ಸೆಪ್ಟೆಂಬರ್ ೨೩, ೨೦೧೪
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಪ್ರೇಮಿಗಳ ದಿನಕ್ಕೆ ನಿಜಾರ್ ಖಬ್ಬಾನಿ:ಉದಯ್ ಇಟಗಿ ಅನುವಾದ    
ಉದಯ್ ಇಟಗಿ
ಮಂಗಳವಾರ, 14 ಫೆಬ್ರವರಿ 2012 (02:32 IST)

ಸಿರಿಯಾ ಮೂಲದ  ಕವಿ (೧೯೨೩-೧೯೯೮) ನಿಜಾರ್ ಖಬ್ಬಾನಿ ಇಪ್ಪತ್ತನೇ ಶತಮಾನದ ಪ್ರಸಿದ್ಧ ಕವಿ. ಅರಬ್ ಭಾಷೆಯ ‘ಪ್ರೇಮ ಕವಿ’ ಎಂದೇ ಖ್ಯಾತಿ ಹೊಂದಿರುವ ನಿಜಾರ್ ಖಬ್ಬಾನಿಯ ಬಹಳಷ್ಟು ಕವನಗಳು ಪ್ರೀತಿ ಮತ್ತು ಪ್ರಣಯದ ಸುತ್ತ ಸುತ್ತುತ್ತವೆ. ಆದರೆ ಈತನ ಕವನಗಳು ಪ್ರೀತಿಯ ಬಗ್ಗೆ ಅಗಾಧವಾದಂಥದ್ದೇನನ್ನೂ ಹೇಳದೆ ಅದರ ಹುಚ್ಚುತನಗಳನ್ನು ಮತ್ತದರ ಪರಕಾಷ್ಠತೆಯನ್ನು ಮಾತ್ರ ಕಟ್ಟಿಕೊಡುತ್ತವೆ. ಆದರೂ ವಿಮರ್ಶಕರು ‘ಪ್ರೇಮಿಗಳು ಈತನ ಕವನಗಳನ್ನು ಓದದ ಹೊರತು ಪ್ರೀತಿಯೆಂದರೇನೆಂದು ಅರ್ಥಮಾಡಿಕೊಳ್ಳಲಾರರು’ ಎಂದು ಅಭಿಪ್ರಾಯಪಡುತ್ತಾರೆ. ಅಂಥ ಒಂದಷ್ಟು ಕವನಗಳನ್ನು ಪ್ರೇಮಿಗಳ ದಿನಕ್ಕಾಗಿ ಲಿಬಿಯಾದ ಸೆಭಾ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿರುವ ಉದಯ್ ಇಟಗಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ನಾನು ನಿನ್ನ ಬೇರೆ ಪ್ರಿಯಕರನಂತಲ್ಲ ಪ್ರಿಯೆ!
ನಾನು ನಿನ್ನ ಬೇರೆ ಪ್ರಿಯಕರನಂತಲ್ಲ ಪ್ರಿಯೆ!
ಅವನು ನಿನಗೆ ಮೋಡ ತಂದು ಕೊಟ್ಟರೆ
ನಾನು ನಿನಗೆ ಮಳೆಹನಿಯಾಗಿ ಸುರಿಯುವೆ
ಅವನು ನಿನಗೆ ಉರಿವ ದೀಪ ಕೊಟ್ಟರೆ
ನಾನು ನಿನಗೆ ಹೊಳೆವ ಚಂದಿರನನ್ನು ತರುವೆ
ಅವನು ನಿನಗೆ ಮರದ ಹೂಗಳನ್ನು ಕಿತ್ತುಕೊಟ್ಟರೆ
ನಾನು ನಿನಗೆ ಮರವಾಗಿ ನೆರಳನಿಡುವೆ
ಅವನು ನಿನಗೆ ಹಡಗನ್ನು ತಂದುಕೊಟ್ಟರೆ
ನಾನದರ ನಾವಿಕನಾಗಿ ಜೊತೆಯಲ್ಲಿ ಸಾಗುವೆ.

