”ಅಂತೂ ಸೀತಮ್ಮನ ಗಾದೆಗಳು ಮನೆ ತುಂಬಾ ಉರುಳಲು ಹತ್ತಿದವು. ‘ಉಪ್ಪು’ ಎಂದು ಕೇಳಿದವರಿಗೂ ಸೀತಮ್ಮ ‘ತಗೋಪ್ಪಾ, ತಗೋ, ಉಪ್ಪರ್ಗೆ ಮನೆ ಇದ್ರೂ ಉಪ್ಪಿಲ್ದೆ ಆಗುತ್ತಾ? ಉಪ್ಪಿಂದ್ಲೇ ಮುಪ್ಪ್ ಬಂದ್ರೂ ಉಪ್ಪ್ ಬಿಟ್ಟಾನೆ ಮನ್ಷಾ?’ ಅಂತ ಗಾದೆ ಬೆರೆಸಿದ ಉಪ್ಪನ್ನೇ ಕೊಟ್ಟಾರು. ‘ಗಾದೆ ಸೀತಮ್ನೋರೇ’ ಅಂತ ಕರೆಯುವಷ್ಟು ಸಲಿಗೆ ವಿಶ್ವನಾಥಯ್ಯನೋರ ಮಕ್ಕಳಿಗೂ ಬೆಳೆದಿತ್ತು.ಈ ವರಸೆ ಬೇರೆಯವರಿಗೂ ತಗುಲದಿರಲಿಲ್ಲ. ಹೇಗೋ ಏನೋ ಎಲ್ಲರ ಮಾತುಗಳಲ್ಲಿ ಗೊತ್ತಿದ್ದ ಅಲ್ಪಸ್ವಲ್ಪ ಗಾದೆಗಳೇ ವಿಚಿತ್ರ ರೂಪ ಪಡೆದು ಕಾಣಿಸಹತ್ತಿದವು”
ಸುಕನ್ಯಾ ಕನಾರಳ್ಳಿ ಬರೆದ ಸಣ್ಣ ಕಥೆಯೊಂದು ನಿಮ್ಮ ಈ ಭಾನುವಾರದ ಓದಿಗಾಗಿ.

 

ಸೀತಮ್ಮ ಆ ಮನೆಗೆ ಬಂದಾಗ ಬೋಳು ಮುತ್ತೈದೆಯಂತೇ ಬಂದರು. ಕಂದಿದ ಮುಖ, ಕೈಯಲ್ಲೊಂದು ದೈನೇಸಿ ಬ್ಯಾಗು, ಒಳಗೆ ಒಂದೋ ಎರಡೋ ಸೀರೆ, ಕಾಲಲ್ಲಿ ಹರಿದು ತೇಪೆ ಹಾಕಿದ್ದ ಚಪ್ಪಲಿ, ಕೈಯಲ್ಲಿ ಬಣ್ಣ ಕಳೆದ ಗಾಜಿನ ಬಳೆ, ಕಿವಿಯಲ್ಲಿ ಎಣ್ಣೆಗಟ್ಟಿದ ಕೆಂಪುಹರಳಿನ ವಾಲೆ, ಕೊರಳಲ್ಲಿ ಸಪಾಟಾದ ಕರಿಮಣಿಯ ಸರ, ಹಣೆಯಲ್ಲಿ ಹುಡಿಕುಂಕುಮ. ಕುದುರೇರ ಮನೆ ಸೀತಮ್ಮೋರು ನಾಳೆಯಿಂದ ಅಡಿಗೆ ಇತ್ಯಾದಿ ಕೆಲಸಕ್ಕೆ ಮನೆಯಲ್ಲೇ ಇರಲು ಬರುತ್ತಾರೆ ಅಂದಾಗ ವಿಶ್ವನಾಥಯ್ಯನೋರ ಮನೆ ಮಕ್ಕಳು ಯಾರೋ ವಯಸ್ಸಾದ ವಿಧವೆ ಬರುತ್ತಾರೆ ಅಂತ ಎಣಿಸಿದ್ದರಿಂದ ಹಣೆಗಿಟ್ಟ ಮುತ್ತೈದೆಯನ್ನು ನೋಡಿದಾಗ ಸ್ವಲ್ಪ ತಬ್ಬಿಬ್ಬಾದದ್ದುಂಟು. ‘ಗಂಡ ಇದಾರಾ?’ ಅಂತ ಪಿಸುವಾಗಿ ಕೇಳಿದ ಹಿರೀಮಗನ್ನ ಕಣ್ಣಲ್ಲೇ ಸುಮ್ಮನಾಗಿಸಿದ್ದರು ವಿಶ್ವನಾಥಯ್ಯನೋರ ಹೆಂಡತಿ ಪಾರತಮ್ಮ. ವಾರದಿಂದ ಸರಿಯಾಗಿ ಅಡಿಗೆ ಕಾಣದ ಮನೆಯಲ್ಲಿ ಬತ್ತಿದ ಸೀತಮ್ಮನ ಮುಖವೂ ಸ್ವಲ್ಪ ಸಮಾಧಾನ ತಂದಿತ್ತು. ‘ಬಂದ್ರಾ…’ ಎಂದು ಕ್ಷೀಣನಗೆಯಿಂದ ಮಲಗಿದಲ್ಲೇ ಸ್ವಾಗತಿಸಿದ ಪಾರ್ವತಮ್ಮನ ಉಪಚಾರಕ್ಕೆ ‘ಹೂಂ…’ ಎಂದು ಕಂದಿದ ಕೊರಳಲ್ಲೇ ಉತ್ತರಿಸಿದ್ದರು ಸೀತಮ್ಮ. ಮುಂದೆ ಮಾತಾಡಬೇಕೆನ್ನುವ ಹೊತ್ತಿಗೆ ವಿಶ್ವನಾಥಯ್ಯ ‘ಬನ್ನಿ, ಅಡ್ಗೆ ಮನೆ ತೋರಿಸ್ತೀನಿ. ನಮ್ಮದಿನ್ನೂ ಕಾಫೀನೂ ಆಗಿಲ್ಲ’ ಎಂದು ಕರ್ತವ್ಯದ ನೆನಪು ಮಾಡಿಕೊಡುವವರಂತೆ ಅಡಿಗೆ ಮನೆಗೆ ಕರೆದೊಯ್ದಿದ್ದರು. ಹತ್ತು ನಿಮಿಷದಲ್ಲಿ ಕಾಫಿ ಸರಬರಾಜಾದಾಗ ಸಧ್ಯ ನಾಳೆಯಿಂದ ಹೊತ್ತುಹೊತ್ತಿಗೆ ಕೂಳಾದರೂ ಸಿಗಬಹುದು ಎಂಬ ಸಮಾಧಾನ ಎಲ್ಲರ ಮುಖದಲ್ಲಿ ಎದ್ದು ಕಾಣಿಸುತ್ತಿತ್ತು.

ದೊಡ್ದ ಹುದ್ದೆಯಲ್ಲಿದ್ದ ವಿಶ್ವನಾಥಯ್ಯನೋರ ಹರವಾದ ಮನೆಯಲ್ಲಿ ಗಾಳಿ ಸಹ ಗಟ್ಟಿಯಾಗಿ ಉಸಿರಾಡಿದ್ದಿಲ್ಲ. ಮನೆಯಲ್ಲಿದ್ದರೂ ಆಫೀಸಿನಲ್ಲಿರುವಂತೆ ಗುಮ್ಮನೆ ಗುಸುಕನೆ ಇದ್ದ ಅಪ್ಪ ಮಕ್ಕಳ ಮಧ್ಯೆ ಕೆಲಸದ ಹುಡುಗ ಹನ್ನೆರಡು ವರ್ಷದ ಚುಲ್ಟಾರಿ  ಚಂದ್ರ ಮಾತ್ರ ಮುಖದ ತುಂಬ ಜಿನುಗುತ್ತಿದ್ದ ಉತ್ಸಾಹವನ್ನು ತಡೆಹಿಡಿಯಲಾರದವನಂತೆ ತುಳುಕಿಸುತ್ತಿದ್ದ. ಆ ಮನೆಯಲ್ಲಿ ಬಾಯಿ ತುಂಬಾ ‘ಸೀತಮ್ಮೋರೆ’ ಅಂತ ಮೊದಲ ದಿನದಿಂದ ಯಾವ ಬಿಂಕವೂ ಇಲ್ಲದೆ ಕರೆದವನೂ ಅವನೇ. ‘ಕಪ್ಪು ಬಸಿ ತೊಳೆದಿಟ್ಟಿದೀನಿ ನೋಡಿ ಸೀತಮ್ಮೋರೆ, ಇದು ನನ್ನ ಕಪ್ಪು. ಅದೇ ಕಾಪಿ ಪುಡಿಗೆ ಎರಡ್ನೇ ಸಲ ಡಿಕಾಕ್ಷನ್ ಹಾಕಿ ಅದರಿಂದ ನನ್ಗೆ ಕಾಪಿ ಮಾಡ್ಬೇಕು. ಮಾಡಿದ್ಮೇಲೆ ಒಂದು ಸಲ ‘ಚಂದ್ರಾ’ ಅಂತ ಕೂಗ್ ಹಾಕಿ. ಮುಂದ್ಗಡೆ ಕಸ ಗುಡಿಸ್ತಾ ಇರ್ತೀನಿ, ದೀಪ ಹಚ್ಚೊಕ್ಮುಂಚೆ ಮುಗಿಸ್ಬೇಕು. ಒಂದೇ ಕೂಗ್ಗೆ ವಾಟ ಬಂದ್ಬಿಡ್ತೀನಿ. ಆಂ..?’ -ವಟಗುಟ್ಟಿದ ಹುಡುಗನ ಕಡೆಗೊಂದು ಸಲ ನಿರಾಸಕ್ತಿಯ ದೃಷ್ಟಿ ಬೀರಿದರು ಸೀತಮ್ಮ. ‘ಎಂಥದಿದು ಎರಡ್ನೇ ಸಲದ ಡಿಕಾಕ್ಷನ್?’ ಅಂತ ಕೇಳಬೇಕೆಂದುಕೊಳ್ಳುವ ಹೊತ್ತಿಗೆ ಮನೆ ಯಜಮಾನನ ಮುಖ ಕಂಡಿತ್ತು. ಸುಮ್ಮನಾದರು.

ಎಲ್ಲರಿಗೂ ಕಾಫಿ ಮಾಡಿಕೊಟ್ಟು ಚಂದ್ರನ ಕಪ್ಪಿನಲ್ಲೂ ಅದೇ ಕಾಫಿ ಬಗ್ಗಿಸಿ ಕರೆದಾಗ ಬಂದು ಸೊರ್ರೆಂದು ಒಂದು ಗುಟುಕು ಹೀರಿದ ಹುಡುಗ ಆಶ್ಚರ್ಯದಿಂದ ಅವರ ಮುಖವನ್ನೊಮ್ಮೆ ನೋಡಿ ‘ಇವತ್ತೊಂದೇ ದಿನ ಈ ಭಾಗ್ಯ, ನಾಳೆ ಕಲ್ತುಕೊಳ್ತೀರಾ ಬಿಡಿ’ ಅನ್ನುವಂತೆ ನಕ್ಕಿದ್ದ. ಕಾಫಿ ಕುಡಿಯುತ್ತಲೇ ಸುತ್ತ ಕಣ್ಣು ಹಾಯಿಸಿದ ಸೀತಮ್ಮನೋರಿಗೆ ಅಡಿಗೆಮನೆ ಕಪಾಟಿನ ಚಿಲಕದಿಂದ ತೂಗುಬಿದ್ದ ಬೀಗ ಮತ್ತು ಎಸಳು ಗಲಿಬಿಲಿಗೊಳಿಸಿದವು. ಇತ್ತ ನೋಡಿದರೆ ಫ್ರಿಡ್ಜಿಗೂ ಅದೇ ಗತಿ! ಸ್ವಲ್ಪ ಬಾಗಿದರೆ ಡೈನಿಂಗ್ ರೂಮಿನ ಕಪಾಟೂ ಸಹ ಅವರನ್ನು ನೋಡಿ ನಕ್ಕಿತು. ಎಡಕ್ಕೆ ಕಣ್ಣು ಹಾಯಿಸಿದರೆ ಸಂಜೆಗತ್ತಲಲ್ಲಿ ಮಬ್ಬಾಗಿ ಕಂಡ ಡಬ್ಬಗಳು ಅದು ಸ್ಟೋರ್ ರೂಮೆಂದು ಸೂಚಿಸಿದವು. ಕಾಫಿಯಾದ ಮೇಲೆ ಏನ್ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಸರಿಯಾಗಿ ಮನೆ ಯಜಮಾನರು ಬಂದರು. ‘ರಾತ್ರೀಗೆ ಒಂದು ಅನ್ನ ಸಾರು, ಸೌತೆಕಾಯಿ ಕೋಸಂಬರಿ ಮಾಡಿದ್ರೆ ಸಾಕು. ಪಾಪ ಈಗ ಬಂದಿದೀರಾ, ಎಲ್ಲೆಲ್ಲಿ ಏನೇನು ಅಂತ ಗೊತ್ಮಾಡಿಕೊಳ್ಳೋಕೆ ಟೈಮಾಗುತ್ತೆ. ಅಕ್ಕಿ ಸ್ಟೋರಿನಲ್ಲಿದೆ. ತರಕಾರಿ ಫ್ರಿಡ್ಜಲ್ಲಿ. ಚೆನ್ನಾಗಿ ತೊಳೆದು ಹಾಕಿ. ನಿಮ್ಮನೆ ಅಂತಾನೇ ಅನ್ಕೊಳ್ಳಿ. ಜಾಸ್ತಿ ಮಾಡೋದು ಬೇಡ’ ಅಂತ ಚುಟುಕಾಗಿ ಹೇಳಿದ ವಿಶ್ವನಾಥಯ್ಯನೋರ ಅಪ್ಪಣೆಗೆ ತಲೆಯಲ್ಲಾಡಿಸಿದರು ಸೀತಮ್ಮ. ಮನೆ ಯಜಮಾನರೇನೋ ಸರಿ. ಆದರೆ ವಿಶ್ವನಾಥಯ್ಯನೋರು ಸೀತಮ್ಮನಿಗೆ ದೂರದ ಸಂಬಂಧಿಯೂ ಹೌದು. ಆ ಕಾಲಕ್ಕೇ ಆರಂಭ ಬಿಟ್ಟು, ಪಟ್ಟಣ ಸೇರಿ ಕಾರ್ಖಾನೆಯಲ್ಲಿ ಉದ್ಯೋಗ ಮಾಡುತ್ತಾ ಮೆಟ್ಟಿಲು ಮೆಟ್ಟಿಲಾಗಿ ಮೇಲೇರಿ ಅಧಿಕಾರದ ಗದ್ದುಗೆ ಏರಿದ ವಿಶ್ವನಾಥಯ್ಯನೋರ ಬಗ್ಗೆ ನೆಂಟರು ಸೇರಿದಾಗೆಲ್ಲಾ ಮಾತಾಡುತ್ತಿದ್ದದ್ದು ಸಾಮಾನ್ಯ. ‘ಅತಿ ಶಿಸ್ತಿನ ಮನುಷ್ಯ. ಎದುರಿಗೆ ಬಂದರೆ ಹೆಂಡತಿ ಮಕ್ಕಳೇನು, ಫ್ಯಾಕ್ಟರಿ ಕೆಲಸದವರೂ ಗಟ್ಟಿಯಾಗಿ ಉಸಿರು ಬಿಡಲಾರ್ರು. ಯಾಪಾಟಿ ಶಿಸ್ತು ಅದು’ ಅಂತ ನೆಂಟರು ಮಾತಾಡಿದ್ದು ಸೀತಮ್ಮ ಕೇಳದ್ದಲ್ಲ. ಅಂಥ ಮನುಷ್ಯಾ ತಮ್ಮ ಮನೆಗೆ ಒಂದಿನ ಧುತ್ತನೆ ಇಳಿದಾಗ ತಬ್ಬಿಬ್ಬಾಗಿತ್ತು ಹೌದಲ್ಲ!

ಎಲ್ಲರಿಗೂ ಕಾಫಿ ಮಾಡಿಕೊಟ್ಟು ಚಂದ್ರನ ಕಪ್ಪಿನಲ್ಲೂ ಅದೇ ಕಾಫಿ ಬಗ್ಗಿಸಿ ಕರೆದಾಗ ಬಂದು ಸೊರ್ರೆಂದು ಒಂದು ಗುಟುಕು ಹೀರಿದ ಹುಡುಗ ಆಶ್ಚರ್ಯದಿಂದ ಅವರ ಮುಖವನ್ನೊಮ್ಮೆ ನೋಡಿ ‘ಇವತ್ತೊಂದೇ ದಿನ ಈ ಭಾಗ್ಯ, ನಾಳೆ ಕಲ್ತುಕೊಳ್ತೀರಾ ಬಿಡಿ’ ಅನ್ನುವಂತೆ ನಕ್ಕಿದ್ದ. ಕಾಫಿ ಕುಡಿಯುತ್ತಲೇ ಸುತ್ತ ಕಣ್ಣು ಹಾಯಿಸಿದ ಸೀತಮ್ಮನೋರಿಗೆ ಅಡಿಗೆಮನೆ ಕಪಾಟಿನ ಚಿಲಕದಿಂದ ತೂಗುಬಿದ್ದ ಬೀಗ ಮತ್ತು ಎಸಳು ಗಲಿಬಿಲಿಗೊಳಿಸಿದವು. ಇತ್ತ ನೋಡಿದರೆ ಫ್ರಿಡ್ಜಿಗೂ ಅದೇ ಗತಿ! ಸ್ವಲ್ಪ ಬಾಗಿದರೆ ಡೈನಿಂಗ್ ರೂಮಿನ ಕಪಾಟೂ ಸಹ ಅವರನ್ನು ನೋಡಿ ನಕ್ಕಿತು. ಎಡಕ್ಕೆ ಕಣ್ಣು ಹಾಯಿಸಿದರೆ ಸಂಜೆಗತ್ತಲಲ್ಲಿ ಮಬ್ಬಾಗಿ ಕಂಡ ಡಬ್ಬಗಳು ಅದು ಸ್ಟೋರ್ ರೂಮೆಂದು ಸೂಚಿಸಿದವು. ಕಾಫಿಯಾದ ಮೇಲೆ ಏನ್ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಸರಿಯಾಗಿ ಮನೆ ಯಜಮಾನರು ಬಂದರು.

ಬಂದ ಒಂದೆರಡು ದಿನ ಸೀತಮ್ಮ ‘ಹೂಂ’, ‘ಉಹೂಂ’ನಲ್ಲೇ ನಿಭಾಯಿಸಿದರು. ‘ಇದೇನ್ ಈ ಹೆಂಗ್ಸು ಮಾತಾಡ್ಲೇ ಒಲ್ದು’ ಅಂತ ಪಾರತಮ್ಮ  ಕ್ಷೀಣವಾಗಿ ಗೊಣಗಿದಾಗ ‘ಸುಮ್ನಿರೇ ತಾಯಿ, ಹೊಸಾ ಜಾಗ, ಹೊಸಾ ಜನ’ ಅಂತ ವಿಶ್ವನಾಥಯ್ಯನೋರು ಸಾವರಿಸಿದರು. ‘ನೋಡೀ ಸೀತಮ್ಮನೋರೆ, ನಮ್ಮನ್ನೆಲ್ಲಾ ನೋಡಿ ಭಯಗಿಯ ಪಟ್ಕೋಬೇಡೀ, ಅಥವಾ ಸಿಟಿ ನೋಡಿ ಹೆದರಿದ್ರೋ ಹೇಗೆ?’ ಅಂತ ಅವರೇ ಧೈರ್ಯ ಹೇಳಿದ್ರೂ ಸೀತಮ್ಮ ತಲೆತಗ್ಗಿಸಿ ನಿಂತರೆ ಹೊರತು ಪಿಟ್ಟಪೀ ಅನ್ನಲಿಲ್ಲ. ಮಾತೋ ಮೌನವೋ, ಮನೆ ವಿದ್ಯಮಾನಗಳು ಒಂದೊಂದಾಗಿ ತಲೆ ಹೊಕ್ಕಲಾರಂಭಿಸಿದವು. ಎರಡ್ನೇ ಡಿಕಾಕ್ಷನ್ ಕಾಫಿ ಯಾರು ಕುಡೀಬೇಕು, ಮಾಡಿದ ಅಡುಗೆಯಲ್ಲಿ ಹಚ್ಚದಾಗಿರೋ ಎಷ್ಟು ಭಾಗ ಮನೆ ಯಜಮಾನನಿಗೆ ತೆಗೆದಿಡಬೇಕು, ಎರಡ್ನೇ ಪಂಕ್ತಿಗೆ ಯಾರು ಅರ್ಹರು, ಮನೆ ಮುಖ್ಯಸ್ಥನಿಗೆ ಮೊಸರು ತೆಗೆದಿಟ್ಟ ಮೇಲೆ ಎಷ್ಟು ನೀರು ಬೆರಸಿ ಉಳಿದವರಿಗೆಲ್ಲಾ ಇಡಬೇಕು, ರಾತ್ರಿ ಚೊಕ್ಕವಾಗಿ ಬರೀ ನಾಲ್ಕು ಚಪಾತಿ ಮಾಡಿ ಇಷ್ಟೇ ಚಟ್ನಿ ಮಾಡಿ ಮಧ್ಯಾಹ್ನದ ಸಾರಿನ ಹೋಳುಗಳನ್ನೆಲ್ಲ ಯಜಮಾನರ ತಟ್ಟೆಯ ಪುಟ್ಟ ಬಟ್ಟಲುಗಳಲ್ಲಿ ಇಟ್ಟ ಮೇಲೆ ಉಳಿದ ಸಾರು ಸಾಕಾಗದಿದ್ದರೆ ಇನ್ನೊಂದು ಸ್ವಲ್ಪ ನೀರಿನ ಜೊತೆ ಸಾರಿನ ಪುಡಿ ಹಾಕಿ ಗಮ್ಮೆನ್ನುವಂತೆ ಕುದಿಸಿ ಟೇಬಲ್ ಮೇಲೆ ಉಳಿದವರಿಗೆ ಇಡಬೇಕು, ಹದಿನೈದು ದಿನಕ್ಕೊಮ್ಮೆ ಮಿಕ್ಸಿಯಲ್ಲಿ ಹುಳಿಮೊಸರಿನ ಜೊತೆ ಕೂಡಿಸಿಟ್ಟ ಕೆನೆಯನ್ನು ಹಾಕಿ ಬೆಣ್ಣೆ ತೆಗೆದು ತುಪ್ಪ ಕಾಯ್ಸಿ ಅಂಗಡಿಯ ತುಪ್ಪದ ಬಾಟ್ಲಿಯಲ್ಲಿ ಹಾಕಿಡಬೇಕು; ಇತ್ಯಾದಿ ಇತ್ಯಾದಿ. ಎಲ್ಲ ಪಾರತಮ್ಮ್ನೋರೇ ಖುದ್ದಾಗಿ ಸೀತಮ್ಮನ ಕರೆದು ತಲೆದೆಸೆಯಲ್ಲಿ ಕೂರಿಸಿಕೊಂಡು ಮೆಲುದನಿಯಲ್ಲಿ ಹೇಳಿಕೊಟ್ಟ ಪಾಠಗಳು. ಅವರಿಗೆ ಈ ಪಾಠಗಳು ಹೇಗೆ ಬಂದವೋ ಏನೋ. ಎರಡು ದಿನದಲ್ಲಿ ಕಲಿತ ಪಾಠಗಳು ಹೇಗೆ ಯಾಕೆ ಅನ್ನುವುದನ್ನು ನಾಲ್ಕು ದಿನದಲ್ಲಿ ಕಲಿಸಲಾರವೆ? ಸೀತಮ್ಮ ಹೂಂಗುಟ್ಟಿದ್ದರು.

ಪಾರತಮ್ಮೋರ ‘ದೊಡ್ಡ’ ಆಪರೇಷನ್ ಸೀತಮ್ಮನವರನ್ನ ಆ ಮನೆಗೆ ತಂದಿತ್ತು. ಕಡ್ಡಾಯ ಆರು ತಿಂಗಳು ಬೆಡ್ ರೆಸ್ಟ್ ಅಂತ ಡಾಕ್ಟರು ಹೇಳಿ ಮನೆಗೆ ಕಳಿಸಿಕೊಟ್ಟಾಗ ಮನೆ ನಿಭಾಯ್ಸೋದು ಹೇಗಪ್ಪಾ ಅನ್ನುವ ಚಿಂತೆಯಲ್ಲಿಯೇ ವಿಶ್ವನಾಥಯ್ಯ ಮೂರುದಿನ ಕಳೆದಿದ್ದರು. ಮಾರನೇ ದಿನ ಹಠಾತ್ತಾಗಿ ಈ ದೂರದ ಸಂಬಂಧಿ ಸೀತಮ್ಮನ ನೆನಪು ಬಂದಿದ್ದು. ಮುದಿ ಗಂಡ ಸತ್ತು ಇದ್ದೊಬ್ಬ ಮಗ ಬೇರೆ ಹೋಗಿ ಸೀತಮ್ಮ ಒಬ್ಬರೇ ಬಾಳ್ಹಾಕ್ತಾ ಇದ್ದದ್ದು ಅವರಿವರಿಂದ ವಿಶ್ವನಾಥಯ್ಯನೋರಿಗೆ ಗೊತ್ತಿತ್ತು. ಗಂಡ ಸತ್ತರೂ ಕುಂಕುಮ ತೆಗೆಯದ ಘಟವಾಣಿ ಹೆಂಗಸು ಅಂತ ಅತ್ತಿತ್ತ ಜನ ಮಾತಾಡಿಕೊಂಡರೂ ಸಿಟಿಯಲ್ಲಿದ್ದ ವಿಶ್ವನಾಥಯ್ಯನೋರಿಗೆ ಅದರಲ್ಲೂ ಈಗಿನ ಪರಿಸ್ಥಿತಿಯಲ್ಲಿ ಅದು ಮುಖ್ಯ ಅಂತ ಅನ್ನಿಸಿರಲಿಲ್ಲ.

ಬಂದ ಹತ್ತು ದಿನ ಸೀತಮ್ಮ ಮಾತೇ ಮರೆತಷ್ಟು ವಿಸ್ಮಯದಲ್ಲಿ ದೊಡ್ಡ ಊರಿನ ದೊಡ್ಡ ಮನೆಯ ಪರಿಚಯ ಮಾಡಿಕೊಳ್ಳುತ್ತಾ ಹೋದರು. ‘ಹೆಂಗೆ’, ‘ಯಾಕೆ’ಗಳಿಗೆ ಚುಲ್ಟಾರಿ ಚಂದ್ರನ್ನ ಬಿಟ್ಟರೆ ಬೇರೆ ಯಾರಿಗೂ ಪುರುಸೊತ್ತಿದ್ದಂತೆ ಇರಲಿಲ್ಲ. ತೀರಾ ನಿಶ್ಯಕ್ತಿಯಲ್ಲಿ ನಿತ್ರಾಣರಾಗಿ ಮಲಗಿರುತ್ತಿದ್ದ ಪಾರತಮ್ಮನವರಿಗೆ ಹೊತ್ತುಹೊತ್ತಿಗೆ ಮುಖ ತೊಳೆಸಿ ಸ್ನಾನ ಮಾಡಿಸಿ ಊಟ ಕೊಟ್ಟರೆ ಮುಗೀತು, ಶತಮಾನಗಳ ಸುಸ್ತನ್ನು ಕಳೆಯುವಂತೆ ನಿದ್ದೆ ಮಾಡೋದೊಂದೇ ಕೆಲಸ.

ನಿನ್ನೆ ನಾಳೆ ಇವತ್ತುಗಳ ಮಧ್ಯೆ ಹೀಗೆ ಗಿರಕಿ ಹೊಡೆಯುತ್ತಿದ್ದ ದಿನಚರಿಗೆ ಭಂಗ ಬಂದಿದ್ದು ಅಕಸ್ಮತ್ತಾಗಿ. ಸೀತಮ್ಮ ಬಂದ ಹತ್ತೋ ಹದಿನೈದು ದಿನಗಳ ನಂತರ. ಬೆಳಗಿನ ಹೊತ್ತು ಟೀಡಿ ಡೀಡೀಡಿಂ ಎಂದು ಆರು ಗಂಟೆಗೆ ಶುರುವಾಗುವ ಆಕಾಶವಾಣಿ ರಾಗದ ಜೊತೆಗೆ ಉಸಿರೆಳೆದುಕೊಳ್ಳುತ್ತಿದ್ದ ರೂಮಿನ ರೇಡಿಯೊ ಮತ್ತು ಡೈನಿಂಗ್ ರೂಮಿನ ಪುಟ್ಟ ಸ್ಪೀಕರ್ಗಳು  ಪ್ರದೇಶ ಸಮಾಚಾರ ಮತ್ತು ವಾರ್ತೆಗಳು ಇತ್ಯಾದಿಗಳನ್ನು ಬಿತ್ತರಿಸುವ ಸಮಯ. ಅದ್ಯಾಕೋ ಏನೋ ರೂಮಿನಲ್ಲಿ ಗಂಡ ಹೆಂಡತಿಗೆ ವಾಗ್ವಾದ ಹತ್ತಿಕೊಂಡಿತ್ತು. ಇಬ್ಬರ ಸ್ವರವೂ ಏರುತ್ತಿದ್ದಂತೆ ರೇಡಿಯೋ ಸ್ವರವೂ ಏರುತ್ತಾ ಹೋಗಿ ಇನ್ನು ಏರುವುದು ಸಾಧ್ಯವಿಲ್ಲದಾಗ ರೂಮಿನ ಬಾಗಿಲು ಟಪ್ಪನೆ ಮುಚ್ಚಲ್ಪಟ್ಟರೂ ಮಾತಿನ ಫೋರ್ಸ್ ಅಡಿಗೆಮನೆಯಲ್ಲಿದ್ದ ಸೀತಮ್ಮನವರಿಗೂ ಓಡಾಡುತ್ತಿದ್ದ ಮಕ್ಕಳಿಗೂ ವೆರಾಂಡ ಒರೆಸುತ್ತಿದ್ದ ಚುಲ್ಟಾರಿಗೂ ಅಲ್ಪಸ್ವಲ್ಪ ಕೇಳುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಧಢಾರನೆ ಬಾಗಿಲು ತೆಗೆದ ವಿಶ್ವನಾಥಯ್ಯನೋರು ‘ಸೀತಮ್ಮ್ನೋರೇ, ತಿಂಡಿ ಟೇಬಲ್ ಮೇಲೆ ಬಡೀರಿ, ನಾನ್ ಬೇಗ ತೊಲಗಬೇಕು’ ಅಂದಾಗ ಪಾಪದ ಹೆಂಗಸು ಹೆಚ್ಚೂ ಕಮ್ಮಿ ಬೆಚ್ಚಿಬಿದ್ದಿತ್ತು. ತಿಂಡಿ ‘ಬಡಿದಿದ್ದೂ’ ಆಯ್ತು. ಯಜಮಾನರೂ ತೊಲಗಿದ್ದೂ ಆಯ್ತು. ರೂಮಲ್ಲಿ ಮೂರನೆ ಮಗ ‘ಮಹಾಯುದ್ಧದ ಮುಂದಿನ ಭಾಗ ಸಾಯಂಕಾಲ ಬೆಳ್ಳಿತೆರೆಯ ಮೇಲೆ ನೋಡಿ ಆನಂದಿಸಿ’ ಅಂತ ಗೊಣಗಿದ್ದೂ ಆಯ್ತು. ತಟ್ಟೇಲಿ ರೊಟ್ಟಿ ಪಲ್ಯ ಇಟ್ಟುಕೊಂಡು ಪಾರತಮ್ಮನ ಎಬ್ಬಿಸೋಕೆ ಹೋದ ಸೀತಮ್ಮನೋರಿಗೆ ಕಣ್ಣೀರಿಡುತ್ತಾ ಗೋಡೆ ಕಡೆ ಮುಖ ತಿರುವಿ ಮಲಗಿದ್ದ ಹೆಂಗಸನ್ನು ನೋಡಿ ಮನಸ್ಸು ಚುರುಕ್ಕೆಂದಿರಬೇಕು. ‘ಯಾಕೆ.. ಯಾಕಳ್ತಾ ಇದೀರೀ? ಏಳಿ… ಅದೇನೋ ಹೇಳ್ತಾರಲ್ಲ… ತುತ್ತೂರಿ ಊದಿದ್ರೆ ತುಪ್ಪಟ ಬರ್ತದಾ ಅಂತ… ಹಂಗಾಯ್ತು. ಅತ್ರೇನು ಬಂತು? ತಬ್ಲಿ ತಲೆ ಬೋಳಿಸ್ಕೊಂಡ್ರೆ ಅಳೋರ್ ಯಾರು? ಬರೀ ಆರ್ಭಟ… ಎಲ್ಲಾದಕ್ಕೂ ಆರ್ಭಟ. ಹಿಂದ್ನವರು ಹೇಳ್ದಂಗೆ ತಿಕಾಮಕ ಒಂದೇ ತಿಪ್ಪಾಭಟ್ಟರಿಗೆ! ಹೆಂಗ್ಸಿನ ಸಂಕ್ಟ ಏನ್ ಗೊತ್ತಾದಾತು ಇವರ್ಗೆಲ್ಲಾ? ತಲೆ ಒಡೆದವನೂ ಸಮಾ… ಲೇಪ ಹಚ್ದವನೂ ಸಮಾ ಈ ಗಂಡಸ್ ಜಾತಿಗೆ. ಏಳಿ, ಅಳೋಕ್ಕೂ ತ್ರಾಣ ಬೇಕಲ್ಲಾ…ತಿಂದ್ ಅಳೋವ್ರಂತೆ…’

ಪಟಪಟನೆ ಆಡಿದ ಮಾತುಗಳ ಆ ಕ್ಷಣದಲ್ಲಿ ಇಬ್ಬರ ಮಧ್ಯೆ ಒಂದು ಬಂಧ ಹೊಂದಿದ್ದಂತೂ ನಿಜ. ಜಗಮೊಂಡಿ ಪಾರತಮ್ಮ ಸೀತಮ್ಮನ ಗಾದೆ ಸಂಪತ್ತಿಗೆ ಸೋತರೋ, ಹೆಣ್ಣು ಮನಸ್ಸಿನ ಕಳಕಳಿಗೆ ಸೋತರೋ, ಅಥವಾ ಹೆಚ್ಚು ಬಾಯ್ಬಿಟ್ಟಿರದ ಸೀತಮ್ಮ ಇಷ್ಟು ಮಾತಾಡಿದ್ದಕ್ಕೆ ಸೋತರೋ, ಅಂತೂ ಪಿಟ್ಟೆನ್ನದೆ ಮುಖ ತೊಳೆದು ತಿಂಡಿ ತಿಂದರು.

ಪಾರತಮ್ಮೋರ ‘ದೊಡ್ಡ’ ಆಪರೇಷನ್ ಸೀತಮ್ಮನವರನ್ನ ಆ ಮನೆಗೆ ತಂದಿತ್ತು. ಕಡ್ಡಾಯ ಆರು ತಿಂಗಳು ಬೆಡ್ ರೆಸ್ಟ್ ಅಂತ ಡಾಕ್ಟರು ಹೇಳಿ ಮನೆಗೆ ಕಳಿಸಿಕೊಟ್ಟಾಗ ಮನೆ ನಿಭಾಯ್ಸೋದು ಹೇಗಪ್ಪಾ ಅನ್ನುವ ಚಿಂತೆಯಲ್ಲಿಯೇ ವಿಶ್ವನಾಥಯ್ಯ ಮೂರುದಿನ ಕಳೆದಿದ್ದರು. ಮಾರನೇ ದಿನ ಹಠಾತ್ತಾಗಿ ಈ ದೂರದ ಸಂಬಂಧಿ ಸೀತಮ್ಮನ ನೆನಪು ಬಂದಿದ್ದು. ಮುದಿ ಗಂಡ ಸತ್ತು ಇದ್ದೊಬ್ಬ ಮಗ ಬೇರೆ ಹೋಗಿ ಸೀತಮ್ಮ ಒಬ್ಬರೇ ಬಾಳ್ಹಾಕ್ತಾ ಇದ್ದದ್ದು ಅವರಿವರಿಂದ ವಿಶ್ವನಾಥಯ್ಯನೋರಿಗೆ ಗೊತ್ತಿತ್ತು. ಗಂಡ ಸತ್ತರೂ ಕುಂಕುಮ ತೆಗೆಯದ ಘಟವಾಣಿ ಹೆಂಗಸು ಅಂತ ಅತ್ತಿತ್ತ ಜನ ಮಾತಾಡಿಕೊಂಡರೂ ಸಿಟಿಯಲ್ಲಿದ್ದ ವಿಶ್ವನಾಥಯ್ಯನೋರಿಗೆ ಅದರಲ್ಲೂ ಈಗಿನ ಪರಿಸ್ಥಿತಿಯಲ್ಲಿ ಅದು ಮುಖ್ಯ ಅಂತ ಅನ್ನಿಸಿರಲಿಲ್ಲ.

‘ಹೆಣ್ಜನ್ಮ ಅಂದ್ರೆ ಇಷ್ಟೇ ಅಂತ ಮಾಡ್ ಹಾಕಿದಾರಲ್ಲ! ಅದೂ ಯಾರು? ಆ ಬ್ರಹ್ಮ ಅಲ್ಲ, ಶಿವ ಅಲ್ಲ, ಈ ಗಂಡ್ ಮುಂಡೇ ಮಕ್ಳು ತಾನೇ? ಅದೇನೋ ಹೇಳ್ತಾರಲ್ಲ… ತುಂಗಭದ್ರೇಗ್ ಹೋದ್ರೂ ಭಂಗಪಡೋದು ತಪ್ಲಿಲ್ಲಾ ಅಂತ. ಹಂಗೇ ಕಣೀ ನಮ್ ಪಾಡೂನೂ. ಯಾರ ಹೆಂಡ್ತಿ ಆದ್ರೇನು? ಏನ್ ಓದಿದ್ರೇನು? ಏನ್ ಸಂಬ್ಳ ತಂದ್ರೇನು? ತಿರುಳ್ ತಿಂದ್ರೂ ಮರುಳ್ ಹೋಗ್ನಾರ್ದು. ಅದೇನೋ ಹೇಳ್ತಾರಲ್ಲ, ಅಗ್ರಹಾರಕ್ಕ್ ಹೋದ್ರೂ ದುರಾಗ್ರಹ ಬಿಡ್ನಿಲ್ಲ ಅಂತ. ಮಾಣಿಕ್ಯ ಕೊಟ್ರೂ ಮಸಿ ಬಟ್ಟೇಲ್ ಕಟ್ಟಿಡೋ ಹುಂಬ್ತನ ನಾನ್ ಕಾಣದ್ದಲ್ಲ. ಹೆಂಗ್ಸಿನ ಪಾಡು ನಾನೂ ಪಟ್ಟಿದೀನಿ ಕಣೀ. ಆದಷ್ಟೂ ಆಯ್ತು ಬರಡೆಮ್ಮೆ ಹಾಲು ಅಂತ ನಾನು ಮೂಗ್ ಮುಚ್ಕಂಡು ನೀಸಿದ್ದೇ… ಅದೇನೋ ಹೇಳ್ತಾರಲ್ಲಾ….”

ಮಾತು ಶುರು ಮಾಡಿದ ರಾಗದಿಂದಲೇ ಮುಗಿಸುವ ಸೀತಮ್ಮನ ಬಾಯಿ ಆವತ್ತು ತೆಗೆದಿದ್ದು ಆಮೇಲೆ ಮುಚ್ಚಿದ್ದೇ ಕಡಿಮೆ. ತಿಂಡಿ ತಿಂದ ಪಾರತಮ್ಮ ನಿಸೂರಾಗಿ ಅಡಿಗೆ ಮನೆಗೇ ಬಂದು ಚಕ್ಕಂಬಕ್ಕಲ ಕೂತು ಮಾತು ಆಡಿದ್ದೇ ಆಡಿದ್ದು, ಕೇಳಿದ್ದೇ ಕೇಳಿದ್ದು. ಚುಲ್ಟಾರಿ ಚಂದ್ರ ತನ್ನ ಕೆಲಸದ ಮಧ್ಯೆ ಆಚೀಚೆ ಹೋಗುವಾಗ ಅಡಿಗೆ ಮನೆಗೊಮ್ಮೆ ಇಣುಕಿ ‘ಹ್ವಾ…! ಹುಶಾರಾದ್ರು ಅಮ್ಮೋರು! ಅದೆಂಗೆ? ಅಪ್ಪಾರು ಬೆಳಗ್ಗೆ ಬಾಗ್ಲು ಹಾಕ್ಕೊಂಡಿದ್ರಲ್ಲ… ಜೋರಾಗೇ ಕೊಟ್ಟಿರ್ಬೇಕು ಔಷ್ದೀಯಾ…’ ಅಂತ ಕಿಸಕ್ಕನೆ ನಕ್ಕು ‘ಏ ಹೊಗ ದೆವ್ವಾ.. ಹೀನ್ ಮುಂಡೇದು, ನನ್ನೇ ಹೀಯಾಳ್ಸೋಕ್ ಬರುತ್ತೆ’ ಅಂತ ಬೈಸಿಕೊಂಡು ಕಾಲು ಕಿತ್ತಿದ್ದ. ಆವತ್ತು ಸೀತಮ್ಮನೋರ ಅಡಿಗೆ ಆಗಲಿಲ್ಲ ಅಂತಲ್ಲ. ಸಾರಿಗೆ ಖಾರ ಹಾಕಿ ಮರಳಲು ಬಿಟ್ಟು ಪಾರತಮ್ಮನೋರ ಹತ್ತಿರ ಕೂತು ಆಲಿಸಿ ಕಣ್ಣೀರಾಕಿ, ಸೆರಗಿಂದ ಮುಖ ಮೂಗು ಸೀಟ್ಕೊಂಡು, ಜ್ನಾಪಕವಾದವರಂತೆ ಗಡಬಡಿಸಿ ಎದ್ದು ಹುಳಿ ಕಿವುಚಿದ ನೀರು ಹಾಕಿ ಮತ್ತೆ ಕೂತು… ಅಂತೂ ಅಡಿಗೆ ಮುಗಿಯುವ ಹೊತ್ತಿಗೆ ಮಲಗಿದ್ದ ಗತವೆಲ್ಲವೂ ಎದ್ದು ಕೂತು ಕಥೆ ಹೇಳಿ ಹಗುರಾಗಿತ್ತು.

‘ಏನ್ ಮಾಡಿದ್ರೆ ಏನ್ ಪಾರತಮ್ಮೋರೆ… ನೀವೇನೋ ಗಂಡ ಬಂದಾನೆ, ಮಕ್ಳು ಬಂದಾರೆ ಅಂತ ಹಸಿ ಕಾಯಿಸ್ಕೊಂಡು ಬಿಸಿ ಆರಿಸ್ಕೊಂಡು ಬಾಳಾಕಿದ್ರಿ. ಇವತ್ತಿಗೆ ಏನು? ಅದೇನೋ ಹೇಳ್ತಾರಲ್ಲ… ಉಂಬೋದಕ್ಕೆ ಉಡೋದಕ್ಕೆ ಅಕ್ಕನ್ನ ಕರಿ, ಕೋಳಕ್ಕೆ ಹೆಟ್ಟೋದಕ್ಕೆ ಬಾವನ್ನ ಕರಿ ಅಂತ, ಹಂಗಾಯ್ತು… ನೀನೇಯಾ ಅಂತ ಕೇಳೋರಿಲ್ಲ, ಅವರದ್ದೇ ಅವರ್ಗೆ. ಒಂಟಿ ಮಾರಿ ತಂಟೆ ತೀರ್ಸಿದ್ರೂ ದಂಟಿ ಕೋಲು ಬಿಡ್ನಿಲ್ಲಾ ಅಂತಾರಲ್ಲ ಹಂಗಾಯ್ತು. ನಾನೂ ಅನುಭೋಗ್ಸಿ ಸುಸ್ತಾಗಿದೀನಿ ಕಣಿ… ಶಿವನೇ ಅನ್ನೋ ಹೊತ್ತು. ಅದ್ಯಾವಾಗ ಕರ್ಕೋತಾನೋ ಗೊತ್ತಿಲ್ಲ. ಅದೇನೋ ಅಂತಾರಲ್ಲ, ಕುಂಡೆ ಮೇಲ್ ಬಡದ್ರೆ ದವಡೆ ಹಲ್ಲು ಮುರ್ದೀತಾ ಅಂತ? ನೀಸೇ ತೀರ್ಬೇಕು. ಏನ್ಮಾಡೀರ? ನೀಸ್ದೆ. ಮನೆ ಗಂಡ ಗೇದು ತಂದ್ ಹಾಕ್ತಾನೆ, ಪುಕ್ಶಾಟೆ ಮಿಂಡ ಕೇದ್ ಹೋಗ್ತಾನೆ ಅಂತ ಹಿಂದ್ನೋರು ಹೇಳಿದ್ದಷ್ಟೇಯ. ನನ್ ಗಂಡ ಅದೂ ಮಾಡ್ನಿಲ್ಲ, ಇದೂ ಮಾಡ್ನಿಲ್ಲ. ಮರ್ಯಾದೆ ಅನ್ನೋದು ದೊಡ್ಡದು ಅಂತ ಗಂಟು ಬಿಗಿ ಹಾಕ್ಕೊಂಡ್ ಕಾದೆ. ಗಂಡ್ ಪ್ರಾಣಿ ದೌತಿ ಒಳ್ಗೆ ಮಸಿ ಇದ್ರೆ ತಾನೇ ಹೆಣ್ ಬದುಕು ಅನ್ನೋದೂ? ಕಣ್ ಚಿಟಗುಟ್ಸೋ ಪ್ರಾಯದಲ್ಲೂ ಕಣ್ ಕಟ್ಕಂಡಂಗೆ ಬದುಕ್ದೆ. ಏನ್ ತಿಪ್ಪರ್ಲಾಗ ಹಾಕಿದ್ರೂ ಏನ್ ಬಂತು ಮಣ್ಣು? ಹಿಂದ್ನವರು ಹೇಳ್ದಂಗೆ ಕಾಟ್ ನಾಯ್ಕನ ಮನೆಗೆ ಕನ್ನ ಹಾಕಿದ್ರೆ ಕಂಡಿದ್ದೇನು ಅಂತೀರಿ? ನೇತಾಡ್ತಿದ್ದಿದ್ದ ಎರಡು ಬಂಗೀ ಚೀಲ ಅಷ್ಟೇಯಾ… ಕಂಡ್ ಕಂಡ್ ದೇವ್ರಿಗೆ ಕೈಮುಗಿದ್ರೂ ಗಂಡ ಇಲ್ದೆ ಮಕ್ಳಾದೀತಾ ಅಂತ ಪ್ರಾಯ ದಾಟ್ದ ಗಂಡನಿಂದ ಸಂತಾನ ಪಡ್ಯೋಕೆ ಭಾರಿ ಕಷ್ಟ ಪಟ್ಟೆ ಕಣೀ. ಏನ್ಮಾಡಿದ್ರೇನು? ಹಿಂದ್ನವರು ಹೇಳ್ದಂಗೆ ಅರಸ ಬೊಬ್ಬೆ ಹೊಡೆದ್ರೆ ಊರು ನಡುಗುತ್ತೆ. ಮುದುಕ ಬೊಬ್ಬೆ ಹೊಡೆದ್ರೆ? ಬರೀ ಗಡ್ಡ ಅಲುಗುತ್ತೆ ಅಷ್ಟೇಯಾ… ಗಾಳಿಯಿಂದ ಧೂಳು ಎದ್ರೆ ನನ್ನ ಕೋರೆ ಹೊಟ್ಟೆ ಹೆಂಗ್ ತುಂಬೀತು? ವರ್ಷ ಎರಡಾಯ್ತು, ಮುರಾಯ್ತು. ನಿದ್ದೆಗೆ ಕಣ್ರೆಪ್ಪೆ ಕೂಡಿದ್ದಿಲ್ಲ, ತಿಂಗಳ್ ಮುಟ್ಟು ನಿಂತಿದ್ದಿಲ್ಲ. ಬಾಯಿಗೆ ಬಂದಿದ್ದೇ ಮಾತಾಡಿದ್ರು ಎಲ್ರೂ. ನಮ್ಮಪ್ಪ ಅವ್ವ ಏನ್ ಹಿಂದೆ ಬೀಳ್ನಿಲ್ಲಾ. ನಾನ್ ಸೋತು ಒಂದಿನ ಝಾಡಿಸ್ದೆ, ‘ಚಟ್ಟ ಹತ್ತೋ ಅಯ್ನೋರ್ಗೆ ಪಟ್ಟಕ್ ಬರ್ತಾ ಇರೋ ಅಮ್ಮನ್ನ್ ಕೊಟ್ರೆ ಇನ್ನೇನಾದೀತು?’ ಅಂತ. ನಮ್ಮಪ್ಪ ಬಿಟ್ಟ್ ಬಾಯಿ ಮುಚ್ಲಿಲ್ಲ. ಅವ್ವ ‘ಹಂಗ್ ಮಾತಾಡ್ಬೇಡ್ವೆ ಬಜಾರಿ… ನಿನ್ ಹಣೇ ಬರಾ ಕೂಡಿ ಬರ್ದಿದ್ರೆ ನಾವೇನ್ ಮಾಡೇವು?’ ಅಂತ ಕಣ್ಣೀರ್ ಹಾಕಿದ್ಳು. ಆವತ್ತು ಈ ಹೆಣ್ ಮನಸ್ಸನ್ನ ಗಟ್ಟಿ ಮಾಡ್ಕಂಡೆ ಕಣೀ, ಬ್ಯಾಡ, ಇನ್ ಬ್ಯಾಡ ಅಂತ. ತಿಪ್ಪೆ ಮೇಲ್ ಮಲ್ಗಿ ಉಪ್ಪರಿಗೆ ಕನಸು ಕಂಡ್ರೇನ್ ಬಂತು? ನನ್ನ ಬಂಜೆ ಅಂದವರ ನಾಲಿಗ್ಗೆ ಹುಳ ಬೀಳ್ಳಿ. ಬಾಳೆಗೆ ಕಾಳಿಯಾದ್ರೇನು, ಬೋಳಿಯಾದ್ರೇನು, ನೀರ್ ಹೊಯಿದ್ರೆ ತಾನೆ ಸರಿ? ಗಾಳಿ ಮಂಟಪದ ಜೋಗಿ ಹಾಗೆ ಬಟಾಬಯಲಲ್ಲಿ ನಿಂತೆ. ಹಿಂದ್ ನೋಡ್ನಿಲ್ಲ, ಮುಂದ್ ನೋಡ್ನಿಲ್ಲ. ಹಣೇಲಿಲ್ಲದ್ದು ಹಣಿಕಿದ್ರೆ ಸಿಕ್ಕುತ್ಯೇ ಅಂತ ಅವ್ವ ಹೇಳೊಳಲ್ಲ, ನಾನು ಹಣಿಕ್ದೆ ಕಣಿ. ಸಿಕ್ತು, ಕೈತುಂಬ ಹೊಟ್ಟೆ ತುಂಬ ಸಿಕ್ತು. ಗಕ್ಕನೆ ವಾಂತಿ ಮಾಡಿದ್ ದಿನ ಮುದಿಯ ಬೊಬ್ಬೆ ಹೊಡ್ದ. ನಾನೂ ಸಡ್ಡು ಹೊಡ್ದು ನಿಂತೆ, ‘ನನ್ನ ತುಂಬಿರೋ ಹೊಟ್ಟೆ, ನಿನ್ನ ಮರ್ಯಾದೆನೂ ಉಳಿಸುತ್ತಲ್ಲ? ನಿನ್ನ ಮನ್ತನ ಮರ್ಯಾದೆ ಅಂತ ಬೊಬ್ಬೆ ಹೊಡ್ಯೋದಾದ್ರೆ ಹೊಡಿ. ತಾಳೆ ಮರ ಉದ್ದ ಆದ್ರೆ ಕೋಳಿಗೇನ್ ಬಂತು ಮಣ್ಣು? ನಾನ್ ಇವತ್ತೇ ಗೂಟ ಕೀಳ್ತೀನಿ’ ಅಂತ ಮುಖ ಮೂತಿ ನೋಡ್ದೆ ಒದರ್ದೆ. ಯಾಕೋ ಗೊತ್ತಿಲ್ಲ, ಗಪ್ ಚಿಪ್ಪಾದ. ನನ್ನ ಹೊಟ್ಟೆ ತುಂಬಿತ್ತು, ನಂಗಷ್ಟೇ ಬೇಕಾದ್ದು. ಮಗ ದೊಡ್ಡೋನಾದ. ಅಡ್ಡಾದುಡ್ಡಿಗೆ ಮೂರಾದ್ರೆ ದುಡ್ಡು ಅಡ್ಡಕ್ಕೆಷ್ಟು ಅಂತ ಹೇಳಿದ್ದನ್ನೇ ಹೇಳ್ತಾ ಸಂಚು ಮಾಡೊಳಲ್ಲ. ಬೆಳೆದ ಮೇಲೆ ಅವಂಗೂ ಹೇಳ್ದೆ, ನೋಡಪ್ಪಾ ನನ್ನ ಸ್ಥಿತಿ ಹೀಗಿತ್ತು ಅಂತ. ಅವಂಗೆ ಏನನ್ನಿಸ್ತೋ ಗೊತ್ತಿಲ್ಲ, ಮಣಮಣ ಅಂತ ಎದ್ದೋದ. ನಂಗೆ ಮಂತ್ರಾನೂ ಗೊತ್ತಿಲ್ಲ, ತಂತ್ರಾನೂ ಗೊತ್ತಿಲ್ಲ. ತಲೆ ಒಂದ್ ಇದ್ರೆ ಮುಂಡಾಸ್ ಸಾವಿರ ಕಟ್ಯೇನು ಅಂತ ಬದುಕ್ದವಳು ನಾನು, ಅದೇನೋ ಹೇಳ್ತಾರಲ್ಲಾ…’

