Advertisement

ವೈಶಾಲಿ ಹೆಗಡೆ

ವೈಶಾಲಿ ಹೆಗಡೆ

ಊರು, ಪಿಯುಸಿವರೆಗಿನ ಓದು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ. ಈಗ ಅಮೇರಿಕಾದ ಪ್ರತಿಷ್ಠಿತ ಟೆಲಿಕಾಂ ಕಂಪನಿಯೊಂದರಲ್ಲಿ ಕೆಲಸ. ಇರುವುದು ಬಾಸ್ಟನ್ ನ ಉತ್ತರದ ಊರೊಂದರಲ್ಲಿ. 'ಒದ್ದೆ ಹಿಮ.. ಉಪ್ಪುಗಾಳಿ' ಇವರ ಪ್ರಬಂಧ ಸಂಕಲನ.

ನೀನೂ ಮಂದೀನ ನಾನೂ ಮಂದೀನ.. : ವೈಶಾಲಿ ಬರೆದ ವಾರದ ಕಥೆ

ಅಮೇರಿಕಾದಿಂದ ಊರಿಗೆ ಬಂದಿದ್ದ ಸಮರ್ಥ ಉಣಕಲ್ ಕೆರೆಯ ದಡದಲ್ಲಿ ಗುಲಾಬೋಳನ್ನು ಗಟ್ಟಿಯಾಗಿ ತಬ್ಬಿಕೊಂಡು ತನ್ನನ್ನೇ ತಾನು ಕಂಡುಕೊಂಡ. ವೈಶಾಲಿ ಬರೆದ ಕಥೆ

Read More

ವೈಶಾಲಿ ಹೆಗಡೆ ಬರೆದ ನಾಲ್ಕು ಚುಟುಕುಗಳು

ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.

Read More

ವೈಶಾಲಿ ಕನ್ನಡದಲ್ಲಿ ರಿಲ್ಕ್ ಮತ್ತು ಝೆನ್

ಸುತ್ತಲ ಗದ್ದಲದ ನಡುವೆ ಒಂಚೂರು ನನ್ನದೇ ಜಾಗ ಬೇಕೆಂದು ಅನಿಸಿದಾಗ, ಸುಮ್ಮಸುಮ್ಮನೆ ಒಂಟಿಯಾಗಿ ಕೂತುಬಿಡಬೇಕು ಎಂದೆನಿಸಿದಾಗ ನೆರವಿಗೆ ಬರುವುದು ಕವಿತೆಗಳು.

Read More

ಹ್ಯಾಲೋವೀನ್ ಎಂಬ ಹೆದರಿಕೆಯ ಖುಷಿಗಳು:ವೈಶಾಲಿ ಬರಹ

ಹೈಟೆಕ್ ಆಗುತ್ತಿರುವ ಹಬ್ಬಗಳಲ್ಲಿ ಹ್ಯಾಲೋವೀನ್ ಕೂಡ ಹೊರತಲ್ಲ. ಭಯಾನಕ ಶಬ್ದ ಹೊರಡಿಸುವ ಚಿಕ್ಕ ಚಿಕ್ಕ ಸಾಧನಗಳು, ಮನೆಯೆಲ್ಲ ಹೊಗೆ ಹಾಕಿದಂತೆ ತೋರುವ ಲೈಟಿಂಗ್, ಲೇಸರ್ನಿಂದ ಭಯಾನಕ ಮುಖಗಳನ್ನು ಪರದೆಯ ಮೇಲೆ, ಕಿಟಕಿಯ ಮೇಲೆ ಮೂಡಿಸುವ ಸಾಧನಗಳು. ಹಾರುವ ಆತ್ಮಗಳು, ಕುದಿಯುವ ರಕ್ತದ ಕೊಳಗಳು, ತಟ್ಟೆತುಂಬ ಹರಿದಾಡುವ ಜಿರಳೆ, ಜೇಡ, ಹಾವುಗಳು. ಏನೇನೋ ಆಟಿಗೆ ಆಯುಧಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಪುರಾಣ ಕತೆಗಳಾಗಲೀ, ಪುರಾತನ ಇತಿಹಾಸವಾಗಲೀ ಇಲ್ಲದ ಈ ದೇಶದಲ್ಲಿ, ವೇಷಭೂಷಣಕ್ಕೆ ಸ್ಫೂರ್ತಿ ಸಿನಿಮಾಗಳು, ಟೀವಿ ಶೋಗಳು. ಆ ವರ್ಷ ಬಂದ ಹಾರರ್ ಸಿನಿಮಾದ ಪಾತ್ರಗಳೆಲ್ಲವೂ ಗ್ಯಾರಂಟಿಯಾಗಿ ಆ ವರ್ಷ ಹಾಲೊವೀನ್ ಅಂಗಡಿಯಲ್ಲಿರುತ್ತವೆ ಎಲ್ಲ ಹಳೆ ಸಿನಿಮಾದ ಜೊತೆಗಾರರೊಂದಿಗೆ.

