Advertisement

ಕೆ ಟಿ ಗಟ್ಟಿ

ಕೆ ಟಿ ಗಟ್ಟಿ

ಉಜಿರೆಯಲ್ಲಿ ನೆಲೆಸಿರುವ ಕನ್ನಡದ ಖ್ಯಾತ ಕಾದಂಬರಿಗಾರ. ಇಂಗ್ಲಿಷ್ ಭಾಷಾ ಬೋಧನೆಯ ವಿಶೇಷಜ್ಞ

ಕೆ. ಟಿ. ಗಟ್ಟಿ ಸಣ್ಣ ಕಥೆ – ಶಿವರಾಮನ ಮಗ ಶಿವರಾಮ

ಹೆತ್ತ ತಾಯಿಗಿಂತ ಹೆಚ್ಚು ಹೊತ್ತು ತಂದೆಯೇ ಮಗುವಿನ ಬಳಿಯಿರುವುದು ತಾಯಿ ಸುಶೀಲೆಗೆ ಅತಿ ಅಪೂರ್ವವಾದ ಸಂಗತಿಯೆನಿಸಿತು. ಈ ಅಚ್ಚೆ ಮತ್ತು ಕಾಳಜಿ ಒಮ್ಮೊಮ್ಮೆ ಅವಳಿಗೆ ಕಿರಿಕಿರಿಯೆನಿಸಿದರೂ ಇಷ್ಟು ಜತನದಿಂದ ತಾನೇ ತಾಯಿಯೆಂಬಂತೆ ಮಗುವನ್ನು ನೋಡಿಕೊಳ್ಳುವ ಇನ್ನೊಬ್ಬ ತಂದೆ ಜಗತ್ತಿನಲ್ಲಿ ಇರಲಾರ ಎಂದೆನಿಸಿ ಖುಷಿಯೂ ಆಯಿತು. ಮುಖ್ಯವಾಗಿ, ಅದು ಗೀಳಿನಂತೆ ಅಥವಾ ಮೋಹದಂತೆ ಅವಳಿಗೆ ತೋರಲಿಲ್ಲ. ಕರ್ತವ್ಯ ಪ್ರಜ್ಞೆಯಂತೆ ತೋರಿತು. ಪ್ರಪಂಚದಲ್ಲಿ ಗಂಡು ಮಗುವನ್ನು ಹಣ ಸಂಪಾದನೆ ಮಾಡತೊಡಗಿದ ಮೇಲೆ ಮಾತ್ರ ನಿಜವಾಗಿಯೂ ತನ್ನದೆಂದು ಭಾವಿಸುವ ಅಪ್ಪಂದಿರೇ ಹೆಚ್ಚು. ಹಾಗಿರುವಾಗ ಹೆತ್ತಿರುವುದು ತಾನೇ ಎಂಬಂತೆ ಮಗುವನ್ನು ಲಾಲಿಸುವ ಪಾಲಿಸುವ ತಂದೆಯನ್ನು ಪಡೆದುದು ತನ್ನ ಭಾಗ್ಯ ಎಂದು ಸುಶೀಲೆಗನಿಸದಿರಲಿಲ್ಲ.
ಮಗನಿಗೆ ‘ಶಿವರಾಮ’ ಎಂದೇ ಹೆಸರಿಡುವುದು ಎಂದು ಶಿವರಾಮ ತೀರ್ಮಾನಿಸಿದ.

