ಸರಳ ವಡ್ಡಾರಧನೆ ಎಂಬೊಂದು ಕೈದೀವಿಗೆ
ವಡ್ಡಾರಾಧನೆಯಲ್ಲಿ ಬರುವ ಜನಜೀವನ, ಜಾತಿವ್ಯವಸ್ಥೆ, ಸಮಾಜದಲ್ಲಿ ಸ್ತ್ರೀಯರ ಸ್ಥಾನಮಾನ, ಗ್ರಾಮ ಮತ್ತು ಪಟ್ಟಣದ ವರ್ಣನೆ, ತಿಂಡಿತಿನಿಸುಗಳು, ಬಹು ಮಹಡಿ ಕಟ್ಟಡದ ಬೀದಿಗಳು, ವೇಶ್ಯೆಯರ ಬೀದಿಯವರ್ಣನೆ, ಅಂಗಡಿ ಮುಂಗಟ್ಟುಗಳು ಇವೆಲ್ಲಾ ಆ ಕಾಲದ ಒಂದು ವ್ಯವಸ್ಥೆಯನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತವೆ. ಇವುಗಳನ್ನೆಲ್ಲಾ ಅನುವಾದಿಸಿರುವಲ್ಲಿ ಮೂಲದ ಶಬ್ಧದ ಮಿತಿಯನ್ನು ದಾಟದಿರುವದನ್ನು ಕಾಣಬಹುದಾಗಿದೆ. ಡಾ. ಕಬ್ಬಿನಾಲೆ ವಸಂತ ಭಾರದ್ವಾಜರು ಇಲ್ಲಿ ಭಾಷೆಯನ್ನು ದುಡಿಸಿಕೊಳ್ಳುವ ರೀತಿ ಮನೋಜ್ಞವಾಗಿದೆ ಎನ್ನುತ್ತ ಸರಳ ವಡ್ಡಾರಧನೆ ಕುರಿತ ಅನಿಸಿಕೆಯನ್ನು ನಾರಾಯಣ ಯಾಜಿ ಅವರು ಇಲ್ಲಿ ಪ್ರಸ್ತುತಪಡಿಸಿದ್ದಾರೆ.
ಹೊಸ ತಲೆಮಾರಿನ ಕಥೆಗಳು
‘ಕೊನೇ ಊಟ’ ಈ ಸಂಕಲನದ ಅತ್ಯಂತ ಮುಖ್ಯವಾದ ಅಷ್ಟೇ ಹೃದಯಸ್ಪರ್ಶಿ ಕಥೆ. ಸಂಯುಕ್ತ ಸಂಸ್ಥಾನಗಳ ನೇವಾರ್ಡ ರಾಜ್ಯದಲ್ಲಿ ಪೂರ್ವಕ್ಕಿರುವ ಕುಪ್ರಸಿದ್ಧ ಕಾರಾಗೃಹ ಈಲಿಯ ಜೈಲು. ಜೈಲಿನ ಸುತ್ತಲಿನ ಗೋಡೆಯನ್ನು ಹರಿತವಾದ ರೇಜರ್ ಬ್ಲೇಡುಗಳಿಂದ ನಿರ್ಮಿಸಿದ್ದಾರೆಂದರೆ ಒಳಗಡೆ ಇನ್ನೆಷ್ಟು ಭಯಾನಕ ಯಾತನಾಮಯ ದಬ್ಬಾಳಿಕೆ ನಡೆದಿರುತ್ತದೆಯೆಂಬುದು ಕೇವಲ ಊಹೆಗೆ ಬಿಟ್ಟ ವಿಷಯ, ಯಾವ ಕೈದಿಯೂ ಇಲ್ಲಿಂದ ಜೀವಂತ ಬಿಡುಗಡೆಯಾಗಿ ಹೊರಗೆ ಬಂದಿಲ್ಲ ಅಥವಾ ಗೋಡೆ ಜಿಗಿದು ಪಾರಾಗಿ ಓಡಿಹೋಗಿಲ್ಲ..
ಕಾವ್ಯಾ ಕಡಮೆ ಕಥಾ ಸಂಕಲನ “ಮಾಕೋನ ಏಕಾಂತ”ದ ಕುರಿತು ವಿಶ್ಲೇಷಣೆ ಬರೆದಿದ್ದಾರೆ ವ್ಯಾಸ ದೇಶಪಾಂಡೆ
ಪ್ರಗತಿಶೀಲತೆಯ ಪ್ರಬಲ ಧ್ವನಿ ‘ಕಾರಾವಾನ್’
ರೈಲಿನಲ್ಲಿ ಪ್ರಯಾಣಿಸುವಾಗ ನಿರೂಪಕನ ಕಣ್ಣಿಗೆ ಬಿದ್ದ ಸಂಸಾರವನ್ನು ‘ಕಣ್ಣೀರ ಸಂಸಾರ’ ಎಂದೇ ಬಿಂಬಿಸುವುದರ ಮೂಲಕ ಅಂದಿನ ವಾಸ್ತವ ಪ್ರಪಂಚವನ್ನು ಓದುಗರಿಗೆ ಅರ್ಥೈಸಲು ಈ ಕೃತಿಯು ಪ್ರಯತ್ನಿಸುತ್ತದೆ. ಸ್ವಾತಂತ್ರ್ಯ ಚಳವಳಿಯ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಬ್ರಿಟಿಷರಿಂದ ಶಿಕ್ಷೆಗೊಳಗಾಗಿ, ಆರು ತಿಂಗಳುಗಳನ್ನು ಹಿಂಡಲಗ ಸೆರೆಮನೆಯಲ್ಲಿ ಕಳೆದು, ಅಲ್ಲಿಂದ ತಿರುಗಿ ರೈಲಿನಲ್ಲಿ ತಮ್ಮೂರಿಗೆ ಬರುವ ಹಾದಿಯನ್ನೇ ಲೇಖಕರು ‘ಕಾರವಾನ್’ ಕಥನದ ಅನಾವರಣಕ್ಕೆ ಬಳಸಿಕೊಂಡಿದ್ದಾರೆ. ಬಸವರಾಜ ಕಟ್ಟೀಮನಿಯವರ ಕಾರವಾನ್ ಕತೆಯ ಕುರಿತು ಸುಮಾವೀಣಾ ಅವರ ಬರಹ ಇಲ್ಲಿದೆ.
ಮಹಿಳಾ ಜನಪದ ಸಾಹಿತ್ಯ: ಚರಿತ್ರೀಕರಣದ ಸವಾಲು
ಜನಪದ ಸಾಹಿತ್ಯ ಅಧ್ಯಯನಗಳು ನಡೆದದ್ದು ಮೌಖಿಕ ಮೂಲದಲ್ಲಿದ್ದ ಜನಪದ ಸಾಹಿತ್ಯ ಬರವಣಿಗೆಯಲ್ಲಿ ಘನೀಕರಿಸಿದಾಗಿನಿಂದ, ಜನಪದ ಸಾಹಿತ್ಯವು ಹೀಗೆ ಬರವಣಿಗೆಯಲ್ಲಿ ಘನೀಕರಿಸುವಾಗ ಅದು ಅನೇಕ ಮಾರ್ಪಾಡುಗಳಿಗೆ ಒಳಗಾಗುತ್ತದೆ. ಜನಪದ ಸಾಹಿತ್ಯದಲ್ಲಿ ಉಂಟಾಗುವ ಇಂತಹ ಮಾರ್ಪಾಡುಗಳನ್ನು ನಾರಾಯಣ ಕೆ.ವಿ. ಅವರು ನಾಲ್ಕು ಮಾದರಿಗಳಲ್ಲಿ ಗುರುತಿಸುತ್ತಾರೆ. ಅವುಗಳಲ್ಲಿ ಮೊದಲನೆಯದು “ಇಲ್ಲದ ಮೌಖಿಕ ಸಂಕಥನವನ್ನು ಇದೆ ಎಂದು ಭ್ರಮೆ ಹುಟ್ಟಿಸುವ ರೀತಿಯಲ್ಲಿ ರಚಿಸಿಕೊಟ್ಟ ದಾಖಲೆಗಳು ನಮಗೆ ಸಿಗುತ್ತವೆ.
