ಸೆಪ್ಟೆಂಬರ್ ೧೯, ೨೦೧೪
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ನಕ್ಷತ್ರ ಕವಿತೆ ಯಾಕೆ ಬರೆಯುತ್ತಾಳೆ?    
ನಕ್ಷತ್ರ
ಗುರುವಾರ, 12 ಏಪ್ರಿಲ್ 2012 (01:46 IST)

ಅಂದೊಂದು ಸಲ ಮುಟ್ಟಾದಾಗ, ನನ್ನ ಮುದಿ ಅಜ್ಜಿ, "ಮುಟ್ಟಾಗು ಮುಟ್ಟಾಗು ಮುಗುದೆ, ಮುಟ್ಟು ನಿಲಿಸುವನು ಬರಲಿ, ಮುಟ್ಟಿ ನಿನ್ನಂಗಳದ ಗುಟ್ಟ ಬಿಡಿಸುವನು ಬರಲಿ" ಎಂದು  ಹಾಡಿ ತೊಡೆ ಚಿವುಟಿದ್ದಳು. ಅದೇನೋ ಮೈಯೆಲ್ಲಾ ನುಲಿದಂತಾಗಿ ಅವನು ಬರುವವರೆಗೂ ನನಗೆ ಮುಟ್ಟು. ಕವಿತೆಯಲ್ಲಿ ಬರುವವನು, ಮುಟ್ಟು ನಿಲ್ಲಿಸುವವನು ಒಂದು ದಿನ ಹೀಗೆ ಸಿಕ್ಕಿ, ಹಾಲು ಒಸರುವ ತನಕ ಬಿಡಲಿಲ್ಲ. ಮತ್ತೆ ತುಂಬಿಕೊಂಡ ಹಾಲಿಗೆ ನನ್ನ ಕಿರುಬೆರಳು, ಉಂಗುರ ಬೆರಳು, ನಡುಬೆರಳು, ತೋರುಬೆರಳುಗಳೆಲ್ಲಾ ದಣಿದವು. ಅಷ್ಟೇ! ಮತ್ತೊಂದು ದಿನ ಅವನಿಗೆ ಅವನು ತೀರಿ ಹೋಗಿರಬೇಕೆಂದು ಅನ್ನಿಸಿ ಕನಸಲ್ಲಿ ಬಂದನು. ಅವನು ದಿನಾ ಬರುವನೆಂದು ಗೋರಂಟಿ ಕಡೆದು, ಎಲ್ಲಾ ಬೆರಳಿಗೆ ಹಚ್ಚಿಕೊಂಡು ನಾನು ಕಾದಿರುತ್ತೇನೆ. ಬಣ್ಣದ ಮೇಲೆ ಬಣ್ಣ ಬರೆದು, ಒಂಟಿ ಗೋರಂಟಿಯ ಪರಿಮಳದಲ್ಲಿ ಹೀಗೆ ಕವಿತೆಗಳನ್ನು ಬರೆದುಕೊಂಡು. ಕಳೆದುಕೊಳ್ಳುತ್ತಲೇ ಪಡೆದುಕೊಳ್ಳುತ್ತಿರುತ್ತೇನೆ.

