ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ - ವಿವಾದದಲ್ಲಿ ಚಿತ್ರಕಾರ    
ಸುದರ್ಶನ್
ಗುರುವಾರ, 5 ಜೂನ್ 2008 (05:39 IST)

ಬರ್ಮಾದ ಚಂಡಮಾರುತ, ಚೈನಾದ ಭೂಕಂಪ, ಅಫ್ಘಾನಿಸ್ತಾನದ ಸಾವುಗಳು, ಇರಾಕಿನ ಮಾರಣ ಹೋಮದ ನಡುವೆ ಇಲ್ಲೊಂದು ಹೊಸ ವಿವಾದ ಎದ್ದಿದೆ. ಈ ಹದಿಮೂರು ವರ್ಷದ ನಗ್ನ ಮಕ್ಕಳ ಚಿತ್ರ ನೋಡಿ. ಅದರ ಫೋಟೋ ತೆಗೆದಾತ ಬಿಲ್ ಹೆನ್ಸನ್ ಎಂಬ ವಿಶ್ವವಿಖ್ಯಾತ ಆಸ್ಟ್ರೇಲಿಯನ್ ಫೋಟೋಗ್ರಾಫರ್. ಸುಮಾರು ಇಪ್ಪತ್ತೈದು ವರ್ಷಗಳಿಂದ ಈತ ಹಲವು ತರದ ಫೋಟೋಗಳನ್ನು ತೆಗೆಯುತ್ತಾ ಬಂದಿದ್ದಾನೆ. ಆದರೆ ಹೋದ ವಾರ, ಅವನ ಒಂದು ಹೊಸ ಪ್ರದರ್ಶನವನ್ನು ಪೋಲೀಸರು ಬಂದು ಮುಚ್ಚಿಸಿದರು. ಅವನ ಹಲವು ಫೋಟೋಗಳನ್ನು ಮುಟ್ಟುಗೋಲು ಹಾಕಿಕೊಂಡು ಹೋದರು. ಚೈಲ್ಡ್ ಪ್ರೊಟೆಕ್ಷನ್ ಎಂದು ಯಾರೋ ಕೊಟ್ಟ ದೂರನ್ನು ಪೋಲೀಸರು ತನಿಖೆಗೆ ಎತ್ತಿಕೊಂಡಿದ್ದರು. ಇನ್ನೊಂದತ್ತ, ಪ್ರಧಾನಿ ಕೆವಿನ್ ರಡ್, ಯೆಮ್ಮ ಎಂಬ ರಾಜ್ಯದ ಮುಖ್ಯಮಂತ್ರಿ ಎಲ್ಲ ಈ ಚಿತ್ರಗಳನ್ನು ಛೀ ಥೂ ಎಂದು ಬೈದಾಡಿಬಿಟ್ಟರು.

ಇಲ್ಲಿ ಗಲಾಟೆ ಎಬ್ಬಿಸಿರುವುದು ನಗ್ನತೆಯಲ್ಲ. ನಗ್ನತೆಯ ಪ್ರದರ್ಶನವಲ್ಲ. ಆದರೆ, ಹದಿಮೂರು ವರ್ಷದ ಚಿಕ್ಕ ಹುಡುಗಿಯನ್ನು ಸೆರೆಹಿಡಿದಿದ್ದಾನೆಂಬ ಸಂಗತಿ. ಎಳೆಯ ದೇಹಗಳ ನಗ್ನತೆಯನ್ನು, ಅಶ್ಲೀಲತೆಯನ್ನು ಗುಟ್ಟಾಗಿ ಆವಾಹಿಸುವುದರ ಬಗ್ಗೆ ಇರುವ ರೊಚ್ಚಿನ ವಾತಾವರಣದಲ್ಲಿ ಈ ಗೊಂದಲ ಎದ್ದಿದೆ.

ಚಿತ್ರಗಳನ್ನು ಮುಟ್ಟುಗೋಲು ಹಾಕಿಕೊಂಡು, ಪ್ರದರ್ಶನ ನಿಲ್ಲಿಸಿದ ಪೋಲೀಸರು ಇನ್ನೂ ಗ್ಯಾಲರಿಯವರ ಮೇಲಾಗಲಿ, ಛಾಯಾಗ್ರಾಹಕನ ಮೇಲಾಗಲೀ ಯಾವುದೇ ಆರೋಪ ಹೊರಿಸಿಲ್ಲ. ಲಾಯರ್ ಒಬ್ಬನ ಪ್ರಕಾರ, ಕೋರ್ಟಿನಲ್ಲಿ ಸಾಬೀತಾಗಲೂ ಯಾವುದೇ ಕೃತ್ಯಕ್ಕೂ ಎರಡು ಅಂಶಗಳು ಇರಬೇಕು. ಒಂದು ತಪ್ಪು ಕೃತ್ಯ ಮತ್ತು ಎರಡನೆಯದು ಆ ಕೃತ್ಯದ ಹಿಂದಿನ ಕೆಟ್ಟ ಮನಸ್ಸು/ಮೋಟಿವ್. ಆತನ ಪ್ರಕಾರ ಅದು ಯಾವ ಆಧಾರದ ಮೇಲೆ ಪೋಲೀಸರು ಕೋರ್ಟಿನಲ್ಲಿ ಇದನ್ನು ದುಷ್ಕೃತ್ಯ ಎಂದು ಸಾಬೀತು ಮಾಡಬಲ್ಲರೋ ಎಂದು ಉದ್ಗಾರ ತೆಗೆದಿದ್ದಾನೆ.

