”ಹಂಗ ನಾವ ದೋಸ್ತರ ಒಬ್ಬರಿಗೊಬ್ಬರ ಅರ್ಥಾ ಮಾಡ್ಕೋತಿದ್ದವಿ ನಮ್ಮ ಸುಖಃ ದುಃಖ ಇಷ್ಟ ಅಲ್ಲದ ಚಟಾನೂ ಹಂಚಗೊತ್ತಿದ್ವಿ ಅಂತ ನಮ್ಮೊಳಗ ಏನು ಸಮಸ್ಯೆ ಬರಲಿಲ್ಲ ಅನ್ರಿ. ಆದರೂ ನಾ ನಮ್ಮ ದೋಸ್ತರಿಗೆ ಒಂದ ಮಾತ ಭಾಳ ಕ್ಲೀಯರ್ ಮಾಡಿದೆ. ’ದೋಸ್ತ ನಮ್ಮಮ್ಮ ಹೆಂಡಂದಿರೂ ನಮಗ ಅನಿವಾರ್ಯ, ಬ್ಯಾರೆಯವರಿಗಲ್ಲಾ. ನಾವ ಕಟಗೊಂಡೇವಿ ನಾವ ಅನುಭವಸಬೇಕ’ ಅಂತ ಸೀದಾ ಹೇಳಿ ಈ ಇಶ್ಯುಕ್ಕೇಲ್ಲಾ ಮಂಗಳಾರತಿ ಹೇಳಿ ಬಿಟ್ಟೆ”
ಪ್ರಶಾಂತ್ ಆಡೂರ ಬರೆಯುವ ಹುಬ್ಬಳ್ಳಿ ಪ್ರಹಸನ.

 

ಇದ ನನ್ನ ಲಗ್ನ ಆದ ಹೊಸ್ತಾಗಿನ ಮಾತ… ಹಂಗ ನಂದ ಮೊದ್ಲಿಂದ ದೋಸ್ತರದ ದೊಡ್ಡ ಸರ್ಕಲ್ ಅದರಾಗ ಎಲ್ಲಾರೂ ಲಗ ಭಗ್ ಒಂದ ವಾರ್ಗಿಯವರ ಇದ್ವಿ. ಹಿಂಗಾಗಿ ನನ್ನ ಲಗ್ನ ಆಗಿ ಒಂದ್ಯಾರಡ ವರ್ಷ ಅನ್ನೋದರಾಗ ಭಾಳಿಷ್ಟ ದೋಸ್ತರದೇಲ್ಲಾ ಲಗ್ನ ಆಗೇ ಬಿಡ್ತ. ಇನ್ನ ಎಲ್ಲಾರದೂ ಹೊಸ್ತಾಗಿ ಲಗ್ನ ಅಂದರ ಎಲ್ಲಾರದೂ ಹೊಸಾ ಹೆಂಡ್ತಿ, ಹೊಸಾ ಹುರುಪು. ಎಲ್ಲೇ ಹೋದರು ಹೆಂಡ್ತಿನ್ನ ಬಾಲಂಗಸಿಗತೆ ಕಟಗೊಂಡ ಹೋಗೊದು, ಇನ್ನ ಹೆಂತಾ ಸಣ್ಣ ಪಾರ್ಟಿ ಮಾಡಿದರು ’ವಿಥ್ ಫ್ಯಾಮಿಲಿ’ನ ಮಾಡೋದು. ಯಾರರ ಒಂದ ಫಂಕ್ಷನ್ನಿಗೆ ಕರದರ ಸಾಕ ಎಲ್ಲಾರಿಗೂ ಫೋನ್ ಮಾಡಿ
‘ನೀ ನಿನ್ನ ಹೆಂಡ್ತಿನ್ನ ಕರಕೊಂಡ ಬರ್ತೀಯೇನ್?’ ಅಂತ ಕೇಳಿ ಅಂವಾ
‘ಇಲ್ಲಾ ನಾ ಒಬ್ಬನ ಬರ್ತೇನಿ’ ಅಂದರ
‘ಏ, ನೀ ನಿನ್ನ ಹೆಂಡ್ತಿನ್ನ ಕರಕೊಂಡs ಬಾ, ನಾನೂ ನನ್ನ ಹೆಂಡ್ತಿನ್ನ ಕರ್ಕೊಂಡ್ ಬರ್ತೇನಿ’ ಅಂತ ಏನ ನಮ್ಮ ನಮ್ಮ ಹೆಂಡಂದರ ಇಲ್ಲಾ ಅಂದರ ಆ ಫಂಕ್ಷನ್ ನಡೆಯಂಗೇಲಾ ಅನ್ನೊರಗತೆ ಮಾಡ್ತಿದ್ದಿವಿ. ಅದರಾಗ ಈ ನಮ್ಮ ಹೊಸಾ ಹೆಂಡಂದರೂ ಬ್ಯಾರೆ ದೋಸ್ತರ ಅವರ ಹೆಂಡಂದರನ ಕರಕೊಂಡ ಬಂದರ ಇಷ್ಟ ನಾವ ಬರ್ತೇವಿ ಅನ್ನೋರ. ಹಿಂಗಾಗಿ ನಾವ ಯಾವದರ ಫಂಕ್ಷನ್ ಬಂದರ ನಮ್ಮ ಹೆಂಡಂದಿರಕಿಂತಾ ಜಾಸ್ತಿ ದೋಸ್ತರ ಹೆಂಡಂದಿರ ಮ್ಯಾಲೆ ಡಿಪೆಂಡ್ ಆಗಿದ್ವಿ.

