Advertisement
ಗುರುಪ್ರಸಾದ್‌ ಕುರ್ತಕೋಟಿ

ಗುರುಪ್ರಸಾದ್‌ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್‌ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. "ಬೆಳೆಸಿರಿ" ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.  "ಕೇಶಕ್ಷಾಮ" (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.

ನೂರುಲ್ಲಾ ತ್ಯಾಮಗೊಂಡ್ಲು ಬರೆದ ಈ ದಿನದ ಕವಿತೆ

“ಆ ದೇವಸ್ಥಾನ
ಈ ಮಸೀದಿಯ ಹೊರಗೆ
ಅಸ್ಪೃಶ್ಯತೆಯ ಸೋಂಕಲಿ
ಕಪ್ಪಗೆ ಕರಗಿ ಹೋಗುತ್ತಿರುವ ಕೈಗಳ
ಬೆವರ ಕಮಟು ಕವಿತೆಯಲ್ಲವೇ”- ನೂರುಲ್ಲಾ ತ್ಯಾಮಗೊಂಡ್ಲು ಬರೆದ ಈ ದಿನದ ಕವಿತೆ

Read More

ವಿಪಿನ್‌ ಬಾಳಿಗಾ ತೆಗೆದ ಈ ದಿನದ ಚಿತ್ರ

ಈ ದಿನದ ಚಿತ್ರ ತೆಗೆದವರು ವಿಪಿನ್ ಬಾಳಿಗಾ. ನ್ಯಾಚುರಲಿಸ್ಟ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ವಿಪಿನ್ ಅವರಿಗೆ ಪರಿಸರ ಸಂರಕ್ಷಣೆ ಇಷ್ಟದ ವಿಷಯ. ಉಭಯಚರ ಪ್ರಾಣಿಗಳು ಹಾಗೂ ಕೀಟಗಳ ಛಾಯಾಗ್ರಹಣದಲ್ಲಿ ಆಸಕ್ತಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸ. ರಘುನಾಥ ಬರೆದ ಕತೆ

ಹಿಂದೆ ಅವನು ಜಬರದಸ್ತಿಯಲ್ಲ ಇಸಿದುಕೊಂಡಿದ್ದ ಇನ್ನೂರು ರೂಪಾಯಿಗಳನ್ನು ಜ್ಞಾಪಿಸಿ, ಈಗ ಬಂದಿರುವುದು ಎಪ್ಪತ್ತೈದೆಂದು ಹೇಳಿ, ಇದು ಜಾತ ಒಂದುನೂರ ಇಪ್ಪತ್ತೈದು ನಿನ್ನಿಂದ ಬರಬೇಕೆಂದು ಕ್ಲೇಮು ಮಾಡಿದೆ. ಕೊಡುವನೇನೊ ಎಂಬ ದೂರದ ನಿರೀಕ್ಷೆಯಲ್ಲಿ. ಆದರೆ ಅವನು ಹೂಡಿದ ತರ್ಕವೆ ಆ ನಿರೀಕ್ಷೆಗೆ ಮಣ್ಣು ಹಾಕಿತು. ‘ಕ್ಯಾಸ್ಟು ಸರ್ಟಿಪೇಟುಕೇ ಇನ್ನೂರಾಗದೆ. ಅದನ್ಯಾರು ಕೊಡೋರು’ ಅಂದ.
ʼನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಸ. ರಘುನಾಥ ಬರೆದ ಕತೆ

