‘ಸಮ್ಮಿಶ್ರ ಕಥೆ’ಯೆಂಬುದು ಸಮ್ಮಿಶ್ರ ಸರ್ಕಾರದಷ್ಟು ಚರ್ಚೆ ಮತ್ತು ಹೀಗಳಿಕೆಗಳಿಗೆ ತುತ್ತಾದ ಪ್ರಯೋಗವೇನಲ್ಲ. ಆದರೂ ಇಂತಹದೊಂದು ಪ್ರಯೋಗಕ್ಕೆ ಕೈ ಹಾಕುವ ಕೆಲಸವನ್ನು ಯಾರೂ ಜಾಸ್ತಿ ಮಾಡಿರಲಿಲ್ಲ. ಬಹುಶಃ ಸಮ್ಮಿಶ್ರ ಸರ್ಕಾರ ರಚನೆಗಿಂತ ಹೆಚ್ಚಿನ ಕಸರತ್ತುಗಳನ್ನು ಮಾಡುವ ಅವಶ್ಯಕತೆಗಳು ಇಲ್ಲಿರಬಹುದೇನೋ. ಆದರೂ ಇಂತಹದೊಂದು ಹೊಸತನದ, ಹುಮ್ಮಸ್ಸಿನ ಪ್ರಯೋಗವನ್ನು ಈ ಭಾನುವಾರದ ನಿಮ್ಮ ಓದಿಗಾಗಿ ಮಾಡಿದ್ದಾರೆ ಯುವ ಬರಹಗಾರರಾದ ಮೇಘನಾ ಸುಧೀಂದ್ರ ಹಾಗೂ ಪ್ರಸಾದ್ ನಾಯ್ಕ್. ಇವರಿಬ್ಬರ ಜಂಟಿ ಕಥಾ ಪ್ರಯತ್ನ ಹೇಗಿದೆ ಎಂದು ಓದಿ ಪ್ರತಿಕ್ರಯಿಸಿ.

 

ಅಂದೂ ಲಿಪಿ ಬಸ್ಸಿನಲ್ಲಿ ಆಫೀಸಿಗೆ ಹೋಗುತ್ತಿದ್ದಳು. ಬೆಂಗಳೂರಿನ ವೋಲ್ವೋ ಬಸ್ಸಿನಲ್ಲಿ ಒಂದು ಲ್ಯಾಪ್ಟಾಪ್ ಬ್ಯಾಗ್, ಐಡಿ ಕಾರ್ಡ್, ಅಲ್ಲೇನೋ ಫೇಸ್ ಬುಕ್ಕಿನಲ್ಲಿ ಅವಳ ಕಾಲಂಗೆ ಬಂದಿರುವ ಪ್ರತಿಕ್ರಿಯೆಯನ್ನ ನೋಡುತ್ತಾ ಎಂದಿನಂತೆ ಸಾಗುತ್ತಿದ್ದಳು ಲಿಪಿ. ಸಿಲ್ಕ್ ಬೋರ್ಡಿನ ಟ್ರಾಫಿಕ್ ನಿಂದ ಅವಳ ಕಾಲಂ ಹುಟ್ಟುಕೊಂಡಿತ್ತು. ದಿನಾ 2 ಘಂಟೆ ಪ್ರಯಾಣ ಮಾಡಬೇಕಾದುದರಿಂದಲೋ ಏನೋ ಅವಳು ಬರೆಯೋದಕ್ಕೆ ಶುರು ಮಾಡಿದಳು. ಮೊದಮೊದಲು ಯಾರೂ ಅವಳ ಬರಹಗಳನ್ನ ಗಮನಿಸುತ್ತಿರಲಿಲ್ಲ. ನಂತರ ದಿಜಿ ಪ್ಲಾಟ್ ಫಾರ್ಮ್ ಒಂದು ಅವಳ ಲೇಖನವನ್ನ ಪ್ರತಿ ವಾರ ಪ್ರಕಟಿಸಲು ಶುರುಮಾಡಿತ್ತು. ಹೀಗೆ ಒಂದು ವರ್ಷದಿಂದ ಪ್ರತಿ ವಾರ ಬರೆಯುತ್ತಾ ಬರಹಕ್ಕಿಂತ ಅತಿ ಸುಖ ಮತ್ತೊಂದಿಲ್ಲ ಎಂದು ನಂಬಿದ್ದಳು ಲಿಪಿ. ಸೋಮವಾರದಿಂದ ಶುಕ್ರವಾರ ಕೋಡ್ ಬರೆಯೋದು, ಶನಿವಾರ ಭಾನುವಾರ ಕಥೆ ಬರೆಯೋದು. ವಾರಾಂತ್ಯದ ಪುಸ್ತಕ ಓದು, ಬರಹ ಅವೇ ಅವಳಿಗೆ ಇಷ್ಟ.

ಲಿಪಿ ಖುಷಿಯಾಗಿದ್ದಳು. ಕವನ ಅವಳ ಪ್ರಿಯವಾದ ಓದು. ಬರೆಯೋದಕ್ಕೆ ಪ್ರಯತ್ನ ಪಟ್ಟವಳಿಗೆ ಅದು ಗದ್ಯವೆಂದೇ ಅನ್ನಿಸುತ್ತಿತ್ತು. ಹಂಗೂ ಏನೇನೋ ಬರೆಯೋಳು. ಇವಳ ಲವಲವಿಕೆಯಿಂದ, ಜೀವಂತಿಕೆಯಿಂದ ಅಂಕಣ ಚೆನ್ನಾಗಿ ಹೋಗುತ್ತಿತ್ತು. ಒಂದಿಬ್ಬರು ಬಂದು ಗುರುತೂ ಹಿಡಿಯುತ್ತಿದ್ದರು. ಇವಿಷ್ಟು ಅವಳ ಆಫೀಸಿನ ಗೇಟ್ ಆಚೆಯೇ. ಆಫೀಸಿನ ಒಳಗೆ ಬಂದರೆ ಅವಳ್ಯಾರೋ 800ರಲ್ಲಿ ಒಬ್ಬಳಾಗಿದ್ದಳು. ಒಟ್ಟಿನಲ್ಲಿ ಲಿಪಿ ಖುಷಿಯ ಹುಡುಗಿ. ಫೇಸ್ ಬುಕ್ಕಿನಲ್ಲಿ ಎಲ್ಲಾ ಪದ್ಯ ಪೇಜ್ ಗಳನ್ನ ಫಾಲೋ ಮಾಡುತ್ತಿದ್ದಳು. ಆಗಾಗ ಬರೆದರೂ ರಿಜೆಕ್ಟ್ ಆಗುತ್ತಿತ್ತು. ಹೀಗೆ ಅವಳ ಫೇವರೆಟ್ ಕವಿ ಆರವನ ಕವನಗಳನ್ನ ಹುಚ್ಚು ಹುಚ್ಚಾಗಿ ಓದುತ್ತಿದ್ದಳು. ಅವಳ ಲೇಖನ ಬರುವ ದಿವಸವೇ ಅವನ ಕವನವೂ ಮತ್ತೆಲ್ಲೋ ಪ್ರಕಟವಾಗುತ್ತಿತ್ತು. ಒಟ್ಟಿನಲ್ಲಿ ಇಬ್ಬರೂ ಕನ್ನಡದಲ್ಲಿ ಬರೆಯುವ ಯುವ ಪ್ರತಿಭೆಗಳಾಗಿದ್ದರು.

ಲಿಪಿ ಇಷ್ಟಪಟ್ಟವರನ್ನ ಬಹಳ ಆಸ್ಥೆಯಿಂದ ಗಮನಿಸುತ್ತಿದ್ದ ಹುಡುಗಿ. ಇಬ್ಬರೂ ಫೇಸ್ ಬುಕ್ಕಿನಲ್ಲಿ ಸ್ನೇಹಿತರೆ, ಈಗಿನ ಕಾಲದಲ್ಲಿ ಫೇಸ್ ಬುಕ್ಕಿನಲ್ಲಿನ ಸ್ನೇಹಿತರು ಅಸಲಿಗೆ ಸಿಕ್ಕೇ ಇರೋಲ್ಲ, ಆದರೂ ಇಬ್ಬರಿಗೂ ತುಂಬಾ ಸಮಾನ ಅಭಿರುಚಿ ಇರುವ ಕಾರಣ ಸ್ನೇಹಿತರಾಗುತ್ತಾರೆ. ಇದು ಲಿಪಿ ಮತ್ತು ಆರವ್ ರ ವಿಚಾರದಲ್ಲೂ ಸತ್ಯವಾಗಿತ್ತು. ಅವನೆಲ್ಲೋ ಆಸ್ಟ್ರೇಲಿಯಾದಲ್ಲಿದ್ದ, ಇವಳು ಅಮೇರಿಕಾದಲ್ಲಿದ್ದಳು. ಈಗ ಇಬ್ಬರೂ ಬೆಂಗಳೂರಿಗೆ ಬಂದಿದ್ದಾರೆ. ಒಂದು ದಿವಸ ಭೇಟಿಯಾಗಬೇಕೆಂದು ಅವಳು ಬಯಸಿದ್ದಳು. ಅವನ ಕವನಗಳು ಅವಳಿಗೆ ಒಂದು ಥರಹ ಹುಚ್ಚು ಹಿಡಿಸುತ್ತಿದ್ದವು. ಅವಳು ಇಷ್ಟಿಷ್ಟುದ್ದ ಬರೆಯುವ ಕಥೆಯಲ್ಲದರ ಭಾವವನ್ನ ಅವನು ೪ ಸಾಲಿನಲ್ಲಿ ಇನ್ನೂ ಚೆನ್ನಾಗಿ ಬರೆಯುತ್ತಾನಲ್ಲ ಎಂದು ಅಂದುಕೊಳ್ಳುತ್ತಿದ್ದಳು ಲಿಪಿ. ಅವಳು ಆಪ್ಟಿಮೈಜೇಶನ್ ಇಂಜಿನಿಯರ್ ಆದರೂ ನಿಜವಾಗಲೂ ಆ ಕೆಲಸ ಮಾಡುತ್ತಿದ್ದವನು ಅವನು.

ಆರವ್ ಹಳ್ಳಿಯಲ್ಲಿ ಬೆಳೆದವನು. ನಂತರ ಸಿಟಿಯಲ್ಲಿ ಇಂಜಿನಿಯರಿಂಗ್, ಆಮೇಲೆ ಯಥಾಪ್ರಕಾರ ಮಾಸ್ಟರ್ಸ್ ಅಮೇರಿಕಾದಲ್ಲಿ ನಂತರ ಕೆಲಸ ಆಸ್ಟ್ರೇಲಿಯಾದಲ್ಲಿ. ಊರನ್ನು, ಬೆಂಗಳೂರನ್ನು, ಅಮೇರಿಕಾವನ್ನು, ಆಸ್ಟ್ರೇಲಿಯಾವನ್ನು ಸಮಾನವಾಗಿ ಪ್ರೀತಿಸುವವನು. ಬ್ಯಾಲೆನ್ಸ್ಡ್ ಮನುಷ್ಯ. ಕವನ ಬರೆದು ಹಾಕಿ, ಅದನ್ನ ಅನ್ ಫಾಲೋ ಮಾಡಿ ಯಾರು ಏನು ಬರೆದರೂ ತಲೆ ಕೆಡಿಸಿಕೊಳ್ಳದವನು. ಯಾರಾದರೂ ಒತ್ತಾಯವಾಗಿ ಬರೆದರು ಹೂ ಅಥವಾ ಉಹೂ ಅನ್ನುವ ಪ್ರತಿಕ್ರಿಯೆ ಬರೆಯುತ್ತಿದ್ದ. ಅವನು ಅವನ ಲೋಕದಲ್ಲಿ ವಿಹಾರಿ. ಹುಡುಗಿಯ ಬಗ್ಗೆ ಪದ್ಯ, ಬಹಳ ಮುದ್ದಾಗಿ ಬರೆಯುತ್ತಿದ್ದ. ಹುಡುಗಿ ಅಸಲಿಗೆ ಇದ್ದಿರಲ್ಲಿಲ್ಲ ಆದರೂ ಅಲ್ಲೆಲ್ಲೋ ಕಂಡವಳ ಬಗ್ಗೆ ಬರೆಯುತ್ತಿದ್ದ. ಜಾಸ್ತಿ ತಲೆ ಕೆಡಿಸಿಕೊಳ್ಳೋದಕ್ಕೆ ಹೋಗುತ್ತಿರಲ್ಲಿಲ್ಲ. ಆದರೆ ಲಿಪಿ ತನ್ನ ಕಥೆಗಳನ್ನೇ ಬರೆಯುತ್ತಿದ್ದಳು, ಆರವ ಎಲ್ಲವನ್ನು ಕಲ್ಪಿಸಿಕೊಂಡು ಬರೆಯುತ್ತಿದ್ದ. ಒಂದು ನಿಜ ಮತ್ತೊಂದು ಕಲ್ಪನೆಯ ಬರಹಗಳು ಫೇಸ್ ಬುಕ್ಕಿನಲ್ಲಿ ಬಹಳ ಚರ್ಚೆಯಾಗುತ್ತಿತ್ತು.

ಲಿಪಿ ಇಷ್ಟಪಟ್ಟವರನ್ನ ಬಹಳ ಆಸ್ಥೆಯಿಂದ ಗಮನಿಸುತ್ತಿದ್ದ ಹುಡುಗಿ. ಇಬ್ಬರೂ ಫೇಸ್ ಬುಕ್ಕಿನಲ್ಲಿ ಸ್ನೇಹಿತರೆ, ಈಗಿನ ಕಾಲದಲ್ಲಿ ಫೇಸ್ ಬುಕ್ಕಿನಲ್ಲಿನ ಸ್ನೇಹಿತರು ಅಸಲಿಗೆ ಸಿಕ್ಕೇ ಇರೋಲ್ಲ, ಆದರೂ ಇಬ್ಬರಿಗೂ ತುಂಬಾ ಸಮಾನ ಅಭಿರುಚಿ ಇರುವ ಕಾರಣ ಸ್ನೇಹಿತರಾಗುತ್ತಾರೆ. ಇದು ಲಿಪಿ ಮತ್ತು ಆರವ್ ರ ವಿಚಾರದಲ್ಲೂ ಸತ್ಯವಾಗಿತ್ತು. ಅವನೆಲ್ಲೋ ಆಸ್ಟ್ರೇಲಿಯಾದಲ್ಲಿದ್ದ, ಇವಳು ಅಮೇರಿಕಾದಲ್ಲಿದ್ದಳು. ಈಗ ಇಬ್ಬರೂ ಬೆಂಗಳೂರಿಗೆ ಬಂದಿದ್ದಾರೆ. ಒಂದು ದಿವಸ ಭೇಟಿಯಾಗಬೇಕೆಂದು ಅವಳು ಬಯಸಿದ್ದಳು. ಅವನ ಕವನಗಳು ಅವಳಿಗೆ ಒಂದು ಥರಹ ಹುಚ್ಚು ಹಿಡಿಸುತ್ತಿದ್ದವು. ಅವಳು ಇಷ್ಟಿಷ್ಟುದ್ದ ಬರೆಯುವ ಕಥೆಯಲ್ಲದರ ಭಾವವನ್ನ ಅವನು ೪ ಸಾಲಿನಲ್ಲಿ ಇನ್ನೂ ಚೆನ್ನಾಗಿ ಬರೆಯುತ್ತಾನಲ್ಲ ಎಂದು ಅಂದುಕೊಳ್ಳುತ್ತಿದ್ದಳು ಲಿಪಿ.

