Advertisement

ಡಾ. ಎಚ್ ಎಸ್ ಅನುಪಮಾ

ಡಾ. ಎಚ್ ಎಸ್ ಅನುಪಮಾ

ಉತ್ತರಕನ್ನಡ ಜಿಲ್ಲೆ ಹೊನ್ನಾವರದ ಬಳಿಯ ಕವಲಕ್ಕಿಯಲ್ಲಿ ವೈದ್ಯರಾಗಿದ್ಡಾರೆ. ಕವಿತೆ. ವೈಚಾರಿಕ ಚಿಂತನೆ ಮತ್ತು ವೈದ್ಯಕೀಯ ಬರಹಗಳು ಇವರ ವಿಶೇಷ.

ಎಚ್.ಎಸ್ ಅನುಪಮಾ ಬರೆದ ಸಖಿಯ ಗೀತೆಗಳು

‘ಸುರಿಯುತ್ತಿರುವ ಈ ಬೆಳದಿಂಗಳು ನಿನ್ನ ನೆನಪಿಸುತ್ತ ನನ್ನೊಳಗೆ ಇಳಿಯುತ್ತ ನಶೆಯಾಗಿ ಕಣ್ಣ ತುಂಬುತ್ತಿದೆ… ತಿಂಗಳ ಬೆಳಕ ಮಬ್ಬಿನಲ್ಲಿ ಯಾವುದೂ ನಿಚ್ಚಳವಿರದೆ ಹತ್ತಿರವಿರುವುದೂ ದೂರವಾಗೇ ಕಾಣುತ್ತಿದೆ… ’ ಡಾ. ಎಚ್.ಎಸ್. ಅನುಪಮಾ ಬರೆದ ಕವಿತೆಗಳು ಇಲ್ಲಿವೆ.

Read More

ಉತ್ತರ ಕನ್ನಡದಲ್ಲಿ ಏನುಂಟು? ಏನಿಲ್ಲ! : ಅನುಪಮಾ ಬರಹ

ಮನೆಯಿಂದ ಹೊರಹೊರಡುವ ಜನ ಬರಿಕೈಲಿ ಹೊರಡುವುದು ಕಮ್ಮಿ. ತಲೆ ಮೇಲೊಂದು ಎಲೆ ಕಟ್ಟೋ, ಬಾಳೆಗೊನೆಯೊ, ಉದುರಡಕೆ ತುಂಬಿದ ಚೀಲವೋ, ಹೀಗೆ ಏನಾದರೊಂದು ಇದ್ದೇ ಇರುತ್ತದೆ. ವಾಪಸು ಮನೆಗೆ ಹೋಗುವಾಗ ಪೇಟೆಯಿಂದ ಖರೀದಿಸಿದ ಕಿರಾಣಿ ಸಾಮಾನಿನ ಹೊರೆ. ಹತ್ತಿಳಿಯುವ ದಾರಿಗಳಲ್ಲಿ, ತಲೆ ಮೇಲಿನ ಭಾರ ಒಂದು ಕೈಯಲ್ಲಿ, ಮಿಣಿಗುಡುವ ಟಾರ್ಚೋ ಮೀನು ಕೊಟ್ಟೆಯೋ ಮತ್ತೊಂದು ಕೈಯಲ್ಲಿ ಹಿಡಿದು ಕಪ್ಪಾದ ಮೇಲೂ ಅವರು ಕ್ರಮಿಸುವ ಹಾದಿ ನೋಡಿದರೆ ಹೇಗೆ ಮನೆ ಮುಟ್ಟುತ್ತಾರೋ ಎನಿಸುತ್ತದೆ. ಗವ್ವೆನ್ನುವ ಕತ್ತಲು, ಒಂದೇ ಸಮ ಕೂಗಿ ಕಿವಿಗೆ ಗರ ಬಡಿಸುವ ಜೀರುಂಡೆ, ಸರಬರ ದರಕಿನಲ್ಲಿ ಹರಿದಾಡುವ ಸಪ್ಪಳಗಳು – ಇವೆಲ್ಲ ಅವರ ರಾತ್ರಿ ಸಂಗಾತಿಗಳು. ಧೈರ್ಯಕ್ಕೂ ಆಯಿತು, ಮೈಕೈ ನೋವಿಗೂ ಆಯಿತು ಎಂದು ‘ಪರಮಾತ್ಮ’ನನ್ನು ಒಳಗೆ ಆವಾಹನೆ ಮಾಡಿಕೊಂಡೇ ಪೇಟೆಯಿಂದ ಹೊರಬೀಳುವವರಿದ್ದಾರೆ. ಊರಿಲ್ಲದಿದ್ದರೂ ಸಾರಾಯಿಗೆ ಏನೂ ಕೊರತೆಯಿಲ್ಲ. ಹಳೆಯ ಬೆಲ್ಲದ ಕೊಳೆ, ಗೇರುಹಣ್ಣುಗಳಿಂದ ತಮಗೆ ಬೇಕಾದ್ದಷ್ಟನ್ನಲ್ಲದೇ ಮಿಕ್ಕವರಿಗೂ ತಯಾರಿಸಿ ಕುಡಿಸಿ ಖುಷಿಪಡುವ ಉದಾರಿಗಳಿಗೆ ಕೊರತೆಯಿಲ್ಲ. ಅವರಿಗೆಲ್ಲ ಪಾನನಿಷೇಧ ಅಂಥಾ ದೊಡ್ಡಸಂಗತಿಯಾಗಿ ಕಾಡಿಲ್ಲ.