Read More

ಎಳೆಬಿಸಿಲ ಧಾವಂತ ಹಳದಿ ಈ ಫಾಲ್:ವೈಶಾಲಿ ಬರಹ

ಇದ್ಯಾಕೆ ಇಷ್ಟು ಬೇಗ ಹ್ಯಾಲೋವೀನ್ ಅಲಂಕಾರ ಎಂದುಕೊಳ್ಳುತ್ತ ಕ್ಯಾಲೆಂಡರ್ ನೋಡಿದರೆ ಆಗಲೇ ಅಕ್ಟೋಬರ್ ಮೆಟ್ಟಿ ಒಂದು ವಾರವಾಗುತ್ತಿದೆ. ಇನ್ನೇನು ದಶಮಿ, ದೀಪಾವಳಿ ಹಾಗೆ ಕ್ರಿಸ್ ಮಸ್ ರಜೆ ಆಗಿಹೋಯಿತು ಇಡೀ ವರ್ಷ. ನಾನೆಲ್ಲಿ ಕಳೆದು ಹೋಗಿದ್ದೆ ಇಷ್ಟು ದಿನ? ಕಳೆದೆಲ್ಲಿ ಹೋಗಿದ್ದೆ, ಇಲ್ಲೇ ಇದ್ದೆ. ಚಳಿಗಾಲದ ಮಂಜು ಕರಗಿ ಚೆರ್ರಿ ಹೂಗಳನ್ನು ನೋಡಿದ್ದೆನಲ್ಲವೆ? ವಲಸೆ ಹಕ್ಕಿಗಳೆಲ್ಲ ಹಿಂತಿರುಗಿ ಹಿತ್ತಲಲ್ಲಿ ರಾಬಿನ್ ಹಾಡಿದ್ದು ಕೂಡ ಕೇಳಿದ್ದೆನಲ್ಲವೇ. ಟ್ಯೂಲಿಪ್ ಳು ಉದುರಿ, ಮೇ ಫ್ಲವರ್ ಗಳು ಒಣಗಿ ಲಾನ್ ಹಸಿರಾದದ್ದೂ ಕಂಡಿತ್ತಲ್ಲವೇ. ಉರಿಬಿಸಿಲಲ್ಲಿ ಸ್ಪ್ರಿಂಕ್ಲರ್ ಹಚ್ಚಿ ಕುಣಿದ ಮಕ್ಕಳು ದಿನವಿಡೀ ಪಾಪ್ಸಿಕಲ್ ಮೆಂದದ್ದೂ ಮೊನ್ನೆ ಮೊನ್ನೆಯಂತಿದೆ ತಾನೇ. ಕಳೆದ ತಿಂಗಳಷ್ಟೇ ಎಫಿನಟ್ ಎನ್ನುತ್ತಿದ್ದ ಮಗ ಈಗ ಸರಿಯಾಗಿ ಎಲಿಫಂಟ್ ಎನ್ನುತ್ತಿದ್ದಾನೆ.  ಅವನ ಮುಂಚಿನ ಉಚ್ಚಾರವೇ ಚೆನ್ನಿತ್ತು ಅನಿಸುತ್ತಿದೆ. ಹಿಂದೊಮ್ಮೆ ಮೊಟೆಟೊ ಎನ್ನುತ್ತಿದ್ದ ಮಗಳೂ ಈಗ ಟೊಮೇಟೊ ಎಂದು ಬರೆಯುವಷ್ಟಾಗಿಬಿಟ್ಟಿದ್ದಾಳೆ.

Read More
  • 1
  • 2

ಜನಮತ

ಕೆಂಡಸಂಪಿಗೆಯ ಹೊಸ ನೋಟ, ಬಣ್ಣ ಮತ್ತು ವಿನ್ಯಾಸ.

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

kendasampige

ಜಗತ್ತಿನೆಲ್ಲೆಡೆ ಹಬ್ಬಿರುವ ಕನ್ನಡದ ಈ ಬೆಡಗು ಪ್ರತಿ ದಿನವೂ ಅರಳುತ್ತಾ, ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ, ಸಾಹಿತ್ಯ, ಸಿನೆಮಾ, ಜಾನಪದ, ರಾಜಕೀಯ – ಹೀಗೆ ಕನ್ನಡ ನಾಡಿನ ಇತಿಹಾಸವನ್ನೂ ಹಾಗೂ ದಿನ ನಿತ್ಯದ ಉಸಿರನ್ನೂ ನಿಮ್ಮ ಮುಂದೆ ಸೂಸುತ್ತಿದೆ.

ಭಾಷೆ, ಸಂಸ್ಕೃತಿ ಇತ್ಯಾದಿಗಳ ಹೆಸರಿನಲ್ಲಿ ಭಾಷಾಂಧರೂ, ಧರ್ಮಾಂಧರೂ ಆಗಿಬಿಡುವ ಈ ಅಪಾಯದ ಹೊತ್ತಲ್ಲಿ ಕನ್ನಡ ನಾಡಿನ ನಿಜದ ಗುಣವನ್ನು, ಅದರ ಭಾಷಾ ವೈವಿಧ್ಯಗಳನ್ನು, ಪ್ರೀತಿ ಸಹನೆಗಳನ್ನು, ಜನ ಜೀವನದ ವೈವಿಧ್ಯಗಳನ್ನು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಜಗತ್ತಿನೆಲ್ಲೆಡೆಯ ಮಾನವ ಜೀವಿತದ ಅಪಾರ ಸಾಧ್ಯತೆಗಳನ್ನು ಕೆಂಡಸಂಪಿಗೆ ಪ್ರತಿದಿನವೂ ತನ್ನ ಬರಹಗಳ ಮೂಲಕ ಕನ್ನಡ ಓದುಗ ಲೋಕಕ್ಕೆ ಅರುಹುತ್ತಿದೆ.