ಬಸ್ಸಿನಲ್ಲಿ ಇವತ್ತು ಅವಳು ಆರವನನ್ನು ಕಂಡಿದ್ದಳು. ಒಂದೊಮ್ಮೆ ನೋಡಿ ಆಶ್ಚರ್ಯಪಡುತ್ತಾ ಫೇಸ್ಬುಕ್ಕಿನ ಫೋಟೋ ನೋಡಿ ಪದೇ ಪದೇ ಖಾತ್ರಿ ಪಡಿಸಿಕೊಳ್ಳುತ್ತಿದ್ದಳು. ಹೋಗಿ ಅವನನ್ನ ಮಾತಾಡಿಸಲೂ ಯೋಚಿಸಿದಳು. ಅವನೂ ನನ್ನ ಗೆಳೆಯನೇ, ಅವನೇ ಬಂದು ಮಾತಾಡಿಸಲಿ ಎಂಬ ಅಹಂ ಕೂಡ ಬಂತು. ಇದಿಷ್ಟು ಆಗುವಾಗ ಸಿಲ್ಕ್ ಬೋರ್ಡ್ ದಾಟಿದ್ದರು. ಅಲ್ಲೇ ಬೆಳ್ಳಂದೂರಿನಲ್ಲಿ ಇಳಿದರು ಒಂದಷ್ಟು ಜನ. ಇವರಿಬ್ಬರೂ ಇದ್ದರು. ನಡೆಯುತ್ತಿದ್ದಾಗ ಅವಳ ಹಿಂದೆಯೇ ಅವನೂ ಬರುತ್ತಿದ್ದ. ಒಂದೇ ಟೆಕ್ ಪಾರ್ಕ್ ಎಂದು ನಸು ನಕ್ಕಳು ಲಿಪಿ. ಯಾವಾಗದ್ರೂ ಸಿಗ್ತಾನೆ ಬಿಡು ಆ ಕಾಫಿ ಪಾಯಿಂಟಲ್ಲಿ ಎಂದು ಅವಳು ಕಾರ್ಡ್ ಸ್ವೈಪ್ ಮಾಡಿ ಆಫೀಸಿನ ಒಳಗೆ ಹೋದಳು. ಅಲ್ಲಿ ಬಂದ ಮೇಲೆ ಫೇಸ್ಬುಕ್, ವಾಟ್ಸ್ಯಾಪ್ ಎಲ್ಲ ನೋಡೋಕೆ ಪುರಸೊತ್ತು ಇರುತ್ತಿರಲ್ಲಿಲ್ಲವಾದ್ದರಿಂದ ಅವಳ ಕೆಲಸದಲ್ಲೇ ಮಗ್ನಳಾಗಬೇಕಾಯಿತು.

ಇತ್ತ ಆರವ ಹೊಸದಾಗಿ ಅವಳ ಟೆಕ್ ಪಾರ್ಕಿನಲ್ಲಿರುವ ಮತ್ತೊಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. ಆಸ್ಟ್ರೇಲಿಯಾದಲ್ಲಿ ಅವನ ಓದಿನ ಸಾಲ ತೀರಿಸಿ, ಒಂದಷ್ಟು ದುಡ್ಡು ಮಾಡಿಕೊಂಡು ಬಂದಿದ್ದ. ಈಗಿನ ಕಾಲದಲ್ಲಿ ಇದೆಲ್ಲಾ ಮಾಮೂಲಾಗಿತ್ತು. ಆಶ್ಚರ್ಯವೆಂದರೆ ಆರವ ಲಿಪಿಯನ್ನ ನೋಡಿದ್ದ. ಅಸಲಿಗೆ ಅವನೂ ಅವಳ ಫ್ಯಾನ್. ಮೊದಲ ದಿನ ಕೆಲಸ ಇಲ್ಲದಿದ್ದರಿಂದ ಅವಳಿಗೆ ಮೆಸ್ಸೆಂಜರಿನಲ್ಲಿ ಮೆಸೇಜ್ ಕಳಿಸಿದ. “ಹಾಯ್ ನಿಮ್ಮನ್ನ ಬಸ್ಸಿನಲ್ಲಿ ನೋಡಿದೆ” ಎಂದು. ಯಾವತ್ತೂ ಅವನು ಎರಡೆರಡು ಘಂಟೆಗೊಮ್ಮೆ ಮೆಸ್ಸೆಂಜರ್ ತೆಗೆದು ನೋಡಿರಲಿಲ್ಲ. ಅವಳು ಮೆಸೇಜ್ ಓದಿಲ್ಲ ಅನ್ನಿಸುತ್ತಿತ್ತು. ನೋಡಿ ನೋಡಿ ಸಾಕಾಯ್ತು. ಉತ್ತರವೇ ಇಲ್ಲ. ಸರಿ ಎಂದು ಅವಳ ಫೇಸ್ ಬುಕ್ಕಿನ ವಿವರವನ್ನ ಪೂರ್ತಿ ಜಾಲಾಡಿದ. ಓದಿರದಿದ್ದ ಲೇಖನವನ್ನೆಲ್ಲಾ ಓದಿದ, ಒಂದಷ್ಟು ಚಿತ್ರಗಳನ್ನ ಲೈಕಿಸಿದ. ನಂತರ ಇದು ಹೇಸಿಗೆ ಎಂದುಕೊಂಡು ಅನ್ಲೈಕ್ ಮಾಡಿದ. ಅವಳೆಲ್ಲೋ ವೆಗಾಸ್ ನಲ್ಲಿ ನಿಂತಿದ್ದ ಚಿತ್ರಗಳು, ಲಿಬರ್ಟಿ ಪ್ರತಿಮೆಯ ಮುಂದಿನವು ಎಲ್ಲಾ ಅವನಿಗೆ ಬಹಳ ಮುದ್ದಾಗಿ ಕಂಡಿದ್ದವು.

ಸಂಜೆ ಅವಳು ಮೆಸೇಜ್ ನೋಡಿದಾಗ ಆಗಲೇ ಆರು ಘಂಟೆಯಾಗಿತ್ತು. “ಸ್ಸಾರಿ, ನಾನು ಸಹ ನಿಮ್ಮನ್ನ ನೋಡಿದೆ, ಮಾತಾಡಿಸಲು ಹಿಂಜರಿದೆ, ನೀವು ಇದೇ ಬಿಲ್ಡಿಂಗಾ?” ಎಂದೆಲ್ಲಾ ಮೆಸೇಜ್ ಬರೆದು ಅಳಿಸಿದಳು. “ಊಪ್ಸ್ ಸ್ಸಾರಿ ತಡವಾಗಿ ಮೆಸೇಜ್ ಕಳಿಸಿದಕ್ಕೆ” ಎಂದು ಕಳಿಸಿ ಸುಮ್ಮನಾದಳು. ಅವನು “ಸಂಜೆ ಯಾವ ಬಸ್ಸಿಗೆ ಹೊರಡೋದು” ಎಂದು ಕೇಳಿದ. ಇವಳು ಸಮಯ ತಿಳಿಸಿದ ನಂತರ ಗೇಟಿನಲ್ಲಿ ಕಾಯುತ್ತಾ ಕೂತಿದ್ದ. “ನಮಸ್ಕಾರ ಮೇಡಮ್” ಎಂದು ಎಷ್ಟೋ ವರ್ಷಗಳ ಪರಿಚಯವಿದ್ದಂತೆ ಮಾತಾಡಿಸಿದ. ಎಷ್ಟೋ ವರ್ಷಗಳ ಫೇಸ್ ಬುಕ್ ಪರಿಚಯ ಇದ್ದಿತ್ತು. ಪರಸ್ಪರ ಅವರ ಜೀವನದಲ್ಲಿ ಏನಾಗುತ್ತಿದೆ ಎಂಬುದು ಗೊತ್ತಾಗಿತ್ತು. ಹೊಸ ಕಥೆ, ಕವನ, ಪುಸ್ತಕ, ಓಡಾಟ, ತಿರುಗಾಟ ಎಲ್ಲವೂ ಇತ್ತು. ಎಲ್ಲಾ ತಿಳಿದಿದ್ದರು ಒಬ್ಬರಿಗೊಬ್ಬರೂ ಬಹಳ ಗೊತ್ತಿಲ್ಲದವರಂತೆ ಪೋಸ್ ಕೊಡುತ್ತಿದ್ದರು. ಅಂತೂ ಮಾತಾಡುತ್ತಾ ಮಾತಾಡುತ್ತಾ ಬೆಳ್ಳಂದೂರಿನಿಂದ ಸಿಲ್ಕ್ ಬೋರ್ಡಿಗೆ ಮಳೆಯಲ್ಲಿ  ಘಂಟೆ ಕಳೆದ್ದದ್ದೇ ಗೊತ್ತಾಗಲಿಲ್ಲ.

ಅವನ ಹೊಸ ಕವನಗಳನ್ನ ಗೂಗಲ್ ಕೀಪಿನಲ್ಲಿ ಬರೆದಿದ್ದದ್ದನ್ನು ತೋರಿಸಿದ. ಅಲ್ಲೂ ಮಳೆ, ಆಗಸ, ಚಾರಣ, ಮುದ್ದು ಹುಡುಗಿ ಎಂದೆಲ್ಲಾ ಬರೆದ್ದದ್ದು ನೋಡಿ ಖುಷಿ ಪಟ್ಟಳು ಲಿಪಿ. ಅರೇ ನನ್ನ ಕನಸೇ ಇಲ್ಲಿ ಮುಂದುವರೆದು ಬಂದಿದೆಯೆಲ್ಲಾ ಎಂದು ಅನ್ನಿಸಿತ್ತು ಅವಳಿಗೆ ಸಹಜವಾಗಿ. ಆದರೆ ಮೊದಲ ಭೇಟಿಯಲ್ಲೇ ಇಷ್ಟೆಲ್ಲಾ ಜಡ್ಜ್ ಮಾಡಿ ಪೆದ್ದಾಗಿದ್ದು ಅವಳಿಗೆ ನೆನಪಿತ್ತು. ಸುಮ್ಮನೆ ಮಾತಾಡಿ ಒಂದೆರೆಡು  ಘಂಟೆಗಳ ಕಾಲ ಕಳೆಯೋಣ ಎಂದು ಸಹ ಅನಿಸಿತು. ಇಬ್ಬರೂ ವಿದೇಶದಲ್ಲಿ ಓದಿದ್ದರ ಪರಿಣಾಮ ಹುಡುಗ-ಹುಡುಗಿ ಆರಾಮಾಗಿ ಸ್ನೇಹಿತರಾಗಿರಬಹುದು ಎಂದೂ ತಿಳಿದಿತ್ತು. ಆರವ್ ಸಹ ಅವಳ ಪ್ರತಿಭೆ, ಶಿಸ್ತನ್ನ ನೋಡಿಯೇ ಮಾತಾಡಿಸಬೇಕೆಂದು ಹೋಗಿದ್ದ.

ಬಸ್ಸಿನಲ್ಲಿ ಇವತ್ತು ಅವಳು ಆರವನನ್ನು ಕಂಡಿದ್ದಳು. ಒಂದೊಮ್ಮೆ ನೋಡಿ ಆಶ್ಚರ್ಯಪಡುತ್ತಾ ಫೇಸ್ಬುಕ್ಕಿನ ಫೋಟೋ ನೋಡಿ ಪದೇ ಪದೇ ಖಾತ್ರಿ ಪಡಿಸಿಕೊಳ್ಳುತ್ತಿದ್ದಳು. ಹೋಗಿ ಅವನನ್ನ ಮಾತಾಡಿಸಲೂ ಯೋಚಿಸಿದಳು. ಅವನೂ ನನ್ನ ಗೆಳೆಯನೇ, ಅವನೇ ಬಂದು ಮಾತಾಡಿಸಲಿ ಎಂಬ ಅಹಂ ಕೂಡ ಬಂತು. ಇದಿಷ್ಟು ಆಗುವಾಗ ಸಿಲ್ಕ್ ಬೋರ್ಡ್ ದಾಟಿದ್ದರು. ಅಲ್ಲೇ ಬೆಳ್ಳಂದೂರಿನಲ್ಲಿ ಇಳಿದರು ಒಂದಷ್ಟು ಜನ. ಇವರಿಬ್ಬರೂ ಇದ್ದರು. ನಡೆಯುತ್ತಿದ್ದಾಗ ಅವಳ ಹಿಂದೆಯೇ ಅವನೂ ಬರುತ್ತಿದ್ದ. ಒಂದೇ ಟೆಕ್ ಪಾರ್ಕ್ ಎಂದು ನಸು ನಕ್ಕಳು ಲಿಪಿ. ಯಾವಾಗದ್ರೂ ಸಿಗ್ತಾನೆ ಬಿಡು ಆ ಕಾಫಿ ಪಾಯಿಂಟಲ್ಲಿ ಎಂದು ಅವಳು ಕಾರ್ಡ್ ಸ್ವೈಪ್ ಮಾಡಿ ಆಫೀಸಿನ ಒಳಗೆ ಹೋದಳು. ಅಲ್ಲಿ ಬಂದ ಮೇಲೆ ಫೇಸ್ಬುಕ್, ವಾಟ್ಸ್ಯಾಪ್ ಎಲ್ಲ ನೋಡೋಕೆ ಪುರಸೊತ್ತು ಇರುತ್ತಿರಲ್ಲಿಲ್ಲವಾದ್ದರಿಂದ ಅವಳ ಕೆಲಸದಲ್ಲೇ ಮಗ್ನಳಾಗಬೇಕಾಯಿತು.

ಹೀಗೆ ಒಂದು ವಾರ ಒಂದೇ ಸಮಯಕ್ಕೆ ಹೋಗೋದು ಬರೋದು, ಸಮಯ ಮಾಡಿಕೊಳ್ಳೋದು ಇವೆಲ್ಲಾ ನಡೆಯುತ್ತಿತ್ತು. ಒಂದು ದಿನ ಬಸ್ ಜಯದೇವ ಸಿಗ್ನಲ್ ಹತ್ತಿರ ಕೆಟ್ಟಿತು. ಜೋರು ಮಳೆ, ಯಾವ ಥರಹ ಎಂದರೆ ಯಾವ ಆಟೋ, ಕ್ಯಾಬ್ ಸಹ ಬರದಿದ್ದಷ್ಟು. ಇನ್ನು ಐದನೇ ಬ್ಲಾಕ್ ಗೆ ನಡೆದುಕೊಂಡೇ ಹೊರಡೋಕೆ ಶುರು ಮಾಡಿದರು. ಒಂದೇ ಛತ್ರಿಯಲ್ಲಿ. ಅಲ್ಲಿ ಅವನ ಕವನ ವಾಚನ ಶುರುವಾಯ್ತು.

