ಕ್ರಿಕೆಟ್ ಮೈದಾನಗಳು ಮತ್ತು ಕಾಮೆಂಟೇಟರ್ಸ್
ಭಾರತದಲ್ಲಿ ಮುಂಚೆ ಟೆಸ್ಟ್ ಮ್ಯಾಚುಗಳು ಆಡುವುದಕ್ಕೆ ಇದ್ದ ಮೈದಾನಗಳು ಕೇವಲ 5. ದೆಹಲಿ, ಮುಂಬೈ, ಕಲ್ಕತ್ತಾ, ಕಾನ್ಪುರ ಮತ್ತು ಮದ್ರಾಸ್ ನಗರಗಳಲ್ಲಿ. ದೆಹಲಿಯ ಫಿರೋಜ್ ಕೋಟ್ಲ, ಮುಂಬೈಯ ಬ್ರೇಬರ್ನ್ ಸ್ಟೇಡಿಯಂ, ಕಲ್ಕೊತಾದ ಈಡನ್ ಗಾರ್ಡನ್ಸ್, ಕಾನ್ಪುರದ ಗ್ರೀನ್ ಪಾರ್ಕ್, ಮತ್ತು ಚೆನ್ನೈನ ಚೆಪಾಕ್ ಸ್ಟೇಡಿಯಂ. ಆಮೇಲೆ, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ, ಹೈದರಾಬಾದಿನ ಲಾಲ್ ಬಹದ್ದೂರ್ ಸ್ಟೇಡಿಯಂ ಇತ್ಯಾದಿ ಬಂದವು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ ಬರಹ ನಿಮ್ಮ ಓದಿಗೆ
ಸೋಕಿದ ಕಹಿಯನ್ನು ಒಳಗಿಳಿಸಿಕೊಳ್ಳದೆ, ಸಿಹಿಯನಷ್ಟೇ ಹಂಚುತ್ತಾ….
೫೭ ವರ್ಷಗಳ ತಮ್ಮ ಬದುಕಿನ ಪಯಣದ ಬಗ್ಗೆ ಅವರ ಮಾತಿನಲ್ಲಿ ಸಂತೃಪ್ತಿಯಿತ್ತು. ಸವಾಲು, ಸಮಸ್ಯೆ, ಸಣ್ಣತನ, ಮೋಸ, ರಾಜಕೀಯಗಳ ಬಗ್ಗೆ ಒಂದು ಶಬ್ದವನ್ನೂ ವ್ಯಯಿಸದೆ, ತಮ್ಮ ಜ್ಞಾನ, ಉದಾತ್ತ ವಿಚಾರಗಳು, ಸಕಾರಾತ್ಮಕ ಸಂಗತಿಗಳ ಬಗ್ಗೆ ನಿರರ್ಗಳವಾಗಿ ಮಾತನಾಡಿದರು. ಅಲ್ಲಿ ಕೃತಕತೆಗೆ, ಕೃತ್ರಿಮಕ್ಕೆ ಆಸ್ಪದವೇ ಇರಲಿಲ್ಲ. ಅವರೊಳಗಿನ ಶುದ್ಧ ಆನಂದವನ್ನು ಸುತ್ತ ಪಸರಿಸುವ ಬೆಳಕಿನ ನದಿಯಂತೆ ಹರಿದರು. ಮಾತಾಡಿದರು. ನೃತ್ಯ ಮಾಡಿದರು. ಅದೊಂದು ಅನಿರ್ವಚನೀಯ ಅನುಭವ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ
ಕುಂಭಮೇಳದ ನೆನಪುಗಳು….