ಅವಸರದ ಮುತ್ತು
ಪ್ರತಿಸಲ ನಾವಿಬ್ಬರೂ
ಸಾಕಷ್ಟು ವಿರಹ ವೇದನೆಯನ್ನನುಭವಿಸಿ
ಮತ್ತೆ ಒಂದಾಗಿ
ನಾನು ನಿನಗೆ ಮುತ್ತನ್ನಿಡುವಾಗಲೆಲ್ಲಾ
ನನಗನಿಸುತ್ತೆ
ಅವಸರವಸರವಾಗಿ
ನಾನೊಂದು ಪ್ರೇಮಪತ್ರವನ್ನು ಬರೆದು
ಅಂಚೆಡಬ್ಬಕ್ಕೆ ಹಾಕುತ್ತಿದ್ದೇನೆಂದು!

ಭಾಷೆ
ಪ್ರೀತಿಯಲ್ಲಿ ಮುಳುಗಿದ ಹುಡುಗನೊಬ್ಬ
ಹೇಗೆ ತಾನೆ ಮತ್ತೆ ಮತ್ತೆ ಅವವೆ
ಸವಕಳಿ ಹಿಡಿದ ಪದಗಳನ್ನು ಬಳಸಿಯಾನು
ಎಲ್ಲ ಹುಡುಗಿಯರು
ತನ್ನ ಪ್ರಿಯತಮ
ಭಾಷಾತಜ್ಞನಾಗಿರಬೇಕು
ಭಾಷಾಪಂಡಿತನಾರಬೇಕೆಂದು ಹಂಬಲಿಸುವಾಗ?
ಹಾಗೆಂದೇ ನಾನು ಆ ಭಾಷೆ ಈ ಭಾಷೆಗಳನ್ನು ಬಿಟ್ಟು
ಬರೀ ಪ್ರೀತಿಯ ಭಾಷೆಯೊಂದನ್ನು ಮಾತ್ರ
ಸೂಟುಕೇಸಿನಲ್ಲಿ ತುಂಬಿಕೊಂಡುಬಂದು
ಅವಳ ಮುಂದೆ ಸುರಿದೆ
ಅವಳು ಕುಣಿದು ಕುಪ್ಪಳಿಸಿದಳು.

ನಿನ್ನ ಧ್ಯಾನ
ನಾನು ಆಗಾಗ
ಸಮುದ್ರ ತಟದ ಮೇಲೆ ಕುಳಿತುಕೊಂಡು
ನಿನ್ನ ಬಗ್ಗೆ ಧೇನಿಸುವಾಗಲೆಲ್ಲಾ
ಅಲೆಗಳು ಬಂದು
ನನ್ನ ಪಾದಗಳಿಗೆ ಕಚಗುಳಿಯನ್ನಿಟ್ಟು
ಏನು ಯೋಚಿಸುತ್ತಿರುವಿ ಎಂದು ಕೇಳುತ್ತವೆ?
ಏನೆಂದು ಹೇಳಲಿ ನಾನು ಅವಕೆ?
ನಾನೇನಾದರೂ
ನಿನ್ನನ್ನು ಎಷ್ಟೊಂದು ಪ್ರೀತಿಸುತ್ತಿದ್ದೇನೆ,
ಎಷ್ಟೊಂದು ಹಚ್ಚಿಕೊಂಡಿದ್ದೇನೆಂದು
ಆ ಅಲೆಗಳಿಗೆ ಹೇಳಿದ್ದರೆ

ಬಹುಶಃ, ಅವು ಎರಡೂ ದಡಗಳನ್ನು ಬಿಟ್ಟು
ಸುಮ್ಮನೆ ನನ್ನನ್ನು ಹಿಂಬಾಲಿಸುತ್ತಿದ್ದವೇನೋ!

