ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ತಲೆಬುಡವಿಲ್ಲದ ನನ್ನದೊಂದು ಅನಾರ್ಕಿಸಂ ಆಶಯ !    
ಸುದರ್ಶನ್
ಬುಧವಾರ, 30 ಜುಲೈ 2008 (04:21 IST)

ಎಂಬತ್ತೈದು ವರ್ಷ ವಯಸ್ಸಿನ ಹವರ್ಡ್ ಝಿನ್ ತನ್ನನ್ನು ಅನಾರ್ಕಿಸ್ಟ್ ಎಂದು ಕರೆದುಕೊಳ್ಳುವವ. ಅವನು ಗಾಂಧಿಯಲ್ಲಿ ಅನಾರ್ಕಿಸ್ಟ್ ಗುಣ ಕಾಣುತ್ತಾನೆ. ನಾನು ಯೋಚಿಸುತ್ತೇನೆ.

ಅನಾರ್ಕಿಸಂ ಎಂದೊಡನೆ ಹಿಂಸೆ ಮತ್ತು ಗೊಂದಲ ಎಲ್ಲರ ತಲೆಯಲ್ಲಿ ಏಳುವ ಮೊದಲ ಯೋಚನೆಗಳು. ತನ್ನ ಆಸೆಯ ಪೂರೈಕೆಗೆ ಹಿಂಸೆಯಾದರೂ ಸರಿಯೆ. ಇಂದಿನ ರಾಜಕೀಯ ಹಾಗು ಸಾಮಾಜಿಕ ನಾಯಕರನ್ನು ಕೊಂದು ಹೊಸ ನೆಲೆಗೆ ಲೋಕವನ್ನು ಒಯ್ಯುವುದು ಎಂಬ ಹುಂಬತನದ ಪ್ರತಿರೂಪ ಎಂಬುದು ಮೊದಲ ದೃಷ್ಟಿ. ಎರಡನೆಯದು ಯಾವುದೇ ಸರ್ಕಾರ, ಕಾನೂನು ನಿಯಮಗಳಿಲ್ಲದ ಗೊಂದಲದ ಪರಿಸ್ಥಿತಿಯನ್ನು ಸಮಾಜದಲ್ಲಿ ಹುಟ್ಟು ಹಾಕುವುದು.ಗೊಂದಲದಲ್ಲೇ ಸುಖ ಕಾಣುವುದು. ಬಹುಜನರಿಗೆ ಅನಾರ್ಕಿಸಂ ಮನಸ್ಸಲ್ಲಿ ಹುಟ್ಟಿಸುವ ವಿಚಾರಗಳು ಇವೆರಡು.

ಎರಡನೇ ಮಹಾಯುದ್ಧದಲ್ಲಿ ಹೋರಾಡಿದ ಹವರ್ಡ್ ಝಿನ್ ಯುದ್ಧದ ನಂತರ ಮನಗಂಡದ್ದು ನ್ಯಾಯುತವಾದ ಯುದ್ಧ ಎಂಬುದಿಲ್ಲ ಎಂದು. ಅಮೇರಿಕಾದ ಅರವತ್ತರ ದಶಕದ ಚಳವಳಿಗಳಲ್ಲಿ, ಮುಖ್ಯವಾಗಿ ವಿಯೆಟ್ನಾಂ ಯುದ್ಧದ ವಿರುದ್ಧದ ಚಳವಳಿಯಲ್ಲಿ ತೊಡಗಿಸಿಕೊಂಡವನು. "ಎ ಪೀಪಲ್ಸ್ ಹಿಸ್ಟರಿ ಆಫ್ ದಿ ಯನೈಟೆಡ್ ಸ್ಟೇಟ್ಸ್" ಎಂಬ ಜನಪ್ರಿಯ ಪುಸ್ತಕ ಬರೆದವನು. ತನ್ನನ್ನು ತಾನು ಅನಾರ್ಕಿಸ್ಟ್ ಎಂದು ಕರೆದುಕೊಳ್ಳುವ ಇವನು ಅನಾರ್ಕಿಸಂನ ತೊಡಕುಗಳು, ಸವಾಲುಗಳು ಮತ್ತು ಆಶಯಗಳನ್ನು ಸಮಾಧಾನದಿಂದ ಹೇಳಬಲ್ಲವ. ಅನಾರ್ಕಿಸಂಗೆ ಇರುವ ಚಾರಿತ್ರಿಕ ಹಿನ್ನೆಲೆ ಮತ್ತು ಚಿಂತನೆಗಳನ್ನು ವಿವರಿಸಬಲ್ಲವ. ಅನಾರ್ಕಿಸಂಗೆ ಬೇಕಾದ ಅಗಾಧವಾದ ಸಂಘಟನೆ, ಬಿಡುವಿಲ್ಲದ ಕೆಲಸ ಮತ್ತು ಆಳದ ಆಶಯದ ಬಗೆ ಗಂಭೀರವಾಗಿ ಯೋಚಿಸುವವ.