ಡಾ.ಶೈಲಜ ಇಂ.ಹಿರೇಮಠ ಬರೆದ “ನಿರೂಪಣೆಯಾಚೆಗೆ (ಜನಪದ ಸಾಹಿತ್ಯ ಮತ್ತು ಮಹಿಳೆ)” ಪುಸ್ತಕದ ಒಂದು ಬರಹ ನಿಮ್ಮ ಓದಿಗೆ
ಈ ಮಳೆಗಾಲ ನಮ್ಮದಲ್ಲ…
ಚಲಂ ಕವಿತೆಗಳ ಸಾಂಗತ್ಯ ಕಡಲ ಮೇಲಿನ ಹಾದಿ. ಅನುಭಾವವನ್ನು ಹುಟ್ಟುಹಾಕುವ ನೀರ ಮೇಲಿನ ಪಯಣ. ಒಮ್ಮೆ ಇದು ಆರಂಭವಾದರೆ ದಿಕ್ಸೂಚಿಯಿಂದ ದಿಕ್ಕನ್ನು ತಿಳಿಯಬೇಕೆ ಹೊರತು ಕಣ್ಣಳತೆಗೆ ನಮಗೆ ಯಾವ ಮಾಹಿತಿಯೂ ದಕ್ಕುವುದಿಲ್ಲ. ಸ್ವಭಾವತಃ ವಾಚಾಳಿಯಲ್ಲದ ಚಲಂ ಅಷ್ಟೇನೂ ಔಟ್ಗೋಯಿಂಗ್ ಅಲ್ಲದ ಅಂತರ್ಮುಖಿ. ಅಂತೆಯೇ ಅವರ ಕವಿತೆಗಳೂ.ಕಡಲು ದಡಕ್ಕನೆ ತಂದು ಅಪ್ಪಳಿಸಿದ ಕಪ್ಪೆಚಿಪ್ಪುಗಳಲ್ಲ ಇಲ್ಲಿನ ಕವಿತೆಗಳು. ತಣ್ಣಗೆ ಹರಿವ ನದಿಯೊಳಗೆ ನುರಿದು ಅವಾಗೇ ನುಣ್ಣಗಾದ ನಯಸ್ಸು ಕಲ್ಲಿನಂತವು.
ಚಲಂ ಹಾಡ್ಲಹಳ್ಳಿಯವರ “ಈ ಮಳೆಗಾಲ ನಮ್ಮದಲ್ಲ” ಕವನ ಸಂಕಲನದ ಕುರಿತು ದಯಾ ಗಂಗನಘಟ್ಟ ಬರಹ
ನೋವಿನ ಕತೆಗಳ ವೈಚಾರಿಕ ನಿರೂಪಣೆ
ವೇಶ್ಯಾವಟಿಕೆ ಎಂಬ ನೋವಿನ ಲೋಕದ ಕತೆಗಳನ್ನು ಹೇಳಿದಷ್ಟೂ ಮುಗಿಯದು. ಕಂಡಷ್ಟೂ ಮುಗಿಯದು. ಅಂತಹ ಲೋಕದಲ್ಲಿ ಒಂದಿಷ್ಟು ಸಂಚರಿಸಿ ದೀರ್ಘವಾದ ಕ್ಷೇತ್ರಕಾರ್ಯವನ್ನು ಮಾಡಿದ ಹಿರಿಯ ಲೇಖಕಿ ಬಿ.ಎಂ. ರೋಹಿಣಿಯವರು ಇತ್ತೀಚೆಗೆ ಪ್ರಕಟಿಸಿದ ಪುಸ್ತಕ ‘ವೇಶ್ಯಾವಟಿಕೆಯ ಕಥೆ-ವ್ಯಥೆ’. ವೇಶ್ಯೆಯರ ಪರಿಸ್ಥಿತಿಗಳಿಗೆ ಕಾರಣವಾಗುವ ಪುರುಷವರ್ಗದೆಡೆಗೆ ಪ್ರಖರವಾದ ಸಿಟ್ಟನ್ನು ಒಡಲಿನಲ್ಲಿಟ್ಟುಕೊಂಡು ಅವರು ಈ ಪುಸ್ತಕವನ್ನು ಸಣ್ಣದೊಂದು ವಿಸ್ಮಯ ಮತ್ತು ತುಂಬಾ ಆತಂಕದೊಂದಿಗೆ ಬರೆದಿದ್ದಾರೆ. ಈ ಪುಸ್ತಕದ ಕುರಿತು ತಮ್ಮ ಅನಿಸಿಕೆಯನ್ನು ಇಲ್ಲಿಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ.
ಚತುರೋಕ್ತಿಯಿಂದ ಸಹೃದಯತೆಯ ಒಡಲನ್ನು ತೆರೆದಿಟ್ಟ ವ್ಯಕ್ತಿಚಿತ್ರಣ
ಎಮ್ ಎ ಹೆಗಡೆಯವರೆಂದೇ ಸಮಾಜದಲ್ಲಿ ಪ್ರಸಿದ್ಧರಾದ ಹೆಗಡೆಯವರಲ್ಲಿ ಮಹಾಬಲನೋರ್ವ ಇದ್ದಾನೆ ಎನ್ನುವದನ್ನು ಈ ಪುಸ್ತಕದಲ್ಲಿ ರಾಜಶೇಖರ ಹೆಗಡೆಯವರು ಗುರುತಿಸುತ್ತಾರೆ. ಜೀವನದಲ್ಲಿಯೂ ಹಾಗೇ ಅಪರಿಚಿತರಂತೇ ಕಾಣುತ್ತಾರೆ. ನಾಸ್ತಿಕರಂತೆ ತೋರುತ್ತಾರೆ. ಆದರೆ ಗರುಡ ಪುರಾಣವನ್ನು ವಾಚಿಸಿ ತಾಯಿಯ ಔರ್ಧದೈಹಿಕ ಕ್ರಿಯೆಗಳನ್ನು ನೆರವೇರಿಸುತ್ತಾರೆ. ಕುಟುಂಬ ಸಮೇತ ಕಾಶಿಯಾತ್ರೆಗೆ ಹೋಗುತ್ತಾರೆ. ಸಂಕೀರ್ಣವೆನಿಸಿಕೊಂಡ ವ್ಯಕ್ತಿತ್ವದೊಳಗೆ ತಮ್ಮವರೆನ್ನುವ ಭಾವನೆಯಿದೆ.
ರಾಜಶೇಖರ ಹೆಗಡೆ ಜೋಗಿನ್ಮನೆಯವರು ಬರೆದ “ಅಣ್ಣ ಮಹಾಬಲ – ಎಂ ಎ ಹೆಗಡೆಯವರ ಜೀವನ ಭಾವನ ಸಾಧನ” ಕೃತಿಯ ಕುರಿತು ನಾರಾಯಣ ಯಾಜಿ ಬರಹ
ಹೂ ನೋಡಿ ಗಿಡದ ಪರೀಕ್ಷೆ
ಹಕ್ಕಿ ಗರಿಗಳ ರಮ್ಯಲೋಕವನ್ನು ಚಿತ್ರಿಸುವ ‘ಹಕ್ಕಿಪುಚ್ಚವೆನ್ನುವ ಬೆಚ್ಚಾನೆ ತಾವು’ ಪ್ರಬಂಧ ಹಕ್ಕಿಪುಕ್ಕವೊಂದು ಹಾರಿಬಂದು, ಪ್ರಾರ್ಥನೆಗೆ ನಿಂತಿರುವ ಮಗುವಿನ ಕೈ ಸೇರಿ, ಆ ಮಗುವಿನ ಮುಖದಲ್ಲಿ ಮಂದಹಾಸ ಮೂಡಿಸುವ ಪ್ರಸನ್ನಚಿತ್ರದೊಂದಿಗೆ ಆರಂಭವಾಗುತ್ತದೆ. ಪುಕ್ಕ ಹಿಡಿದ ನಗುಮುಖದ ಮಗುವಿನ ಚಿತ್ರದೊಂದಿಗೆ ದ.ರಾ. ಬೇಂದ್ರೆ ಅವರ ‘ಗರಿ’ ಕವಿತೆಯನ್ನು ನೆನಪಿಸಿಕೊಳ್ಳಬೇಕು. ‘ಹಾರಲೆಂದು ಹುಟ್ಟಿದ ಹಕ್ಕಿ ಮೈಯ ಬದುಕು’ ಎಂದು ಕವಿ ಉದ್ಗರಿಸುವ, ಪುಕ್ಕದ ಮೂಲಕ ಹಕ್ಕಿಯ ಬದುಕಿನ ಘನತೆಯನ್ನು ಸೂಚಿಸುವ ‘ಗರಿ’ ಬೇಂದ್ರೆಯವರ ಅದ್ಭುತ ಕವಿತೆಗಳಲ್ಲೊಂದು. ಆ ಕವಿತೆ ಕಾಣಿಸುವ ಹಕ್ಕಿಯ ಬದುಕಿನ ಘನತೆ, ಆಶಾ ಅವರ ಪ್ರಬಂಧದಲ್ಲಿ ಹಲವು ರೂಪಗಳಲ್ಲಿ ಚಿತ್ರಣಗೊಳ್ಳುತ್ತದೆ.
ಆಶಾ ಜಗದೀಶ್ ಹೊಸ ಪುಸ್ತಕ “ಕಾಣೆಯಾದವರು” ಪ್ರಬಂಧಗಳ ಸಂಕಲನಕ್ಕೆ ರಘುನಾಥ ಚ.ಹ. ಬರೆದ ಮುನ್ನುಡಿ
ಗಾಂಧಿ ಎಂಬ ಕಾಡುವ ನೆನಪು…ಕತೆಗಳಲ್ಲಿ ಮರುಹುಟ್ಟು ಪಡೆದಾಗ…
ಇಲ್ಲಿನ ಇತರ ಕತೆಗಳಲ್ಲೂ ಗಾಂಧಿಯ ಪ್ರತಿರೂಪಗಳು ಬರುತ್ತವೆ. ಇದು ಕುತೂಹಲಕಾರಿ. ಗಾಂಧಿ ಬಯಸಿದ, ಅನ್ವೇಶಿಸಿದ ಆಯಾಮಗಳಲ್ಲೆಲ್ಲಾ ಗಾಂಧಿಯನ್ನೇ ಕಾಣುವ ಒಂದು ತಾಂತ್ರಿಕ ಕೌಶಲ್ಯ ಈ ಕತೆಗಳಲ್ಲಿದೆ. ಇದೇ ಜಾಡಿನಲ್ಲಿರುವ ಗಾಂಧಿಯೊಂದಿಗೆ ಮಾತಾಡುವೆ ಮತ್ತು ಆಲದ ಮರದಲ್ಲಿ ಒಂದು ಹಕ್ಕಿ ಕತೆಗಳು ಕಥಾವಸ್ತುವಿನ ಸ್ವರೂಪ ಮತ್ತು ಶೈಲಿಯಲ್ಲಿ ಕೊಂಚ ಭಿನ್ನ. ಗಾಂಧಿ ಅನುಯಾಯಿಯ ಮಕ್ಕಳು ತಮ್ಮ ತಾಯಿ/ತಂದೆ ಪ್ರಭಾವಕ್ಕೊಳಗಾದ ಶಕ್ತಿಯನ್ನು ಮರುಭೇಟಿಮಾಡುವ, ಆ ಮೂಲಕ ಗಾಂಧಿಯನ್ನು ಮುಖಾಮುಖಿಯಾಗುವ ಪರಿಯನ್ನು ಅನಾವರಣಮಾಡುತ್ತವೆ.
ಕೆ. ನಲ್ಲತಂಬಿ ಅನುವಾದಿಸಿದ ಮಹಾತ್ಮನ ಬದುಕಿನ ಕೆಲವು ಆಯ್ದ ಕತೆಗಳ ಸಂಕಲನ “ಮತ್ತೊಂದು ರಾತ್ರಿ” ಕೃತಿಗೆ ಕೆ.ಪಿ. ಸುರೇಶ ಬರೆದ ಮುನ್ನುಡಿ