Read More

ಭಾನುವಾರದ ಸ್ಪೆಷಲ್- ಗೆಂಜಿ ಎಂಬ ಕಾದಂಬರಿಗೆ ಒಂದು ಸಾವಿರ ವರ್ಷ

ತನ್ಮಧ್ಯೆ ಹಳೆಯ ಚಕ್ರವರ್ತಿ ಮೃತನಾಗಿ ಕೊಕಿಡೆನಳ ಮಗ ಪಟ್ಟಕ್ಕೆ ಬರುತ್ತಾನೆ. ಗೆಂಜಿಯ ಪ್ರೇಮ-ಪ್ರಣಯ ಅರಮನೆಯಲ್ಲಿ ಹಗರಣ ಉಂಟುಮಾಡುತ್ತದೆ. ಅವನು ರಾಜಧಾನಿಯನ್ನು ತೊರೆಯಬೇಕಾಗುತ್ತದೆ. ಕಥೆಯ ಕೊನೆಯ ಭಾಗದಲ್ಲಿ ಗೆಂಜಿ ರಾಜಧಾನಿಗೆ ಮರಳುತ್ತಾನೆ. ಮುರಸಾಕಿ ಮತ್ತು ಇತರ ಹಲವು ಹಣ್ಣುಗಳ ಜೊತೆ ರೊಕುಜೊ ಅರಮನೆಯಲ್ಲಿ ನೆಲೆನಿಲ್ಲುತ್ತಾನೆ. ಕಥೆಯ ಈ ಸುದೀರ್ಘವಾದ ಭಾಗದಲ್ಲಿ ಗೆಂಜಿ ತನ್ನ ಮಕ್ಕಳ ಮತ್ತು ಮೊಮ್ಮಕ್ಕಳ ಅಭ್ಯುದಯವನ್ನು ಸಾಧಿಸುವ ವಿವರವಿದೆ. ಇತರರ ಬಲವಂತಕ್ಕೊಳಗಾಗಿ ಇಳಿವಯಸ್ಸಿನಲ್ಲಿ ಗೆಂಜಿ ಮತ್ತೆ ಮದುವೆಯಾಗುತ್ತಾನೆ…

Read More

ಕೆ ಟಿ ಗಟ್ಟಿ ಬಿಸಿಲುಕೋಲು : ಅಮೇರಿಕಾ ಪ್ರವಾಸ

ಇಂದಿನ ಕಾಲದಲ್ಲಿ ಕೇವಲ ಓದಿನ ಸಾಧನೆಯಷ್ಟೇ ಅಲ್ಲ, ತಾನು ಏನನ್ನು ಯಾಕೆ ಕಲಿಯುತ್ತಿದ್ದೇನೆ ಎಂಬ ಅರಿವು-ಮಾಹಿತಿ ವಿದ್ಯಾರ್ಥಿಗೆ ಸಾಕಷ್ಟು ಮೊದಲೇ ಇರಬೇಕಾದ್ದು ಅಗತ್ಯ. ತನ್ನ ಭವಿಷ್ಯಕ್ಕೆ ಬೇಕಾದ ಉದ್ಯೋಗ ಅಥವಾ ವೃತ್ತಿಯನ್ನು ದೊರಕಿಸಿಕೊಡುವಲ್ಲಿ ಕಾಲೇಜು ಅಥವಾ ಯೂನಿವರ್ಸಿಟಿ ಸಹಾಯ ಮಾಡುವುದಾದರೆ ಅದು ಅತ್ಯಂತ ಸ್ವಾಗತಾರ್ಹ ವಿಚಾರ. ಇತ್ತೀಚೆಗೆ ನಮ್ಮಲ್ಲಿ ಕಾಣಿಸಿಕೊಂಡಿರುವ ಕ್ಯಾಂಪಸ್ ಸೆಲೆಕ್ಷನ್ ಎಂಬುದು ಎಲ್ಲೋ ದೂರದಿಂದ ದೇವದೂತರು ಬಂದು ಕೆಲವು ಚುರುಕಿನ ಬುದ್ಧಿವಂತರನ್ನು ಹೆಕ್ಕಿಕೊಂಡು ಹೋಗುವ ವ್ಯವಹಾರ ಅಷ್ಟೆ.

