ಕನ್ನಡದಲ್ಲಿ ಬ್ಲಾಗ್ ಬರೆಯುವವರ ದೊಡ್ಡದೊಂದು ಸಮಾವೇಶ ನಿನ್ನೆ ಬೆಂಗಳೂರಿನಲ್ಲಿ ನಡೆಯಿತು. ಆಯೋಜಕರಿಗೇ ಅಚ್ಚರಿಯಾಗುವಷ್ಟು ಸಂಖ್ಯೆಯಲ್ಲಿ ಬಂದಿದ್ದ ಬ್ಲಾಗಿಗರು ಸಭಾಂಗಣವನ್ನೂ ತುಂಬಿ ಹೊರಗೂ ನಿಂತಿದ್ದರು. ಹೀಗೆ ಕೊನೆಯವರೆಗೆ ಹೊರಗೆ ನಿಂತುಕೊಂಡೇ ಇದ್ದ ಬ್ಲಾಗಿಣಿ ವರದಿಯೊಂದನ್ನು ಕಳುಹಿಸಿದ್ದಾರೆ.
ಎಲ್ಲ ಸಮಾರಂಭಗಳಂತೆ ಅಲ್ಲೂ ಒಂದು ಪ್ರಾರ್ಥನೆ, ಸ್ವಾಗತ, ಮತ್ತೆ ಅತಿಥಿಗಳ ಭಾಷಣ.. ಯಾವಾಗಲೂ ಬರೆದು ಅಭ್ಯಾಸವಿರುವ ಬ್ಲಾಗೀದಾರರು ಕಿವಿಯಾಗಿ ಕೇಳುತ್ತ ಕೂತಿದ್ದರು. ಹೀಗೆ ಬರೆಯುವ ಹುಡುಗಿ ಯಾರಿರಬಹುದು, ಸಿಟಿ ಪಾಡ್ದನ ಬರೆಯುವ ಚಂಪಕಾವತಿಯ ರಾಜಕುಮಾರ ಹೇಗಿರಬಹುದು, ಸಂಪದದ ನಾಡಿಗರು ಹೇಗೆ ಮಾತಾಡಬಹುದು, ಮೊದಲ ವೆಬ್ ಸೈಟ್ ತೆರೆದವರ ಕಥನಗಳೇನು, ರಶೀದರು ಬರೆಯುವಷ್ಟೇ ತಮಾಷಿಯಾಗಿ ನೋಡಲೂ ಇರುತ್ತಾರಾ, ಇವತ್ತು ಅವಳು ಸಿಗಬಹುದಾ, ಇವನನ್ನು ಮಾತಾಡಿಸಬಹುದಾ, ಅಂತೆಲ್ಲ ಅಂದುಕೊಂಡು, ಕೆಂಡಸಂಪಿಗೆಯಲ್ಲಿ ಬರೆದಂತೆ ಟ್ರಾಫಿಕ್ ಜಾಮನ್ನೇನೂ ಮಾಡದೆ ಸಭ್ಯವಾಗಿ, ನಾಜೂಕಾಗಿ ಬಂದು ಸೇರಿದ್ದರು ಬಸವನಗುಡಿಯಲ್ಲಿ. ಮೋಡಕಟ್ಟುತಿದ್ದ ಸಂಜೆಯಲ್ಲಿ ವರ್ಲ್ಡ್ ಕಲ್ಚರಿನ ಆವರಣದಲ್ಲಿ ನಿಂತವರ ಮೊಗದ ಮೇಲೆ, ಸುತ್ತಲಿದ್ದ ಮರಗಿಡಗಳ ಸಂದಿಯಲ್ಲಿ ತೂರಿ ಆಗಾಗ ಹೂಬಿಸಿಲು. ಓಹೋ ಇವರು ಬಂದರು, ಆಹ್ ಇವರು ಹೀಗಿದ್ದಾರಾ? ಓಹ್ ಇವರನ್ನು ನೋಡು ಎಂಬ ಅಚ್ಚರಿಯ ಮೆಚ್ಚುಗೆಯ ನೋಟ..