ಹಂಗ ನನಗೇನ ವೈಕ್ತಿಕವಾಗಿ ಎಲ್ಲಾ ಕಡೆ ನನ್ನ ಹೆಂಡತಿನ ಕರಕೊಂಡ ಹೋಗಿ ಮೆರದಾಡಬೇಕ ಅಂತ ಅನಸ್ತಿದ್ದಿಲ್ಲಾ. ಮ್ಯಾಲೆ ನನ್ನ ಹೆಂಡತಿನೂ ನನ್ನ ಹಿಂದ ಬಾಲಂಗಸಿಗತೆ ನಾ ಹೋದಲ್ಲೇಲ್ಲಾ ತಾನು ಬರ್ತೇನಿ ಅಂತ ಹಟಾ ಮಾಡ್ತಿದ್ದಿಲ್ಲಾ. ಹಿಂಗಾಗಿ ನಾ ಲಗ್ನ ಆದಮ್ಯಾಲೂ ಕೈಬಿಸ್ಗೊಂಡ ಅಡ್ಡಾಡೋದ ನೋಡಿ ಒಂದಿಷ್ಟ ಮಂದಿ ದೋಸ್ತರಿಗೆ ಹೊಟ್ಟಿಕಿಚ್ಚ ಆಗ್ತಿತ್ತ, ಹಂಗ ನನಗ ಹೆಂಡ್ತಿ ಬಾಜುಕ ಇದ್ದಾಗ ಉಮೇದಿ ಅನಿಸಿದರು ಕೆಲವೊಮ್ಮೆ ಅದ ಹೆಂಡ್ತಿ ಕುತಗಿಗೆ ಊರಲ ಅನಸ್ತಿತ್ತ. ಹಿಂಗಾಗಿ ನಾ ಒಂದ ಸರತೆ ಅಕಿನ್ನ ಕರ್ಟಸಿಗೆ ಕರಿತಿದ್ದೆ, ಅಕಿ ಬಂದರ ಛಲೋ ಅಕಿ ಬರಲಿಲ್ಲಾ ಅಂದರ ಭಾಳ ಛಲೋ ಅಂತ ಒಬ್ಬನ ಹೋಗಿ ಬಿಡ್ತಿದ್ದೆ. ಹಂತಾದರಾಗ ನಾ ಒಬ್ಬನ ಹೋದಾಗ ಎಲ್ಲಾರೂ ಸೇರಿ ನನಗ
‘ಪ್ರೇರಣಾನ ಯಾಕ ಕರಕೊಂಡ ಬಂದಿಲ್ಲಾ’,
‘ಹೆಂಡ್ತಿನ್ನ ಯಾಕ ಬಿಟ್ಟ ಬಂದಿ… ಯಾಕ ಬರೋಹಂಗ ಇದ್ದಿದ್ದಿಲ್ಲೇನ್’ ಅಂತ ಗಂಟ ಬಿಳೋರ. ಖರೇ ಹೇಳ್ತೇನಿ
‘ನನ್ನ ಯಾಕ ಕರಕೊಂಡ ಹೋಗಂಗಿಲ್ಲಾ’ ಅಂತ ನನ್ನ ಹೆಂಡತಿ ನನ್ನ ಕೇಳಿದ್ದರಕಿಂತಾ ಜಾಸ್ತಿ
‘ನಿನ್ನ ಹೆಂಡ್ತಿನ್ನ ಯಾಕ ಕರಕೊಂಡ ಬಂದಿಲ್ಲಾ’ ಅಂತ ನಮ್ಮ ದೋಸ್ತರ ಹೆಂಡಂದ್ರ ಜಾಸ್ತಿ ಕೇಳ್ತಿದ್ದರು.

ಹಂಗ ನನಗೇನ ವೈಕ್ತಿಕವಾಗಿ ಎಲ್ಲಾ ಕಡೆ ನನ್ನ ಹೆಂಡತಿನ ಕರಕೊಂಡ ಹೋಗಿ ಮೆರದಾಡಬೇಕ ಅಂತ ಅನಸ್ತಿದ್ದಿಲ್ಲಾ. ಮ್ಯಾಲೆ ನನ್ನ ಹೆಂಡತಿನೂ ನನ್ನ ಹಿಂದ ಬಾಲಂಗಸಿಗತೆ ನಾ ಹೋದಲ್ಲೇಲ್ಲಾ ತಾನು ಬರ್ತೇನಿ ಅಂತ ಹಟಾ ಮಾಡ್ತಿದ್ದಿಲ್ಲಾ. ಹಿಂಗಾಗಿ ನಾ ಲಗ್ನ ಆದಮ್ಯಾಲೂ ಕೈಬಿಸ್ಗೊಂಡ ಅಡ್ಡಾಡೋದ ನೋಡಿ ಒಂದಿಷ್ಟ ಮಂದಿ ದೋಸ್ತರಿಗೆ ಹೊಟ್ಟಿಕಿಚ್ಚ ಆಗ್ತಿತ್ತ, ಹಂಗ ನನಗ ಹೆಂಡ್ತಿ ಬಾಜುಕ ಇದ್ದಾಗ ಉಮೇದಿ ಅನಿಸಿದರು ಕೆಲವೊಮ್ಮೆ ಅದ ಹೆಂಡ್ತಿ ಕುತಗಿಗೆ ಊರಲ ಅನಸ್ತಿತ್ತ. ಹಿಂಗಾಗಿ ನಾ ಒಂದ ಸರತೆ ಅಕಿನ್ನ ಕರ್ಟಸಿಗೆ ಕರಿತಿದ್ದೆ, ಅಕಿ ಬಂದರ ಛಲೋ ಅಕಿ ಬರಲಿಲ್ಲಾ ಅಂದರ ಭಾಳ ಛಲೋ ಅಂತ ಒಬ್ಬನ ಹೋಗಿ ಬಿಡ್ತಿದ್ದೆ.

ಆಮ್ಯಾಲೆ ಲಗ್ನಕಿಂತ ಮುಂಚೆ ನಾವ ಬರೇ ದೋಸ್ತರ ಆವಾಗ ಇವಾಗ ಪಾರ್ಟಿ ಮಾಡ್ತಿದ್ವಿ, ಈಗ ಲಗ್ನ ಆದ ಮ್ಯಾಲೆ ಅದ ತ್ರಾಸ ಆತ. ಕೆಲವೊಬ್ಬರು ಅಂದರ ಹೆಂಡ್ತಿನ್ನ ಬಿಟ್ಟ ಒಂದಕ್ಕ ಹೋಯಲಿಕ್ಕೂ ಹೋಗಲಾರದವರು
‘ಏ, ಏನ ಪಾರ್ಟಿ ಮಾಡಿದರು ಇನ್ನ ಮ್ಯಾಲೆ ವಿಥ್ ಫ್ಯಾಮಿಲಿನ’ ಅಂತ ಗಂಟ ಬಿದ್ದರು, ಹಂಗ ಒಂದಿಬ್ಬರ ದೋಸ್ತರ ಪಾಪ ಕನ್ಯಾ ಸಿಗಲಾರದವರ ಇದ್ದರಲಾ ಅವರಿಗೆ ನಮ್ಮ ಜೊತಿ ಬರಲಿಕ್ಕೆ ವಜ್ಜ ಆಗಲಿಕತ್ತ. ಅವರ ಬರೇ ಗಂಡಸರ ಪಾರ್ಟಿ ಮಾಡೋಣ ಅಂತ ಅನ್ನೋರ. ಹಂಗ ನನಗೇನ ಪ್ರಾಬ್ಲೇಮ್ ಇರಲಿಲ್ಲಾ ಯಾಕಂದರ ನನಗ ನನ್ನ ಹೆಂಡತಿ ಎದಕ್ಕೂ ಮ್ಯಾಂಡೇಟರಿನ ಇರಲಿಲ್ಲಾ ಹಿಂಗಾಗಿ ನಾ ಅದಕ್ಕು ಸೈ ಅಂತಿದ್ದೆ ಇದ್ದಕ್ಕೂ ಸೈ ಅಂತಿದ್ದೆ.

ಇನ್ನ ಹೆಂಡಂದರನ ಕಟಗೊಂಡ ಪಾರ್ಟೀ ಮಾಡೋದ ಅಂತ ಡಿಸೈಡ ಆದಮ್ಯಾಲೆ ಮತ್ತೊಂದ ದೊಡ್ಡ ಪ್ರಾಬ್ಲೇಮ್ ಶುರು ಆತ. ಒಂದಿಷ್ಟ ಮಂದಿ ಗಂಡಾ- ಹೆಂಡತಿ ಇಬ್ಬರೂ ನಾನ್ ವೆಜನವರ ಇದ್ದರು, ಒಂದಿಷ್ಟ ಗಂಡಂದರ ಹೆಂಡ್ತಿಗೆ ಗೊತ್ತಾಗಲಾರದಂಗ ನಾನ್ ವೆಜ್ ಇದ್ದರು, ಒಂದಿಷ್ಟ ಹೆಂಡಂದರ ಗಂಡಗ ಗೊತ್ತಾಗಲಾರದಂಗ ನಾನ್ ವೆಜ್ ತಿಂತಿದ್ದರು, ಒಂದಿಷ್ಟ ಪೇರ್ ಪ್ಯೂರ್ ವೆಜ್ ನವರ ಇದ್ದರು, ಇನ್ನ ಒಂದಿಷ್ಟ ದೋಸ್ತರ ಡ್ರಿಂಕ್ಸ್ ಮಾಡ್ತಿದ್ದರು, ಇದರಾಗೂ ಮತ್ತ ಹೆಂಡ್ತಿಗೆ ಗೊತ್ತಾಗಿ ಮಾಡೋರ ಬ್ಯಾರೆ ಗೊತ್ತಾಗಲಾರದ ಮಾಡೋರ ಬ್ಯಾರೆ ಇದ್ದರು. ತೊಗೊ ಪಾರ್ಟಿಗೆ ಹೋಟೆಲ್ ಫಿಕ್ಸ್ ಮಾಡೋದ ಒಂದ ದೊಡ್ಡ ಹಣಗಲ ಆಗಿ ಬಿಡ್ತ.

ಡ್ರಿಂಕ್ಸ್ ಇದ್ದಲ್ಲೇ ಒಬ್ಬೊವನ ಹೆಂಡ್ತಿ ಒಲ್ಲೆ ಅಂದರ ನಾನ್ ವೆಜ್ ಇದ್ದಲ್ಲೇ ಮತ್ತೊಬ್ಬನ ಹೆಂಡ್ತಿ ಒಲ್ಲೆ ಅನ್ನೋಕಿ. ಹೆಂಡ್ತಿ ಇದ್ದಾಗ ನಾ ನಾನ್ ವೆಜ್ ತಿನ್ನಂಗಿಲ್ಲಾ ಹಿಂಗಾಗಿ ವೆಜ್ ಹೋಟೆಲಕ್ಕ ಹೋಗೊಣು ಅಂತ ಒಬ್ಬೊಂವ ಅಂದರ ಇನ್ನೊಬ್ಬಂವಾ, ನಾ ಕುಡಿಯೋದ ಹೆಂಡ್ತಿಗೆ ಗೊತ್ತಾಗಬಾರದು ಹಿಂಗಾಗಿ ಬಾರ್ ಇದ್ದಲ್ಲೇ ಬ್ಯಾಡಾ ಅನ್ನೋವಾ. ಪಾರ್ಟಿ ಅಂದರ ಕುಡಿಲಿಲ್ಲಾ ಅಂದರ ಹೆಂಗ ಅಂತ ನನ್ನಂಗ ಅನ್ನೋರ ಒಂದಿಷ್ಟ ಮಂದಿ, ಮನ್ಯಾಗ ನಾನ್ ವೆಜ್ ಮಾಡಂಗಿಲ್ಲಾ ಹೊರಗರ ತಿನ್ನೋಣ ಅಂತ ಮತ್ತೊಬ್ಬವನ ಹೆಂಡತಿ… ಯಪ್ಪಾ, ಅವನೌನ ಯಾಕರ ಪಾರ್ಟಿ ಮಾಡಬೇಕೋ ಅಂತ ಒಂದಿಷ್ಟ ಮಂದಿಗೆ ಅನಿಸಿದರ ಯಾಕರ ಮದುವಿ ಆದ್ವಿ ಅಂತ ಇನ್ನೊಂದಿಷ್ಟ ಮಂದಿಗೆ ಅನಸೋದ.

ಇನ್ನ ಹೆಂಡಂದರನ ಕಟಗೊಂಡ ಪಾರ್ಟೀ ಮಾಡೋದ ಅಂತ ಡಿಸೈಡ ಆದಮ್ಯಾಲೆ ಮತ್ತೊಂದ ದೊಡ್ಡ ಪ್ರಾಬ್ಲೇಮ್ ಶುರು ಆತ. ಒಂದಿಷ್ಟ ಮಂದಿ ಗಂಡಾ- ಹೆಂಡತಿ ಇಬ್ಬರೂ ನಾನ್ ವೆಜನವರ ಇದ್ದರು, ಒಂದಿಷ್ಟ ಗಂಡಂದರ ಹೆಂಡ್ತಿಗೆ ಗೊತ್ತಾಗಲಾರದಂಗ ನಾನ್ ವೆಜ್ ಇದ್ದರು, ಒಂದಿಷ್ಟ ಹೆಂಡಂದರ ಗಂಡಗ ಗೊತ್ತಾಗಲಾರದಂಗ ನಾನ್ ವೆಜ್ ತಿಂತಿದ್ದರು, ಒಂದಿಷ್ಟ ಪೇರ್ ಪ್ಯೂರ್ ವೆಜ್ ನವರ ಇದ್ದರು, ಇನ್ನ ಒಂದಿಷ್ಟ ದೋಸ್ತರ ಡ್ರಿಂಕ್ಸ್ ಮಾಡ್ತಿದ್ದರು, ಇದರಾಗೂ ಮತ್ತ ಹೆಂಡ್ತಿಗೆ ಗೊತ್ತಾಗಿ ಮಾಡೋರ ಬ್ಯಾರೆ ಗೊತ್ತಾಗಲಾರದ ಮಾಡೋರ ಬ್ಯಾರೆ ಇದ್ದರು. ತೊಗೊ ಪಾರ್ಟಿಗೆ ಹೋಟೆಲ್ ಫಿಕ್ಸ್ ಮಾಡೋದ ಒಂದ ದೊಡ್ಡ ಹಣಗಲ ಆಗಿ ಬಿಡ್ತ.

ಖರೇ ಹೇಳ್ತೇನಿ ನನಗಂತೂ ಸಾಕ ಸಾಕಾಗಿ ಹೋತ. ಹಂಗ ನನಗ ನನ್ನ ಹೆಂಡ್ತಿಗೆ ಹಿಂತಾದ ಹೋಟೆಲ್ ಬೇಕು ಹಿಂತಾದ ಬ್ಯಾಡ ಅಂತ ಪ್ರಾಬ್ಲೇಮ ಇರಲಿಲ್ಲಾ, ಅಕಿಗೆ ಬಾರ್ ಇದ್ದರೂ ಸೈ… ಕಬಾಬ್ ಇದ್ದರೂ ಸೈ… ಒಟ್ಟ ಅಲ್ಲೇ ದಾಲ್ ಕಿಚಡಿ, ಕರ್ಡ ರೈಸ್ ಸ್ಟಾರ್ಟಿಂಗೆಗೆ ಒಂದ ಲೈಮ್ ಜ್ಯೂಸ್ ಸಾಲ್ಟ & ಸ್ವೀಟ್, ಬಾಯಾಡಿಸಿಕೊಳ್ಳಿಕ್ಕೆ ಮಸಾಲ ಪಾಪಡ ಇದ್ದರ ಸಾಕ. ಅಲ್ಲಾ ಹಂಗ ಅಕಿ ತಿನ್ನೋದ ಗಂಡನ ಜೀವಾ ಒಂದ ಅದನ್ನ ಮನ್ಯಾಗ ತಿಂದ ತಿಂತಿದ್ಲು. ಹಿಂಗಾಗಿ ಹೊರಗ ಏನ ತಿನಿಸಿದರು ಖುಷ್ ಆಗ್ತಿದ್ಲು ಆ ಮಾತ ಬ್ಯಾರೆ. ಮ್ಯಾಲೆ ನಾ ಏನ ಚಟಾ ಮಾಡಿದರು ಕದ್ದು ಮುಚ್ಚಿ ಮಾಡೊವಲ್ಲಾ. ಹಿಂಗಾಗಿ ನಾನೂ ಹೆಂಡ್ತಿನ್ನ ಕರಕೊಂಡ ಬಾರ್ ಇದ್ದರೂ ಸೈ ನಾನ್ ವೆಜ್ ಇದ್ದರೂ ಸೈ ಅಂತಿದ್ದೆ. ಆದರ ನಾವಿಬ್ಬರು ನಾನ್ ವೆಜ್ ಮುಟ್ಟತಿದ್ದಿಲ್ಲಾ ಮಂದಿ ತಿನ್ನೋದರ ಬಗ್ಗೆ ತಲಿ ಕೆಡಸ್ಗೊತಿದ್ದಿಲ್ಲಾ, ಹಂಗ ಅಪ್ಪಿ ತಪ್ಪಿ ಗೋಬಿ ಮಂಚೂರಿ ಬದ್ಲಿ ಚಿಕನ್ ಮಂಚೂರಿ ಬೋನಲೆಸ್ ಬಾಯಾಗ ಹೋಗಿದ್ದರು ಯಾರಿಗೂ ಹೇಳ್ತಿದ್ದಿಲ್ಲಾ ಇಷ್ಟ. ಇನ್ನ ನಾವಿಬ್ಬರು ಗಂಡಾ ಹೆಂಡತಿ ಇಷ್ಟ ಕ್ಲಿಯರ್ ಇದ್ದ ಮ್ಯಾಲೆ ಮಂದಿ ಹೆಂಡಂದರ ಮರ್ಜಿ ನಾವ ಯಾಕ ಕಾಯಬೇಕು ಅಂತ ಅನಸಲಿಕತ್ತ. ಅದರಾಗ ಒಂದಿಬ್ಬರ ದೋಸ್ತರ ಚೀಟ ಬ್ಯಾರೆ ಹಾಕೊತ್ತಿದ್ವಿ. ಹಿಂಗಾಗಿ ಒಂದಿಷ್ಟ ಮಂದಿಗೆ ಅದರ ವಾಸನಿ ಆಗಿ ಬರ್ತಿದಿಲ್ಲಾ, ತೊಗೊ ಅದೊಂದ ದೊಡ್ಡ ಇಶ್ಯೂ.

‘ಲೇ, ನೀ ತಿಂದ ಪಿಚಿ ಪಿಚಿ ಉಗಳೊದ ನನ್ನ ಹೆಂಡತಿಗೆ ಆಗಿಬರಂಗಿಲ್ಲಾ. ನಮ್ಮ ಜೊತಿ ಬರಬೇಕಾರ ನೀ ಚೀಟ ಹಾಕೋ ಬ್ಯಾಡಾ’ ಅಂತ ಒಬ್ಬೊಂವ ಅನ್ನೋವಾ, ’ಲೇ, ನನ್ನ ಹೆಂಡ್ತಿನ ಸುಮ್ಮನ ಇರಬೇಕಾರ ನಿನ್ನ್ ಹೆಂಡ್ತಿದ ಏನಲೇ’ ಅಂತ ಅಂವಾ ಅನ್ನೊದ, ’ಏ, ನಿಮ್ಮ ಮನೆಯವರ ಏನ್ವಾ ಯಾವಾಗಲೂ ಬಾಯಾಗ ತುಂಬಕೊಂಡಿರ್ತಾರ, ನೀ ಹೆಂಗ ಸುಮ್ಮನ ಇರ್ತಿ ಅಂತ’ ಒಬ್ಬವನ ಹೆಂಡ್ತಿ ನನ್ನ ಹೆಂಡ್ತಿಗೆ ಹೇಳಿ ಕೊಡೊದು… ಹಿಂತಾವ ನೂರಾ ಎಂಟ ಲಫಡಾ ಸ್ಟಾರ್ಟ ಆದ್ವು. ಖರೇ ಹೇಳ್ತೇನಿ ನಮ್ಮ ದೋಸ್ತರಿಗೇಲ್ಲಾ ನಾವ ಯಾಕರ ಲಗ್ನ ಆದವಿ ಅನ್ನೋಹಂಗ ಆಗಲಿಕತ್ತ. ಯಾವಾಗ ಒಂದಿಷ್ಟ ದೋಸ್ತರ ತಮ್ಮ ತಮ್ಮ ರಿಸ್ಪೆಕ್ಟಿವ್ ಹೆಂಡಂದರ ಮಾತ ಕೇಳಿ ದೊಡ್ಡಿಸ್ತನ ಮಾಡಲಿಕತ್ತರ ನೋಡ್ರಿ ಆವಾಗ ದೋಸ್ತರ ಗ್ರುಪ್ ಒಳಗ ಪ್ರಾಬ್ಲೇಮ್ ಸ್ಟಾರ್ಟ್ ಆದ್ವು. ಒಬ್ಬೊಬ್ಬರ ನಾಟಕ ಸ್ಟಾರ್ಟ ಮಾಡಿದರು.

ನನಗ ನನ್ನ ಹೆಂಡ್ತಿಗೆ ಹಿಂತಾದ ಹೋಟೆಲ್ ಬೇಕು ಹಿಂತಾದ ಬ್ಯಾಡ ಅಂತ ಪ್ರಾಬ್ಲೇಮ ಇರಲಿಲ್ಲಾ, ಅಕಿಗೆ ಬಾರ್ ಇದ್ದರೂ ಸೈ… ಕಬಾಬ್ ಇದ್ದರೂ ಸೈ… ಒಟ್ಟ ಅಲ್ಲೇ ದಾಲ್ ಕಿಚಡಿ, ಕರ್ಡ ರೈಸ್ ಸ್ಟಾರ್ಟಿಂಗೆಗೆ ಒಂದ ಲೈಮ್ ಜ್ಯೂಸ್ ಸಾಲ್ಟ & ಸ್ವೀಟ್, ಬಾಯಾಡಿಸಿಕೊಳ್ಳಿಕ್ಕೆ ಮಸಾಲ ಪಾಪಡ ಇದ್ದರ ಸಾಕ. ಅಲ್ಲಾ ಹಂಗ ಅಕಿ ತಿನ್ನೋದ ಗಂಡನ ಜೀವಾ ಒಂದ ಅದನ್ನ ಮನ್ಯಾಗ ತಿಂದ ತಿಂತಿದ್ಲು. ಹಿಂಗಾಗಿ ಹೊರಗ ಏನ ತಿನಿಸಿದರು ಖುಷ್ ಆಗ್ತಿದ್ಲು ಆ ಮಾತ ಬ್ಯಾರೆ. ಮ್ಯಾಲೆ ನಾ ಏನ ಚಟಾ ಮಾಡಿದರು ಕದ್ದು ಮುಚ್ಚಿ ಮಾಡೊವಲ್ಲಾ. ಹಿಂಗಾಗಿ ನಾನೂ ಹೆಂಡ್ತಿನ್ನ ಕರಕೊಂಡ ಬಾರ್ ಇದ್ದರೂ ಸೈ ನಾನ್ ವೆಜ್ ಇದ್ದರೂ ಸೈ ಅಂತಿದ್ದೆ. ಆದರ ನಾವಿಬ್ಬರು ನಾನ್ ವೆಜ್ ಮುಟ್ಟತಿದ್ದಿಲ್ಲಾ ಮಂದಿ ತಿನ್ನೋದರ ಬಗ್ಗೆ ತಲಿ ಕೆಡಸ್ಗೊತಿದ್ದಿಲ್ಲಾ, ಹಂಗ ಅಪ್ಪಿ ತಪ್ಪಿ ಗೋಬಿ ಮಂಚೂರಿ ಬದ್ಲಿ ಚಿಕನ್ ಮಂಚೂರಿ ಬೋನಲೆಸ್ ಬಾಯಾಗ ಹೋಗಿದ್ದರು ಯಾರಿಗೂ ಹೇಳ್ತಿದ್ದಿಲ್ಲಾ ಇಷ್ಟ.

‘ನೀ ಕುಡಿಯೋದಾದರ ನಮ್ಮ ಜೊತಿ ಬರಬ್ಯಾಡ, ನನ್ನ ಹೆಂಡತಿಗೆ ಕಿಂಗ್ ಫಿಶರ್ ವಾಸನಿ ಆಗಬರಂಗಿಲ್ಲಾ’
‘ನೀ ನಾನ್ ವೆಜ್ ತಿನ್ನಬ್ಯಾಡಾ ನನ್ನ ಹೆಂಡತಿಗೆ ಆ ಸುರಮಾ ವಾಸನಿಗೆ ವಾಂತಿ ಬರತದ’
‘ನೀ ಚೀಟ್ ತಿಂದ ಪಿಚಿ ಪಿಚಿ ಉಗಳ ಬ್ಯಾಡ’ …ಹಿಂಗ ಒಬ್ಬೊಬ್ಬರ ಶುರು ಮಾಡಿದರು.
ಹಂಗ ಮುಂದ ಈ ಹೆಂಡಂದರ ಮರ್ಜಿ ಕಾಯೋದ ಪ್ರತಿಯೊಂದ ಪಾರ್ಟಿ ಇಷ್ಟ ಅಲ್ಲಾ ಬ್ಯಾರೆ ವಿಷಯಕ್ಕೂ ಸ್ಟಾರ್ಟ ಆತ, ಎಲ್ಲೇರ ಟ್ರೀಪ್ ಹೊಗೊಬೇಕಂದರ ಪ್ರಾಬ್ಲೇಮ್, ಯಾರದರ ಮದುವಿ/ಮುಂಜವಿಗೆ ಹೋಗಬೇಕಂದರ ಪ್ರಾಬ್ಲೇಮ್. ಖರೇ ಹೇಳ್ತೀನಿ ನಂಗಂತೂ ತಲಿ ಕೆಟ್ಟ ಹೋತ. ನಾ ಅದಕ್ಕ ಭಡಾ ಭಡಾ ದೋಸ್ತರ ಮರ್ಜಿ ಹಿಡಿಲಾರದ ನಂಗ ಹೆಂಗ ಬೇಕ ಹಂಗ ಎಲ್ಲೆ ಬೇಕ ಅಲ್ಲೇ ನನ್ನ ಹೆಂಡ್ತಿನ್ನ ಕಟಗೊಂಡ ಹೊಗಲಿಕ್ಕೆ ಹತ್ತಿ ಬಿಟ್ಟೆ. ಹಂಗ ನನಗ ಖರೇನ ನನ್ನ ಹೆಂಡ್ತಿ ಇಂದ ಏನು ಪ್ರಾಬ್ಲೇಮ್ ಇರಲೇ ಇಲ್ಲಾ, ನಾ ಊರ ಚಟಾ ಎಲ್ಲಾ ಮಾಡ್ತಿದ್ದೆ. ಮತ್ತ ಎಲ್ಲಾ ಹೆಂಡ್ತಿಗೆ ಹೇಳೆ ಮಾಡ್ತಿದ್ದೆ/ ಮಾಡ್ತೇನಿ. ಅಲ್ಲಾ ನಾ ಅಂತೂ ಹನಿಮೂನಿಗೆ ಹೋಗಬೇಕಾರ ನನ್ನ ಹೆಂಡತಿಗೆ ನನ್ನ ಎಲ್ಲಾ ಚಟದ ಲಿಸ್ಟ ಕೊಟ್ಟ ಕರ್ಕೊಂಡ ಹೋಗಿದ್ದೆ. ಇನ್ನ ಹಂತಾದರಾಗ ನಾ ಪ್ರತಿಯೊಂದಕ್ಕೂ ಮಂದಿ ಹೆಂಡ್ತಿ ಮರ್ಜಿ ಎಲ್ಲೇ ಕಾಯೋದ ಅಂತ ಬ್ಯಾರೆಯವರ ಉಸಾಬರಿನ ಬಿಟ್ಟ ಬಿಟ್ಟೆ.

ಹಂಗ ನಾವ ದೋಸ್ತರ ಒಬ್ಬರಿಗೊಬ್ಬರ ಅರ್ಥಾ ಮಾಡ್ಕೋತಿದ್ದವಿ ನಮ್ಮ ಸುಖಃ ದುಃಖ ಇಷ್ಟ ಅಲ್ಲದ ಚಟಾನೂ ಹಂಚಗೊತ್ತಿದ್ವಿ ಅಂತ ನಮ್ಮೊಳಗ ಏನು ಸಮಸ್ಯೆ ಬರಲಿಲ್ಲ ಅನ್ರಿ. ಆದರೂ ನಾ ನಮ್ಮ ದೋಸ್ತರಿಗೆ ಒಂದ ಮಾತ ಭಾಳ ಕ್ಲೀಯರ್ ಮಾಡಿದೆ. ’ದೋಸ್ತ ನಮ್ಮಮ್ಮ ಹೆಂಡಂದಿರೂ ನಮಗ ಅನಿವಾರ್ಯ, ಬ್ಯಾರೆಯವರಿಗಲ್ಲಾ. ನಾವ ಕಟಗೊಂಡೇವಿ ನಾವ ಅನುಭವಸಬೇಕ’ ಅಂತ ಸೀದಾ ಹೇಳಿ ಈ ಇಶ್ಯುಕ್ಕೇಲ್ಲಾ ಮಂಗಳಾರತಿ ಹೇಳಿ ಬಿಟ್ಟೆ. ಅಲ್ಲಾ ಹಂಗ ನಾ ಬರದಿದ್ದೇಲ್ಲಾ ಒಂದ ಹದಿನೈದ – ಹದಿನೆಂಟ ವರ್ಷದ ಹಿಂದಿನ ಮಾತ ಇರಬಹುದು, ಆದರ ಈಗಲೂ ನಾವೇಲ್ಲಾ ದೋಸ್ತರ ಹಂಗ ಇದ್ದೇವಿ, ನಮ್ಮೊಳಗ ಅಷ್ಟ ಆತ್ಮೀಯತೇ ಅದ, ಹಂಗ ನಮ್ಮ ಚಟಾನೂ ಎಲ್ಲಾ ಹಂಗ ಅವ, ನಮ್ಮ ಹೆಂಡಂದರೂ ಹಂಗ ಇದ್ದಾರ, ನಾವೇನ ಸುಧಾರಸಲಿಲ್ಲಾ ಅವರೇನ ನಮ್ಮ ಜೀವಾ ತಿನ್ನೋದ ಬಿಟ್ಟಿಲ್ಲಾ. ಅಲ್ಲಾ ಹಂಗ ಒಂದ ಒಪ್ಪತ್ತಿಗೆ ಅವರನ ನಾವ ನಮ್ಮ ದಾರಿಗೆ ತೊಗೊಂಡ ಬಂದೇವಿ ಆ ಮಾತ ಬ್ಯಾರೆ.

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)