ಮಾರ್ಚ್ ೧೦, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಚನ್ನಕೇಶವ

ಚನ್ನಕೇಶವ ಹುಟ್ಟಿದ್ದು ಮಂಡ್ಯದಲ್ಲಿ, ಓದಿದ್ದು ಮಂಡ್ಯ-ಬೆಂಗಳೂರಿನಲ್ಲಿ. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಐದು ವರ್ಷಗಳ ಕಾಲ ಚಿತ್ರಕಲೆಯ ತರಬೇತಿ ಮತ್ತು ಪದವಿ. ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಥಿಯೇಟರ್ ಡಿಪ್ಲೊಮಾ.ಅಮೆರಿಕೆಯ ವರ್ಮಾಟ್‌ನಲ್ಲಿರುವ ‘ಬ್ರೆಡ್ ಅಂಡ್ ಪಪೆಟ್ ’ ಕಂಪನಿಯಲ್ಲಿ ಎರಡು ತಿಂಗಳ ರಂಗ ತರಬೇತಿ. ಎನ್.ಎಸ್.ಡಿ.ಯ ಎರಡು...

 
ಚನ್ಬಸವ, ಬೀದರ್
ಯುವ ಪತ್ರಕರ್ತ, ಸಂಶೋಧಕ
ಚರಿತಾ
ಚಿತ್ರಕಲೆಯಲ್ಲಿ ಮೈಸೂರಿನ ಕೃಷ್ಣರಾಜೇಂದ್ರ ದೃಶ್ಯಕಲಾ ಅಕಾಡೆಮಿಯಿಂದ ಪದವಿಯನ್ನು, ಶಾಂತಿನಿಕೇತನದ ಕಲಾ ಭವನದಿಂದ ಸ್ನಾತಕೋತ್ತರ ಪದವಿಯನ್ನೂ ಪದೆದಿದ್ದಾರೆ, ಸದ್ಯ ಮೈಸೂರಿನಲ್ಲಿ ಚಿತ್ರಕಲೆಯಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.
 
ಚರಿತಾ. ಎಂ.ಆರ್
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಮ್. ಕಾರ್ಯಪ್ಪ ಕಾಲೇಜಿನ ಪ್ರಥಮ ವರ್ಷದ ಪದವಿ ಪತ್ರಿಕೋದ್ಯಮ ವಿದ್ಯಾರ್ಥಿನಿ.
ಚಿದಂಬರ ಬೈಕಂಪಾಡಿ
ಚಿದಂಬರ ಬೈಕಂಪಾಡಿ
 
ಚಿನ್ಮಯ ಭಟ್
ಚಿನ್ಮಯ ಭಟ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬದವರು. ಮುಂಬೈ, ಬೆಂಗಳೂರಿನಲ್ಲಿ ಅನೇಕ ವರ್ಷ ಕಾಲ ಕೆಲಸ ಮಾಡಿದ್ದಾರೆ.  ಕಳೆದ ನಾಲ್ಕು ವರ್ಷಗಳಿಂದ ಬ್ರಿಟನ್ ನಲ್ಲಿ ಪ್ರಾಜೆಕ್ಟ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಚಂದಮಾಮ್
ಚಂದಮಾಮ್ ಒಂದು ಕಾಲದಲ್ಲಿ ಬರುತ್ತಿದ್ದ ಭಾವನಾ ಮಾಸಿಕದ ಕೊನೆಯ ಪುಟದಲ್ಲಿ ಬರೆಯುತ್ತಿದ್ದವರು. ಉದ್ಯೋಗದ ನಿಮಿತ್ತ ಬಹಳ ವರ್ಷಗಳನ್ನು ದೇಶಾಂತರದಲ್ಲಿ ಕಳೆದ ಇವರು ಈಗ ಗೃಹಸ್ಥರಾಗಿದ್ದಾರೆ. ಆಗಾಗ ಕೆಂಡಸಂಪಿಗೆಯಲ್ಲಿ ಬೆಳದಿಂಗಳಿನಂತೆ ಕಾಣಿಸಿಕೊಳ್ಳಲಿದ್ದಾರೆ.
 
