕಗಳ ಬೃಹತ್ ಸಂಗ್ರವೇ ಇಲ್ಲಿದೆ. ನೂರಾಹತ್ತು ಮಿಲಿಯನ್ ಪುಸ್ತಕಗಳಿರುವ ಈ ಜಾಲ ತಾಣ ಪ್ರವೇಶಿಸಲು ಒಮ್ಮೆ ಕ್ಲಿಕ್ಕಿಸಿದರೆ ಸಾಕು . http://www.abebooks.co.uk/

ಗೆಟ್ ನೆಟ್ ವೈಸ್.ಕಾಂ

ನಿಮ್ಮ ಗಣಕಯಂತ್ರಕ್ಕೆ ಅಂತರ್ಜಾಲ ಸಂಪರ್ಕ ಇದೆಯಾ? ಬ್ರೌಸ್ ಮಾಡುವಾಗ ಬೇರೆ ಬೇರೆ ವೈರಸ್‌ಗಳು ಬಂದು ಸೇರಿಕೊಳ್ಳುತ್ತಿದೆಯೇ? ನಿಮ್ಮ ಮೇಲ್ ಬಾಕ್ಸ್‌ನ ಸ್ಪ್ಯಾಮ್‌ನಲ್ಲಿ ಅನಗತ್ಯ ಮಸೇಜುಗಳು ಬಂದು ತುಂಬಿಕೊಳ್ಳುತ್ತಿದೆಯಾ? ಬೇರೊಬ್ಬರು ನಿಮ್ಮ ಕಡತಗಳನ್ನು ಕದಿಯಂತೆ ನೋಡಿಕೊಳ್ಳಬೇಕೇ? ಇದೆನ್ನೆಲ್ಲಾ ಹೇಗೆ ಮಾಡುವುದು ಎಂದು ಸರಳವಾಗಿ ಹೇಳಿಕೊಡುವ ಜಾಲತಾಣವೊಂದು ಇಲ್ಲಿದೆ. ಒಮ್ಮೆ ಕ್ಲಿಕ್ಕಿಸಿ ನೋಡಿ. http://www.getnetwise.org/

ಐಐಎಸ್‌ಸಿ.ಕಾಂ

ವಿಜ್ಞಾನವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇಂಡಿಯನ್ ಇನ್ಟ್ಸಿಟ್ಯೂಟ್ ಆಫ್ ಸೈನ್ಸ್ ಶಿಷ್ಯವೇತನ ನೀಡುತ್ತಿದೆ. ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಕೈಗೊಳ್ಳಲು ಆಸಕ್ತಿಯಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಈ ಶಿಷ್ಯವೇತನ ನೀಡಲಾಗುತ್ತದೆ. ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಜಾಲತಾಣ ಪ್ರವೇಶಿಸಬಹು. http://www.iisc.ernet.in/kvpy/ (ಈ ತಾಣವನ್ನು ಪರಿಚಯಿಸಿದವರು ರಾಧಿಕ )

ಕನ್ನಡ-ಗ್ರೀಟಿಂಗ್ಸ್.ಕಾಂ

ಕನ್ನಡ-ಗ್ರೀಟಿಂಗ್ಸ್.ಕಾಂ ಕನ್ನಡಿಗರಿಗೆ ಸುಂದರವಾದ ಶುಭಾಶಯಗಳನ್ನು ಕಳುಹಿಸಲು ಒಂದು ಹೊಚ್ಚ ಹೊಸ ತಾಣ. ಇದು ಕನ್ನಡದಲ್ಲೆ ಅಚ್ಚು ಕಟ್ಟಾದ ಶುಭಾಶಯಗಳನ್ನು ಒದಗಿಸುತ್ತಿದೆ. ಈ ಶುಭಾಶಯಗಳ ಮುಖಾಂತರ ಹಬ್ಬ, ಹುಟ್ಟುಹಬ್ಬ, ಪ್ರೀತಿ, ವಿರಹ, ಸ್ನೆಹ, ಮದುವೆ ಇತ್ಯಾದಿ ಯಾವುದೆ ವಿಷಯಗಳ ಮೆಲೆ ನೀವು ನಿಮ್ಮ ಸ್ನೇಹಿತರಿಗೆ ಹಾಗೂ ಬಂಧು ಮಿತ್ರರಿಗೆ ಶುಭ ಕೋರಬಹುದು. ಇಲ್ಲಿ ಕ್ಲಿಕ್ಕಿಸಿ ನೋಡಿ, ಇಷ್ಟವಾಗಬಹುದು. http://www.kannada-greetings.com/ (ಈ ತಾಣವನ್ನು ಪರಿಚಯಿಸಿದವರು ರೇಣುಕಾ ನಿಡಗುಂದಿ)

ಇಂಡಿಯನ್ ಪೊಯೆಟ್ರಿ.ಕಾಂ

ಕವಿತೆಗಳನ್ನೂ ಕವಿಗಳನ್ನೂ ಮೆಚ್ಚುವವರಿಗೆ ಈ ಜಾಲ ತಾಣ ಇಷ್ಟವಾಗಬಹುದು. ಈ ಕೆಳಗಿನ ಕೊಂಡಿ ಭಾರತೀಯ ಕವಿಗಳದ್ದು. ( India - Poetry International). ಭಾರತದ ಪ್ರಮುಖ ಕವಿಗಳೆಲ್ಲರೂ ಈ ತಾಣದಲ್ಲಿ ಬಂಧಿಯಾಗಿದ್ದಾರೆ. ಕವಿಗಳ ಬಗ್ಗೆ ಪುಟ್ಟ ಪರಿಚಯ ಬರಹ ಹಾಗೂ ಅವರು ಬರೆದ ಕೆಲವು ಕವಿತೆಗಳೂ ಇಲ್ಲಿವೆ. ಕನ್ನಡದ ಜಯಂತ್ ಕಾಯ್ಕಿಣಿ, ಪ್ರತಿಭಾ ನಂದಕುಮಾರ್ ಪಟ್ಟಿಯಲ್ಲಿದ್ದಾರೆ. ಹುಡುಕಿದರೆ ಇನ್ನಷ್ಟು ಕವಿಗಳು ಸಿಗಬಹುದು. ಹಾಗೆ ಸುಮ್ಮನೆ ಒಮ್ಮೆ ಭೇಟಿ ಕೊಡಲು ಕೊಂಡಿ ಇಲ್ಲಿದೆ. http://india.poetryinternationalweb.org/piw_cms/cms/cms_module/index.php?obj_id=27.

ಮೆನಿಬುಕ್ಸ್.ನೆಟ್

ಇಂಗ್ಲಿಷ್ ಹಳೆಯ ಕ್ಲಾಸಿಕ್ ಕೃತಿಗಳನ್ನು ಹುಡುಕುವುದು ಸ್ವಲ್ಪ ಕಷ್ಟದ ಕೆಲಸವೆ. ಇನ್ನೂ ಬೇಕಾದ ಲೇಖನ ಕಥೆ, ಕವಿತೆಗಳನ್ನು ಎಲ್ಲಿ ಹುಡುಕುವುದು. ಅದಕ್ಕೊಂದು ವೆಬ್ ತಾಣ ಇಲ್ಲಿದೆ. ಪ್ರಾಜೆಕ್ಟ್ ಗುಟೆನ್ ಬರ್ಗ ರೀತಿಯಲ್ಲೇ ಇಲ್ಲೂ ಸಾಕಷ್ಟು ಪುಸ್ತಕಗಳಿವೆ. ಈ ಪುಸ್ತಕಗಳು ನಿಮಗೆ ಬೇಕಾದ ಫಾರ್ಮೆಟ್‌ನಲ್ಲಿ ಲಭ್ಯ. ಪಿಡಿಎಫ್, ವರ್ಡ್ ಪ್ಯಾಡ್, ಇನ್ನೂ ಹತ್ತಾರು ಫಾರ್ಮೆಟ್‌ನಲ್ಲಿ ಪುಸ್ತಕಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ವಿಶ್ವದ ಕ್ಲಾಸಿಕ್ ಎನಿಸಿಕೊಂಡ ಕಾದಂಬರಿಗಳು, ವಿವಿಧ ಭಾಷೆಗಳಿಂದ ಅನುವಾದಗೊಂಡ ಕೃತಿಗಳು ಇಲ್ಲಿ ಸಿಗುತ್ತವೆ. 20 ಹೆಚ್ಚು ವಿಭಾಗಗಳಲ್ಲಿ ಪುಸ್ತಕಗಳನ್ನು ವಿಂಗಡಿಸಲಾಗಿದೆ. ಒಮ್ಮೆ ಭೇಟಿ ಕೊಡಿ. ಬೇಕಾದ ಪುಸ್ತಕ ಡೌನ್ ಲೋಡ್ ಮಾಡಿಕೊಳ್ಳಿ. ಜತೆಗೆ ಕೆಲ ಪುಸ್ತಕಗಳ ಆಡಿಯೋ ಬುಕ್ ಕೂಡ ಈ ಸೈಟಿನಲ್ಲಿವೆ. ಇವೆಲ್ಲವೂ ಉಚಿತ. http://manybooks.net/ (ಈ ತಾಣವನ್ನು ಪರಿಚಯಿಸಿದವರು - ಕುಮಾರ್ ಎಸ್)