ಪಾರತಮ್ಮನೋರಿಗೆ ಏನರ್ಥವಾಯ್ತೋ, ಎಷ್ಟರ್ಥವಾಯ್ತೋ, ಒಟ್ಟಲ್ಲಿ ಅವರ ಮಧ್ಯೆ ಮಾತು ಸಾಯಂಕಾಲದವರೆಗೂ ಸಾಗಿತ್ತು. ಮ್ಲಾನ ಮುಖ ಹೊತ್ತು ಬಂದ ವಿಶ್ವನಾಥಯ್ಯನೋರಿಗೆ ಕಂಡಿದ್ದೇನು? ತಿಂಗಳಿಂದ ಹಾಸಿಗೆ ಬಿಟ್ಟು ಕದಲದಿದ್ದ ಪಾರತಮ್ಮ ಮನೇ ಬಾಗಿಲಲ್ಲಿ ಕುರ್ಚಿ ಹಾಕಿಕೊಂಡು ಗೇಟಿನಾಚೆ ಹೋಗಿ ಬರೋರನ್ನ ನೋಡ್ತಾ ಕೂತಿದಾರೆ! ಯಜಮಾನರನ್ನ ನೋಡಿದ್ದೇ ತಣ್ಣಗೆ ‘ಏ ಸೀತಮ್ನೋರೇ, ಇಲ್ನೋಡಿ ಇವರು ಬಂದಿದಾರೆ, ಕಾಫಿ ಕೊಡ್ತೀರಾ?’ ಅಂದಿದ್ದಷ್ಟೇ. ಮತ್ತೆ ಕಣ್ಣು ಗೇಟಿನಾಚೆ ನೆಟ್ಟಿತ್ತು.

ಮಾತು ಶುರು ಮಾಡಿದ ರಾಗದಿಂದಲೇ ಮುಗಿಸುವ ಸೀತಮ್ಮನ ಬಾಯಿ ಆವತ್ತು ತೆಗೆದಿದ್ದು ಆಮೇಲೆ ಮುಚ್ಚಿದ್ದೇ ಕಡಿಮೆ. ತಿಂಡಿ ತಿಂದ ಪಾರತಮ್ಮ ನಿಸೂರಾಗಿ ಅಡಿಗೆ ಮನೆಗೇ ಬಂದು ಚಕ್ಕಂಬಕ್ಕಲ ಕೂತು ಮಾತು ಆಡಿದ್ದೇ ಆಡಿದ್ದು, ಕೇಳಿದ್ದೇ ಕೇಳಿದ್ದು. ಚುಲ್ಟಾರಿ ಚಂದ್ರ ತನ್ನ ಕೆಲಸದ ಮಧ್ಯೆ ಆಚೀಚೆ ಹೋಗುವಾಗ ಅಡಿಗೆ ಮನೆಗೊಮ್ಮೆ ಇಣುಕಿ ‘ಹ್ವಾ…! ಹುಶಾರಾದ್ರು ಅಮ್ಮೋರು! ಅದೆಂಗೆ? ಅಪ್ಪಾರು ಬೆಳಗ್ಗೆ ಬಾಗ್ಲು ಹಾಕ್ಕೊಂಡಿದ್ರಲ್ಲ… ಜೋರಾಗೇ ಕೊಟ್ಟಿರ್ಬೇಕು ಔಷ್ದೀಯಾ…’ ಅಂತ ಕಿಸಕ್ಕನೆ ನಕ್ಕು ‘ಏ ಹೊಗ ದೆವ್ವಾ.. ಹೀನ್ ಮುಂಡೇದು, ನನ್ನೇ ಹೀಯಾಳ್ಸೋಕ್ ಬರುತ್ತೆ’ ಅಂತ ಬೈಸಿಕೊಂಡು ಕಾಲು ಕಿತ್ತಿದ್ದ. ಆವತ್ತು ಸೀತಮ್ಮನೋರ ಅಡಿಗೆ ಆಗಲಿಲ್ಲ ಅಂತಲ್ಲ. ಸಾರಿಗೆ ಖಾರ ಹಾಕಿ ಮರಳಲು ಬಿಟ್ಟು ಪಾರತಮ್ಮನೋರ ಹತ್ತಿರ ಕೂತು ಆಲಿಸಿ ಕಣ್ಣೀರಾಕಿ, ಸೆರಗಿಂದ ಮುಖ ಮೂಗು ಸೀಟ್ಕೊಂಡು, ಜ್ನಾಪಕವಾದವರಂತೆ ಗಡಬಡಿಸಿ ಎದ್ದು ಹುಳಿ ಕಿವುಚಿದ ನೀರು ಹಾಕಿ ಮತ್ತೆ ಕೂತು… ಅಂತೂ ಅಡಿಗೆ ಮುಗಿಯುವ ಹೊತ್ತಿಗೆ ಮಲಗಿದ್ದ ಗತವೆಲ್ಲವೂ ಎದ್ದು ಕೂತು ಕಥೆ ಹೇಳಿ ಹಗುರಾಗಿತ್ತು.

ಆವತ್ತಿನ ದಿನದ ಶುಭಾರಂಭ. ಆಮೇಲೆ ಸದಾ ಬಿಮ್ಮನೆ ಬಿಗಿದು ಕೂತಂತಿರುತ್ತಿದ್ದ ವಿಶ್ವನಾಥಯ್ಯನೋರ ಮನೆ ವಾತಾವರಣದಲ್ಲಿ ಗಾಳಿ ಸ್ವಲ್ಪ ಸಡಿಲವಾಗಿ ಆಡಲಾರಂಭಿಸಿತು. ಆಂ, ಊಂ, ಉಹೂಂ ಗಳಲ್ಲಿ ಮುಗಿಯುತ್ತಿದ್ದ ಮನುಷ್ಯರ ನಡುವಿನ ಸಂಪರ್ಕದಲ್ಲಿ ಒಂದೆರೆಡು ಮಾತುಗಳು ಸುಳಿಯಲಾರಂಭಿಸಿದವು. ‘ಕಾಫಿ ಇದ್ಯಾ ಸೀತಮ್ಮೋರೆ?’ ಅಂತ ಬಂದವರಿಗೆ ಈಗ ಸೀತಮ್ಮ ತುಟಿ ಹೊಲೆದುಕೊಂಡು ಕಾಫಿ ಕೊಡುತ್ತಿರಲಿಲ್ಲ. ‘ಇದೇನ್ ಹೀಗ್ ಕೇಳ್ತೀರಾ? ಅಂಗಡೀಲಿ ಚುಂಗಡಿ ಸಿಕ್ಕೋದಿಲ್ವೆ? ಎರಡು ಗಳಿಗೇಲಿ ಕೊಟ್ಟೆ…’ ಅಂತಲೋ ಚುಲ್ಟಾರಿ ಚಂದ್ರ ಹುಶಾರಿಲ್ದೆ ಮಲಗಿದ್ದ ದಿನ ‘ಪಕ್ಕದ್ ರೋಡಲ್ಲಿ ತುಪ್ಪದ್ ಹೀರೇಕಾಯಿ ಮನೆಯೋರ ಕಾಂಪೌಂಡಿನಿಂದ ಕರೀಬೇವು ಕಿತ್ಕೊಂಡ್ ಬರೋಕೆ ನಿಮ್ಗೆ ಗೊತ್ತಾಗುತ್ತಾ?’ ಅಂತ ಕೇಳಿದ್ರೆ ‘ಗೊತ್ತಿಲ್ದಿದ್ರೆ ಗೊತ್ತ್ ಮಾಡ್ಕಂಡೇನು ಬಿಡೀ, ಅದೇನೋ ಹೇಳ್ತಾರಲ್ಲ… ಅಂಬು ಬಿಡಕ್ಕೆ ತಿಳೀದಿದ್ರೆ ಚೊಂಬ್ ಮುಳುಗ್ಸಕ್ಕೆ ತಿಳೀದೇ?’ ಅಂತಲೋ, ‘ಇವತ್ತು ನಾಲಕ್ ಜನ ನೆಂಟ್ರು ಬರ್ತಾರೆ, ಏನಾದ್ರೂ ವಿಶೇಷ….’ ಅಂದ್ರೆ ‘ಆಯ್ತ್ ಬಿಡೀ ಮಾಡೋಣಂತೆ, ಜಗಾ ಜಾಲ್ಸೋ ಬಡ್ಡೀಗೆ ಮಗು ತೂಗೋಕ್ಕೆ ಬರಲ್ವೋ’ ಅಂತಲೋ, ‘ಊಟ ಮಾಡಿದ್ರಾ ಸೀತಮ್ನೋರೇ?’ ಅಂತ ಚುಲ್ಟಾರಿ ಚಂದ್ರ ಕೇಳಿದ್ರೆ ‘ ಅಯ್ಯೋ… ಮಾಡಿದ್ನಪ್ಪಾ… ಕೆಟ್ಟ ಹೊಟ್ಟೆಗೆ ಎಷ್ಟ್ ಮಹಾ ಬೇಕು? ಎರಡ್ ತುತ್ತು… ಅದೇನೋ ಹೇಳ್ತಾರಲ್ಲ… ಕತ್ತೆಗ್ ಯಾಕೆ ಕಾಲುಕಡಗ ಅಂತ?’ ಅಂತಲೋ, ಅಮ್ಮ ಮಗ ವಾಗ್ವಾದಕ್ಕಿಳಿದರೆ ‘ನೋಡಪ್ಪಾ, ಏನೇ ಆಗ್ಲಿ… ಹೆತ್ತಾಕೆ… ಅವರ್ದೇ ತಪ್ಪಿರಬಹುದು, ನೀನೇ ಸರಿಯಿರಬಹುದು, ಆದ್ರೂ ಮಾತಿಗ್ ಮಾತ್ ಕೊಟ್ ಏನ್ ಬಂತೂ? ಜೋಗೀನ ಜೋಗಿ ತಬ್ಬಿಕೊಂಡ್ರೆ ಮೈಯೆಲ್ಲ ಜಾಸ್ತಿ ಬೂದಿ ಅಂದ್ ಹಾಗೆ… ತರ್ಕಾ ಮಾಡಿ ಮೂರ್ಖ ಯಾಕಾಗ್ಬೇಕು? ಬಿಟ್ ಬಿಡೂ… ತಟಸ್ಥಂಗೆ ತಂಟೆಯಿಲ್ಲ ಅಂತ ಕಾಣ್ದೇ ಹೇಳಿದ್ರೇನು ಹಿಂದ್ನೋರು…?’ ಅಂತ ಬುದ್ದಿ ಹೇಳುತ್ತಲೋ ಅಂತೂ ಸೀತಮ್ಮನ ಗಾದೆಗಳು ಮನೆ ತುಂಬಾ ಉರುಳಲು ಹತ್ತಿದವು. ‘ಉಪ್ಪು’ ಎಂದು ಕೇಳಿದವರಿಗೂ ಸೀತಮ್ಮ ‘ತಗೋಪ್ಪಾ, ತಗೋ, ಉಪ್ಪರ್ಗೆ ಮನೆ ಇದ್ರೂ ಉಪ್ಪಿಲ್ದೆ ಆಗುತ್ತಾ? ಉಪ್ಪಿಂದ್ಲೇ ಮುಪ್ಪ್ ಬಂದ್ರೂ ಉಪ್ಪ್ ಬಿಟ್ಟಾನೆ ಮನ್ಷಾ?’ ಅಂತ ಗಾದೆ ಬೆರೆಸಿದ ಉಪ್ಪನ್ನೇ ಕೊಟ್ಟಾರು. ‘ಗಾದೆ ಸೀತಮ್ನೋರೇ’ ಅಂತ ಕರೆಯುವಷ್ಟು ಸಲಿಗೆ ವಿಶ್ವನಾಥಯ್ಯನೋರ ಮಕ್ಕಳಿಗೂ ಬೆಳೆದಿತ್ತು.