Read More

ಬಿಸಿಲುಕೋಲು- ನಿಸರ್ಗವನ್ನು ಅರಿತೆವು ಎಂಬ ಒಣ ಹಮ್ಮು

ಬಹಳ ಮಂದಿ ನಗರ ವಾಸಿಗಳಿಗೆ ಹಳ್ಳಿ ಅಂದರೆ ದೂರದ ಹಸಿರು ಬೆಟ್ಟ; ದೂರದ ತಂಪು ಕಾಡು; ವಿಸ್ತಾರವಾದ ಬಯಲು; ದೂರದ ಮನೋಹರ ಜಲಪಾತ. ಚಿಮ್ಮುವ ಝರಿಗಳಲ್ಲಿ, ನದಿ ಕಾಡು ಬೆಟ್ಟಗಳಲ್ಲಿ, ಹಿಮಾಚ್ಛಾದಿತ ಪರ್ವತ ಶ್ರೇಣಿಗಳ ಕಣಿವೆಗಳಲ್ಲಿ ನಾಯಕ ನಾಯಕಿಯರನ್ನು ಓಡಾಡಿಸಿ ಹಾಡಿಸಿ ಕುಣಿಸಿದರೆ ಕತೆಯೆಂಬುದಿಲ್ಲದ ಸಿನಿಮಾ ಹಿಟ್ಟಾಗುವುದು ಹಾಗೆ! ಹಾಗೆಂದು, ಇದು ನಗರಿಗರು ಮಾತ್ರ ನಿಸರ್ಗವನ್ನು ನೋಡುವ ರೀತಿಯೇನಲ್ಲ. ಸಕಲರೂ ಸಿನಿಮಾ ಪರದೆ ಅಥವಾ ಟೀವಿಯ ಮೇಲೆ ನಿಸರ್ಗವನ್ನು ನೋಡಿ ಆನಂದಿಸುವ ವಿಧಾನ ಇದೇ ಆಗಿದೆ. ಯಾಕೆಂದರೆ, ಟೀವಿ ಅಥವಾ ಸಿನಿಮಾ ಪರದೆಯಲ್ಲಿ ವಾಸ್ತವದಲ್ಲಿ ಕಾಣುವುದಕ್ಕಿಂತ ಹೆಚ್ಚು ಚೆನ್ನಾಗಿ ಕಾಣಿಸುತ್ತದೆ. ನಿಜದಲ್ಲಿ ನಮ್ಮ ಕಣ್ಣುಗಳಿಂದಲೇ ನೋಡುತ್ತೇವೆ. ಸಿನಿಮಾ ಮತ್ತು ಟೀವಿ ಪರದೆಯ ಮೇಲೆ ಕೆಮರಾ ತೋರಿಸಿದ್ದನ್ನು, ಕೆಮರಾ ನೋಡಿದ ರೀತಿಯಲ್ಲಿ ನೋಡುತ್ತೇವೆ. ನಿಜವಾಗಿ ಅದು ನಮ್ಮ ನೋಟವೇ ಅಲ್ಲ! ಅಷ್ಟರಿಂದ ನಿಸರ್ಗದ ಮೇಲೆ ಪ್ರೀತಿ ಉಂಟಾಗಲಿಕ್ಕಿಲ್ಲ. ಆಕರ್ಷಣೆ ಉಂಟಾಗಬಹುದೇನೊ. ಆದರೆ ಕೇವಲ ಆಕರ್ಷಣೆ ಪ್ರೀತಿ ಅಲ್ಲವಲ್ಲ?   

Read More
  • 1
  • 2

ಜನಮತ

ಕೆಂಡಸಂಪಿಗೆಯ ಹೊಸ ನೋಟ, ಬಣ್ಣ ಮತ್ತು ವಿನ್ಯಾಸ.

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

kendasampige

ಜಗತ್ತಿನೆಲ್ಲೆಡೆ ಹಬ್ಬಿರುವ ಕನ್ನಡದ ಈ ಬೆಡಗು ಪ್ರತಿ ದಿನವೂ ಅರಳುತ್ತಾ, ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ, ಸಾಹಿತ್ಯ, ಸಿನೆಮಾ, ಜಾನಪದ, ರಾಜಕೀಯ – ಹೀಗೆ ಕನ್ನಡ ನಾಡಿನ ಇತಿಹಾಸವನ್ನೂ ಹಾಗೂ ದಿನ ನಿತ್ಯದ ಉಸಿರನ್ನೂ ನಿಮ್ಮ ಮುಂದೆ ಸೂಸುತ್ತಿದೆ.

ಭಾಷೆ, ಸಂಸ್ಕೃತಿ ಇತ್ಯಾದಿಗಳ ಹೆಸರಿನಲ್ಲಿ ಭಾಷಾಂಧರೂ, ಧರ್ಮಾಂಧರೂ ಆಗಿಬಿಡುವ ಈ ಅಪಾಯದ ಹೊತ್ತಲ್ಲಿ ಕನ್ನಡ ನಾಡಿನ ನಿಜದ ಗುಣವನ್ನು, ಅದರ ಭಾಷಾ ವೈವಿಧ್ಯಗಳನ್ನು, ಪ್ರೀತಿ ಸಹನೆಗಳನ್ನು, ಜನ ಜೀವನದ ವೈವಿಧ್ಯಗಳನ್ನು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಜಗತ್ತಿನೆಲ್ಲೆಡೆಯ ಮಾನವ ಜೀವಿತದ ಅಪಾರ ಸಾಧ್ಯತೆಗಳನ್ನು ಕೆಂಡಸಂಪಿಗೆ ಪ್ರತಿದಿನವೂ ತನ್ನ ಬರಹಗಳ ಮೂಲಕ ಕನ್ನಡ ಓದುಗ ಲೋಕಕ್ಕೆ ಅರುಹುತ್ತಿದೆ.

