ಬೆಂಗಳೂರಿನ ಈ ಹೊತ್ತಿಗೆ ಸಂಸ್ಥೆಯು, ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ಗಾಗಿ ಕನ್ನಡದ ಅಪ್ರಕಟಿತ ಕಥಾ ಸಂಕಲನಗಳನ್ನು ಆಹ್ವಾನಿಸುತ್ತಿದೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಕಥಾ ಸ್ಪರ್ಧೆಯನ್ನು ಏರ್ಪಡಿಸಿದೆ.

ಸಾಹಿತ್ಯ ಅಧ್ಯಯನಕ್ಕೊಂದು ಹೊಸ ರೂಪು ಕೊಟ್ಟ ‘ಈ ಹೊತ್ತಿಗೆ’ಯು ಈ ವರ್ಷವೂ ಕನ್ನಡ ಕಥಾ ಸ್ಪರ್ಧೆಗಳನ್ನು ಆಯೋಜಿಸಿದೆ.

ಅಪ್ರಕಟಿತ ಕಥಾ ಸಂಕಲನಕ್ಕಾಗಿ

10,000 (ಹತ್ತು ಸಾವಿರ) ರೂಪಾಯಿ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ.

ನಿಯಮಗಳು :

1. ಅಪ್ರಕಟಿತ ಸಂಕಲನದಲ್ಲಿರುವ ಕಥೆಗಳು ಸ್ವತಂತ್ರವಾಗಿರಬೇಕು. ಸಂಕಲನದಲ್ಲಿ ಕಡ್ಡಾಯವಾಗಿ ಅನುವಾದಿತ ಕಥೆಗಳಿರಕೂಡದು.

2. ಸಂಕಲನವು 8ರಿಂದ 10 ಕಥೆಗಳನ್ನು ಒಳಗೊಂಡಿರಬೇಕು.

3. ಡಿಟಿಪಿ ಮಾಡಿಸಿ, ಬೈಂಡ್ ಮಾಡಿಸಿದ ಅಪ್ರಕಟಿತ ಸಂಕಲನದ ಮೂರು ಪ್ರತಿಗಳನ್ನು ಈ ಹೊತ್ತಿಗೆಯ ಅಂಚೆ ವಿಳಾಸಕ್ಕೆ ಕಳುಹಿಸಿಕೊಡಬೇಕು.

4. ಕಥೆಗಾರರು ಪ್ರತ್ಯೇಕ ಹಾಳೆಯಲ್ಲಿ ತಮ್ಮ ಹೆಸರು, ಸಂಕಲನದ ಹೆಸರು, ಸಂಪೂರ್ಣ ವಿಳಾಸ, ಮೊಬೈಲ್ ಸಂಖ್ಯೆಯನ್ನು ಬರೆದಿರಬೇಕು. ಯಾವುದೇ ಕಥೆಯ ಪುಟಗಳಲ್ಲಿ ಕಥೆಗಾರರ ಹೆಸರು ಇರಕೂಡದು.

5. ಪ್ರಶಸ್ತಿ ಘೋಷಣೆಯಾದ 30 ದಿನಗಳಲ್ಲಿ ಪ್ರಶಸ್ತಿ ಪಡೆದ ಸಂಕಲನವು ಮುದ್ರಣಗೊಳ್ಳಬೇಕು. ಕೃತಿ ಮುದ್ರಣಗೊಂಡರೆ ಮಾತ್ರ ಘೋಷಿತ ಬಹುಮಾನದ ಮೊತ್ತ ಹಾಗು ಪ್ರಶಸ್ತಿ ಫಲಕವು ಈ ಹೊತ್ತಿಗೆಯ ಹೊನಲು ಸಮಾರಂಭದಲ್ಲಿ ಸಲ್ಲುತ್ತದೆ.

6. ಪ್ರಶಸ್ತಿ ಪಡೆದ ಕೃತಿಯನ್ನು ಮುದ್ರಿಸುವಾಗ ಮುಖಪುಟ ಹಾಗು ಪುಸ್ತಕದ ಒಳ ಪುಟದಲ್ಲಿ ‘ಈ ಹೊತ್ತಿಗೆ ಕಥಾ ಪ್ರಶಸ್ತಿ ವಿಜೇತ ಕೃತಿ’ ಎಂದು ಮುದ್ರಿಸಿರಬೇಕು.