ನನಗೆ ತಣ್ಣಗಿನ ನೀರೆಂದರೆ ನಡುಕ. ಹಾಗಾಗಿ ನೀರಿನಲ್ಲಿ ಮುಳುಗಲು ಹಿಂದು ಮುಂದು ನೋಡುತ್ತಿದ್ದೆ. ಹಾಗೇ ನೋಡಿ ವಾಪಸ್ ಬರುವುದು ಅಂತ ನನ್ನ ಇರಾದೆ ಇತ್ತು. ನನ್ನ ಸ್ನೇಹಿತೆ ಸಂಗಮದಲ್ಲಿ ಸ್ನಾನ ಮಾಡುವೆ ಎಂದಾಗ ಅವರ ಜೊತೆ ಹೋದೆ. ಒಂದು ದೋಣಿ ನದಿಯ ಸಂಗಮದ ಜಾಗಕ್ಕೆ ಕರೆದುಕೊಂಡು ಹೋಯಿತು. ಅಲ್ಲಿ ಬಟ್ಟೆ ಬದಲಿಸಲು ಒಂದು ತಡಿಕೆಯನ್ನು ಮಾಡಿದ್ದರು ದೋಣಿಯ ಮೇಲೆಯೇ. ನಾನೂ ನೀರಿನಲ್ಲಿ ಇಳಿದು ಮುಳುಗು ಹಾಕಿ ಬರುತ್ತೀನಿ ಅಂದುಕೊಂಡರೂ ಯಾಕೋ ಆಗುತ್ತಲೇ ಇರಲಿಲ್ಲ.
‘ದೇವಸನ್ನಿಧಿ’ ಅಂಕಣದಲ್ಲಿ ಕುಂಭಮೇಳಕ್ಕೆ ಭೇಟಿ ನೀಡಿದ ಅನುಭವದ ಕುರಿತು ಬರೆದಿದ್ದಾರೆ ಗಿರಿಜಾ ರೈಕ್ವ
ಅಲ್ಲಿಯ ಇಲ್ಲಿಯ ಬೆಲೆಯೇರಿಕೆ ಕಥೆಗಳು
ಉದ್ಯೋಗ ಬೇಟೆಯಲ್ಲಿರುವ ಜನರಿಗೆ ಕೊಡುವ ಧನಸಹಾಯ ಆ ಒಬ್ಬ ವ್ಯಕ್ತಿಯ ಜೀವನಕ್ಕೇ ಸಾಲದಾಗಿದೆ. ಬೇಸತ್ತು ಯಾವುದಾದರೂ ಸರಿಯೇ ಹೇಗಾದರೂ ಸರಿಯೇ ಕೆಲಸವನ್ನು ಹಿಡಿಯೋಣವೆಂದು ಹೊರಟರೆ ಆ ಉದ್ಯೋಗದಿಂದ ಬರುವ ಆದಾಯ ಏತಕ್ಕೂ ಸಾಲುವುದಿಲ್ಲ. ತಮಗೆ ಒಗ್ಗದ ಉದ್ಯೋಗವನ್ನು ಮಾಡುವ ಅನಿವಾರ್ಯತೆ ಹಲವರಲ್ಲಿ ಮಾನಸಿಕ ಕ್ಷೋಭೆಯನ್ನುಂಟು ಮಾಡುತ್ತದೆ. ಮಾನಸಿಕ ರೋಗಗಳು ಕಾಣಿಸುತ್ತವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ಅಂಕಣ
ನಮ್ಮನ್ನು ದೇವರೇ ಕಾಪಾಡಬೇಕು!
ನಾವಿಲ್ಲದಾಗ ನಮ್ಮ ಬೆಳೆಯನ್ನು ಕಾಪಾಡುವುದು ಹೇಗೆ ಎಂಬ ಪ್ರಶ್ನೆಗೆ ನನಗೆ ಇನ್ನೂ ಉತ್ತರ ಸಿಕ್ಕಿರಲಿಲ್ಲ. ಅಲ್ಲಿಯೇ ಮನೆ ಮಾಡಿಕೊಂಡು ಇರುವುದು ನನಗೆ ಇನ್ನೂ ಸಾಧ್ಯವಿರಲಿಲ್ಲ. ಹೊಲದಲ್ಲಿ ಕ್ಯಾಮೆರಾ ಹಾಕೋಣ ಅಂತಲೂ ಯೋಚಿಸಿದೆ. ಆದರೆ ಹಾಗೆ ಮಾಡಲು ಅಲ್ಲೊಂದು ತೋಟದ ಮನೆಯಾದರೂ ಬೇಕಲ್ಲ.