ಎನಾನಿಮೌಸ್

ನೀವು ಎದ್ದು ಬಿದ್ದೂ ದಿನದ ಹದಿನೆಂಟೂ ಗಂಟೆ ನೆಟ್ಟಿನಲ್ಲೇ ಮೈಮರೆತು ಜಾಲಾಡುತ್ತಿರುತ್ತೀರಾ? , ಹರಟುತ್ತಾ, ಹುಡುಕುತ್ತಾ, ಕಾಣುತ್ತಾ, ಕೇಳುತ್ತಾ ಅಲ್ಲೇ ಓಡಾಡುತ್ತಿರುತ್ತೀರಾ? ನಿಮ್ಮ ಓಡಾಟ, ಜಾಲಾಟ, ನೋಡಾಟ, ಕೇಳಾಟಗಳು ಇನ್ನು ಯಾರಿಗೂ ಅರಿವಾಗಬಾರದು ಎನ್ನುವ ಸದುದ್ದೇಶ ಹೊಂದಿದ್ದೀರಾ?. ಹಾಗೆ ಹೊಂದಿದ್ದರೆ ಈ ಅನಾಮಿಕ ಇಲಿಯ ತಾಣಕ್ಕೆ ಹೋಗಿ ನೋಡಿ. ನಿಮ್ಮ ಖಾಸಗೀ ವಿವರಗಳು ಪರರ ಸ್ವತ್ತಾಗದಂತೆ ಹೇಗೆ ಜಾಲಾಡುವುದು ಎನ್ನುವುದನ್ನು ಇಲ್ಲಿ ಹೇಳಿಕೊಡುತ್ತಾರೆ. http://anonymouse.org/

ಡಾಟ ಬೇಸ್

ಬಿಸಿನೆಸ್ ಪ್ರೋಗ್ರಾಂಗಳನ್ನು ರೂಪಿಸಲು ವಿಶೇಷವಾಗಿ ತಯಾರಿಸಲಾದ ಕೆಲವು ತಂತ್ರಾಂಶಗಳು ಹಾಗೂ ಅವುಗಳ ಬಳಕೆಯ ಕುರಿತು ಮಾಹಿತಿ ನೀಡುವ ಅಪರೂಪದ ತಾಣವೊಂದು ಇಲ್ಲಿದೆ. ಇಲ್ಲಿ ನೀಡಲಾಗಿರುವ ತಂತ್ರಾಂಶಗಳನ್ನು ಬಳಸಿಕೊಂಡು ಉದ್ಯಮಿದಾರರು ತಮ್ಮ ಪ್ರೊಜೆಕ್ಟ್ ಪ್ಲಾನಿಂಗ್‌ಗಳನ್ನು ಹಾಕಿಕೊಳ್ಳಬಹುದು. ಡಾಟಾ ಬೇಸ್ ಕ್ರಿಯೇಟ್ ಮಾಡಬಹುದು. ಹಾಗೂ ಆಕರ್ಷಕವಾದ ವರ್ಡ್ ಪ್ರಸಂಟೇಶನ್ ತಯಾರಿಸಬಹುದು. http://www.zoho.com/

ಸಮೃದ್ಧ ನಿಘಂಟು

ವಬ್‌ಸ್ಟರ್ ಡಿಕ್ಷನರಿಯ ಹೆಸರು ಕೇಳಿದ್ದೇವೆ. ಅದನ್ನು ಅಂತರ್ಜಾಲದಲ್ಲಿ ನೋಡಿರದಿದ್ದರೆ ನೋಡಿ ಒಮ್ಮೆ.ನಿಘಂಟು ಇಷ್ಟು ಸಮೃದ್ಧವಾಗಿರಬಲ್ಲುದೇ ಎಂಬ ಅಚ್ಚರಿ ಮೂಡಿಸುತ್ತದೆ. ಒಂದೊಂದು ಪದಕ್ಕೂ ಇಪ್ಪತ್ತಕ್ಕೂ ಹೆಚ್ಚು ವಿಧದ ಸವಿಸ್ತಾರ ವಿವರ, ಹೇಳುವುದಕ್ಕಿಂತ ಸುಮ್ಮನೇ ಒಮ್ಮೆ ನೋಡಿ. http://www.websters-online-dictionary.org/

ಕರೆನ್ಸಿ ಕನ್ವರ್ಟರ್

ಡಾಲರನ್ನು ಯೂರೊಗೆ ವರ್ಗಾಯಿಸುವುದು ಹೇಗೆ? ಸೌದಿಯ ಒಂದು ಸಾವಿರ ದಿನಾರ್ ಭಾರತದಲ್ಲಿ ಎಷ್ಟು ರೂಪಾಯಿಗಳಾಗುತ್ತದೆ. ಒಂದು ದೇಶದ ಕರೆನ್ಸಿ ಮತ್ತೊಂದು ದೇಶಕ್ಕೆ ವರ್ಗಾವಣೆಗೊಂಡಾಗ ಮೊತ್ತದಲ್ಲಿ ಎಷ್ಟು ವ್ಯತ್ಯಾಸವಾಗುತ್ತದೆ. ಯಾವುದೇ ಅಂತಾರಾಷ್ಟ್ರೀಯ ಕರೆನ್ಸಿಯನ್ನು ಸರಳವಾಗಿ ವರ್ಗಾಯಿಸಿ, ಮೊತ್ತ ತಿಳಿಯಲು ಇಲ್ಲಿದೆ ಒಂದು ಅಪರೂಪದ ತಾಣ. ಯಾವ ದೇಶದ ಕರೆನ್ಸಿಯನ್ನು ಯಾವ ದೇಶಕ್ಕೆ ವರ್ಗಾಯಿಸಬೇಕು ಎಂದು ಟೈಪಿಸಿ ಸರ್ಚಿಗೆ ಕೊಟ್ಟರೆ ಸಾಕು. ನಿಖರವಾದ ಮೊತ್ತ ಲಭ್ಯವಾಗುತ್ತದೆ. ಒಮ್ಮೆ ಪರೀಕ್ಷಿಸಿ ನೋಡಲು ಕೊಂಡಿ ಇಲ್ಲಿದೆ. http://www.xe.com/

ಆಯುರ್ವೇದ.ಕಾಂ

ಆರೋಗ್ಯವೇ ಭಾಗ್ಯ, 'ಅನ್ ಆಪಲ್ ಅ ಡೇ ಕೀಪ್ಸ್ ಡಾಕ್ಟರ್ ಅವೇ ' ಎಂಬಿತ್ಯಾದಿ ನುಡಿಗಟ್ಟುಗಳನ್ನು ಕೇಳಿದ್ದೇವೆ. ಪಂಚಕರಣಗಳನ್ನು ಸಮ ಸ್ಥಿತಿಯಲ್ಲಿಟ್ಟುಕೊಳ್ಳುವ ಕಲೆಯನ್ನು ಆಯುರ್ವೇದ ಕಲಿಸುತ್ತದೆ. ಆಯುರ್ವೇದದ ಬಗ್ಗೆ ಹೆಚ್ಚಿನ ಮಾಹಿತಿ, ಸೌಂದರ್ಯ, ಆರೋಗ್ಯ ವರ್ಧನೆಗೆ ಸಂಬಂಧಿಸಿದ ಟಿಪ್ಪಣಿಗಳು, ಪರಿಕರ ವಿಧಾನಗಳು, ಇತ್ಯಾದಿಗಳ ಬಗೆಗೆ ತಿಳಿದುಕೊಳ್ಳುವ ಆಸಕ್ತಿ ಇದೆಯೇ? ಇಲ್ಲಿದೆ ಒಂದು ಅಪರೂಪದ ತಾಣ http://www.ayurbalance.com/

