Advertisement

ಪ್ಯಾಪಿಲಾನ್

ಪ್ಯಾಪಿಲಾನ್

`ಪ್ಯಾಪಿಲಾನ್' ಎನ್ನುವುದು ಆಫ್ರಿಕಾ ಖಂಡದ ಆಗ್ನೇಯ ಕರಾವಳಿ ಮಡಗಾಸ್ಕರ್ ನಲ್ಲಿ ರುವ ತರುಣ ಕನ್ನಡಿಗರೊಬ್ಬರ ಕಾವ್ಯನಾಮ

ಬೀಳುವ ವಿಮಾನಗಳ ಕುರಿತು ಪ್ಯಾಪಿಲಾನ್

ವಿಮಾನವೆಂಬುದು ಕನಸೆಂಬುದನ್ನೂ, ಅದು ಯಾವ ದಿಕ್ಕಿಗೆ ಮೂತಿ ತಿರುಗಿಸಿ ನಿಂತಿದೆಯೋ ಆ ದೇಶ, ಆ ವಿಮಾನದಲ್ಲಿ ಕೂತವರೆಲ್ಲರ ಅಂತಿಮ ಪ್ರಸ್ಥಾನವೆನ್ನುವುದನ್ನೂ, ಮತ್ತು ವಿಮಾನವೆನ್ನುವುದು ಅಂತಿಮವಾಗಿ ಶ್ರೀಮಂತರ, ಶ್ರೀಮಂತಿಕೆ ಹುಡುಕಿಕೊಂಡು ಹೊರಟವರ ವಾಹನವೆಂಬುದನ್ನೂ- ನಾನು ತಿರಸ್ಕರಿಸುತ್ತೇನೆ. ನಾನು ದೇಶ ಬಿಡುವಾಗ ಹಾಕಿಕೊಂಡಿದ್ದ ಕೋಟು ಹೆಚ್ಚೂಕಡಿಮೆ ಕದ್ದಿದ್ದಾಗಿತ್ತು. ಎರಡು ವರುಷಗಳ ಹಿಂದೆ, ನಾನೂ ಮತ್ತು ನನ್ನ ಗೆಳೆಯನೂ- ಕನ್ನಡದ ಕತೆಗಳಲ್ಲಿ ಟಿ.ವಿ ಎಷ್ಟರಮಟ್ಟಿಗೆ ಬರುತ್ತದೆ ಎಂದು ಮಾತನಾಡಿದ್ದೆವು. ಇವತ್ತಿನ ದಿನಗಳಲ್ಲಿ ನಮ್ಮ ಬದುಕಿನ ಬೆಣ್ಣೆಗಳಾದ ಕತೆಗಳಲ್ಲಿ ವಿಮಾನಗಳು ಸರಳವಾಗಿ ಬಂದುಹೋಗುತ್ತವೆ (ಶಶಿಕಲಾ ಚಂದ್ರಶೇಖರ್ ಕತೆ `ಕೊಟ್ಟ ಹೆಣ್ಣು’; ಕೃಪಾಕರ್-ಸೇನಾನಿ ಕೆಂಸಂನಲ್ಲಿ ಬರೆದ ನೆನಪುಗಳು).