ಅಂತರ್ಜಾಲವೆಂಬ ಅರಿವಿನ ಸ್ಫೋಟದ ಆಕಾಶದಲ್ಲಿ ಲೇಖಕರು, ಓದುಗರು, ಸಂಪಾದಕರು, ವರದಿಗಾರರು ಎಂಬ ಅಂತರಗಳೇನೂ ಇಲ್ಲ. ಬರೆಯುವ ಒಂದು ಕ್ರಿಯೆಯಷ್ಟೇ ದೊಡ್ಡದು ಓದುವುದು. ಅದರಷ್ಟೇ ದೊಡ್ಡದು ಚಿತ್ರಗಳು.ಇವೆಲ್ಲಕ್ಕಿಂತ ದೊಡ್ಡದು ಇವೆಲ್ಲದರ ನಡುವೆ ನಡೆಯುವ ಪ್ರತಿಕ್ರಿಯೆಗಳು ಹಾಗೂ ಸಂವಾದ. ಕೆಂಡಸಂಪಿಗೆಯ ಬೆಳವಣಿಗೆಗೆ ಬರವಣಿಗೆಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಓದುಗರ ಪ್ರತಿಕ್ರಿಯೆಗಳು ಎಂಬುದು ಕೆಂಡಸಂಪಿಗೆಯ ನಂಬಿಕೆ.

ಓದುಗರ ನಿಮ್ಮ ಇಷ್ಟಗಳನ್ನು ಮರೆತು ಕೆಂಡಸಂಪಿಗೆ ಮುಂದೆ ಹೋಗುವುದಿಲ್ಲ. ಆದರೆ ಹಾಗೆ ಹೋಗುವಾಗ ಅದರ ದಾರಿಯನ್ನೂ ಮರೆಯುವುದಿಲ್ಲ. ಓದುಗರ ಇಷ್ಟಗಳನ್ನು ಗೌರವಿಸುವ ಜೊತೆ ಜೊತೆಯಲ್ಲೇ ನಮ್ಮ ಉದ್ದೇಶಗಳನ್ನೂ ಮರೆಯದ ಹಾಗೆ ಮುಂದೆ ಹೋಗುತ್ತೇವೆ. ಕೆಂಡಸಂಪಿಗೆಯ ಉದ್ದೇಶ ಕನ್ನಡದ ಜೀವಂತ ಸಂಸ್ಕೃತಿಯನ್ನು ಅದರ ಎಲ್ಲ ಪರಿಮಳಗಳ ಜೊತೆಗೆ ಓದುಗರ ಮುಂದೆ ತೆರೆದಿಡುವುದು.

kendasampige

kendasampige4 hours ago

ಲೋಕೇಶ್ ಮೊಸಳೆ ತೆಗೆದ ದಿನದ ಚಿತ್ರ Lokesh Mosale
https://tinyurl.com/yc3fxd57

kendasampige

kendasampige4 hours ago

ಮಹಾನಿರ್ಣಯ: ಎಚ್.ಎಸ್.ವೆಂಕಟೇಶಮೂರ್ತಿ ಬರೆದ ದಿನದ ಕವಿತೆ
https://tinyurl.com/y8jylr92

kendasampige

kendasampige5 hours ago

ಎತ್ತರದ ಹುಡುಗಿಯ ಒತ್ತಡಗಳು:ಸುಷ್ಮಾ ಕಟ್ಟಾಯ ಬರಹ Kattaya Belli Sushma
https://tinyurl.com/y88bhq6b

ನಮ್ಮ ಟ್ವಿಟ್ಟರ್

4 hours ago
ಲೋಕೇಶ್ ಮೊಸಳೆ ತೆಗೆದ ದಿನದ ಚಿತ್ರ Lokesh Mosale
https://t.co/Avjefss32f https://t.co/wLGvTTYp0U

4 hours ago
ಮಹಾನಿರ್ಣಯ: ಎಚ್.ಎಸ್.ವೆಂಕಟೇಶಮೂರ್ತಿ ಬರೆದ ದಿನದ ಕವಿತೆ
https://t.co/rUekZs0fsX https://t.co/QjbXZhAL0j

5 hours ago
ಎತ್ತರದ ಹುಡುಗಿಯ ಒತ್ತಡಗಳು:ಸುಷ್ಮಾ ಕಟ್ಟಾಯ ಬರಹ
https://t.co/eFx5erBE75 https://t.co/F6rw8Y68KO

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ವಾರ್ತಾಪತ್ರಕ್ಕಾಗಿ