ಟೈಮ್ ಆಂಡ್ ಡೇಟ್.ಕಾಂ

ಕುತೂಹಲಕಾರಿಯಾದ ತಾಣ ಇಲ್ಲೊಂದಿದೆ. ಜಗತ್ತಿನ ಯಾವುದೇ ಭೂಖಂದವಿರಲಿ, ಭೂ ವಲಯವಿರಲಿ ಅದಕ್ಕನುಗುಣವಾಗಿ ಆಯಾ ವಲಯಗಳ ಆಯಾ ಪ್ರಾದೇಶಿಕಕ್ಕನುಗುಣವಾಗಿ ನಿರ್ಧಿಷ್ಟ ವೇಳೆ ಮತ್ತು ತಾರೀಖನ್ನು ಗುರುತಿಸಬಹುದು. ಗತಿಸಿದ ವರ್ಷಗಳ ೧೯೯೫, ೧೯೯೮, ೨೦೦೦ ವೋ ಅಥವಾ ಮತ್ತ್ಯಾವುದೋ ಇಸ್ವಿಯ ಕ್ಯಾಲೆಂಡರ್ ನೋಡಬೇಕಾದ ಅಗತ್ಯವಿದೆಯೇ ? ಇಲ್ಲಿ ಅದನ್ನೂ ಇಸ್ವಿಯನ್ನು ಕ್ಲಿಕ್ಕಿಸಿಕೊಂಡು ಅದನ್ನೂ ಶೋಧಿಸಬಹುದು. ಸೂರ್ಯೋದಯ- ಸೂರ್ಯಾಸ್ತ ಮತ್ತು ಚಂದ್ರೋದಯ, ಚಂದ್ರಾಸ್ತದ ಸಮಯವನ್ನು ಗಮನಿಸಬೇಕೇ? ಮುಂದಿನ ಭವಿಷ್ಯತ್ತಿನ ೨೦೦೯ - ೨೦೧೦ ಇತ್ಯಾದಿ ಕ್ಯಾಲೆಂಡರ್ ಕೂಡಾ ವೀಕ್ಷಿಸಬಹುದು. ಇನ್ನೂ ಸ್ವಾರಸ್ಯಕರವಾದ ವಿವರಗಳು, ಟಿಪ್ಪಣಿಗಳು ಕುತೂಹಲ ಮೂಡಿಸುತ್ತವೆ. ನೀವೂ ಕ್ಲಿಕ್ಕಿಸಿ ನೋಡಿ. http://www.timeanddate.com/

ಓನ್ಲಿ ಟು ಕ್ಲಿಕ್ಸ್ .ಕಾಂ

ನಿಮಗೆ ವೈಯಕ್ತಿಕವಾಗಿ ಒಂದು ಜಾಲತಾಣ ರೂಪಿಸುವ ಆಸೆಯಿದೆಯಾ? ಅಥವಾ ಈಗಾಗಲೇ ನಿಮ್ಮದೊಂದು ವೆಬ್‌ಸೈಟ್ ಇದೆಯಾ? ಅದನ್ನು ನವೀಕರಿಸಲು ಇಚ್ಚಿಸುತ್ತೀರಾ? ಮುಖಪುಟ ಬದಲಾಯಿಸುವುದು ಹೇಗೆ? ನಿಮ್ಮ ನೆಚ್ಚಿನ ತಾಣಗಳ ಲಿಂಕ್ಸ್ ಕೊಡುವುದು ಹೇಗೆ? ಸ್ವಲ್ಪ ತಾಂತ್ರಿಕ ಮಾಹಿತಿ ನೀಡಿದರೆ ಉಳಿದಿದ್ದೆಲ್ಲಾ ನಾನೇ ಮಾಡುತ್ತೀನಿ ಎನ್ನುವವರಿಗೆ ಇಲ್ಲಿದೆ ಒಂದು ಸುಂದರ ತಾಣ. ಎರಡು ಬಾರಿ ಕ್ಲಿಕ್ಕಿಸಿ ಪ್ರಯತ್ನಿಸಬಹುದು. http://www.only2clicks.com/

ನೀಡ್ ಟು ನೊ

ನಿಮ್ಮ ಆರೋಗ್ಯದ ಕುರಿತು ಸಲಹೆ ಬೇಕಾ? ದೈಹಿಕ ಹಾಗೂ ಮಾನಸಿಕವಾಗಿ ಸಧೃಡಗೊಳ್ಳಲು ಏನು ಮಾಡಬೇಕು? ಮಾದಕದ್ರವ್ಯ ವ್ಯಸನದಿಂದ ಮುಕ್ತಿ ಪಡೆಯಲು ಬಯಸುತ್ತೀರಾ? ನೀವು ಆಯ್ದುಕೊಳ್ಳಲಿರುವ ವೃತ್ತಿಯ ಕುರಿತು ಗೊಂದಲಗಳಿವೆಯಾ? ಒಂದು ಕೆಲಸಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಒಳ್ಳೆಯ ಪರಿಚಯ ಪತ್ರ ತಯಾರಿಸಬೇಕಾ? ಎಷ್ಟೇ ಓದಿದರೂ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲವಾ? ಖಿನ್ನತೆ ಅನುಭವಿಸುತ್ತಿದ್ದೀರಾ? ಯುವಜನರ ಇಂತಹ ನೂರಾರು ಸಮಸ್ಯೆಗಳಿಗೆ ಸರಳವಾದ, ಉಪಯುಕ್ತ ಸಲಹೆಗಳನ್ನು ನೀಡುತ್ತದೆ ನೀಡ್ ಟು ನೊ ಎಂಬ ಜಾಲತಾಣ. ಹೆಚ್ಚಿನ ವಿವರಗಳಿಗೆ ಕೊಂಡಿ ಇಲ್ಲಿದೆ. http://www.need2know.co.uk/

ಜಾನಪದ ಲೋಕ

ಜನಪದ ಸಾಹಿತ್ಯ ಹಾಗೂ ಜನಪದ ಕಲಾಪ್ರಕಾರಗಳಲ್ಲಿ ಆಸಕ್ತಿಯುಳ್ಳವರಿಗೆ ಇದೊಂದು ಅದ್ಭುತ ತಾಣ. ಜನಪದ ವಿದ್ವಾಂಸ, ಕವಿ, ಸಾಹಿತಿ, ಕಥೆಗಾರರದ ಶ್ರೀ.ಎಚ್.ಎಲ್.ನಾಗೇಗೌಡರು ಈ ಸಂಸ್ಥೆಯ ರುವಾರಿಗಳು. ಮೈಸೂರು -ಬೆಂಗಳೂರು ಹೆದ್ದಾರಿಯಲ್ಲಿ ಬರುವ ರಾಮನಗರದಲ್ಲಿ ಸುಮಾರು ಹದಿನೈದು ಎಕರೆ ಜಮೀನಿನಲ್ಲಿ ಜನಪದ ಲೋಕವೇ ನಿಬ್ಬೆರಗಾಗುವಂತೆ ತೆರೆದುಕೊಂಡಿದೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಜನಪದ ಲೋಕ ಸಂಶೋಧನಾ ಕೇಂದ್ರವೆಂದು ಗುರುತಿಸಲ್ಪಟ್ಟಿದೆ. ಕರಕುಶಲ ಕರ್ಮಿಗಳ ಕಲೆಯ ಬೀಡು, ಡೊಳ್ಳು ಕುಣಿತ, ಕೋಲಾಟ, ಗೊರವರ ಕುಣಿತ ಮುಂತಾದ ಕಲಾ ಪ್ರಕಾರಗಳನ್ನು ಕಲಿಸಿ, ಜಾನಪದ ಕಲಾ ಪರಂಪರೆಯನ್ನು ಉಳಿಸುವಲ್ಲಿ ಇದೊಂದು ಆಶಾದಾಯಕ ಹೆಜ್ಜೆಯೆನ್ನಬಹುದು. ಡಿಪ್ಲೋಮಾ ಕೋರ್ಸುಗಳೂ ಇವೆ. ಜನಪದ ಸಾಹಿತ್ಯಸಕ್ತರಿಗೆ ಈ ತಾಣದಿಂದ ಬಹಳಷ್ಟು ಲಾಭವಾಗಬಹುದು. ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ ನೋಡಿ.... http://www.janapadaloka.org/en_index.html (ಈ ತಾಣವನ್ನು ಪರಿಚಯಿಸಿದವರು ರೇಣುಕಾ ನಿಡಗುಂದಿ)