ಈ ವರಸೆ ಬೇರೆಯವರಿಗೂ ತಗುಲದಿರಲಿಲ್ಲ. ಹೇಗೋ ಏನೋ ಎಲ್ಲರ ಮಾತುಗಳಲ್ಲಿ ಗೊತ್ತಿದ್ದ ಅಲ್ಪಸ್ವಲ್ಪ ಗಾದೆಗಳೇ ವಿಚಿತ್ರ ರೂಪ ಪಡೆದು ಕಾಣಿಸಹತ್ತಿದವು. ‘ಯಾಕಪ್ಪಾ ಇಷ್ಟು ಲೇಟು?’ ಅಂತ ವಿಶ್ವನಾಥಯ್ಯನೋರು ಮಗನ್ನ ಕೇಳಿದ್ರೆ ‘ಅವ್ನು ಅಡ್ರೆಸ್ ತಪ್ ತಪ್ಪಾಗಿ ಕೊಟ್ಟಿದ್ದ ಅಪ್ಪಾಜಿ, ನಾನೇನ್ ಮಾಡ್ಲಿ? ಕೊಂಕಣ ಸುತ್ತಿ ಮೈದಾನಕ್ಕೆ ಹೋದಂಗಿತ್ತು’ ಅಂತ ಹೇಳಿದ್ರೆ ‘ಮೈದಾನ ಅಲ್ಲ, ಮೈಲಾರ, ಗಾದೆಗಳನ್ನದ್ರೂ ಸ್ವಲ್ಪ ಸರಿಯಾಗಿ ಕಲ್ತುಕೋ’ ಅಂತ ಪಿಯುಸಿ ಫೇಲಾದ ಮಗನಿಗೆ ಗಂಭೀರವಾಗಿ ಹೇಳಿದ್ದರು. ಮಗನ ಮೇಲೆ ಗಂಡನಿಗೆ ದೂರು ಹೇಳೊವಾಗ ಪಾರತಮ್ಮ ‘ಹೀನ ಸುಳಿ ಬೋಳಿಸಿದ್ರೂ ಹೋಗುತ್ಯೇ?’ ಅಂತ ಸೇರಿಸಿದಾಗ ಒಂದು ಗಳಿಗೆ ಹೆಂಡತಿಯ ಮುಖವನ್ನೇ ನೋಡಿದ್ದರು ವಿಶ್ವನಾಥಯ್ಯನೋರು. ‘ಇಲ್ನೋಡೀ ಅಪ್ಪಾರೆ, ಮೂಲೆ ಮನೆ ಶೆಟ್ರ ಅಂಗಡೀಲೀ ತಂದ್ ತೆಂಗಿನ್ಕಾಯಿ, ಪೂರಾ ಕೆಟ್ಟ್ ಹೋಗದೆ. ಕಾಸೂ ಕೇಡು, ತಲೆನೂ ಬೋಳು ಅಲ್ಲೇನಿ?’ ಅಂತ ದೂರೊಪ್ಪಿಸಿ ಅಪ್ಪಾರ ಹಿಮದಂತ ಕಣ್ಣುಗಳನ್ನ ಎದುರಿಸಲಾರದೆ ಮೆಲ್ಲನೆ ಕಾಲು ಕಿತ್ತಿದ್ದ ಚಂದ್ರ.

‘ಮಕ್ಳೇ ಈ ತರ! ಇನ್ನು ಬರೋ ಸೊಸೆ ಕೈಲಿ ಏನ್ ಅನುಭವಿಸ್ಬೇಕೋ!’ ಅಂತ ಒಂದು ದಿನ ಪಾರತಮ್ಮ ಮಗನ ಜೊತೆ ಜಗಳವಾದಾಗ ಸೀತಮ್ಮನ ಕೈಲಿ ಅಲವತ್ತುಕೊಂಡರು. ಹುಳಿ ಇಡ್ಲಿ ಹಿಟ್ಟನ್ನ ತಟ್ಟೆಲಿ ಹಾಕುತ್ತಿದ್ದ ಸೀತಮ್ಮ ‘ಅಯ್ಯೋ, ಪಾರತಮ್ಮೋರೆ, ನೀವಿನ್ನೂ ಅನ್ಭವಿಸಿಲ್ಲ, ನಾನ್ ಅನ್ಭವಿಸಾಗಿದೆ ಬಿಡಿ. ಅದೇನೋ ಹೇಳ್ತಾರಲ್ಲ, ಸೊಸೆಗೆ ಗ್ರಾಪ್ರವೇಶ, ಅತ್ತೆಗೆ ಪರವಾಸ ಅಂತ. ಬಂದವ್ಳು ಸೊಸೆಮುದ್ದೆ ಅನ್ಕಂಡೆ, ಮಾರಿ ಅಂತ ಗೊತ್ತಿರ್ನಿಲ್ಲ. ಮಗ ನಮ್ಮೋನಾದ್ರೆ ಸೊಸೆ ನಮ್ಮೋಳೇ? ಇವನು ಏನು ಚುಚ್ಚಿದ್ನೋ, ಅವಳೇನ್ ಅರ್ಥ ಮಾಡ್ಕಂಡ್ಲೋ, ಹೀನಾಯವಾಗಿ ಮಾತಾಡೋಕ್ ಹತ್ತಿದ್ಲು ಕಣೀ… ದಿನಕ್ ಒಂದ್ ಹತ್ತ್ ಸಲ ಹಾದರದ ಮಾತಾಡೋಳು. ಕತ್ತೆ ಹಂಗ್ ಕೆಲ್ಸ ಮಾಡಿದ್ ಜೀವ ನಂದು. ಕೆಲ್ಸ ಮಾಡ್ತಾ ಮನೆ ತುಂಬ ಓಡಾಡ್ತಾ ಇದ್ರೆ ಹಾದರಗಿತ್ತಿ ಕಾಲು ಹಸೆ ಮೇಲ್ ನಿಲ್ದೂ ಅಂತಾರೆ ತಿಳಿದವ್ರು ಅಂತ ಚುಚ್ಚೋಳು. ಮನೇಲ್ ಒಂದ್ ಪಾಯ್ಸ ಮಾಡಿದ್ರೂ ‘ಚಂಬು ಚೌರ್ಗೆಗೆ ದರಿದ್ರ ಇದ್ರೂ ಹಂಚು ಹುಡಿಗೆ ಏನೂ ದರಿದ್ರ ಕಾ…ಣೆ’ ಅಂತ ರಾಗ್ವಾಗಿ ಅಂದ್ರೆ ಮೈಯೆಲ್ಲಾ ಉರ್ದು ಹೋಗ್ತಿತ್ತು ಕಣೀ. ಮಗನ್ ಮುಚ್ಚಟೆಯಾಗಿ ಬೆಳೆಸಿದ್ರೂ ಏನ್ ಬಂತು? ಅಂಗ್ಡಿ ಮಾಡಿ ಗೊಂಗಡಿ ಹೊದ್ದ ಹಾಗೆ? ನಾನೂ ಬಾಯ್ ಮುಚ್ಕಂಡು ನೀಸ್ದೆ. ಮಾತಂದ್ರೆ ಮಾತು, ಗೊತ್ತಿಲ್ಲ ಗುರಿಯಲ್ಲ. ಎಷ್ಟಂತ ನೀಸ್ಲೀ? ಕುರುಡೇಟು ಕೊನೆಗೆ ತಗಲದು ತರಡಿಗೇ ಅಲ್ದಾ? ‘ಏನ್ ಹೆಣ್ಣೇ, ನಾಲ್ಗೆ ಬಿಗಿ ಹಿಡಿದು ಮಾತಾಡು’ ಅಂದ್ರೆ ‘ಕಚ್ಚೆ ಬಿಗೀ ಹಿಡಿದಿದ್ದವ್ರಿಗೆ ನಾಲ್ಗೆ ಬಿಗೀ ಹಿಡಿಯೋ ಉಸಾಬ್ರಿ ಯಾಕೆ’ ಅನ್ನದಾ? ಇವಳ್ ಯಾರು? ಇವಳಿಗ್ ಏನ್ ಗೊತ್ತಿದ್ದು ನನ್ನ್ ಸ್ಥಿತಿ? ಹರಕ್ ಬಾಯಿ ಮುಂಡೇದು. ಗಾಳಿ ಬಾಯನ್ನಾದ್ರೂ ಅಡ್ಗಸಬಹುದು, ಗಯ್ಯಾಳಿ ಬಾಯಿ ಅದೀತಾ? ಅವಳ ಮನೆಯವ್ರ ಹತ್ರ ಏನ್ ಒದರಿದ್ಲೋ, ನನ್ ಕಂಡ್ರೆ ಗುಸಗುಸ ಮಾತಾಡೋರು. ಒಂದಿನ ಹರ್ಕಂತು ನೋಡಿ, ಉದ್ದುರುಟುತನಕ್ಕೆ ಗುದ್ದೇ ಮದ್ದು ಅಂತ ನಾನೂ ಸೆರಗ್ ಕಟ್ಟಿ ನಿಂತೆ. ಬೇನೆಯಿಂದ್ ಮಲಗಿದ್ದ ನನ್ ಗಂಡಂಗೆ ಗಂಜಿ ಮಾಡ್ಕಂಡು ತಗೊಂಡ್ ಹೋಗ್ತಾ ಇದ್ರೆ ‘ಹಗಲೆಲ್ಲಾ ಹಾದ್ರ ಆಡಿ ಯಾವಳೋ ರಾತ್ರಿಯೆಲ್ಲಾ ಕೂತು ಗಂಡನ್ ತಲೆ ಹೇನು ತೆಗೆದ್ಲಂತೆ’ ಅಂತನ್ನದಾ? ಹೆಂಗ್ ಸಹಿಸ್ಕೊಳ್ಳಿ ಈ ಅಗಡಿತನಾನ? ‘ನಂದಲ್ಲ ಹೆಣ್ಣೆ ಹಾದರ, ನಿಂದೇ ಮಾತಿನ್ ಹಾದ್ರ’ ಅಂತ ಬರ್ತಾ ಇದ್ದ ಸಿಟ್ಟಿಗೆ ಗಂಜಿ ಪಾತ್ರೆ ತೆಗ್ದು ಅವಳ್ಕಡೆಗೆ ಎಸ್ದೆ. ಶುರುವಾಯ್ತು ರಾಮಾಯ್ಣ. ಗೋಡೆ ಬಿದ್ರೆ ಜಗಲಿ ಮೇಲ್ ತಾನೆ? ಒಂದೇ ಸಮ ದೂರು ಚುಚ್ಚಿದ್ಲಲ್ಲಾ ಗಂಡಂಗೆ! ಹೊಟ್ಟೇಲ್ ಹುಟ್ಟಿದ್ ಮಕ್ಳು ಕಂಚೋ ಮಿಂಚೋ ಅಂತಾರಲ್ಲ, ನನ್ ಮಗನೂ ತಿರ್ಗಿ ಬೀಳೋದಾ? ‘ನಂಗ್ ಸಾಕಾಗ್ ಹೋಗಿದೆ ಕಣಮ್ಮ, ಎಲ್ಲಾದ್ರೂ ಹಾಳಾಗ್ ಹೋಯ್ತಿನಿ’ ಅಂದ. ಮಗನ್ ಕಾಡು ಹತ್ತಿಸಿದ್ಲು ಅಂತ ಇನ್ನೊಂದ್ ಚುಚ್ಮಾತು ಕೇಳೋಕೆ ನಾನ್ ರೆಡಿ ಇರ್ನಿಲ್ಲ. ನಾನೇ ಹೋಯ್ತೀನಪ್ಪಾ, ನೀವೇ ಸಮಾ ಇರಿ ಅಂದೆ. ಮನೇ ಒಡೀತು. ಸೊಸೆ ಅನ್ನೋ ಮಾರಿ ಆ ಕಡೆಗಿ ತಿರ್ಗಿ ಅಡ್ಗೆ ಮಾಡಿದ್ರೆ ನಾನ್ ಈ ಕಡೆ. ಗಂಡ ಅನ್ನೋ ಪ್ರಾಣಿ ಉಬ್ಬಸದ್ ಮೂಟೆ. ಆಗದ್ ಹೋಗದ್ ಬದ್ಕಿಗೆ ರಾಗಿ ಯಾಕೆ ಅಂತ ನನ್ಪಾಡಿಗೆ ಗಂಡನ್ ನೋಡ್ಕಂಡ್ ಮಡಗಿದಂಗೆ ಇದ್ನಾ ಇಲ್ವಾ? ಅವನೂ ಒಂದಿನ ಹರಹರಾ ಅಂದ. ಕಂಡ್ ಕಂಡವರ್ಗೆಲ್ಲಾ ಹಲ್ ಕಿರಿದ್ರೂ ಗಂಡ್ ಸತ್ತ್ ಮುಂಡೆ ತಲೆ ಬೋಳಿಸೋದ್ ಬಿಡಲ್ವಂತೆ. ನಾನ್ಯಾಕ್ ಹಲ್ಕಿರೀಲಿ? ಯಾಸೀಮೆ ಗಂಡ ಆಗಿದ್ದ ಅವ್ನು? ‘ಅಮ್ಮಾ ಇಲ್ಲ್ ಕೇಳು’ ಅಂತ ಮಗ ಬುದ್ದಿ ಹೇಳೋಕ್ ಬಂದ. ‘ಅಮ್ಮ ಅಂತೆ ಅಮ್ಮ, ಅರ್ಸ ಯಾರಿಗೆ ಅಪ್ಪ, ಸೂಳೆ ಯಾರಿಗ್ ಅವ್ವ ಅಂತ ಕುಟುಕೋದಾ ಆ ಸೊಸೆ ಅನ್ನೋ ಮಾರಿ? ತೊರೆದ್ಬಿಟ್ಟೆ ಕಣೀ, ಆ ಗಳಿಗೇಲಿ ಎಲ್ಲಾ ತೊರೆದ್ಬಿಟ್ಟು ಹಣೆ ಕುಂಕುಮ ಉಳಿಸ್ಕೊಂಡೆ. ಇಂಥಾ ಹಾದರ್ಗಿತ್ತಿ ಮುಖ ನೋಡ್ಲಾರೆ ಅಂತ ಒಂದೇ ಸಮ ರಂಪ ಮಾಡಿ ಗಂಡನ್ನ್ ಹೊರಡಿಸ್ಕೊಂಡು ಹೊರಟ್ ಹೋದ್ಲು. ಹೋಗ್ಲಿ, ನನ್ ಅಂಗಾಲಲ್ಲಿ ತ್ರಾಣ ಇರೋತನ್ಕ ಬಂಗಾಳಕ್ ಹೋದೇನು ಅಂತ ಬದುಕಕ್ ನಿಂತೆ. ಸತ್ರೆ ಯಾರೋ ಹೆಣ ಈಚೆಗೆ ಹಾಕ್ತಾರೆ. ಸತ್ಮೇಲೆ ಅದು ನನ್ನ್ ಹೆಣವೋ? ಬೇರೆಯವರ್ದೊ? ಚೂರುಪಾರು ದುಡ್ಡಿದೆ, ಜನ ಇಲ್ಲ, ಅಷ್ಟೇ ಹೋಯ್ತು ಕತ್ತೆ ಬಾಲ ಅಂತ ಬದುಕ್ದೆ ಕಣೀ. ನಿಮ್ಮೆಜಮಾನ್ರು ‘ಮನೆ ಪರಿಸ್ಥಿತಿ ಹೀಗಿದೆ ದಯವಿಟ್ಟು ಬರಬೇಕು’ ಅಂತ ಕೈ ಮುಗ್ದು ಕೇಳ್ಕೊಂಡಾಗ ಮನ್ಸು ಕರಗ್ತು. ಎಂಥಾ ದೊಡ್ ಮನ್ಷಾ! ಬೀಗ ಜಡಿದೆ, ಹೊರಟೆ ಕಣೀ, ಅಣ್ಣಪ್ಪ ಎಲ್ಲಿದ್ರೇನು, ಊರಲ್ಲಿದ್ರೂ ಸರಿ, ದಂಡಲ್ಲಿದ್ರೂ ಸರಿ. ತಟ್ಟೊಂದಿದ್ರೆ ತಟಾಯ್ಸಿ ನಡ್ಯೋಕಾಗಲ್ವಾ? ಅದೇನೋ ಹೇಳ್ತಾರಲ್ಲಾ….’

ಆಪ್ತ ಧ್ವನಿಯಲ್ಲಿ ಅಡಿಗೆ ಮನೆಯಲ್ಲಿ ಕೂತು ಪಿಸಪಿಸನೆ ಪ್ರವರ ಒಪ್ಪಿಸಿ ಕಣ್ಣೊರೆಸಿಕೊಂಡಾಗ ಪಾರತಮ್ಮನೋರು ಕಲ್ಲಾಗಿ ಕೂತಿದ್ದರು.

ಸೀತಮ್ಮನ ಮಾತಾಳಿತನದ ಬಿಸಿ ತಾಗಿದ್ದು ಮೊದಲು ವಿಶ್ವನಾಥಯ್ಯನೋರಿಗೆ. ಮನೆಯ ಪ್ರತಿಯೊಂದೂ ಖರ್ಚನ್ನು ಹಿಡಿತದಲ್ಲಿಟ್ಟುಕೊಂಡು ಸಂಸಾರ ನಿಭಾಯಿಸುತ್ತಿದ್ದ ಅವರಿಗೆ ಸೀತಮ್ಮನ ಗಾದೆವರ್ತನೆ ಅವರ ಬಿಗಿತನಕ್ಕೆ ಸಿಕ್ಕದಂತೆ ನುಣುಚಿಕೊಳ್ಳಹತ್ತಿದಾಗ ವಿಶ್ವನಾಥಯ್ಯನೋರು ಎಚ್ಚತ್ತುಕೊಳ್ಳಬೇಕಾಯ್ತು. ಆದದ್ದಿಷ್ಟು. ಪಾರತಮ್ಮೋರ ತಂಗಿ ರೇಣುಕಮ್ಮನ ಪರಿವಾರ ಒಂದಿನ ಬಂದು ಇಳಿಯಿತು. ಅದೇ ಊರಲ್ಲಿ ಇದ್ದರೂ ಬಂದರೆ ಇಡೀ ದಿನ ಗಲಗಲವಾಗಿದ್ದು ರಾತ್ರಿ ಎಂಟರ ಹೊತ್ತಿಗೆ ವಾಪಸ್ ಹೋಗುವ ಕಾರ್ಯಕ್ರಮ ಹಾಕಿಕೊಂಡು ಬರುತ್ತಿದ್ದ ರೇಣುಕಮ್ಮ ಸೀರೆ ಮಾರು, ಉಪ್ಪಿನಕಾಯಿ ಮಾರು, ನಿಪ್ಪಟ್ಟು ಕೋಡುಬಳೇಗೆ ಆರ್ಡರ್ ತಗೋ ಇತ್ಯಾದಿಯಲ್ಲಿ ಸದಾ ಮುಳುಗಿರುತ್ತಿದ್ದ ಹೆಂಗಸು. ಬಂದರೆ ಚಿಟ್ಟೆಯಂತೆ ಪತರಗುಡುತ್ತಾ ದೊಡ್ದ ದನಿಯಲ್ಲಿ ಗಂಡಸಂತೆ ನಗುತ್ತಾ ದಪ್ಪ ದೇಹವನ್ನು ಮನೆಯ ಉದ್ದಗಲಕ್ಕೂ ವಾಲಾಡಿಸಿ ನಡೆದಾಡುತ್ತಾ ಇದ್ದರೆ ಮನೆಗೆ ಹಬ್ಬ ಹೊಕ್ಕಂತೆ. ಅವರ ಜೊತೆಯೇ ಡಬ್ಬಗಟ್ಟಲೆ ತಿಂಡಿಗಳೂ ಬಂದಿಳಿಯುತ್ತವೆ. ತಂದ ತಿಂಡಿಗಳನ್ನು ಎಲ್ಲರಿಗೆ ಸ್ವಲ್ಪ ಸ್ವಲ್ಪ ಕೊಟ್ಟು ಉಳಿದದ್ದನ್ನು ರೂಮಿನ ಬೀಗ ಇರುವ ಬೀರಿಗೆ ರವಾನಿಸುವುದು ಆ ಮನೆಯ ಪದ್ಧತಿ. ಮಾರನೆ ದಿನದಿಂದ ಆ ತಿಂಡಿಗಳು ಸಾಯಂಕಾಲದ ಕಾಫಿ ಹೊತ್ತಿಗೆ ಮನೆ ಯಜಮಾನನ ತಟ್ಟೆಯಲ್ಲಿ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ಕಾಣಿಸಹತ್ತಿದರೆ ಆಶ್ಚರ್ಯವೇನಿಲ್ಲ. ಏನೂ ಇಲ್ಲದಿದ್ದರೆ ಕಡ್ಲೇಕಾಯಿಬೀಜವನ್ನೇ ಹುರಿದು ಉಪ್ಪುಖಾರ ಬೆರೆಸಿ ಹಳೆ ಹಾರ್ಲಿಕ್ಸ್ ಬಾಟ್ಲಿಯಲ್ಲಿ ಹಾಕಿ ರೂಮಿನ ಬೀರಿನಲ್ಲಿ ಇಡಬೇಕೆಂದು ಅಪ್ಪಣೆಯಾಗಿತ್ತು. ಸಾಯಂಕಾಲ ಫ್ಯಾಕ್ಟರಿಯಿಂದ ಬಂದ ಯಜಮಾನರು ಪೇಪರ್ ಓದುತ್ತಾ ಕಾಫಿ ಕುಡಿಯುತ್ತಾ ಒಂದೊಂದೇ ಕಾಳನ್ನು ಬಾಯಿಗೆ ಹಾಕಿಕೊಳ್ಳುತ್ತಿದ್ದರೆ ಆಚೀಚೆ ಓಡಾಡುವ ಮಕ್ಕಳು ಕಂಡೂ ಕಾಣದಂತೆ ಹುಬ್ಬೇರಿಸಬಹುದು ಅಷ್ಟೇ. ಯಾಕಂದ್ರೇ ವಿಶ್ವನಾಥಯ್ಯನೋರೇ ಹೇಳೋ ಹಾಗೆ ಈ ಗಡವಾ ಗಂಡು ಮಕ್ಕಳು ಯಾವತ್ತಾದ್ರೂ ಇಷ್ಟು ದೊಡ್ಡ ಮನೆ ಖರ್ಚು ಹೇಗೆ ನಿಭಾಯಿಸ್ತಾ ಇದೀರಾ ಅಂತ ಕೇಳಿದಾರೇನು? ‘ತಗಳಿ ಅಪ್ಪಾಜಿ, ಮನೆ ಖರ್ಚಿಗೆ ನನ್ನ ಸಹಾಯ’ ಅಂತ ಹತ್ತು ಪೈಸೆ ಬಿಚ್ಚಿದಾರೇನು? ಸಂಪಾದ್ನೆ ಮಾಡೊಕೆ ಹತ್ತಿದ್ರೂ ಅಪ್ಪನ ಅನ್ನ ಆಶ್ರಯದಲ್ಲೇ ಮುಗುಮ್ಮಾಗಿ ಬದುಕ್ತಾ ಇರೋ ಈ ದಂಡಪಿಂಡಗಳಿಗೆ ದೊಡ್ದ ಸಿಟೀಲಿ ಬದುಕೋದು ಎಷ್ಟು ಕಷ್ಟ ಅಂತ ಗೊತ್ತಿಲ್ಲೇನು?

ಪಾಪ ಸೀತಮ್ಮನೋರಿಗೆ ಇದೆಲ್ಲಾ ಗೊತ್ತಿತ್ತೋ ಇಲ್ಲವೋ. ಅಂತೂ ಪಾರತಮ್ಮ ಎದ್ದುಬಂದು ಹಂಚೋ ಹೊತ್ತಿಗೆ ಸೀತಮ್ಮನೇ ಮನೇಲಿರೋ ಸಮಸ್ತ ಜನಕ್ಕೂ ತಿಂಡಿ ಹಂಚಿ ತಟ್ಟೆಲಿಟ್ಟು ಕೊಟ್ಟಾಗಿತ್ತು. ಚುಲ್ಟಾರಿ ಚಂದ್ರ ತಡ ಮಾಡಿದ್ರೆ ಏನ್ಗತಿಯೋ ಅಂತ ಮೂಲೇಲಿ ನಿಂತು ಒಂದೊಂದಾಗಿ ಗುಳುಂ ಅನ್ನಿಸುತ್ತಿದ್ದ. ಪಾರತಮ್ಮನೋರಿಗೆ ಹೊಟ್ಟೆ ಬೆಂಕಿಯಾಗೋದಿರ್ಲಿ, ವಿಚಿತ್ರವಾದ ಭಯ ಶುರುವಾಯ್ತು. ‘ಇದೇನ್ರೀ ಸೀತಮ್ಮೋರೆ, ಎಲ್ಲಾನೂ ಖಾಲಿ. ಅಪ್ಪಾರಿಗೆ ಏನ್ ಕೊಡೋದು?’ ಅಂತ ಪಿಸುವಾಗಿ ಕೇಳಿದರೆ ಸೀತಮ್ಮ ‘ಅಪ್ಪಾರಿಗೂ ತಟ್ಟೇಲ್ ಇಟ್ಟೀದೀನಿ ಕಣೀ.. ಜಾಸ್ತಿ ದಿನ ಇಟ್ರೆ ರುಚಿ ಇರೋಲ್ಲ. ‘ಇಟ್ ಇಟ್ಟೇ ಕೆಟ್ನಂತೆ ಸುಬ್ಬಾಭಟ್ಟ’ ಅಂತ ನಗುತ್ತಲೇ ಹೇಳಿದ್ದು ಚುಲ್ಟಾರಿಯಾದಿಯಾಗಿ ಯಜಮಾನರಿಗೂ ಕೇಳಿತ್ತು.

ಸಾಯಂಕಾಲ ಫ್ಯಾಕ್ಟರಿಯಿಂದ ಬಂದ ಯಜಮಾನರು ಪೇಪರ್ ಓದುತ್ತಾ ಕಾಫಿ ಕುಡಿಯುತ್ತಾ ಒಂದೊಂದೇ ಕಾಳನ್ನು ಬಾಯಿಗೆ ಹಾಕಿಕೊಳ್ಳುತ್ತಿದ್ದರೆ ಆಚೀಚೆ ಓಡಾಡುವ ಮಕ್ಕಳು ಕಂಡೂ ಕಾಣದಂತೆ ಹುಬ್ಬೇರಿಸಬಹುದು ಅಷ್ಟೇ. ಯಾಕಂದ್ರೇ ವಿಶ್ವನಾಥಯ್ಯನೋರೇ ಹೇಳೋ ಹಾಗೆ ಈ ಗಡವಾ ಗಂಡು ಮಕ್ಕಳು ಯಾವತ್ತಾದ್ರೂ ಇಷ್ಟು ದೊಡ್ಡ ಮನೆ ಖರ್ಚು ಹೇಗೆ ನಿಭಾಯಿಸ್ತಾ ಇದೀರಾ ಅಂತ ಕೇಳಿದಾರೇನು? ‘ತಗಳಿ ಅಪ್ಪಾಜಿ, ಮನೆ ಖರ್ಚಿಗೆ ನನ್ನ ಸಹಾಯ’ ಅಂತ ಹತ್ತು ಪೈಸೆ ಬಿಚ್ಚಿದಾರೇನು? ಸಂಪಾದ್ನೆ ಮಾಡೊಕೆ ಹತ್ತಿದ್ರೂ ಅಪ್ಪನ ಅನ್ನ ಆಶ್ರಯದಲ್ಲೇ ಮುಗುಮ್ಮಾಗಿ ಬದುಕ್ತಾ ಇರೋ ಈ ದಂಡಪಿಂಡಗಳಿಗೆ ದೊಡ್ದ ಸಿಟೀಲಿ ಬದುಕೋದು ಎಷ್ಟು ಕಷ್ಟ ಅಂತ ಗೊತ್ತಿಲ್ಲೇನು?

ಅಂದು ಹತ್ತಿದ ಅಸಮಾಧಾನದ ಸಣ್ಣ ಎಳೆ ಹೇಗೇಗೋ ಬೆಳೆಯುತ್ತಲೇ ಹೋಯಿತು. ಮಗಂದಿರಿಗೆ ನೇರವಾಗಿ ತಾಕದಿದ್ದರೂ ಅದು ಯಜಮಾನ್ರು, ಸೀತಮ್ಮ ಮತ್ತು ಪಾರತಮ್ಮನವರ ತ್ರಿಕೋನದಲ್ಲಿ ಗಿರಕಿ ಹೊಡೆಯಲಾರಂಭಿಸಿತ್ತು. ಆರ್ಭಟಿಸಿದರೆ ಛಳುಕು ಹೊಡೆಸುವಂತಿದ್ದ ಯಜಮಾನರ ನಾಲಗೆ ಸೀತಮ್ಮನವರ ವಿಷಯದಲ್ಲಿ ಸ್ವಲ್ಪ ಯಾಕೋ ಎನೋ ಕುಂದಿದಂತಿತ್ತು.

ಬಂದವರು ತಂದ ತಿಂಡಿಯನ್ನು ಹಂಚಿದ್ದಷ್ಟೇ ಅಲ್ಲ, ಬಂದವರಿಗೆ ಧಾರಾಳವಾಗಿ ಕಾಫಿ ತಿಂಡಿ ಮಾಡಿ ಹಾಕುವುದರಲ್ಲೂ ಸೀತಮ್ಮ ಹಿಂದೆ ಬೀಳಲಿಲ್ಲ. ಬಂದವರ ಎದುರೇ ‘ಸ್ವಲ್ಪ ಬೀಗದೆಸಳು ಕೊಡಿ, ಬಂದವರಿಗೆ ಕಾಪಿ ಮಾಡ್ಬೇಕು’ ಅಂತಲೋ, ‘ಉಪ್ಪಿಟ್ಟಿನ್ ರವೆ ಹುರ್ದು ಇಟ್ಟಿದ್ದೆ, ಬಂದವ್ರಿಗೆ ತಟ್ಟನೆ ಉಪ್ಪಿಟ್ಟ್ ಮಾಡೇನು ಅಂತ. ಈಗ ಕಣ್ಣಿಗೇ ಬೀಳ್ ಒಲ್ದು. ನೀವೇನಾದ್ರೂ ಎತ್ತಿಟ್ರ?’ ಅಂತ ಕೇಳಿ ಮನೆ ಯಜಮಾನತಿ ಮುಜುಗರದಿಂದ ಎದ್ದು ಬರೋ ಹಾಗೆ ಮಾಡದಿದ್ರೆ ಸೀತಮ್ಮ ಸೀತಮ್ಮನೇ ಅಲ್ಲ. ‘ಇದ್ಯಾಕ್ರೀ ಸೀತಮ್ನೋರೆ, ಈ ಪಾಟಿ ಡಿಕಾಕ್ಷನ್ ಹಾಕಿದೀರಿ?’ ಅಂತ ಸಣ್ಣ ಧ್ವನಿಯಲ್ಲಿ ಕೊಸಕೊಸ ಅಂದರೆ ‘ಅಯ್ಯೋ, ಸುಮ್ನಿರಿ, ಬಂದವ್ರಿಗೆ ಸರ್ಯಾದ್ ಕಾಪಿನೂ ಕೊಡದಿದ್ರೆ ನಿಮ್ಮನೆ ಬಗ್ಗೆ ಏನನ್ಕೊಂಡಾರು? ಹೆಸರ್ಗೆ ಕ್ಷೀರಸಾಗರ ಭಟ್ಟ, ಮನೇಲಿ ನೀರ್ಮಜ್ಜಿಗೆಗೂ ಗೊಟ್ಟ ಅಂತ ಆಡ್ಕಳಲ್ವಾ? ಬರೋವ್ರು ಅವರ್ ಮನೇಲಿ ತಿನ್ನಕ್ಕಿಲ್ಲ ಅಂತ ನಮ್ಮನೆಗೆ ಬಂದಾರೇನು? ಅದೇನೋ ಹೇಳ್ತಾರಲ್ಲಾ…’ ಅಂತ ಪಿಸುವಾಗೇ ಉತ್ತರ ಕೊಟ್ರೆ ಪಾರತಮ್ಮನೋರಿಗೆ ಮುಂದಿನ ಮಾತು ತಿಳಿಯುತ್ತಿರಲಿಲ್ಲ.