ಚಂದ್ರಶೇಖರ ಮಂಡೆಕೋಲು
ಸುಳ್ಯ ತಾಲೂಕಿನ ಮಂಡೆಕೋಲು ಊರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ. ಉದಯವಾಣಿಯ ಮಣಿಪಾಲ ಕಚೇರಿಯಲ್ಲಿ ಉದ್ಯೋಗ. ಮನೋವಿಜ್ಞಾನಕ್ಕೆ ಸಂಬಂಧಪಟ್ಟಂತೆ ಶಿವಮೊಗ್ಗ ವಿ.ವಿ.ಯಲ್ಲಿ ಎರಡನೇ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ. ಹಲವು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ‘ಎಲ್ಲಿಂದಲೋ ತೇಲಿ ಬಂದ ಕೃಷ್ಣ ತುಳಸಿಯ ಘಮ’ ಕೃತಿ ಪ್ರಕಟಣೆಯ ಹಂತದಲ್ಲಿದೆ.
ಚೇತನಾ ತೀರ್ಥಹಳ್ಳಿ
ಓ ನನ್ನ ಚೇತನಾ ಎಂಬ ಬ್ಲಾಗ್ ಒಡತಿ, ಅಂಕಣಕಾರ್ತಿ.
 
ಟಿ.ಎಂ.ಕೃಷ್ಣ

ಕೋಲಾರ (ಈಗಿನ ಚಿಕ್ಕಬಳ್ಳಾಪುರ) ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲದುಮ್ಮನಹಳ್ಳಿಯಲ್ಲಿ ಹುಟ್ಟಿ ಬೆಳೆದ ಇವರು ಕೃಷಿಯ ಜೊತೆಗೆ ಬರವಣಿಗೆಯನ್ನೂ ರೂಢಿಸಿಕೊಂಡವರು. ಸಾಹಿತ್ಯ, ಸಸ್ಯ ಪೋಷಣೆ, ಕಂಪ್ಯೂಟರ್ ಮತ್ತು ಕಲಿಯುವುದು ಇವರ ಆಸಕ್ತಿಯ ವಿಷಯಗಳು.
   
 

ಟಿ.ಆರ್. ಚಂದ್ರಶೇಖರ್
ಟಿ.ಆರ್. ಚಂದ್ರಶೇಖರ್ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕರು. ಹೊಸಪೇಟೆಯ ಪದವಿ ಕಾಲೇಜಿನಲ್ಲಿ ಎರಡು ದಶಕಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ ಅವರು, ಬಳಿಕ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ ಹತ್ತಾರು ವಿಷಯಗಳ ಕುರಿತು ಅಧ್ಯಯನಾತ್ಮಕ ಲೇಖನಗಳನ್ನು ಬರೆದಿದ್ದಾರೆ. ನೊಬೆಲ್ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ರ...
 
ಟಿ.ಅವಿನಾಶ್
ಹೊಸ ತಲೆಮಾರಿನ ಲೇಖಕರು
ಟೀನಾ
ಇಂಗ್ಲಿಷಿನಲ್ಲಿ ಸ್ನಾತಕೋತ್ತರ ಅಧ್ಯಯನ  ಮಾಡಿದ್ದಾರೆ.  ಕವಯತ್ರಿ. ಅಂಕಣ ಬರಹ, ಬ್ಲಾಗ್ ಬರಹಗಳಿಂದ ಪರಿಚಿತರಾಗಿದ್ದಾರೆ.
 
ಎ ಪಿ ಮಾಲತಿ
ಎ ಪಿ ಮಾಲತಿ
ಎ.ಎನ್. ಪ್ರಸನ್ನ
ಹುಟ್ಟಿದ್ದು ೧೯೪೩ರಲ್ಲಿ. ಕೆ.ಪಿ.ಟಿ.ಸಿ.ಎಲ್. ನಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿ ಈಗ ನಿವೃತ್ತ. ಬೆಂಗಳೂರು ವಾಸಿ.