Read More

ನೆಟ್ಟಲ್ಲಿ ಕಮೆಂಟು ಎರಡು ಮಂಡೆಯ ಹಾವು ಕಾಣೋ

ವಿಷೇಶಣ, ಕ್ರಿಯಾ, ಕರ್ತೃ ಪದಗಳನ್ನು ಜೋಡಿಸುವ ಕ್ರಮದಲ್ಲಿಯೇ ಬದುಕನ್ನು ಜೋಡಿಸಬಲ್ಲ ಸಾಹಿತ್ಯ, ಕಾವ್ಯಗಳ “ಸ್ಟಕ್ಚರ್”ಗಳು- ಯಾರು ಬೇಕಾದರೂ ಮಾಡಬಲ್ಲ, ಹಣಬರದ ದರಿದ್ರವಾಗಿವೆ. ಹಾಗಾಗಿ- ನಮಗೆಲ್ಲ ಸಾಹಿತ್ಯ “ಅರ್ಥ”ವಾಗಿಬಿಡಬೇಕು. ಏನಿದೆ ಅದರಲ್ಲಿ? ಪದಗಳ ಹೊರತು. ಐವತ್ತೈದು ವರುಷಗಳಿಂದ ಸಾಹಿತ್ಯವನ್ನು ಬದುಕೆಂಬಂತೆ ಅಭ್ಯಸಿಸಿದ ಅನಂತಮೂರ್ತಿ- ಇವತ್ತು ಬಿಡುವಿನಲ್ಲಿ ಯಂಡಮೂರಿಯ ಯಾವುದೋ ಎರಡು ಪುಸ್ತಕ ಓದಿಕೊಂಡ ನಮಗೆ ಅರ್ಥವಾಗಿಬಿಡಬೇಕು. ಇದರ ಮಧ್ಯ ನನಗೆ ಇನ್ನೊಂದು ವಿಷಯ ಅನ್ನಿಸುತ್ತಿದೆ. ಕೆಂಡಸಂಪಿಗೆಯಲ್ಲಿ ತೋಳ್ಪಾಡಿಯವರು ಭಾಗವತ ಬಗೆಯುತ್ತಾರೆ (ನಿಜಕ್ಕೂ ಇದು ಚೆನ್ನಾಗಿದೆ). ಯಾಕೆ, ಯಾರೊಬ್ಬರಿಂದಲೂ “ಇದು ನನಗೆ ಅರ್ಥವಾಗುತ್ತಿಲ್ಲ” ಎಂಬ ಪ್ರತಿಕ್ರಿಯೆ ಬರುತ್ತಿಲ್ಲ? ದೇವರಾಣೆ ಹೇಳುತ್ತೇನೆ: ಬ್ರಾಹ್ಮಣನಾದ ನನಗೇ ಇದು ಅಲ್ಲಲ್ಲಿ ಮಿಸ್ ಹೊಡೆಯುತ್ತಿದೆ.

Read More

ಕನ್ನಡಕ್ಕೆ ಪ್ಯಾಪಿಲಾನ್ ತಂದಿರುವ ಒಂದು ಅಪೂರ್ವ ಫ್ರೆಂಚ್ ಹಾಡು

ಶತಮಾನದ ಪ್ರೇಮಗೀತೆ ಎಂದು ಕರೆಸಿಕೊಳ್ಳುವ ಇದನ್ನು ಆತ ಇನ್ನೊಬ್ಬ `ಫ್ರೆಂಚ್ ಗೀತೆ’ಗಳ ಅನನ್ಯ ಹಾಡುಗಾರ್ತಿ ಜ್ಯೂಲಿಯೆಟ್ ಗ್ರೆಕೋ(Juliette Gréco)ಳಿಗಾಗಿ ಬರೆದ ಎಂದೂ ಹೇಳುತ್ತಾರೆ.

Read More

ಜನಮತ

ಕೆಂಡಸಂಪಿಗೆಯ ಹೊಸ ನೋಟ, ಬಣ್ಣ ಮತ್ತು ವಿನ್ಯಾಸ.

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

kendasampige

ಜಗತ್ತಿನೆಲ್ಲೆಡೆ ಹಬ್ಬಿರುವ ಕನ್ನಡದ ಈ ಬೆಡಗು ಪ್ರತಿ ದಿನವೂ ಅರಳುತ್ತಾ, ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ, ಸಾಹಿತ್ಯ, ಸಿನೆಮಾ, ಜಾನಪದ, ರಾಜಕೀಯ – ಹೀಗೆ ಕನ್ನಡ ನಾಡಿನ ಇತಿಹಾಸವನ್ನೂ ಹಾಗೂ ದಿನ ನಿತ್ಯದ ಉಸಿರನ್ನೂ ನಿಮ್ಮ ಮುಂದೆ ಸೂಸುತ್ತಿದೆ.

ಭಾಷೆ, ಸಂಸ್ಕೃತಿ ಇತ್ಯಾದಿಗಳ ಹೆಸರಿನಲ್ಲಿ ಭಾಷಾಂಧರೂ, ಧರ್ಮಾಂಧರೂ ಆಗಿಬಿಡುವ ಈ ಅಪಾಯದ ಹೊತ್ತಲ್ಲಿ ಕನ್ನಡ ನಾಡಿನ ನಿಜದ ಗುಣವನ್ನು, ಅದರ ಭಾಷಾ ವೈವಿಧ್ಯಗಳನ್ನು, ಪ್ರೀತಿ ಸಹನೆಗಳನ್ನು, ಜನ ಜೀವನದ ವೈವಿಧ್ಯಗಳನ್ನು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಜಗತ್ತಿನೆಲ್ಲೆಡೆಯ ಮಾನವ ಜೀವಿತದ ಅಪಾರ ಸಾಧ್ಯತೆಗಳನ್ನು ಕೆಂಡಸಂಪಿಗೆ ಪ್ರತಿದಿನವೂ ತನ್ನ ಬರಹಗಳ ಮೂಲಕ ಕನ್ನಡ ಓದುಗ ಲೋಕಕ್ಕೆ ಅರುಹುತ್ತಿದೆ.