ಕೆಎಸ್‌ಆರ್‌ಟಿಸಿ ಆನ್‌ಲೈನ್ ಬುಕ್ಕಿಂಗ್

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಈ ತಾಣ ನಿಮಗೆ ಬಸ್ಸಿನ ವಿವರ ಹಾಗೂ ವೇಳಾ ಪಟ್ಟಿಯ ಕುರಿತು ನಿಖರ ಮಾಹಿತಿ ನೀಡುತ್ತದೆ. ಈ ತಾಣಕ್ಕೆ ನೋಂದಾಯಿಸಿಕೊಂಡರೆ ಆನ್‌ಲೈನ್ ಬುಕ್ಕಿಂಗ್ ಕೂಡ ಮಾಡಬಹುದಾಗಿದೆ. ಈ-ಟಿಕೇಟ್ ಸೌಲಭ್ಯವೂ ಇದೆ. ಶಾಲಾ ಮಕ್ಕಳಿಗೀಗ ಬೇಸಿಗೆ ರಜೆ. ಈ ತಾಣ ಪ್ರಯೋಜನವಾದೀತು. ಇಲ್ಲಿ ಕ್ಲಿಕ್ಕಿಸಿ ನೋಡಿ http://ksrtc.in/# (ಈ ತಾಣವನ್ನು ಪರಿಚಯಿಸಿದವರು ರೇಣುಕಾ ನಿಡಗುಂದಿ)

ಸ್ಕೈ ಸ್ಕ್ಯಾನರ್

ನೀವು ವಿದೇಶಗಳಿಗೆ ಪ್ರವಾಸ ಹೊರಡಬೇಕೆಂದಿದ್ದೀರಾ? ಆದರೆ ಎಷ್ಟು ಖರ್ಚಾಗುತ್ತೆ? ಹೇಗೆ ಹೋಗಬೇಕು? ಟಿಕೆಟ್ ಬುಕ್ ಮಾಡುವುದು ಹೇಗೆ? ಅಗ್ಗದ ದರದ ವಿಮಾನ ಸೇವೆಗಳಿವೆಯಾ? ಯಾವ ವಿಮಾನಕ್ಕೆ ಎಷ್ಟು ಚಾರ್ಜ್ ಆಗತ್ತೆ? ಋತುಮಾನ ರಿಯಾಯತಿಗಳು ಲಭ್ಯವಿದೆಯಾ? ಇಂತಹ ನಿಮ್ಮ ನೂರಾರು ಪ್ರಶ್ನೆಗಳಿಗೆ ನಿಖರವಾಗಿ ಉತ್ತರ ಹೇಳುತ್ತದೆ ಸ್ಕೈ ಸ್ಕ್ಯಾನರ್ ಎಂಬ ಜಾಲ ತಾಣ. ಎಲ್ಲಿಂದ ಎಲ್ಲಿಗೆ ಎಂದು ಟೈಪಿಸಿ ಸರ್ಚಿಗೆ ಕೊಟ್ಟರೆ ಸಾಕು ನಿಮ್ಮ ಮುಂದೆ ಮಾಹಿತಿಗಳ ಭರಪೂರವೇ ಬಂದು ಬೀಳಲಿದೆ. ತಡವೇಕೆ ಕೊಂಡಿ ಇಲ್ಲಿದೆ. www.skyscanner.net

ಬೀಜಿಂಗ್ - 2008

ಈ ಬಾರಿಯ ಒಲಿಂಪಿಕ್ಸ್ ಬೀಜಿಂಗ್‌ನಲ್ಲಿ ನಡೆಯಲಿದೆ. ಈಗಾಗಲೇ ಒಲಿಂಪಿಕ್ಸ್‌ ಜ್ಯೋತಿ ಹಲವು ದೇಶಗಳನ್ನು ದಾಟಿಕೊಂಡು ಮುನ್ನಡೆಯುತ್ತಿದೆ. ಈ ಹೊತ್ತಲ್ಲಿ ನಿಮಗೆ ಒಲಿಂಪಿಕ್ಸ್ ಕುರಿತು ತಿಳಿದುಕೊಳ್ಳಬೇಕೆ? ಚೀನಾದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಸಿದ್ಧತೆಗಳ ಕುರಿತು ತಿಳಿದುಕೊಳ್ಳುವ ಕುತೂಹಲ ಇದೆಯೇ? ಒಲಿಂಪಿಕ್ಸ್ ಪ್ರಾರಂಭವಾದದ್ದು ಹೇಗೆ? ಇಲ್ಲಿಯವರೆಗೆ ಎಷ್ಟು ಜನ ಸ್ಪರ್ಧಿಗಳು ಭಾಗವಹಿಸಿದ್ದಾರೆ? ಎಷ್ಟು ದಾಖಲೆಗಳು ನಿರ್ಮಾಣಗೊಂಡಿದೆ? ಎಲ್ಲೆಲ್ಲಿ ಕ್ರೀಡಾಕೂಟಗಳು ನಡೆದಿವೆ. ಸುಮ್ಮನೆ ಎಲ್ಲವನ್ನೂ ಒಮ್ಮೆ ಕಣ್ಣಾಡಿಸುವ ಮನಸ್ಸಾಗುತ್ತಿದೆಯಾ? ಇನ್ನೇಕೆ ತಡ, ಬೀಜಿಂಗ್ -2008 ಜಾಲತಾಣ ಪ್ರವೇಶಿಸಿ. http://en.beijing2008.cn/

ಕುವೆಂಪು.ಕಾಂ

ರಸಋಷಿ ಕುವೆಂಪು ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಆಸಕ್ತಿ ಇದೆಯಾ? ಅವರ ಜೀವನ ಚರಿತ್ರೆ, ನೆನಪು, ಕೃತಿಗಳು, ಚಿತ್ರಗಳು, ಹಸ್ತಪ್ರತಿ, ವಿಶ್ವಮಾನವ ಸಂದೇಶವನ್ನು ನೋಡಬೇಕನಿಸುತ್ತಿದೆಯಾ? ಈ ಎಲ್ಲ ಸಾಧ್ಯತೆಗಳನ್ನು ಕುವೆಂಪು.ಕಾಮ್ ನನಸಾಗಿಸಿದೆ.

ಕುವೆಂಪುರವರ ಕೃತಿಗಳೊಟ್ಟಿಗೇ ಉದಯರವಿ ಪ್ರಕಾಶನ ಸಹ ಕನ್ನಡ ಸಾಹಿತ್ಯ ಚರಿತ್ರೆಯ ಅವಿಭಾಜ್ಯ ಅಂಗ. ಉದಯ ರವಿ ಪ್ರಕಾಶನ ಆಸ್ಥೆಯಿಂದ ಈ ಜಾಲತಾಣವನ್ನು ಕನ್ನಡದ ಓದುಗರಿಗೆ ನೀಡಿದೆ. ಕುವೆಂಪು ಅವರ ಅಪರೂಪದ ಛಾಯಾಚಿತ್ರವೂ ಈ ಜಾಲತಾಣದ ಸಂಗ್ರಹದಲ್ಲಿದೆ. ಒಮ್ಮೆ ಭೇಟಿ ಕೊಡಿ. http://www.kuvempu.com

ಕನ್ನಡ ವಿಕಿಪೀಡಿಯಾ

ನಿಮಗೆ ಒಂದು ವಿಷಯ, ವಸ್ತು, ದೇಶ, ಕಾಲ ಅಥವಾ ಇನ್ಯಾವುದರ ಬಗ್ಗೆಯಾದರೂ ಕನ್ನಡದಲ್ಲಿ ಮಾಹಿತಿ ಬೇಕಾ? ತಡ ಏಕೆ, ನೇರವಾಗಿ ಕನ್ನಡ ವಿಕಿಪೀಡಿಯ ಪ್ರವೇಶಿಸಿ. ಈಗಾಗಲೇ ಕನ್ನಡ ವಿಕಿಪೀಡಿಯಾದಲ್ಲಿ ೫,೪೨೦ ಲೇಖನಗಳನ್ನು ಸೇರಿಸಲಾಗಿದೆ. ನಿಮ್ಮ ಬಳಿ ಏನಾದರೂ ಹೊಸ ಮಾಹಿತಿ ಇದೆಯಾ? ಅಥವಾ ನಿಮಗೆ ವಿಕಿಪೀಡಿಯಾದಲ್ಲಿ ಲಭಿಸಿರುವ ಮಾಹಿತಿಯಲ್ಲಿ ತಪ್ಪುಗಳಿವೆಯಾ? ನೀವೇ ಹೊಸ ಮಾಹಿತಿಯನ್ನು ಸೇರಿಸಬಹುದು. ತಪ್ಪಾಗಿದ್ದ ಲೇಖನವನ್ನು ತಿದ್ದಿ ಇನ್ನಷ್ಟು ಉತ್ತಮ ಪಡಿಸಬಹುದು. ಬಹುಮಾಧ್ಯಮ ಮಾಹಿತಿ ತುಣುಕುಗಳನ್ನೂ ಸೇರಿಸಬಹುದು.

ಕನ್ನಡ ವಿಕಿಪೀಡಿಯ ಶೀಘ್ರವಾಗಿ ಬೆಳೆಯುತ್ತಿದೆ. ಈಗಾಗಲೇ ಕಲೆ - ಸಂಸ್ಕೃತಿ, ಇತಿಹಾಸ, ಭೂಗೋಳ, ವಿಜ್ಞಾನ, ಕರ್ನಾಟಕ - ಕನ್ನಡ, ಸಮಾಜ, ಧರ್ಮ - ಆಧ್ಯಾತ್ಮ, ಜನ - ಜೀವನ ಮತ್ತು ತಂತ್ರಜ್ಞಾನ ಎಂಬ ವಿಭಾಗಗಳಲ್ಲಿ ವಿಫುಲ ಮಾಹಿತಿಗಳಿವೆ. ತಿಂಗಳ ಪ್ರಮುಖ ದಿನಗಳು, ವಿಶೇಷ ಸುದ್ದಿಗಳು, ಹೊಸ ಲೇಖನಗಳು ಕನ್ನಡ ವಿಕಿಪೀಡಿಯಾದ ವಿಶೇಷ. ಅಂತರ್ಜಾಲದಲ್ಲಿ ಕನ್ನಡ ಹೇಗೆ ಬಳಸಬೇಕೆನ್ನುವ ತಾಂತ್ರಿಕ ವಿವರವೂ ಈ ತಾಣದಲ್ಲಿದೆ. http://kn.wikipedia.org

ಸಾಹಿತ್ಯಾಸಕ್ತರಿಗೊಂದು ಉಪಯುಕ್ತ ಕೊಂಡಿ

ಟ್ಯಾಗೋರ್, ಟಾಲ್ ಸ್ಟಾಯ್ , ಕಾಫ್ಕಾ, ಕೀಟ್ಸ್ , ಶೇಕ್ಸ ಪೀಯರ್, ವರ್ಡ್ಸ್ ವರ್ಥ, ಅರಿಸ್ಟಾಟಲ್ ಇವರ ಸಾಹಿತ್ಯವನ್ನು ಓದುವ ನಿಮ್ಮ ಹಳೆಯ ಕನಸು, ಹಂಬಲ. ಈವರೆಗೂ ಓದಲಾಗದ ಬೇಸರ, ಓಟದ ಬದುಕಿನಲ್ಲೂ ಇವೆಲ್ಲವನ್ನೂ ಓದಿಬಿಡುವ ಆಸೆ- ಓದುವ ಹಪಹಪಿ ಇದೆಯಾ? ಇಲ್ಲಿದೆ ನಿಮ್ಮ ಓದಿನ ಗ್ರಾಸಕ್ಕೆ ಒಳ್ಳೇ ತಾಣ. ನಿಮ್ಮ ಕೆಲಸದ ಬಿಡುವಿನಲ್ಲಿ ಕೂತು ಓದಿಕೊಳ್ಳಬಹುದು. http://www.online-literature.com/

ಸುಮಾರು ೨೫೦ ಕ್ಕೂ ಹೆಚ್ಚಿನ ಪ್ರಸಿದ್ಧ ಲೇಖಕರ - ೨೩೨೭ ಪುಸ್ತಕಗಳೂ, ೩೭೨೫ ಕವಿತೆಗಳು ಮತ್ತು ಸಣ್ಣ ಕತೆಗಳು, ಲೇಖಕರ ಜೀವನ ವೃತ್ತಾಂತವೆಲ್ಲವನ್ನೂ ಈ ತಾಣದಲ್ಲಿ ಹಿಡಿದಿಟ್ಟಿರುವ Jalic Inc ಎಂಬ ಕಂಪನಿ ಈ ತಾಣದ ಎಲ್ಲಾ ಹಕ್ಕು ಭಾದ್ಯತೆಗಳನ್ನೂ ಹೊಂದಿದೆ. ಇಲ್ಲಿನ ಲೇಖಕರ ಬಯಾಗ್ರಫಿಯನ್ನು ಅಚ್ಚುಕಟ್ಟಾಗಿ ಬರೆದವರು ಈ ಕಂಪನಿಗಾಗಿ ದುಡಿಯುತ್ತಿರುವ ಸಿಂಧು ಮೆನನ್ ಎಂಬ ಭಾರತೀಯ ಮಹಿಳೆ. ನೀವೂ ಒಮ್ಮೆ ಈ ತಾಣಕ್ಕೆ ಭೇಟ್ಟಿಕೊಟ್ಟು ನೋಡಿ.

ಆಧುನಿಕ ಇತಿಹಾಸದ ಆಕರ ಪುಸ್ತಕ

ಫೋರ್ಡ್‌ಹ್ಯಾಮ್ ವಿಶ್ವವಿದ್ಯಾಲಯವು ಆಧುನಿಕ ಇತಿಹಾಸಕ್ಕೆ ಸಂಬಧಿಸಿದ ಆಕರಗಳನನು ಕಲೆ ಹಾಕಿ ಒದಗಿಸಿರುವ ತಾಣ ಇದು. ಪಠ್ಯ, ಲೇಖನಗಳು ಮಾತ್ರವಲ್ಲದೆ ಬಹುಮಾಧ್ಯಮ (ಮಲ್ಟಿಮೀಡಿಯಾ) ಆಕರಗಳು ಇಲ್ಲಿ ದೊರೆಯುತ್ತವೆ. http://www.fordham.edu/halsall/mod/modsbook.html

ಈ ಯೋಜನೆಯ ವಿವರಗಳು, ಇತರ ದೇಶಗಳ ಚರಿತ್ರೆಯ ಆಕರಗಳ ಬಗ್ಗೆ ಈ ತಾಣಕ್ಕೆ ಭೇಟಿಕೊಡಿ http://www.fordham.edu/halsall/

ಪಾಸ್ ಪೋರ್ಟ್ ಮಾಹಿತಿ ಕೊಂಡಿ

ನಿಮಗೆ ಪಾಸ್ ಪೋರ್ಟ್ ಗಾಗಿ 'Application Form' ಬೇಕಾಗಿದೆಯಾ? ಹೇಗೆ ಅರ್ಜಿ ತುಂಬಬೇಕು ? ನೀವು ಹಾಕಿದ ಅರ್ಜಿ ಬಗ್ಗೆ ಅದರ ಸ್ಥಿತಿ-ಗತಿ ಬಗ್ಗೆ ತಿಳಿದುಕೊಳ್ಳಬೇಕೆ? ಅಥವಾ ಪಾಸ್ ಪೋರ್ಟ್ ಗೆ ಸಂಬಂಧಿಸಿದಂತೆ ಹತ್ತು ಹಲವು ಕಾಯಿದೆ- ಕಾನೂನುಗಳ ಮಾಹಿತಿ ಬೇಕಾಗಿದೆಯಾ? ತಲೆಯಲ್ಲಿ ನೂರು ಗೊಂದಲಗಳು, ಪಾಸ್ ಪೋರ್ಟ್ ಆಫೀಸಿಗೆ ಹೋಗಲಾರದ,ವಿಚಾರಿಸಲಾಗದ ಅನೇಕ ಅಡೆತಡೆಗಳಿರಬಹುದು. ನೀವೆಲ್ಲೂ ಪರದಾಡಬೇಕಿಲ್ಲ ಸಧ್ಯಕ್ಕೆ, ನೀವಿದ್ದ ಜಾಗದಿಂದಲೇ, ಇಲ್ಲಿ ಕ್ಲಿಕ್ಕಿಸಿ ನೋಡಿ....ಸಮಾಧಾನಕರ ಮಾಹಿತಿ ದೊರೆಯಬಹುದು. http://passport.nic.in/