Read More

ಕಾಲ ಮೂಕವಾಗಿರುವ ಮಿರ್ಜಾನ್ ಕೋಟೆ;ಅನುಪಮಾ ಪ್ರವಾಸ ಕಥನ

ಕೋಟೆಯ ಒಂದು ಪಾರ್ಶ್ವದ ಪ್ರವೇಶದಲ್ಲಿ ನಿಂತ `ಜೈನ’ ಕಂಬವು ಜೈನರಾಣಿ ಚೆನ್ನಭೈರಾದೇವಿಗೆ ಈ ಕೋಟೆಯ `ಒಡತಿ’ ಸ್ಥಾನವನ್ನು ಗಟ್ಟಿಗೊಳಿಸುತ್ತದೆ. ಬಹುಶಃ ಭಾರತ ದೇಶದ ಇತಿಹಾಸದಲ್ಲೇ ಅತಿ ದೀರ್ಘಾವಧಿ ಕಾಲ ರಾಣಿಯಾಗಿ ಆಳಿದ ಕೀರ್ತಿ- ಕ್ರಿ.ಶ.1552ರಿಂದ ಕ್ರಿ.ಶ.1606ರ ತನಕ 54 ವರ್ಷಗಳು – ಚೆನ್ನಭೈರಾದೇವಿಗೆ ಸಲ್ಲುತ್ತದೆ. ಕರಾವಳಿಯ ಉದ್ದನೆಯ ಭೂ ಪ್ರದೇಶವನ್ನು ಗೋವಾ-ಅಂಜದೀವ್ ನಿಂದ ದಕ್ಷಿಣದಲ್ಲಿ ಕಾಸರಗೋಡಿನವರೆಗೂ ಆಳಿದರೆಂದು ಹೇಳಲಾಗುವ ಸಾಳುವ ವಂಶಕ್ಕೆ ಸೇರಿದ ಈ ರಾಣಿ, ವಿಜಯನಗರ ಪತನಗೊಳ್ಳುತ್ತಿರುವ ಕಾಲದಲ್ಲೂ ತನ್ನನ್ನು ಆ ಸಾಮ್ರಾಜ್ಯದ `ಮಹಾಮಂಡಲೇಶ್ವರ’ ಎಂದು ಕರೆದುಕೊಳ್ಳುತ್ತಾಳೆ. ಅವಳಿದ್ದಷ್ಟು ಕಾಲವೂ ಕಾಳುಮೆಣಸು ಹಾಗೂ ಅಕ್ಕಿ ವ್ಯಾಪಾರದ ಮೇಲೆ ಏಕಸ್ವಾಮ್ಯ ಹೊಂದಿ ಪೋರ್ಚುಗೀಸರನ್ನು ತಡೆದಿಟ್ಟ ಕೀರ್ತಿ ಅವಳದು. ಎತ್ತರ ಪ್ರದೇಶದಲ್ಲಿರುವ, ಸಮುದ್ರ ನದಿಗಳಿಗೆ ಹತ್ತಿರದಲ್ಲಿರುವ, ಘಟ್ಟದ ಕಡೆಯ ಮೇಲೂ ಒಂದು ಕಣ್ಣಿಡಲು ಸಹಾಯವಾಗುವ ಈ ಆಯಕಟ್ಟಿನ ಜಾಗದಲ್ಲಿ ಕೋಟೆಯೊಂದು ಇದ್ದರೆ ವ್ಯಾಪಾರ ವ್ಯವಹಾರವಷ್ಟೇ ಅಲ್ಲ, ಸುರಕ್ಷತೆಯ ದೃಷ್ಟಿಯಿಂದಲೂ ಅನುಕೂಲ ಎಂದು ಉತ್ತಮ ಆಡಳಿತಗಾರಳಾಗಿದ್ದ ಅವಳು ಭಾವಿಸಿದ್ದಿರಬಹುದು.

