‘ಆದರೆ ನನಗೆ ಆ ಮೇಷ್ಟ್ರ ಕ್ಯಾಲಿಗ್ರಫಿಯಲ್ಲಿ ಇಂಟರೆಸ್ಟಿಂಗ್ ಅನ್ನಿಸುವಂಥದ್ದು ಏನೂ ಕಾಣಿಸಲೇ ಇಲ್ಲ.ಆತ ಬಹಳ ಕಟ್ಟುನಿಟ್ಟಿನ ಮನುಷ್ಯ.ನನಗೆ ಆತನ ಬರವಣಿಗೆಯಲ್ಲಿ ರುಚಿಯಾಗಲಿ ಸುವಾಸನೆಯಾಗಲಿ ಕಾಣಿಸಲಿಲ್ಲ.ಅವು ಕೇವಲ ಪುಸ್ತಕದಲ್ಲಿ ಪ್ರಿಂಟಾಗಿದ್ದ ಅಕ್ಷರಗಳ ಹಾಗೆ ಕಾಣುತ್ತಿತ್ತು. ಅಪ್ಪ ಕಲಿಯಲೇಬೇಕು ಅಂತ ಹೇಳಿದ್ದರಲ್ಲ ಹಾಗಾಗಿ ದಿನವೂ ಅವರ ಶಾಲೆಗೆ ಹೋಗಿ ಅವರ ಕ್ಯಾಲಿಗ್ರಫಿಯ ಶೈಲಿಯನ್ನು ಕಲಿಯಲು ಶುರುಮಾಡಿದೆ.ನಮ್ಮಪ್ಪ ಮತ್ತು ಆ ಕ್ಯಾಲಿಗ್ರಫಿ ಮೇಷ್ಟ್ರು ಇಬ್ಬರೂ ಮೀಸೆ ಬಿಟ್ಟಿದ್ದರು”
ಹೇಮಾ.ಎಸ್. ಅನುವಾದಿಸಿರುವ ಅಕಿರ ಕುರಸೋವನ ಆತ್ಮಕತೆಯ ಮೂರನೆಯ ಅಧ್ಯಾಯ.

 

ಅಷ್ಟು ದೂರದ ನಡಿಗೆ, ದ್ವೇಷಿಸುತ್ತಿದ್ದ ಮೇಷ್ಟ್ರ ಹತ್ತಿರ ಸೈ ಅನ್ನಿಸಿಕೊಳ್ಳಲೇಬೇಕೆಂಬ ಹಠ ಎಲ್ಲ ಸೇರಿ ಮಧ್ಯಾಹ್ನ ಮನೆಗೆ ಬರೋ ಹೊತ್ತಿಗೆ ಸುಸ್ತಾಗಿಬಿಡುತ್ತಿದ್ದೆ. ಬೆಳಗ್ಗೆ ಹೋಗೊವಾಗಲೇ ದೂರ ಅನ್ನಿಸುತ್ತಿದ್ದ ದಾರಿ ಸಂಜೆ ಕ್ಯಾಲಿಗ್ರಫಿ ಪಾಠಕ್ಕೆ ಹೋಗಬೇಕಲ್ಲ ಅನ್ನೋ ಕಾರಣಕ್ಕೆ ಮಧ್ಯಾಹ್ನ ಇನ್ನೂ ಮೂರುಪಟ್ಟು ಉದ್ದವಾಗಿಬಿಟ್ಟಿದೆ ಅನ್ನಿಸೋದು. ನಮ್ಮಪ್ಪನಿಗೆ ಕ್ಯಾಲಿಗ್ರಫಿ ಅಂದರೆ ಬಹಳ ಇಷ್ಟ. ನಮ್ಮ ಮನೆಯ ಗೋಡೆಗಳ ಮೇಲೆ ಆಗಾಗ ಕ್ಯಾಲಿಗ್ರಫಿಯ ಬರಹಗಳ ಸುರಳಿಗಳನ್ನ ಅಪ್ಪ ತೂಗುಹಾಕುತ್ತಿದ್ದರು. ಬಹಳ ಅಪರೂಪಕ್ಕೆ ಚಿತ್ರಗಳನ್ನ ತೂಗುಹಾಕುತ್ತಿದ್ದರು. ಅವರು ತೂಗುಹಾಕುತ್ತಿದ್ದ ಸುರುಳಿ ಬರಹಗಳಲ್ಲಿ ಚೀನಾದ ಕಲ್ಲು ಸ್ಮಾರಕಗಳಲ್ಲಿನ ಬರಹಗಳ ನಕಲು ಅಥವಾ ಅವರಿಗೆ ಪರಿಚಯವಿದ್ದ ಚೀನಾದವರ ಬರಹಗಳು ಇರುತ್ತಿತ್ತು.