ಇಳಿಸಂಜೆಯ ನಾಲ್ಕೂವರೆಯ ಟೇಮಿಗೆ ಶುರುವಾದ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆಯಲ್ಲಿದ್ದ ಅತಿಥಿಗಳೆಲ್ಲ ಬಂದು ಸೇರಿದ್ದರು. ಸುಮಾರು ೮೫ಕ್ಕೂ ಹೆಚ್ಚು ಬ್ಲಾಗೀದಾರರಿದ್ದರು. ಜೊತೆಗೆ ಬಂದ ಸ್ನೇಹಿತರಿದ್ದರು. ಕಾರ್ಯಕ್ರಮ ಆಯೋಜಿಸಿದ ಪ್ರಣತಿಯ ತಂಡ ಕಿರುನಗೆಯೊಡನೆ ಬಂದವರನ್ನು ಎದುರುಗೊಂಡಿತ್ತು.
ಎಲ್ಲ ಸಮಾರಂಭಗಳ ರೀತಿನೀತಿಯಂತೆ ಇದನ್ನು ನಡೆಸಿದರೂ, ಅಚಾನಕ್ಕಾಗಿ ಹುಟ್ಟಿದ ಐಡಿಯಾ ಆದ ಈ ಸಮ್ಮಿಳನ ಒಂದು ರೀತಿಯ ಅಚ್ಚರಿಯ ವಿಭ್ರಾಂತಿಯಲ್ಲಿ ಮುಳುಗಿತ್ತು. ಬಂದವರೆಲ್ಲರಿಗೂ ಎಲ್ಲರನ್ನೂ, ತಮ್ಮ ಮೆಚ್ಚಿನ ಬ್ಲಾಗಿಗರನ್ನು ಮಾತನಾಡಿಸುವ ತವಕ. ಹೊಸದಾಗಿ ಪರಿಚಯವಾದವರನ್ನ ನೋಡುವ ಪುಳಕವಿತ್ತು. ಮಧ್ಯೆ ಹಿರಿಯ ಮತ್ತು ಪರಿಣಿತ ಅತಿಥಿಗಳ ಮಾತುಕತೆ ಸ್ವಲ್ಪ ಹೆವಿಯಾಗೇ ನಡೆಯಿತೆನ್ನಿಸುತ್ತೆ. ಅದೇನೇ ಆದರೂ ಮೊದಲ ಕನ್ನಡ ವೆಬ್ ಸೈಟ್ ತೆರೆದು ಇವತ್ತಿಗೂ ನಡೆಸಿಕೊಂಡುಬರುತ್ತಿರುವ ವಿಶ್ವಕನ್ನಡದ ಪವನಜ ಅವರ ಸ್ವಾರಸ್ಯಕರ ಅನುಭವಗಳಿಗೆ ಕಿವಿಯಾಯಿತು ಸಮೂಹ. ಸಂಪದದ ನಾಡಿಗರ ತಾಂತ್ರಿಕ ವಿವರಣೆಗಳಿಗೆ, ಅನುಭವದ ಮಾತುಗಳಿಗೆ, ಕನ್ನಡ ಬಳಕೆಯಲ್ಲಿನ ಅವಕಾಶ ಮತ್ತು ಅನನುಕೂಲಗಳ ಬಗ್ಗೆ ಚರ್ಚೆಗಿಳಿಯಿತು ಗುಂಪು, ರಶೀದರ ಕನ್ನಡದ ಸಾಮರ್ಥ್ಯದ ಬಗೆಗಿನ ಕೀಟಲೆಭರಿತ ಮಾಹಿತಿ, ಇಂಟರ್ ನೆಟ್ಟೆಂಬ ಮಾಯಾಜಾಲವನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಬಹುದಾದ ಪರಿಯ ಬಗೆಗಿನ ಮಾತುಗಳಿಗೆ ತಲೆದೂಗಿತು ಬ್ಲಾಗಿಗರ ಸಮುದಾಯ. ದಟ್ಸ್ ಕನ್ನಡದ ಶ್ಯಾಮ್ ಅವರ ವಿಟ್ಟಿ ಮಾತುಗಳಿಗೆ, ಅನುಭವದ ನೆನಕೆಗಳಿಗೆ, ಕನ್ನಡದ ಮಿತಿ-ಸಾಮರ್ಥ್ಯ, ಓದುಗರನ್ನು ಕನ್ನಡದೆಡೆಗೆ ಸೆಳೆಯುವ ‘ತಂತ್ರ’ ಜ್ಞಾನದ ವಿವರಗಳಿಗೆ ನಗೆಸೂಸುತ್ತ ಮೆಚ್ಚುಗೆ ವ್ಯಕ್ತಪಡಿಸಿತು ಕೇಳುಗರ ಸಮೂಹ.