ವಿದೇಶ ವ್ಯವಹಾರಕ್ಕೊಂದು ಕೊಂಡಿ

ದಿನ ನಿತ್ಯ ವಿದೇಶದೊಡನೆ, ವಿದೇಶಿ ಮುದ್ರೆಗಳೊಂದಿಗಿನ ವ್ಯಾಪಾರ -ವ್ಯವಹಾರ, ಉದ್ಯಮ ಹೊಂದಿದವರಿಗೆ, ಬಿಸಿನೆಸ್ ಟೂರ್, ಬಿಸಿನೆಸ್ ಮೀಟಿಂಗ್ ಎಂದು ಸತತವಾಗಿ ವಿದೇಶಕ್ಕೆ ಪ್ರಯಾಣಿಸುತ್ತಾ ಇರುವವರಿಗೆ. ವಿದೇಶಿ ಮುದ್ರೆಗಳ ಕೊಡು-ಕೊಳ್ಳುವ ವ್ಯವಹಾರಸ್ಥರಿಗೆ, ಅಮೇರಿಕನ್ ಡಾಲರನ್ನು ಯೂರೋಗೂ, ಇಂಡಿಯನ್ ರೂಪಾಯಿಯನ್ನು -ಡಾಲರಿಗೂ ಮತ್ತೊಂದು, ಮಗದೊಂದಕ್ಕೂ ಪರಿವರ್ತಿಸಬೇಕಾಗಿದೆಯೇ? ಇಲ್ಲಿದೆ ತಾಣ, ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲು...its an ideal site for currency converter, Foreign exchange services. http://www.oanda.com/

ಸಮಗ್ರ ವಚನ ಸಾಹಿತ್ಯ

ಕರ್ನಾಟಕ ಸರ್ಕಾರವು ನಿರ್ವಹಿಸುತ್ತಿರುವ ಸಮಗ್ರ ವಚನ ಸಾಹಿತ್ಯದ ತಾಣ ಇದು. ಕೆಲವು ದಿನಗಳಿಂದ ಕಣ್ಮರೆಯಾಗಿತ್ತು. ಈಗ ಮತ್ತೆ ಕಾಣಿಸಿಕೊಂಡಿದೆ.ಸುಮಾರು ೨೦ ಸಾವಿರ ವಚನಗಳ ಸಂಗ್ರಹ ಇಲ್ಲಿದೆ. ವಚನಗಳ ಹಾಡುಗಾರಿಕೆ, ವಾಚನಗಳನ್ನೂ ಕೇಳಬಹುದು. ಕಠಿಣಪದಗಳ ಕೋಶ, ವಚನಕಾರರ ಮಾಹಿತಿ ಇತ್ಯಾದಿಗಳೆಲ್ಲ ಇವೆ.

ತಾಂತ್ರಿಕ ನಿರ್ವಹಣೆ ಸಮರ್ಪಕವಾಗಿಲ್ಲ. ಎಲ್ಲ ಸರ್ಕಾರಿ ತಾಣಗಳಂತೆಯೇ ದುರ್ಬಲ ನಿರ್ವಹಣೆ ಇರುವ, ವಚನಾಸಕ್ತರಿಗೆ ಉಪಯುಕ್ತವಾದ ತಾಣ. ನಿಮ್ಮ 'ಪುಣ್ಯ' ಚೆನ್ನಾಗಿದ್ದು, ತಾಣ ಸುಸ್ಥಿತಿಯಲ್ಲಿದ್ದರೆ ವಚನಾಸಕ್ತರು ಒಮ್ಮೆ ಭೇಟಿಕೊಟ್ಟು ನೋಡಿ. http://www.vachanasahitya.org/

ಐಎಂಡಿಬಿ

ಸಿನಿಮಾ, ಟಿವಿ ಸೀರಿಯಲ್, ನಟರು, ತಂತ್ರಜ್ಞರು ಈ ಬಗ್ಗೆ ಅಪಾರ ಮಾಹಿತಿ ಮತ್ತು ವೀಡಿಯೋ ಗೇಮ್ಸ್ ಇರುವ ಬಹುದೊಡ್ಡ ಅಂತರ್ಜಾಲದ ತಾಣ ಇಲ್ಲಿದೆ. ಇದು ೧೯೯೦ರಲ್ಲಿ ಆರಂಭವಾಗಿ ೧೯೯೮ರಲ್ಲಿ ಅಮೆಝಾನ್ ಕಂಪೆನಿಯ ವಶಕ್ಕೆ ಹೋಯಿತು. ಸಿನಿಮಾಗಳ ಬಗ್ಗೆ ನಾವು ಊಹಿಸಬಹುದಾದ್ದಕ್ಕಿಂತಲೂ ಹೆಚ್ಚು ವಿವರವಾದ ತಾಂತ್ರಿಕ ಮಾಹಿತಿಯೂ ಇಲ್ಲಿ ಲಭ್ಯ. ಜಗತ್ತಿನ ಒಂಬತ್ತು ಭಾಷೆಗಳಲ್ಲಿ ಈ ವಿವರಗಳು ಸಿಗುತ್ತವೆ. ರಿಜಸ್ಟರ್ ಮಾಡಿಸಿಕೊಳ್ಳುವ ಗೋಜಿಲ್ಲದೆ, ಉಚಿತವಾಗಿಯೇ ಆಸಕ್ತರೆಲ್ಲರೂ ವಿಹರಿಸಬಹುದಾದ ತಾಣ ಇದು. ಈ ತಾಣದ ಕೆಲವು ಸೌಲಭ್ಯಗಳಿಗಾಗಿ ನೋಂದಾಯಿಸಿಕೊಳ್ಳುವುದು ಅಗತ್ಯವಾಗಬಹುದು. ಹಾಗೆಯೇ ಚಂದಾ ಕೊಟ್ಟು ಮತ್ತೆ ಹೆಚ್ಚು ವಿವವರಗಳನ್ನು ಪಡೆಯುವ ಅವಕಾಶವೂ ಇದೆ. ಸಿನಿಮಾ ಆಸಕ್ತರು ಒಮ್ಮೆ ನೋಡಿ. ಕನ್ನಡಕ್ಕೆ ಇಂಥ ಒಂದು ತಾಣ ಇದ್ದರೆ ಎಷ್ಟು ಚೆನ್ನ. http://www.imdb.com/

ಮಾಹಿತಿ ಭಂಡಾರ

ನಿಜವಾದ ಅರ್ಥದ ಮಾಹಿತಿ ಭಂಡಾರವಾಗಿರುವ ತಾಣವನ್ನು ಪರಿಚಯಿಸುತ್ತಿದ್ದೇನೆ. ಇಲ್ಲಿ ೮೫ ಬಿಲಿಯನ್ ಪುಟಗಳಷ್ಟು ಮಾಹಿತಿ ಉಚಿತವಾಗಿ ದೊರೆಯುತ್ತದೆ. ಚಲನಚಿತ್ರ, ಪಠ್ಯ, ಚಿತ್ರಗಳು, ಧ್ವನಿಸುರುಳಿಗಳು, ತಂತ್ರಾಂಶಗಳು ಇಲ್ಲಿ ಲಭ್ಯ. ಬಲು ಮಟ್ಟಿಗೆ ನಿಮಗೆ ಬೇಕಾದ ಮಾಹಿತಿ ಇಲ್ಲಿ ದೊರೆಯುತ್ತದೆ. http://www.archive.org/index.php

ಮುಕ್ತ ಗ್ರಂಥಾಲಯದ ವಿವರಗಳನ್ನು ತಿಳಿಯಲು ಕೆಳಕಂಡ ತಾಣಗಳನ್ನು ನೋಡಿ.

http://www.openlibrary.org/

http://www.openlibrary.org/details/openlibrary

ಆರ್ಬಿಟ್ ಡೌನ್ ಲೋಡರ್

ಈ ಬಾರಿ ಉಪಯುಕ್ತವಾದ ಪ್ರೋಗ್ರಾಂ ಒಂದರ ಬಗ್ಗೆ ಮಾಹಿತಿ.