ಗುರುಪ್ರಸಾದ್ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣದ 19ನೇ ಕಂತು
10 ಫಾರ್ 74 ಮತ್ತು ‘ಮೈಸೂರ್ ಎಕ್ಸ್‌ಪ್ರೆಸ್’
ಆದರೆ ಆ ಮ್ಯಾಚಿನಲ್ಲಿ ವೆಸ್ಟ್ ಇಂಡೀಸ್‌ನ ಬೋಲರ್ ಮೆರ್ವಿನ್ ಡಿಲ್ಲನ್‌ರ ಒಂದು ಬೌನ್ಸರ್ ಎಷ್ಟು ರಭಸದಿಂದ ಬಂತೆಂದರೆ ಕುಂಬ್ಳೆಯ ದವಡೆಗೆ ತಾಕಿ, ದವಡೆ ಮುರಿದುಹೋಯಿತು. ಕುಂಬ್ಳೆ ಆಸ್ಪತ್ರೆಗೆ ಹೋಗಿ ಶಸ್ತ್ರಚಿಕಿತ್ಸೆಗೆ ತಯಾರಾಗಿ ಯಾವಾಗ ಅದು ನಡೆಯುತ್ತೋ ಎಂದು ಎಲ್ಲರೂ ಕಾಳಜಿಯಿಂದ ಇದ್ದಾಗ, ವೆಸ್ಟ್ ಇಂಡೀಸ್ ಆಡುವಾಗ ಕುಂಬ್ಳೆ ಬ್ಯಾಂಡೇಜ್ ಹಾಕಿಕೊಂಡು ಮೈದಾನಕ್ಕೆ ಇಳಿದರು!
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಅನಿಲ್ ಕುಂಬ್ಳೆ ಹಾಗೂ ಜಾವಗಲ್ ಶ್ರೀನಾಥ್ ಆಟದ ಕುರಿತ ಬರಹ ನಿಮ್ಮ ಓದಿಗೆ
ಅವರಿಬ್ಬರೂ ಆ ಸ್ಥಿತಿ ತಲುಪಿ ಬಂದಿದ್ದರು…
ಅಲ್ಲಾಸಾಬರು ಹಾಗೂ ಶಿವಣ್ಣನವರು ಇಬ್ಬರೂ ವಿಭಿನ್ನ ನೆಲೆ, ಪರಿಸರದಿಂದ ಬಂದವರು. ಇಬ್ಬರ ಜಾತಿ ಧರ್ಮಗಳು ಬೇರೆ. ಶಿಕ್ಷಣ, ಆರ್ಥಿಕ ಸ್ಥಿತಿ ವಿಭಿನ್ನ. ಒಬ್ಬರು ದೇವರ ಜಪತಪ ಮಾಡುತ್ತಾ ಸ್ವರ್ಗ ನರಕಗಳ ಬಗ್ಗೆ ಹೇಳುತ್ತಾ ಸತ್ತ ನಂತರದ ಜೀವನ ವಿವರಿಸುತ್ತಾ ಸಂಪೂರ್ಣವಾಗಿ ಧಾರ್ಮಿಕ ವಿಚಾರಗಳನ್ನು ನಂಬುತ್ತಾ ಜಗತ್ತಿನ ಪ್ರತಿಯೊಂದರ ಸೃಷ್ಟಿಯೂ ಆ ದೇವನಿಂದಾದ್ದು ಎಂದು ನಂಬಿ ಸಂಪ್ರದಾಯಬದ್ಧವಾಗಿ ಬದುಕುತ್ತಿರುವ ವ್ಯಕ್ತಿ.