ಕನ್ನಡ ಇಂಟರ್ ನೆಟ್ಟಿನಲ್ಲಿ ನಡೆದು ಬಂದ ದಾರಿಯ ಅವಲೋಕನ, ಕ್ರಮಿಸಬೇಕಿರುವ ದೂರ, ತಂತ್ರಜ್ಞಾನ ಬಳಕೆ, ಅನನುಕೂಲ, ಅನುಕೂಲ, ಜವಾಬ್ದಾರಿ ಮತ್ತು ಈ ಎಲ್ಲವನ್ನು ಬಳಸಿಕೊಂಡು ಕನ್ನಡದ ಸಂಸ್ಕೃತಿಯನ್ನು ಹೇಗೆ ಎಲ್ಲರಿಗೂ ತಲುಪಿಸುವುದು ಎಂಬ ಬಗೆಗಿನ ಆಸಕ್ತಿಕರ ಮಾತುಕತೆ ನಡೆಯಿತು. ಇದಲ್ಲದೆ ಸಮಾರಂಭಕ್ಕೆ ಬಂದಿದ್ದ ಬೇಳೂರು ಸುದರ್ಶನ ಮತ್ತು ಕಿ.ರಂ. ನಾಗರಾಜ್ ಇವರು ತಮ್ಮ ಅನುಭವ ವಿಶೇಷಗಳನ್ನು, ಏಕೆ ಬ್ಲಾಗಿನಿಂದ ವಿಕಾಸ ಹೊಂದಿ ಸ್ವಂತ ವೆಬ್ ಸೈಟನ್ನು ಹೊಂದಬೇಕೆಂಬುದರ ಬಗ್ಗೆ ಮತ್ತು ಸರಳ ಕನ್ನಡವನ್ನು ಬರಹದಲ್ಲೂ ಬಳಸುವ ಬಗ್ಗೆ ಮಾತನಾಡಿದರು.
ಇಷ್ಟಲ್ಲದೆ ಬಂದ ಬ್ಲಾಗುದಾರರಲ್ಲಿ ಕೆಲವರನ್ನು ಲಾಟರಿ ಎತ್ತಿ ವೇದಿಕೆಗೆ ಕರೆದು ಮಾತನಾಡಿಸಲಾಯಿತು.
ಬಂದವರಲ್ಲಿ ನೆಟ್ ಬಳಕೆ, ತಂತ್ರಜ್ಞಾನ ಬಳಕೆ ಬಗ್ಗೆ ಇದ್ದಿರಬಹುದಾದ ಕೆಲ ಸಂದೇಹಗಳನ್ನು ನಿವಾರಿಸುವ ಮಾತುಕತೆ ನಡೆಯಿತು.
ಹೀಗೆಲ್ಲ ಮಾತು ಕತೆ ಮುಗಿದು ಪ್ರಣತಿಯ ವಿಜಯಾ, ಬಂದ ಎಲ್ಲರಿಗೂ ವಂದನೆಯನ್ನರ್ಪಿಸುವಾಗ ಹೆಚ್ಚೂ ಕಡಿಮೆ ಎಂಟುಗಂಟೆ. ಸಂಜೆಯಿಂದ ಕವಿದ ಮೋಡ, ಮಾತುಕತೆ ಸಮ್ಮಿಳನದ ಕಾವಿಗೆ ಕರಗಿ ಹನಿ ಹಾಕಲು ಹವಣಿಸುತ್ತಿತ್ತು.
ಒಂದೊಳ್ಳೆಯ ಭೇಟಿಯನ್ನು ಹೀಗೆ ತಂಪುಸಂಜೆಯಲ್ಲಿ ಆಯೋಜಿಸಿದ ಪ್ರಣತಿಗೆ ಅಭಿನಂದನೆಗಳು.
[ಫೊಟೋಗಳು:ಸುಶ್ರುತ ದೊಡ್ಡೇರಿ]






March 17th, 2008 at 11:57 am
Che,I missed it,
Raju.
March 17th, 2008 at 12:12 pm
Often as a reader I think I am witnessing making of modern history in Kannada literature and read space. It is interesting there are so many blogs in Kannada. Though blog provides immense freedom to express ones view on any topic, it also breeds irresponsibility and arrogance of feeling, I can write any thing and get away with that. Since there is no fear of an editor who some time rejects writing – many often a blog writer can possibly misuse the media.
