“ಬಹುತೇಕ ಈತನ ಸಿನಿಮಾಗಳು ಧರ್ಮಕಾರಣದ ಜಿಜ್ಞಾಸೆಯವೇ ಆಗಿವೆ. ಇಡೀ ಜಗತ್ತಿನ ಸಿನಿಮಾ ನಿರ್ದೇಶಕರ ಸಾಲಿನಲ್ಲಿ ಅತ್ಯಂತ ವಿಶಿಷ್ಠ ಮತ್ತು ಅನನ್ಯವಾಗಿ ಈತನನ್ನು ನಿಲ್ಲಿಸಿದ್ದು ಈತನ ೧೯೫೭ರ ಸಿನಿಮಾ ಸವೆಂತ್ ಸೀಲ್. ಆತನ ಹೆಚ್ಚಿನ ಚಿತ್ರಗಳು, ಈ ಸವೆಂತ್ ಸೀಲ್ ಅನ್ನೂ ಕೂಡಾ ಒಳಗೊಂಡಂತೆ ಎಕ್ಸ್ಪ್ರೆಶನಿಸ್ಟ್ ಸಿನಿಮಾಗಳು. ಈ ಸಿನಿಮಾ ಮಾನವನ ಮನೋನೆಲೆಯನ್ನು ವೈಚಾರಿಕವಾಗಿ ಅರ್ಥಮಾಡಿಕೊಳ್ಳುತ್ತಾ ಮಾನವನ ಭಾವಕೋಶ ಮತ್ತು ಲೋಕದ ಅತ್ಯಂತ ದಟ್ಟವಾದ ಕಡುಕಪ್ಪು ಆಯಾಮವನ್ನೂ ಕೂಡಾ ವಿವರಿಸುತ್ತವೆ. ಸವೆಂತ್ ಸೀಲ್ ಸಿನಿಮಾ ಬರ್ಗ್ಮನ್ ಮಾಡಿದ ಸಿನಿಮಾಗಳಲ್ಲಿ ಆತನ ಫೆವರೆಟ್ ಸಿನಿಮಾ ಕೂಡಾ.”
ಜಗತ್ತಿನ ಶ್ರೇಷ್ಠ ಚಿತ್ರ ನಿರ್ದೇಶಕರಲ್ಲೊಬ್ಬರಾದ ಇಂಗ್ಮರ್ ಇಂಗ್ಮರ್ ಬರ್ಗ್ ಮನ್ ನ ‘ಸವೆಂತ್ ಸೀಲ್’ ಸಿನೆಮಾ ಕುರಿತು ಯುವ ವಿಮರ್ಶಕ ಪ್ರದೀಪ್ ಕುಮಾರ್ ಶೆಟ್ಟಿ ಕೆಂಚನೂರು ಬರೆದಿರುವ ಶುಕ್ರವಾರದ ಸಿನೆಮಾ ಪುಟ.

 

ಬಹುಶ: ಇಡೀ ಜಗತ್ತಿನ ಅತ್ಯಂತ ಬುದ್ಧಿವಂತ ಸಿನಿಮಾ ನಿರ್ದೇಶಕನೆಂದು ಯಾರನ್ನಾದರೂ ಕರೆಯುವುದಿದ್ದರೆ ಅದು ಇಂಗ್ ಮರ್ ಬರ್ಗ್ ಮನ್ನನ್ನು. 1918ರಲ್ಲಿ ಸ್ವೀಡನ್ನಲ್ಲಿ ಹುಟ್ಟಿದ ಬರ್ಗ್ ಮನ್ ಕ್ರೈಸ್ತಧರ್ಮೀಯ ವಾತಾವರಣದಲ್ಲಿ ಬೆಳೆದ ಕಾರಣ ಧರ್ಮ ಮತ್ತು ಅದರ ಅತಿರೇಕಗಳನ್ನು ನೋಡಿ ನೋಡಿ, ಕ್ರೈಸ್ತ ಧರ್ಮ ಮತ್ತು ಥಿಯಾಲಜಿ (ಮತಶಾಸ್ತ್ರ)ಯನ್ನು ಒಡೆದು ಕಟ್ಟುವ, ಅವುಗಳನ್ನು ನಿರಚಿಸುವ ಕಾರ್ಯವನ್ನು ಸಿನಿಮಾಗಳ ಮೂಲಕ ಮಾಡಿದ ವ್ಯಕ್ತಿಯೆಂದೂ ಕೂಡಾ ಕರೆಯಲ್ಪಟ್ಟಿದ್ದಾನೆ. ಬಹುಶ: ಜಗತ್ತಿನ ಎಲ್ಲಾ ಸಿನಿಮಾ ನಿರ್ದೇಶಕರುಗಳಿಗಿಂತ ಅತ್ಯಂತ ಹೆಚ್ಚು ಪ್ರಜ್ಞೀಯ ಮತ್ತು ಅಪ್ರಜ್ಞೀಯವಾಗಿ ಧರ್ಮಕಾರಣವನ್ನು ವಿವಿಧ ಮಗ್ಗುಲುಗಳಲ್ಲಿ ಹಚ್ಚಿದ ವ್ಯಕ್ತಿಯಿದ್ದರೆ ಅದು ಬರ್ಗ್ ಮನ್. ಅಂತೆಯೇ ಕೆಲವು ಪ್ರಸಿದ್ಧ ಸಿನಿಮಾ ವಿಮರ್ಶಕರು ಇವನನ್ನು ಮತಪಂಡಿತ ನಿರ್ದೇಶಕನೆಂದೂ ಬಗೆದರು.