ಹವರ್ಡ್ ಝಿನ್ ಅನಾರ್ಕಿಸಂನ ಅಗತ್ಯವನ್ನು ಹೇಳುತ್ತಾ ನಾವೆಷ್ಟೇ ಪ್ರಗತಿಶೀಲರಾದರೂ ಎಲ್ಲ ರಾಜಕೀಯ ಸ್ಥಾವರಗಳೂ ನಮ್ಮನ್ನು ಭ್ರಷ್ಟರನ್ನಾಗಿಸುತ್ತದೆ ಎನ್ನುತ್ತಾನೆ. ಅಧಿಕಾರ ಒಂದೆಡೆ ಕೇಂದ್ರಿತವಾಗುವುದರಿಂದ ಮೂಡುವ ತೊಡಕದು. ಅನಾರ್ಕಿಸಂನ ಆಶಯ ಜನರೇ ಅಂತಹ ಅಧಿಕಾರ ಕೇಂದ್ರಿತ ಸ್ಥಾವರಗಳನ್ನು ಮೀರಬೇಕು. ತಮ್ಮ ಪುಟ್ಟ ಪುಟ್ಟ ಸಂಘಟನೆಗಳ ಮೂಲಕ ನಿಯಂತ್ರಣವನ್ನು ತಮ್ಮ ಕೈಗೆ ಮತ್ತೆ ತಕ್ಕೊಳ್ಳಬೇಕು. ಹಾಗಂತ ಎಷ್ಟೋ ವಿಷಯಗಳನ್ನು ಅನಾರ್ಕಿಸಂ ಈಗಲೇ ಪರಿಹರಿಸಿಕೊಂಡಿಲ್ಲ, ಸದ್ಯಕ್ಕೆ ಪರಿಹರಿಸುವುದೂ ಇಲ್ಲ. ಯಾಕೆಂದರೆ ಏಲ್ಲೂ ಎಂದೂ ಪರಿಹಾರವೆನ್ನುವುದು ಕಟ್ಟಿಟ್ಟ ಬುತ್ತಿಯಲ್ಲ. ಅನಾರ್ಕಿಸಂನ ದಾರಿಯಲ್ಲೂ ಪರಿಹಾರಗಳನ್ನು ನಾವು ಹೆಜ್ಜೆಹೆಜ್ಜೆಗೂ ಕಂಡುಕೊಳ್ಳಬೇಕು, ರೂಪಿಸಿಕೊಳ್ಳಬೇಕು. ಯಾರೋ ಅದನ್ನು ನಿರ್ದೇಶಿಸುತ್ತಾರೆ ಎಂಬ ಹವಣಿಕೆಯನ್ನು ತೊರೆಯಬೇಕು ಎನ್ನುತ್ತಾ ಸಣ್ಣಪುಟ್ಟ ಸಮುದಾಯಗಳಿರುವ ರಾಷ್ಟ್ರೋತ್ತರ ಜಗತ್ತಿನ ತನ್ನ ಕನಸನ್ನು ವಿಶದಪಡಿಸುತ್ತಾನೆ.