ಹನ್ಶಾನ್ ದೇವಾಲಯದ ಸಮಾಧಿಕಲ್ಲಿನ ಮೇಲಿದ್ದ ಬರಹವನ್ನು ನಕಲು ಮಾಡಿದ್ದ ಸುರಳಿ ಬರಹವೊಂದು ನಂಗಿನ್ನೂ ನೆನಪಿದೆ. ಅದರಲ್ಲಿ ಅಲ್ಲಲ್ಲಿ ಕೆಲವು ಅಕ್ಷರಗಳು ಮುರಿದಿದ್ದವು ಅಥವ ಕಲ್ಲಿನಿಂದ ಉದುರಿಹೋಗಿತ್ತು. ಅಲ್ಲಲ್ಲಿ ವಾಕ್ಯಗಳ ನಡುವೆ ಖಾಲಿಜಾಗವಿತ್ತು. ಅಪ್ಪ ಆ ಖಾಲಿಬಿಟ್ಟ ಜಾಗಗಳನ್ನು ತುಂಬುತ್ತಿದ್ದರು. ಹಾಗೆ ಮಾಡಿ “ಮ್ಯಾಪಲ್ ಸೇತುವೆ ಬಳಿ ಕಳೆದ ರಾತ್ರಿ” ಅನ್ನೋ ಪದ್ಯವನ್ನು ನಂಗೆ ಹೇಳಿಕೊಟ್ಟಿದ್ದರು. ಈ ಪದ್ಯವನ್ನು ಬರೆದವನು ಟಿಯಾಂಗ್ಶ್ ರಾಜವಂಶದ ಆಳ್ವಿಕೆಯ ಕಾಲದಲ್ಲಿದ್ದ ಚಾಂಗ್ ಚಿ ಅನ್ನೋ ಚೀನೀ ಕವಿ.

ಈಗಲೂ ಆ ಪದ್ಯವನ್ನು ಹಾಡಬಲ್ಲೆ, ಬರೆಯಬಲ್ಲೆ. ಕೆಲವು ವರ್ಷಗಳ ಹಿಂದೆ ಜಪಾನಿ ರೆಸ್ಟೊರೆಂಟ್ ನಲ್ಲಿ ಪಾರ್ಟಿಯೊಂದಕ್ಕೆ ಹೋಗಿದ್ದೆ. ಅಲ್ಲಿ ಚಾಂಗ್ ಚಿಯ ಇದೇ ಪದ್ಯವನ್ನು ಸುಂದರ ಕೈಬರಹದಲ್ಲಿ ಬರೆದು ಗೋಡೆಗೆ ನೇತುಹಾಕಿದ್ದರು. ಒಂದುಕ್ಷಣ ಕೂಡ ಯೋಚಿಸದೆ ಥಟ್ ಅಂತ ಆ ಪದ್ಯವನ್ನ ಜೋರಾಗಿ ಓದಿದೆ. ನಟ ಕಯಾಮ ಯುಜೊ಼ ನಾನು ಹೇಳಿದ್ದನ್ನ ಕೇಳಿ ಅಚ್ಚರಿಯಿಂದ ‘ಗುರುಗಳೇ, ನೀವು ಅದೇನೇನು ಕಲಿತಿದಿರಿ ಅನ್ನೋದೇ ನಂಗಶ್ಚಾರ್ಯ’ ಅಂತಂದ.

ಬೆಳಗ್ಗೆ ಹೋಗೊವಾಗಲೇ ದೂರ ಅನ್ನಿಸುತ್ತಿದ್ದ ದಾರಿ ಸಂಜೆ ಕ್ಯಾಲಿಗ್ರಫಿ ಪಾಠಕ್ಕೆ ಹೋಗಬೇಕಲ್ಲ ಅನ್ನೋ ಕಾರಣಕ್ಕೆ ಮಧ್ಯಾಹ್ನ ಇನ್ನೂ ಮೂರುಪಟ್ಟು ಉದ್ದವಾಗಿಬಿಟ್ಟಿದೆ ಅನ್ನಿಸೋದು. ನಮ್ಮಪ್ಪನಿಗೆ ಕ್ಯಾಲಿಗ್ರಫಿ ಅಂದರೆ ಬಹಳ ಇಷ್ಟ. ನಮ್ಮ ಮನೆಯ ಗೋಡೆಗಳ ಮೇಲೆ ಆಗಾಗ ಕ್ಯಾಲಿಗ್ರಫಿಯ ಬರಹಗಳ ಸುರಳಿಗಳನ್ನ ಅಪ್ಪ ತೂಗುಹಾಕುತ್ತಿದ್ದರು.

ಕಯಾಮನಿಗೆ ಹಾಗೇ ಅನ್ನಿಸಿದ್ದರಲ್ಲಿ ಅಚ್ಚರಿಯೇನಿಲ್ಲ. ಅವನು ಸ್ಯಾನ್ ಜ್ಯುರೋದ ಸ್ಕ್ರಿಪ್ಟ್ ಅನ್ನು ಓದುತ್ತಿರಬೇಕಾದರೆ ಅವನಿಗೆ ಕೊಟ್ಟಿದ್ದ “wait behind the stable” ಅನ್ನೋ ಸಾಲಿನಲ್ಲಿದ್ದ “stable” ಅನ್ನೋ ಪದವನ್ನ ಮತ್ತೊಂದು ಪಾತ್ರಕ್ಕೆ ಕೊಟ್ಟಿರೋ ಸೂಚನೆ ಅಂದುಕೊಂಡು “wait behind the outhouse” ಅಂತ ಓದಿದ್ದ. ಆದರೂ ನಾನವನಿಗೆ 1962ರ ಆ ಚಿತ್ರದಲ್ಲಿ ಪ್ರಮುಖ ಪಾತ್ರವನ್ನೇ ಕೊಟ್ಟಿದ್ದೆ. ಮತ್ತೆ Red Beard (1965)ರ ಚಿತ್ರದಲ್ಲಿ ಅವನಿಂದ ಪಾತ್ರ ಮಾಡಿಸಿದ್ದೆ. ಆದರೆ ಈಗ ನಿಜ ಹೇಳಿಬಿಡ್ತೀನಿ. ಅದು ಹನ್ಶಿಮ್ ದೇವಾಲಯದಲ್ಲಿದ್ದ ಪದ್ಯವಾಗಿದ್ದರಿಂದಲೇ ನಂಗೆ ಅದನ್ನ ಓದಲು ಸಾಧ್ಯವಾದದ್ದು. ಅದನ್ನ ಬಿಟ್ಟು ಬೇರಾವುದೇ ಚೀನಿ ಪದ್ಯ ಓದಲು ಕೊಟ್ಟರೆ ತಡವರಿಸದೆ ಓದಲು ಸಾಧ್ಯವಾಗುವುದಿಲ್ಲ.

ಹಾಗೇ ಗೋಡೆಗೆ ತೂಗುಹಾಕುತ್ತಿದ್ದ ಸುರುಳಿಗಳಲ್ಲಿ ನಮ್ಮಪ್ಪನಿಗೆ ಇಷ್ಟವಾಗಿದ್ದ ಮತ್ತೊಂದು ಪದ್ಯದ ಕೆಲವು ಸಾಲುಗಳು ನೆನಪಿವೆ:
For your sword, use the full moon Blue Dragon Blade
For your study, read the Tso commentary on the spring and autumn annals.
ಈ ಸಾಲುಗಳು ನಂಗೆ ಅಷ್ಟೇನೂ ಇಂಟರೆಸ್ಟಿಂಗ್ ಅನ್ನಿಸಿರಲಿಲ್ಲ.

ಓ! ಮತ್ತೆ ವಿಷಯ ಬಿಟ್ಟು ಬೇರೇನೋ ಹೇಳಲು ಶುರುಮಾಡಿದೆ. ನಂಗರ್ಥವಾಗದಿದ್ದ ವಿಷಯ ಏನಪ್ಪ ಅಂದ್ರೆ ಕ್ಯಾಲಿಗ್ರಫಿಯನ್ನ ಅಷ್ಟೊಂದು ಇಷ್ಟಪಡುತ್ತಿದ್ದ ನಮ್ಮಪ್ಪ ಅಂತಹ ಮೇಷ್ಟ್ರ ಹತ್ತಿರ ನನ್ನ ಕ್ಯಾಲಿಗ್ರಫಿ ಕಲಿಯೋಕೆ ಯಾಕೆ ಕಳಿಸಿದರು ಅಂತ. ಬಹುಶಃ ಆ ಮೇಷ್ಟ್ರ ಶಾಲೆ ನಮ್ಮ ಮನೆಯ ಹತ್ತಿರವಿತ್ತು ಮತ್ತು ನಮ್ಮಣ್ಣ ಅಲ್ಲಿಗೆ ಕಲಿಯೋಕೆ ಹೋಗುತ್ತಿದ್ದ ಅಂತಿರಬಹುದು. ಅಪ್ಪ ನನ್ನ ಅಲ್ಲಿಗೆ ಸೇರಿಸಲು ಬಂದಾಗ ಆ ಮೇಷ್ಟ್ರು ನಮ್ಮಣ್ಣನ ಬಗ್ಗೆ ವಿಚಾರಿಸಿ ಹೆಚ್ಚಿನ ಪಾಠಗಳನ್ನು ಕಲಿಯಲು ಅವನನ್ನು ಮತ್ತೆ ಕಳಿಸಿ ಅಂತ ಹೇಳಿದರು. ನನ್ನಣ್ಣ ಆ ಶಾಲೆಯ ನಿಪುಣ ವಿದ್ಯಾರ್ಥಿಗಳಲ್ಲೊಬ್ಬನಾಗಿದ್ದ.

ಆದರೆ ನನಗೆ ಆ ಮೇಷ್ಟ್ರ ಕ್ಯಾಲಿಗ್ರಫಿಯಲ್ಲಿ ಇಂಟರೆಸ್ಟಿಂಗ್ ಅನ್ನಿಸುವಂಥದ್ದು ಏನೂ ಕಾಣಿಸಲೇ ಇಲ್ಲ. ಆತ ಬಹಳ ಕಟ್ಟುನಿಟ್ಟಿನ ಮನುಷ್ಯ. ನನಗೆ ಆತನ ಬರವಣಿಗೆಯಲ್ಲಿ ರುಚಿಯಾಗಲಿ ಸುವಾಸನೆಯಾಗಲಿ ಕಾಣಿಸಲಿಲ್ಲ. ಅವು ಕೇವಲ ಪುಸ್ತಕದಲ್ಲಿ ಪ್ರಿಂಟಾಗಿದ್ದ ಅಕ್ಷರಗಳ ಹಾಗೆ ಕಾಣುತ್ತಿತ್ತು. ಅಪ್ಪ ಕಲಿಯಲೇಬೇಕು ಅಂತ ಹೇಳಿದ್ದರಲ್ಲ ಹಾಗಾಗಿ ದಿನವೂ ಅವರ ಶಾಲೆಗೆ ಹೋಗಿ ಅವರ ಕ್ಯಾಲಿಗ್ರಫಿಯ ಶೈಲಿಯನ್ನು ಕಲಿಯಲು ಶುರುಮಾಡಿದೆ. ನಮ್ಮಪ್ಪ ಮತ್ತು ಆ ಕ್ಯಾಲಿಗ್ರಫಿ ಮೇಷ್ಟ್ರು ಇಬ್ಬರೂ ಮೀಸೆ ಬಿಟ್ಟಿದ್ದರು. ಅದು ಮೆಜಿ ಯುಗದ ಫ್ಯಾಶನ್ ಆಗಿತ್ತು. ನಮ್ಮಪ್ಪ ಆ ಯುಗದ ಹಿರಿಯರಂತೆ ಗಡ್ಡ ಮತ್ತು ಮೀಸೆ ಬೆಳೆಸಿಕೊಂಡಿದ್ದರು. ಕ್ಯಾಲಿಗ್ರಫಿ ಮೇಷ್ಟ್ರು ಆ ಯುಗದ ದುರುಳ ಅಧಿಕಾರಶಾಹಿ ವರ್ಗದವರ ರೀತಿ ಮೀಸೆ ಮಾತ್ರ ಬೆಳೆಸಿದ್ದರು.

ನನಗೆ ಆತನ ಬರವಣಿಗೆಯಲ್ಲಿ ರುಚಿಯಾಗಲಿ ಸುವಾಸನೆಯಾಗಲಿ ಕಾಣಿಸಲಿಲ್ಲ. ಅವು ಕೇವಲ ಪುಸ್ತಕದಲ್ಲಿ ಪ್ರಿಂಟಾಗಿದ್ದ ಅಕ್ಷರಗಳ ಹಾಗೆ ಕಾಣುತ್ತಿತ್ತು. ಅಪ್ಪ ಕಲಿಯಲೇಬೇಕು ಅಂತ ಹೇಳಿದ್ದರಲ್ಲ ಹಾಗಾಗಿ ದಿನವೂ ಅವರ ಶಾಲೆಗೆ ಹೋಗಿ ಅವರ ಕ್ಯಾಲಿಗ್ರಫಿಯ ಶೈಲಿಯನ್ನು ಕಲಿಯಲು ಶುರುಮಾಡಿದೆ.

ಅವರು ಕೂರುತ್ತಿದ್ದ ಜಾಗದ ಹಿಂಬದಿಯಲ್ಲಿ ಉದ್ಯಾನವಿತ್ತು. ನಮಗದು ಕಾಣುತ್ತಿತ್ತು. ಉದ್ಯಾನದಲ್ಲಿ ಸಾಲಾಗಿ ಜೋಡಿಸಿದ್ದ ಕಪಾಟುಗಳಿದ್ದವು. ಅವುಗಳಲ್ಲಿ ಬೊನ್ಸಾಯ್ ಗಿಡಗಳ ಕುಂಡಗಳನ್ನು ಜೋಡಿಸಿಡಲಾಗಿತ್ತು. ಅದನ್ನು ನೋಡಿದಾಗೆಲ್ಲ ನನಗೆ ಅಲ್ಲಿದ್ದ ವಿದ್ಯಾರ್ಥಿಗಳೆಲ್ಲ ಆ ಬೊನ್ಸಾಯ್ ಗಿಡಗಳಂತೆ ಅನ್ನಿಸುತ್ತಿತ್ತು. ವಿದ್ಯಾರ್ಥಿಗಳಿಗೆ ತಾವು ಬರೆದದ್ದು ಚೆನ್ನಾಗಿದೆ ಅನ್ನಿಸಿದಾಗ ಮೇಷ್ಟ್ರಿಗೆ ತೋರಿಸುತ್ತಿದ್ದರು. ಆ ಮೇಷ್ಟ್ರು ಬ್ರಷ್ಷನ್ನು ಕೆಂಪು ಇಂಕಿನಲ್ಲಿ ಅದ್ದಿಕೊಂಡು ವಿದ್ಯಾರ್ಥಿಗಳು ಬರೆದಿರುತ್ತಿದ್ದ ಲಿಪಿಯ ಗೆರೆಗಳಲ್ಲಿ ತನಗೆ ಸರಿಯಿಲ್ಲ ಅನ್ನಿಸಿದ್ದನ್ನು ತಿದ್ದುತ್ತಿದ್ದರು. ಇದು ಮತ್ತೆ ಮತ್ತೆ ಪುನರಾವರ್ತನೆ ಆಗುತ್ತಿತ್ತು. ಕಡೆಗೆ ಮೇಷ್ಟ್ರಿಗೆ ವಿದ್ಯಾರ್ಥಿ ಬರೆದದ್ದು ಸರಿಯಾಗಿದೆ ಅನ್ನಿಸಿದಾಗ ಅವನು ಬರೆದಿರುವುದರ ಮೇಲೆ ನೀಲಿ ಬಣ್ಣದ ಮುದ್ರೆ ಹಾಕುತ್ತಿದ್ದರು. ಅದಕ್ಕೆ ಎಲ್ಲರೂ ಅದನ್ನು ನೀಲಿ ಮುದ್ರೆ ಅಂತ ಕರೀತಿದ್ದರು. ಆ ಮುದ್ರೆಯ ಮೇಲೆ ಹಳೆಕಾಲದ ಬರಹವಿತ್ತು. ಹಾಗಾಗಿ ಅದೇನು ಬರೆದಿದ್ದರು ಅಂತ ನಂಗೆ ಓದಲು ಬರುತ್ತಿರಲಿಲ್ಲ. ಆ ಮುದ್ರೆ ಬಿತ್ತು ಅಂದರೆ ನೀನಿನ್ನು ಮನೆಗೆ ಹೋಗಬಹುದು ಅಂತರ್ಥ. ನನಗೆ ಆದಷ್ಟು ಬೇಗ ತಚಿಕಾವ ಅವರ ಮನೆಗೆ ಹೋಗುವುದಷ್ಟೇ ಮುಖ್ಯವಾಗಿತ್ತು. ಹಾಗಾಗಿ ಏಕಾಗ್ರತೆಯಿಂದ ಮೇಷ್ಟ್ರು ಏನು ಬರೆದಿರುತ್ತಿದ್ದರೋ ಅದನ್ನು ಬರೆಯುತ್ತಿದ್ದೆ. ಆದರೆ ನಮಗೆ ಇಷ್ಟವಿಲ್ಲದೆ ಇರುವುದನ್ನು ಪ್ರೀತಿಸಲು ಸಾಧ್ಯವಿಲ್ಲ.