Read More

ಗೌರಿಹಬ್ಬದ ವಿಶೇಷ: ಗಂಡಸರಿಗೇನು ಗೊತ್ತು ಗೌರಿಯರ ದುಃಖ?

ಮಹಾಸಂಪ್ರದಾಯಸ್ಥೆಯಾಗಿದ್ದ ಅಜ್ಜಿ ಹಿಂದಿನ ದಿನದ ತನಕ – ಅವಳ ತವರು ಮನೆಯವರು ಕೊಟ್ಟ ಗೌರೀ ಪೆಟ್ಟಿಗೆಯನ್ನು ಹುಣಿಸೆಹಣ್ಣು ಹಚ್ಚಿ ತಿಕ್ಕಲು ತೆಗೆಯುವ ತನಕ – ಚೆನ್ನಾಗಿರುತ್ತಿದ್ದವಳು ಆ ಮೇಲೆ ಮಡಿಮಡಿ ಎಂದು ಅದು ಯಾಕೆ ಹಾಗೆ ಬದಲಾಗುತ್ತಿದ್ದಳೋ? ನಾವೆಲ್ಲ ಹಬ್ಬದ ದಿನ ಬೆಳಿಗ್ಗೆ ಎದ್ದು ಕಣ್ಣುತಿಕ್ಕುವುದರೊಳಗೆ ಅವಳಾಗಲೇ ಎದ್ದು ಅಡಿಗೆ ಮನೆಯ ಬಾಗಿಲು ಹಾಕಿಕೊಂಡಿರುತ್ತಿದ್ದಳು. ಮತ್ತೆ ಅಜ್ಜಿ ಬಾಗಿಲು ತೆರೆದು ಹೊರಬರುತ್ತಿದ್ದಿದ್ದು ಪೂಜೆಯ ಕರೆ ಬಂದಾಗಲೇ. ಜೊತೆಗೆ ಅವಳ ಒಂದಿಬ್ಬರು ಹೆಣ್ಣುಮಕ್ಕಳೂ ಸೇರಿ, ಒದ್ದೆ ಕೂದಲ ನೀರಿಳಿಸುತ್ತ, ಮಡಿಸೀರೆಯುಟ್ಟು, ಮುಚ್ಚಿದ ಬಾಗಿಲ ಹಿಂದೆ ದಡಬಡ ಮಾಡುತ್ತ, ಅಂದಿನ ಅಡಿಗೆ ತಯಾರಿ ಮುಗಿಸಿಯೇ ಹೊರಬರುತ್ತಿದ್ದಿದ್ದು. ಒಳಗಿನಿಂದ ವಿಧವಿಧ ಭಕ್ಷ್ಯಗಳ ಸಿಹಿ ಪರಿಮಳ ಘಂ ಎಂದು ಮೂಗಿಗೆ ಬಡಿಯುತ್ತಿರುವಾಗ ತಿನ್ನಲು ಬರೀ ಒಂದು ಮುಷ್ಟಿ ಅವಲಕ್ಕಿ ಹೊರಗಿಟ್ಟರೆ ಎಷ್ಟು ನಿರಾಶೆಯಾಗಲಿಕ್ಕಿಲ್ಲ? ಚೆನ್ನಾಗಿ ಹೊಟ್ಟೆ ಹಸಿದರೆ ಆಮೇಲೆ ಹೋಳಿಗೆ ಊಟ ಚೆನ್ನಾಗಿ ಸೇರುತ್ತದೆ ಅನ್ನುವುದು ಅಜ್ಜಿಯ ನೀತಿ. ಅಥವಾ ಆ ದೊಡ್ಡ ಪಟಾಲಂಗೆ ತಿಂಡಿ ಮಾಡಿ ಹಂಚುತ್ತಾ ಕೂತರೆ ಉಳಿದ ಕೆಲಸ ಸಾಗುವುದಿಲ್ಲ ಎಂಬ ಉಪಾಯವೂ ಇರಬಹುದು. ಅಂತೂ ಮತ್ಯಾವಾಗ ಹೋಳಿಗೆ ಮಾಡಿದರೂ ಗೌರಿಹಬ್ಬದ ದಿನದ ರುಚಿ ಇರದೇ ಇದ್ದುದಕ್ಕೆ ಹೊಟ್ಟೆಖಾಲಿಇಡುವ ಉಪಾಯವೂ ಒಂದು ಕಾರಣವಿರಬಹುದು.