ಉರಿವ ದೀಪಕ್ಕಿಂತ ಹೊಳೆವ ಸೂರ್ಯ ಚೆಂದ
ಉರಿವ ದೀಪಕ್ಕಿಂತ ಹೊಳೆವ ಸೂರ್ಯ ಚೆಂದ
ಬರಡು ಶಬ್ದಗಳಿಗಿಂತ ಮಿಡಿವ ಕವನ ಚೆಂದ
ಬಿರಿದ ಅಧರಗಳಿಗಿಂತ ಮಧುರ ಮುತ್ತು ಚೆಂದ
ನಮ್ಮಿಬ್ಬರಿಗಿಂತ ನಾನು ನಿನಗೆ ಬರೆದ ಪ್ರೇಮ ಪತ್ರಗಳೇ ಚೆಂದ
ಏಕೆಂದರೆ ಕೊನೆಗೆ ಈ ಜಗದಲ್ಲಿ ಉಳಿವ ಏಕೈಕ ಸಾಕ್ಷಿ ಅವೊಂದೇ!
ಅವಕೆ ಮಾತ್ರ ಸಾಧ್ಯ - ನಿನ್ನ ಸೌಂದರ್ಯವನ್ನು ಬಿಡಿಸಿಡಲು
ಹಾಗೂ ನನ್ನ ಹುಚ್ಚುತನವನ್ನು ಸಾರಿ ಹೇಳಲು!

ನಿನ್ನ ಪ್ರೀತಿ
ನಿನ್ನ ಪ್ರೀತಿ
ನಿನ್ನ ಕಂಗಳಷ್ಟೇ
ನಿಗೂಢ,
ಗಹನ,
ಹಾಗೂ ಇಂದ್ರಿಯಾತೀತ.
ಹುಟ್ಟು, ಸಾವುಗಳನ್ನು
ಊಹಿಸಲಾಗದಂತೆ
ನಿನ್ನ ಪ್ರೀತಿಯನ್ನು ಸಹ
ಊಹಿಸಲಾಗದು.

ನಮ್ಮ ಮನೆಯ ಟೆಲಿಫೋನು ರಿಂಗಣಿಸಿದಾಗ
ನಮ್ಮ ಮನೆಯ ಟೆಲಿಫೋನು ರಿಂಗಣಿಸಿದಾಗ
ಸಣ್ಣ ಮಗುವಿನಂತೆ
ನಾನು ಅತ್ಯುತ್ಸಾಹದಿಂದ
ಅದರತ್ತ ಓಡುತ್ತೇನೆ.
ಆ ನಿರ್ಭಾವುಕ ಸಾಧನವನ್ನು
ತಬ್ಬಿಕೊಳ್ಳುತ್ತೇನೆ.
ತಬ್ಬಿಕೊಳ್ಳುತ್ತಾ
ಅದರ ತಣ್ಣನೆಯ ತಂತಿಗಳನ್ನು ಹಿಂಡುತ್ತೇನೆ.
ಹಿಂಡುತ್ತಾ ಹಿಂಡುತ್ತಾ ಕಾಯುತ್ತೇನೆ
ನಿನ್ನ ಬೆಚ್ಚನೆಯ ದನಿಗಾಗಿ
ಹಾಗೂ ಮಧುರ ಸಂಗೀತದಂತೆ ತೇಲಿ ಬರುವ
ನಿನ್ನ ಮಾತುಗಳಿಗಾಗಿ.
ತಕ್ಷಣ ನಾನು ಖುಶಿಯಿಂದ ಕಿರುಚುತ್ತೇನೆ
ನೀನು ನನ್ನನ್ನು ನೆನಪಿಸಿಕೊಂಡಿದ್ದಕ್ಕಾಗಿ
ಹಾಗೂ ಕಾಣದ ಜಗವೊಂದರಿಂದ
ನನಗೆ ಕರೆ ಮಾಡಿದ್ದಕ್ಕಾಗಿ!

ನಿನಗಾಗಿ
ನಿನಗಾಗಿ
ಕೇವಲ ನಿನಗಾಗಿ
ನಾನು ಪ್ರತ್ಯೇಕ ಪದಗಳನ್ನು
ಬಳಸಬೇಕಿದೆ
ಹೊಸ ಭಾಷೆಯೊಂದನ್ನು
ಹುಟ್ಟುಹಾಕಬೇಕಿದೆ
ನಿನ್ನ ದೇಹ ಸೌಂದರ್ಯವನ್ನು ಬಣ್ಣಿಸಲು
ಹಾಗೂ ನನ್ನ ಪ್ರೀತಿಯ ಆಳವನ್ನು ಹಿಡಿದಿಡಲು!

ಬೇಕಾಗಿದೆ
ನಾನು  ಶಬ್ದಕೋಶ
ಹಾಗೂ ನನ್ನ ತುಟಿಗಳಿಗೆ ವಿದಾಯ ಹೇಳಬೇಕಿದೆ.
ಏಕೆಂದರೆ ನನಗೆ ಬಳಸಿದ ಪದಗಳನ್ನೇ
ಬಳಸಿ ಬಳಸಿ ಸಾಕಾಗಿಹೋಗಿದೆ.  
ನನಗೆ ಬೇರೇನೋ ಬೇಕಾಗಿದೆ
ಚೆರಿ-ಗಿಡವನ್ನಾಗಿ
ಅಥವಾ ಬೆಂಕಿಪೊಟ್ಟಣವನ್ನಾಗಿ
ಬದಲಾಯಿಸುವಂಥದ್ದು
ಅಥವಾ ಮಾತುಗಳನ್ನು
ಮುತ್ತುಗಳನ್ನಾಗಿ ಪರಿವರ್ತಿಸುವಂಥದ್ದು
ಅಪ್ಸರೆಯರು ಸಾಗರದಿಂದ ಎದ್ದು ಬರುವಂತೆ
ಅಥವಾ ಮಾಂತ್ರಿಕನ ದಂಡದಿಂದ ಕೋಳಿಪಿಳ್ಳೆಗಳು  ಉದುರುವಂತೆ
ಶಬ್ದಗಳು ತಾವೇ ತಾವಾಗಿ ಹೊರಹೊಮ್ಮುವಂಥ
ಬಾಯೊಂದು ನನಗೆ ಬೇಕಿದೆ.