Sustenance of good blog depends on the bloger humility of accepting the freedom provided by the technology with much needed sense of accountability and responsibility. Not sure this dimension was discussed in detail.
But with Kendasampige, I am witnessing a new birth of blog based e paper – which also has an editor to control the traffic.
Regards
ashok
March 17th, 2008 at 6:20 pm
oorallidre barabahudittu….:-)
March 18th, 2008 at 8:59 am
ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲವಾದರೂ..ಅಲ್ಲಿ ಕೇಳಿದ್ದು, ಇಲ್ಲಿ ಓದಿದ್ದು ಖುಷಿಯ ಅನುಭವ ನೀಡಿತ್ತು.
March 18th, 2008 at 11:42 pm
naanu barabekende idde. nannolagina prashnegalige spasta uttara dorakisikollabahudu, kela mitrarannu nodabahudu emba nirikshe ittu. aadre mysorinalli bandhuvina maduve aasege tannirerachitu. irali, nimma blagininda ella varadi sikkide. sadyakke astusaaku. abhinandane “pranati’. blagigara samavesha munduvarisi. bye.
namaste rashid jee.
March 19th, 2008 at 8:55 am
ಅಂದಿನ ಬ್ಲಾಗಿಗರ ಮಿಲನದ ಬಗ್ಗೆ ಓದಿದೆ, ಚಿತ್ರಗಳನ್ನು ನೋಡಿದೆ. ಈ ವರದಿ ಪ್ರಕಟವಾಗಿರುವ ಎಲ್ಲ ಬ್ಲಾಗುಗಳಿಗೂ ಭೇಟಿಕೊಟ್ಟಿದ್ದಾಯಿತು. ಮನದಲ್ಲೇಕೋ ಬಹಳ ಈರ್ಷ್ಯೆ ಉಂಟಾಗುತ್ತಿದೆ. ಛೇ! ನಾನು ಅಲ್ಲಿ ಬರಲಾಗಲಿಲ್ವೇ? ಪ್ರಣತಿ ತಂಡದ ಚಿತ್ರವನ್ನೂ ನೋಡಿದೆ, ನನಗೆ ಪರಿಚಿತರಿರುವ ಮೂವರು ಮಂದಿಯನ್ನು ನೋಡಿ ಮತ್ತು ಮಿಲನಕ್ಕೆ ಬಂದಿದ್ದ ಬ್ಲಾಗಿಗರ ಅರ್ಧ ಪಾಲನ್ನು ನಾನು ಬಲ್ಲೆನೆಂದು ತಿಳಿದು, ನಾನೂ ನಿಮ್ಮೊಂದಿಗಿರಲಾಗದಿದ್ದಕ್ಕೆ ಮನದಲ್ಲಿ ಬಹಳ ಬೇಸರ ಉಂಟಾಗುತ್ತಿದೆ.
ಗುರುದೇವ ದಯಾ ಕರೊ ದೀನ ಜನೆ
March 19th, 2008 at 2:04 pm
Snehitare
Blogigara sabhege kadegaligeya avsarada kelasdindagi baralagalilla.Bandavara bhagavahisidavara varadi nodi bahala miss maadide ansutte.
Naanu obba voracious blogoduga.Hechchu kadime illi bandavara blogugalnnellaa oduttiruttene.
Nanna munde hechchu hechchu bareyuva manadaalada asege iduve naandi haadide annabahudu.
jayavagali kannada blog lokakke!!!!
March 21st, 2008 at 10:47 am
ಈ ಸಾರಿ ಬರಲಾಗದಿದ್ದ ನನ್ನಂತಹವರಿಗೋಸ್ಕರ ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚು ನಡೆಯಬೇಕು.
ಪ್ಲೀಈಈಈಈಈಈಈಸ್
April 2nd, 2008 at 2:23 pm
kend smpige stories is well
September 7th, 2008 at 1:25 pm
naanu barabekagittu,naanu miss madikonde,nimma prayatna shlaghaniaya,yella nodi santoshavaitu.nimma ee prayatnagalu yashasviyagali.
vandanegalu
s v sastry
September 11th, 2008 at 11:07 am
very good articles
September 11th, 2008 at 11:10 am
¸ÀI am a writer and want to write for kendasampige in future. I like this blog.
September 19th, 2008 at 8:49 pm
pl visit DEVARU new blog