ಬಹುತೇಕ ಈತನ ಸಿನಿಮಾಗಳು ಧರ್ಮಕಾರಣದ ಜಿಜ್ಞಾಸೆಯವೇ ಆಗಿವೆ. ಇಡೀ ಜಗತ್ತಿನ ಸಿನಿಮಾ ನಿರ್ದೇಶಕರ ಸಾಲಿನಲ್ಲಿ ಅತ್ಯಂತ ವಿಶಿಷ್ಠ ಮತ್ತು ಅನನ್ಯವಾಗಿ ಈತನನ್ನು ನಿಲ್ಲಿಸಿದ್ದು ಈತನ 1957ರ ಸಿನಿಮಾ ಸವೆಂತ್ ಸೀಲ್. ಈ ಸಿನಿಮಾದ ಕಾರಣದಿಂದಲೇನೇ ಪ್ರಸಿದ್ಧ ಸಿನಿಮಾ ವಿಮರ್ಶಕ ಜಾನ್ ಸೈಮನ್ ಈತನನ್ನು ಬರೀ ಅತ್ಯುನ್ನತ ಸಿನಿಮಾ ನಿರ್ದೇಶಕ ಮಾತ್ರವಲ್ಲದೇ, ಜಾಗತಿಕ ಮಾನವ ಚರಿತ್ರೆಯಲ್ಲೇ ಈತ ಅತ್ಯುನ್ನತನೆಂದೂ ಕರೆದ. ಆತನ ಹೆಚ್ಚಿನ ಚಿತ್ರಗಳು, ಈ ಸವೆಂತ್ ಸೀಲ್ ಅನ್ನೂ ಕೂಡಾ ಒಳಗೊಂಡಂತೆ ಎಕ್ಸ್ಪ್ರೆಶನಿಸ್ಟ್ ಸಿನಿಮಾಗಳು. ಈ ಸಿನಿಮಾ ಮಾನವನ ಮನೋನೆಲೆಯನ್ನು ವೈಚಾರಿಕವಾಗಿ ಅರ್ಥಮಾಡಿಕೊಳ್ಳುತ್ತಾ ಮಾನವನ ಭಾವಕೋಶ ಮತು ಲೋಕದ ಅತ್ಯಂತ ದಟ್ಟವಾದ ಕಡುಕಪ್ಪು ಆಯಾಮವನ್ನೂ ಕೂಡಾ ವಿವರಿಸುವಂತವಾಗಿವೆ. ಸವೆಂತ್ ಸೀಲ್ ಸಿನಿಮಾ ಬರ್ಗ್ಮನ್ ಮಾಡಿದ 50ಕ್ಕೂ ಹೆಚ್ಚಿನ ಆತನ ಸಿನಿಮಾಗಳಲ್ಲಿ ಆತನ ಫೆವರೆಟ್ ಸಿನಿಮಾ ಕೂಡಾ.

ಸವೆಂತ್ ಸೀಲ್ ನ ಕಥೆ ಮಧ್ಯಯುಗೀನ ಯುರೋಪಿನ ಸಮಾಜೋ-ಭೌತಿಕ ಪರಿವೇಶದಿಂದ ಹುಟ್ಟಿದಂತದ್ದು. ಈ ಕಾಲವು ಧರ್ಮಯುದ್ಧ ಅಥವಾ ಕ್ರುಸೇಡ್ ಗಳನ್ನು ಅನುಭವಿಸಿದಂತಹ ಅವಧಿಯಾಗಿತ್ತು. ಇಂತಹ ಧರ್ಮ ಯುದ್ಧವನ್ನು ಕ್ರೈಸ್ತಮಠ, ವ್ಯಾಟಿಕನ್ ಚರ್ಚ್ ಮತ್ತು ರಾಜ್ಯ ಅಥವಾ ಯುರೋಪಿನ ಸಮಕಾಲೀನ ರಾಷ್ಟ್ರ- ರಾಜ್ಯಗಳು ಸಹಯೋಗದಿಂದ ಪ್ರಾಯೋಜಿಸಿದ್ದುವು. ಇಂತಹ ಕ್ರುಸೇಡ್ ಗಳಲ್ಲಿ ನೈಟ್ ಗಳು, ನೋಬಲ್ಲರು ರಾಜ್ಯದ ಪರವಹಿಸಿ ಹೋರಾಡಬೇಕಿತ್ತು. ಇದೇ ಸಂದರ್ಭದ ಇನ್ನೊಂದು ಚಾರಿತ್ರಿಕ ಅನುಭವವೆಂದರೆ, ಇಡೀ ಯುರೋಪನ್ನೇ ನಡುಗಿಸಿದ ಸಾಂಕ್ರಾಮಿಕ ರೋಗವಾದ ಪ್ಲೇಗ್ ನ ಹರಡುವಿಕೆ. ಆವಾಗ ಪ್ಲೇಗ್ ರೋಗ ಬಂದರೆ ಊರಿನಲ್ಲಿ ಸತ್ತವರ ಹೆಣವನ್ನು ಸಾಗಿಸಲು ಜನವಿರುತ್ತಿರಲಿಲ್ಲ. 16ನೆಯ ಶತಕದ ಸ್ವೀಡನ್ ನಲ್ಲಿ ಈ ರೀತಿ ಪ್ಲೇಗ್ ರೋಗ ಬಂದ ಸಂದರ್ಭದಲ್ಲಿ ಏನು ನಡೆಯಿತು ಎನ್ನುವುದೇ ಈ ಚಿತ್ರದ ಸರಳವಾದ ಕಥಾಗ್ರಹಿಕೆ. ಆದರೆ ಇದನ್ನು ಅತ್ಯಂತ ತಾತ್ವಿಕ, ವಿಸ್ತಾರವಾದ ಕಥಾ ಚರ್ಚೆಯ ಮೂಲಕವೂ ಗ್ರಹಿಸಬಹುದಾಗಿದೆ. ಈ ಸಿನಿಮಾ ಬರ್ಗ್ ಮನ್ ನ ಎಲ್ಲಾ ಸಿನಿಮಾಗಳಿಗಿಂತ ಹೆಚ್ಚು ಇಮೇಜ್ ಅನ್ನು ಬಳಸಿ ಸಾಗಿರುವ ಸಿನಿಮಾ ಕೂಡಾ ಆಗಿರುವ ಕಾರಣ ಚಿತ್ರದ ಬಗೆಗೆ, ಚಿತ್ರದ ತಾತ್ವಿಕ ಗ್ರಹಿಕೆಯ ಕುರಿತಂತೆ ಅತ್ಯಂತ ಸೂಕ್ಷ್ಮವಾಗಿಯೇ ನಾವು ‘ಸವೆಂತ್ ಸೀಲ್’ ಅನ್ನು ನೋಡಬೇಕಾಗುತ್ತದೆ.

ಬಹುಶ: ಜಗತ್ತಿನ ಎಲ್ಲಾ ಸಿನಿಮಾ ನಿರ್ದೇಶಕರುಗಳಿಗಿಂತ ಅತ್ಯಂತ ಹೆಚ್ಚು ಪ್ರಜ್ಞೀಯ ಮತ್ತು ಅಪ್ರಜ್ಞೀಯವಾಗಿ ಧರ್ಮಕಾರಣವನ್ನು ವಿವಿಧ ಮಗ್ಗುಲುಗಳಲ್ಲಿ ಹಚ್ಚಿದ ವ್ಯಕ್ತಿಯಿದ್ದರೆ ಅದು ಬರ್ಗ್ ಮನ್. ಅಂತೆಯೇ ಕೆಲವು ಪ್ರಸಿದ್ಧ ಸಿನಿಮಾ ವಿಮರ್ಶಕರು ಇವನನ್ನು ಮತಪಂಡಿತ ನಿರ್ದೇಶಕನೆಂದೂ ಬಗೆದರು. ಬಹುತೇಕ ಈತನ ಸಿನಿಮಾಗಳು ಧರ್ಮಕಾರಣದ ಜಿಜ್ಞಾಸೆಯವೇ ಆಗಿವೆ. ಇಡೀ ಜಗತ್ತಿನ ಸಿನಿಮಾ ನಿರ್ದೇಶಕರ ಸಾಲಿನಲ್ಲಿ ಅತ್ಯಂತ ವಿಶಿಷ್ಠ ಮತ್ತು ಅನನ್ಯವಾಗಿ ಈತನನ್ನು ನಿಲ್ಲಿಸಿದ್ದು ಈತನ 1957ರ ಸಿನಿಮಾ ಸವೆಂತ್ ಸೀಲ್. ಈ ಸಿನಿಮಾದ ಕಾರಣದಿಂದಲೇನೇ ಪ್ರಸಿದ್ಧ ಸಿನಿಮಾ ವಿಮರ್ಶಕ ಜಾನ್ ಸೈಮನ್ ಈತನನ್ನು ಬರೀ ಅತ್ಯುನ್ನತ ಸಿನಿಮಾ ನಿರ್ದೇಶಕ ಮಾತ್ರವಲ್ಲದೇ, ಜಾಗತಿಕ ಮಾನವ ಚರಿತ್ರೆಯಲ್ಲೇ ಈತ ಅತ್ಯುನ್ನತನೆಂದೂ ಕರೆದ. ಆತನ ಹೆಚ್ಚಿನ ಚಿತ್ರಗಳು, ಈ ಸವೆಂತ್ ಸೀಲ್ ಅನ್ನೂ ಕೂಡಾ ಒಳಗೊಂಡಂತೆ ಎಕ್ಸ್ಪ್ರೆಶನಿಸ್ಟ್ ಸಿನಿಮಾಗಳು. ಈ ಸಿನಿಮಾ ಮಾನವನ ಮನೋನೆಲೆಯನ್ನು ವೈಚಾರಿಕವಾಗಿ ಅರ್ಥಮಾಡಿಕೊಳ್ಳುತ್ತಾ ಮಾನವನ ಭಾವಕೋಶ ಮತು ಲೋಕದ ಅತ್ಯಂತ ದಟ್ಟವಾದ ಕಡುಕಪ್ಪು ಆಯಾಮವನ್ನೂ ಕೂಡಾ ವಿವರಿಸುವಂತವಾಗಿವೆ.

ಮಧ್ಯಯುಗೀನ ಯುರೋಪಿನಲ್ಲಿ, ವೈಯಕ್ತಿಕವಾಗಿ ಮತ್ತು ಪ್ಲೇಗ್ ನ ಕಾರಣದಿಂದ ಖಿನ್ನತೆಗೆ ಒಳಗಾದಂತಹ ನೈಟ್ (ಸರದಾರ, ನೋಬಲ್) ಅಂತೋನಿಯೋ ಬ್ಲಾಕ್ (ವಾನ್ ಸಿಡೋ) ಮತ್ತು ಆತನ ಸಹಚಾರಿಯು ಕ್ರುಸೇಡ್ (ಧರ್ಮ-ಮತೀಯ ಯುದ್ಧಗಳು) ಅನ್ನು ಮುಗಿಸಿ ಊರಿಗೆ ಬಂದಾಗ ಸ್ಮಶಾನ ಸದೃಶೀ ಊರನ್ನು ಅನುಭವಿಸುತ್ತಾರೆ. ಆಗ ಮೃತ್ಯು ಅವರನ್ನು ಎದುರುಗೊಳ್ಳುತ್ತದೆ. ಮೃತ್ಯು ಅಂತೋನಿಯೋ ಬ್ಲಾಕ್ ನನ್ನೂ ಕೂಡಾ ಕಬಳಿಸಲು ಪ್ರಯತ್ನಿಸಿದಾಗ ಅಂತೋನಿಯೋ ಕೊನೆಯ ಕ್ಷಣದಲ್ಲಿ ಸಾವನ್ನು, ಚೆಸ್ ಆಡಲು ಆಹ್ವಾನಿಸುತ್ತಾನೆ. ಆಟ ಹಲವು ಕಾಲ-ಪ್ರದೇಶ, ವಿರಾಮದಲ್ಲಿ ಆಡಲ್ಪಡುತ್ತದೆ. ನೈಟ್ ಮತ್ತು ಆತನ ಸ್ನೇಹಿತ ಸಹಚಾರಿ (ಸ್ಕ್ವಿರ್) ಇಡೀ ಪ್ಲೇಗ್ ಆವೃತ್ತ ಪ್ರದೇಶವನ್ನು ಸಂಚರಿಸುತ್ತಿರುತ್ತಾರೆ. ಆಗ ಅವರು ಚೆಸ್ ನಿಂದ ಬಾಧಿಸಲ್ಪಡುತ್ತಲೂ ಇರುತ್ತಾರೆ. ಅನೇಕ ವ್ಯಕ್ತಿಗಳನ್ನೂ ಅವರು ಭೇಟಿ ಮಾಡುತ್ತಾರೆ, ಕ್ರೂರಪ್ರಸಂಗಗಳನ್ನೂ ಕೂಡಾ ಗಮನಿಸುತ್ತಾರೆ. ಒಬ್ಬಳು ಪ್ಲೇಗ್ ಬಂದ ಯುವತಿಯನ್ನು ಊರ ಹೊರಗೆ ಜೀವಂತವಾಗಿ ಸುಡುವುದು, ಒಪ್ಪಿತವಲ್ಲದ ಲೈಂಗಿಕತೆಯ ಕೆಲವು ಪ್ರಸಂಗಗಳು, ಅತ್ಯಂತ ಲೈಂಗಿಕ ತೃಷೆಯ ನಟನೊಬ್ಬ ಸಾವು ತನ್ನನ್ನು ಕಬಳಿಸುವ ಮುನ್ನ ಕಮ್ಮಾರನೊಬ್ಬನ ತೃಷೆಯ ಪತ್ನಿಯನ್ನು ಭೋಗಿಸುವುದು, ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬ ಹರಯದ ಹುಡುಗಿಯಲ್ಲಿ ನಡೆಸುವ ಕಲಾಪಗಳು, ಹೀಗೆ ಅನೇಕ ರೀತಿಯ ಘಟನೆ, ವೃತ್ತಾಂತಗಳ ಇಮೇಜ್ ಅನ್ನು ನೋಡುತ್ತಾ ಇವರಿಬ್ಬರೂ ಸಾಗುತ್ತಾರೆ. ಮಧ್ಯೆ ಮಧ್ಯೆ ಮೃತ್ಯು ಚೆಸ್ ಆಟಕ್ಕೆ ನೈಟ್ ನನ್ನು ಎಳೆದಾಗಲೆಲ್ಲಾ ನೈಟ್ ತನ್ನ ಅಸ್ತಿತ್ವದ, ಜೀವದ ಆಸೆಯಿಂದ, ತನ್ನ ಸಾವನ್ನು ಮುಂದೂಡುವ ಉದ್ದೇಶದಿಂದ ಮೃತ್ಯುವಿಗೆ ಚೆಸ್ ಆಟದಲ್ಲಿ ಮೋಸವನ್ನೂ ಮಾಡುತ್ತಾನೆ, ಆದರೆ ಅಂತಿಮವಾಗಿ ಮೃತ್ಯುವಿಗೆ ಆಹುತಿಯಾಗುತ್ತಾನೆ ನೈಟ್.

ಸವೆಂತ್ ಸೀಲ್ ಬಗ್ಗೆ ಬಂದಿರಬಹುದಾದ ಅತ್ಯಂತ ಪ್ರಸಿದ್ಧ ವಿಮರ್ಶೆಗಳೆಲ್ಲವೂ ಕೂಡಾ ಇಡೀ ಸಿನಿಮಾದಲ್ಲಿ ಎರಡು ಮುಖ್ಯ ಅಂಶಗಳ ಮೇಲೆ ಗಮನ ಹರಿಸುತ್ತದೆ. ಒಂದು, ಇಡೀ ಸಿನಿಮಾದಲ್ಲಿ ಬರ್ಗ್ ಮನ್ ಬಳಸುವ ವೈವಿಧ್ಯದ ಇಮೇಜ್ (ಬಿಂಬ-ಪ್ರತಿಬಿಂಬ)ಗಳು, ಎರಡು: ಇದು ಅತ್ಯಂತ ಮುಖ್ಯವಾದುದು, ಅದೇನೆಂದರೆ ಸಿನಿಮಾ ಮತ್ತು ಸಿನಿಮಾದ ಪ್ಲಾಟ್ ಅನ್ನು (ಪ್ಲಾಟ್ ಮತ್ತು ಸ್ಕ್ರೀನ್ ಪ್ಲೇ, ಚಿತ್ರಕಥೆಗಳ ನಡುವೆ ಸಾಕಷ್ಟು ಅಂತರವಿದೆ. ಅತ್ಯಂತ ಗಣನೀಯ ಗಣನೆಯಿರುವುದು ಪ್ಲಾಟ್ ಗೆ) ಬಾಧಿಸುವ ರಿಲೀಜಿಯಸ್ ಎನ್ನುವ ಅಂಶ. ರಿಲೀಜಿಯಸ್ ಅಂದರೆ ಪ್ಯೂರಿಸ್ಟ್ ಆದ, ಸಾಂಪ್ರದಾಯಿಕ ನೆಲೆಯ ಗ್ರಹೀತವಲ್ಲ, ಬದಲು ಮಾನವನ ಜೀವನದಲ್ಲಿ ಪ್ರವೃತ್ತಿಗಳಷ್ಟೇ ಪ್ರಬಲವಾಗಿ ಜೀವನವನ್ನು ಪ್ರಭಾವಿಸುವ, ರೂಪಿಸುವ ಒಂದು ಅಂಶವಾಗಿ. ರಿಲೀಜಿಯನ್ ವಿಶೇಷವಾಗಿ ಬರ್ಗ್ ಮನ್ ಸಂದರ್ಭದಲ್ಲಿ ಕ್ರಿಶ್ಚಿಯಾನಿಟಿಯನ್ನು ಮರು ನಿರೂಪಿಸುವುದು, ಚರ್ಚಿಸುವುದು. ಇಲ್ಲಿಯೂ ಕೂಡಾ ರಿಲೀಜಿಯನ್ನ ಸಂರಚನೀಯ ಚರ್ಚೆ, ಅಧ್ಯಯನಕ್ಕಿಂತ ರಿಲೀಜಿಯನ್ ಒಳಗೊಂಡಿರುವ ಮುಕ್ತಿಮಾರ್ಗದ ಚರ್ಚೆಯನ್ನು ಬರ್ಗ್ ಮನ್ ಇದರಲ್ಲಿ ನಡೆಸುತ್ತಾನೆ.

