ದಯಾನಂದ ರಸ್ತೆ ನಕ್ಷತ್ರ: ಸಾವಿನ ಮನೆಯ ಕಣ್ಣಿಲ್ಲದ ಹಾಡುಗಾರರು ಹೇಳಿದ್ದು

ಈ ದೇವುರುಗಳು ಇದಾವಲ್ಲ ಸಾರ್.. ಮನುಷುರನ್ನ ಮಾಡೋ ದೇವುರುಗುಳು.. ಅದ್ರಾಗೆ ಎರಡು ಥರ ಇರತವಂತೆ.. ಕಣ್ಣಿರೋ ದೇವುರು, ಕಣ್ಣಿಲ್ಲದಿರೋ ದೇವುರು ಅಂತ.. ಈ ೨ ಪಂಗಡದಾಗೆ ಕಣ್ಣಿಲ್ಲದಿರೋ ದೇವುರುಗಳು ಮಾಡೋ ಮನುಷ್ಯರಿಗೂ ಕಣ್ಣಿರಕ್ಕಿಲವಂತೆ, ಅಂಥಾ ದೇವುರುಗಳ ಕೈಲಿ ಸಿಗಾಯ್ಕೆಂಡು ನಾವೂ ಕಣ್ಣಿಲ್ಲದಂಗೆ ಹುಟ್ಟು ಬುಟ್ಟುವಿ. ಹಸುವಾದಾಗ ಅಳಾದು ಬಿಟ್ರೆ ಯಾರು ಹಾಲು ಕೊಡ್ತರೆ, ಯಾರು ಅನ್ನ ತಿನುಸ್ತರೆ ಅಂತಾನೂ ನಮಗೆ ಗೊತಾಯ್ತಾ ಇರಲಿಲ್ಲ. ಸೌಂಡು ಮಾಡಿದ್ರೆ ಏನಾದ್ರೆ ಕೊಡ್ತರೆ ತಿನ್ನಕ್ಕೆ ಅಂತ ಅಷ್ಟೇ ಗೊತ್ತಿದ್ದಿದ್ದು ನಮಗೆ.. ಕಣ್ಣಿರೋ ಮಕ್ಕಳೇ ಅಲ್ಲಿ ಇಲ್ಲಿ ಬಿದ್ದು ಮಕಾ ಒಡಾಕ್ಕೆಂತವೆ, ನಾವು ಎಲ್ಲೆಲ್ಲಿ ಬಿದ್ವೋ ಎಲ್ಲೆಲ್ಲಿ ಎದ್ವೋ ನಮಗೇ ಗೊತ್ತು. ಹಂಗಾಡಿ ಹಿಂಗಾಡಿ ಇಸ್ಕೂಲಿಗೆ ಹೋಗೋ ವಯಸ್ಸಿಗೆ ಬಂದಾಗ ನಮ್ಮಪ್ಪ ಅವ್ವನೋರು ಇಸ್ಕೂಲಿಗೆ ಸೇರಿಸಾಕೆ ಅಂತ ನೋಡಿದ್ರಂತೆ, ಅವಾಗ ಕುಲ್ಡರಿಗೆ ಅಂತ ಯಾವ ಸ್ಕೂಲೂ ಇರನಿಲ್ಲ ಈ ಊರಾಗೆ, ಸಿದ್ದಗಂಗೆ ಮಠದೋರು ಎಂಥೋರಿಗಾದ್ರೂ ಇಸ್ಕೂಲಿಗೆ ಸೇರಿಸಿಗಂಡು ಪಾಠವ ಹೇಳ್ ಕೊಡ್ತರೆ ಅಲ್ಲಿಗೆ ಕರಕಂಡೋಗಿ ಸೇರಿಸಿಬುಡ್ರಿ...

Read More