ಒಂದು ಕಡೆ ಮುದುಡಿಕೊಂಡು ಸೊಟ್ಟ ಅಕ್ಷರಗಳಲ್ಲಿ, ಮೈಯೆಲ್ಲಾ ಡೊಂಕಿಸಿಕೊಂಡು ನಡೆಸಿದ ಸೊಂಪನ್ನು, ನೂರು ಮುತ್ತುಗಳು, ನಾನು ಅವನನ್ನು ಹುರಿದು ಮುಕ್ಕುವುದು, ಅವನು ನನ್ನನ್ನು, ಬಯಸಿ ಬಯಸಿ ಬಗೆದು ಸುಸ್ತಾಗುವುದು, ಮತ್ತೆ ಅವನು ತೀರಿ ಹೋಗಿ ನಾನು ಗೋರಂಟಿ ಹಚ್ಚಿ ಕಾದಿರುವುದು... ಹೀಗೆ ಬರೆಯುವಾಗ ಅನುಭವಿಸಿದಂತೆಯೂ ಅನುಭವಿಸಿದಾಗ ಬರೆದಂತೆಯೂ ಇರುವ ನಮ್ಮ ಮಡೆಸ್ನಾನವೇ ಈ ಕವಿತೆಗಳಿರಬೇಕು. ಏನೂ ತೊಡಿಸುವುದಿಲ್ಲ ಇದಕ್ಕೆ, ಅವನು ಆಲಿಂಗಿಸಿದರೆ ಅದೇ ಅಲಂಕಾರ, ಬರಿದು ಬರಿದು, ಏನೂ ತೊಡಿಸದೆ ನೋಡಿದರೇ ಚಂದ. ಸುಂದರವಾದ ಕಣ್ಣಿನಷ್ಟೇ, ತುಟಿಗಳಷ್ಟೇ ಅಂದ. ಮುಟ್ಟುಚಿಟ್ಟಿನ ವ್ಯಥೆಯೇ ಬೇಡ, ಬಟಾಬಯಲಿನಂತೆ ಕವಿತೆ, ಕೊನೆಗೆ ಏನೂ ಕಾಣುವುದಿಲ್ಲ, ಕಾಣುವುದೆಲ್ಲಾ ಸೌಂದರ್ಯವಷ್ಟೇ.

ಹರಿದು ಹೋಗುವ ಹಾಲು

ಯಾರೂ ಏಳಬಾರದ ಸಮಯ
ಓಣಿಗಳಲ್ಲಿ ಯಾರೂ ಬರದಂತೆ
ಗಿಡದ ನೆರಳು ಅಡಗಿಸಿದೆ
ತಿರುವುಗಳು ದಾರಿ ಮಾಡುತ್ತಿದೆ
ಮೇಲೆ ತುದಿಯ ಬಾಗಿಲಿಲ್ಲದ ಕೋಣೆಗೆ
ಈಗಷ್ಟೇ ತಿಳಿಗಾಳಿ ಪರಿಮಳದ
ಸುಳಿವು ಹತ್ತಿದೆ

ನಾವು ಕೂಡುವುದನ್ನು ಹೇಗೆ
ಎಲ್ಲಿಂದ ಎಂದರೆ ಏನನ್ನುವುದು?
ಒಂದಷ್ಟು ಅಗಲಿಸಿದರೆ ಸಾಕು
ನಾನು ಹೂವಾಗುವೆ
ಹರಿದು ಹೋಗುವ ಹಾಲು

ನಮ್ಮ ನೆರಳಿನ ಓಣಿಯಲ್ಲಿ
ಹೊರಳಿ ಹೊರಳಿ ಬಾ ನನ್ನ
ಪಕಳೆಯೊಳಗೆ ಮತ್ತೆ ಮೊಗ್ಗಾಗುವೆ
ತಿಂದು ತೇಗಿ ಕುಡಿದು
ಭಾರದ ಒಂಟಿತನ
ಹೇಗೆ ಬಂದಿತ್ತು ನಿನಗೆ?

ಇಲ್ಲಿ ಹೀಗೆ ಗಲಿಬಿಲಿಯಾಗಿ
ಎಲ್ಲಾ ಎಸೆದು ದಬ್ಬಿ ಹೊರ ಹಾಕಿರುವೆ
ನೀನು ಎಂದರೆ ಏನು ನನಗೆ?
ಒಂದು ಚಂದದ ಮಳೆ, ದೂರದ ಮೋಡ
ದೀರ್ಘ ಅಲೆದಾಟ, ಅರ್ಧ ಮರೆತ ಕನಸು?
ಅಥವಾ ನಿನ್ನ ಪಕ್ಕದಲ್ಲಿ ಕವಿತೆಯಾಗಿ
ಕುಳಿತಿರುವುದೇ?

2
ನನ್ನ ಮುದ್ದು ಮತಿಭ್ರಮಣೆಗೆ
ನೀನೇ ಏನಾದರೂ ಕೊಡಬೇಕಷ್ಟೇ
ಏನಿಲ್ಲದಿದ್ದರೂ ಹಳೆಯ ಹುಡುಗಿ
ಚುಂಬಿಸಿದ ತುಟಿಯನ್ನಾದರೂ!

ಗೊತ್ತು ನನಗೆ
ಎಲ್ಲಾ ಮುಗಿಸಿದ ಹೊತ್ತು
ಆ ದ್ವೀಪದಲ್ಲಿ ಬೇಕಂತಲೇ
ಬೆನ್ನು ಮಾತ್ರ ಒದ್ದೆಯಾಗುವಂತೆ
ಮಲಗಿ ಮೇಲೆ ನೋಡುವುದು
ಮತ್ತು ಈ ತಡರಾತ್ರಿಯಲ್ಲಿ
ನಿನ್ನ ನೋಡಿ ತಡೆಯಲಾರದೆ
ನಿನ್ನ ಕಣ್ಣಲ್ಲೇ ನನಗೆ ಮುಕ್ತಿ
ದೊರೆಯುವುದು

ಹೊಸ ಬೆಳಕಿಗೆ ನೀನು
ಕಾಲುದಾರಿ ಅಡ್ಡಹಾದಿಯಲ್ಲಿ
ಹೇಳದೆ ನಡೆವಾಗ, ನಿನ್ನ ಬಗಲಲ್ಲಿ
ಜೋಳಿಗೆಯಂತೆ ಸುಸ್ತಾಗಿ
ಜೋಲಾಡಿಕೊಳ್ಳುತ್ತೇನೆ
ತುಂಬಿಸಿಕೊಂಡಷ್ಟು
ಹೆಗಲು ಭಾರವಾದರೆ
ನಾನು ಹಗುರಾಗುವುದು
ನೀನು ತಬ್ಬಿಬ್ಬುಗೊಳಿಸುವ ರೀತಿಗೆ

3
ಆ ಮುಗಿಯದ ಉದ್ದ ಹಾದಿ ಮತ್ತು
ನಿನ್ನ ಬೆನ್ನು ಬೇಕು
ಹಿಂದೆ ಇರುವವರು ಮುಂದೆ ಹೋಗುವವರು
ಯಾರಿಗೂ ಕಾಣದೆ ನಿನಗೂ ಗೊತ್ತಿರದೆ
ನಿನ್ನ ಬೆನ್ನ ಮೇಲಿನ
ಗೊಂಡೆಯಂತಹ ಚೂಪು ಕೆಡು
ನನ್ನ ತಿನ್ನುತ್ತಿದೆ
ಕುತ್ತಿಗೆ ಬೆನ್ನ ಹುರಿಯನ್ನು
ಘ್ರಾಣಿಸಿಕೊಂಡು ನಿನ್ನ ಕಿವಿಯ ಆಳದಲ್ಲಿ
ಬದುಕೆಲ್ಲ ಮುಗಿದು ಹೋದಂತೆ
ಇನ್ನೂ ಒತ್ತಿ ಒತ್ತಿ ಇಳಿಯುವೆ
ಈ ಗಾಳಿ, ಬಣ್ಣ, ದಿಗಂತಗಳು
ಹಾರಾಡುವ ನನ್ನ
ಅನಾಥ ಕೂದಲುಗಳು
ಎಲ್ಲಿಗೋ ಕರೆಸಿಕೋ ಎನ್ನುತ್ತಿದೆ