ಮಳೆಯಾಗಮನಕೂ ಆರಿಲ್ಲದ ಜ್ವಾಲೆಯಾವುದಿದು
ಜಲಧಾರೆ ಬಳಿಯಿದ್ದರೂ ನೀಗಿಲ್ಲದ ದಾಹವಾವುದಿದು…
ಸಾಮೀಪ್ಯದ ಪುಣ್ಯವು ಮಳೆಗೋ ಕೊಡೆಗೋ,
ಬಳಿಯಿದ್ದರೂ ಕಾಡುವ ದೂರ ಯಾವುದಿದು…

ಆ ಮಳೆಯಲ್ಲಿ ಒಂದಿಷ್ಟು ಅಳುಕಿನಿಂದಲೇ ಹೇಳಿದ ಆರವ್. ತನ್ನ ಈ ಅಳುಕಿನ ಬಗ್ಗೆ ಅಂದು ಅವನಿಗೇ ಅಚ್ಚರಿಯಾಯಿತು. ಆರವ್ ಯಾವತ್ತೂ ತನಗೆ ಬೇಕಾಗಿರುವಂತೆ ಬರೆದವನು, ಬದುಕಿದವನು. ಆದರೆ ಈ ಹುಡುಗಿಯ ಸಾನಿಧ್ಯದಲ್ಲಿ ಇಂದೇನಾಗುತ್ತಿದೆ? ನಿಜಕ್ಕೂ ಅಚ್ಚರಿ! ಪುಟ್ಟ ಛತ್ರಿಯಡಿಯಲ್ಲಿ ಆರವನಿಗೆ ಅಂಟಿಕೊಂಡೂ ಅಂಟಿಕೊಂಡಿರದಿದ್ದ ಲಿಪಿ ಶಾಯರಿಯಂತಿದ್ದ ಈ ಆಶುಕವಿತೆಯನ್ನು ಕೇಳಿ ತನ್ನಷ್ಟಕ್ಕೆ ಪುಳಕಿತಳಾದಳು. ಮಳೆಯ ದನಿಯ ಹಿನ್ನೆಲೆಯೊಂದಿಗೆ ಬೆರೆತ ಆರವನ ದನಿಯು ಮೆಲುವಾಗಿ ಹಿತವಾಗಿತ್ತು. ”ಏನಂದೆ?”, ಎಂದು ಕೇಳಿಸಲಿಲ್ಲವೆಂಬಂತೆ ಉದ್ದೇಶಪೂರ್ವಕವಾಗಿಯೇ ಮತ್ತೊಮ್ಮೆ ಕೇಳಿದಳು ಲಿಪಿ. ಅವನು ಮತ್ತಷ್ಟು ಹತ್ತಿರಕ್ಕೆ ಬಂದು ಅವಳ ಕಿವಿಯಲ್ಲಿ ಆ ಸಾಲುಗಳನ್ನು ಪಿಸುಗುಟ್ಟಿದ. ತನ್ನ ಕಿವಿ ಸೋಕಿದ ಅವನ ಬಿಸಿಯುಸಿರಿನಿಂದ ಕವಿತೆಯ ಸಾಲುಗಳು ಮತ್ತಷ್ಟು ಮತ್ತನ್ನು ಪಡೆದಂತೆ ಅವಳಿಗೆ ಭಾಸವಾಯಿತು. ”ವ್ಹಾ ಶಾಯರ್ ವ್ಹಾ… ನಿಮ್ಮ ಅಂದಾಝ್ ಒಂದೇ ನನ್ನಂತಹ ಓದುಗರನ್ನು ಕವಿತೆಗಳತ್ತ ಕರೆತಂದಿದ್ದು”, ಎಂದು ನಗುತ್ತಾ ಹೇಳಿದಳು ಲಿಪಿ. ಅವಳ ಶುಭ್ರನಗುವಿನಿಂದ ಅವನ ಮನದಲ್ಲಿ ತಂಗಾಳಿ ಬೀಸಿದಂತಾಯಿತು.

ಆ ದಿನದ ನಂತರ ಇಬ್ಬರೂ ಭೇಟಿಯಾಗುವುದು ಹೆಚ್ಚಾಗುತ್ತಲೇ ಹೋಯಿತು. ಉಪಹಾರ ದರ್ಶಿನಿಯಲ್ಲೋ, ಕಲಾಕ್ಷೇತ್ರದಲ್ಲೋ, ಚಿತ್ರೋತ್ಸವದಲ್ಲೋ… ನೆಪಗಳಿಗೇನು ಕಮ್ಮಿ. ಕ್ರಮೇಣ ಆರವ್ ತನ್ನ ಜೀವನದ ಭಾಗವಾಗುತ್ತಿರುವಂತೆ ಈಗ ಲಿಪಿಗೆ ಭಾಸವಾಗತೊಡಗಿತ್ತು. ಹೊಸದಾಗಿ ಅಂಟಿಕೊಂಡ ಮಧುರ ಅಭ್ಯಾಸದಂತೆ. ಕನಸು ಕಾಣುವುದನ್ನೇ ಸಂಪೂರ್ಣವಾಗಿ ಮರೆತಿದ್ದ ಹುಡುಗಿಯೊಬ್ಬಳು ಈಗ ಹಗಲುಗನಸು ಕಾಣುತ್ತಿದ್ದಾಳೆಂದರೆ? ಲಿಪಿ ಬೆಚ್ಚಿಬಿದ್ದಿದ್ದು ಆಗಲೇ! ಇಂಥಾ ಭಾವನೆಗಳು ಅವಳಲ್ಲಿ ಮೂಡಿಸುವ ಚಂಡಮಾರುತವು ಅಂತಿಂಥದ್ದಲ್ಲ. ಆಗಲೇ ಸಾಕಷ್ಟು ಘಾಸಿಗೊಂಡ ಹೃದಯ ಬೇರೆ. ಅವಳೊಳಗಿನ ನೋವಿನ ತೀವ್ರತೆ ಎಷ್ಟೆಂದರೆ ಭಾವನೆಗಳೆಲ್ಲವೂ ಮರಗಟ್ಟುವಷ್ಟು. ‘ಇದೆಲ್ಲಾ ಬೇಕಾ ನಿನಗೆ?’, ಅಂದು ಕನ್ನಡಿಯೆದುರು ನಿಂತ ಲಿಪಿ ಮೆತ್ತಗೆ ತನ್ನ ಎರಡೂ ಕೆನ್ನೆಗಳನ್ನು ತಟ್ಟುತ್ತಾ ತನ್ನನ್ನು ತಾನೇ ಎಚ್ಚರಿಸುವವಳಂತೆ ಮಾತಾಡಿಕೊಂಡಳು. ಬುದ್ಧಿ ಮತ್ತು ಮನಸ್ಸಿನ ಈ ತಾಕಲಾಟವನ್ನು ಕಂಡು ಬೇಜಾರಾಯ್ತು ಎಂಬಂತೆ ಅವಳ ಕಣ್ಣುಗಳಲ್ಲಿದ್ದ ಹೊಳಪೀಗ ಒಂದಿಷ್ಟು ಕಮ್ಮಿಯಾಯಿತು. ‘You can’t fall in love… You can’t fall in love… damnit…’, ಎಂದು ಗೊಣಗಿಕೊಳ್ಳುತ್ತಾ ಹಗಲುಗನಸಿನ ಜಾತ್ರೆಯಿಂದ ನೈಜ ಜೀವನಕ್ಕೆ ಮತ್ತೊಮ್ಮೆ ಹೊರಬಂದಳು ಲಿಪಿ.

ಇತ್ತ ಆರವನ ಸ್ಥಿತಿಯೂ ಕೂಡ ಬಹುತೇಕ ಇಂಥದ್ದೇ. ಆದರೆ ಅಲೆಮಾರಿಯಂತಿದ್ದ ಆತನ ಹೃದಯಕ್ಕೀಗ ಗುರಿಯೊಂದು ಸಿಕ್ಕಿದಂತಾಗಿದೆ. ತನ್ನ ಜೀವಿತಕ್ಕೊಂದು ಕಾರಣವು ಸಿಕ್ಕಂತಾಗಿದೆ. ಕಲ್ಪನೆಯ ಲೋಕದಲ್ಲಿ ಮಿಂದೇಳುತ್ತಿದ್ದ, ಓದುಗರನ್ನೂ ಆ ಸುಂದರ ನಿರಾಕಾರ ಲೋಕಕ್ಕೆ ಕರೆದೊಯ್ಯುತ್ತಿದ್ದಂತಹ ಅವನ ಕವಿತೆ, ಕನಸುಗಳಿಗೀಗ ಲಿಪಿಯು ಆಕಾರವಾಗಿದ್ದಾಳೆ. ಅವನಲ್ಲೀಗ ತಾನು ಇಷ್ಟಪಟ್ಟಂತೆ ಬದುಕುವ ಆವೇಶವಿಲ್ಲ. ಏಕೆಂದರೆ ಅವನೀಗ ಒಬ್ಬಂಟಿಯಲ್ಲ. ಅದು ನಿಜಕ್ಕೂ ಸತ್ಯವೋ ಅಲ್ಲವೋ ಬೇರೆ ಮಾತು. ಆದರೆ ಅವನ ಮಟ್ಟಿಗಂತೂ ಅದು ಸತ್ಯ. ತನ್ನ ಸಾಂಗತ್ಯವನ್ನು ಇಷ್ಟಪಡುವ ಲಿಪಿಯೊಂದಿಗೆ ಈಗ ಜೀವನವಿಡೀ ನನ್ನೊಂದಿಗಿರು ಎಂದು ಹೇಳುವ ಕಾತರ ಅವನಿಗೀಗ. ಯಾವಾಗ ಹೇಳುವುದು, ಹೇಗೆ ಹೇಳುವುದು… ಹೀಗೆ ತಲೆಯಿಡೀ ವೇಳಾಪಟ್ಟಿಯದ್ದೇ ಚಾರ್ಟ್ ಗಳು. ಕೊನೆಗೂ ಜೈಪುರದ ತನ್ನ ಅಫೀಶಿಯಲ್ ಪ್ರವಾಸವನ್ನು ಮುಗಿಸಿ ಬಂದು ತನ್ನ ಭಾವನೆಗಳನ್ನು ಹೇಳೋಣವೆಂದು ಆರವ್ ನಿರ್ಧರಿಸಿದ್ದ. ಭೌತಿಕವಾಗಿ ಹತ್ತಿರವಿರದ ಈ ಒಂದು ವಾರದಲ್ಲಿ ಪ್ರೀತಿ ಮತ್ತಷ್ಟು ಮಡುಗಟ್ಟಲಿ ಎಂಬ ಲೆಕ್ಕಾಚಾರ ಅವನದ್ದು.

ಆ ಮಳೆಯಲ್ಲಿ ಒಂದಿಷ್ಟು ಅಳುಕಿನಿಂದಲೇ ಹೇಳಿದ ಆರವ್. ತನ್ನ ಈ ಅಳುಕಿನ ಬಗ್ಗೆ ಅಂದು ಅವನಿಗೇ ಅಚ್ಚರಿಯಾಯಿತು. ಆರವ್ ಯಾವತ್ತೂ ತನಗೆ ಬೇಕಾಗಿರುವಂತೆ ಬರೆದವನು, ಬದುಕಿದವನು. ಆದರೆ ಈ ಹುಡುಗಿಯ ಸಾನಿಧ್ಯದಲ್ಲಿ ಇಂದೇನಾಗುತ್ತಿದೆ? ನಿಜಕ್ಕೂ ಅಚ್ಚರಿ! ಪುಟ್ಟ ಛತ್ರಿಯಡಿಯಲ್ಲಿ ಆರವನಿಗೆ ಅಂಟಿಕೊಂಡೂ ಅಂಟಿಕೊಂಡಿರದಿದ್ದ ಲಿಪಿ ಶಾಯರಿಯಂತಿದ್ದ ಈ ಆಶುಕವಿತೆಯನ್ನು ಕೇಳಿ ತನ್ನಷ್ಟಕ್ಕೆ ಪುಳಕಿತಳಾದಳು. ಮಳೆಯ ದನಿಯ ಹಿನ್ನೆಲೆಯೊಂದಿಗೆ ಬೆರೆತ ಆರವನ ದನಿಯು ಮೆಲುವಾಗಿ ಹಿತವಾಗಿತ್ತು. ”ಏನಂದೆ?”, ಎಂದು ಕೇಳಿಸಲಿಲ್ಲವೆಂಬಂತೆ ಉದ್ದೇಶಪೂರ್ವಕವಾಗಿಯೇ ಮತ್ತೊಮ್ಮೆ ಕೇಳಿದಳು ಲಿಪಿ. ಅವನು ಮತ್ತಷ್ಟು ಹತ್ತಿರಕ್ಕೆ ಬಂದು ಅವಳ ಕಿವಿಯಲ್ಲಿ ಆ ಸಾಲುಗಳನ್ನು ಪಿಸುಗುಟ್ಟಿದ. ತನ್ನ ಕಿವಿ ಸೋಕಿದ ಅವನ ಬಿಸಿಯುಸಿರಿನಿಂದ ಕವಿತೆಯ ಸಾಲುಗಳು ಮತ್ತಷ್ಟು ಮತ್ತನ್ನು ಪಡೆದಂತೆ ಅವಳಿಗೆ ಭಾಸವಾಯಿತು. ”ವ್ಹಾ ಶಾಯರ್ ವ್ಹಾ… ನಿಮ್ಮ ಅಂದಾಝ್ ಒಂದೇ ನನ್ನಂತಹ ಓದುಗರನ್ನು ಕವಿತೆಗಳತ್ತ ಕರೆತಂದಿದ್ದು”, ಎಂದು ನಗುತ್ತಾ ಹೇಳಿದಳು ಲಿಪಿ. ಅವಳ ಶುಭ್ರನಗುವಿನಿಂದ ಅವನ ಮನದಲ್ಲಿ ತಂಗಾಳಿ ಬೀಸಿದಂತಾಯಿತು.