Read More

ದಿಕ್ಕೆಡಿಸುವ ಗಲ್ಲೆಬಾನಿ : ಅನುಪಮಾ ಟಿಪ್ಪಣಿ

`ದಲಿತ ಕವಿ’ ಎಂಬ ಯಾವ ರಿಯಾಯಿತಿಯ ಅಗತ್ಯವೂ ಬೇಡದ, ತಮ್ಮ ನಾಲ್ಕನೆಯ ಖಂಡಕಾವ್ಯ `ಗಲ್ಲೆಬಾನಿ’ ಪ್ರಕಟಿಸಿದ ಕೆ.ಬಿ.ಸಿದ್ಧಯ್ಯ ಅವರ ಕಾವ್ಯದ ಬಗೆಗೆ ಕೇಳಿಬರುತ್ತಿರುವ ಹಲವು ಧ್ವನಿಗಳನ್ನು ಕೇಳಿದ ಮೇಲೆ ತುರ್ತಾಗಿ ಅವರ ಕಾವ್ಯವನ್ನು ಮತ್ತೆ ಮತ್ತೆ ತಿರುವಿಹಾಕುವಂತಾಯಿತು. ಮೂರ್ನಾಲ್ಕು ಸಲ ಓದಿದ ಮೇಲೂ ಪೂರ್ತಿಯಾಗಿ ಕೈಗೆ ದಕ್ಕದೇ ಜಾರಿಹೋಗುತ್ತಿರುವಾಗ, ಹಿಡಿದಿದ್ದು ಬಿಡಲಾರದೇ ಮತ್ತೆ ಅಲ್ಲೇ ಮುಳುಗೇಳುತ್ತಿರುವಾಗ, ಗಲ್ಲೆಬಾನಿಯೆಂಬ ಶಬ್ದಶಿಲ್ಪದ ಆಕಾರ ಗುರುತುಗಳೊಂದೂ ತಿಳಿಯದೇ ದಿಕ್ಕೆಟ್ಟ ಅನುಭವವಾಯಿತು. `ಗಲ್ಲೆಬಾನಿ’ ಎಂಬ ಪಾರಂಪರಿಕ ರೂಪಕವನ್ನು ಕಾವ್ಯದಲ್ಲಿ ಊಹಿಸಿಕೊಳ್ಳುತ್ತ ಓದುತ್ತ ಹೋದಂತೆ ಹಲವು ಚದುರಿದ ಚಿತ್ರಗಳು ದೊರಕಿದವು. `ತೊಡೆಹಾಸು, ಅಂಗಾಲಕಣ್ಣು, ಹೂಮಾಂಸ, ಕರುಳದಾರ, ಮೈಯಾನಿಸಿ ಹೆರುವ ಭಂಗಿ..’ಯಂತಹ ಬೆಚ್ಚಿಬೀಳಿಸುವ ಪ್ರತಿಮೆಗಳೂ, ಸ್ಮಶಾನ ಸತ್ಯಗಳನ್ನುಸುರುವ ಕೆಲ ಅಪರೂಪದ ಸಾಲುಗಳೂ, ಹತಾಶೆ ಮರುಕ ಸಿಟ್ಟು ಭಕ್ತಿ ಎಚ್ಚರ ಮೊದಲಾದ ಸಮ್ಮಿಶ್ರ ಭಾವಗಳೂ ಪ್ರವೇಶಿಸಿ, ಒಟ್ಟಾರೆ ದೊರೆತ ಕಾವ್ಯಾನುಭವ ವಿವರಣೆಗೆ ನಿಲುಕದಾಯಿತು.

Read More

ಜನಮತ

ಕೆಂಡಸಂಪಿಗೆಯ ಹೊಸ ನೋಟ, ಬಣ್ಣ ಮತ್ತು ವಿನ್ಯಾಸ.

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

kendasampige

ಜಗತ್ತಿನೆಲ್ಲೆಡೆ ಹಬ್ಬಿರುವ ಕನ್ನಡದ ಈ ಬೆಡಗು ಪ್ರತಿ ದಿನವೂ ಅರಳುತ್ತಾ, ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ, ಸಾಹಿತ್ಯ, ಸಿನೆಮಾ, ಜಾನಪದ, ರಾಜಕೀಯ – ಹೀಗೆ ಕನ್ನಡ ನಾಡಿನ ಇತಿಹಾಸವನ್ನೂ ಹಾಗೂ ದಿನ ನಿತ್ಯದ ಉಸಿರನ್ನೂ ನಿಮ್ಮ ಮುಂದೆ ಸೂಸುತ್ತಿದೆ.

ಭಾಷೆ, ಸಂಸ್ಕೃತಿ ಇತ್ಯಾದಿಗಳ ಹೆಸರಿನಲ್ಲಿ ಭಾಷಾಂಧರೂ, ಧರ್ಮಾಂಧರೂ ಆಗಿಬಿಡುವ ಈ ಅಪಾಯದ ಹೊತ್ತಲ್ಲಿ ಕನ್ನಡ ನಾಡಿನ ನಿಜದ ಗುಣವನ್ನು, ಅದರ ಭಾಷಾ ವೈವಿಧ್ಯಗಳನ್ನು, ಪ್ರೀತಿ ಸಹನೆಗಳನ್ನು, ಜನ ಜೀವನದ ವೈವಿಧ್ಯಗಳನ್ನು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಜಗತ್ತಿನೆಲ್ಲೆಡೆಯ ಮಾನವ ಜೀವಿತದ ಅಪಾರ ಸಾಧ್ಯತೆಗಳನ್ನು ಕೆಂಡಸಂಪಿಗೆ ಪ್ರತಿದಿನವೂ ತನ್ನ ಬರಹಗಳ ಮೂಲಕ ಕನ್ನಡ ಓದುಗ ಲೋಕಕ್ಕೆ ಅರುಹುತ್ತಿದೆ.

ಅಂತರ್ಜಾಲವೆಂಬ ಅರಿವಿನ ಸ್ಫೋಟದ ಆಕಾಶದಲ್ಲಿ ಲೇಖಕರು, ಓದುಗರು, ಸಂಪಾದಕರು, ವರದಿಗಾರರು ಎಂಬ ಅಂತರಗಳೇನೂ ಇಲ್ಲ. ಬರೆಯುವ ಒಂದು ಕ್ರಿಯೆಯಷ್ಟೇ ದೊಡ್ಡದು ಓದುವುದು. ಅದರಷ್ಟೇ ದೊಡ್ಡದು ಚಿತ್ರಗಳು.ಇವೆಲ್ಲಕ್ಕಿಂತ ದೊಡ್ಡದು ಇವೆಲ್ಲದರ ನಡುವೆ ನಡೆಯುವ ಪ್ರತಿಕ್ರಿಯೆಗಳು ಹಾಗೂ ಸಂವಾದ. ಕೆಂಡಸಂಪಿಗೆಯ ಬೆಳವಣಿಗೆಗೆ ಬರವಣಿಗೆಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಓದುಗರ ಪ್ರತಿಕ್ರಿಯೆಗಳು ಎಂಬುದು ಕೆಂಡಸಂಪಿಗೆಯ ನಂಬಿಕೆ.

ಓದುಗರ ನಿಮ್ಮ ಇಷ್ಟಗಳನ್ನು ಮರೆತು ಕೆಂಡಸಂಪಿಗೆ ಮುಂದೆ ಹೋಗುವುದಿಲ್ಲ. ಆದರೆ ಹಾಗೆ ಹೋಗುವಾಗ ಅದರ ದಾರಿಯನ್ನೂ ಮರೆಯುವುದಿಲ್ಲ. ಓದುಗರ ಇಷ್ಟಗಳನ್ನು ಗೌರವಿಸುವ ಜೊತೆ ಜೊತೆಯಲ್ಲೇ ನಮ್ಮ ಉದ್ದೇಶಗಳನ್ನೂ ಮರೆಯದ ಹಾಗೆ ಮುಂದೆ ಹೋಗುತ್ತೇವೆ. ಕೆಂಡಸಂಪಿಗೆಯ ಉದ್ದೇಶ ಕನ್ನಡದ ಜೀವಂತ ಸಂಸ್ಕೃತಿಯನ್ನು ಅದರ ಎಲ್ಲ ಪರಿಮಳಗಳ ಜೊತೆಗೆ ಓದುಗರ ಮುಂದೆ ತೆರೆದಿಡುವುದು.

kendasampige

kendasampige4 hours ago

ಲೋಕೇಶ್ ಮೊಸಳೆ ತೆಗೆದ ದಿನದ ಚಿತ್ರ Lokesh Mosale
https://tinyurl.com/yc3fxd57

kendasampige

kendasampige4 hours ago

ಮಹಾನಿರ್ಣಯ: ಎಚ್.ಎಸ್.ವೆಂಕಟೇಶಮೂರ್ತಿ ಬರೆದ ದಿನದ ಕವಿತೆ
https://tinyurl.com/y8jylr92

kendasampige

kendasampige4 hours ago

ಎತ್ತರದ ಹುಡುಗಿಯ ಒತ್ತಡಗಳು:ಸುಷ್ಮಾ ಕಟ್ಟಾಯ ಬರಹ Kattaya Belli Sushma
https://tinyurl.com/y88bhq6b

ನಮ್ಮ ಟ್ವಿಟ್ಟರ್

4 hours ago
ಲೋಕೇಶ್ ಮೊಸಳೆ ತೆಗೆದ ದಿನದ ಚಿತ್ರ Lokesh Mosale
https://t.co/Avjefss32f https://t.co/wLGvTTYp0U

4 hours ago
ಮಹಾನಿರ್ಣಯ: ಎಚ್.ಎಸ್.ವೆಂಕಟೇಶಮೂರ್ತಿ ಬರೆದ ದಿನದ ಕವಿತೆ
https://t.co/rUekZs0fsX https://t.co/QjbXZhAL0j

4 hours ago
ಎತ್ತರದ ಹುಡುಗಿಯ ಒತ್ತಡಗಳು:ಸುಷ್ಮಾ ಕಟ್ಟಾಯ ಬರಹ
https://t.co/eFx5erBE75 https://t.co/F6rw8Y68KO

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ವಾರ್ತಾಪತ್ರಕ್ಕಾಗಿ