4
ಕಣ್ಣೆದುರಿಗೆ ತೆರೆ ಎಳೆದಂತಾಯ್ತು
ಭಾರ ಮೈಗೆ ನಿದ್ದೆಯೂ ಹತ್ತುತ್ತಿಲ್ಲ
ಎಲ್ಲಾ ಅವಷ್ಟಕ್ಕೆ ಅವು ಸುಖವಾಗಿದೆ
ನನ್ನಷ್ಟಕ್ಕೆ ನಾನು...
ಹೀಗೆಲ್ಲಾ ಯಾಕಗಬೇಕು
ಎಲ್ಲಾ ಕೊಟ್ಟು ಏನೂ ಉಳಿಸದೆ ಬಿಟ್ಟು
ಹೇಗೆ ಬಂದೆನೋ ಹಾಗೇ ಹೋಗುವೇ
ಇವೆಲ್ಲಾ ಇರುವುದೇ ಹೀಗೆ
ಪಾಪ ಸುಖವಾಗಿರಲಿ
ಮುಂದೆ ಏನೋ ಇರಬಹುದು
ಕನಸಲ್ಲಿ ಬಂದ ದ್ವೀಪ
ಕೋಮಲ ಕವಿತೆಗಳು, ಹೋಲಿಕೆಗಳು
ಅಯ್ಯೋ ಮತ್ತೆ ಬೇಕಿರಲಿಲ್ಲ
ಈ ಒರಟು ಪದಗಳು
ತಲೆನೇವರಿಸುವುದು

5
ರಾತ್ರಿ ಹನ್ನೆರಡಕ್ಕೆ ನಾಯಿ ಬೊಗಳುವುದು
ಅದಕ್ಕೆಂದೇ ಅಂದುಕೊಂಡಿದ್ದಾನೆ
ಅದಾ, ಇದಾ, ಮತ್ತೊಂದಾ, ಇನ್ನೊಂದಾ
ಮಧು ಕೈಠಬ, ಚಂಡ ಮುಂಡ
ಶುಂಭ ನಿಶುಂಭ ರಕ್ತ ಬೀಜಾಸುರರಲ್ಲ
ಮಹಿಷ ವಧೆಯೂ ಮುಗಿದು
ಭಾಗವತರು ಮಂಗಳ ಹಾಡಿ
ಕೊನೆಯ ಝಾವದ ನಿದ್ದೆಯೂ ಮುಗಿಯಿತು
ಅಲ್ಲ ಅಲ್ಲವೆಂದು
ಕೊನೆಗೆ ಅಲ್ಲವೇ ಅಲ್ಲ ಎನ್ನಲಾಗಲಿಲ್ಲ