ಅಂತೂ ಔದ್ಯೋಗಿಕ ಪ್ರವಾಸವೆಂದು ಆರವ್ ಕೆಲದಿನಗಳಲ್ಲೇ ಜೈಪುರಕ್ಕೆ ಹಾರಿಬಿಟ್ಟಿದ್ದ. ಈ ದಿನಗಳಲ್ಲಿ ಇಬ್ಬರೂ ಕರೆ ಮಾಡಿ, ವಾಟ್ಸಾಪ್ ನಲ್ಲಿ ಬರೆದು ಬರೆದೇ ಹರಟಿದರು. ಜೀವನವಿಡೀ ಹಂಬಲಿಸಿ ನಂತರ ದೂರ ತಳ್ಳಿದ ಪ್ರೀತಿಯನ್ನು, ಅದರೆಡೆಗಿದ್ದ ತನ್ನೊಳಗಿನ ಅವ್ಯಕ್ತ ಆತಂಕವನ್ನು ಏಕಾಏಕಿ ತೋರಿಸಿ ಆರವನನ್ನು ನೋಯಿಸುವ ಉದ್ದೇಶವು ಲಿಪಿಗಿರಲಿಲ್ಲವಾದ್ದರಿಂದ ಅಂಥದ್ದೇನನ್ನೂ ಅವಳು ತೋರಿಸಿಕೊಳ್ಳಲಿಲ್ಲ. ಅತ್ತ ಆರವ್ ಶೀಘ್ರದಲ್ಲೇ ಮಾಡಬೇಕಾಗಿರುವ ತನ್ನ ಪ್ರೇಮನಿವೇದನೆಗಾಗಿ ಸಿದ್ಧನಾಗತೊಡಗಿದ್ದ. ಆ ನಿಮಿಷಗಳು ಆದಷ್ಟು ಬೇಗ ಬರಲಿ ಎಂದು ಕಾತರದಿಂದ ಕಾಯುತ್ತಿದ್ದ ಅವನ ಮನಸ್ಸಿಗೆ ದಿನಗಳು ಸ್ಲೋ ಮೋಷನ್ನಿನಲ್ಲಿ ಚಲಿಸುತ್ತಿರುವಂತೆ ಭಾಸವಾಗುತ್ತಿದ್ದವು.
ಹೀಗೆ ನೋಡನೋಡುತ್ತಲೇ ಹತ್ತು ದಿನಗಳು ಕಳೆದಿದ್ದವು. ಬೆಂಗಳೂರಿಗೆ ಮರಳಿದ್ದ ಆರವ್ ಲಿಪಿಯನ್ನು ಪ್ರಕೃತಿಯ ಮಡಿಲಿನಂತಿದ್ದ ಒಂದು ಸುಂದರವಾದ ಜಾಗಕ್ಕೆ ಕರೆದುಕೊಂಡು ಹೋದ. ”ಬಹಳ ದಿನಗಳಾಯಿತು ಸೂರ್ಯಾಸ್ತವನ್ನು ನೋಡಿ”, ಎಂದಿದ್ದ ಆರವನ ಮಾತಿಗೆ ಲಿಪಿ ಕೂಡ ಖುಷಿಯಿಂದಲೇ ಹೊರಟಿದ್ದಳು. ಆದರೆ ಆರವನ ಬಗ್ಗೆ ತನಗಿದ್ದ ಸಂದೇಹವು ಇಂದು ನಿಜವಾಗಲಿದೆಯೆಂಬ ಸುಳಿವಾದರೂ ಅವಳಿಗೆಲ್ಲಿತ್ತು!

ನಿನ್ನ ಸತ್ಯಗಳೊಂದಿಗೆ ನನಗೆ ಪ್ರೀತಿಯಾಗಿದೆ
ನಿನ್ನ ಭ್ರಮೆಗಳೊಂದಿಗೆ ನನಗೆ ಪ್ರೀತಿಯಾಗಿದೆ…
ಹುದ್ದೆ, ಸೋಗು, ಹಣೆಪಟ್ಟಿಗಳ ಸುಟ್ಟಿರುವೆನಿಂದು,
ನಿನ್ನೊಳಗಿನ ಹೆಣ್ಣಿನೊಂದಿಗಷ್ಟೇ ನನಗೆ ಪ್ರೀತಿಯಾಗಿದೆ…

ತನ್ನ ಮನದಾಳದ ಮಾತನ್ನು ಆ ಇಳಿಸಂಜೆಯಲ್ಲಿ ಆರವ್ ಹೇಳಿಯೇಬಿಟ್ಟಿದ್ದ. ಅಂದು ಲಿಪಿ ಒಳಗೊಳಗೇ ಕುಸಿದುಹೋದಳು. ತಾನು ಆರವನನ್ನು ಇಷ್ಟಪಟ್ಟಿಲ್ಲ ಎಂದರೆ ಅದು ಸ್ವತಃ ತನಗೇ ಹೇಳಿಕೊಳ್ಳುವ ಸುಳ್ಳೆಂಬುದು ಲಿಪಿಗೆ ತಿಳಿದಿತ್ತು. ಆದರೆ ಕೆಲ ಸುಳ್ಳುಗಳು ಜೀವನದ ಮುಳ್ಳಿನ ಹಾದಿಗಳಲ್ಲಿ ನಡೆಯುವಾಗ ರಕ್ಷಣಾಕವಚದಂತೆ ಉಪಯೋಗಕ್ಕೆ ಬರುತ್ತವೆ. ಆರವನ ಸಾಲುಗಳನ್ನು ಕೇಳಿ ಕಣ್ತುಂಬಿ ಬಂದರೂ ಅದು ಸಂತಸದ್ದೋ ಅಥವಾ ದುಃಖದ್ದೋ ಎಂಬ ಗೊಂದಲಕ್ಕೆ ಬಿದ್ದು ಮತ್ತಷ್ಟು ಕುಗ್ಗಿಹೋದಳು ಲಿಪಿ. ಇತ್ತ ಮಂಜಾಗಿದ್ದ ಅವಳ ಕಣ್ಣುಗಳನ್ನು ನೋಡಿ ನಿರಾಶೆಯಾಗಿದ್ದು ಆರವನಿಗೆ. ಅವನ ನಿರೀಕ್ಷೆ, ಲೆಕ್ಕಾಚಾರಗಳಿಗೆ ವಿರುದ್ಧವಾಗಿ ಎಂಥದ್ದೋ ಬೇರೆಯದೇ ಒಂದು ನಡೆದಿತ್ತು ಅಲ್ಲಿ. ಹೀಗಾಗಿ ಇದನ್ನು ಅರಗಿಸಿಕೊಳ್ಳಲಾಗದೆ ಹತಾಶನಾಗಿದ್ದ ಆರವ್. ಕಣ್ತುಂಬಿ, ಗಂಟಲು ಕಟ್ಟಿ, ಮುಂದೇನೂ ಹೇಳಲಾರದೆ ಲಿಪಿ ಅಲ್ಲಿಂದ ಎದ್ದು ಹೋಗಿದ್ದಳು. ಅವಳ ಮೌನವೇ ಆರವನಿಗೆ ಉತ್ತರವನ್ನು ನೀಡಿತ್ತು.
**********
14 ಫೆಬ್ರವರಿ 2018, ವ್ಯಾಲೆಂಟೈನ್ಸ್ ದಿನ.
ಈ ದಿನಾಂಕವನ್ನು ನೋಡುತ್ತಾ ಸುಮ್ಮನೆ ನಿಟ್ಟುಸಿರಿಟ್ಟಳು ಲಿಪಿ. ಅಂದಾಜು ಮೂರು ವರ್ಷಗಳ ಹಿಂದೆ ಆರವ್ ಇಲ್ಲಿದ್ದ. ಇಬ್ಬರೂ ಜೊತೆಯಾಗಿ ಎಲ್ಲಾದರೂ ಹೋಗಬಹುದಿತ್ತು. ತನ್ನ ಲೇಖನಗಳ ಬಗ್ಗೆ, ಅವನ ಕವಿತೆಗಳ ಬಗ್ಗೆ ಹರಟೆ ಹೊಡೆಯಬಹುದಿತ್ತು. ತಾನು ಅವನ ಪ್ರೀತಿಯನ್ನು ನಿರಾಕರಿಸಿದ್ದು ಸರಿಯೇ ಎಂದು ಸಾಕಷ್ಟು ಬಾರಿ ಯೋಚಿಸಿದ್ದಾಳೆ ಲಿಪಿ. ಇತ್ತ ಪ್ರೇಮಿಗಳ ದಿನಕ್ಕೆ ಬೆಂಗಳೂರು ನಗರಕ್ಕೆ ನಗರವೇ ಅಣಿಯಾಗುತ್ತಿದ್ದರೆ ಇವಳ ಮನದಲ್ಲಿ ಮಾತ್ರ ನೀರವ ಮೌನ. ಆರವನಿಗೆ ನಾನು ನೆನಪಿರಬಹುದೇ? ಈ ದಿನ ಒಮ್ಮೆಯಾದರೂ ಅವನು ನನ್ನನ್ನು ನೆನೆಸಿಕೊಳ್ಳಬಹುದೇ? ಎಂದೆಲ್ಲಾ ಹರೆಯದ ಪ್ರೇಮಿಯಂತೆ ಸುಮ್ಮನೆ ಯೋಚಿಸುತ್ತಿದ್ದಾಳವಳು.

ಸಾಯದ ಸಾಲುಗಳಂತೆ ಕಾಯುತಿರುವೆ ನಾ
ಮಾಗದ ನೆನಪುಗಳಂತೆ ಕಾಯಲಿರುವೆ ನಾ…
ಆರಾಧನೆಯ ಪಂಕ್ತಿಗಳಲ್ಲೇ ಸವೆದುಹೋಗಲಿ ಜೀವನ,
ಗಾಲಿಬನ ಗುಡಿಸಲಿನಲ್ಲೇ ಲೀನವಾಗುವೆ ನಾ…

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಇತ್ತ ಆರವನ ಸ್ಥಿತಿಯೂ ಕೂಡ ಬಹುತೇಕ ಇಂಥದ್ದೇ. ಆದರೆ ಅಲೆಮಾರಿಯಂತಿದ್ದ ಆತನ ಹೃದಯಕ್ಕೀಗ ಗುರಿಯೊಂದು ಸಿಕ್ಕಿದಂತಾಗಿದೆ. ತನ್ನ ಜೀವಿತಕ್ಕೊಂದು ಕಾರಣವು ಸಿಕ್ಕಂತಾಗಿದೆ. ಕಲ್ಪನೆಯ ಲೋಕದಲ್ಲಿ ಮಿಂದೇಳುತ್ತಿದ್ದ, ಓದುಗರನ್ನೂ ಆ ಸುಂದರ ನಿರಾಕಾರ ಲೋಕಕ್ಕೆ ಕರೆದೊಯ್ಯುತ್ತಿದ್ದಂತಹ ಅವನ ಕವಿತೆ, ಕನಸುಗಳಿಗೀಗ ಲಿಪಿಯು ಆಕಾರವಾಗಿದ್ದಾಳೆ. ಅವನಲ್ಲೀಗ ತಾನು ಇಷ್ಟಪಟ್ಟಂತೆ ಬದುಕುವ ಆವೇಶವಿಲ್ಲ. ಏಕೆಂದರೆ ಅವನೀಗ ಒಬ್ಬಂಟಿಯಲ್ಲ. ಅದು ನಿಜಕ್ಕೂ ಸತ್ಯವೋ ಅಲ್ಲವೋ ಬೇರೆ ಮಾತು. ಆದರೆ ಅವನ ಮಟ್ಟಿಗಂತೂ ಅದು ಸತ್ಯ. ತನ್ನ ಸಾಂಗತ್ಯವನ್ನು ಇಷ್ಟಪಡುವ ಲಿಪಿಯೊಂದಿಗೆ ಈಗ ಜೀವನವಿಡೀ ನನ್ನೊಂದಿಗಿರು ಎಂದು ಹೇಳುವ ಕಾತರ ಅವನಿಗೀಗ. ಯಾವಾಗ ಹೇಳುವುದು, ಹೇಗೆ ಹೇಳುವುದು… ಹೀಗೆ ತಲೆಯಿಡೀ ವೇಳಾಪಟ್ಟಿಯದ್ದೇ ಚಾರ್ಟ್ಗಳು. ಕೊನೆಗೂ ಜೈಪುರದ ತನ್ನ ಅಫೀಶಿಯಲ್ ಪ್ರವಾಸವನ್ನು ಮುಗಿಸಿ ಬಂದು ತನ್ನ ಭಾವನೆಗಳನ್ನು ಹೇಳೋಣವೆಂದು ಆರವ್ ನಿರ್ಧರಿಸಿದ್ದ.

ಪತ್ರದ ಮೇಲಿನ ಆ ಸಾಲುಗಳ ಮೇಲೆ ಕೈಯಾಡಿಸಿದಳು ಲಿಪಿ. ಅದು ಆರವನ ಕೊನೆಯ ಪತ್ರವಾಗಿತ್ತು, ಅವಳಿಗಾಗಿ ಬರೆದ ಕೊನೆಯ ಸಾಲುಗಳು. ವರ್ಷಗಳು ಕಳೆದು ಕೊಂಚ ಶಿಥಿಲವಾದ ಪತ್ರವು ಹಳೆಯ ವೈನ್ ನಂತೆ ಮತ್ತಷ್ಟು ರುಚಿಸುತ್ತಿತ್ತು. ತನಗೇಕೆ ಈತ ಇನ್ನೂ ಕಾಡುತ್ತಿದ್ದಾನೆ? ಪ್ರೀತಿಯೆಂದರೆ ಇದೇನಾ? ಹೀಗೆ ಬಹಳಷ್ಟು ಒಗಟಿನಂತಹ ಪ್ರಶ್ನೆಗಳು. ಆದರೆ ಯಾವತ್ತೂ ಅವುಗಳಿಗೆ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನವಾಗಲಿ, ಆರವನನ್ನು ಮತ್ತೆ ಭೇಟಿ ಮಾಡುವ ಪ್ರಯತ್ನವನ್ನಾಗಲಿ ಅವಳು ಮಾಡಿರಲಿಲ್ಲ. ತನ್ನ ನಿರಾಕರಣೆಯ ನಂತರ ಕೆಲ ತಿಂಗಳುಗಳ ಕಾಲ ಆರವ್ ಉತ್ತರಭಾರತಕ್ಕೆ ಹೋಗಿ ನೆಲೆಸಿದ್ದ ಬಗ್ಗೆ ಅವಳಿಗೆ ಮಾಹಿತಿಯಿತ್ತು. ಆದರೆ ಮುಂದೆ ಮತ್ತೆ ಬೆಂಗಳೂರಿಗೇ ಮರಳಿದ್ದ ಆರವ್. ಹಾಗಿದ್ದರೆ ಲಿಪಿಗೆ ಆರವನನ್ನು ಹೋಗಿ ಮಾತನಾಡಿಸಲೇನು ಧಾಡಿ ಅನ್ನುತ್ತೀರಾ? ಇದಕ್ಕೂ ಕಾರಣಗಳಿವೆ. ಈ ಮೂರು ವರ್ಷಗಳಲ್ಲಿ ಕಾಲ ಬದಲಾಗಿದೆ, ಸಂದರ್ಭವೂ ಬದಲಾಗಿದೆ. ಇವರಿಬ್ಬರ ಪ್ರೀತಿ? ಅದನ್ನು ಮಾತ್ರ ಕಾಲವೇ ಹೇಳಬೇಕು.

