‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಫಲಿತಾಂಶ

(ಮುಸ್ತಫ. ಕೆ. ಎಚ್)

ಕೊಡಗಿನ ಶ್ರೀ. ಮುಸ್ತಫ. ಕೆ. ಎಚ್ ಅವರ ಅಪ್ರಕಟಿತ ಕಥಾ ಸಂಕಲನ ‘ಹರಾಂನ ಕಥೆಗಳು’, ೨೦೧೯ರ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ಯನ್ನು ಪಡೆದುಕೊಂಡಿದೆ. ಪ್ರಶಸ್ತಿಯು ರೂ. ೧೦,೦೦೦ ನಗದು ಹಾಗು ಪ್ರಶಸ್ತಿ ಫಲಕವನ್ನೊಳಗೊಂಡಿದೆ. ನಾಡಿನ ಖ್ಯಾತ ಕಥೆಗಾರ ಶ್ರೀ. ಕೇಶವ ಮಳಗಿ ಹಾಗೂ ಖ್ಯಾತ ಪತ್ರಕರ್ತರಾದ ಶ್ರೀಮತಿ. ಸಿ. ಜಿ ಮಂಜುಳಾ ಅವರು ಕಥಾ ಸಂಕಲನಗಳ ತೀರ್ಪುಗಾರರಾಗಿ ಈ ಕೃತಿಯನ್ನು ಆಯ್ಕೆ ಮಾಡಿದ್ದಾರೆ.

ಈ ಹೊತ್ತಿಗೆ ಕಥಾ ಸ್ಪರ್ಧೆಯ ಫಲಿತಾಂಶ

ನಾಡಿನ ಹಿರಿಯ ಸಾಹಿತಿ ಶ್ರೀಮತಿ. ಉಷಾ ಪಿ. ರೈ ಹಾಗೂ ಚಲನಚಿತ್ರ ನಿರ್ದೇಶಕರೂ, ಚಿತ್ರ ಸಾಹಿತಿ, ಕತೆಗಾರರೂ ಆಗಿರುವ ಶ್ರೀ. ಎಸ್ ಎಂ. ಪಾಟೀಲ್ ಅವರುಗಳು ಕಥೆಗಳ ತೀರ್ಪುಗಾರರಾಗಿ ಈ ಕಥೆಗಳನ್ನು ಕ್ರಮಾನುಸಾರ ಬಹುಮಾನಗಳಿಗೆ ಆಯ್ಕೆ ಮಾಡಿದ್ದಾರೆ.

ಇದೇ ಮಾರ್ಚ್ ೦೧ರಂದು ಜರುಗಲಿರುವ ಈ ಹೊತ್ತಿಗೆಯ ‘ಹೊನಲು’ ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

(ಗೋವಿಂದರಾಜು ಎಂ. ಕಲ್ಲೂರು)

ತುಮಕೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿರುವ ಶ್ರೀ. ಗೋವಿಂದರಾಜು ಎಂ. ಕಲ್ಲೂರು ಅವರು ಬರೆದ, ‘ಒಂಟಿ ನಕ್ಷತ್ರ ಗುಳೆ ಹೋದ ದಿವಸ’ ಕಥೆಗೆ ಪ್ರಥಮ ಬಹುಮಾನ (ರೂ. ೫೦೦೦ ನಗದು ಹಾಗು ಪ್ರಮಾಣ ಪತ್ರ)

(ಕಪಿಲ ಪಿ. ಹುಮನಾಬಾದೆ)

ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಎರಡನೇ ವರ್ಷದ ಎಂ.ಎ – ಅರ್ಥಶಾಸ್ತ್ರ ಓದುತ್ತಿರುವ ಶ್ರೀ. ಕಪಿಲ ಪಿ. ಹುಮನಾಬಾದೆ ಅವರ ‘ಬಿಸಿಲು’ ಕಥೆಗೆ ದ್ವಿತೀಯ ಬಹುಮಾನ (ರೂ. ೩೦೦೦ ನಗದು ಹಾಗು ಪ್ರಮಾಣ ಪತ್ರ),

(ದಾದಾಪೀರ್ ಜೈಮನ್)

ಬೆಂಗಳೂರಿನಲ್ಲಿ ಶಿಕ್ಷಕರಾಗಿರುವ ಶ್ರೀ. ದಾದಾಪೀರ್ ಜೈಮನ್ ಅವರ ‘ಎಲ್ಲೋ ಯಲ್ಲೋ…’ ಕಥೆಗೆ ತೃತೀಯ ಬಹುಮಾನ (ರೂ. ೨೦೦೦ ನಗದು ಹಾಗು ಪ್ರಮಾಣ ಪತ್ರ)

ಧಾರವಾಡದಲ್ಲಿ ಎರಡನೇ ವರ್ಷದ ಎಂ.ಎ – ಪತ್ರಿಕೋದ್ಯಮ ಓದುತ್ತಿರುವ ಯರಗುಪ್ಪಿಯ ಶ್ರೀ. ಬಸನಗೌಡ ಪಾಟೀಲ್ ಅವರ ‘ಮೈಲಿಗೆ ಗುಡಿಸಲು’ ಮತ್ತು ಪುತ್ತೂರಿನ ಪಾಲಿಟೆಕ್ನಿಕ್ ಕಾಲೇಜಿನ ಕನ್ನಡ ಉಪನ್ಯಾಸಕರಾಗಿರುವ ಶ್ರೀ. ವಿಶ್ವನಾಥ. ಎನ್ ಅವರ ‘ಋಣ’ ಮೆಚ್ಚುಗೆ ಪಡೆದ ಕಥೆಗಳಾಗಿವೆ ಎಂದು ಈ ಹೊತ್ತಿಗೆಯ ಶ್ರೀಮತಿ ಜಯಲಕ್ಷ್ಮಿ ಪಾಟೀಲ್ ತಿಳಿಸಿರುತ್ತಾರೆ..

0
0