ಸವೆಂತ್ ಸೀಲ್ ಸೇರಿದಂತೆ ಆತನ ಹೆಚ್ಚಿನ ಸಿನಿಮಾಗಳಲ್ಲಿ, ಫಿಸಿಯಾಲಜಿ (ಜೀವಿಗಳು ಜೀವಿಸುವ ರೀತಿಯನ್ನು ತಿಳಿಯುವ ಶಾಸ್ತ್ರ ಮತ್ತು ಸೈಕಾಲಜಿ) ಮನ:ಶಾಸ್ತ್ರವು ಹೇಗೆ ಮುಕ್ತಿಗೆ ಕಾಲಿಗೆಟಕುವ ಬಳ್ಳಿಯ ಹಾಗೆ ಎಡತಾಕಿ ಮುಕ್ತಿಯ ಮಾರ್ಗವನ್ನು ಭಂಗಗೊಳಿಸುತ್ತದೆ ಎನ್ನುವುದೇ ಪ್ರಮುಖ ಆಶಯ ಮತ್ತು ಕಾಳಜಿ. ಒಂದು ರೀತಿ ತೀರಾ ಮತೀಯ-ಧರ್ಮೀಯ ವಾತಾವರಣದಲ್ಲಿ ಬೆಳೆದ ಈತನಿಗೆ ಅದರ ಅತಿಯಾದ ಪೂರಣದಿಂದ ವಾಕರಿಕೆ ಹುಟ್ಟಿಸುವ ರೀತಿಯಲ್ಲಿ ಅದು ಪರಿಣಾಮವನ್ನು ಉಂಟುಮಾಡಿ, ಇಡೀ ತನ್ನ ಜೀವಿತದಲ್ಲಿ ಮತ್ತು ತನ್ನ ಹೆಚ್ಚಿನ ಸಿನಿಮಾದಲ್ಲಿ ಇದರ ನಿಷ್ಕರ್ಷೆ, ವಿಮರ್ಶೆಯನ್ನು ಕೈಗೊಂಡ ಹಾಗೆ ಕಾಣಿಸುತ್ತದೆ. ಇಂತಹ ಸಂದರ್ಭದಲ್ಲಿ ಅಭೌತ ಅಥವಾ ಭೌತಿಕವಲ್ಲದ ಆಧ್ಯಾತ್ಮ ಅಥವಾ ದೈವಿಕ ಎನ್ನಬಹುದಾದ ಜಗತ್ತಿನ ದೇವರು, ಆತ್ಮ, ಜೀವ, ಜಗತ್ತು, ಸೃಷ್ಟಿ, ಪಾಪ, ಪುಣ್ಯ, ಕ್ರಿಯಾವಿಧಿ, ಮತೀಯ ತತ್ವಶಾಸ್ತ್ರಗಳೆಲ್ಲವೂ ಕೂಡಾ ಫಿಸಿಯಾಲಜಿ ಮತ್ತು ಸೈಕಾಲಜಿಯ ಜಗತ್ತಿಗೆ ಹೊರತಾದುದೆಂದೇ ಸವೆಂತ್ ಸೀಲ್ ನಲ್ಲಿ ಅಡಗಿರುವ ಸತ್ಯ. ಮಾನವನ ಜನ್ಮ ಮಾನವನಿಗೆ, ಕಷ್ಟ, ಸುಖ-ದು:ಖ, ನೋವು-ನಲಿವು, ಹತಾಶೆ-ಖುಷಿ ಎಲ್ಲಾ ಕೂಡಾ ತುಂಬಾ ಸಹಜ, ಸಾವು, ಹುಟ್ಟು ಕೂಡಾ ಅತ್ಯಂತ ಸಹಜವೆನ್ನುವುದೇ ಕೂಡಾ ಸವೆಂತ್ ಸೀಲ್ನ ನಿಹಿತಾರ್ಥಗಳಲ್ಲಿ ಒಂದು. ಈ ನೆಲೆಯಿಂದಲೇ ಸವೆಂತ್ ಸೀಲ್ ಮತ್ತು ಬರ್ಗ್ ಮನ್ನ ಉಳಿದ ಅಂದರೆ ‘ಸಾ ಡಸ್ವ್ ಆ್ಯಂಡ್ ಟಿನ್ ಸೆಲ್’, ‘ಸ್ಟೈಲ್ಸ್ ಆಫ್ ಎ ಸಮ್ಮರ್ ನೈಟ್’, ಮತ್ತು ಆತನ ಕೊನೆಯ ಸಿನಿಮಾ ‘ಫ್ಯಾನ್ಸಿ ಆ್ಯಂಡ್ ಅಲೆಕ್ಸಾಂಡರ್’ ರಿಲೀಜಿಯಸ್ ಎನ್ನುವ ಡಿಸ್ ಕೋರ್ಸ್ ಅನ್ನು ನಮಗೆ ಒದಗಿಸುತ್ತದೆ.

