ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ - ಇದು ಬರಿ ಬೆಳಗಲ್ಲೋ ಅಣ್ಣಾ    
ಸುದರ್ಶನ್
ಮಂಗಳವಾರ, 20 ಮೇ 2008 (05:52 IST)

ಏನು ಬರೆಯಲಿ? ಏನು ಬರೆಯಬಹುದು? ದೂರದ ಊರಲ್ಲಿ ನಮ್ಮ ಚಿಂತೆ ಚಿಂತನೆಗಳು ನಿಮಗಲ್ಲಿ ಹಾಸ್ಯಾಸ್ಪದವೋ ಅಥವಾ ಮಹಾ ಗಂಭೀರವೋ ಆಗಿ ಕಾಣುವ ಅಪಾಯವಿದೆ. ಅದಕ್ಕೆಲ್ಲಾ ತಲೆಗೊಡಬಾರದು ಅಂತ ಹತ್ತಾರು ಸಲ ಹೇಳಿಕೊಂಡಿದ್ದೇನೆ. ಮಹಾ ಗಂಭೀರವೆಂದು ನಕ್ಕರೂ, ಹಾಸ್ಯಾಸ್ಪದವೆಂದು ಅಸಡ್ಡೆ ಮಾಡಿದರೂ ಪರವಾಗಿಲ್ಲ. ಹಾಗನ್ನುವಾಗಲೇ ಹಾಗನ್ನಿಸಿಕೊಳ್ಳುವಾಗಲೇ ಏನೋ ಆಗುತ್ತಿದೆ ಅಂತ ಸಮಾಧಾನ ಮತ್ತು ಉತ್ಸಾಹ.

ಅಲ್ಲಿಯಂತೆ ಇಲ್ಲಿ - ದೂರದಲ್ಲಿ ಅಲ್ಲಾ ಕೂಗಿ ಎಚ್ಚರವಾಗುವುದಿಲ್ಲ. ಯಾವುದೋ ಕೋಳಿ ಕೂಗಿ ಬೆಳಗಾಗುವುದಿಲ್ಲ. ಹಾಲಿನವನ ಸೈಕಲ್ ಬೆಲ್ಲು ಕಚಗುಳಿಯಿಡುವುದಿಲ್ಲ. ಪಕ್ಕದ ವಠಾರದ ಬಾವಿಯ ರಾಟೆಯ ಜೀಕಾಟವಿಲ್ಲ. ಇವೆಲ್ಲಾ ಯಾವುದೋ ಮಾಯಾಲೋಕದ ಸಂಗತಿಗಳಂತೆ ಇಲ್ಲಿ ಅನಿಸುತ್ತದೆ. ಅಥವಾ ಇಲ್ಲೂ ನಡೆಯುತ್ತಿದೆ ಆದರೆ ನಮಗೆ ಕಾಣುತ್ತಿಲ್ಲ, ಕೇಳುತ್ತಿಲ್ಲ. ಯಾಕೆ ಅಂತ ಹಲವಾರು ಸಲ ಅನಿಸಿದೆ. ಈ ಎಲ್ಲ ಇಲ್ಲಗಳ ನಡುವೆ ಇಲ್ಲಿ ಮುಂಜಾನೆಯೆಂದರೇನು? ಅದಕ್ಕೆಂತ ತಾಜಾತನವಿರಲು ಸಾಧ್ಯ? ಪ್ರಶ್ನೆಗಳೇಳುವುದು ಸಹಜವೇ ಅಲ್ಲವೆ?