ಲಿಪಿ ಈಗ ಯಾವುದೋ ಡಿಜಿ ಜಾಲತಾಣದಲ್ಲಿ ಬರೆಯುವ ಕಾಂಜಿಪೀಂಜಿ ಲೇಖಕಿಯಲ್ಲ. ಇವಳ ಹೆಸರಿನಲ್ಲೀಗ ಪುಸ್ತಕಗಳು ಹೊರಬಂದಿವೆ. ಓದುಗರ ಮನದಲ್ಲಿ ಅವಳಿಗೊಂದು ಬಲು ಎತ್ತರದ ಸ್ಥಾನವಿದೆ. ಇತ್ತ ಆರವ್ ಕೂಡ ಕವಿಯಾಗಿ ಸಾಕಷ್ಟು ಎತ್ತರವನ್ನು ತಲುಪಿದ್ದಾನೆ. ಅವನ ಬತ್ತಳಿಕೆಯಲ್ಲೀಗ ವಿರಹಗೀತೆಗಳೇ ಏಕೆ ಹೆಚ್ಚಿದೆಯೆಂಬುದು ಬಹುಷಃ ಲಿಪಿಯನ್ನು ಹೊರತುಪಡಿಸಿದರೆ ಆರವನ ಕೆಲ ಆಪ್ತರಿಗಷ್ಟೇ ಗೊತ್ತು. ಕಳೆದೆರಡು ವರ್ಷಗಳಿಂದ ಅವನು ಬರೆದ ಪ್ಯಾಥೋ ಗೀತೆಗಳು ಜನಪ್ರಿಯವಾಗಿ ಸಿನೆಮಾ ಲೋಕವನ್ನೂ ತಲುಪಿವೆ. ಅಭಿಮಾನಿಗಳು ಅವನಿಗೆ `ವಿರಹಕವಿ’ ಎಂಬ ಬಿರುದನ್ನು ಬೇರೆ ನೀಡಿದ್ದಾರೆ. ಹೀಗೆ ಲಿಪಿ, ಆರವ್ ಇಬ್ಬರೂ ಈಗ ಖ್ಯಾತಿಯ ರುಚಿಯನ್ನು ಕಂಡವರು. ಸಾಹಿತ್ಯದ ವಲಯದಲ್ಲಿ ಸಾಕಷ್ಟು ಚರ್ಚೆಯಾಗುವವರು. ಅದರಲ್ಲೂ ಯುವಸಮೂಹದಿಂದ ಸಾಕಷ್ಟು ಪ್ರೀತಿ, ಅಭಿಮಾನಿಗಳನ್ನು ಗಳಿಸಿಕೊಂಡವರು. ಹೀಗಾಗಿ ಇಬ್ಬರೂ ಸಾಹಿತ್ಯದ ಹೊರತಾಗಿ ಬೇರೆ ಕಾರಣಗಳಿಂದಾಗಿ ಸುದ್ದಿಯಾಗುವ ಆಸಕ್ತಿಯನ್ನು ಹೊಂದಿದವರಂತೆ ಇರಲಿಲ್ಲ. ಆಗೊಮ್ಮೆ ಈಗೊಮ್ಮೆ ಸಾಹಿತ್ಯೋತ್ಸವಗಳಲ್ಲಿ, ಚಿತ್ರೋತ್ಸವಗಳಲ್ಲಿ ಎಡತಾಕಿದರೂ, ವೇದಿಕೆಗಳಲ್ಲಿ ಮುಖಾಮುಖಿಯಾದರೂ ಸೌಜನ್ಯದ ಹಾಯ್-ಹಲೋಗಳು ಇದ್ದವೇ ಹೊರತು ಖಾಸಗಿಯಾಗಿ ಸಂಪರ್ಕವನ್ನು ಇಬ್ಬರೂ ಉಳಿಸಿಕೊಂಡಿರಲಿಲ್ಲ. ಇಬ್ಬರೂ ನಿಜಕ್ಕೂ ಇದನ್ನೇ ಬಯಸಿದ್ದರೋ? ಗೊತ್ತಿಲ್ಲ! ಆದರೆ ಸದ್ಯದ ಕಥೆಯಂತೂ ಹಾಗಿತ್ತು.

ಇರಲಿ. ಅದೇನೇ ಆದರೂ ಕಾಲದೊಂದಿಗೆ ಜನರೂ ಬದಲಾಗುತ್ತಾರೆ. ”ಆದದ್ದಾಯಿತು… ಇನ್ನಾದರೂ ಯಾಕೆ ಸಂದರ್ಭಗಳು ಬದಲಾಗಬಾರದು?”, ಎಂದು ಕೇಳಿದ್ದಳು ಲಿಪಿಯ ಆಪ್ತ ಗೆಳತಿ ಸೋಫಿಯಾ. ಯಶಸ್ಸು ದಕ್ಕಿದ್ದರೂ ಲಿಪಿಯೊಳಗಿರುವ ಖಾಲಿತನವನ್ನು ಅರ್ಥೈಸಿಕೊಳ್ಳಲಾರದಷ್ಟು ಸಂವೇದನಾರಹಿತಳಲ್ಲ ಸೋಫಿ. ಲಿಪಿಯ ಮೊಟ್ಟಮೊದಲ ಪ್ರೀತಿ, ಪ್ರೇಮವೈಫಲ್ಯ, ಆಘಾತ, ಸೋಲುಗಳಿಂದ ಹಿಡಿದು ಅಂಕಣ, ಆರವ್, ಕವಿತೆ ಮತ್ತು ಇತ್ತೀಚಿನ ಯಶಸ್ಸಿನವರೆಗೂ ಸೋಫಿಗೆ ಎಲ್ಲವೂ ಗೊತ್ತು. ಆರವ್ ಎಂಬ ಯಶಸ್ವಿ ವಿರಹಕವಿ, ಗೀತರಚನಾಕಾರನ ಸೃಷ್ಟಿಯೊಳಗಿದ್ದ ನಿಜವಾದ ಆತ್ಮವು ಅವಳಿಗೆ ಕಂಡಿದ್ದು ಲಿಪಿ ಇವೆಲ್ಲವನ್ನೂ ಅವಳಿಗೆ ಹೇಳಿದ ನಂತರವೇ. ಅಂದಿನಿಂದ ತನ್ನ ಮ್ಯೂಸಿಕ್ ಪ್ಲೇ-ಲಿಸ್ಟ್ ನಲ್ಲಿ ಆರವನ ಹಾಡುಗಳನ್ನೇ ತುಂಬಿಕೊಂಡು ಅವನನ್ನು ಮತ್ತಷ್ಟು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದಾಳೆ ಸೋಫಿ. ಗುಟ್ಟಾಗಿ ಲಿಪಿ ಕೂಡ ಅದನ್ನೇ ಮಾಡುತ್ತಿದ್ದಾಳೆ ಎಂಬ ಬಲವಾದ ಸಂದೇಹ ಮತ್ತು ನಂಬಿಕೆ ಎರಡೂ ಅವಳಿಗೆ.

ಇನ್ನೂ ನಿನ್ನ ಹಾದಿ ಕಾಯುತಿರುವ
ಹುಚ್ಚುಹೃದಯಕೇನು ಹೇಳಲಿ ನಾ…
ನೀನಿಲ್ಲವೆಂಬ ಸತ್ಯವನು ಇಂದು,
ಸುಂದರ ಸುಳ್ಳಿನಂತೆ ಹೇಗೆ ಹೇಳಲಿ ನಾ…

ಪತ್ರದ ಮೇಲಿನ ಆ ಸಾಲುಗಳ ಮೇಲೆ ಕೈಯಾಡಿಸಿದಳು ಲಿಪಿ. ಅದು ಆರವನ ಕೊನೆಯ ಪತ್ರವಾಗಿತ್ತು, ಅವಳಿಗಾಗಿ ಬರೆದ ಕೊನೆಯ ಸಾಲುಗಳು. ವರ್ಷಗಳು ಕಳೆದು ಕೊಂಚ ಶಿಥಿಲವಾದ ಪತ್ರವು ಹಳೆಯ ವೈನ್ ನಂತೆ ಮತ್ತಷ್ಟು ರುಚಿಸುತ್ತಿತ್ತು. ತನಗೇಕೆ ಈತ ಇನ್ನೂ ಕಾಡುತ್ತಿದ್ದಾನೆ? ಪ್ರೀತಿಯೆಂದರೆ ಇದೇನಾ? ಹೀಗೆ ಬಹಳಷ್ಟು ಒಗಟಿನಂತಹ ಪ್ರಶ್ನೆಗಳು. ಆದರೆ ಯಾವತ್ತೂ ಅವುಗಳಿಗೆ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನವಾಗಲಿ, ಆರವನನ್ನು ಮತ್ತೆ ಭೇಟಿ ಮಾಡುವ ಪ್ರಯತ್ನವನ್ನಾಗಲಿ ಅವಳು ಮಾಡಿರಲಿಲ್ಲ. ತನ್ನ ನಿರಾಕರಣೆಯ ನಂತರ ಕೆಲ ತಿಂಗಳುಗಳ ಕಾಲ ಆರವ್ ಉತ್ತರಭಾರತಕ್ಕೆ ಹೋಗಿ ನೆಲೆಸಿದ್ದ ಬಗ್ಗೆ ಅವಳಿಗೆ ಮಾಹಿತಿಯಿತ್ತು. ಆದರೆ ಮುಂದೆ ಮತ್ತೆ ಬೆಂಗಳೂರಿಗೇ ಮರಳಿದ್ದ ಆರವ್. ಹಾಗಿದ್ದರೆ ಲಿಪಿಗೆ ಆರವನನ್ನು ಹೋಗಿ ಮಾತನಾಡಿಸಲೇನು ಧಾಡಿ ಅನ್ನುತ್ತೀರಾ? ಇದಕ್ಕೂ ಕಾರಣಗಳಿವೆ. ಈ ಮೂರು ವರ್ಷಗಳಲ್ಲಿ ಕಾಲ ಬದಲಾಗಿದೆ, ಸಂದರ್ಭವೂ ಬದಲಾಗಿದೆ.

”ನೋಡು… ಹೇಗೆ ಬರೆದಿದ್ದಾನೆ… ರಿಯಲೀ, ಕಾಡುವ ಸಾಲುಗಳಿವು”, ಕಣ್ಣರಳಿಸುತ್ತಾ ಹೇಳಿದಳು ಸೋಫಿ. ಅವಳು ಹೀಗಂದಾಗಲೆಲ್ಲಾ ಲಿಪಿ ಸುಮ್ಮನೆ ಮುಗುಳ್ನಗುತ್ತಾಳೆ. ಆದರೆ ಮತ್ತೊಮ್ಮೆ ಆರವನನ್ನು ಸೇರುವ ಯೋಚನೆಯು ಅವಳಿಗೆ ಅಷ್ಟಾಗಿ ಕೆಟ್ಟ ಐಡಿಯಾದಂತೆಯೂ ಕಾಣುತ್ತಿಲ್ಲ. ಇಬ್ಬರೂ ಈ ಪಯಣದಲ್ಲಿ ಸಾಕಷ್ಟು ದೂರ ನಡೆದು ಬಂದಿದ್ದಾರೆ. ಯಶಸ್ಸು ಲಿಪಿಯಲ್ಲಿ ಧೈರ್ಯ, ಆತ್ಮವಿಶ್ವಾಸಗಳನ್ನು ತುಂಬಿದೆ. ವೈಫಲ್ಯ, ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕೊಟ್ಟಿದೆ. ಆರವನ ಬಗ್ಗೆ ಗೊತ್ತಿಲ್ಲ. ಆದರೆ ಕಾಲವು ಅವನ ಬಗೆಗಿನ ತನ್ನ ಭಾವನೆಗಳನ್ನು ಒಂದಿಷ್ಟೂ ಅಳಿಸಿಹಾಕಿಲ್ಲ ಎಂಬ ಸತ್ಯವು ಲಿಪಿಗೆ ಚೆನ್ನಾಗಿ ಗೊತ್ತಿದೆ. ಅದು ಬೇರೇನೋ ಆಗಿದ್ದರೆ ಇಷ್ಟು ಹೊತ್ತಿಗೆ ನಾಶವಾಗಬೇಕಿತ್ತು. ಆದರೆ ಕ್ರಮೇಣ ಆ ಅನುಭೂತಿಯು ಅವಳಲ್ಲಿ ಮತ್ತಷ್ಟು ತೀವ್ರವಾಗುತ್ತಾ ಬಂದಿದೆ. ”ಜೀವನಕ್ಕೆ ಎರಡನೇ ಅವಕಾಶವನ್ನು ನೀಡುವುದರಲ್ಲಿ ತಪ್ಪೇನಿದೆ?”, ಎಂದು ತನ್ನ ಅಂಕಣವೊಂದರಲ್ಲಿ ಸ್ವತಃ ಬರೆದಿದ್ದಳು ಲಿಪಿ. ಹಾಗಿರುವಾಗ ವಿನಾಕಾರಣ ತನ್ನನ್ನೇ ತಾನು ದಂಡಿಸಿಕೊಳ್ಳುವ ಈ ಹುಚ್ಚಾಟವೇಕೆ?

ಕೆಲವು ಸಂಬಂಧಗಳು ಒಂದು ಹಂತದ ನಂತರ ಸರಿಯಾಗಲಾರದಷ್ಟು ವಿರೂಪವಾಗಿಬಿಡುತ್ತವೆ. ರಿಪೇರಿಯಾಗಲು ಕಾಲ ಮಿಂಚಿಹೋಯಿತು ಅನ್ನುವಂತಿರುತ್ತವೆ. ಆದರೆ ಆರವನೊಂದಿಗಿನ ಲಿಪಿಯ ಸಂಬಂಧವು ಯಾವ ಹಂತವನ್ನು ತಲುಪಿತ್ತು ಎಂಬ ಬಗ್ಗೆ ಲಿಪಿಗಂತೂ ಇನ್ನೂ ಸ್ಪಷ್ಟವಾದ ನೋಟವಿರಲಿಲ್ಲ. ಲಿಪಿಯ ಮನವು ಒಳಗೊಳಗೇ ಆರವನೊಂದಿಗೆ ಆತ್ಮಸಾಂಗತ್ಯವನ್ನು ಬಯಸುತ್ತಿದ್ದುದೇನೋ ಸರಿ. ಆದರೆ ಅದು ನಿಜಕ್ಕೂ ಸಾಧ್ಯವೇ? ಇನ್ನು ಇದಕ್ಕೆ ಉತ್ತರವು ಸಿಗಬೇಕಿದ್ದರೆ ಮತ್ತೆ ಈ ಸಂಬಂಧಗಳ ಸುಳಿಯಲ್ಲಿ ಬೀಳಲೇಬೇಕು. ಲಿಪಿಯ ಬಳಿ ಸದ್ಯ ಬೇರೆ ಆಯ್ಕೆಗಳಿಲ್ಲ. ಆದರೆ ಅದೃಷ್ಟವಶಾತ್ ಮೊದಲಿನಷ್ಟು ಅಭದ್ರತೆ, ಆತಂಕಗಳೂ ಅವಳಲ್ಲಿಲ್ಲ. ಕೊನೆಗೂ ಅವಳನ್ನು ಮುನ್ನಡೆಸಲು ಪ್ರೇರಣೆಯಾಗಿದ್ದ ಅಂಶವೆಂದರೆ ಇವುಗಳೇ. ಅಂತೂ ಆರಂಭವಾಗಿದ್ದ ಈ ಕಥೆಯನ್ನು ಸುಖಾಂತ್ಯಗೊಳಿಸಲು, ಒಂದೇ ಮಹಾನಗರದಲ್ಲಿದ್ದರೂ ಸಪ್ತಸಾಗರದಾಚೆಗಿರುವಂತೆ ಬದುಕುತ್ತಿರುವ ಆರವನ ತಲಾಶೆಗೆ ಲಿಪಿ ಹೊರಟಿದ್ದು ಹೀಗೆ.
*********