‘ಉಳಿದವರು’, ‘ಆ ಊರಿನಲ್ಲಿ’ , ‘ಪಾರಿವಾಳಗಳು’ , ‘ರಥಸಪ್ತಮಿ’, ‘ಮೂರನೇ ದಡ’ ಇವರ ಕಥಾ ಸಂಕಲನಗಳು. ‘ಉಳಿದವರು’ ಕಥಾ ಸಂಕಲನಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ನೊಬೆಲ್...
 
ಎ.ಪಿ. ರಾಧಾಕೃಷ್ಣ
ಎ ಪಿ ರಾಧಾಕೃಷ್ಣ
ಎಚ್. ಆನಂದರಾಮ ಶಾಸ್ತ್ರಿ
ಎಚ್. ಆನಂದರಾಮ ಶಾಸ್ತ್ರಿ
 
ಎಚ್.ಎಸ್.ರಾಘವೇಂದ್ರ ರಾವ್

ಬೆಂಗಳೂರಿನ ನ್ಯಾಶನಲ್ ಕಾಲೇಜಿನಲ್ಲಿ ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾದ್ಯಾಪಕರಾಗಿದ್ದು ಈಗ ನಿವೃತ್ತರಾಗಿದ್ದಾರೆ. ಕನ್ನಡದ ಮುಖ್ಯ ವಿಮರ್ಶಕರಲ್ಲಿ ಒಬ್ಬರು. ಅತಿರೇಕವಿಲ್ಲದ ಸಮಚಿತ್ತದ ಬರವಣಿಗೆ ಅವರ ವಿಮರ್ಶೆಯ ಮುಖ್ಯ ಲಕ್ಷಣ. ನವೋದಯದ ಕವಿಗಳ ವೈಶಿಷ್ಟ್ಯವನ್ನು ಅಧ್ಯಯನ ಮಾಡಿರುವ 'ಹಾಡೆ ಹಾದಿಯ ತೋರಿತು' ಪಶ್ಚಿಮ ಬಂಗಾಳ ಪ್ರವಾಸವನ್ನು...

ಎಚ್.ವೈ. ರಾಜಗೋಪಾಲ್
ಎಚ್.ವೈ. ರಾಜಗೋಪಾಲ್ ಅಮೆರಿಕಾದ ‘ಕನ್ನಡ ಸಾಹಿತ್ಯ ರಂಗ’ದ ಸ್ಥಾಪಕ ಸದಸ್ಯರಲ್ಲೊಬ್ಬರೂ, ಅದರ ಅಧ್ಯಕ್ಷರೂ ಆಗಿದ್ದಾರೆ. ಇವರ ಲೇಖನಗಳು ವಿವಿಧ ಸಂಕಲನಗಳಲ್ಲಿ ಪ್ರಕಟಗೊಂಡಿವೆ. ಹೊರನಾಡ ಕನ್ನಡಿಗರಾಗಿ ಕನ್ನಡಕ್ಕೆ ಅವರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರ ೨೦೦೭ರಲ್ಲಿ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನಿತ್ತು...
 
ಎಚ್.ಆರ್. ರಮೇಶ
ಎನ್. ಎ. ಎಂ. ಇಸ್ಮಾಯಿಲ್
ಇಸ್ಮಾಯಿಲ್  ಕನ್ನಡದ ಹೊಸ ತಲೆಮಾರಿನ ಪ್ರತಿಭಾವಂತ ಪತ್ರಕರ್ತರು. ಸದ್ಯಕ್ಕೆ ಬೆಂಗಳೂರಿನಲ್ಲಿದ್ದಾರೆ. ಮೂಲತಃ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ನಲ್ಲೂರಿನವರಾದ ಇಸ್ಮಾಯಿಲ್ ಕನ್ನಡದಲ್ಲಿ ಅಂತರ್ಜಾಲ ಸಾಹಸಗಳಿಗೆ ಮುನ್ನುಗ್ಗಿದ ಮೊದಲಿಗರಲ್ಲಿ ಒಬ್ಬರು. ಕಂಪ್ಯೂಟರ್, ಅರ್ಥಶಾಸ್ತ್ರ, ಕೃಷಿಸಾಲ ಹಾಗೂ ಸಾಹಿತ್ಯ ಇವರ ಇಷ್ಟದ ವಿಷಯಗಳು.
 