ಸೀತಮ್ಮನ ಧಾರಾಳತನ ಅಲ್ಲಿಗೇ ಮುಗೀಲಿಲ್ಲ. ತಿಂಗಳ ಒಟ್ಟು ಸಾಮಾನಲ್ಲಿ ಬಂದು ಬೀಳುತ್ತಿದ್ದ ನಾಲ್ಕು ತುಪ್ಪದ ಬಾಟ್ಲಿಗಳಲ್ಲಿ ಎರಡು ಪಕ್ಕದಲ್ಲಿದ್ದ ಇನ್ನೊಂದು ದಿನಸಿ ಅಂಗಡಿಗೆ ಹೋಗುತ್ತಿದ್ದವು. ನಿಗದಿತ ಬೆಲೆಗಿಂತ ಸ್ವಲ್ಪ ಕಡಿಮೆ ದುಡ್ಡು ಪಾರತಮ್ಮನ ಕೈಗೆ ಬಂದು ಬೀಳುತ್ತಿತ್ತು. ಆಗಾಗ ಮಿಕ್ಸಿಯಿಂದ ತೆಗೆಯುವ ಬೆಣ್ಣೆ ಕಾಸಿದರೆ ಸ್ವಲ್ಪ ತುಪ್ಪ ಬರುತ್ತಿತ್ತಲ್ಲ. ಹೇಗೂ ತುಪ್ಪದ ಸವಲತ್ತು ಯಜಮಾನರಿಗೆ ಮಾತ್ರ ತಾನೇ. ಹಾಗಂತ ಉಳಿದವರಿಗೆ ಇಲ್ಲವೇ ಇಲ್ಲ ಅಂತಲ್ಲ. ಯಾವಾಗಲೂ ಇಲ್ಲ ಅಷ್ಟೇ. ಸೀತಮ್ಮ ಬೆಣ್ಣೆ ತೆಗೆದ ದಿನ ಯಜಮಾಂತಿಯ ಅಣತಿಯಂತೆ ತುಪ್ಪ ಕಾಯಿಸುವ ಬದಲು ಬಿಡುಬೀಸಾಗಿ ಬೆಣ್ಣೆಯನ್ನೇ ಟೇಬಲ್ ಮೇಲಿಟ್ಟರೆ ಕಾಯಿಸಲು ಏನು ಉಳಿದಿರುತ್ತೆ ಮಣ್ಣು? ಪಾರತಮ್ಮ ಅನ್ನಲಾರರು, ಅನುಭವಿಸಲಾರರು. ‘ಮುಗೀತಾ ಬೆಣ್ಣೆ ಎಲ್ಲಾ? ನಾಲಕ್ ತುಪ್ಪದ್ ಬಾಟ್ಲೀನೂ!’ ಅಂದರೆ ಸೀತಮ್ಮ ತಣ್ಣಗೆ ‘ಮುಗೀದೆ? ಈ ಪಾಟಿ ಜನದ್ ಮನೇಲಿ? ತಿನ್ಲಿ ಬಿಡಿ ನಿಮ್ ಮಕ್ಕಳು ತಾನೇ. ಅದೇನೋ ಹೇಳ್ತಾರಲ್ಲ, ತನ್ನ್ ಅಕ್ಕನ್ ಅರೀದವ್ಳು ಪಕ್ಕದ್ಮನೆ ಬೊಮ್ಮಕ್ಕನ್ ಅರ್ತಾಳೇ ಅಂತ?’ ಅಂತ ಹೇಳಿದ್ದೂ ಆಯ್ತು.

ಇದೆಲ್ಲದರ ಜೊತೆಗೆ ಚುಲ್ಟಾರಿ ಚಂದ್ರ ಇನ್ನೊಂದು ರೀತಿಯ ತಲೆನೋವಾಗಲಾರಂಭಿಸಿದ್ದ. ಸೀತಮ್ಮನಿಗೂ ಅವನಿಗೂ ನಗೆಸಾರ ಹತ್ತಿದರೆ ಮುಗಿಯಲೊಲ್ಲದ್ದು. ‘ಅದೇನೋ ಹೇಳ್ತಾರಲ್ಲ…’ ಅಂತ ಸೀತಮ್ಮ ಶುರು ಮಾಡೋದೇ ತಡ ‘ಅದೇನ್ ಹೇಳ್ತಾರೀ ಸೀತಮ್ಮೋರೇ… ಅದನ್ನ್ ಪಶ್ಟ್ ಹೇಳ್ರಿ…’ ಅಂತ ಕ್ಕೆಕ್ಕೆಕ್ಕೆ  ನಗುತ್ತಿದ್ದರೆ ‘ಇದ್ ಕೆಲ್ಸ ಇದ್ದಲ್ಲೇ ಬಿಟ್ಟು ಕೂತ್ಕೊಳ್ಳುತ್ತೆ ಮುಂಡೇದು, ಅವರ್ಗೂ ಸರಿ, ಇವನ್ಗೂ ಸರಿ’ ಅಂತ ಪಾರತಮ್ಮ ಗೊಣಗಿ ಎದ್ದು ಬಂದು ಕಣ್ಣು ಬಿಟ್ರೆ ಮೆಲ್ಲಗೆ ಕೆಲಸಕ್ಕೆ ಹೋಗುತ್ತಿದ್ದ ಆಸಾಮಿ. ದಿನ ದಿನಾ ಕೆನ್ನೆ ಬೇರೆ ತುಂಬ್ಕೋತಿತ್ತಲ್ಲ! ಒಂದು ಸಲ ರೇಣುಕಮ್ಮ ಛೇಡಿಸೋ ದನೀಲಿ ‘ ಏನ್ ಪೂರ್ಣ ಚಂದ್ರ, ಅಮಾಸೆ ಮರ್ತು ಹೋಯ್ತಾ?’ ಅಂತ ಕೇಳಿದಾಗ ಪಾರತಮ್ಮ ಒಳಗೊಳಗೇ ಉರಿದುಬಿದ್ದಿದ್ದರು. ‘ಎಲ್ಲಾರೂ ಸೇರಿ ಅಟ್ಟ ಹತ್ಸಿದಾರೆ ಮುಂಡೇದಕ್ಕೆ. ಈಗೀಗ ಏನ್ ಹಿಂತಿರುಗ್ ಮಾತಾಡೋದ್ ಕಲ್ತಿದೆ? ಮೊನ್ನೆ ಏನೋ ಕೆಲ್ಸ ಕದ್ದಿದ್ದಕ್ಕೆ ರೇಗಿದ್ರೆ ‘ಮಾಡ್ತಾನೇ ಇಲ್ಲೇನಿ? ಇನ್ನೆಷ್ಟ್ ಬೇಗ್ ಮಾಡ್ಲಿ?’ ಅಂತ ಜೋರಾಗಿ ಹೇಳಿ ಮೆಲ್ಲಗೆ ‘ಕೊಡೋದ್ ಒಂದ್ ಕಾಸು, ಕೆಲ್ಸ ಹತ್ ತಾಸು’ ಅಂತ ಗೊಣಗಿದ್ದು ತನಗೆ ಕೇಳಿರಲಿಲ್ಲವೆ? ಇಡ್ಲಿ ಹಿಟ್ಟು ಮನೆಯಲ್ಲೇ ರುಬ್ಬಿಸಿ ಮಿಶನ್ನಿಗೆ ಹಾಕಿಸ್ದೆ ಅಂತ ಹೇಳಿ ಎರಡು ರೂಪಾಯಿ ಇಸ್ಕೊಂಡು ಪುಡಿಕಾಸು ಕಷ್ಟಕ್ಕೆ ಇರ್ಲಿ ಅಂತ ಇಟ್ಕೊತಿದ್ದದ್ದು ತನ್ನ ಹಣೇಬರ. ಮೊನ್ನೆ ದಿನ ಯಜಮಾನ್ರು ‘ಏನೋ ಚಂದ್ರ, ಮಿಶನ್ನಿಂದ ಇಡ್ಲಿಹಿಟ್ಟು ವಾಪಸ್ ತಂದ್ಯೇನೋ?’ ಅಂತ ಕೇಳಿದ್ರೆ ಮುಂಡೇದು ತಬ್ಬಿಬ್ಬಾದಂಗೆ ‘ಏನೀ ಅಮಾ, ನಾನ್ ಹಿಟ್ ರುಬ್ಸಿ ತಂದ್ನೇನಿ?’ ಅಂತ ನನ್ನೇ ಕೇಳಿ ಸಿಕ್ಕಿ ಹಾಕ್ಸಿತ್ತಲ್ಲಾ, ಎಲ್ಲಿಂದ ಬಂತು ಈ ಐನಾತಿ ಬುದ್ದಿ ಇದಕ್ಕೆ? ಈ ಮಧ್ಯೆ ಏನ್ ತಿನ್ನೋದ್ ಕಲ್ತಿದೆ! ಮೊನ್ನೆ ಊಟ ಮಾಡ್ತಿದ್ದಾಗ ತಾನು ಬೇಕಂತ್ಲೇ ಎದ್ ಬಂದ್ ನೋಡಿದ್ರೆ ತಟ್ಟೇಲಿ ಅನ್ನದ್ ರಾಶಿ! ಭರಭರಾ ಉಣ್ತಾ ಇದೆ! ಅದೇನೋ ಹೇಳ್ತಾರಲ್ಲ… ಕಂಡ್ರೆ ಮಾಣಿ, ಉಂಡ್ರೆ ಗೋಣಿ ಅಂತ… ಛೆ! ತನಗೂ ಏನಾಗಿದೆ? ಎಲ್ಲಾ ಈ ದರಿದ್ರ ಸೀತಮ್ಮನಿಂದ್ಲೇ…’ ಪಾರತಮ್ಮ ತಲೆ ಕೊಡವಿಕೊಂಡರು. ಅಂತೂ ಪರಿಸ್ಥಿತಿ ಬಿಗಡಾಯಿಸುತ್ತಲೇ ಹೋಯಿತು. ಚುಲ್ಟಾರಿಯ ಕುಲುಕುಲು, ಪಾರತಮ್ಮನ ಗೊಣಗೊಣ, ಸೀತಮ್ಮನ ಗಾದೆಪ್ರವಾಹ, ವಿಶ್ವನಾಥಯ್ಯನೋರ ಬಿಗಿದ ಮುಖ, ಅಡಿಗೆ ಕೆಲಸ, ಮನೆ ಕೆಲಸ, ಬಂದು ಹೋಗುವವರು… ಇತ್ಯಾದಿ. ಒಂದಿನ ಮಾತ್ರ ಕುದಿತ ಸ್ಫೋಟಗೊಂಡಿತು; ಅದೂ ಒಂದು ಸಣ್ಣ ಕಾರಣಕ್ಕೆ.

ವಾರದ ತರಕಾರಿ, ಹಣ್ಣನ್ನು ಯಜಮಾನರು ತಂದು ಟೇಬಲ್ ಮೇಲೆ ಹರವಿ ಲೆಕ್ಕ ಬರ್ಕೊಂಡ ಮೇಲೆ ತೊಳೆದು ಫ್ರಿಜ್ಜಿಗೆ ಸೇರಿಸುವ ಕೆಲಸ ಸೀತಮ್ಮನವರದ್ದು. ಎಷ್ಟು ದಿನಕ್ಕೆ ಎಷ್ಟು ಹಣ್ಣು ಖರ್ಚಾಗುತ್ತೆ ಅನ್ನೋದು ಯಜಮಾನರ ತಲೆಯ ಯಾವುದೋ ಒಂದು ಮೂಲೆಯಲ್ಲಿ ಇದ್ದೇ ಇರುತ್ತಿತ್ತು. ರಾತ್ರಿ ಚಪಾತಿ ತರಕಾರಿ ಜೊತೆ ಹಣ್ಣು ತಿನ್ನೋದು ಯಜಮಾನರ ರೂಢಿ. ಒಂದಿನ ಹಣ್ಣು ಕಾಣಿಸದಿದ್ದಾಗ ತಂದ ಹಣ್ಣು ಮುಗಿದವೆ ಅಂತ ಪ್ರಶ್ನೆ ಬಂತು. ‘ಏ ಪಾರತೂ, ಹಣ್ಣು ತರಕಾರಿ ಹೇಗೆ  ಖರ್ಚಾಗ್ತಾ ಇದಾವೆ ಅಂತನಾದ್ರೂ ನೋಡ್ಬಾರ್ದೆ? ನೀವೇನ್ ವಿವೇಕದ್ ಸಂಸಾರ ಮಾಡ್ತೀರೋ ಹೇಗೆ?’ ಅಂತ ಆಗ ತಾನೇ ಸ್ವಲ್ಪ ಸಲೀಸಾಗಿ ಎದ್ದು ಓಡಾಡುತ್ತಿದ್ದ ಪಾರತಮ್ಮನೋರನ್ನ ಕೇಳಿ ‘ಇದೇನ್ ಇವ್ರೂ… ನನ್ ಕೇಳ್ತಾರೆ… ನಾನೇ ಸಾಯ್ತಾ ಬಿದ್ದಿದೀನಿ… ನಂಗ್ ಗೊತ್ತಿಲ್ಲ ಕಣ್ರಪ್ಪ… ಯಾರನ್ ಕೇಳ್ಬೇಕೋ ಅವ್ರನ್ನೇ ಕೇಳಿ…’ ಅಂತ ಹೇಳಿ ಮಾತಿಗೆ ಮಾತು ಬೆಳೆದು ಮನಸ್ಸಲ್ಲಿ ಕುಟುಕುತ್ತಿದ್ದ ಹಿಂದಿನ ದಿನದ ಪ್ರಸಂಗವನ್ನು ಅಂತೂ ಪಾರತಮ್ಮ ಕಕ್ಕಿದರು. ಹಿಂದಿನ ದಿನ ಮುಸ್ಸಂಜೇಲಿ ದೀಪ ಹಚ್ಚೋಣ ಅಂತ ಕೈಕಾಲುಮುಖ ತೊಳೆಯೋಕೆ  ಹೋಗಿದ್ದಲ್ಲವೇ? ಚುಲ್ಟಾರಿ ಒಗೆಯೋ ಕಲ್ಲಿನ ಮೂಲೇಲಿ ನಿಂತು ಏನೋ ತಿಂತಿಂದ್ದದ್ದು ಕಣ್ಣಿಗೆ ಬಿದ್ದಿತ್ತು. ತನ್ನ ಮುಖ ಕಂಡ ತಕ್ಷಣ ತಿಂತಾ ಇದ್ದಿದ್ದನ್ನ ಜೇಬಲ್ಲಿ ಜಾರಿಸಿದ್ದಲ್ಲವೆ? ಕೇಳಿದ್ದಕ್ಕೆ ‘ಏನೂ ಇಲ್ಲ ಕಣಿ ಅಮ್ಮ, ನಾಲಕ್ ಕಡ್ಲೆ’ ಅಂತ ಹೇಳ್ತು. ಗದರಿಸಿ ಕೇಳಿದ್ದಕ್ಕೆ ಜೇಬಿಂದ ನಿಧಾನವಾಗಿ ಸೇಬಿನ ಚೂರು ತೆಗೀತು. ಎಷ್ಟೂ ಅಂತ ಹೇಳೋದು ಅಂತ ತಾನು ಸುಮ್ಮನಾಗಿದ್ದಲ್ಲವೇ? ‘ನೋಡ್ರಪ್ಪಾ, ನನ್ನ ಕಣ್ಣಿಗೆ ಬಿದ್ದದ್ದು ಇಷ್ಟು. ಇನ್ ನೀವುಂಟು, ಅವರುಂಟು…’ ಅಂತ ಹೇಳಿ ಪಾರತಮ್ಮ ಒಳಗೆ ಮಲಗಿದ್ದೂ ಆಯ್ತು. ಹಾಲ್ ನಲ್ಲಿ ನಡೆಯೋದು ಹೇಗೂ ರೂಮಿಗೆ ಕೇಳಿಸುತ್ತಲ್ಲಾ. ಚಂದ್ರನ್ನ ಕರೆಯೋದಕ್ಕೆ ತಕ್ಷಣ ಅಪ್ಪಣೆಯಾಯ್ತು. ಬೊಬ್ಬೆಗೆ ಹೆದರಿಕೊಂಡ ಚಂದ್ರ ಬ್ಬೆಬ್ಬೆಬ್ಬೆ ದನಿಯಲ್ಲಿ ಸೀತಮ್ಮ ಕೊಟ್ಟಿದ್ದು ಅಂತ ಹೇಳಿದ. ‘ರೀ, ಸೀತಮ್ಮ್ನೋರೇ, ಬನ್ನಿ ಇಲ್ಲಿ ಸ್ವಲ್ಪ’ ಅಂತ ಯಜಮಾನರು ಗಡಸು ಸ್ವರದಲ್ಲಿ ಕರೆದು ವಿಚಾರಿಸಿದಾಗ ಸೀತಮ್ಮ ಸ್ವಲ್ಪ ತಬ್ಬಿಬ್ಬಾದರೂ ಸಾವರಿಸಿಕೊಂಡು ‘ಹೌದಪ್ಪಾ, ನಾನೇ ಕೊಟ್ಟೆ. ಮುಕ್ಕಾಲು ಭಾಗ ಕೊಳ್ತಿದ್ದ ಹಣ್ಣನ್ನು ಆಸೆಯಿಂದ ನೋಡ್ತಾ ‘ಇದ್ ಪೂರ ಕೊಳೆತೇಬಿಟ್ಟಿದೆ ಅಲ್ಲಾ ಸೀತಮ್ನೋರೆ’ ಅಂತ ಆ ಹುಡ್ಗು ಕೇಳ್ದಾಗ ಕಿಂಚಿತಕ್ಕೆ ವಂಚನೆ ಯಾಕೆ ಅಂತ ನಾನೇ ಎತ್ತಿ ಕೊಟ್ಟೆ. ಅದನ್ನ ಯಾರದ್ರೂ ತಿನ್ನೊಕಾಗುತ್ತಾ? ತಳಿಗೆ ಚಂಬು ಹೋದ್ಮೇಲೆ ಮಳ್ಗೆ ಮುಚ್ಚಿದ್ರೇನ್ ಫಲ ಅಂತ ಇದ್ದಷ್ಟನ್ನ ಕತ್ತರಿಸಿ ತಿನ್ನು ಅಂತ ಕೊಟ್ಟೆ’ ಅಂತ ಅಂದಾಗಲೂ ಯಜಮಾನರ ಏರು ಸ್ವರ ಇಳಿಯಲಿಲ್ಲ. ಕೊಡೊಕ್ಕೆ ಮುಂಚೆ ಅಮ್ಮನೊರನ್ನ ಕೇಳಿ ಕೊಡಬಾರದೇ? ಸೀತಮ್ಮನ್ನ ಸಹಾಯಕ್ಕಿರ್ಲಿ ಅಂತ ಕರೆಸಿದ್ದಾ? ಅಥ್ವಾ ಯಜಮಾನಿಕೆಗೆ ಕರೆಸಿದ್ದಾ? ತನ್ನ ಮನೆ ವರ್ಷಗಟ್ಟಲೆಯಿಂದ ಒಂದು ರೀತಿಯಲ್ಲಿ ನಡೀತಿರಬೇಕಾದ್ರೆ, ಹೊರಗಿನೋರು, ಸ್ವಲ್ಪ ದಿನ ಇರೋದಿಕ್ಕೆ ಬಂದೊರು ಇಲ್ಲದ ಉಸಾಬರಿ ಮಾಡಿ ಸಂಸಾರದ ಹದ ಕೆಡಿಸೋದು ಯಾಕೆ? ದೊಡ್ದ ಹುದ್ದೆ ಅಂತ ಕಂಡ್ರೂ ನಿಯತ್ತಿಂದ ಮಿತವಾಗಿ ತಾವು ಈ ಮಹಾ ನಗರದಲ್ಲಿ ಸಂಸಾರ ನಿಭಾಯಿಸೋಕೆ ಪಡ್ತಾ ಇರೋ ಪಾಡು ಯಾರಿಗಾದ್ರೂ ಹೇಗೆ ಅರ್ಥವಾಗ್ಬೇಕು?… ಇತ್ಯಾದಿ ಇತ್ಯಾದಿ. ಸೀತಮ್ಮ ತಗ್ಗಿಸಿದ ತಲೆ ಮೇಲೆತ್ತದೆ ನಿಂತರು. ಮಾತೂ ಮತ್ತೂ ಮುಂದುವರೆದಾಗ ವಿಶ್ವನಾಥಯ್ಯನೋರ ಎರಡನೆ ಮಗನಿಗೆ ಏನನ್ನಿಸಿತೋ ಏನೋ, ರೂಮಿಂದ ಎದ್ದು ಬಂದು ‘ಅದ್ಯಾಕ್ ಅಪ್ಪಾಜಿ, ಒಂದು ಕೊಳೆತ ಸೇಬು ತಾನೇ? ಏನೀಗ ಹೋಗಲಿ ಬಿಡಿ…’ ಅಂತ ಅಂದಿದ್ದು ದೊಡ್ಡ ಅಗ್ನಿಪರ್ವತವನ್ನೇ ಸಿಡಿಸಿತು. ‘ಬಾಯ್ ಮುಚ್ಚು. ನನಗೇ ಬುದ್ದಿ ಹೇಳೋಕ್ಕೆ ಬರಬೇಡಾ. ಯಾವ್ಯಾವ್ದು ಎಲ್ಲೆಲ್ಲಿರ್ಬೇಕೋ ಅಲ್ಲಲ್ಲೇ ಇರ್ಬೇಕು. ಈ ಹೆಂಗ್ಸು ಹಾದರ ಮಾಡಿ ಹೆತ್ತದ್ದೂ ಅಲ್ದೆ ನನ್ನ ಮನೆಗೆ ಬಂದು ಕೆಲಸದೋನ ಜೊತೆ ಏಕಾಂತ ಹೊಡೀತಾ ಬೆಳೆದ ಗಂಡುಮಕ್ಕಳ ಜೊತೆ ಗಾದೆಮಾತಿನ್ ಸರಸ ಆಡ್ತಾ ಯಜಮಾನ್ಕೆ ಮಾಡೋಕ್ ಬಂದಿದೆ ಗಾದೆಗೂಬೆ!’ ಅಂತ ಅಬ್ಬರಿಸಿದ ಪಟ್ಟಿಗೆ ಮಗ ದಿಗ್ಭ್ರಾಂತನಾಗಿ ರೂಮಿನ ಕಡೆ ಹೆಜ್ಜೆ ಹಾಕಿದರೆ, ಚುಲ್ಟಾರಿ ಓಡಿ ಹೋಗಿ ದೊಡ್ಡ ಮನೆಯ ಮೂಲೆಯಲ್ಲಿದ್ದ ತನ್ನ ಚಾಪೆ ಬಿಡಿಸಿ ಮುಸುಕೆಳೆದುಕೊಂಡ. ರೂಮಿನಲ್ಲಿದ್ದ ಪಾರತಮ್ಮನವರಿಗೆ ಕೈಕಾಲುಗಳು ಒಮ್ಮೆಲೇ ಸೆಟೆಯಲು ಹತ್ತಿದವು. ಮುಖ ಮುಚ್ಚಿಕೊಂಡು ಸೀತಮ್ಮ ಕುಸಿದು ಕುಳಿತರು.