ಜಗತ್ತಿನ ಹಲವು ಭಾಗಗಳಲ್ಲಿ ಆತಂಕವಾದಿ ಗುಂಪುಗಳು ಸರ್ಕಾರಗಳಂತೆ ರಾರಾಜಿಸುತ್ತಿವೆ. ಎಷ್ಟೋ ಸರ್ಕಾರಗಳು ಆತಂಕವಾದಿಗಳಿಗಿಂತ ಹೇಯವಾಗಿ ವರ್ತಿಸುತ್ತಿವೆ. ಇವು ಇಪ್ಪತ್ತೊಂದನೇ ಶತಮಾನದ ಕಟು ವಾಸ್ತವ. ಇಂತಹ ಹೊತ್ತಲ್ಲಿ ಅನಾರ್ಕಿಸಂನ ಕನಸನ್ನು ಸೂಕ್ಷ್ಮವಾಗಿ ನೋಡುವ ಗಳಿಗೆ ಬಂದಿದೆ ಅನಿಸದೇ ಇರಲಾರದು. ಹೀಗೆಲ್ಲಾ ಯೋಚಿಸುವುದೇ ಇಂದಿನ ರಾಜಕೀಯ ನಾಯಕರ ಎದೆ ನಡುಗಿಸುತ್ತದೆ. ಉದಾರವಾದಿಗಳನ್ನು, ಸುಧಾರಕರನ್ನು ಹೇಗೋ ಸಹಿಸುವ ಅಧಿಕಾರಕೇಂದ್ರಿತ ಸ್ಥಾವರಗಳು ಇಂತಹ ಯೋಚನೆಗಳಿಗೆ ಅಸಹನೆಯಿಂದ ಧುಮುಧುಮಿಸುವುದು ಯಾಕೆಂದು ಬೇರೆ ಹೇಳಬೇಕಾಗಿಲ್ಲ.

ಬ್ರಟೀಷರ ಎದುರು ಚಳವಳಿ ಕಟ್ಟಿದ ಗಾಂಧಿಯಲ್ಲಿ ಇವನು ಅನಾರ್ಕಿಸ್ಟ್ ಗುಣ ಕಾಣುವುದು ಆಶ್ಚರ್ಯವೇನಲ್ಲ. ಆದರೂ, ಉದ್ಯಮಿಗಳು ಇಂಡಿಯಾದವರೇ ಆದಲ್ಲಿ ಕಾರ್ಮಿಕರು ಅನ್ಯಾಯವನ್ನು ಸಹಿಸಿಕೊಳ್ಳಬೇಕೆನ್ನುವಂತ ನಿಲುವು ತಳೆದ ಗಾಂಧಿ, ಉಳಿದವರಿಂದ ಸನಾತನಿ ಅನಿಸಿಕೊಂಡ ಗಾಂಧಿ, ಹಲವು ಬಗೆಯ ಸಂಕೀರ್ಣ ನಿಲುವುಗಳ ಗಾಂಧಿ ಅನಾರ್ಕಿಸ್ಟ್ ಆಗಬಲ್ಲರೆ? ಅವರಲ್ಲಿ ಆ ಗುಣವಿತ್ತೆ? ಹೀಗೆ ಯೋಚಿಸುವಾಗ ಏಳುವ ಪ್ರಶ್ನೆಗಳು- ಇಂಡಿಯಾದ ಅನಾರ್ಕಿಸ್ಟ್ ಚಳವಳಿಗಳು ಯಾವುವು? ಹಾಗೊಂದು ಚಾರಿತ್ರಿಕ ಸಂಗತಿ, ಚಳವಳಿ, ಚಿಂತನೆ ನಮ್ಮಲ್ಲಿದೆಯೆ? ಅವು ತಮ್ಮನ್ನು ಅನಾರ್ಕಿಸಂ ಎಂದು ಕರೆದುಕೊಳ್ಳದಿರಬಹುದು. ಒಂದು ಬಗೆಯಲ್ಲಿ ಎಲ್ಲ ದಬ್ಬಾಳಿಕೆಯ ವಿರುದ್ಧದ ಚಳವಳಿಗೂ ಅನಾರ್ಕಿಸ್ಟ್ ಗುಣ ಇದ್ದೇ ಇರುತ್ತದೆ. ಅದನ್ನು ಮೀರಿ, ಅನಾರ್ಕಿಸಂನಂಥ ಅಮೂಲ್ಯವಾದ ತತ್ವ ಮತ್ತು ಅದನ್ನು ಮೂರ್ತಗೊಳಿಸುವುದನ್ನೇ ಗುರಿಯಾಗಿಟ್ಟುಕೊಂಡ ಚಳವಳಿ? ಇದರ ಬಗ್ಗೆ ಹುಡುಕಬೇಕು ಅಂದುಕೊಳ್ಳುತ್ತೇನೆ.