ಒಬ್ಬಳು ಪ್ಲೇಗ್ ಬಂದ ಯುವತಿಯನ್ನು ಊರ ಹೊರಗೆ ಜೀವಂತವಾಗಿ ಸುಡುವುದು, ಒಪ್ಪಿತವಲ್ಲದ ಲೈಂಗಿಕತೆಯ ಕೆಲವು ಪ್ರಸಂಗಗಳು, ಅತ್ಯಂತ ಲೈಂಗಿಕ ತೃಷೆಯ ನಟನೊಬ್ಬ ಸಾವು ತನ್ನನ್ನು ಕಬಳಿಸುವ ಮುನ್ನ ಕಮ್ಮಾರನೊಬ್ಬನ ತೃಷೆಯ ಪತ್ನಿಯನ್ನು ಭೋಗಿಸುವುದು, ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬ ಹರಯದ ಹುಡುಗಿಯಲ್ಲಿ ನಡೆಸುವ ಕಲಾಪಗಳು, ಹೀಗೆ ಅನೇಕ ರೀತಿಯ ಘಟನೆ, ವೃತ್ತಾಂತಗಳ ಇಮೇಜ್ ಅನ್ನು ನೋಡುತ್ತಾ ಇವರಿಬ್ಬರೂ ಸಾಗುತ್ತಾರೆ. ಮಧ್ಯೆ ಮಧ್ಯೆ ಮೃತ್ಯು ಚೆಸ್ ಆಟಕ್ಕೆ ನೈಟ್ ನನ್ನು ಎಳೆದಾಗಲೆಲ್ಲಾ ನೈಟ್ ತನ್ನ ಅಸ್ತಿತ್ವದ, ಜೀವದ ಆಸೆಯಿಂದ, ತನ್ನ ಸಾವನ್ನು ಮುಂದೂಡುವ ಉದ್ದೇಶದಿಂದ ಮೃತ್ಯುವಿಗೆ ಚೆಸ್ ಆಟದಲ್ಲಿ ಮೋಸವನ್ನೂ ಮಾಡುತ್ತಾನೆ, ಆದರೆ ಅಂತಿಮವಾಗಿ ಮೃತ್ಯುವಿಗೆ ಆಹುತಿಯಾಗುತ್ತಾನೆ ನೈಟ್.

ಜಾಗತಿಕ ಸಿನಿಮಾದಲ್ಲಿ ಈ ಪ್ರೊಫೆಟಿಕ್ ರೆವೆಲೇಶನ್, ದೇವರು, ಸೈತಾನ್, ಕೆಡುಕು, ಮೃತ್ಯು, ಸೃಷ್ಟಿ ಮುಂತಾದ ಚರ್ಚೆಗಳನ್ನು ನಡೆಸಿದ ಕೆಲವೇ ಕೆಲವು ಸಿನಿಮಾ ನಿರ್ದೇಶಕರುಗಳಲ್ಲೇ ಬರ್ಗ್ ಮನ್ ತುಂಬಾ ಮುಖ್ಯ. ಬರ್ಗ್ ಮನ್ ಸವೆಂತ್ ಸೀಲ್ ನಲ್ಲಿ, ಡ್ರೆಯರ್, ರಾಬರ್ಟ್ ಬ್ರೆಸ್ಸನ್ ಮತ್ತು ಲಾರ್ಸ್ ವೋನ್ ಟ್ರಯರ್ ಮುಂತಾದ ನಿರ್ದೇಶಕರುಗಳು ರಿಲೀಜಿಯಸ್ ಎನ್ನುವ ವಸ್ತುವನ್ನು ನಿರ್ವಹಿಸುವ ಎವಿಲ್ (ಕೇಡು), ಒಕ್ಕಲ್ಟ್ ಗಿಂತ ವಿಭಿನ್ನವಾಗಿ ನಿರ್ವಹಿಸುತ್ತಾನೆ. ಕೆಲವು ಕಡೆ ಕೇಡು ಮತ್ತು ಒಕ್ಕಲ್ಟ್ ಗಿಂತ ಹೆಚ್ಚು ಸವೆಂತ್ ಸೀಲ್ ನಲ್ಲಿ ಫಿಸಿಯಾಲಜಿ ಮತ್ತು ಸೈಕಾಲಜಿ ಧುತ್ತನೆ ಎರಗುತ್ತದೆ. ಇದಕ್ಕೆ ತೀರಾ ವಿರುದ್ಧವಾದ ವಿವರಣೆಯನ್ನು ನಾವು ಲಾರ್ಸ್ ವೋನ್ ಟ್ರಯರ್ ನ ಸಿನಿಮಾಗಳಲ್ಲಿ ನೋಡಬಹುದಾದರೂ ಬರ್ಗ್ಮನ್ ನಿರೂಪಣೆ, ಕಥನ ತುಂಬಾ ಮುಖ್ಯ ಯಾಕೆಂದರೆ ಅದು ಸಂಪ್ರದಾಯಬದ್ಧವಾದ, ಚಾರಿತ್ರಿಕ ಎನ್ನುವ ರಿಲೀಜಿಯನ್ ನ ಅಂಗರಚನೆಯನ್ನು ವಿರೋಧಿಸುವ, ಮೂಲಕ ಚರ್ಚೆಗೆ ಒಳಪಡಿಸುವಂತದ್ದು. ಅನುಭಾವ, ನಿಗೂಢಕ್ಕಿಂತ ಭೌತಿಕ ವಿಜಯವೇ, ಸತ್ಯವೇ ಸವೆಂತ್ ಸೀಲ್ ಎಂದು ವಿವರಿಸುವಂತದ್ದು.