ಹೆನ್ಸನ್ ಚಿತ್ರಗಳ ಕಲಾತ್ಮಕತೆಯ ಮಾತೇನೇ ಇರಲಿ. ಅದು ಎಲ್ಲರಿಗೂ ಇಷ್ಟವಾಗಬಲ್ಲಂತದ್ದೇನೂ ಅಲ್ಲ. ಬಾಲ್ಯ ಕಳೆದು, ಇನ್ನೂ ಯೌವ್ವನ ಮುತ್ತಿಕೊಂಡಿರದ ಕೌಮಾರ್ಯದಲ್ಲಿರುವವರ ಲೈಂಗಿಕತೆ ಇವನ ಚಿತ್ರಗಳ ಮಾದರಿಗಳು. ಮೊದಲ ಬಾರಿಗೆ ತಮ್ಮ ಲೈಂಗಿಕತೆಯನ್ನು ಕಂಡುಕೊಳ್ಳುವಲ್ಲಿನ ಆನಂದ ಮತ್ತು ಆತಂಕವನ್ನು ಹಿಡಿದಿಡುವುದು ಅದರ ಮೂಲ ಆಶಯ. ಎಂಬತ್ತರ ದಶಕದಿಂದ ಈ ಬಗೆಯ ಚಿತ್ರಗಳನ್ನು ತೆಗೆಯುತ್ತಾ ಬಂದಿರುವ ಇವನಿಗೆ ಧಡಕ್ಕನೆ ಶನಿಕಾಟ ಶುರುವಾಗಿರುವುದು ಹಲವು ಕಲಾವಿದರ ಹುಬ್ಬೇರಿಸಿದೆ. ಕೇಟ್ ಬ್ಲಾಂಚೆಟ್‌ನಂತಹವರೆಲ್ಲಾ ಈತನ ಬೆಂಬಲಕ್ಕೆ ನಿಂತಿದ್ದು ಪ್ರಧಾನಿಯನ್ನು ತೆಗಳಿದ್ದಾರೆ. ಇದ್ದಕಿದ್ದಂತೆ ಕಲೆಯ ವಿಚಾರದಲ್ಲಿ ನೂರು ವರ್ಷ ಹಿಂದಕ್ಕೆ ಹೋಗಿಬಿಟ್ಟಿರುಂತಿದೆ ಎಂದು ಇನ್ನು ಕೆಲವರು ಗೊಣಗುತ್ತಿದ್ದಾರೆ.

ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ನೈತಿಕತೆಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತಲೇ ಇರುತ್ತವೆ. ಅವುಗಳನ್ನು ಎಲ್ಲ ದೇಶದ ಸುದ್ದಿಗಳಲ್ಲೂ ಕೇಳುತ್ತಲೇ ಇರುತ್ತೇವೆ. ಎಲ್ಲರೂ ಸಮಾಜವನ್ನು ಕಾಪಾಡುವ ಮಾತೇ ಆಡುತ್ತಿರುತ್ತಾರೆ. ಕಲಾ ಚರಿತ್ರೆಯ ನೂರಾರು ವರ್ಷಗಳ ಹಲವಾರು ಪ್ರಕರಣಗಳು ನಿಮಗೆ ನೆನಪಿರಬಹುದು. ಸಮಕಾಲೀನದಲ್ಲೂ, ಎಂ.ಎಫ್.ಹುಸೇನರ ಮೇಲಿನ ದಾಳಿಯೂ ನಿಮಗೆ ಗೊತ್ತಿರಬಹುದು. ಏನೇ ಆದರೂ, ಕಲೆಯ ನೈತಿಕತೆ ಇವೆಲ್ಲವುಗಳ ಹೊರಗುಳಿಯಬೇಕಾಗುತ್ತದೆ. ಆಗಲೇ ಸಮಾಜದ ಹಲವು ನಿಲುವುಗಳನ್ನು ಕೆಣಕಬಹುದು, ಪ್ರಶ್ನಿಸಬಹುದು. ಅವುಗಳನ್ನು ಹೊಸ ದಿಗಂತದತ್ತ ದೂಡಬಹುದು. ಇಲ್ಲದಿದ್ದರೆ ನಿಂತ ನೀರಾಗುವ ಅಪಾಯವೇ ಹೆಚ್ಚು.

[photo - Adam Hollingworth]

ಪುಟದ ಮೊದಲಿಗೆ
 
Votes:  1     Rating: 5    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು