ಸಖನಿಗೊ ವಿದಾಯ

ಕಡು ಕೆಂಡದ ಸಖನಿಗೊ ವಿದಾಯ ಹೇಳೋಣ
ಕಡು ನೀರವ ಇರುಳುಗಳನ್ನ ಸುಡುತ್ತೀರಿ
ಕೀಳುತ್ತಿರಿ ಮುಗ್ಧ ಹೃದಯದ ಬಡಿತಗಳ
ಅಳಿಸಿರಿ ಕಡು ನೇಸರನ ಬೆಳಕನ್ನ
ಒಕ್ಕಲೆಬ್ಬಿಸಿರಿ ಕಡು ಬ್ರಹ್ಮಾಂಡವ
ಬೊಬ್ಬಿಡಿರಿ ಕಡು ಕತ್ತಲ ಆಳ್ವಿಕೆಯನ್ನ
ಹೀಗಳೆಯಿರಿ ಕಡು ನಿಶಾಂತ ಕವಿಯನ್ನೊ
ಎಣಿಸಿರಿ ಕಡು ಕವಿಯ ಗಾಯಗಳನ್ನೊ
ಹಾಡಿರಿ ಹಾಡ ಕಡು ಸರಳುಗಳೊ ಹೂವಾದ ಗಳಿಗೆಯನ್ನ
ತುಂಬಿಸಿಕೊಳ್ಳಿರಿ ಉಡಿಯಲ್ಲಿ ಕಡು ಕಿಡಿಗಳನ್ನ
ಅಂಗ ಊನನಾದ ಗುರುವಿಗೊ
ರೈಲು ದುರಂತದ ಉದ್ವೇಗಕ್ಕೊ
ನಿತಾಂತ ಚುಂಬನವಿರಲಿ
ಯಾವ ಅಬ್ಬೇಪಾರಿಯ ಪಾಡೊ
ಎಲ್ಲಕ್ಕೂ ನಿತಾಂತ ಶಾಂತಿಯ ಪಠಿಸಿರಿ
ಬನ್ನಿರಿ ಕಡು ಕೆಂಡದ ಸಖನಿಗೊ ವಿದಾಯ ಹೇಳೋಣ
ಅಂದಗೆಟ್ಟ ಕಡು ಲೋಕವನ್ನೇ ತುಳಿಯುತ್ತ

ಅಶೋಕ ಹೊಸಮನಿ ಅವರು ಗದಗ ಜಿಲ್ಲೆಯ ರೋಣ ತಾಲೂಕು ಗಜೇಂದ್ರಗಡದವರು.
ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್‌ ಭಾಷೆಯ ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸೂಫಿ ಸಾಹಿತ್ಯ ಇವರಿಗೆ ಅಚ್ಚುಮೆಚ್ಚು.
‘ಒಂಟಿ ಹೊಸ್ತಿಲು’, ‘ಅನಾಮಧೇಯ ಹೂ’, “ಹರವಿದಷ್ಟು ರೆಕ್ಕೆಗಳು” ಪ್ರಕಟಿತ ಕವನ ಸಂಕಲನಗಳು