ಸವೆಂತ್ ಸೀಲ್ ಸಿನಿಮಾದ ಇಮೇಜ್ ಗಳ ಸಿನಿಮೀಯ ಸಂದರ್ಭಗಳಂತೂ ಬಹು ಆಕರ್ಷಕ. ಸಾವು, ಯಾತ್ರೆ, ಕಾಡು ಸ್ಟ್ರಾಬೆರಿಯ ಊಟ, ಹಾಲಿನೂಟ, ಮಾಟಗಾತಿಯ ದಹನ, ಚೆಸ್ ಗೇಮ್, ಮಿಯಾ ಮತ್ತು ಮೆಬೆಲ್, ಸಿನಿಮಾದ ಕೊನೆಯಲ್ಲಿ ಸಾವಿನ/ಮೃತ್ಯುವಿನ ನೃತ್ಯ ಮತ್ತು ಆಕರ್ಷಕ ಝೋಫ್ ಮುಖಭಾವ, ಮುಂತಾದವುಗಳೇ ಮುಖ್ಯವಾದ ಸವೆಂತ್ ಸೀಲ್ ಸಿನಿಮಾದ ಶಕ್ತಿಯಿರುವುದೇ ಈ ಇಮೇಜ್ ಗಳಲ್ಲಿ, ಅದರ ನೆನಪುಳಿಯುವಿಕೆಯಲ್ಲಿ. ಆ ಇಮೇಜ್ ಗಳ ಮೂಲಕ ನಮ್ಮ ಕಲ್ಪನೆಗಳನ್ನು ಸ್ಥಾಪಿಸುವುದರ ಮುಖೇನ ಈ ಸಾವಿನ ಖಾಲಿತನದ ಅನುಭವವಾಗುವುದು. ಆ ರೀತಿ ಕಲ್ಪನೆ ಸಾಧ್ಯವಾಗುವುದೂ ಕೂಡಾ ಉದಾಹರಣೆಗೆ ಸವೆಂತ್ ಸೀಲ್ ನ ಕಾಡು ಸ್ಟ್ರಾಬೆರಿಯ ಊಟದ ಇಮೇಜ್ ನಿಂದ ಇದು ಸಾಧ್ಯವಾಗುತ್ತದೆ. ಬಹುಶಃ ಜಾಗತಿಕ ಸಿನಿಮಾಗಳಲ್ಲಿ ಎಲ್ಲಿಯೂ ಇಲ್ಲವೆನ್ನಬಹುದಾದ ಸಾವಿನ ಇಮೇಜ್ ಸಾಧ್ಯವಾಗಿದ್ದು ಸವೆಂತ್ ಸೀಲ್ ನಿಂದ. ಮೃತ್ಯು (ಬೆಂಕ್ಟ್ ಏಕೆ ರೋಟ್) ಎನ್ನುವುದೇ ಇಮೇಜ್ ಇಲ್ಲಿ. ಭಯಾನಕ, ರೌದ್ರ, ಭೀಭತ್ಸದ ಇಮೇಜ್ ಕೂಡಾ ಹೌದು.

ರಿಲೀಜಿಯಸ್ ಅಂದರೆ ಪ್ಯೂರಿಸ್ಟ್ ಆದ, ಸಾಂಪ್ರದಾಯಿಕ ನೆಲೆಯ ಗ್ರಹೀತವಲ್ಲ, ಬದಲು ಮಾನವನ ಜೀವನದಲ್ಲಿ ಪ್ರವೃತ್ತಿಗಳಷ್ಟೇ ಪ್ರಬಲವಾಗಿ ಜೀವನವನ್ನು ಪ್ರಭಾವಿಸುವ, ರೂಪಿಸುವ ಒಂದು ಅಂಶವಾಗಿ. ರಿಲೀಜಿಯನ್ ವಿಶೇಷವಾಗಿ ಬರ್ಗ್ ಮನ್ ಸಂದರ್ಭದಲ್ಲಿ ಕ್ರಿಶ್ಚಿಯಾನಿಟಿಯನ್ನು ಮರು ನಿರೂಪಿಸುವುದು, ಚರ್ಚಿಸುವುದು. ಇಲ್ಲಿಯೂ ಕೂಡಾ ರಿಲೀಜಿಯನ್ನ ಸಂರಚನೀಯ ಚರ್ಚೆ, ಅಧ್ಯಯನಕ್ಕಿಂತ ರಿಲೀಜಿಯನ್ ಒಳಗೊಂಡಿರುವ ಮುಕ್ತಿಮಾರ್ಗದ ಚರ್ಚೆಯನ್ನು ಬರ್ಗ್ ಮನ್ ಇದರಲ್ಲಿ ನಡೆಸುತ್ತಾನೆ.