ಆದರೂ ಇಲ್ಲಿನ ಬೆಳಗಿಗೆ ತಾಜಾತನವಿಲ್ಲ ಎಂದರೆ ಸುಳ್ಳಾಡಿದಂತೆ ನೋಡಿ. ಬೆಳಗಾಗ ಕಣ್ಣುಬಿಡುವಾಗ ಸುತ್ತಲಿನ ಮರಗಳಿಂದ ಯಾವುಯಾವುದೋ ಹಕ್ಕಿಗಳ ಪರಿಚಯವಿರದ ಕರೆಯುವಾಟವಿದೆ. ದೂರದ ಮೋಟರ್‌ವೇನಲ್ಲಿ ಕಾರುಗಳ ಗುಂಯ್‌ಗುಡುವ ಮಂದ್ರನಾದವಿದೆ. ಮನೆ ಬಾಗಿಲಿಗೆ ಪೇಪರು ಧಪ್ಪನೆ ಬೀಳುವ ಸದ್ದಿನ ಗುದ್ದಿದೆ. ಕಸ ಒಯ್ಯುವ ಲಾರಿಯ ಗುಡುಗುಡು ಸೋಮವಾರ ಎಂದು ನೆನಪಿಸುತ್ತದೆ. ರಸ್ತೆಗೆ ನೀರು ಸಿಂಪಡಿಸಿ ಗುಡಿಸುವ ಲಾರಿಯ ಗಿರಿಗಿರಿ ಗುರುವಾರ ಎಂದು ಅರಿವಿಗೆ ತರುತ್ತದೆ. ಇದಕ್ಕೆಲ್ಲಾ ಮೆಲುಗಾಳಿಗೂ ಕುಣುಕುಣುಗುಟ್ಟುವ ಹಿತ್ತಲಿನ ವಿಂಡ್‌ಚೈಮಿನ ಕಿಣಿಕಿಣಿ ಅಲಂಕಾರವಿದೆ. ಅದಕ್ಕೆ ದೂರದ ದೇವಾಲಯದ ಗಂಟೆಯ ಕಳೆಯಿದೆ.

ಇವೆಲ್ಲಾ ಚಂದ ಅಂದರೆ ಚಂದ, ಅಲ್ಲ ಅಂದರೆ ಅಲ್ಲ. ಆದರೆ ಆವರಿಸುವ ಸಂಗತಿಗಳೆನ್ನುವುದು ಮಾತ್ರ ತಪ್ಪಿಸಿಕೊಳ್ಳಲಾಗದ ದಿಟ. ಜೇನ್ನೊಣದ ಝೇಂಕಾರದಂತೆ ದೂರದ ಮೋಟರ್‌ವೇನಲ್ಲಿ ಯಾವು ಯಾವುದೋ ಮನೆಗಳಿಂದ ಗಡಿಬಿಡಿಯಲ್ಲಿ ಕೆಲಸಕ್ಕೆ ಹೊರಟವರ ಕಾರುಗಳು ಅಂದೆನಲ್ಲ. ಅದರಲ್ಲಿ ಕಣ್ಣುಜ್ಜಿಕೊಂಡು, ಬಿಸಿ ಕಾಫಿ ಕುಡಕೊಂಡು, ಪಕ್ಕದ ಕಾರವರನ್ನು ದಿಟ್ಟಿಸಿಕೊಂಡು ಹೊರಟ ನೂರಾರು, ಸಾವಿರಾರು ಮಂದಿ ಕಾರ್ಮಿಕರು. ಅಂಗಳದ ಹುಲ್ಲಿನ ಇಬ್ಬನಿಗೆ ಸುದ್ದಿ ಒದ್ದೆಯಾಗದಂತೆ ಪ್ಲಾಸ್ಟಿಕ್ ಸುತ್ತಿಕೊಂಡು ಬಿದ್ದಿರುವ ಕೊಳವೆಯಂಥ ಪೇಪರಿನ ಕಟ್ಟು. ಅದನ್ನು ಬೆಳಕು ಹರಿಯುವ ಮೊದಲೇ ಎಸೆದು ಹೋದವನು ಯಾರಿರಬಹುದು? ಆ ವ್ಯಕ್ತಿಯನ್ನು ನಾನು ನೋಡಿಯೇ ಇಲ್ಲವಲ್ಲ ಎಂಬ ಚಡಪಡಿಕೆ. ಸೋಮವಾರವೋ ಗುರುವಾರವೋ ಆದರೆ ಕಸ ಎತ್ತೊಯ್ಯುವ, ಅಥವಾ ಬೀದಿ ಗುಡಿಸುವ ಲಾರಿ ಅಂದೆನಲ್ಲ. ಅದರ ಡ್ರೈವರ್‍ ಕತ್ತಲಿರುವಾಗಲೇ ನಿದ್ದೆಯಲ್ಲಿರುವ ತನ್ನ ಮಕ್ಕಳನ್ನು ಮುತ್ತಿಟ್ಟು ಬೀಳ್ಕೊಟ್ಟು ಕೆಲಸಕ್ಕೆ ಬಂದಿರುವ ಒಬ್ಬ ತಂದೆ. ಹೀಗೆ ನಮ್ಮನ್ನು ಎಬ್ಬಿಸಲೋ ಅನ್ನುವಂತೆ ನಮ್ಮ ಸುತ್ತಲೂ ಹಬ್ಬಿ ಆವರಿಸುವ ಸದ್ದಿನ ಕಾಯಕಗಳು ಮತ್ತು ಅದರ ಹಿಂದಿನ ಮನಸ್ಸು-ದೇಹಗಳು.