”ಎಲ್ಲಿ ಹೋಗಿದ್ರಿ ನೀವು? ನಿಮ್ಮನ್ನು ನಾನೇ ಭೇಟಿಯಾಗೋಣವೆಂದು ಮನೆಯವರೆಗೂ ಬಂದಿದ್ದೆ. ಆಗ ನೀವಲ್ಲಿರಲಿಲ್ಲ. ಈಗ ಇಲ್ಲೇ ಬಂದು ನಿಂತಿದ್ದೀರಿ. ಅಂತೂ ಬಂದಿರಲ್ಲ, ಅದೇ ಸಂತೋಷ”, ಎಂದು ಲಿಪಿಗೆ ಬಾಯ್ತೆರೆಯುವ ಅವಕಾಶವನ್ನೇ ನೀಡದೆ ಮಾತನಾಡುತ್ತಾ ಹೋದರು ಸಾಹಿಲ್. ಸಾಹಿಲನ ಮಾತಿಗೆ ಕಿವಿಯಾಗುತ್ತಾ ‘ಇದೇನಪ್ಪಾ, ಅನಿರೀಕ್ಷಿತ ಅಚ್ಚರಿಗಳು ಬೆನ್ನುಬೆನ್ನಿಗೇ ಬರುತ್ತಿವೆ’ ಎಂದು ಒಳಗೊಳಗೇ ಲೆಕ್ಕಹಾಕಿದಳು ಲಿಪಿ. ಮೂರು ವರ್ಷಗಳ ನಂತರ ಕಾಣಲು ಬಂದಾಗ ಆರವ್ ಏನನ್ನುತ್ತಾನೋ ಎಂಬ ಆತಂಕದಲ್ಲಿ ಲಿಪಿ ಇದ್ದರೆ ಆರವನ ಆಪ್ತನಾಗಿರುವ ಸಾಹಿಲ್ ನಾನು ನಿಮ್ಮನ್ನೇ ಕಾಯುತ್ತಿದ್ದೆ ಅನ್ನುತ್ತಿದ್ದಾನೆ. ಸಾಹಿಲ್ ನನ್ನು ಅಲ್ಲೊಮ್ಮೆ ಇಲ್ಲೊಮ್ಮೆ ಈ ಮುನ್ನ ಭೇಟಿಯಾಗಿದ್ದರೂ ಅಂತಹಾ ಸಂಭಾಷಣೆಗಳೇನೂ ಆಗಿರಲಿಲ್ಲ. ಆದರೆ ತಮ್ಮಿಬ್ಬರ ಬಗ್ಗೆ ಆರವನ ಕಡೆಯಿಂದ ಯಾರಿಗಾದರೂ ಗೊತ್ತಿದ್ದರೆ ಅದು ಖಂಡಿತವಾಗಿಯೂ ಸಾಹಿಲನಿಗೆ ಎಂಬುದು ಲಿಪಿಗೆ ತಿಳಿದಿದೆ. ಒಟ್ಟಿನಲ್ಲಿ ಅಷ್ಟು ಕಷ್ಟಪಟ್ಟು ಆರವನ ವಿಳಾಸವನ್ನು ಕಂಡುಹಿಡಿದು ಹುಡುಕುತ್ತಾ ಕೊನೆಗೂ ಬಂದರೆ ಆರವನ ಮನೆಯಲ್ಲಿ ಸಾಹಿಲ್ ನ ಇರುವಿಕೆಯನ್ನು ಕಂಡು ಖುಷಿಪಡಬೇಕೋ, ಬೇಜಾರಾಗಬೇಕೋ ಎಂಬ ಗೊಂದಲದಲ್ಲಿದ್ದಳು ಲಿಪಿ.

ನಿನ್ನ ನೆನಪ ಇಟ್ಟಿಗೆಯನ್ನಿಟ್ಟು ಕಟ್ಟಿದ ಗೋಡೆಗಳಿವು
ಮನೆಯೆಂದರೆ ಇದಲ್ಲದೆ ಇನ್ನೇನು…

”ನೋಡು… ಹೇಗೆ ಬರೆದಿದ್ದಾನೆ… ರಿಯಲೀ, ಕಾಡುವ ಸಾಲುಗಳಿವು”, ಕಣ್ಣರಳಿಸುತ್ತಾ ಹೇಳಿದಳು ಸೋಫಿ. ಅವಳು ಹೀಗಂದಾಗಲೆಲ್ಲಾ ಲಿಪಿ ಸುಮ್ಮನೆ ಮುಗುಳ್ನಗುತ್ತಾಳೆ. ಆದರೆ ಮತ್ತೊಮ್ಮೆ ಆರವನನ್ನು ಸೇರುವ ಯೋಚನೆಯು ಅವಳಿಗೆ ಅಷ್ಟಾಗಿ ಕೆಟ್ಟ ಐಡಿಯಾದಂತೆಯೂ ಕಾಣುತ್ತಿಲ್ಲ. ಇಬ್ಬರೂ ಈ ಪಯಣದಲ್ಲಿ ಸಾಕಷ್ಟು ದೂರ ನಡೆದು ಬಂದಿದ್ದಾರೆ. ಯಶಸ್ಸು ಲಿಪಿಯಲ್ಲಿ ಧೈರ್ಯ, ಆತ್ಮವಿಶ್ವಾಸಗಳನ್ನು ತುಂಬಿದೆ. ವೈಫಲ್ಯ, ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕೊಟ್ಟಿದೆ. ಆರವನ ಬಗ್ಗೆ ಗೊತ್ತಿಲ್ಲ. ಆದರೆ ಕಾಲವು ಅವನ ಬಗೆಗಿನ ತನ್ನ ಭಾವನೆಗಳನ್ನು ಒಂದಿಷ್ಟೂ ಅಳಿಸಿಹಾಕಿಲ್ಲ ಎಂಬ ಸತ್ಯವು ಲಿಪಿಗೆ ಚೆನ್ನಾಗಿ ಗೊತ್ತಿದೆ. ಅದು ಬೇರೇನೋ ಆಗಿದ್ದರೆ ಇಷ್ಟು ಹೊತ್ತಿಗೆ ನಾಶವಾಗಬೇಕಿತ್ತು. ಆದರೆ ಕ್ರಮೇಣ ಆ ಅನುಭೂತಿಯು ಅವಳಲ್ಲಿ ಮತ್ತಷ್ಟು ತೀವ್ರವಾಗುತ್ತಾ ಬಂದಿದೆ.

ಚಿನ್ನದ ಬಣ್ಣದ ಲೋಹಸಮತಲದಲ್ಲಿ ಈ ಸಾಲುಗಳನ್ನು ಸುಂದರ ಕ್ಯಾಲಿಗ್ರಫಿ ಶೈಲಿಯೊಂದರಲ್ಲಿ ಕೊರೆಸಿ ಗೋಡೆಗಂಟಿಸಿಡಲಾಗಿತ್ತು. ಅದು ತನಗಾಗಿಯೇ ಬರೆದ ಸಾಲೆಂಬಂತೆ ಪುಳಕಿತಳಾಗುತ್ತಾ ಅದರ ಮೇಲೆ ಕೈಯಾಡಿಸಿದಳು ಲಿಪಿ. ಇಂಥದ್ದೇ ಬಗೆಬಗೆಯ ಆಕರ್ಷಕ ಸಾಲುಗಳು ಎಲ್ಲೆಲ್ಲೂ ಆರವನ ಈ ಪುಟ್ಟಗೂಡಿನಲ್ಲಿ. ಹೀಗೆ ಆರವನ ಒಂದೊಂದು ಸಾಲುಗಳನ್ನು ತನ್ನೊಳಗೆ ಇಳಿಸಿಕೊಳ್ಳುತ್ತಿರುವಾಗಲೇ ಒಳಗಿನಿಂದ ಕಾಫಿ ಮಗ್ ಗಳನ್ನು ಹಿಡಿದುಕೊಂಡು ಬಂದ ಸಾಹಿಲ್. ಆತ ಒಂದನ್ನು ತನಗಾಗಿ ಪಕ್ಕಕ್ಕಿಟ್ಟು ಇನ್ನೊಂದನ್ನು ಲಿಪಿಗೆ ಕೊಟ್ಟು ಮುಗುಳ್ನಕ್ಕ. ನಗುವನ್ನು ಹೊತ್ತ ಮುಖಗಳೆಂದರೆ ಲಿಪಿಗೆ ಯಾವಾಗಲೂ ಖುಷಿ. ಅಷ್ಟಕ್ಕೂ ಶುಭ್ರನಗುವನ್ನು ಇಷ್ಟಪಡದವರಾರು?

”ಆರವ್ ನಿಮಗೆ ಫೋನ್ ಮಾಡಿದ್ನಾ? ಆ ಪ್ರೊಡ್ಯೂಸರ್ ಒಬ್ರು ನನ್ನ ಫೋನಿಗೂ ಸುಸ್ತಾಗುವಷ್ಟು ಬೆಳಿಗ್ಗಿನಿಂದ ಕಾಲ್ ಮಾಡ್ತಾನೇ ಇದ್ದಾರೆ”, ಸಾಹಿಲ್ ಕಾಫಿಯನ್ನು ಹೀರುತ್ತಾ ನೇರವಾಗಿ ವಿಷಯಕ್ಕೇ ಬಂದಿದ್ದ. ಆದರೆ ಲಿಪಿಗೆ ಆರವನ ಯಾವ ಸಂಪರ್ಕವೂ ಇಲ್ಲವೆಂದೂ, ಬದಲಾಗಿ ಆಕೆ ಆರವನನ್ನೇ ಹುಡುಕಿಕೊಂಡು ಬಂದಿದ್ದಾಳೆ ಎಂಬುದನ್ನು ಕೇಳಿ ಅವನಿಗೆ ನಿರಾಶೆಯಾಯಿತು. ಸಾಲದ್ದೆಂಬಂತೆ ಸಾಹಿಲ್ ಹೊಸದೊಂದು ನಿರಾಶದಾಯಕ ಸುದ್ದಿಯನ್ನು ಲಿಪಿಯ ಮುಂದಿರಿಸಿದ್ದ. ಅವನು ಹೇಳುವ ಪ್ರಕಾರ ಆರವ್ ಏಕಾಏಕಿ ಬೆಂಗಳೂರನ್ನು ಬಿಟ್ಟು ಬೇರೆಲ್ಲೋ ವಲಸೆ ಹೋಗಿದ್ದಾನೆ. ಆದರೆ ನಿಜಕ್ಕೂ ಎಲ್ಲಿದ್ದಾನೆಂಬುದನ್ನು ಆರವ್ ಇನ್ನೂ ಬಾಯಿಬಿಟ್ಟಿರಲಿಲ್ಲ. ”ಹೋಗಿ ಎರಡು ತಿಂಗಳಾಗುತ್ತಾ ಬಂತು. ಮೊದಲೆರಡು ದಿನ ಸುದ್ದಿಯೇ ಇರಲಿಲ್ಲ ಈ ಆಸಾಮಿಯದ್ದು. ನಾವು ಬಹಳ ಭಯಪಟ್ಟಿದ್ವಿ. ಈಗ ಎರಡು ದಿನಗಳಿಗೊಮ್ಮೆ ಕಾಲ್ ಮಾಡಿ ತಾನಿರುವಲ್ಲಿಂದಲೇ ಕೆಲಸಗಳನ್ನು ನಿಭಾಯಿಸುತ್ತಿದ್ದಾನೆ. ಕೇಳಿದರೆ ನನಗೇನಾಗಿದೆ ಧಾಡಿ. ಗಟ್ಟಿಮುಟ್ಟಾಗಿದ್ದೇನೆ. ಎಲ್ಲಿದ್ದೇನೆ ಎಂದು ಹೇಳಿದರೆ ನೀನು ಮತ್ತೆ ಹುಡುಕಿಕೊಂಡು ಬರುತ್ತೀ. ನೀನು ಆರಾಮಾಗಿರು. ಉಳಿದ ಕೆಲಸಗಳನ್ನು ಇಲ್ಲಿಂದಲೇ ಕುಳಿತುಮುಗಿಸುತ್ತೇನೆ ಅನ್ನುತ್ತಾನೆ. ಡೇಟ್ಸ್ ಗಳು ಇನ್ನೂ ಬಾಕಿಯಿವೆ. ನಾನಾದರೂ ಏನು ಮಾಡಲಿ ಹೇಳಿ…”, ಸಾಹಿಲ್ ಮಾತಾಡುತ್ತಲೇ ಇದ್ದ.

‘ಛೇ… ಇದೇನಾಗಿಬಿಟ್ಟಿತು’, ಒಳಗೊಳಗೇ ಚಿಂತಿತಳಾದಳು ಲಿಪಿ. ಆರವನ ವಿಚಾರಕ್ಕೆ ಬಂದರೆ ಎರಡು ತಿಂಗಳು ನಿಜಕ್ಕೂ ದೊಡ್ಡ ಅವಧಿ. ಹಾಗೆಲ್ಲಾ ಅವನು ದೀರ್ಘಾವಧಿಗೆ ಹೋಗುವವನಲ್ಲ. ಕಾಲ ನಿಜಕ್ಕೂ ಮಿಂಚಿಹೋಯಿತೇ? ಹೀಗೆ ತನ್ನದೇ ಯೋಚನಾಲಹರಿಯಲ್ಲಿ ಕಳೆದುಹೋಗಿದ್ದಳು ಲಿಪಿ. ”ಆರವ್ ಮುಂದೆಂದಾದರೂ ಮರಳಿ ಬೆಂಗಳೂರಿಗೆ ಬರುತ್ತಾರೆ ಎಂಬ ಭರವಸೆ ನಿಮಗಿದೆಯೇ?”, ಎಂದು ತಣ್ಣಗೆ ಕೇಳಿದಳು ಲಿಪಿ. ಆಕೆಯ ಮುಖದಲ್ಲಿನ ಭಾವಗಳನ್ನು ಸಾಹಿಲ್ ಓದಲು ಪ್ರಯತ್ನಿಸಿದರೂ ಅಷ್ಟೇನೂ ಉಪಯೋಗವಾಗಲಿಲ್ಲ. ”ನೀವಿಬ್ಬರೂ ಹಳೆಯ ಗೆಳೆಯರು ಎಂದು ನನಗ್ಗೊತ್ತು. ಹೀಗಾಗಿ ನಿಮ್ಮಲ್ಲೇನು ಸುಳ್ಳು ಹೇಳುವುದು? ಬಹುಷಃ ಈ ನಗರದ ಋಣ ಅವನಿಗೆ ಮುಗಿದುಹೋಯಿತು ಅನ್ನಿಸುತ್ತಿದೆ. ಕಳೆದ ಒಂದು ವರ್ಷದಿಂದ ಆರವ್ ಬೇರೆ ಕಡೆಯೆಲ್ಲಾದರೂ ನೆಲೆಯೂರುವ ಯೋಜನೆ ಹಾಕುತ್ತಿದ್ದ. ಅವನಿಗೆ ಏಕಾಂತದಲ್ಲಿ ಬರೆಯಬೇಕಂತೆ. ಬರೆಯುತ್ತಲೇ ಇರಬೇಕಂತೆ. ಜೊತೆಗೇ ಈ ಚಮಕ್-ಧಮಕಿನ ಲೋಕಕ್ಕಿಂತ ಕೊಂಚ ದೂರವಿರಬೇಕು ಅನ್ನಿಸುತ್ತಿದೆ ಅನ್ನುತ್ತಿದ್ದ. ಅವನ ಸೋಷಿಯಲ್ ಮೀಡಿಯಾ ಖಾತೆಗಳು ಮುಚ್ಚಿಹೋಗಿವೆ. ಈ ವಿಚಾರ ಸದ್ಯ ನಮ್ಮಿಬ್ಬರಲ್ಲೇ ಇರಲಿ. ಇಲ್ಲಾಂದ್ರೆ ಡೇಟ್ಸ್ ಕೊಟ್ಟ ಪ್ರೊಡ್ಯೂಸರ್ ಗಳು ಮತ್ತೆ ನನ್ನ ತಲೆ ತಿನ್ನೋದು ಗ್ಯಾರಂಟಿ”, ಎಂದ ಸಾಹಿಲ್.