ಹವರ್ಡ್ ಝಿನ್ಹವರ್ಡ್ ಝಿನ್ ಇತ್ತೀಚಿನ ತನ್ನ ಸಂದರ್ಶನವೊಂದರಲ್ಲಿ: ಯಾವುದೇ ಚಳವಳಿಯ ಗುರಿ ಅಹಿಂಸೆ, ಸಮಾನತೆಯಾಗಿದ್ದರೆ ಅದರ ನಡೆಯನ್ನೂ ಕೂಡ ಅಹಿಂಸೆ ಮತ್ತು ಸಮಾನತೆ ರೂಪಿಸಬೇಕಾಗುತ್ತದೆ ಎನ್ನುತ್ತಾನೆ. ಅನಾರ್ಕಿಸಂ ಕೂಡ ನಮ್ಮ ಗುರಿಯನ್ನು ಗಮನದಲ್ಲಿಟ್ಟುಕೊಂಡು, ಅದಕ್ಕೆ ಹೊಂದುವಂತ ಮಾನವ ಸಂಬಂಧಗಳ ಮೇಲೆ ನಿರ್ಮಿತವಾದ ನಡೆಯನ್ನು ರೂಪಿಸಕೊಳ್ಳಬೇಕು ಎನ್ನುತ್ತಾನೆ. ಅವನ ಇನ್ನೊಂದು ಮುಖ್ಯವಾದ ಮಾತು: ಸ್ವಾತಂತ್ಯ್ರ ಎಂಬುದು ಮಾನವ ಕಲ್ಪಿಸಿಕೊಂಡು ಒಂದು ತತ್ವವಲ್ಲ. ಅದು ನಮ್ಮ ಮೂಲಭೂತ ಆಶಯ. ಮನುಕುಲದ ತೀರ ಸಹಜವಾದ ಆಶಯ ಕೂಡ. ಇದಕ್ಕೆ ಆಧಾರವಾಗಿ ಮಾನವನ ಚರಿತ್ರೆಯುದ್ದಕ್ಕೂ ಹಲವಾರು ಉದಾಹರಣೆಗಳನ್ನು ನೋಡಬಹುದು ಎನ್ನುತ್ತಾನೆ.

ಹವರ್ಡ್ ಝಿನ್ ಗಾಂಧಿಯಲ್ಲಿ ಅನಾರ್ಕಿಸ್ಟ್ ಗುಣ ಕಾಣುತ್ತಾನೆ. ಹಾಗೆಯೇ ಅಮೇರಿಕದ ಚಿಂತಕ ಹೆನ್ರಿ ಡೇವಿಡ್ ತೋರೂ ಅನಾರ್ಕಿಸಂಗೆ ತುಂಬಾ ಹತ್ತಿರವಾದ ವಿಚಾರ ಹೇಳಿದ್ದಾನೆ ಎನ್ನುತ್ತಾನೆ. ಗಾಂಧಿ ತೋರೂನ ಬರವಣಿಗೆಯಿಂದ ಪ್ರಭಾವಿತರಾಗಿದ್ದರು ಎಂದು ಕೇಳಿದ್ದೇವೆ. ಹೀಗೆಲ್ಲಾ ಕೊಂಡಿಗಳು ಸಿಗುವಾಗ ತಲೆಬುಡವಿಲ್ಲದ ನನ್ನದೊಂದು ಆಶಯ ಅರಳುತ್ತದೆ: ಅನಾರ್ಕಿಸಂ ನಿಜಕ್ಕೂ ನಮಗೆ ಅಷ್ಟು ದೂರವಲ್ಲವೇನೋ... ನಾವು ಎಷ್ಟೇ ಸಂಪ್ರದಾಯವಾದಿಗಳಾಗಿದ್ದರೂ ಕೂಡ. ಗಾಂಧಿ ಹುಟ್ಟಿದ ನಾಡು ತಾನೆ ನಮ್ಮದು?