ಪುಟದ ಮೊದಲಿಗೆ
 
Votes:  4     Rating: 4.5    
 
 
ಸಂಬಂಧಿಸಿದ ಲೇಖನಗಳು
  ವಿಕಾಸ್ ನೇಗಿಲೋಣಿ ಮಾಡಿರುವ ಜಪಾನಿ ಕವಿ ಪರಿಚಯ
  ತಿರುಮಲೇಶರು ಅನುವಾದಿಸಿದ ಹರ್ಮನ್ ಮೆಲ್ವಿಲ್ ನೀಳ್ಗತೆ
  ಭಾನುವಾರದ ವಿಶೇಷ: ಮನೋಜ್ ಪಿ. ಎಂ. ಬರೆದ ಕತೆ ‘ಕನಸು’
  ಎಂಬತ್ತೈದರ ಚಿತ್ತಾಲರ ಹನೇಹಳ್ಳಿ ಮತ್ತು ದೇವರು
  ಭಾನುವಾರದ ವಿಶೇಷ:ಕಾಮರೂಪಿ ಬರೆದ ಕಥೆ ‘ಉಪಪತ್ತಿಯೋಗ’
  ಬೆಳಗನುಟ್ಟವಳು:ನಟಿ ಭವಾನಿ ಪ್ರಕಾಶ್ ಬರೆದ ಹೊಸ ಕವಿತೆ
  ಮಿತ್ರಾ ವೆಂಕಟ್ರಾಜ ಬರೆದ ಸಣ್ಣಕಥೆ ‘ಬಾಬಿಯಕ್ಕ’
  ಜ. ನಾ. ತೇಜಶ್ರೀ ಅನುವಾದಿಸಿದ ಟಾಗೋರ್ ಕವಿತೆಗಳು
  ವಾರದ ವಿಶೇಷ: ರೇಣುಕಾ ಕತೆ ‘ಎರಡು ದಡಗಳ ಒಳದನಿಗಳು’
  ಭಾನುವಾರದ ವಿಶೇಷ: ಕೆ.ವಿ.ತಿರುಮಲೇಶ್ ಬರೆದ ಕತೆ ‘ಐತ’
  ಭಾನುವಾರದ ವಿಶೇಷ: ಗಣೇಶ್ ನೆಂಪೆ ಕತೆ ‘ಗಿರಿಯಮ್ಮನ ಚೌಡಿ’
  ತಿರುಮಲೇಶ್ ಅನುವಾದಿಸಿದ ವಾಲೆಸ್ ಸ್ಟೀವನ್ಸ್ ಕವಿತೆಗಳು
  ರಶೀದ್ ಅನುವಾದಿಸಿದ ರಿಲ್ಕ್ ಕವಿತೆ
  ಶಾಂತಿ ಅಪ್ಪಣ್ಣ ಬರೆದ ಕತೆ ‘ನನ್ನ ಹಾಡು ನನ್ನದು’
  ತೇಜಶ್ರೀ ಅನುವಾದಿಸಿದ ಒತೈನೊ ಅಮಿಸಿ ಕವಿತೆ
  ರಶೀದ್ ಅನುವಾದಿಸಿದ ಹಾಫಿಝನ ಕವಿತೆ
  ಶ್ರೀಕಾಂತ್ ಪ್ರಭು ಅನುವಾದಿಸಿದ ಕಾಫ್ಕಾ ಕತೆ
  ಮದರಿಯವರ ಗೊಂದಲಿಗ್ಯಾ:ಸಿದ್ಧರಾಮ ಪುಸ್ತಕ ಪರಿಚಯ
  ರಶೀದ್ ಅನುವಾದಿಸಿದ ಒಂದು ಪುಷ್ಕಿನ್ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಬೆಳಗು’
  ವೈಶಾಲಿ ಹೆಗಡೆ ಅನುವಾದಿಸಿದ ಡರೋತಿ ಪಾರ್ಕರ್ ಕವಿತೆಗಳು
  ತೇಜಶ್ರೀ ಅನುವಾದಿಸಿದ ಮೂರು ಯೇಟ್ಸ್ ಕವಿತೆಗಳು
  ಅಬ್ದುಲ್ ರಶೀದ್ ಅನುವಾದಿಸಿದ ಎಜ್ರಾ ಪೌಂಡ್ ಕವಿತೆ
  ವೇಂಪಲ್ಲಿ ಶರೀಫ್ ತೆಲುಗು ಕತೆ ‘ಪಚ್ಚೆ ರಂಗೋಲಿ’
  ಅನಸೂಯಾದೇವಿ ಬರೆದ ದಿನದ ಕವಿತೆ
  ಸುಧಾ ಚಿದಾನಂದ ಗೌಡ ಬರೆದ ದಿನದ ಕವಿತೆ