ಸವೆಂತ್ ಸೀಲ್ ಒಂದು ನೈತಿಕತೆಯ ಕಥನ. ಇದರ ಪಾತ್ರ ಮತ್ತು ಇಮೇಜ್ ಗಳು ಮಾನವನ ವಿವಿಧ ವಿಧ ಮತ್ತು ಮಾನವನ ಅನಂತ ಸಾಧ್ಯತೆಗಳನ್ನು ತೆರೆದಿಡುತ್ತದೆ. ಎಲ್ಲಾ ಪಾತ್ರಗಳೂ ಕೂಡಾ ವ್ಯಕ್ತಿಗತ ಚರಿತ್ರೆ ಅಥವಾ ವೈಯಕ್ತಿಕ ಮನ:ಶಾಸ್ತ್ರವನ್ನು ಆಗ್ರಹಿಸುತ್ತಾ, ಅವುಗಳನ್ನು ಒಂದು ಸಮಗ್ರ ನೆಲೆಯಲ್ಲಿ ಅರ್ಥೈಸಿಕೊಳ್ಳುವಂತೆ ಆಗ್ರಹಿಸುತ್ತವೆ. ಈ ರೀತಿಯ ಜನರಿಗೆ, ಅಥವಾ ವಿವಿಧ ಗುಂಪಿನ ಜನರಿಗೆ ಜ್ಞಾನವಿದ್ದೂ ಕೂಡಾ ನಂಬಿಕೆಯಿರದಿದ್ದನ್ನು ಪರಿಶೀಲಿಸುತ್ತದೆ. ದೇವರು, ಭಯ ಮುಂತಾದ ಸಂಗತಿಗಳನ್ನು ಮನವರಿಕೆ ಮಾಡುತ್ತದೆ. ಈ ಸವೆಂತ್ ಸೀಲ್ ಎನ್ನುವ ಸಂಗತಿ ಹಳೆಯ ಒಡಂಬಡಿಕೆಯಲ್ಲಿ ಬರುವಂತದ್ದು. ಅದು ಮನುಕುಲದ ಮೆಲೆ ದೇವರು ಮಾಡುವ ಅಂತಿಮ ತೀರ್ಪಿನ ಆರಂಭವನ್ನು ತಿಳಿಸುತ್ತದೆ ಹೀಗೆ, ‘ಸವೆಂತ್ ಸೀಲ್ ಉದ್ಘಾಟಿತವಾದಾಗ ಭೂಮಿಯಲ್ಲಿ ಮೌನವಿತ್ತು, ಬೆಂಕಿಯಿತ್ತು ಮತ್ತು ದೇವದೂತರು ದೀಪಪಾತ್ರೆಯನ್ನು ಬೆಂಕಿಯಿಂದ ಒಡಗೂಡಿ ಒಯ್ದರು ಮತ್ತು ಬೆಂಕಿಯನ್ನು ಭೂಮಿಯ ಮೇಲೆ ಎಸೆದರು’. ಇದರ ನಂತರ ನಮ್ಮ ಸಮಕಾಲಿಕ ಜಗತ್ತು ನಾಶವಾಗುತ್ತದೆ, ಸತ್ತ ಎಲ್ಲರನ್ನೂ ಕೂಡಾ ದೇವರೆದುರು ತರಲಾಗುತ್ತದೆ ಅವರು ಇರುವ ಹಾಗೆಯೇ, ಆದರೆ ಬರ್ಗ್ ಮನ್ ಪ್ರಕಾರ ಅಂತಿಮ ತೀರ್ಪನ್ನು ನಮ್ಮಿಂದಲೇ ನಿರ್ಮಿಸಲಾಗುತ್ತದೆ. ನಾವೇ ನಿರ್ಮಿಸಬೇಕಾಗುತ್ತದೆ. ಇಲ್ಲಿ ಸಾವು ನ್ಯಾಯಾಧೀಶನಲ್ಲ, ದೇವರು ಕೂಡಾ ಆತನ ಸೃಷ್ಟಿಯಿಂದ ಹೊರತಾದವನಲ್ಲ. ಇದೇ ರೀತಿಯಲ್ಲಿ ಸಾವು ಕೂಡಾ ನೈಟ್ ನ ಅರಮನೆ (ಮ್ಯಾನೋರ್)ಗೆ ಬಂದು ನಿಂತರೂ ಕೂಡಾ ಅವನು ಮಾತನಾಡುವುದಿಲ್ಲ. ಅವನು ನೋಡುತ್ತಾನೆ, ಅವನೆದುರಿರುವ ಪ್ರತಿಯೊಬ್ಬರೂ ಕೂಡಾ ಅವರಷ್ಟಕ್ಕೇನೇ, ಅವರವರ ಸ್ವಂತ ತೀರ್ಪನ್ನು ನೀಡುತ್ತಿರುತ್ತಾರೆ.

ಹೀಗೆ ಸವೆಂತ್ ಸೀಲ್ ಅತ್ಯಂತ ಮುಖ್ಯವಾದ ಸಿನಿಮಾ. ಈ ಕಾರಣದಿಂದಲೇನೇ ಜಗತ್ತಿನ ಬಹುತೇಕ ಸಿನಿಮಾ ನಿರ್ದೇಶಕರು, ವಿಮರ್ಶಕರು ಇದನ್ನು ಗಂಭೀರವಾಗಿ ಗಣಿಸಿರುವುದು. ಬರ್ಗ್ ಮನ್ ಗೆ ಅತ್ಯಂತ ಖುಷಿ ಕೊಟ್ಟಿರುವ ಸಿನಿಮಾ ಕೂಡಾ ಹೌದಿದು. ಅತ್ಯಂತ ತಾತ್ವಿಕ, ರಿಲೀಜಿಯಸ್ ಎನ್ನಬಹುದಾದ ಆವರಣ, ಕವಚಗಳನ್ನು ಇದು ಹೊಂದಿದೆ. ಅತ್ಯಂತ ಸೂಕ್ಷ್ಮ ಮನಸ್ಸು, ಸಮಯ, ತೀರ್ಮಾನಗೈಯುವಂತಹ ಮನೋಭಾವವನ್ನೂ ಕೂಡಾ ಈ ಸಿನಿಮಾ ಆಗ್ರಹಿಸುತ್ತದೆ. ಹೊಸ ಹೊಸ ವೀಕ್ಷಣೆ, ಓದಿನಲ್ಲೂ ಕೂಡಾ ಸವೆಂತ್ ಸೀಲ್ ಹೊಸ ಹೊಸ ಅರ್ಥ ಸಾಧ್ಯತೆಯನ್ನೂ ನಿರಚಿಸಿ ಹೊಸದಾಗಿ ನಿಲ್ಲುತ್ತದೆ.

0
0