ಒಂದಾರು ತಿಂಗಳು ಕಳೆದ ಮೇಲೆ ಕ್ಯಾಲಿಗ್ರಫಿ ತರಗತಿಯನ್ನು ಬಿಟ್ಟುಬಿಡಲೇ ಅಂತ ಅಪ್ಪನ ಹತ್ತಿರ ಕೇಳಿದೆ. ನಮ್ಮಣ್ಣ ಸಹಾಯ ಮಾಡಿದ್ದರಿಂದ ಅಂತೂ ಕ್ಯಾಲಿಗ್ರಫಿ ಬಿಡಲು ಅಪ್ಪ ಒಪ್ಪಿಕೊಂಡರು. ಅಣ್ಣ ಏನು ಹೇಳಿದ್ದನೋ ಅದು ನೆನಪಿಲ್ಲ. ಆದರೆ ಅವನು ನಂಗೆ ಆ ಮೇಷ್ಟ್ರ ಬರವಣಿಗೆಯ ಶೈಲಿ ಇಷ್ಟವಾಗದೇ ಇರುವುದನ್ನ ಅಪ್ಪನಿಗೆ ಸಕಾರಣ ಸಹಿತವಾಗಿ ಮನದಟ್ಟು ಮಾಡಿಸಿದ. ಅವನು ಹೇಳುತ್ತಿರುವಾಗ ಅವನು ಬೇರೆ ಯಾರ ಬಗ್ಗೆಯೋ ಹೇಳುತ್ತಿದ್ದಾನೇನೋ ಅನ್ನೋ ಹಾಗೆ ತನ್ಮಯನಾಗಿ ಕೂತು ಕೇಳಿಸಿಕೊಂಡಿದ್ದೆ. ಕ್ಯಾಲಿಗ್ರಫಿ ತರಗತಿಗಳನ್ನ ಬಿಟ್ಟಾಗ ನಾನಿನ್ನೂ ನಾಲ್ಕಕ್ಷರದ ಪದ್ಯಗಳನ್ನ ದೊಡ್ಡ ದೊಡ್ಡ ಅಕ್ಷರಗಳಲ್ಲಿ ದೊಡ್ಡ ಹಾಳೆಗಳ ಮೇಲೆ ಬರೆಯುವುದನ್ನು ಕಲಿಯುತಿದ್ದೆ. ಈವತ್ತಿಗೂ ಆ ರೀತಿಯಲ್ಲಿ ನಾನು ಚೆನ್ನಾಗಿ ಬರೆಯಬಲ್ಲೆ. ಆದರೆ ಸಣ್ಣ ಅಕ್ಷರಗಳಲ್ಲಿ ಅಥವ ವಿವಿಧ ವಿನ್ಯಾಸದ ಅಕ್ಷರಗಳಲ್ಲಿ ಬರೆಯಲು ಬರುವುದಿಲ್ಲ.

ಹಲವು ವರ್ಷಗಳ ನಂತರ ಚಿತ್ರಜಗತ್ತಿನ ನನ್ನೊಬ್ಬ ಸಹದ್ಯೋಗಿ “ ಕುರೊ ಸಾನ್ ಬರವಣಿಗೆ ಚಿತ್ರಗಳ ಹಾಗಿರುತ್ತೆ” ಅಂದಿದ್ದ.

(ಮುಂದುವರಿಯುವುದು)