ಪುಟದ ಮೊದಲಿಗೆ
 
Votes:  4     Rating: 4.25    
 
 
ಸಂಬಂಧಿಸಿದ ಲೇಖನಗಳು
  ವಿಕಾಸ್ ನೇಗಿಲೋಣಿ ಮಾಡಿರುವ ಜಪಾನಿ ಕವಿ ಪರಿಚಯ
  ತಿರುಮಲೇಶರು ಅನುವಾದಿಸಿದ ಹರ್ಮನ್ ಮೆಲ್ವಿಲ್ ನೀಳ್ಗತೆ
  ಭಾನುವಾರದ ವಿಶೇಷ: ಮನೋಜ್ ಪಿ. ಎಂ. ಬರೆದ ಕತೆ ‘ಕನಸು’
  ಎಂಬತ್ತೈದರ ಚಿತ್ತಾಲರ ಹನೇಹಳ್ಳಿ ಮತ್ತು ದೇವರು
  ಭಾನುವಾರದ ವಿಶೇಷ:ಕಾಮರೂಪಿ ಬರೆದ ಕಥೆ ‘ಉಪಪತ್ತಿಯೋಗ’
  ಬೆಳಗನುಟ್ಟವಳು:ನಟಿ ಭವಾನಿ ಪ್ರಕಾಶ್ ಬರೆದ ಹೊಸ ಕವಿತೆ
  ಮಿತ್ರಾ ವೆಂಕಟ್ರಾಜ ಬರೆದ ಸಣ್ಣಕಥೆ ‘ಬಾಬಿಯಕ್ಕ’
  ಜ. ನಾ. ತೇಜಶ್ರೀ ಅನುವಾದಿಸಿದ ಟಾಗೋರ್ ಕವಿತೆಗಳು
  ವಾರದ ವಿಶೇಷ: ರೇಣುಕಾ ಕತೆ ‘ಎರಡು ದಡಗಳ ಒಳದನಿಗಳು’
  ಭಾನುವಾರದ ವಿಶೇಷ: ಕೆ.ವಿ.ತಿರುಮಲೇಶ್ ಬರೆದ ಕತೆ ‘ಐತ’
  ಭಾನುವಾರದ ವಿಶೇಷ: ಗಣೇಶ್ ನೆಂಪೆ ಕತೆ ‘ಗಿರಿಯಮ್ಮನ ಚೌಡಿ’
  ತಿರುಮಲೇಶ್ ಅನುವಾದಿಸಿದ ವಾಲೆಸ್ ಸ್ಟೀವನ್ಸ್ ಕವಿತೆಗಳು
  ರಶೀದ್ ಅನುವಾದಿಸಿದ ರಿಲ್ಕ್ ಕವಿತೆ
  ಶಾಂತಿ ಅಪ್ಪಣ್ಣ ಬರೆದ ಕತೆ ‘ನನ್ನ ಹಾಡು ನನ್ನದು’
  ತೇಜಶ್ರೀ ಅನುವಾದಿಸಿದ ಒತೈನೊ ಅಮಿಸಿ ಕವಿತೆ
  ರಶೀದ್ ಅನುವಾದಿಸಿದ ಹಾಫಿಝನ ಕವಿತೆ
  ಶ್ರೀಕಾಂತ್ ಪ್ರಭು ಅನುವಾದಿಸಿದ ಕಾಫ್ಕಾ ಕತೆ
  ಮದರಿಯವರ ಗೊಂದಲಿಗ್ಯಾ:ಸಿದ್ಧರಾಮ ಪುಸ್ತಕ ಪರಿಚಯ
  ರಶೀದ್ ಅನುವಾದಿಸಿದ ಒಂದು ಪುಷ್ಕಿನ್ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಬೆಳಗು’
  ವೈಶಾಲಿ ಹೆಗಡೆ ಅನುವಾದಿಸಿದ ಡರೋತಿ ಪಾರ್ಕರ್ ಕವಿತೆಗಳು
  ತೇಜಶ್ರೀ ಅನುವಾದಿಸಿದ ಮೂರು ಯೇಟ್ಸ್ ಕವಿತೆಗಳು
  ಅಬ್ದುಲ್ ರಶೀದ್ ಅನುವಾದಿಸಿದ ಎಜ್ರಾ ಪೌಂಡ್ ಕವಿತೆ
  ವೇಂಪಲ್ಲಿ ಶರೀಫ್ ತೆಲುಗು ಕತೆ ‘ಪಚ್ಚೆ ರಂಗೋಲಿ’
  ಅನಸೂಯಾದೇವಿ ಬರೆದ ದಿನದ ಕವಿತೆ
  ಸುಧಾ ಚಿದಾನಂದ ಗೌಡ ಬರೆದ ದಿನದ ಕವಿತೆ