ಮೈ ಸ್ಪೇಸ್, ಯುಟ್ಯೂಬ್, ಇಮೀಮ್, ಪ್ಯಾಂಡೊರಾ, ರಾಪಿಡ್ ಶೇರ್ ಮೊದಲಾದ ತಾಣಗಳಿಂದ ವೀಡಿಯೋ ಮತ್ತು ಸಂಗೀತವನ್ನು ಡೌನ್ ಲೋಡ್ ಮಾಡಿಕೊಳ್ಳಲು ಯತ್ನಿಸಿ ನಿರಾಶರಾಗಿದ್ದರೆ ಈ ತಾಣಕ್ಕೆ ಭೇಟಿಕೊಡಿ :http://www.orbitdownloader.com/

ಆರ್ ಟಿ ಎಂ ಪಿ (ರಿಚ್ ಮೀಡಿಯಾ ಟ್ರಾನ್ಸ್‍ಫರ್ ಪ್ರೋಟೋಕೋಲ್) ಅಳವಡಿಸಿರುವ ಕಾರ್ಯಕ್ರಮಗಳನ್ನು ನಿಮ್ಮ ಕಂಪ್ಯೂಟರಿಗೆ ಇಳಿಸಿಕೊಳ್ಳಲು ಅಗತ್ಯವಾದ ಉಚಿತ ತಂತ್ರಾಂಶ ಇಲ್ಲಿ ದೊರೆಯುತ್ತದೆ.

ವಿಚಾರಗಳ ಇತಿಹಾಸ

ಫಿಲಿಪ್ ಪಿ. ವೆರ್ನರ್ ಸಂಪಾದಿಸಿದ, ೧೯೭೩-೭೪ರಲ್ಲಿ ಪ್ರಕಟವಾದ ಸ್ಟಡೀಸ್ ಆಫ್ ಸೆಲೆಕ್ಟೆಡ್ ಪಿವೋಟಲ್ ಐಡಿಯಾಸ್ ಎಂಬ ಕೋಶವು ಮುದ್ರಿತ ರೂಪದಲ್ಲಿ ಸಿಗುವುದು ಕಷ್ಟ. ನಿಸರ್ಗ, ಮಾನವಿಕಗಳು, ಕಲೆ, ಇತಿಹಾಸ, ರಾಜಕೀಯ, ಧರ್ಮ ಮತ್ತು ತತ್ವಶಾಸ್ತ್ರ, ಗಣಿತ ಮತ್ತು ತರ್ಕ ವಿಚಾರಗಳಿಗೆ ಸಂಬಂಧಿಸಿದಂತೆ ಮುಖ್ಯವಾದ ಪರಿಕಲ್ಪನೆಗಳು, ವಿಚಾರಗಳು ಕಾಲಕ್ರಮದಲ್ಲಿ ಹೇಗೆ ಬೆಳೆದಿವೆ ಎಂಬುದನ್ನು ಈ ಪುಸ್ತಕವು ವಿವರಿಸುತ್ತದೆ. ಅದು ಈಗ ಎ ಡಿಕ್ಷನರಿ ಆಫ್ ದಿ ಹಿಸ್ಟರಿ ಆಫ್ ಐಡಿಯಾಸ್ ಎಂಬ ಹೆಸರಿನಲ್ಲಿ ಅಂತರ್ಜಾಲದಲ್ಲಿ ಲಭ್ಯವಿದೆ. ಆಧುನಿಕ ಮನುಷ್ಯ ಕಲ್ಪಿಸಿಕೊಂಡಿರುವ ವಿಚಾರಗಳ ಬಗ್ಗೆ ಆಸಕ್ತಿ ಇರುವವರು ನೋಡಲೇಬೇಕಾದ ತಾಣ ಇದು. http://etext.virginia.edu/DicHist/dict.html

ಗುಲಾಬಿಗಳು ತುಂಬಿದ ಮರಳುಗಾಡು (Desert Full of Roses)

ಸುಪ್ರಸಿದ್ಧ ಕವಿ ಘಾಲಿಬ್ ನ ಕವಿತೆಗಳನ್ನು ಉರ್ದು, ದೇವನಾಗರಿ, ಮತ್ತು ರೋಮನ್ ಲಿಪಿಗಳಲ್ಲಿ ಓದಬಹುದು. ಕವಿತೆಗಳನ್ನು ಕುರಿತು ಕಿರುವ್ಯಾಖ್ಯಾನಗಳೂ ಇವೆ. ಕಠಿಣ ಪದಕೋಶ, ಚಿತ್ರಗಳು, ಗಜಲ್ ಗಳ ಬಗ್ಗೆ ಮಾಹಿತಿಪೂರ್ಣವಾದ ಪರಿಚಯ ಇವೆಲ್ಲ ಇರುವ ಈ ತಾಣ ಕಾವ್ಯದ ಅಂತರ್ಜಾಲ ತಾಣವೊಂದು ಹೇಗಿರಬೇಕೆಂಬುದಕ್ಕೆ ಉದಾಹರಣೆಯಾಗಿದೆ. ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿರುವ ಶ್ರೀಮತಿ ಪ್ರಿಚೆಟ್ ತುಂಬ ಕಾವ್ಯಪ್ರೀತಿಯಿಂದ ರೂಪಿಸಿರುವ ತಾಣ ಇದು. http://www.columbia.edu/itc/mealac/pritchett/00ghalib/

ಪ್ರಾಜೆಕ್ಟ್ ಗ್ಯುಟೆನ್‌ಬರ್ಗ್-

ಇದು ಅಂತರ್ಜಾಲದ ಅತ್ಯಂತ ಹಳೆಯ ಉಚಿತ ಇ-ಪುಸ್ತಕ ತಾಣ. ಆರಂಭವಾದದ್ದು ೧೯೭೧ರಲ್ಲಿ. ಜಗತ್ತಿನ ಅತ್ಯುತ್ತಮ ಪುಸ್ತಕಗಳು ಎಲ್ಲರಿಗೂ ಉಚಿತವಾಗಿ ಲಭ್ಯವಾಗಬೇಕೆಂಬ ಅಪೇಕ್ಷೆಯಿಂದ ರೂಪುಗೊಂಡದ್ದು. ಲಘು ಸಾಹಿತ್ಯ, ಗಂಭೀರ ಸಾಹಿತ್ಯ ಮತ್ತು ಪರಾಮರ್ಶನ ಗ್ರಂಥಗಳನ್ನು ಹುಡುಕಲು, ನಮ್ಮ ಕಂಪ್ಯೂಟರಿಗೆ ಇಳಿಸಿಕೊಳ್ಳಲು ಉತ್ತಮವಾದ ತಾಣ ಇದು. http://promo.net/pg/

ಸುಮಾರು ಹತ್ತು ಸಾವಿರ ಪುಸ್ತಕಗಳು ನಮ್ಮ ಬಳಕೆಗೆ ಇಲ್ಲಿ ದೊರೆಯುತ್ತವೆ. ಈ ಯೋಜನೆ ಕಾರ್ಯಗತಗೊಂಡ ಬಗೆ ತಿಳಿಯಲು ನೋಡಿ: http://promo.net/pg/history.html