ಏ ಚಂದ್ರಾ… ಆರು ಗಂಟೆಯಾದ್ರೂ ಎದ್ದು ಮನೆಬಾಗ್ಲು ಗುಡಿಸಿಲ್ಲವಲ್ಲೋ… ಯಾಕೋ ಹುಡ್ಗಾ…? ಎನ್ನುತ್ತಾ ವಿಶ್ವನಾಥಯ್ಯನೋರು ಕಣ್ಣು ಹೊಸಕಿಕೊಂಡು ಸಣ್ಣ ದನಿಯಲ್ಲಿ ಕರೆಯುವಾಗ ಸುಮಾರು ಐದೂವರೆಗೇ ಎದ್ದು ಅಡಿಗೆಮನೆಯಲ್ಲಿ ಲಡಬಡ ಮಾಡುತ್ತಿರುತ್ತಿದ್ದ ಸೀತಮ್ಮನ ಪತ್ತೆಯೇ ಇಲ್ಲವೇ ಎಂದೂ ಅನ್ನಿಸಿತು. ಗ್ಯಾರೇಜಿನಲ್ಲಿ ಮಲಗುತ್ತಿದ್ದ ಚಂದ್ರನ ಹಾಸಿಗೆ ಇದ್ದಂತೆಯೇ ಇತ್ತು. ಅವನಿರಲಿಲ್ಲ ಅಷ್ಟೇ. ಹಾಲು ತರಲು ಹೋದನೇ? ಹಾಲಿನ ಕೂಪನ್ ತಮ್ಮ ಬೀರುವಿನಲ್ಲೇ ಇರುತ್ತಲ್ಲಾ? ತಾವು ತೆಗೆದು ಕೊಟ್ಟರೆ ತಾನೇ ಪಕ್ಕದ ಬೂತಿಗೆ ಹೋಗಿ ಹಾಲು ಹಾಕಿಸಿಕೊಂಡು ಬರಲು ಸಾಧ್ಯ ಎಂದು ತಮಗೆ ತಾವೇ ಗೊಣಗಿಕೊಳ್ಳುತ್ತಾ ಒಳಗೆ ಬಂದರು. ಪಾರತಮ್ಮನ ಪಿಡುಸು ಖಾಯಿಲೆ ರಾತ್ರಿಯೆಲ್ಲ ಮರುಕಳಿಸಿ ಕಣ್ಣಿಗೆ ನಿದ್ದೆಯೇ ಇರಲಿಲ್ಲ. ಬೆಳಗಿನ ಹೊತ್ತಿಗೆ ಸ್ವಲ್ಪ ಕಡಿಮೆಯಾದಂತೆನ್ನಿಸಿ ಸ್ವಲ್ಪ ನಿದ್ದೆ ಹತ್ತಿತ್ತು. ಹೂಂ… ನಾವೇಳದಿದ್ರೆ ಆಳುಕಾಳುಗಳೂ ಏಳಲ್ಲಾ… ಎಲ್ಲ ಮಹಾರಾಜರ ವಂಶಸ್ಥರೇ… ಎಂದು ಹೇಳಿಕೊಳ್ಳುತ್ತಾ ಹಾಲಿಗೆ ಬಂದಾಗ ಸೀತಮ್ಮ ಸ್ನಾನದ ಮನೆಯಿಂದ ತಮ್ಮ ಬಟ್ಟೆಗಳ ಟ್ರಂಕನ್ನಿಟ್ಟಿದ್ದ ಸ್ಟೋರ್ ರೂಮಿನತ್ತ ಹೋಗುತ್ತಿದ್ದದ್ದು ಕಾಣಿಸಿತು. ಎಲಾ ಇವರ! ಬಾಯ್ಲರ್ ಹಾಕಿ ಮೊದಲೇ ಸ್ನಾನ ಮುಗಿಸಿ ಅಂತ ಹೇಳಿದವರು ಯಾರು? ಎಂದುಕೊಳ್ಳುತ್ತಾ ಸ್ನಾನದ ಮನೆಗೆ ಹೋದರೆ ಬಾಯ್ಲರ್ ತಣ್ಣಗೆ, ಉದ್ದಕೆ ನಿಂತಿತ್ತು. ಅದರ ಹತ್ತಿರವೂ ಯಾರೂ ಹೋಗಿಲ್ಲ ಎಂದು ಸಾರುವಂತಿತ್ತು. ಅಂದರೆ, ಈ ಹೆಂಗಸು, ಈ ಚಳಿಗಾಲದಲ್ಲಿ ಬೆಳಕು ಹರಿಯುವ ಹೊತ್ತಿಗೇ ತಣ್ಣೀರಲ್ಲಿ ಸ್ನಾನವನ್ನೂ ಮುಗಿಸಿಯಾಗಿದೆ! ಬಾಯ್ಲರ್ ತುಂಬ ನೀರು ತುಂಬಿಸಿ, ಸ್ವಿಚ್ ಹಾಕಿ ಸರಿಯಾಗಿ ಅರ್ಧ ಗಂಟೆಗೆ ಆರಿಸಬೇಕು ಎಂದು ಟೈಮ್ ನೋಡುತ್ತಾ ಡೈನಿಂಗ್ ಹಾಲಿಗೆ ಬಂದಾಗ ಸೀತಮ್ಮ ಹೊರಬಂದರು.

ಚಂದ್ರನ್ನ ಹಾಲು ತರೋಕೆ ನೀವೇನಾದ್ರೂ ಕಳಿಸಿದ್ರಾ ಹೇಗೆ? ತಮ್ಮ ಪ್ರಶ್ನೆಯಲ್ಲಿ ಯಾಕೋ ತಮಗೇ ನಂಬಿಕೆಯಿರದಿದ್ದರೂ ವಿಶ್ವನಾಥಯ್ಯನೋರು ಕೇಳಿದರು. ಸೀತಮ್ಮ ಮಾತಾಡಲಿಲ್ಲ. ಮತ್ತೆ ಸ್ಟೋರ್ ರೂಮಿಗೆ ಹೋಗಿ ಏನೋ ಕೆಲಸದಲ್ಲಿ ಮಗ್ನರಾದರು. ಮನೆಯ ಯಜಮಾನರಿಗೆ ಯಾಕೋ ಧ್ವನಿ ಕ್ಷೀಣವಾಯಿತು.  ಅವರ ಹಿಂದೆಯೇ ಹೋಗುವುದು ಸರಿಯಲ್ಲವೆಂದುಕೊಂಡು ಬಾಗಿಲು ಗುಡಿಸುವ ಪೊರಕೆ ತರಲು ಹೋದರು. ಬಿಡಲಾಗದ ಕಣ್ಣನ್ನು ಕಷ್ಟಪಟ್ಟು ಬಿಡುತ್ತಾ ಹಿರಿಮಗ ಎದ್ದು ಬಂದ. ಶುಭ್ರವಾದ ಸೀರೆಯುಟ್ಟು, ತಮ್ಮದೇ ಹಳೆಯ ಡಬ್ಬಿಯಿಂದ ಹುಡಿ ಕುಂಕುಮವನ್ನು ತೆಗೆದು ಹಣೆಗಿಟ್ಟುಕೊಂಡಿದ್ದ ಸೀತಮ್ಮನವರನ್ನು ಕಂಡು ಚಳುಕು ಹೊಡೆದವನಂತೆ ಅಲ್ಲೇ ನಿಂತ.  ಅವರ ಕೈಯಲ್ಲಿ ಎಂದಿನಂತೆ ಕಾಫಿ ಕಪ್ಪುಗಳಿರಲಿಲ್ಲ. ಬದಲಾಗಿ ಪುಟ್ಟ ಟ್ರಂಕೊಂದಿತ್ತು. ನಾನು ಹೋಗೋಕೆ ಮುಂಚೆ ನನ್ನ ಟ್ರಂಕಲ್ಲಿ ಏನೇನಿದೆ ಅಂತ ಒಂದ್ಸಲ ನೋಡಿಕೋಪ್ಪ. ಆಮೇಲೆ ಬಾಯಿಗೆ ಬಂದದ್ದೇ ಹೇಳಬೇಡ ಎಂದಾಗ ವಿಶ್ವನಾಥಯ್ಯನೋರಿಗೆ ಅರೆಗಳಿಗೆ ಕಕ್ಕಾಬಿಕ್ಕಿಯಾಯಿತು. ಏನ್ ಹಾಗಂದ್ರೆ? ಇಲ್ನೋಡಿ ಸೀತಮ್ನೋರೆ… ಒಂದು ಮಾತು ಬರುತ್ತೆ, ಹೋಗುತ್ತೆ, ಅದಕ್ಕೇ ಇಷ್ಟು… ಸೀತಮ್ಮ ಉತ್ತರ ಕೊಡಲಿಲ್ಲ. ಟ್ರಂಕ್ ಒಳಗೆ ಇದ್ದದ್ದೆಲ್ಲವನ್ನೂ ಹರವಿ, ಮತ್ತೆ ಅದರೊಳಗೆ ತಾನು ಬರುವಾಗ ತಂದಿದ್ದ ಒಂದೆರಡು ಜೊತೆ ಬಟ್ಟೆಗಳನ್ನು ಸೇರಿಸಿದರು. ಹಬ್ಬಕ್ಕೆಂದು ಕೊಟ್ಟಿದ್ದ ಎರಡು ಸೀರೆಗಳು ಮತ್ತೆ ಮೇಜಿನ ಮೇಲೆ ಎಲ್ಲರಿಗೆ ಕಾಣಿಸುವಂತೆ ಪವಡಿಸಿದ್ದವು.  ಅಷ್ಟು ಹೊತ್ತಿಗೆ ಮನೆಯ ಎಲ್ಲರೂ ಎದ್ದು ಬಂದಿದ್ದರು. ಪಾರತಮ್ಮ ಸೋಫಾದ ಕಟ್ಟು ಹಿಡಿದು ಹಾಗೆಯೇ ಕುಕ್ಕರಿಸಿದ್ದರು. ಒಂದೂ ಮಾತಿಲ್ಲದೆ ಗೇಟು ತೆಗೆದುಕೊಂಡು ಹಿಂತಿರುಗಿ ನೋಡದಂತೆ ಹೋಗುತ್ತಿದ್ದ ಸೀತಮ್ಮನವರನ್ನು ನೋಡುತ್ತಾ ಎರಡನೆಯ ಮಗ ಛೆ! ಹೋಗುವ ಮುಂಚೆ ಎಲ್ಲರಿಗೆ ರಪ್ಪೆಂದು ಬಾರಿಸುವಂತ ಗಾದೆಯೊಂದನ್ನು ಉದುರಿಸಿ ಹೋಗಬಾರದಿತ್ತೆ? ಎಂದು ಗೊಣಗಿಕೊಂಡ. ಮತ್ತೆ ಚಂದ್ರ? ಅವನು ಮಧ್ಯ ರಾತ್ರಿಯಲ್ಲೇ ತನ್ನೆರಡು ಚಡ್ಡಿ ಶರ್ಟುಗಳ ಬ್ಯಾಗನ್ನು ಹಿಡಿದುಕೊಂಡು ಕಾಲೆಳೆದುಕೊಂಡು ಹೋದಲ್ಲಿ ಹೋಗಿದ್ದ.


(ಇಲ್ಲಷ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)
0
0