ಅಂತರ್ಜಾಲವೆಂಬ ಅರಿವಿನ ಸ್ಫೋಟದ ಆಕಾಶದಲ್ಲಿ ಲೇಖಕರು, ಓದುಗರು, ಸಂಪಾದಕರು, ವರದಿಗಾರರು ಎಂಬ ಅಂತರಗಳೇನೂ ಇಲ್ಲ. ಬರೆಯುವ ಒಂದು ಕ್ರಿಯೆಯಷ್ಟೇ ದೊಡ್ಡದು ಓದುವುದು. ಅದರಷ್ಟೇ ದೊಡ್ಡದು ಚಿತ್ರಗಳು.ಇವೆಲ್ಲಕ್ಕಿಂತ ದೊಡ್ಡದು ಇವೆಲ್ಲದರ ನಡುವೆ ನಡೆಯುವ ಪ್ರತಿಕ್ರಿಯೆಗಳು ಹಾಗೂ ಸಂವಾದ. ಕೆಂಡಸಂಪಿಗೆಯ ಬೆಳವಣಿಗೆಗೆ ಬರವಣಿಗೆಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಓದುಗರ ಪ್ರತಿಕ್ರಿಯೆಗಳು ಎಂಬುದು ಕೆಂಡಸಂಪಿಗೆಯ ನಂಬಿಕೆ.

ಓದುಗರ ನಿಮ್ಮ ಇಷ್ಟಗಳನ್ನು ಮರೆತು ಕೆಂಡಸಂಪಿಗೆ ಮುಂದೆ ಹೋಗುವುದಿಲ್ಲ. ಆದರೆ ಹಾಗೆ ಹೋಗುವಾಗ ಅದರ ದಾರಿಯನ್ನೂ ಮರೆಯುವುದಿಲ್ಲ. ಓದುಗರ ಇಷ್ಟಗಳನ್ನು ಗೌರವಿಸುವ ಜೊತೆ ಜೊತೆಯಲ್ಲೇ ನಮ್ಮ ಉದ್ದೇಶಗಳನ್ನೂ ಮರೆಯದ ಹಾಗೆ ಮುಂದೆ ಹೋಗುತ್ತೇವೆ. ಕೆಂಡಸಂಪಿಗೆಯ ಉದ್ದೇಶ ಕನ್ನಡದ ಜೀವಂತ ಸಂಸ್ಕೃತಿಯನ್ನು ಅದರ ಎಲ್ಲ ಪರಿಮಳಗಳ ಜೊತೆಗೆ ಓದುಗರ ಮುಂದೆ ತೆರೆದಿಡುವುದು.

kendasampige

kendasampige4 hours ago

ಲೋಕೇಶ್ ಮೊಸಳೆ ತೆಗೆದ ದಿನದ ಚಿತ್ರ Lokesh Mosale
https://tinyurl.com/yc3fxd57

kendasampige

kendasampige4 hours ago

ಮಹಾನಿರ್ಣಯ: ಎಚ್.ಎಸ್.ವೆಂಕಟೇಶಮೂರ್ತಿ ಬರೆದ ದಿನದ ಕವಿತೆ
https://tinyurl.com/y8jylr92

kendasampige

kendasampige4 hours ago

ಎತ್ತರದ ಹುಡುಗಿಯ ಒತ್ತಡಗಳು:ಸುಷ್ಮಾ ಕಟ್ಟಾಯ ಬರಹ Kattaya Belli Sushma
https://tinyurl.com/y88bhq6b

ನಮ್ಮ ಟ್ವಿಟ್ಟರ್

4 hours ago
ಲೋಕೇಶ್ ಮೊಸಳೆ ತೆಗೆದ ದಿನದ ಚಿತ್ರ Lokesh Mosale
https://t.co/Avjefss32f https://t.co/wLGvTTYp0U

4 hours ago
ಮಹಾನಿರ್ಣಯ: ಎಚ್.ಎಸ್.ವೆಂಕಟೇಶಮೂರ್ತಿ ಬರೆದ ದಿನದ ಕವಿತೆ
https://t.co/rUekZs0fsX https://t.co/QjbXZhAL0j

4 hours ago
ಎತ್ತರದ ಹುಡುಗಿಯ ಒತ್ತಡಗಳು:ಸುಷ್ಮಾ ಕಟ್ಟಾಯ ಬರಹ
https://t.co/eFx5erBE75 https://t.co/F6rw8Y68KO

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ವಾರ್ತಾಪತ್ರಕ್ಕಾಗಿ