ಮಧುರಚೆನ್ನರೆಂದೇ ಪ್ರಖ್ಯಾತರಾಗಿದ್ದ ಚೆನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿಯವರು ಹುಟ್ಟಿದ್ದು  ವಿಜಾಪುರ ಜಿಲ್ಲೆಯ ಹಲಸಂಗಿ ಬಳಿಯಿರುವ ಹೀರೆಲೋಣಿಯಲ್ಲಿ ಇಂಗ್ಲಿಷ್ ಹಾಗೂ ಬಂಗಾಳಿ ಭಾಷೆಯನ್ನು ಬಲ್ಲವರು. ‘ನನ್ನ ನಲ್ಲ’  ಅವರು ಬರೆದ ಕವನ ಸಂಕಲನ. ಆತ್ಮಕೃತಿ ಎಂಬುದು ಅವರ ಅ ‘ಪೂರ್ವರಂಗ’ ‘ಕಾಳರಾತ್ರಿ’, ‘ಬೆಳಗು’ ಮತ್ತು ‘ಆತ್ಮ ಸಂಶೋಧನೆ’ ಇವು ಆಧ್ಯಾತ್ಮಿಕ ಸಾಧನೆಯನ್ನು ಚಿತ್ರಿಸುವ ಸೃಜನಶೀಲ ಕೃತಿಗಳೆಂದೆನಿಸಿಞನುಭವಗಳ ಕಥನ.  ‘ಪೂರ್ವರಂಗ’ ‘ಕಾಳರಾತ್ರಿ’, ‘ಬೆಳಗು’ ಮತ್ತು ‘ಆತ್ಮ ಸಂಶೋಧನೆ’ ಅವರ ಕೃತಿಗಳು. ಅಧ್ಯಾತ್ಮ ಸಾಧಕನಾಗಿ ಬಾಳುವೆ ಮಾಡಿದ ಸರಳ ಜೀವಿ. ಅವರು ಬರೆದ  ರೋಹಿಣಿ ಎಂಬ ಕವನ, ಇಂದಿನ ಸರಣಿಯಲ್ಲಿ

ರೋಹಿಣಿ

ಬಾರೇ ಗೆಳತಿ
ಒಳಗೇ ಕುಳಿತಿ
ಅಟ್ಟಾ ಏರಿ
ಮೇಲೆ ನಿಂತಿ.
ಕದಾಗಿದಾ ನೂಕಿಕೊಂಡು
ಚಿಲಕಾಗಿಲಕಾ ಹಾಕಿಕೊಂಡು
ಅಲ್ಲೇ ಕುಳಿತಿ
ಬಾರೇ ಗೆಳತಿ

ಬಾರೇ ಜಾಣಿ
ಮಿಂಚಿನ ರಾಣಿ
ಅಪ್ಸರ ನಾರಿ
ಮೈ ಜರತಾರಿ.
ಥಾಟಮಾಟ ಮಾಡಿಕೋತ
ಆಟಪಾಟ ಆಡಿಕೋತ
ಅಲ್ಲೆ ಕುಳಿತಿ
ಬಾರೇ ಗೆಳತಿ

ಮುಗಿಲಾಗ್ ಹೊಳೆದಿ
ಮೇಲೆ ಇಳಿದಿ
ಒಳಗೇ ಉಳಿದಿ
ಏನೋ ಎಂತೋ ನೋಡಿಕೋತ
ತರನಾ ತರಲಾ ಹಾಡಿಕೋತ
ಅಲ್ಲೆ ಕುಳಿತಿ
ಬಾರೆ ಗೆಳತಿ

ಎಂದಿಗೊಮ್ಮೆ
ಹಾಕುತ ಹಣಕಿ
ಮಾರಿತೋರಿ
ತುಸುತುಸು ಇಣಕಿ
ಮಾಟ ಮೋಡೀ ಮಾಡಿಕೋತ
ಕಳ್ಳೀ ಆಟ ಆಡಿಕೋತ
ಅಲ್ಲೆ ಕುಳಿತಿ
ಬಾರೇ ಗೆಳತಿ

ನೀ ಕೂತಲ್ಲಿ
ಜ್ಯೋತಿಯ ಢಾಳ
ನಾ ಕೂತಲ್ಲಿ
ಕತ್ತಲೆ ಕಾಳ
ಕಂಡೂ ಕಂಡೂ ಕೂತೇ ಕೂತಿ
ತಿಳಿದೂ ತಿಳಿದೂ ಹಾಗೆ ಇರತಿ
ಅಲ್ಲೆ ಕುಳಿತಿ
ಬಾರೇ ಗೆಳತಿ

ಏಸೋ ಕಾಲಕ್ಕೆ
ಅಟ್ಟಕೆ ಬಂದಿ
ಅಲ್ಲೀದಿಲ್ಲಿ
ಗೆಂದರೆ ಬಂದಿ
ಬರತೀ ಬರತೀ ಬಂದೇ ಬರತೀ
ಎಷ್ಟೊತ್ತಾರೆ ಅಲ್ಲೇ ಇರತಿ
ಅಲ್ಲೆ ಕುಳಿತಿ
ಬಾರೇ ಗೆಳತಿ