  ವಿನಾಯಕ ಭಟ್ ಬರೆದ ಕಥೆ ‘ದೂರತೀರ ಯಾನ’
  ನಕ್ಷತ್ರ ಬರೆದ ಆತ್ಮಕ್ಕೆ ಕೊಡಿಸಿಕೊಂಡ ಮುತ್ತುಗಳ ಕವಿತೆ
  ರಶೀದ್ ಅನುವಾದಿಸಿದ ರೈನರ್ ಮರಿಯಾ ರಿಲ್ಕನ ಕವಿತೆ
  ಟಿ.ತಿಮ್ಮಪ್ಪ ಬರೆದ ಕಥೆ ‘ಕೆಂಪು ಹರಳಿನ ಉಂಗುರ’
  ರೇಣುಕಾ ನಿಡಗುಂದಿ ಕತೆ ‘ಮೋಡ ಮತ್ತು ಮಳೆ’
  ಪ್ರತಿಭಾ ನಂದಕುಮಾರ್ ಬರೆದ ಟೊಮೇಟೋ ಗಿಡದ ಕವಿತೆ
  ಭಾನುವಾರದ ವಿಶೇಷ:ನೀಲಾಂಜಲ ಬರೆದ ಕಥೆ ‘ಅವನು ಅವಳು’
  ಮೌಲಾನಾ ಜಲಾಲುದ್ದೀನ್ ರೂಮಿ ಕವಿತೆ
  ಅನುಪಮಾ ಬರೆದ ಹೆಸರು ಇಡಲಾಗದ ಕವಿತೆ
  ಮಲ್ಲಿಕಾರ್ಜುನಗೌಡ ತೂಲಹಳ್ಳಿ ಬರೆದ ದಿನದ ಕವಿತೆ
  ವಾರದ ವಿಶೇಷ: ರಾಜೀವ ನಾರಾಯಣ ನಾಯಕ ಬರೆದ ಕತೆ ‘ಸೀ ಫೇಸ್’
  ವಿಕ್ರಂ ಹತ್ವಾರ್ ಬರೆದ ನಿರ್ವಾಣದ ಕವಿತೆ
  ರಶೀದ್ ಅನುವಾದಿಸಿದ ಲೋರ್ಕಾ ಕವಿತೆ
  ಭಾನುವಾರದ ವಿಶೇಷ: ದೇವನೂರ ಮಹಾದೇವ ಬರೆದ ‘ಅಮಾಸ’
  ರಾಬಿಯಾಶೇಖ್ ಬರೆದ ಎರಡು ಕವಿತೆಗಳು
  ಭಾನುವಾರದ ವಿಶೇಷ: ನಾರಾಯಣ ಯಾಜಿ ಬರೆದ ಕಥೆ ‘ಹುರುಬು’
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಮನೋಹರ ಉಪಾಧ್ಯ ಓದಿದ `ಡೇರಿ ಡಾಕ್ಟರ್ ಹೋರಿ ಮಾಸ್ಟರ್'
  ಅನಸೂಯಾದೇವಿ ಬರೆದ ಮೂರು ಸಖೀಗೀತೆಗಳು
  ಭಾನುವಾರದ ವಿಶೇಷ: ಸಿಡ್ನಿ ಶ್ರೀನಿವಾಸ್ ಬರೆದ ಕಥೆ ‘ಸಾರಿ’
  ನಕ್ಷತ್ರ ಬರೆದ ಎಳನೀರಗಂಜಿ ಕವಿತೆ
  ಎನ್.ಸಿ ಮಹೇಶ್ ಅನುವಾದಿಸಿದ ಒರಿಯಾ ಕವಿತೆಗಳು
  ಸಂದೀಪ್ ಫಡ್ಕೆ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಅಕ್ಕೋರು’
  ಪ್ರಜ್ಞಾ ಮತ್ತಿಹಳ್ಳಿ ಬರೆದ ರೈಲು ಪದ್ಯಗಳು
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಅಂತಾರಾಷ್ಟ್ರೀ ಗುಬ್ಬಚ್ಚಿ ದಿವ್ಸ:ತಿರುಮಲೇಶರ ಕವಿತೆ
  ಎನ್.ಸಿ. ಮಹೇಶ್ ಬರೆದ ಕಥೆ ‘ಬೇರಿಗೇ ಎಷ್ಟೊಂದು ಕಸಿ’
  ಪ್ರತಿಭಾ ನಂದಕುಮಾರ್ ಬರೆದ ಇನ್ನಷ್ಟು ದೇವೀ ಕವಿತೆಗಳು