ಕಾಲೇಜಿನ ವಿದ್ಯಾರ್ಥಿಗಳಿಗಾಗಿ (ವಯೋಮಿತಿ – ಗರಿಷ್ಠ 25 ವರ್ಷ)
1. ಮೊದಲನೆಯ ಬಹುಮಾನ :  5000/-
2. ಎರಡನೆಯ ಬಹುಮಾನ : 3000/-
3. ಮೂರನೆಯ ಬಹುಮಾನ : 2000/-

ನಿಯಮಗಳು :
1. ಸ್ವತಂತ್ರವಾಗಿದ್ದು ಅಪ್ರಕಟಿತ ಕಥೆಯಾಗಿರಬೇಕು. ( ಬ್ಲಾಗ್/ವೆಬ್ ಸೈಟ್/ ಫೇಸ್ ಬುಕ್ ಮುಂತಾದ ಯಾವುದೇ ತಾಣಗಳಲ್ಲಿಯೂ ಪ್ರಕಟವಾಗಿರಬಾರದು)
2. ಪದಮಿತಿ ಗರಿಷ್ಠ 1500 ಪದಗಳು ಮಾತ್ರ.
3. ಇ-ಮೇಲ್ ಮುಖಾಂತರ ಕಳುಹಿಸುವವರು ಯೂನಿಕೋಡ್ ತಂತ್ರಾಂಶವನ್ನು ಬಳಸಬೇಕು.
4. ಹಸ್ತಪ್ರತಿ ಕಳುಹಿಸುವವರು ಪುಟದ ಒಂದೇ ಮಗ್ಗುಲಲ್ಲಿ ಸ್ಫುಟವಾಗಿ , ಚಿತ್ತುಗಳಿಲ್ಲದಂತೆ ಬರೆದು ಕಳುಹಿಸಬೇಕು.
5. ಕಥೆಗಾರರು ಪ್ರತ್ಯೇಕ ಹಾಳೆಯಲ್ಲಿ ತಮ್ಮ ಹೆಸರು, ಸಂಪೂರ್ಣ ವಿಳಾಸ, ಸಂಪರ್ಕ ಸಂಖ್ಯೆಯನ್ನು ಬರೆದಿರಬೇಕು. 6. ಕಥೆಯ ಪುಟಗಳಲ್ಲಿ ಕಥೆಗಾರರ ಹೆಸರು ಇರಕೂಡದು.
7. ವಿದ್ಯಾರ್ಥಿಗಳು ತಮ್ಮ ಕಾಲೇಜಿನ ವ್ಯಾಸಂಗ ದೃಢೀಕರಣ ಪತ್ರ ಹಾಗು ವಯಸ್ಸಿನ ದೃಢೀಕರಣ ಪತ್ರವನ್ನು ಕಥೆಯೊಂದಿಗೆ ಕಳುಹಿಸುವುದು ಕಡ್ಡಾಯ.

ನಿಮ್ಮ ಅಪ್ರಕಟಿತ ಕಥಾ ಸಂಕಲನ ಹಾಗು ಕಥೆ ನಮಗೆ ತಲುಪಲು ಕೊನೆಯ ದಿನಾಂಕ :20 ಡಿಸೆಂಬರ್ 2018

ಪ್ರಪಂಚದಾದ್ಯಂತ ಇರುವ ಕನ್ನಡ ಲೇಖಕರೆಲ್ಲರೂ ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು.
ಈ ಹೊತ್ತಿಗೆಯ ತೀರ್ಮಾನವೇ ಅಂತಿಮ.

2019ರ ಫೆಬ್ರುವರಿಯಲ್ಲಿ ನಡೆಯುವ ಈ ಹೊತ್ತಿಗೆಯ ಹೊನಲು ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿಯನ್ನು ನೀಡಲಾಗುವುದು.

ಹಸ್ತಪ್ರತಿ ಕಳುಹಿಸುವವರಿಗಾಗಿ ವಿಳಾಸ :
ಈ ಹೊತ್ತಿಗೆ, #65 , ಮುಗುಳ್ನಗೆ, 3ನೇಯ ಅಡ್ಡರಸ್ತೆ ,
ಪಿ.ಎನ್.ಬಿ. ನಗರ, ದೊಡ್ಡಕಲ್ಲಸಂದ್ರ, ಕೋಣನಕುಂಟೆ,
ಬೆಂಗಳೂರು – 560062

ಕಥೆಯ ಸಾಫ್ಟ್ ಕಾಪಿ ಕಳುಹಿಸುವ ಕಾಲೇಜ್ ವಿದ್ಯಾರ್ಥಿಗಳಿಗಾಗಿ ಇ-ಮೇಲ್ ವಿಳಾಸ : [email protected]

0
0