Read More

ಚಿತ್ರಾಕ್ಷರ: ಕೆ ವಿ ಸುಬ್ರಮಣ್ಯಂ ಕಲೆ ಮತ್ತು ಬರಹಗಳ ಬಿಂಬ

ಯಾವುದೇ ಒಬ್ಬ ಕಲಾವಿದ ಕಲಾಕೃತಿಗಳನ್ನು ತನ್ನ ಸ್ವಂತ ಅಭಿರುಚಿಯಂತೆ ಮಾಡುವುದನ್ನು ಕಲಿಯುವ ಮೊದಲು ನಕಲು ಮಾಡುವುದರಿಂದ ಪ್ರಾರಂಭಿಸುವಂತೆ ಇವರು ಕೂಡ ಮೊದಲು ನಕಲು ಮಾಡಿಯೇ ಪ್ರಾರಂಭಿಸಿದ್ದು. ನೋಡಿದ್ದನ್ನು ಹಾಗೆ ಚಿತ್ರಿಸಲು ಪ್ರಯತ್ನಿಸುವುದು, ಚಂದಮಾಮ ಪತ್ರಿಕೆಯ ಚಿತ್ರಗಳನ್ನು ಚಿತ್ರಿಸುವುದು, ಪತ್ರಿಕೆಗಳಲ್ಲಿ ಬರುವ ಗಾಂಧಿ, ಶ್ರವಣಬೆಳಗೊಳದ ಬಾಹುಬಲಿ ಮೊದಲಾದ ಚಿತ್ರಗಳನ್ನು ನೋಡಿ ನಕಲು ಮಾಡಿ ಚಿತ್ರಿಸುವುದರ ಮೂಲಕ ನಡೆದಬಂದರು. ಕೆ. ವಿ. ಸುಬ್ರಹ್ಮಣ್ಯಂರವರಿಗೆ ಈ ಆಸಕ್ತಿ 7-8ನೇ ತರಗತಿಗಳಲ್ಲಿ ಶುರುವಾಗಿತ್ತು.
ಕಲಾ ವಿಮರ್ಶಕ ಕೆ.ವಿ. ಸುಬ್ರಮಣ್ಯಂ ಅವರ ಕುರಿತು ಹರಿಶ್ರೀ ವೈ.ಜೆ. ಬರೆದ “ಚಿತ್ರಾಕ್ಷರ” ಕೃತಿಯ ಕೆಲವು ಪುಟಗಳು ನಿಮ್ಮ ಓದಿಗ

Read More

ನೀರಿಗೊಡ್ಡಿದ ಗಾಳಿ-ಬೆಳಕು: ಆಲೂರು ದೊಡ್ಡನಿಂಗಪ್ಪ ಕಾದಂಬರಿಗೆ ರಘುನಾಥ ಚ.ಹ. ಮುನ್ನುಡಿ

ಮಹಾನ್ ಬಲಶಾಲಿ ಹಾಗೂ ಅಪ್ರತಿಮ ಸುಂದರಿಯ ಪ್ರೇಮ ಊರ ಕಣ್ಣಿಗೆ ದೈವಿಕವಾಗಿ ಕಾಣಿಸುತ್ತದೆ. ವಿವಾಹಬಾಹಿರ ಸಂಬಂಧ ಊರಕಣ್ಣಿಗೆ ಸ್ವೀಕಾರಾರ್ಹ ಅಚ್ಚರಿಯಾಗಿ ಕಾಣಿಸಲಿಕ್ಕೆ, ಪ್ರೇಮಿಗಳ ವ್ಯಕ್ತಿತ್ವವಷ್ಟೇ ಕಾರಣವಲ್ಲ; ಮಲ್ಲನ ಕೇಡಿಗತನದ ಬಗ್ಗೆ ಊರಿಗಿರುವ ಅಸಹನೆಯೂ ಕಾರಣ. ಆ ಅಸಹನೆ ಅಸಹಾಯಕತೆಯಾಗಿರುವಾಗ, ತಮ್ಮ ಸಿಟ್ಟನ್ನು ಕೊಂಚವಾದರೂ ಸಮಾಧಾನಗೊಳಿಸುವ ರೂಪದಲ್ಲಿ ಪ್ರೇಮಪ್ರಕರಣ ಅವರಿಗೆ ಒದಗಿಬಂದಿದೆ. ಈ ಪ್ರೇಮಪ್ರಕರಣ ಜಾತೀಯತೆಯನ್ನು ವಿರೋಧಿಸುವ ಪ್ರತಿಭಟನೆಯ ರೂಪದಂತೆಯೂ ಕಾದಂಬರಿ ಚಿತ್ರಿಸುತ್ತದೆ.
ಆಲೂರು ದೊಡ್ಡನಿಂಗಪ್ಪ ಕಾದಂಬರಿ “ಚಂದ್ರನ ಚೂರು” ಗೆ ರಘುನಾಥ ಚ.ಹ. ಮುನ್ನುಡಿ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