ಇಸ್ಮಾಯಿಲ್ ತಳಕಲ್ ಬರೆಯುವ “ತಳಕಲ್ ಡೈರಿ”
ಬನ್ಯಾ ಮರ ಹಬ್ಬ ಮತ್ತು ಬನ್ಯಾ ಡ್ರೀಮಿಂಗ್
ಅಬೊರಿಜಿನಲ್ ಜನರ ಜೀವನದಲ್ಲಿ ಡ್ರೀಮಿಂಗ್ ಸ್ಟೋರೀಸ್ ಎನ್ನುವುದು ಅವಿಭಾಜ್ಯ ಅಂಗವಾಗಿದೆ. ಭಾರತೀಯ ಹಿಂದೂ ಧರ್ಮದಲ್ಲಿ ದೇವರುಗಳು ಮತ್ತು ಅನೇಕಾನೇಕ ಪುರಾಣಗಳು ಹಾಸುಹೊಕ್ಕಾಗಿರುವಂತೆ. ಅಬೊರಿಜಿನಲ್ ಜೀವನದಲ್ಲಿ ಪ್ರತಿಯೊಂದನ್ನೂ ಸ್ಪಿರಿಟ್‌ಗಳು, ಅವುಗಳು ಎಲ್ಲ ಬಗೆಯ ಜೀವಜಾಲದೊಂದಿಗೆ ಹೊಂದಿರುವ ಸಂಬಂಧವು ಎಲ್ಲರ ಜೀವನದ ಆಗುಹೋಗುಗಳನ್ನು ನಿರ್ದೇಶಿಸುತ್ತವೆ.
ಡಾ. ವಿನತೆ ಶರ್ಮ ಬರೆಯುವ ‘ಆಸ್ಟ್ರೇಲಿಯಾ ಪತ್ರ’
ಹಳ್ಳಿಯ ಸಹವಾಸವೇ ಬೇಡ…!
ಕಾರ್ಪೊರೇಟ್ ಜಗತ್ತಿನಲ್ಲಿ ನಡೆಯುವ ರಾಜಕೀಯಗಳಿಂದ ರೋಸಿ ಹೋಗಿ ಕೆಲಸ ಬಿಟ್ಟು ಬಂದು ಹಳ್ಳಿಯಲ್ಲಿ ನೆಮ್ಮದಿ ಕಾಣಬೇಕು ಅಂದರೆ ಇಲ್ಲಿ ಇನ್ನೂ ಹದಗೆಟ್ಟ ಪರಿಸ್ಥಿತಿ ಇದೆ ಅನಿಸಿತು. ಸುಳ್ಳುಗಳು, ಜಾತಿ, ಕಳುವು ಇನ್ನೂ ಏನೇನು ನೋಡೋದು ಇದೆಯೋ ಇಲ್ಲಿ ಅನಿಸಿತು. ಅತ್ತೆ ಮಾವ ನಮ್ಮ ಸಂಬಂಧಿಯೇ ಆಗಿದ್ದರೂ ಅವರು ನಮ್ಮ ಪರವಾಗಿ ನಿಲ್ಲಲಾರರು ಎಂಬ ಕಟು ಸತ್ಯದ ಅರಿವು ಆಗಿತ್ತು. ಎಷ್ಟೇ ಅಂದರೂ ಅಲ್ಲಿನ ಜನರ ಜೊತೆಗೆ ಬದುಕುವ ಅವರು, ಎಲ್ಲಿಂದಲೋ ಬಂದ ಯಾವಾಗಲೋ ಒಮ್ಮೆ ಬಂದು ಹೋಗುವ ನನ್ನ ಪರವಾಗಿ ಹೇಗೆ ತಾನೇ ನಿಂತಾರು?
ಗುರುಪ್ರಸಾದ್ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣದ 18ನೇ ಕಂತು