ಇದ್ದಕ್ಕಿದ್ದ ಹಾಗೆ ಇಲ್ಲೂ ಒಂದು ದಿನ ಮುಂಜಾನೆ ದೂರದಲ್ಲಿ ಕೋಳಿ ಕೂಗಿತು. ಕಣ್ಣುಜ್ಜಿಕೊಂಡೆ. ಕೂಗು ಕೇಳಿದ್ದು ಎಲ್ಲಿ? ಸವಿಗನಸಿನೊಳಗ ಅಥವಾ ನಿಜದಲ್ಲ ಎಂದು ಇತ್ಯರ್ಥಮಾಡಿಕೊಳ್ಳಲು ಹೆಣಗಿದೆ. ಎಲ್ಲೋ ಮಲಗಿ ಎಲ್ಲೋ ಏಳುತ್ತಿದ್ದೇನೆಯೆ ಎಂಬ ಅನುಮಾನವನ್ನು ನೀಗಿಕೊಳ್ಳಲು ಹೆಣಗಿದೆ. ಕೊಯ್ದಿಟ್ಟಂತಿದ್ದ ಎರಡು ಜಗತ್ತು ಡಿಕ್ಕಿ ಹೊಡೆದಂತನಿಸತು. ಹೀಗನಿಸುವುತ್ತಿರುವದೇ ಕೊಯ್ದಿಡಲಾಗದ್ದು ಎಂದು ಸೂಚಿಸುತ್ತದೆ ಅಂತಲೂ ಅನಿಸಿತು. ಅಂಥ ಯೋಚನೆಯಲ್ಲೇ ಮೆಲ್ಲನೆ ಪೂರ್ತಿ ಎಚ್ಚರವಾಗುತ್ತದೆ.

ಯಾವುದೋ ಪಕ್ಕದ ಬೀದಿಯ ಮನೆಯಲ್ಲಿ ಮಕ್ಕಳು ತಂದಿಟ್ಟುಕೊಂಡ ಕೋಳಿ ಇರಬೇಕು ಎಂದು ನಿದ್ದೆ ತಿಳಿದೆದ್ದಾಗ ಅರಿವಿಗೆ ಬರುತ್ತದೆ. 'ಇದು ಬರಿ ಬೆಳಗಲ್ಲೋ ಅಣ್ಣ' ತಲೆಯಲ್ಲಿ ಆಡುತ್ತದೆ. ಅಲ್ಲಿಯಾದರೂ ಅಷ್ಟೆ, ಇಲ್ಲಿಯಾದರೂ ಅಷ್ಟೆ.

ಪುಟದ ಮೊದಲಿಗೆ
 
Votes:  3     Rating: 4    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು