“ಬದುಕು ನರಳದೆ ಇನ್ನೂ ನಳನಳಿಸುತ್ತಿದ್ದ ಸಮಯ.ಅದಕ್ಕಿನ್ನ ಹೆಚ್ಚಾಗಿ  ಬದುಕಿನಲ್ಲಿ ಹೊಸತು ಎನ್ನುವಂತೆ ನಾನು ಮೊದಲಬಾರಿಗೆ ಗರ್ಭಿಣಿಯಾಗಿದ್ದ ಸಮಯ.ನಾವಿಲ್ಲಿ ಹೊರನಾಡಿನ ಪ್ರವಾಸಕ್ಕೆ ಹೊರಟಿರಲಿಲ್ಲ.ಬೇರೊಂದು ದೇಶದಲ್ಲಿ ಬದುಕನ್ನು ಕಂಡುಕೊಳ್ಳಲು ಅವಕಾಶಗಳನ್ನು ಹುಡುಕಿ ಹೊರಟಿದ್ದೆವು.ಅಲ್ಲಿ ನೆಲೆನಿಂತು ಹಲವು ವರ್ಷಗಳ ಕಾಲ ನಮ್ಮ ವೃತ್ತಿಗೆ ಬೇಕಾದ ತರಬೇತಿಯನ್ನು ಪಡೆವ ಉದ್ದೇಶವೂ ಇತ್ತು.ಆಗ ತಾನೇ ಮದುವೆಯಾಗಿ ಕಟ್ಟಿಕೊಂಡಿದ್ದ ಮನೆಯನ್ನು ಈಗ ಬಿಚ್ಚಿಡಬೇಕಿತ್ತು”
ಇಂಗ್ಲೆಂಡಿನಲ್ಲಿ ದಂತವೈದ್ಯೆಯಾಗಿರುವ ಡಾ.ಪ್ರೇಮಲತ ಬಿ. ತಮ್ಮ ಬ್ರಿಟನ್ ಬದುಕಿನ ಕಥನವನ್ನು ಸರಣಿಯ ರೂಪದಲ್ಲಿ ಬರೆಯಲಿದ್ದಾರೆ.

“ಮಮ್, ಅಮರಿಕಾ, ಫ್ರಾನ್ಸ್, ಯು.ಕೆ ಗಳು ಸಿರಿಯಾ ಮೇಲೆ ಬಾಂಬ್ ಹಾಕಿವೆಯಲ್ಲ,  ಮತ್ತೊಂದು ವಿಶ್ವ ಯುದ್ಧ ಶುರುವಾದರೆ ನಾವು ಭಾರತಕ್ಕೆ ಹಿಂತಿರುಗಿ ಹೋಗಬಹುದಾ?” ಅಂತ ಮಗ ಕೇಳಿದ. ಇದೇ ರೀತಿಯಲ್ಲಿ ಕ್ಷುಲ್ಲಕ ಕಾರಣಗಳಿಗೆ,  ಶುರುವಾದ ವಿಶ್ವ ಯುದ್ಧಗಳ ಬಗ್ಗೆ ಶಾಲೆಯಲ್ಲಿ  ಪಾಠಗಳನ್ನು ಕಲಿಯುತ್ತಿರುವ ಅವನ ಮುಂದಾಲೋಚನೆಗೆ ನಗು ಬಂತು. ಪ್ರಪಂಚದ ಮತ್ತೊಂದು ಯುದ್ಧ ಶುರುವಾದರೆ ನಾವು ಭಾರತಕ್ಕೆ ಹಾರಬಹುದೇ?  ಅನುಮತಿ, ವಿಮಾನ ನಿಲ್ದಾಣ, ಆಗಸದ ಒಡೆತನಗಳ ಜಗಳಗಳ ನಡುವೆ ಪಶ್ಚಿಮದಿಂದ-ಪೂರ್ವಕ್ಕೆ ಹಾರಿ ಹಿಂತಿರುಗಲು ಯುದ್ಧವೇ ಬೇಕೆ? ಅಷ್ಟಕ್ಕೂ ನಮ್ಮ ದೇಶದಿಂದ ಈ ಪಾಶ್ಚಿಮಾತ್ಯ ದೇಶಕ್ಕೆ  ನಾವು ಬಂದದ್ದಾದರೂ ಯಾಕೆ? ಮನಸ್ಸು 15 ವರ್ಷ ಹಿಂದಕ್ಕೆ ಓಡಿತು.

ಅದೊಂದು ಪುಟ್ಟ ದ್ವೀಪ. ಚಿರಪರಿಚಿತವಾದ  ಹೆಸರು. ನಮ್ಮ ಪಠ್ಯಪುಸ್ತಕಗಳಲ್ಲಿ ಓದಿದ, ಕೇಳಿದ ಕವಿಗಳ, ವಿಜ್ಞಾನಿಗಳ, ಹೆಸರಾಂತ ದಾರ್ಶನಿಕರ ತವರೂರು. ಅವರು  ಅಡುವ ಮಾತೇ ಘನವೆತ್ತರವಾದ್ದು. ಅವರ ಸಂಗೀತ, ನೃತ್ಯಗಳೇ ವರ್ತಮಾನದ ಟ್ರೆಂಡ್ ಎಂಬ ಅಲಿಖಿತ ನಿಯಮ ಮತ್ತು ಅನುಭವ. ಅವನ್ನೆಲ್ಲ ಕರಗತ ಮಾಡಿಕೊಂಡರೆ ಅಂತಹವರಿಗೆ ಭಾರತೀಯ ನೆಲದಲ್ಲಿ ಇನ್ನಿಲ್ಲದ ಗೌರವ ಎನ್ನುವ ಅರಿವು ಮೂಡಿದ್ದ ಕಾಲ. ಹಾಗೆ ನೋಡಿದರೆ ನಮ್ಮ ಕನ್ನಡ ನಾಡಲ್ಲೂ ಅವರ ನುಡಿ ಸಂಸ್ಕೃತಿಗಳದ್ದೇ ಮೇಲುಗೈ. ನಮ್ಮ  ಸಾಹಿತ್ಯದ ಹೆಸರಾಂತ  ಕವಿಗಳಿಗೆಲ್ಲ ಇವರ ಸಾಹಿತ್ಯದ ಹುಚ್ಚು. ನಮ್ಮ ನಾಡಿನ  ಹಲವು ಹೆಸರಾಂತ ಕವಿಗಳು ಮೊದಲು ಬರೆದದ್ದಲ್ಲ ತಮ್ಮ ತವರೂರಿನ ಭಾಷೆಯಲ್ಲಿ ಅಲ್ಲ ಬದಲು ಈ ಪುಟ್ಟ ದ್ವೀಪದ ಜನರ ಭಾಷೆಯಲ್ಲಿ. ಭಾಷೆಯೊಂದರ ಅಧಿಪತ್ಯದ  ಇಂತಹ ವಿಚಾರಗಳನ್ನು ಈ ಯುವ ಪ್ರತಿಭಾವಂತ ಕವಿಗಳ, ಬರಹಗಾರರ  ಮನಸ್ಸಿಗೆ ತುಂಬಿದ್ದು ವಿಶ್ವ ವಿದ್ಯಾಲಯಗಳು. ಈ ವಿಶ್ವ ವಿದ್ಯಾಲಯಗಳ ರೂಪು ರೇಶೆಗಳು ಕೂಡ ಪಾಶ್ಚಾತ್ಯ ಭೂಮಿಯಿಂದಲೇ ಉಗಮವಾದ ಕಾರಣವೋ ಏನೋ ಇರಬೇಕು. ಇವರಲ್ಲಿ ತಾವು ಕಲಿತ ಆ ಪರಭಾಷೆಯ ಪದ್ಯಗಳಲ್ಲಿ ವರ್ಣಿಸಿದ  ಡ್ಯಾಫೋಡಿಲ್ಲಿನ ಚೆಲುವನ್ನು ಕಾಣುವ ಹಂಬಲ  ಬಹಳಷ್ಟು ಗಾಢವಾಗಿ ಇದ್ದು ಅದು ತಾವು ಕಂಡ ಮಲ್ಲಿಗೆಯ ಚೆಲುವಿಗಿಂತ ಹೆಚ್ಚಿನ ಕಾಲ್ಪನಿಕ ಸುಖ ನೀಡಿದ್ದರಲ್ಲಿ ಅಚ್ಚರಿಯಿರಲಿಲ್ಲವೇನೋ.

ಜೊತೆಗೆ ಅನ್ವೇಷಣೆಯ ಮನೋಭಾವವಿರುವ, ಕಲಿಯುವ ಮನಸ್ಸಿನ ಸೃಜನಶೀಲ ಹೃದಯಗಳಿಗೆ ಯಾವ ಭಾಷೆ ಮತ್ತು ಗಡಿಗಳ ಮಿತಿಯೂ ಕಾಡುವುದಿಲ್ಲ ಎನ್ನುವುದೂ ಕಾರಣವಿರಬಹುದು. ಅಥವಾ ಪ್ರಪಂಚದಾದ್ಯಂತ ಹರಡಿಕೊಂಡ ಈ ದ್ವೀಪದ ಭಾಷೆಯಿಂದ ಜಗತ್ತಿನ ಉದ್ದಗಲವನ್ನು ಸೇರಬಹುದಾದ ಹುನ್ನಾರವೂ ಇರಬಹುದು. ಅದಕ್ಕಿಂತ ಹೆಚ್ಚಾಗಿ ಎರಡು ಮೂರು ತಲೆಮಾರುಗಳ ಕಾಲದ ಮಿತಿಯಲ್ಲಿ  ಮೇಲು –ಕೀಳುಗಳದೊಂದು ರೂಪು ರೇಷೆ ನಮ್ಮ ವಿದ್ಯಾವಂತ ಜನರಲ್ಲಿ ಮತ್ತು ಸಾಮಾನ್ಯ ಜನರಲ್ಲಿ ಕೂಡ ಇದ್ದಿರಬಹುದು. ನಮ್ಮ ದೇಶದ ಸಾಮಾಜಿಕ ಸ್ಥಿತಿಗಳು, ಈ ಬರಹಗಾರರ ವಿಸ್ತಾರಗಳಿಗೆ  ಹೊಂದಾಣಿಕೆಯಾಗದಿರುವುದು ಮತ್ತೊಂದು ಕಾರಣವಿರಬಹುದು.  ಇಂತಹ ಮಹನೀಯರುಗಳ ಬರೆದ ಸಾಹಿತ್ಯದ ಪ್ರಭಾವಕ್ಕೂ, ನಾವು ಓದಿದ ವಿಶ್ವವಿದ್ಯಾನಿಲಯಗಳಲ್ಲಿ ನಮಗೆ ದೊರೆವ ಮುಂದುವರೆದ ದೇಶದ ಜನರ ಬೋಧನೆಗಳು, ಸಾಮಾಜಿಕ  ಮತ್ತು ರಾಜಕೀಯ ವಿಚಾರಗಳ ಪ್ರಭಾವವೂ ಇರಬಹುದು. ಎಲ್ಲಕ್ಕಿಂತ ಹೆಚ್ಚಾಗಿ ವೈಯಕ್ತಿಕ  ಆರ್ಥಿಕ ಲಾಭಗಳು, ಅನುಭವ ಗಳಿಸುವ, ಅನ್ವೇಷಿಸುವ ಅವಕಾಶಗಳನ್ನು ಅರಸುವುದಾದರೆ, ಈ ಹೆಸರಾಂತ ದ್ವೀಪಗಳ ಗುಚ್ಛ ಯುನೈಟೆಡ್ ಕಿಂಗ್ಡಂನ  ಇಂಗ್ಲೆಂಡಿನಲ್ಲಿ ಎನ್ನುವ ಹುರುಪು ಮೂಡಿದ್ದು ಹದಿನೈದು ವರ್ಷಗಳ ಹಿಂದೆ.  ಭಾರತವನ್ನು ಬಿಟ್ಟು ಇಂಗ್ಲೆಂಡಿನಲ್ಲಿ ಹೊಸ ನೆಲೆ, ಕೆಲಸ, ಬದುಕನ್ನು ಕಾಣುವ ನಿರ್ಧಾರವನ್ನು ತೆಗೆದುಕೊಂಡ ಕಾಲದಲ್ಲಿ. ಹಾಗಂತ ಅದೇನು ಧಿಡೀರ್ ನಿರ್ಧಾರವಾಗಿರಲಿಲ್ಲ. ಅದಕ್ಕಾಗಿ ನಾನು ನಡೆಸಿದ ತಯಾರಿ  ಸೊನ್ನೆಯಾದರೂ ನನ್ನ ಗಂಡ ಅದರ ಪೂರ್ಣ ತಯಾರಿ ನಡೆಸಿಯಾಗಿತ್ತು. ಪರೀಕ್ಷೆಗಳನ್ನು ಬರೆದಾಗಿತ್ತು.

 

ನಮ್ಮ ಪಠ್ಯಪುಸ್ತಕಗಳಲ್ಲಿ ಓದಿದ, ಕೇಳಿದ ಕವಿಗಳ, ವಿಜ್ಞಾನಿಗಳ, ಹೆಸರಾಂತ ದಾರ್ಶನಿಕರ ತವರೂರು. ಅವರು  ಅಡುವ ಮಾತೇ ಘನವೆತ್ತರವಾದ್ದು. ಅವರ ಸಂಗೀತ, ನೃತ್ಯಗಳೇ ವರ್ತಮಾನದ ಟ್ರೆಂಡ್ ಎಂಬ ಅಲಿಖಿತ ನಿಯಮ ಮತ್ತು ಅನುಭವ. ಅವನ್ನೆಲ್ಲ ಕರಗತ ಮಾಡಿಕೊಂಡರೆ ಅಂತಹವರಿಗೆ ಭಾರತೀಯ ನೆಲದಲ್ಲಿ ಇನ್ನಿಲ್ಲದ ಗೌರವ ಎನ್ನುವ ಅರಿವು ಮೂಡಿದ್ದ ಕಾಲ. ಹಾಗೆ ನೋಡಿದರೆ ನಮ್ಮ ಕನ್ನಡ ನಾಡಲ್ಲೂ ಅವರ ನುಡಿ ಸಂಸ್ಕೃತಿಗಳದ್ದೇ ಮೇಲುಗೈ. ನಮ್ಮ  ಸಾಹಿತ್ಯದ ಹೆಸರಾಂತ  ಕವಿಗಳಿಗೆಲ್ಲ ಇವರ ಸಾಹಿತ್ಯದ ಹುಚ್ಚು. ನಮ್ಮ ನಾಡಿನ  ಹಲವು ಹೆಸರಾಂತ ಕವಿಗಳು ಮೊದಲು ಬರೆದದ್ದಲ್ಲ ತಮ್ಮ ತವರೂರಿನ ಭಾಷೆಯಲ್ಲಿ ಅಲ್ಲ ಬದಲು ಈ ಪುಟ್ಟ ದ್ವೀಪದ ಜನರ ಭಾಷೆಯಲ್ಲಿ.

ಅದರಲ್ಲಿ ಕಳಂಕವೇನೂ ಇರಲಿಲ್ಲ; ಆದರೆ ಸಂಕೀರ್ಣ ಮನಸ್ಸಿನ ಮತ್ತೊಂದು ಮಜಲು ಬ್ರಿಟಿಷರು ನಮ್ಮ ನಾಡನ್ನು ದೋಚಿದ್ದು, ಆಳಿದ್ದು, ಒಡೆದದ್ದು, ಬರಿದು ಮಾಡಿದ್ದು, ಭಾರತೀಯರನ್ನು ಬೂಟುಗಾಲಲ್ಲಿ ಮಾತಾಡಿಸಿದ್ದು, ಗುಂಡುಗಳಲ್ಲಿ ದಮನಿಸಿದ್ದು, ಅನ್ಯಾಯದಲ್ಲಿ ಆಳಿದ್ದು ಇಂತಹ ವಿಚಾರಗಳ ಅರಿವು, ಮಂಥನ ಮತ್ತೊಂದು ಕಡೆ  ಗುಪ್ತವಾಗಿ ನಡೆದೇ ಇತ್ತು. “ನಿಮಗೇಕೆ  ಕೊಡಬೇಕು ಕಪ್ಪ…” ಎನ್ನುತ್ತ ವೀರವಾಗಿ ಮಡಿದ ಕಿತ್ತೂರು ಚೆನ್ನಮ್ಮಳ ಪಾಠವನ್ನು ತರಗತಿಯಲ್ಲಿ ಎದ್ದು ನಿಂತು ಓದುತ್ತ ಹಾಗೇ ಕಣ್ಣಿರು ಹಾಕಿದ್ದು, ತರಗತಿಯ ಇತರರು ಕೂಡ ಅಳುವಂತೆ ಮಾಡಿದ್ದು ಮತ್ತೆ ಕುಟುಕಿತು. ಪ್ರಪಂಚದ ಇನ್ಯಾವುದೋ  ಅಷ್ಟೇನು ಪರಿಚಿತವಲ್ಲದ ನಾಡಿಗೆ ಹೊರಡಲು ಬಹುಶಃ ಇಂತಹ ತಳಮಳ ಉಂಟಾಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ.  ಆದರೆ ನಮ್ಮನ್ನು ಶತಮಾನಗಳ ಕಾಲ ಆಳಿದ ಬ್ರಿಟಿಷರ ನಾಡಿಗೆ ಹೊರಡಲು ಸನ್ನದ್ಧರಾದಾಗ ಒಂದು ಬಗೆಯ ದ್ವಂದ್ವ ಮತ್ತೊಂದು ಬಗೆಯ ಸಮಾಧಾನ. ಆದರೆ ಇದು ನನ್ನೊಬ್ಬಳ ವಯಕ್ತಿಕ ವಿರಕ್ತ ತರ್ಕ ಮಾತ್ರ ಇದ್ದಿರಬಹುದು. ಮುಂದುವರೆದ, ಆಧುನಿಕ ದೇಶವಾದ ಇಂಗ್ಲೆಂಡ್ ಗೆ ಹೋಗುವ ವಿಚಾರ ಕೇಳಿದ ಕೂಡಲೆ  ಅಭಿನಂದನೆಗಳ ಮಹಾಪೂರವೇ ಹರಿಯಬರತೊಡಗಿದ್ದು  ಈ ವಿಚಾರಧಾರೆಯನ್ನು ನನ್ನಲ್ಲಿ ಮೊಟಕುಮಾಡಿ ಏನೋ ಸಾಧಿಸಿದೆವೆಂಬ ಭಾವನೆಗಳಿಗೆ ಖೇದಕರವಾಗಿ ಇಂಬು ಕೊಡತೊಡಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಸ್ವತಃ ತಂದೆ ತಾಯಿಗಳು, ಬಂಧು ಬಾಂಧವರು ಕೂಡ ದೂರಕ್ಕೆ ಹೋಗುತ್ತಿರುವ  ನಮ್ಮ ಅಗಲಿಕೆಯನ್ನು, ಆ ಎತ್ತಂಗಡಿಯ ಭಾವನೆಗಳನ್ನು ಅರ್ಥೈಸದೆ ಅದನ್ನೇ ಹೆಮ್ಮೆಯೆನ್ನುವ ವಿಚಾರವನ್ನಾಗಿ ಮಾಡಿಕೊಂಡಾಗ ಹೋಗುತ್ತಿರುವುದೇ ಒಳಿತೇನೋ  ಎನ್ನುವ ಭಾವವೂ ಮೂಡದಿರಲಿಲ್ಲ!! ಅಷ್ಟಕ್ಕೂ ಹೋಗಿರೆಂದು ಅವರೆಂದೂ ಹೇಳಿರಲಿಲ್ಲವಲ್ಲ? ನಿವ್ಯಾಕೆ ಹೋಗಿಲ್ಲವೆಂದೋ, ಅವರಿವರು ಹೋಗುವಂತ ಘನಕಾರ್ಯ ಮಾಡಿರುವರೆಂದು ಮಾತ್ರ ಸೂಚ್ಯವಾಗಿ ಅವರು ಉಸಿರಿದ್ದರು ಅಷ್ಟೆ. ಈಗವರು ಮೊರದಗಲ ಮುಖವರಳಿಸಿ ಬೀಳ್ಕೊಡುವುದರಲ್ಲಿ ಸಂದೇಹವಿರಲಿಲ್ಲ.

ಮನಸ್ಸಿನ ಇನ್ನೊಂದು ಕಡೆ ವಿಚಾರವಂತಿಕೆಯ ಬಣ ಸಮರ್ಥನೆಯ ವಾದ ಹೂಡಿತ್ತು. ಬ್ರಿಟಿಷರ ಆಳ್ವಿಕೆ ಭಾರತಕ್ಕೆ ಕೊಟ್ಟ ಕೊಡುಗೆಗಳನ್ನು  ಲೆಕ್ಕ ಹಾಕಿ ಮುಂದಕ್ಕಿಟ್ಟಿತ್ತು.  ಅವರ ಕೊಡುಗೆಯಾಗಿ ನೀಡಿದ ಅಥವಾ ಬಿಟ್ಟುಹೋದ ಭಾಷೆ, ಕ್ರೀಡೆಗಳು, ರೈಲ್ವೆ, ಅಡುಗೆಗಳು, ರಸ್ತೆ, ಸುರಂಗ, ಚರಂಡಿ, ದೇಶದ ನಕಾಶೆ, ಅಣೆಕಟ್ಟುಗಳು, ವಿದ್ಯಾಭ್ಯಾಸದ ಗುರಿಗಳು, ಆಸ್ಪತ್ರೆಗಳು, ಕಲೆಗಳು, ಉಡುಪುಗಳು, ಹೆಸರುಗಳು, ಬೆಳೆಸಿದ ಧರ್ಮ ನಮ್ಮ ದೇಶದ ರಾಜಕೀಯವನ್ನು, ನಕ್ಷೆಯನ್ನು, ಸಮಾಜವನ್ನು, ರಾಜಕೀಯವನ್ನು ಬದಲಿಸಿಬಿಟ್ಟಿದ್ದು ಸುಳ್ಳಲ್ಲ ಎಂಬ ಮನವರಿಕೆಯೂ ಇತ್ತು. ನಮ್ಮ ರಾಷ್ಟ್ರಪಿತನೂ ಈ ದೇಶದ ಓದು ಅಭಿಯಾನಗಳ ನಂತರವೇ ತಮ್ಮ ಮಹತ್ತರ ಗುರಿಯನ್ನು ಗುರುತಿಸಿಕೊಂಡಿದ್ದಲ್ಲವೇ. ಅಷ್ಟಕ್ಕೂ ಬ್ರಿಟಿಷರೇನೂ ನಮ್ಮನ್ನು ಆರತಿ ಬೆಳಗಿ, ಕುಂಕುಮವಿಟ್ಟು ಬನ್ನಿರೆಂದು ಕರೆದಿರಲಿಲ್ಲ. ನಾವಾಗಿ ಅವಕಾಶ ಹುಡುಕುತ್ತ ಗುಳೆ ಹೊರಟಿದ್ದು ತಾನೇ? ಅವರ ಬಗ್ಗೆ ಕೆಟ್ಟದಾಗಿ ಈಗ ಯೋಚನೆ ಮಾಡುವುದರಲ್ಲಿ ಅರ್ಥವಿರಲಿಲ್ಲ. ಒಂದಷ್ಟು ಗಂಟು ಮಾಡಿಕೊಂಡು ಬೇಗ ಮರಳಿಬಿಡೋಣ ಅಂತಲೇ ಅಂದುಕೊಂಡೆವು.

ಆದರೆ ಸಂಕೀರ್ಣ ಮನಸ್ಸಿನ ಮತ್ತೊಂದು ಮಜಲು ಬ್ರಿಟಿಷರು ನಮ್ಮ ನಾಡನ್ನು ದೋಚಿದ್ದು, ಆಳಿದ್ದು, ಒಡೆದದ್ದು, ಬರಿದು ಮಾಡಿದ್ದು, ಭಾರತೀಯರನ್ನು ಬೂಟುಗಾಲಲ್ಲಿ ಮಾತಾಡಿಸಿದ್ದು, ಗುಂಡುಗಳಲ್ಲಿ ದಮನಿಸಿದ್ದು, ಅನ್ಯಾಯದಲ್ಲಿ ಆಳಿದ್ದು ಇಂತಹ ವಿಚಾರಗಳ ಅರಿವು, ಮಂಥನ ಮತ್ತೊಂದು ಕಡೆ  ಗುಪ್ತವಾಗಿ ನಡೆದೇ ಇತ್ತು. “ನಿಮಗೇಕೆ  ಕೊಡಬೇಕು ಕಪ್ಪ…” ಎನ್ನುತ್ತ ವೀರವಾಗಿ ಮಡಿದ ಕಿತ್ತೂರು ಚೆನ್ನಮ್ಮಳ ಪಾಠವನ್ನು ತರಗತಿಯಲ್ಲಿ ಎದ್ದು ನಿಂತು ಓದುತ್ತ ಹಾಗೇ ಕಣ್ಣಿರು ಹಾಕಿದ್ದು, ತರಗತಿಯ ಇತರರು ಕೂಡ ಅಳುವಂತೆ ಮಾಡಿದ್ದು ಮತ್ತೆ ಕುಟುಕಿತು. ಪ್ರಪಂಚದ ಇನ್ಯಾವುದೋ  ಅಷ್ಟೇನು ಪರಿಚಿತವಲ್ಲದ ನಾಡಿಗೆ ಹೊರಡಲು ಬಹುಶಃ ಇಂತಹ ತಳಮಳ ಉಂಟಾಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ.  ಆದರೆ ನಮ್ಮನ್ನು ಶತಮಾನಗಳ ಕಾಲ ಆಳಿದ ಬ್ರಿಟಿಷರ ನಾಡಿಗೆ ಹೊರಡಲು ಸನ್ನದ್ಧರಾದಾಗ ಒಂದು ಬಗೆಯ ದ್ವಂದ್ವ ಮತ್ತೊಂದು ಬಗೆಯ ಸಮಾಧಾನ.

ಏನಾದರೂ ಅದ್ಭುತ ನಡೆಯುತ್ತಿದೆ ಎಂದು  ಭಾವಿಸುವ ಸ್ವಭಾವ ನನ್ನದಾಗಿರಲಿಲ್ಲ. ಯಾವ ವಿಚಾರ ಬಂದರೂ ಅದರ ನಕಾರಾತ್ಮಕ ವಿಚಾರಗಳೇ ನನ್ನನ್ನು ತುಲನೆಗೆ ಮೊದಲು ಹಚ್ಚುವುದು ಸಾಮಾನ್ಯ. ಅಲ್ಲಿನ ಬದುಕು, ಬದಲಾವಣೆ, ಸಾವಿರಾರು ಮೈಲಿಯ ಅಂತರ, ಹೊಸದಾಗಿ ಬಂಡವಾಳ ಹೂಡಿ ನಳನಳಿಸುತ್ತಿದ್ದ ನನ್ನ ಉದ್ಯೋಗವನ್ನು ತರ್ಪಣೆ ನೀಡುವ ಬಗೆಗಿನ ಖೇದ ಇವೆಲ್ಲ ಶುರುವಾದವು. ಅದರ ಜೊತೆಗೆ ಇಂಗ್ಲೆಂಡಿಗೆ ಹೋದ ನಂತರ ನನ್ನ ವೃತ್ತಿಯನ್ನು ಅಲ್ಲಿ ಶುರುಮಾಡಲು ಬರೆಯಬೇಕಾಗಿರುವ ಪರೀಕ್ಷೆಗಳು, ಪ್ರಯತ್ನಗಳ ಬಗೆಗಿನ ಆತಂಕಗಳು, ಕೆಲಸ ಸಿಕ್ಕರೆ  ಹುಟ್ಟುತ್ತಿದ್ದ ಮಗುವನ್ನು ಎಲ್ಲಿ  ಬಿಟ್ಟು ಹೊರಡುವುದು ಎನ್ನುವ ನಾನಾ ಭವಿತವ್ಯದ ಚಿಂತೆಗಳು ಕಾಡತೊಡಗಿದವು. ಸದಾ ಚಟುವಟಿಕೆಗಳಲ್ಲಿ ತೊಡಗಿದ್ದ ನನ್ನ ರೆಕ್ಕೆಗಳಿಗೆ ಅಲ್ಲಿ ಬಾನು ಸಿಗದಿದ್ದರೆ ಎನ್ನುವ  ಶಂಕೆಯೂ ಇತ್ತು.

(ಲಂಡನ್ ಐ)

ಪಾಶ್ಚಾತ್ಯ ಸಂಸ್ಕೃತಿಯ ಪರಿಚಯವನ್ನು ಭಾರತೀಯರ ಅನುಕರಣೆಯ  ನಡೆವಳಿಕೆ ನಮಗಾಗಲೇ ಕಲಿಸಿತ್ತು. ಅಂತರ್ಜಾಲ ಎನ್ನುವ ಜಾದೂ ಕೂಡ ಮಾಯೆಯನ್ನು ಉಂಟುಮಾಡಿದ್ದ ಸಮಯವದು. ಭಾಷೆಯೊಂದು ಗೊತ್ತಿದ್ದರೆ  ಅತಿ ಆತಂಕಕ್ಕೆ ಕಾರಣವಿರುವುದಿಲ್ಲ. ಜೊತೆಗೆ  ಬ್ರಿಟನ್ನಿನಲ್ಲಿ ಗುರುತಿರುವ ಕುಟುಂಬಗಳೂ ಇದ್ದವು. ಆ ದೇಶದ ಅನುಕರಣೆಯೇ ನಮ್ಮ ಆದರ್ಶ ಎಂದು ನಂಬಿದ ವ್ಯಕ್ತಿ ನಾನಾಗಿರಲಿಲ್ಲ. ಭಾರತೀಯಳೆಂದು ಗುರುತಿಸಿಕೊಳ್ಳುವ ನನ್ನಲ್ಲಿ ಯಾವ ಕೀಳಿರಿಮೆಯ ಲವಲೇಶವೂ ಇರಲಿಲ್ಲ. ನನ್ನ ಭಾರತದ ಬದುಕು ಸಂಪೂರ್ಣ ಸಂತೃಪ್ತಿಯನ್ನು, ಆತ್ಮ ವಿಶ್ವಾಸವನ್ನು ನನಗೆ ಧಾರಾಳವಾಗಿ ನೀಡಿತ್ತು. ಆರ್ಥಿಕ ಬಿಕ್ಕಟ್ಟಿನ ಉಮೇದು ಕೂಡ ಇರಲಿಲ್ಲ. ಈ ವರ್ತುಲಗಳಿಂದ ಹೊರಬಂದ ವ್ಯಕ್ತಿ ಇರುವ ವಿಚಾರಗಳನ್ನು ಇರುವಂತೆಯೇ ನೋಡಬಲ್ಲ. ಅಂತಹ ಉತ್ತಮ ರೂಪಿನಲ್ಲಿ ನಾನೇನೋ ಇದ್ದದ್ದು ನಿಜ. ಭಾರತೀಯ ನೆಲೆಯಲ್ಲೇ ಆದರ್ಶಗಳನ್ನು, ಕನಸನ್ನು ಹೊಸೆದುಕೊಂಡಿದ್ದ ಬದುಕಿನಲ್ಲಿ  ಬಂದ ಈ ವಿದೇಶ ಪ್ರಯಾಣದ ಬದಲಾವಣೆ ಒಂದು ರೀತಿಯ ಸಾಹಸದ ಗರಿಯನ್ನು ಮೂಡಿಸಿತ್ತು. ಬದುಕು ನರಳದೆ ಇನ್ನೂ ನಳನಳಿಸುತ್ತಿದ್ದ ಸಮಯ. ಅದಕ್ಕಿನ್ನ ಹೆಚ್ಚಾಗಿ  ಬದುಕಿನಲ್ಲಿ ಹೊಸತು ಎನ್ನುವಂತೆ ನಾನು ಮೊದಲಬಾರಿಗೆ ಗರ್ಭಿಣಿಯಾಗಿದ್ದ ಸಮಯ.

ನಾವಿಲ್ಲಿ ಹೊರನಾಡಿನ ಪ್ರವಾಸಕ್ಕೆ ಹೊರಟಿರಲಿಲ್ಲ. ಬೇರೊಂದು ದೇಶದಲ್ಲಿ ಬದುಕನ್ನು ಕಂಡುಕೊಳ್ಳಲು ಅವಕಾಶಗಳನ್ನು ಹುಡುಕಿ ಹೊರಟಿದ್ದೆವು. ಅಲ್ಲಿ ನೆಲೆನಿಂತು ಹಲವು ವರ್ಷಗಳ ಕಾಲ ನಮ್ಮ ವೃತ್ತಿಗೆ ಬೇಕಾದ ತರಬೇತಿಯನ್ನು ಪಡೆವ ಉದ್ದೇಶವೂ ಇತ್ತು. ಆದರೆ ಇದನ್ನು ಸಾಧಿಸಲು ಅದರದೇ ಆದ ಗೋಜಲುಗಳೂ ಇದ್ದವು. ಆಗ ತಾನೇ ಮದುವೆಯಾಗಿ ಕಟ್ಟಿಕೊಂಡಿದ್ದ ಮನೆಯನ್ನು ಈಗ ಬಿಚ್ಚಿಡಬೇಕಿತ್ತು. ಸಾಮಾನು ಸರಂಜಾಮುಗಳನ್ನು ವಿಲೇವಾರಿ ಮಾಡಬೇಕಿತ್ತು. ಸೂಟುಕೇಸುಗಳಲ್ಲಿ ತುಂಬುವಷ್ಟನ್ನು ಕಟ್ಟಿಕೊಂಡು ಹೊರಡಲು  ಅಣಿಯಾಗಬೇಕಿತ್ತು.  ಇಂತಹ ಸಂದರ್ಭದಲ್ಲಿ ನಾನು ಒಂದು ಸಂದಿಗ್ಧ ಪ್ರಶ್ನೆಯನ್ನು ಎದುರಿಸಿದೆ. ತಾನು ಮೊದಲು ಹೋಗಿ ಕೆಲಸ ಹುಡುಕಿ, ಮನೆ ಮಾಡಿ ನಿನ್ನನ್ನು ಕರೆದೊಯ್ಯುತ್ತೇನೆ ಎಂದು ಗಂಡ ಹೇಳಿದ. ಮೊದಲ ಬಸಿರಿನಲ್ಲಿ ಜೊತೆಯಲ್ಲಿರದೆ ಹೊರಟಿರುವ ಗಂಡನನ್ನು ತಡೆಯುವುದೇ?

(ಸೇಂಟ್ ಪ್ಯಾಂಕ್ರಾಸ್ ಅಂತಾರಾಷ್ಟ್ರೀಯ ನಿಲ್ದಾಣ, ಲಂಡನ್)

ನಾವಿಲ್ಲಿ ಹೊರನಾಡಿನ ಪ್ರವಾಸಕ್ಕೆ ಹೊರಟಿರಲಿಲ್ಲ. ಬೇರೊಂದು ದೇಶದಲ್ಲಿ ಬದುಕನ್ನು ಕಂಡುಕೊಳ್ಳಲು ಅವಕಾಶಗಳನ್ನು ಹುಡುಕಿ ಹೊರಟಿದ್ದೆವು. ಅಲ್ಲಿ ನೆಲೆನಿಂತು ಹಲವು ವರ್ಷಗಳ ಕಾಲ ನಮ್ಮ ವೃತ್ತಿಗೆ ಬೇಕಾದ ತರಬೇತಿಯನ್ನು ಪಡೆವ ಉದ್ದೇಶವೂ ಇತ್ತು. ಆದರೆ ಇದನ್ನು ಸಾಧಿಸಲು ಅದರದೇ ಆದ ಗೋಜಲುಗಳೂ ಇದ್ದವು. ಆಗ ತಾನೇ ಮದುವೆಯಾಗಿ ಕಟ್ಟಿಕೊಂಡಿದ್ದ ಮನೆಯನ್ನು ಈಗ ಬಿಚ್ಚಿಡಬೇಕಿತ್ತು. ಸಾಮಾನು ಸರಂಜಾಮುಗಳನ್ನು ವಿಲೇವಾರಿ ಮಾಡಬೇಕಿತ್ತು. ಸೂಟುಕೇಸುಗಳಲ್ಲಿ ತುಂಬುವಷ್ಟನ್ನು ಕಟ್ಟಿಕೊಂಡು ಹೊರಡಲು  ಅಣಿಯಾಗಬೇಕಿತ್ತು.

“ನೀನು ಹೋಗೆಂದರೆ ಹೋಗುತ್ತೇನೆ. ಇಲ್ಲವೆಂದರೆ ಇಲ್ಲ”  ಅಂತ ಅವನೇನೋ ಹೇಳಿದ. ಸ್ವಾಭಿಮಾನಿಯಾದ ನನಗೆ, ನನ್ನ ಬಸಿರು  ಕೇವಲ ನನ್ನ ವಿಚಾರವಾಗಿ ಮಾತ್ರ ಕಂಡಿದ್ದು ಯಾಕೋ ಗೊತ್ತಿಲ್ಲ.  ಅಥವಾ ನಾನು ಗರ್ಭಿಣಿಯಾದ ಕಾರಣಕ್ಕೆ ಗಂಡನಿಗೆ ಸಿಕ್ಕ ಮೊದಲ ಕೆಲಸ ಎಲ್ಲಿ ಇಲ್ಲವಾಗುವುದೋ ಎಂಬ ಆತಂಕ ಮತ್ತು ನಾನು ಅದಕ್ಕೆ ಹೊಣೆಯಾಗುವುದು ಬೇಡವೆಂಬ ತರ್ಕಕ್ಕೆ ಬಿದ್ದೆ. “ನಿನಗೆ ಬೇಕಿದ್ದಲ್ಲಿ ಹೋಗು, ನನ್ನನ್ನು ನಾನು ನೋಡಿಕೊಳ್ಳುತ್ತೇನೆ” ಎಂದೆ.  ಬದುಕಿನಲ್ಲಿ  ಅದುವರೆಗೆ ನನ್ನನ್ನು ಸ್ವಾವಲಂಬಿಯೆಂದುಕೊಂಡಿದ್ದ ನನಗೆ,  ಹೊಟ್ಟೆಯಲ್ಲಿದ್ದ ಇನ್ನೊಂದು ಜೀವದ ಹಂಗು ಹೇಗೆ ಹೊಸದಾಗಿತ್ತೋ ಹಾಗೆಯೇ ಹೆಂಡತಿ ಮತ್ತು ಅವಳ ಹೊಟ್ಟೆಯ ಮಗು ಆತನಿಗೂ ಹೊಸದಾಗಿತ್ತೇನೋ?

ಕೊನೆಗೆ ನಾನು ಇಲ್ಲಿಯೇ ಮಗುವಾಗುವವರೆಗೆ ಇರುವುದು ನಂತರ ಆತ ಮನೆ ಮಾಡಿ ಕರೆದುಕೊಂಡು ಹೋಗುವುದು ಅಂತ ಮಾತಾಯ್ತು. ಆಗಿನ್ನೂ ನಾನು ಕೆಲಸಮಾಡಿಕೊಂಡು ಅತ್ಯಂತ ಆರೋಗ್ಯವಾಗಿದ್ದುದರಿಂದ ಇದು ಸಮರ್ಪಕ ನಿರ್ಧಾರ ಎಂದೇ ಎಲ್ಲರಿಗೂ ಅನ್ನಿಸಿತು.

ಆದರೆ ವಿಧಿ ಪ್ರತಿಯೊಬ್ಬರ ಬಾಳಿನಲ್ಲಿ ಒಂದಿಲ್ಲೊಂದು ಆಟ ಹೂಡುತ್ತದೆ. ಆ ಆಟದ ಕಾಯಿಯಾಗುವ ಸರದಿ ಈ ಬಾರಿ ನನ್ನದಾಗಿತ್ತೋ ಏನೋ?

(ಮುಂದುವರೆಯುವುದು)