ಬಿಸಿ ಬಿಸಿ ಕಾಫಿಯನ್ನೇ ಇಷ್ಟಪಡುವ ಲಿಪಿಯ ಕಾಫಿ ಈಗ ತಣ್ಣಗಾಗಿತ್ತು. ಮಗ್ಗಿನಲ್ಲಿ ಇನ್ನೂ ಅರ್ಧದಷ್ಟು ಬಾಕಿಯಿದ್ದರೂ ಅದನ್ನು ಮುಗಿಸದೆ ಟೀಪಾಯಿಯ ಮೇಲಿಟ್ಟು ಹೊರಡಲನುವಾದಳು ಲಿಪಿ. ಲಿಪಿಯ ಚಿಂತೆಯನ್ನು ಅರ್ಥಮಾಡಿಕೊಂಡವನಂತೆ ಸ್ವತಃ ಸಾಹಿಲನೇ ಅವಳಿಗೆ ಸಮಾಧಾನದ ಮಾತನ್ನಾಡಿದ. ”ಅವನು ಭಾರತದಲ್ಲೇ ಇದ್ದಾನೆ. ಮತ್ತೊಮ್ಮೆ ದೇಶ ಬಿಡುವ ಯಾವ ಉದ್ದೇಶಗಳೂ ಅವನಿಗಿಲ್ಲ. ನೀವು ಚಿಂತಿಸಬೇಡಿ. ಅವನಿರುವ ಜಾಗದ ಬಗ್ಗೆ ನನಗಿಂತ ಮೊದಲು ನಿಮಗೆ ತಿಳಿದುಬಂದರೆ ನನಗೆ ತಿಳಿಸಲು ಮಾತ್ರ ಮರೆಯಬೇಡಿ. ನನಗೆ ಗೊತ್ತಾದರೆ ನಾನೇ ನಿಮ್ಮನ್ನು ಸಂಪರ್ಕಿಸುತ್ತೇನೆ”, ಎಂದು ಸೌಜನ್ಯದ ಮಾತನ್ನಾಡಿದ ಹಸನ್ಮುಖಿ ಸಾಹಿಲ್. ಸಾಹಿಲನಿಗೆ ವಿದಾಯವನ್ನು ಕೋರಿ ಹೊರಬಂದಳು ಲಿಪಿ. ಸಾಹಿಲನ ಮಾತಿನ ಧಾಟಿಯನ್ನು ಕೇಳಿದರೆ ಆರವ್ ಮತ್ತೆ ಮರಳಿ ಬರುವವನಂತೆ ಅವಳಿಗಂತೂ ಕಾಣಲಿಲ್ಲ. ನಾನು ತಡಮಾಡಿಬಿಟ್ಟೆನೇ? ಎಲ್ಲಿ ಹೋಗಿರಬಹುದು ಇವನು? ಇದೇನು ವೈರಾಗ್ಯವೇ, ಅನ್ಯಮನಸ್ಕತೆಯೇ, ತಲಾಶೆಯೇ, ಶಕುನವೇ? ಅಂತೆಲ್ಲಾ ಚಿಂತೆಗೆ ಬಿದ್ದಿದ್ದಳು ಲಿಪಿ. ತನ್ನ ಪುಟ್ಟ ಬ್ಯಾಗನ್ನು ಹಿಂದಿನ ಸೀಟಿಗೆಸೆದು ಡ್ರೈವ್ ಮಾಡಲು ಇನ್ನೇನು ಅಣಿಯಾಗಬೇಕು ಎನ್ನುವಷ್ಟರಲ್ಲಿ ಧೋ ಎಂದು ಸುರಿದೇಬಿಟ್ಟಿತು ಮಳೆ.
ಜೋರು ಮಳೆಯ ಆ ದಿನ, ಜಯದೇವ ಸಿಗ್ನಲ್, ಐದನೇ ಬ್ಲಾಕ್, ಒಂದೇ ಛತ್ರಿ, ಆರವ್, ಅವನ ಆ ಕವಿತೆ, ಅವನ ಕಣ್ಣುಗಳಲ್ಲಿದ್ದ ಕಾಂತಿ, ಅವನ ಬಿಸಿಯುಸಿರನ್ನು ಸೋಕಿದ್ದ ತನ್ನ ಕಿವಿ… ಹೀಗೆ ಇವೆಲ್ಲವೂ ಅಂದು ಅದ್ಯಾಕೋ ಲಿಪಿಗೆ ನೆನಪಾಗಿಬಿಟ್ಟವು. ‘ತುಮ್ ಇತ್ನಾ ಜೋ ಮುಸ್ಕುರಾ ರಹೇ ಹೋ, ಕ್ಯಾ ಗಮ್ ಹೇ ಜಿಸ್ಕೋ ಛುಪಾ ರಹೇ ಹೋ’, ಎಂದು ಸ್ಟೀರಿಯೋದಲ್ಲಿ ಜಗಜೀತ್ ಸಿಂಗ್ ಹಾಡುತ್ತಿದ್ದರು. ಈಗ ಹೊರಗೂ ಲಿಪಿಯ ಮನದಲ್ಲೂ ಜಡಿಮಳೆಯದ್ದೇ ಆರ್ಭಟ.

ಚಿನ್ನದ ಬಣ್ಣದ ಲೋಹಸಮತಲದಲ್ಲಿ ಈ ಸಾಲುಗಳನ್ನು ಸುಂದರ ಕ್ಯಾಲಿಗ್ರಫಿ ಶೈಲಿಯೊಂದರಲ್ಲಿ ಕೊರೆಸಿ ಗೋಡೆಗಂಟಿಸಿಡಲಾಗಿತ್ತು. ಅದು ತನಗಾಗಿಯೇ ಬರೆದ ಸಾಲೆಂಬಂತೆ ಪುಳಕಿತಳಾಗುತ್ತಾ ಅದರ ಮೇಲೆ ಕೈಯಾಡಿಸಿದಳು ಲಿಪಿ. ಇಂಥದ್ದೇ ಬಗೆಬಗೆಯ ಆಕರ್ಷಕ ಸಾಲುಗಳು ಎಲ್ಲೆಲ್ಲೂ ಆರವನ ಈ ಪುಟ್ಟಗೂಡಿನಲ್ಲಿ. ಹೀಗೆ ಆರವನ ಒಂದೊಂದು ಸಾಲುಗಳನ್ನು ತನ್ನೊಳಗೆ ಇಳಿಸಿಕೊಳ್ಳುತ್ತಿರುವಾಗಲೇ ಒಳಗಿನಿಂದ ಕಾಫಿ ಮಗ್ ಗಳನ್ನು ಹಿಡಿದುಕೊಂಡು ಬಂದ ಸಾಹಿಲ್. ಆತ ಒಂದನ್ನು ತನಗಾಗಿ ಪಕ್ಕಕ್ಕಿಟ್ಟು ಇನ್ನೊಂದನ್ನು ಲಿಪಿಗೆ ಕೊಟ್ಟು ಮುಗುಳ್ನಕ್ಕ. ನಗುವನ್ನು ಹೊತ್ತ ಮುಖಗಳೆಂದರೆ ಲಿಪಿಗೆ ಯಾವಾಗಲೂ ಖುಷಿ. ಅಷ್ಟಕ್ಕೂ ಶುಭ್ರನಗುವನ್ನು ಇಷ್ಟಪಡದವರಾರು?

ದೆಹಲಿಯ ನಿಜಾಮುದ್ದೀನ್ ರೈಲ್ವೇ ಸ್ಟೇಷನ್ನಿನಲ್ಲಿಳಿದು, ಚಾವಡೀ ಬಜಾರ್ ವರೆಗೆ ಮೆಟ್ರೋದಲ್ಲಿ ಬಂದು, ಸೈಕಲ್ ರಿಕ್ಷಾ ಹಿಡಿದು ಹಳೇ ದಿಲ್ಲಿಗೆ ಬರುವಷ್ಟರಲ್ಲಿ ಲಿಪಿಗೆ ಸಾಕುಸಾಕಾಗಿತ್ತು. ಮೊದಲೇ ಅವಳದ್ದು ಪರವಾಗಿಲ್ಲ ಎಂಬಂತಹ ಹಿಂದಿ. ಹೀಗಾಗಿ ರಿಕ್ಷಾದವರ ಬಳಿ ಚೌಕಾಶಿ ಮಾಡೋ ಹಾಗೂ ಇಲ್ಲ. ಅಬ್ಬಬ್ಬಾ… ಹಳೇ ದಿಲ್ಲಿಯ ಜೂನ್ ತಿಂಗಳ ರಣಬಿಸಿಲು, ಜನಜಂಗುಳಿ, ಅಸ್ತವ್ಯಸ್ತತೆ ಅವಳಲ್ಲಿ ರೇಜಿಗೆಯನ್ನು ಮೂಡಿಸುತ್ತಿದೆ. ಬಂದಿದ್ದೇನೋ ಹೌದು, ಆದರೆ ಯಾಕಾದರೂ ಬಂದೆನಪ್ಪಾ ಎಂಬ ಪಶ್ಚಾತ್ತಾಪ ಭಾವವನ್ನೂ ಅವಳಲ್ಲಿ ಮೂಡಿಸುತ್ತಿದೆ. ಆದರೇನು ಮಾಡುವುದು? ಬೇಕಿರುವುದನ್ನು ಪಡೆಯಬೇಕಿದ್ದರೆ ಸ್ವಲ್ಪವಾದರೂ ಕಷ್ಟಪಡಬೇಕು.

ಕೆಲ ವರ್ಷಗಳ ಹಿಂದೆ ಆರವ್ ಜೈಪುರಕ್ಕೆ ಹೋಗಿದ್ದಾಗ ಅವನೊಂದಿಗಿದ್ದ ಒಬ್ಬಿಬ್ಬರನ್ನು ಹುಡುಕಿ, ಅವರನ್ನು ಫೇಸ್ಬುಕ್ ಮೂಲಕ ಸಂಪರ್ಕಿಸಿ, ಅವರ ತಲೆ ತಿಂದು, ಹೇಗೋ ಹಳೇ ದಿಲ್ಲಿಯಲ್ಲೊಂದು ವ್ಯವಸ್ಥೆಯನ್ನು ಮಾಡಿಕೊಂಡಿದ್ದಳು ಲಿಪಿ. ಮುಂದಿನ ಒಂದು ವಾರದಲ್ಲಿ ಆರವನ ಹಳೆಯ ಸಹೋದ್ಯೋಗಿಯೊಬ್ಬಳೊಂದಿಗೆ ಪರಿಚಯ ಮಾಡಿಕೊಂಡು, ಬೀದಿಬೀದಿ ಜಾಲಾಡಿದ್ದೂ ಆಯಿತು. ”ಅಲ್ಲಾ… ಅವನು ಇಲ್ಲೇ ಇದ್ದಾನೆಂದು ಅಷ್ಟು ಖಚಿತವಾಗಿ ಹೇಗೆ ಹೇಳುತ್ತೀರಿ ನೀವು?”, ಎಂದು ಅಚ್ಚರಿಯಿಂದ ಲಿಪಿಯನ್ನು ಕೇಳುತ್ತಿದ್ದಳಾಕೆ. ”ಆ ಸ್ಟುಪಿಡ್ ಫೆಲೋ ಇಲ್ಲಿಲ್ಲದಿದ್ದರೆ ನಾನು ನನ್ನ ಹೆಸರನ್ನೇ ಬದಲಿಸುತ್ತೇನೆ ನೋಡಿ”, ಎಂದು ನಗುತ್ತಾ ಅಂದಿದ್ದಳು ಲಿಪಿ.

ಲಿಪಿಯ ಲೆಕ್ಕಾಚಾರ ಕೊನೆಗೂ ತಪ್ಪಾಗಲಿಲ್ಲ. ಸುಮಾರು ಹನ್ನೆರಡು ದಿನಗಳು ಕಳೆದ ನಂತರ ಹಳೇ ದಿಲ್ಲಿಗಿಂತ ಒಂದಷ್ಟು ದೂರದಲ್ಲಿರುವ ದರಿಯಾಗಂಜ್ ನ ರಸ್ತೆಬದಿಯ ಪುಸ್ತಕದಂಗಡಿಗಳ ಸಾಲೊಂದರಲ್ಲಿ ಸಿಕ್ಕೇಬಿಟ್ಟಿದ್ದ ಆರವ್. ಅನ್ ಬಿಲೀವಬಲ್ ”Unbelievable”, ಲಿಪಿಯನ್ನು ನೋಡುತ್ತಾ ಉದ್ಗರಿಸಿದ್ದ ಆರವ್. ಅವನಿಗೆ ತನ್ನ ಕಣ್ಣುಗಳನ್ನೇ ನಂಬಲಾರದಂತಾಗಿತ್ತು. ಆರವನನ್ನು ನೋಡುತ್ತಲೇ ಹೃದಯದ ದೊಡ್ಡ ಭಾರವೊಂದು ಒಮ್ಮೆಲೇ ಇಳಿದಂತಾಯಿತು ಲಿಪಿಗೆ. ಜೊತೆಗೇ ಇವನ ಹಿಂದಿನ ಗೆಳೆಯರನ್ನೆಲ್ಲಾ ಹುಡುಕಿ ಬೇಕಾಬಿಟ್ಟಿ ಕಾಲ್ ಮಾಡಿ ಟೆಲಿಫೋನ್ ಕಂಪೆನಿಯವರ ಲಾಭಾಂಶ ಹೆಚ್ಚಿಸಿದ್ದು, ಇಷ್ಟು ದಿನ ದೆಹಲಿಯ ಬಿಸಿಲಿನಲ್ಲಿ ಒಣಗಿದ್ದು, ಇಂಥಾ ಬೊಹೇಮಿಯನ್ ಆಸಾಮಿಯನ್ನು ಹುಡುಕಲು ಬರೋಬ್ಬರಿ ಹನ್ನೆರಡು ದಿನ ಹಳೇದಿಲ್ಲಿಯ ಜನಜಂಗುಳಿಯನ್ನು ಸಹಿಸಿಕೊಂಡಿದ್ದು… ಇತ್ಯಾದಿಗಳು ನೆನಪಾದಾಗಲೆಲ್ಲಾ ತನ್ನನ್ನು ಸತಾಯಿಸಿದ ಆರವನ ಬಗ್ಗೆ ಕೆಟ್ಟ ಕೋಪವೂ ಬಂದಿತು. ಆದರೆ ಅದು ಅಷ್ಟು ಬೇಗ ಇಳಿದುಹೋಗಿದ್ದೂ ಕೂಡ ಸತ್ಯವೇ. ”ಇಲ್ಲೇನೇ ಮಾಡ್ತಾ ಇದ್ದೀಯಾ ಹುಡುಗೀ…”, ಅಚ್ಚರಿಯಿಂದ ಕೇಳುತ್ತಿದ್ದ ಆರವ್. ಇದೇನು ಕನಸೋ ನನಸೋ ಎಂಬ ಗೊಂದಲ ಈಗಲೂ ಅವನಿಗೆ. ”ನಿನ್ನನ್ನೇ ಹುಡುಕ್ತಾ ಬಂದೆ ಹುಡುಗಾ…”, ಎಂದು ಹುಸಿಮುನಿಸನ್ನು ಪ್ರದರ್ಶಿಸುತ್ತಾ ನಾಟಕೀಯವಾಗಿ ಹೇಳಿದಳು ಲಿಪಿ.