ಎನ್.ಎಸ್.ಶಂಕರ್
ಬರಹಗಾರ, ಚಿಂತಕ, ಪತ್ರಕರ್ತ, ಚಿತ್ರ ನಿರ್ದೇಶಕ ಎನ್.ಎಸ್.ಶಂಕರ್ ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ (೧೯೫೯). ಮಂಡ್ಯ ಜಿಲ್ಲೆಯ ಪಾಂಡವಪುರ ನಂತರ ಮೈಸೂರು, ಬೆಂಗಳೂರುಗಳಲ್ಲಿ ವ್ಯಾಸಂಗ. ೭೯ರಿಂದ ಜನವಾಣಿ, ಪ್ರಜಾವಾಣಿ, ಲಂಕೇಶ್ ಪತ್ರಿಕೆ ಮುಂತಾಗಿ ಹಲವು ಸಂಸ್ಥೆಗಳಲ್ಲಿ ಪತ್ರಕರ್ತನಾಗಿ ದುಡಿಮೆ. ‘ಮುಂಗಾರು’ ದಿನಪತ್ರಿಕೆ ಹಾಗೂ ‘ಸುದ್ದಿ ಸಂಗಾತಿ’...
ಎಸ್. ಸಿರಾಜ್ ಅಹಮದ್
ಎಸ್. ಸಿರಾಜ್ ಅಹಮದ್
 
ಎಸ್.ಎನ್.ಗಣನಾಥ
ವಿಜ್ಞಾನದಲ್ಲಿ ಉನ್ನತ ಶಿಕ್ಷಣ ಪಡೆದ ಎಸ್.ಎನ್.ಗಣನಾಥರಿಗೆ ಮೊದಲಿನಿಂದಲೂ ಸಾಹಿತ್ಯದಲ್ಲಿ ಆಸಕ್ತಿ ಇದೆ. ONGC ಯಲ್ಲಿ ನಂತರ ರಿಷಿ ವ್ಯಾಲಿ ಶಾಲೆಯಲ್ಲಿ ಕೆಲಸ ಮಾಡಿದ್ದಾರೆ. ಈಗ ಬೆಂಗಳೂರಿನಲ್ಲಿ ವಾಸ. ಶಾಲಾ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ‘ಸುವಿದ್ಯ’ ಎಂಬ NGO ನೆಡೆಸುತ್ತಿದ್ದಾರೆ.

ಕಾವ್ಯದಲ್ಲಿ ಆಸಕ್ತಿ ಹೊಂದಿರುವ ಗೆಳೆಯರ ಗುಂಪು...
ಎಸ್.ಎಂ. ಪೆಜತ್ತಾಯ
ಕಾಗದದ ದೋಣಿಯಂತೆ ನನ್ನ ಬಾಳದೋಣಿಯೂ ಸಾಗಿತು! -  ಅನ್ನುತ್ತಾರೆ ಅರುವತ್ತಮೂರರ ಎಸ್. ಮಧುಸೂದನ (ಕೇಸರಿ) ಪೆಜತ್ತಾಯ. ಉಡುಪಿಯ ಎಮ್.ಜಿ. ಎಮ್. ಕಾಲೇಜ್‌ನ ಸೈನ್ಸ್ ವಿದ್ಯಾರ್ಥಿ. ಸೇರಲು ಯೋಜಿಸಿದ್ದು ಭಾರತೀಯ ನೌಕಾ ಪಡೆ.