ಪುಟದ ಮೊದಲಿಗೆ
 
Votes:  3     Rating: 4.67    
 
 
ಸಂಬಂಧಿಸಿದ ಲೇಖನಗಳು
  ಯಡಿಯೂರಪ್ಪನವರು ಬೀದರಿಗೆ ಬಂದ ವೃತ್ತಾಂತವು
  ಧಾರಾಳ ಮಾತು ನಮಗೇ ಆಪತ್ತು!
  ಏಳು ಕಲಾವಿದೆಯರ ಏಳು ವರ್ಣಗಳು
  ರಾಮ ಭಕ್ತ ಹನುಮನೋ, ಹನುಮ ಭಕ್ತ ರಾಮನೋ
  `ಅಲ್ನೋಡಿ ಕಲೀರಿ' ಅಂದ್ರೇನು ದರ್ಶನ್?
  ಹುಲ್ಲಿನ ಮೇಲೆ ಕೂತ ಹುಡುಗ ರಾಮುಲು
  ಜಾಗತೀಕರಣ ನೀತಿಕಥಾ-6: ಗುರುಚರಿತೆ
  ನ್ಯೂಯಾರ್ಕ್ ಜಿಮ್ ಬಳ್ಳಾರಿ ದೇವರ ನೋಡಲು ಬಂದ ಕಥೆ!
  ಶಿಕ್ಷಣ ಮೀಸಲು ನೀತಿಯನ್ನು ನೀವೂ ಬೆಂಬಲಿಸಿ
  ಯೋಗರಾಜ್ ಭಟ್ ಬರೆದ `ಪಂಚರಂಗಿ' ಕವಿತೆಗಳು
  ನೋವೆಂದರೆ ಅಳು ಮಾತ್ರವೇ? :ಹರೀಶ್ ಬರಹ
  ರಾಖೀ ಹಬ್ಬದ ದಿನ ವಿಲಾಸಣ್ಣನ ನೆನಪು
  ಭಿಕ್ಷುಕರು ಮತ್ತು ಸಾಹಿರ್ ಸಾಲುಗಳು: ದಿವಾಕರ್ ಬರಹ
  ಕನ್ನಡ ಯುವ ಬರಹಗಾರರಿಗೆ ಟೊಟೊ ಪುರಸ್ಕಾರ
  ಕನ್ನಡದ ಜಗನ್ಮೋಹಿನಿ ಹರಿಣಿಯೊಂದಿಗೆ ಒಂದಷ್ಟು ಹರಟೆ
  ಪೆಜತ್ತಾಯ ಬರೆದ ತ್ರಿಚಕ್ರಿ ಗೋವಿಂದ ಭಟ್ಟರ ಕಥೆ
  ಜಾಗತೀಕರಣ ನೀತಿಕಥಾ-5: ಕಲ್ಲು ಸಿಕ್ಕರೆ ಕೊಳ್ಳಿರೋ...
  ಏನೂ ನನ್ನದಲ್ಲವೆಂಬ ಸ್ವಾತಂತ್ರ್ಯ:ನಾಗಶ್ರೀ ನಂಬಿರುವುದು
  ಸ್ವಾತಂತ್ರ್ಯ ಅಂದ್ರೆ ಏನು?:ಸುಶ್ರುತ ಕೇಳಿದ ಪ್ರಶ್ನೆಗಳು
  ಮೆಟ್ರೋ ಬದಿಯಲ್ಲೇ ಮಲ್ಲಿಗೆ ದಂಡೆಯ ಪರಿಮಳ
  ಗುಬ್ಬಚ್ಚಿಗಳಿಗೆ ಸ್ವಾತಂತ್ರ್ಯದ ಕಾಳು: ಹೇಮಾ ಬರಹ
  ಸ್ವಾತಂತ್ರದ ಮೊದಲ ಕ್ಷಣಗಳು:ಅಯ್ಯಂಗಾರ್ ನೆನಪುಗಳು
  ಕೆಂಡಸಂಪಿಗೆ ಕಮೆಂಟಿಗರು ಮೊನ್ನೆಯಿಂದಲೇ ಸ್ವತಂತ್ರರು!
  ಹಳ್ಳಿ ಹೈಕಳಿಗೆ ಬೇಡದ ಕನ್ನಡ ಶಾಲೆ: ಪೆಜತ್ತಾಯ ಚಿಂತನೆ
  ಅನು ಪಾವಂಜೆ ಬರೆದ ಅಜ್ಜನ ಮನೆಯ ನೆನಪುಗಳು
  ಒಬ್ಬ ಅತಿಸಾಮಾನ್ಯನ ಗೊಣಗಾಟ : ಸುದರ್ಶನ್ ಬರಹ
  ಮುಂಬೈನ ಮಂಕಿ ಬ್ರಿಡ್ಜ್ ನಲ್ಲೊಬ್ಬ ಪತಿತ ಪಾವನ ತಿರುಕ