  ವಿನಾಯಕ ಭಟ್ ಬರೆದ ಕಥೆ ‘ದೂರತೀರ ಯಾನ’
  ನಕ್ಷತ್ರ ಬರೆದ ಆತ್ಮಕ್ಕೆ ಕೊಡಿಸಿಕೊಂಡ ಮುತ್ತುಗಳ ಕವಿತೆ
  ರಶೀದ್ ಅನುವಾದಿಸಿದ ರೈನರ್ ಮರಿಯಾ ರಿಲ್ಕನ ಕವಿತೆ
  ಟಿ.ತಿಮ್ಮಪ್ಪ ಬರೆದ ಕಥೆ ‘ಕೆಂಪು ಹರಳಿನ ಉಂಗುರ’
  ರೇಣುಕಾ ನಿಡಗುಂದಿ ಕತೆ ‘ಮೋಡ ಮತ್ತು ಮಳೆ’
  ಪ್ರತಿಭಾ ನಂದಕುಮಾರ್ ಬರೆದ ಟೊಮೇಟೋ ಗಿಡದ ಕವಿತೆ
  ಭಾನುವಾರದ ವಿಶೇಷ:ನೀಲಾಂಜಲ ಬರೆದ ಕಥೆ ‘ಅವನು ಅವಳು’
  ಮೌಲಾನಾ ಜಲಾಲುದ್ದೀನ್ ರೂಮಿ ಕವಿತೆ
  ಅನುಪಮಾ ಬರೆದ ಹೆಸರು ಇಡಲಾಗದ ಕವಿತೆ
  ಮಲ್ಲಿಕಾರ್ಜುನಗೌಡ ತೂಲಹಳ್ಳಿ ಬರೆದ ದಿನದ ಕವಿತೆ
  ವಾರದ ವಿಶೇಷ: ರಾಜೀವ ನಾರಾಯಣ ನಾಯಕ ಬರೆದ ಕತೆ ‘ಸೀ ಫೇಸ್’
  ವಿಕ್ರಂ ಹತ್ವಾರ್ ಬರೆದ ನಿರ್ವಾಣದ ಕವಿತೆ
  ರಶೀದ್ ಅನುವಾದಿಸಿದ ಲೋರ್ಕಾ ಕವಿತೆ
  ಭಾನುವಾರದ ವಿಶೇಷ: ದೇವನೂರ ಮಹಾದೇವ ಬರೆದ ‘ಅಮಾಸ’
  ರಾಬಿಯಾಶೇಖ್ ಬರೆದ ಎರಡು ಕವಿತೆಗಳು
  ಭಾನುವಾರದ ವಿಶೇಷ: ನಾರಾಯಣ ಯಾಜಿ ಬರೆದ ಕಥೆ ‘ಹುರುಬು’
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಮನೋಹರ ಉಪಾಧ್ಯ ಓದಿದ `ಡೇರಿ ಡಾಕ್ಟರ್ ಹೋರಿ ಮಾಸ್ಟರ್'
  ಅನಸೂಯಾದೇವಿ ಬರೆದ ಮೂರು ಸಖೀಗೀತೆಗಳು
  ಭಾನುವಾರದ ವಿಶೇಷ: ಸಿಡ್ನಿ ಶ್ರೀನಿವಾಸ್ ಬರೆದ ಕಥೆ ‘ಸಾರಿ’
  ನಕ್ಷತ್ರ ಬರೆದ ಎಳನೀರಗಂಜಿ ಕವಿತೆ
  ಎನ್.ಸಿ ಮಹೇಶ್ ಅನುವಾದಿಸಿದ ಒರಿಯಾ ಕವಿತೆಗಳು
  ಸಂದೀಪ್ ಫಡ್ಕೆ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಅಕ್ಕೋರು’
  ಪ್ರಜ್ಞಾ ಮತ್ತಿಹಳ್ಳಿ ಬರೆದ ರೈಲು ಪದ್ಯಗಳು
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಅಂತಾರಾಷ್ಟ್ರೀ ಗುಬ್ಬಚ್ಚಿ ದಿವ್ಸ:ತಿರುಮಲೇಶರ ಕವಿತೆ
  ಎನ್.ಸಿ. ಮಹೇಶ್ ಬರೆದ ಕಥೆ ‘ಬೇರಿಗೇ ಎಷ್ಟೊಂದು ಕಸಿ’
  ಪ್ರತಿಭಾ ನಂದಕುಮಾರ್ ಬರೆದ ಇನ್ನಷ್ಟು ದೇವೀ ಕವಿತೆಗಳು