ಅಂತರ್ಜಾಲವೆಂಬ ಅರಿವಿನ ಸ್ಫೋಟದ ಆಕಾಶದಲ್ಲಿ ಲೇಖಕರು, ಓದುಗರು, ಸಂಪಾದಕರು, ವರದಿಗಾರರು ಎಂಬ ಅಂತರಗಳೇನೂ ಇಲ್ಲ. ಬರೆಯುವ ಒಂದು ಕ್ರಿಯೆಯಷ್ಟೇ ದೊಡ್ಡದು ಓದುವುದು. ಅದರಷ್ಟೇ ದೊಡ್ಡದು ಚಿತ್ರಗಳು.ಇವೆಲ್ಲಕ್ಕಿಂತ ದೊಡ್ಡದು ಇವೆಲ್ಲದರ ನಡುವೆ ನಡೆಯುವ ಪ್ರತಿಕ್ರಿಯೆಗಳು ಹಾಗೂ ಸಂವಾದ. ಕೆಂಡಸಂಪಿಗೆಯ ಬೆಳವಣಿಗೆಗೆ ಬರವಣಿಗೆಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಓದುಗರ ಪ್ರತಿಕ್ರಿಯೆಗಳು ಎಂಬುದು ಕೆಂಡಸಂಪಿಗೆಯ ನಂಬಿಕೆ.

ಓದುಗರ ನಿಮ್ಮ ಇಷ್ಟಗಳನ್ನು ಮರೆತು ಕೆಂಡಸಂಪಿಗೆ ಮುಂದೆ ಹೋಗುವುದಿಲ್ಲ. ಆದರೆ ಹಾಗೆ ಹೋಗುವಾಗ ಅದರ ದಾರಿಯನ್ನೂ ಮರೆಯುವುದಿಲ್ಲ. ಓದುಗರ ಇಷ್ಟಗಳನ್ನು ಗೌರವಿಸುವ ಜೊತೆ ಜೊತೆಯಲ್ಲೇ ನಮ್ಮ ಉದ್ದೇಶಗಳನ್ನೂ ಮರೆಯದ ಹಾಗೆ ಮುಂದೆ ಹೋಗುತ್ತೇವೆ. ಕೆಂಡಸಂಪಿಗೆಯ ಉದ್ದೇಶ ಕನ್ನಡದ ಜೀವಂತ ಸಂಸ್ಕೃತಿಯನ್ನು ಅದರ ಎಲ್ಲ ಪರಿಮಳಗಳ ಜೊತೆಗೆ ಓದುಗರ ಮುಂದೆ ತೆರೆದಿಡುವುದು.

kendasampige

kendasampige4 hours ago

ಲೋಕೇಶ್ ಮೊಸಳೆ ತೆಗೆದ ದಿನದ ಚಿತ್ರ Lokesh Mosale
https://tinyurl.com/yc3fxd57

kendasampige

kendasampige4 hours ago

ಮಹಾನಿರ್ಣಯ: ಎಚ್.ಎಸ್.ವೆಂಕಟೇಶಮೂರ್ತಿ ಬರೆದ ದಿನದ ಕವಿತೆ
https://tinyurl.com/y8jylr92

kendasampige

kendasampige5 hours ago

ಎತ್ತರದ ಹುಡುಗಿಯ ಒತ್ತಡಗಳು:ಸುಷ್ಮಾ ಕಟ್ಟಾಯ ಬರಹ Kattaya Belli Sushma
https://tinyurl.com/y88bhq6b

ನಮ್ಮ ಟ್ವಿಟ್ಟರ್

4 hours ago
ಲೋಕೇಶ್ ಮೊಸಳೆ ತೆಗೆದ ದಿನದ ಚಿತ್ರ Lokesh Mosale
https://t.co/Avjefss32f https://t.co/wLGvTTYp0U

4 hours ago
ಮಹಾನಿರ್ಣಯ: ಎಚ್.ಎಸ್.ವೆಂಕಟೇಶಮೂರ್ತಿ ಬರೆದ ದಿನದ ಕವಿತೆ
https://t.co/rUekZs0fsX https://t.co/QjbXZhAL0j

5 hours ago
ಎತ್ತರದ ಹುಡುಗಿಯ ಒತ್ತಡಗಳು:ಸುಷ್ಮಾ ಕಟ್ಟಾಯ ಬರಹ
https://t.co/eFx5erBE75 https://t.co/F6rw8Y68KO

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ವಾರ್ತಾಪತ್ರಕ್ಕಾಗಿ