  ಗ್ರೆಗರಿಯವರ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಾರೆ?
  ಅಮೇರಿಕಾ ದೇಶದ ಅಂಗಳದ ಅಂಗಡಿಗಳು
  ಗವಾಕ್ಷಿಯಲ್ಲಿ ಬಂದಿರುವ ಡಬ್ಬಿಂಗ್ ಪಿಶಾಚಿ!
  ಮಹಾನುಭಾವ ಬಿ.ಆರ್.ಪಂತುಲು:ಬಸವರಾಜು ಬರಹ
  ನಾನೂ ಲಾಂಗ್ ಜಂಪ್ ಹಾರಿದೆ: ಆರ್.ಜಿ.ಭಟ್ ಬರಹ
  ಆಸ್ಟ್ರೇಲಿಯಾ ಪತ್ರ: ದೇವರ ನಂಬದ ಸ್ತ್ರೀ ಪ್ರಧಾನಿ
  ತೆಂಗಿನ ಜುಟ್ಟೂ ತಮ್ಮನ ಜುಟ್ಟೂ: ಪರೀಕ್ಷಿತಾ ಬರಹ
  ಸ್ಯಾನ್ ಬಾರ್ನ್ ಪ್ರಾಯೋಗಿಕ ಕೃಷಿ ಕ್ಷೇತ್ರ: ವೆಂಕಟೇಶ್ ಬರಹ
  ಸವಣೂರಿನ ಭಂಗಿಗಳು ತೋರಿಸಿದ ಸತ್ಯಗಳು
  ಗ್ರೆಗರಿ ಕಳಕೊಂಡದ್ದು,ಎಂ ಆರ್ ಪಿ ಎಲ್ ಕಳೆದುಕೊಂಡದ್ದು
  ನಾರೀಕೇರಳ...ಮಳೆ,ಸುದ್ದಿರಾಜಕೀಯ:ಕನಕ ಬರಹ
  ಜಾಗತೀಕರಣ ನೀತಿಕಥಾ- ಕತೆಯೆಂಬ ಕತೆ
  ಇಟ್ಟಿಗೆ ಮಣ್ಣಿನ ರಾಶಿಯ ಮುಂದೆ..:ಲಕ್ಷ್ಮಿ ಕುಡ್ಲ ಬರಹ
  ಅಕ್ರಮ ಗಣಿ ಕಂಡರೂ ನಾವು ಯಾಕೆ ಕುರುಡರು?
  ಮಂಗಳೂರಲ್ಲಿ ಪತ್ರಾವೋ ಉಪವಾಸ ಕುಂತಿದ್ದರು...
  ಗ್ರೆಗರಿ ಪತ್ರಾವೊಗಾಗಿ ವೈದೇಹಿ ಮೊರೆ
  ಗ್ರೆಗರಿ ಪತ್ರಾವೋ ಮನೆಗೆ ಜೆ.ಸಿ.ಬಿ. ಎರಗಿದ ಕಥೆ
  ಅರವತ್ತರ ಉಲ್ಲಾಸದಲ್ಲಿ ನಸೀರುದ್ದೀನ್ ಷಾ: ಬಸು ಬರಹ
  ಜಾಗತೀಕರಣ ನೀತಿಕಥಾ 3: ಸಿಐಡಿ ಹೇಳಿದ ಕತೆ
  ಆಸ್ಟ್ರೇಲಿಯಾ ಓಲೆ: ಓದಲು ಬಂದು ತಾಯಾದವರ ಕಥೆ
  ಗಣಿಯಿಂದ ಹೊರಬರುತ್ತಿರುವ ದುರ್ನಾತಗಳು
  ಆಳುವವರೂ,ಆಳಿಸಿಕೊಳ್ಳುವವರೂ,ಪ್ರಜಾಪ್ರಭುತ್ವವೂ....
  ಈ ಗೋಕಾಕ್ ಎಂದರೆ ಯಾರು? ಹೃಷಿಕೇಶ್ ಬರಹ
  ಫುಟ್ಬಾಲ್, ಮಂಡೇಲಾ ಮತ್ತು ಒಂದು ಕವಿತೆ
  ಅಹಲ್ಯೆಯಾಗಬೇಕಿದ್ದವಳು ಏಡಿ ಹಿಡಿದದ್ದು....
  ರಾಧಜ್ಜಿ ಸೀಕರ್ಣೆ ಬೇಡಾ ಅಂದ ಕಥೆ
  ಬದಲಾದ ಕಾಲಮಾನ: ರಾಜೇಶ್ವರಿ ತೇಜಸ್ವಿ ಬರಹ
  ಈ ಪೈಶಾಚಿಕತೆಗೆ ಕೊನೆಯೇ ಇಲ್ಲವೇ?