ಪುಟದ ಮೊದಲಿಗೆ
 
Votes:  9     Rating: 4.33    
 
 
ಸಂಬಂಧಿಸಿದ ಲೇಖನಗಳು
  ದೆಹಲಿಯ ಚಳಿಗೆಂದು ರೇಣುಕಾ ಬರೆದದ್ದು
  ಇಂಟರ್ ಸಿಟಿ ಟ್ರೈನಿನಲ್ಲೊಬ್ಬ ಕನ್ನಡ ಪುಸ್ತಕೋದ್ಯಮಿ
  ಸುದ್ದಿ ಮಾಧ್ಯಮಗಳು ಮತ್ತು ಹೊಣೆಗಾರಿಕೆ
  ಅವತಾರ ನೋಡಿ ವೈಶಾಲಿ ಬರೆದದ್ದು
  ಕ್ರಿಕೆಟಿನ ತವರುಮನೆಯ ಕಳವಳಗಳು: ಯೋಗೀಂದ್ರ ಬರಹ
  ಹಾರಲಾರದ ಹಕ್ಕಿ- ಒಂದು ಸೂಫಿ ಕಥೆ
  ನಿರ್ದೇಶಕ ಅಭಯಸಿಂಹರಿಗೆ ಪ್ರೇಕ್ಷಕ ಬರೆದ ಪತ್ರ
  ಮಹಾಲಿಂಗೇಶ್ವರ ಭಟ್ ಬರೆದ ಪ್ರೇಮ ಕವಿತೆ
  `ರಣ್' ಚಿತ್ರದಲ್ಲೂ ಸತ್ಯ ಸತ್ತಿಲ್ಲವೆ?
  ಪ್ರೇಮಶೇಖರರ `ಕನ್ನಡಿ' : ಭಾನುವಾರ ದೆಹಲಿಯಲ್ಲಿ ಬಿಡುಗಡೆ
  ರಾಷ್ಟ್ರಪ್ರಶಸ್ತಿಯ ಗುಬ್ಬಚ್ಚಿಗಳು : ಅಭಯಸಿಂಹ ಬರಹ
  ಕುಸುಮ ರೋಗವೂ ಟೀವಿ ಸ್ಟೋರೀನೂ: ಪ್ರಿಯಾ ಬರಹ
  ‘ಇವಳನ್ನು ಹುಚ್ಚಿ ಎಂದು ಒಪ್ಪಲಾರೆ' : ಗಂಗಾಧರಯ್ಯ ಬರಹ
  ಗಣರಾಜ್ಯೋತ್ಸವ ಮತ್ತು ದೇವನೂರು: ಒಂದು ಮಾತುಕತೆ
  ಗಣ ರಾಜ್ಯೋತ್ಸವ ಸ್ಪೆಷಲ್- ಆರು ದಶಕಗಳ ಗಣತಂತ್ರ
  ಲಂಕೇಶರ ಲಘು ಕಥಾಪ್ರಸಂಗಗಳು- ಬಸವರಾಜು ಬರಹ
  ಲಂಕೇಶರ ಲಘು ಕಥಾಪ್ರಸಂಗಗಳು- ಬಸವರಾಜು ಬರಹ
  ಈಗ ವಿಷ್ಣು ಇಲ್ಲ; ಮಾರ್ಕೆಟ್ ಇದೆ
  ಮಗನಿಗೇ ಶಿಷ್ಯನಾದ ಓಶೋರ ತಂದೆ- ರಾಘು ಬರಹ
  ಫೇಸ್ಬುಕ್ಕಲ್ಲಿ ಇಲ್ಲ ಅಂದ್ರೆ ಬದುಕೀನೇ ಇಲ್ವಾ?
  ತಿರುಮಲೇಶ್ ಅನುವಾದಿಸಿದ ಬ್ರೌನಿಂಗ್ ಕವಿತೆ
  ಕಾಮ್ರೇಡ್ ನೀಲಾ ಕಂಡ `ಕೆಂಪು ಬಸುದಾ'
  ಚಾಮಯ್ಯ ಮೇಷ್ಟರೂ ಹೋಗಿಬಿಟ್ಟರು
  ಕಣ್ಣುಮುಚ್ಚಿದ ಕಾಮ್ರೇಡ್ ಬಸು- ಅನಂತಮೂರ್ತಿ ಹೇಳಿದ್ದು
  ಭಾನುವಾರದ ವಿಶೇಷ- ಸಂಧ್ಯಾದೇವಿ ಬರೆದ ಕವನ ಕಥನ
  ಹೈಟಿಯಲ್ಲಿ ಕೊಲೆಗಡುಕಿ ವಸುಂಧರೆ
  `ಗೌಡ್ರು ಬಯ್ದಿದ್ದು ಒಂದ್ಸಲ... ಆದರೆ ನೀವು?'
  ಸಂಕ್ರಾಂತಿಯ ನೆಪದಲ್ಲಿ ಕಿರಂ ಸಿಟ್ಟು
  ಪಟೇಲ್ ಮಂಜಯ್ಯನವರು ಮೊಮ್ಮಗಳಿಗೆ ಬರೆದ ಪತ್ರ
  ಕನ್ನಡದ ಪಾಪುಗೆ 90 ವರ್ಷ
  ಕೆಟ್ಟ ಮಾತಾಡಿ ಗಮನ ಸೆಳೆದ ಗೌಡರು
  ಒಂದು ಮಂದಹಾಸದಂತೆ ಮತ್ತೆ ಕೆಂಡಸಂಪಿಗೆ
  ಸಂಕ್ರಾಂತಿಯ ಕಂಪಿಗೆ ಮತ್ತೆ ಕೆಂಡಸಂಪಿಗೆ
  ಪರಮಾಣು ವಿದ್ಯುತ್ ಪರಿಸರ ಸ್ನೇಹಿಯೇ?
  ಸ್ವರ್ಗದ ಬಾಗಿಲು: ಒಂದು ಸೂಫಿ ಕಥೆ
  ಕರುನಾಡ ಕಲಾವಿದನಿಗೆ ಸಿಂಗಪುರದಿಂದ ಮೂರ್ತಿ ಬರೆದ ಪತ್ರ
  ಫೇಸ್ ಬುಕ್ಕಿನಲ್ಲಿ ಗೊರಿಲ್ಲಾ ಗೆಳೆಯರು
  ಯುರೋಪ್ ಪ್ರವಾಸದ ಕಸಾನುಭೂತಿ
  ಎಡಚರಿಗೊಂದು ಸಂತಸದ ಹೊಸ ಚಡ್ಡಿ
  ‘ಮಾನ್ಸೆಂಟೋ’ ಅವಾಂತರಗಳು: ಒಂದು ಸಾಕ್ಷ್ಯಚಿತ್ರ
  ಮುಕುಂದ ಜೋಶಿ ಅನುವಾದಿಸಿದ ಹಿಂದಿ ಕವಿತೆ
  ಗೂಗಲ್ ಗೆ ಚೀನಾದಲ್ಲಿ ಗಿರಾಕಿಗಳೇ ಇಲ್ಲ
  ಅಹೋಬಲ ಶಂಕರರ ಕುರಿತು ಉಮಾ: ಇನ್ನಷ್ಟು
  ನಾನು ಕಂಡ ಅಹೋಬಲ ಶಂಕರ: ಉಮಾ ಸಂಪಾದಕೀಯ
  ಬಿಜೆಪಿಗೆ ಜಿನ್ನಾ ಎಂಬ ‘ಜಿನ್ನು’ ಹಿಡಿದಿದೆಯೇ?
  ಧಾರವಾಡದ ಕರ್ನಾಟಕ ಇತಿಹಾಸ ಸಂಶೋಧನ ಮಂಡಲ: ಒಂದು ಪರಿಚಯ
  ಸೂಫಿ ಕಥೆ: ‘ಬಗ್ದಾದಿಗೆ ಬಂದ ಮೃತ್ಯು ದೂತ’
  ಎತ್ತರದ ಹುಡುಗನ ಕಷ್ಟಗಳು
  ರಾಮಚಂದ್ರ ದೇವ ಬರೆದ ಒಂದು ಹಳೆಯ ಕವಿತೆ
  ಇನ್ನು ನಾವು ಬಲ್ಬಿಗೆ ವಿದಾಯ ಹೇಳಬಹುದೇ?
  ನೂರಏಳರ ಅಜ್ಜಿಗೆ ಇಪ್ಪತ್ಮೂರನೇ ಮದುವೆಯಾಗುವಾಸೆ!
  ಅನುಪಮಾ ಅನುವಾದಿಸಿದ ನಾಮದೇವ್ ಕವಿತೆ
  ಚೀನಾ: ದುಡಿವವರ ಕೈಗೆ ಅಂತರ್ಜಾಲ ಬಲ
  ಉಮಾ ಸಂಪಾದಕೀಯ:ತಿಮ್ಮಯ್ಯನೂ, ರಾಮಾಗಳೂ,ಲಿಂಗ ಲೆಕ್ಕಾಚಾರಗಳೂ
  ನಗರದ ದೃಶ್ಯಗಳು, ಕಾಡಿನ ಸದ್ದುಗಳು: ರಾಜೇಶ್ವರಿ ಬರಹ