ವಿಧಿಯು ಈ ಒಂದು ಕ್ಷಣಕ್ಕೇ ಕಾಯುತ್ತಿತ್ತು ಎಂಬಂತೆ ಮತ್ತೆ ಎಲ್ಲವೂ ಮಾಯವಾಗಿ ಅಲ್ಲಿ ಲಿಪಿ ಮತ್ತು ಆರವ್ ಮಾತ್ರ ಇರುವಂತೆ ಇಬ್ಬರಿಗೂ ಭಾಸವಾಯಿತು. ಟ್ರಾಫಿಕ್ ಸದ್ದು, ಹೊಗೆ, ಜನಸಮೂಹಗಳೆಲ್ಲವೂ ಕರಗಿಹೋದಂತಿನ ಮಧುರಭಾವ. ಜೋಪಾನವಾಗಿ ಬಚ್ಚಿಟ್ಟುಕೊಂಡು ಕಾಯುತ್ತಿದ್ದ ಕನಸೊಂದು ಕೊನೆಗೂ ನನಸಾದ ಕ್ಷಣ. ಈ ಬಾರಿ ಮಾತಿಗೂ ಕಾಯದೆ, ಇಷ್ಟು ವರ್ಷಗಳ ಮೌನವನ್ನೂ ಮರೆತವನಂತೆ ನೇರವಾಗಿ ಹೋಗಿ ಲಿಪಿಯನ್ನು ಗಾಢವಾಗಿ ಆಲಂಗಿಸಿಬಿಟ್ಟ ಆರವ್. ತನ್ನೊಳಗಿನ ಖಾಲಿತನವೆಲ್ಲಾ ಏಕಾಏಕಿ ಮಾಯವಾದಂತಾಗಿ ಭಾವೋನ್ಮತ್ತಳಾಗಿ ನಿಂತ ನಿಲುವಲ್ಲೇ ತೇಲಿಹೋದಳು ಲಿಪಿ. ”ಅಂತೂ ನೀನು ಮತ್ತೊಮ್ಮೆ ಸಿಗಬೇಕಾದರೆ ನಾನು ಇಷ್ಟು ದೂರ ಬರಬೇಕಾಯಿತು ನೋಡು”, ಲಿಪಿಯ ಗುಳಿಕೆನ್ನೆಯನ್ನು ಚಿವುಟುತ್ತಾ ಅವಳ ಸಪೂರ ಮೂಗನ್ನು ತನ್ನ ತೋರುಬೆರಳ ತುದಿಯಿಂದ ಸ್ಪರ್ಶಿಸುತ್ತಾ ಕೀಟಲೆಯೆಂಬಂತೆ ಹೇಳಿದ ಆರವ್. ”ನೀನು ಬೇಕಿದ್ರೆ ಮಂಗಳ ಗ್ರಹಕ್ಕೇ ಹೋಗಿ ಸೆಟಲ್ ಆಗು. ನಾನು, ನನ್ನ ನೆನಪುಗಳು ಮಾತ್ರ ನಿನ್ನ ಬಿಡೋದಿಲ್ಲ ಮಾರಾಯ”, ಎಂದು ಅವನ ತೋಳುಗಳಲ್ಲಿರುವಂತೆಯೇ ನಕ್ಕಳು ಲಿಪಿ. ಆರವನ ಸಾಂಗತ್ಯದಲ್ಲಿ ಒಮ್ಮೆಲೇ ದಿಲ್ಲಿಯು ಹಾಯೆನಿಸಿತು ಅವಳಿಗೆ.

ಕೆಲ ವರ್ಷಗಳ ಹಿಂದೆ ಆರವ್ ಜೈಪುರಕ್ಕೆ ಹೋಗಿದ್ದಾಗ ಅವನೊಂದಿಗಿದ್ದ ಒಬ್ಬಿಬ್ಬರನ್ನು ಹುಡುಕಿ, ಅವರನ್ನು ಫೇಸ್ಬುಕ್ ಮೂಲಕ ಸಂಪರ್ಕಿಸಿ, ಅವರ ತಲೆ ತಿಂದು, ಹೇಗೋ ಹಳೇ ದಿಲ್ಲಿಯಲ್ಲೊಂದು ವ್ಯವಸ್ಥೆಯನ್ನು ಮಾಡಿಕೊಂಡಿದ್ದಳು ಲಿಪಿ. ಮುಂದಿನ ಒಂದು ವಾರದಲ್ಲಿ ಆರವನ ಹಳೆಯ ಸಹೋದ್ಯೋಗಿಯೊಬ್ಬಳೊಂದಿಗೆ ಪರಿಚಯ ಮಾಡಿಕೊಂಡು, ಬೀದಿಬೀದಿ ಜಾಲಾಡಿದ್ದೂ ಆಯಿತು. ”ಅಲ್ಲಾ… ಅವನು ಇಲ್ಲೇ ಇದ್ದಾನೆಂದು ಅಷ್ಟು ಖಚಿತವಾಗಿ ಹೇಗೆ ಹೇಳುತ್ತೀರಿ ನೀವು?”, ಎಂದು ಅಚ್ಚರಿಯಿಂದ ಲಿಪಿಯನ್ನು ಕೇಳುತ್ತಿದ್ದಳಾಕೆ. ”ಆ ಸ್ಟುಪಿಡ್ ಫೆಲೋ ಇಲ್ಲಿಲ್ಲದಿದ್ದರೆ ನಾನು ನನ್ನ ಹೆಸರನ್ನೇ ಬದಲಿಸುತ್ತೇನೆ ನೋಡಿ”, ಎಂದು ನಗುತ್ತಾ ಅಂದಿದ್ದಳು ಲಿಪಿ.

”ವೇಟ್ ಎಲ್ಲಾ ಸರಿ… ಆದರೆ ನಾನು ಇಲ್ಲೇ ಇದೀನಿ ಅಂತ ಅದ್ಹೇಗೋ ನಿಂಗೆ ಗೊತ್ತಾಯ್ತು?”, ಕುತೂಹಲದಿಂದ ಕೇಳಿದ ಆರವ್. ಲಿಪಿಯನ್ನು ನೋಡಿದ ಖುಷಿಯಲ್ಲಿ, ಆ ಕ್ಷಣದ ಉತ್ಸಾಹದಲ್ಲಿ ಈ ಬಗ್ಗೆ ಅವನಿಗೆ ಮರೆತೇಹೋಗಿತ್ತು. ಸಾಹಿಲ್ ನೊಂದಿಗೆ ಅವನು ಸಂಪರ್ಕದಲ್ಲಿದ್ದರೂ ಯಾವತ್ತೂ ತಾನಿರುವ ಸ್ಥಳದ ವಿವರಗಳನ್ನು ತಪ್ಪಿಯೂ ಬಿಟ್ಟುಕೊಟ್ಟಿರಲಿಲ್ಲ. ಹಾಗಿದ್ದಾಗ ಲಿಪಿಯು ಹೇಗೆ ಅಲ್ಲಿಗೇ ಹುಡುಕಿಕೊಂಡು ಬಂದಳು ಎಂಬ ಅವನ ಕುತೂಹಲವು ಸಹಜವೇ ಆಗಿತ್ತು. ”ನನ್ನನ್ನೇನು ಕಮ್ಮಿ ಅಂತ ಅನ್ಕೊಂಡ್ಯಾ… ಇಲ್ಲಿಂದ ದೊಡ್ಡ ಕ್ಲೂ ಸಿಕ್ತು ನೋಡು ನಂಗೆ”, ಎಂದು ಕೈಯನ್ನು ತನ್ನ ಬ್ಯಾಗಿನೊಳಗೆ ತೂರಿಸಿ ಅದೇನನ್ನೋ ಹುಡುಕತೊಡಗಿದಳು ಲಿಪಿ. ಅದೇನಪ್ಪಾ ಎಂದು ಆರವ್ ಕುತೂಹಲದಿಂದ ನೋಡಿದರೆ ಲಿಪಿ ತೆಗೆದಿದ್ದು ಒಂದು ಹಳೆಯ ಪತ್ರ. ಹೌದು, ಕೆಲ ವರ್ಷಗಳ ಹಿಂದೆ ಆರವನೇ ಅವಳಿಗಾಗಿ ಬರೆದಿದ್ದ ಕೊನೆಯ ಪತ್ರ.

ಸಾಯದ ಸಾಲುಗಳಂತೆ ಕಾಯುತಿರುವೆ ನಾ
ಮಾಗದ ನೆನಪುಗಳಂತೆ ಕಾಯಲಿರುವೆ ನಾ…
ಆರಾಧನೆಯ ಪಂಕ್ತಿಗಳಲ್ಲೇ ಸವೆದುಹೋಗಲಿ ಜೀವನ,
ಗಾಲಿಬನ ಗುಡಿಸಲಿನಲ್ಲೇ ಲೀನವಾಗುವೆ ನಾ…

ತನ್ನ ಮತ್ತು ಮಿರ್ಜಾ ಗಾಲಿಬ್ ನ ಬಗ್ಗೆ ಹೇಳುತ್ತಿದ್ದ ತನ್ನದೇ ಹಳೆಯ ಕವಿತೆಯೊಂದನ್ನು ಕಂಡು ಬೆರಗಾಗಿದ್ದ ಆರವ್. ಇಂಥಾ ಮುದ್ದು ಕೆಲಸಗಳನ್ನು ಮಾಡಿ ನನ್ನನ್ನು ಮತ್ತೆ ಮತ್ತೆ ಮೂಕನನ್ನಾಗಿಸುತ್ತೀಯಾ ನೀನು ಎಂದೂ ಅವಳಲ್ಲಿ ಅರುಹಿದ. ಇತ್ತ ‘ಅದೇನೇ ಆದರೂ ಗೆಲುವು ನನ್ನದೇ’ ಎಂಬಂತೆ ಲವಲವಿಕೆಯಿಂದ ನಕ್ಕಳು ಲಿಪಿ.

ಅಂದು ರಾತ್ರಿ ಚಾವಡೀ ಬಾಜಾರ್ ಪ್ರದೇಶದ ಆಸುಪಾಸಿನಲ್ಲಿರುವ ರೆಸ್ಟೊರೆಂಟ್ ಒಂದರಿಂದ ಸಾಹಿಲ್ ಗೆ ಕರೆ ಹೋಯಿತು. ”ನಾನು ಮತ್ತು ಲಿಪಿ ಸದ್ಯ ಹಳೇ ದಿಲ್ಲಿಯಲ್ಲಿದ್ದೇವೆ. ನಾಳೆ ಲಿಪಿಗೆ ಇಲ್ಲೇ ಪಕ್ಕದಲ್ಲಿರುವ ‘ಗಾಲಿಬ್ ಕೀ ಹವೇಲಿ’ಯನ್ನು ತೋರಿಸಿ ನಾಡಿದ್ದಿನ ವಿಮಾನದಲ್ಲಿ ನಾವಿಬ್ಬರೂ ಬೆಂಗಳೂರಿಗೆ ಮರಳುತ್ತಿದ್ದೇವೆ”, ಎಂದು ಅತ್ತ ಕಡೆಯಿಂದ ಆರವ್ ಹೇಳುತ್ತಿದ್ದರೆ ಸಾಹಿಲ್ ನ ಮೊಗದಲ್ಲಿ ಅಚ್ಚರಿಯೂ ಸಂತಸವೂ ಏಕಕಾಲದಲ್ಲಿ ವಿಜೃಂಭಿಸುತ್ತಿತ್ತು.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

 

ಮೇಘನಾ ಸುಧೀಂದ್ರ
ಪ್ರಸ್ತುತ ಬೆಂಗಳೂರು ನಿವಾಸಿಯಾಗಿರುವ ಮೇಘನಾ ಉನ್ನತ ಶಿಕ್ಷಣಕ್ಕಾಗಿ ಬಾರ್ಸಿಲೋನಾದಲ್ಲಿದ್ದಾಗಲೂ ಬರವಣಿಗೆಯೂ ಸೇರಿದಂತೆ ಇತರ ಕನ್ನಡಪರ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದವರು. ಇವರ ಕಥೆ, ಕವನ ಮತ್ತು ಲೇಖನಗಳು ವಿವಿಧ ಆನ್ಲೈನ್ ಮತ್ತು ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಸಂಗೀತ, ಓದು ಮತ್ತು ಪ್ರವಾಸ ಇವರ ಇತರೆ ಹವ್ಯಾಸಗಳು.

 

ಪ್ರಸಾದ್ ನಾಯ್ಕ್
ಹವ್ಯಾಸಿ ಬರಹಗಾರ ಮತ್ತು ಅಂಕಣಕಾರರಾಗಿರುವ ಪ್ರಸಾದ್ ನಾಯ್ಕ್ ದಕ್ಷಿಣ ಕನ್ನಡದ ಕಿನ್ನಿಗೋಳಿ ಮೂಲದವರು. ಕಥೆಗಳು ಮತ್ತು ಅನುವಾದಗಳೂ ಸೇರಿದಂತೆ ಇವರ ಹಲವು ಲೇಖನಗಳು ಅಂತರ್ಜಾಲ ಪತ್ರಿಕೆಗಳು, ಮುಖ್ಯವಾಹಿನಿಯ ಪತ್ರಿಕೆಗಳು ಮತ್ತು ಕೆಲ ಸಂಪಾದಿತ ಕೃತಿಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಇವರು ಆಫ್ರಿಕಾದ ರಿಪಬ್ಲಿಕ್ ಆಫ್ ಅಂಗೋಲಾದ ನಿವಾಸಿ.