ಶ್ರೀ ಲಾಲ್ ಬಹದ್ದೂರರ ಪ್ರಭಾವದಿಂದ ಆಗಿದ್ದು ವೃತ್ತಿಪರ ರೈತ. ನಲವತ್ತೈದು ವರುಷಗಳ ವ್ಯವಸಾಯದ ಅನುಭವ. ಕರಾವಳಿ, ಬಯಲು ಸೀಮೆ ಮತ್ತು...
 
ಎಸ್.ಮಂಜುನಾಥ್
ಇಂದಿನ ಮುಖ್ಯ ಕವಿಗಳಲ್ಲಿ ಒಬ್ಬರು. ಇಂಗ್ಲಿಷ್ ಎಂಎಯನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಮುಗಿಸಿ ಈಗ ಕೆ ಆರ್ ನಗರದಲ್ಲಿ ಬಿಎಸ್ಎನ್ಎಲ್ ಅಧಿಕಾರಿಯಾಗಿದ್ದಾರೆ. ಹಕ್ಕಿ ಪಲ್ಟಿ, ಬಾಹುಬಲಿ, ಕಲ್ಲ ಪಾರಿವಾಳಗಳ ಬೇಟ ಇವರ ಮುಖ್ಯ ಸಂಕಲನಗಳು. ಸುಮ್ಮನಿರುವ ಸುಮ್ಮಾನ ಎಂಬುದು ತಾವೋ ಚಿಂತನೆಗಳ ಅನುವಾದ.
ಎಸ್.ಗಂಗಾಧರಯ್ಯ
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಹುಟ್ಟಿದ ಊರು. ವೃತ್ತಿಯಲ್ಲಿ ಇಂಗ್ಲೀಷ್ ಪ್ರಾಧ್ಯಾಪಕ. ವೈಕಂ ಕಥೆಗಳು, ಲೋರ್ಕಾ-ನಾಟಕ ಎರ್ಮಾ, ಹಲವು ರೆಕ್ಕೆಯ ಹಕ್ಕಿ, ಚರಮಗೀತೆ ಅನುವಾದಿತ ಕೃತಿಗಳು. ನವಿಲ ನೆಲ ಇವರ ಕಥಾಸಂಕಲನ.  ವೈಕಂ ಕಥೆಗಳು ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.
 
ಎಂ ಎಸ್ ನಾಗರಾಜ

ಡಾ. ಎಂ ಎಸ್ ನಾಗರಾಜ ಹಾಸನದ ಕೃಷಿ ವಿಜ್ಝಾನ ಕೇಂದ್ರದಲ್ಲಿ ಭೂ ವಿಜ್ಝಾನ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್  ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಎಂ ವ್ಯಾಸ
 
ಎಂ ಆರ್ ಭಗವತಿ
ಹುಟ್ಟಿದ್ದು ಚಿಕ್ಕಮಗಳೂರು. ಓದು ಸ್ನಾತಕೋತ್ತರ ಇ೦ಗ್ಲಿಷ್ ಸಾಹಿತ್ಯ. ಕವಿತೆ, ಕತೆ, ಲೇಖನ, ವಿಮರ್ಶಾ ಲೇಖನಗಳು ಪ್ರಕಟವಾಗಿವೆ. ’ಅತ್ತು ಬಿಡೇ ಗೆಳತಿ’ (ಸ೦ಯುಕ್ತ 
ಸ೦ಕಲನ), ’ಏಕಾ೦ತದ ಮಳೆ’, ’ಚ೦ಚಲ ನಕ್ಷತ್ರಗಳು’ ಕವನ ಸ೦ಕಲನ.
ಸಾಹಿತ್ಯ, ವಿಜ್ಞಾನ, ಚಿತ್ರಕಲೆ ಮತ್ತು ಸ೦ಗೀತ ಇಷ್ಟದ ವಿಷಯಗಳು.
’ಏಕಾ೦ತದ ಮಳೆ’ ಸ೦ಕಲನಕ್ಕೆ ಹೆಗ್ಗೋಡಿನ...
 
Pages [1] 2 3 4 5 6 of 9    First | Previous | Next | Last