“ಬೆಡ್ಡಿನಿಂದ ಇಳಿದು ಕೋಣೆಯ ಬಾಗಿಲಿನತ್ತ ನಡೆದೆ. ರೆಟ್ಟೆಗಳಲ್ಲಿ ಉಳಿದಿದ್ದ ಎಲ್ಲಾ ಶಕ್ತಿಯಿಂದ ಭಾರೀ ಕಬ್ಬಿಣದ ಬಾಗಿಲನ್ನು ನೂಕಿ ತೆಗೆದೆ. ಹೊರಗೆ ಚುಚ್ಚುವ ಗಾಳಿ ಬೀಸುತ್ತಿತ್ತು. ವಿಶಾಲವಾದ ಕಡಲ ತೀರ. ಸುತ್ತಲು ಮರಳು. ಎಲ್ಲವೂ ಹಗೂರ. ಹಿಂದೆಂದೂ ಕಂಡಿರದ ಸಂತೋಷದ ಘಳಿಗೆ ಅದಾಗಿತ್ತು. ಒಂದೆಡೆಯಿಂದ ಜಿಗಿದು ಬರುತ್ತಿರುವ ಕುದುರೆಗಳು, ಚಿಮ್ಮುವ ಸಮುದ್ರದಲೆಗಳು, ಮತ್ತು ಈಗಷ್ಟೆ ಹುಟ್ಟಿರುವ ನಾನು. ಹತ್ತಿರಕ್ಕೆ ಬಂದ ಕುದುರೆಯೊಂದರ ಜೊತೆ ಸೇರಿ ಓಡಿದೆ.” ಪ್ರತೀಕ್ ಮುಕುಂದ ಬರೆದ ವಾರದ ಕತೆ.

 

ಮಧ್ಯಾನದ ಬಿಸಿಲು ಎಲ್ಲೆಡೆ ಮಂಕು ಕವಿಸಿತ್ತು. ಇ-ಸಿಟಿಯ ಹೆಬ್ಬಾಗಿಲ ಎದುರಿನ ಬಣ್ಣದ ಕಾರಂಜಿಯು ಪುಟಿಯುತ್ತಿತ್ತು. ಬೆಳಗ್ಗಿನ ಶಿಫ್ಟ್ ಮುಗಿಸಿ ಹೊರಬೀಳುತ್ತಿದ್ದ ಎಂಪ್ಲಾಯೀಗಳನ್ನು ಕರೆದೊಯ್ಯುಲು ಶಟಲ್ ಬಸ್ಸುಗಳು ಸಾಲಾಗಿ ಒಂದರ ಹಿಂದೆ ಒಂದು ಬಂದು ಕಾರಂಜಿಯ ಪ್ರದಕ್ಷಿಣೆ ಹಾಕಿ ಆಫೀಸ್ ಎದುರು ನಿಲ್ಲುತ್ತಿದ್ದವು. ಪುಟಿಯುತ್ತಿದ್ದ ಬಣ್ಣಬಣ್ಣದ ನೀರಿನ ಬುಗ್ಗೆಯನ್ನು ಕಂಡ ಪೋರ ತನ್ನ ಅಮ್ಮನ ಕೈ ಬಿಡಿಸಿಕೊಂಡು ಸಡಗರದಿಂದ ಅರಚುತ್ತ ಅದರೆಡೆಗೆ ಓಡಿದ. ತನ್ನ ಕೊಲೀಗಿನ ಜೊತೆ ಹರಟುತ್ತ ಚಹಾ ಕುಡಿಯುತ್ತಿದ್ದ ಅಮ್ಮ ಧಿಡೀರನೆ ಕೈತಪ್ಪಿಸಿಕೊಂಡು ಓಡಿದ ಮಗನನ್ನು ಕಂಡು ಬೆಚ್ಚಿದಳು. ಅರ್ಧ ಕುಡಿದ ಚಹಾದ ಕಪ್ಪನ್ನು ಅಲ್ಲೇ ಎಸೆದು ಎದ್ದೆನೋ ಬಿದ್ದೆನೋ ಎಂದು ರಸ್ತೆಗೆ ಓಡಿ, ಪೋರ ಇನ್ನೇನು ನೀರನ್ನು ಮುಟ್ಟಿ ಕಾರಂಜಿಯೊಳಗೆ ಹಾರುತ್ತಾನೆನ್ನುವಷ್ಟರಲ್ಲಿ ಅವನ ತೋಳುಗಳನ್ನು ಹಿಡಿದು ಬಲವಾಗಿ ಎಳೆದು, ಕೆನ್ನೆಯನ್ನು ಹಿಂಡಿ ವಾಪಸ್ಸು ಚಹಾದಂಗಡಿಯತ್ತ ಕರೆತಂದು ನಿಟ್ಟುಸಿರು ಬಿಟ್ಟಳು. ಪೋರ ಏನಾಯಿತೆಂದು ತೋಚದೆ ಮಂಕಾದ. ಅಮ್ಮ ಬಿಳುಚಿಹೋಗಿದ್ದಳು. ಅವಳ ಕೊಲೀಗ್ ಕೊಂಚ ದೂರದಲ್ಲೆ ನಿಂತು, “Is everything ok?” ಎಂದು ವಿಚಾರಿಸಿದ. ಕೆಲವೇ ನಿಮಿಶದಲ್ಲಿ ಶಟಲ್ ಬಸ್ಸುಗಳು ಹೊರಟವು. ಎಲ್ಲವೂ ಸಹಜ ಸ್ಥಿತಿಗೆ ಮರಳಿತು ಎನ್ನಬಹುದೇನೊ…

ಆಫೀಸ್ ಪಕ್ಕದ ರಸ್ತೆಯಲ್ಲಿದ್ದ ಮಲೆಯಾಳೀ ಬೇಕರಿಯ ಎದುರು ಜಸ್ಪ್ರೀತ್ನಿನಾಗಿ ಕಾಯುತ್ತಿದ್ದೆ. ಬೆಳಿಗ್ಗೆ ಆಫೀಸಿನ ರೆಸ್ಟ್ ರೂಮಿನಲ್ಲಿ ಸಿಕ್ಕ ಒಂದು ನಿರಾಳವಾದ ಕ್ಷಣದಲ್ಲಿ ಹಳೆಯ ಗೆಳೆಯ ಜಸ್ಪ್ರೀತ್ ಎದುರಾದ. “ಅರೇ ಯಾರ್! ಎಷ್ಟು ದಿನಾ ಆಗಿತ್ತು ನಿನ್ನ ನೋಡಿ! ನನಗೆ ಮಧ್ಯಾಹ್ನ ಸಿಗ್ತೀಯಾ? ಆಫೀಸ್ ಹೊರಗೆ… ಒಂದು ವಿಷಯ ಹೇಳ್ಬೇಕು” ಎಂದ. ಜಸ್ಪ್ರೀತ್ ನನ್ನ ಇಂಜಿನೀಯರಿಂಗ್ ಸಹಪಾಟಿ. ಕೆಲಸಕ್ಕೆ ಸೇರಿದಾಗ ಚಂದೀಗಡದಲ್ಲಿ ಪೋಸ್ಟಿಂಗ್ ಸಿಕ್ಕಿದರೂ ಬೆಂಗಳೂರಿನಲ್ಲೇ ಇರಬೇಕೆಂದು ಇಚ್ಛಿಸಿ ಇಲ್ಲೇ ಕೆಲಸ ಮಾಡುತ್ತಿದ್ದ.

ಸುಮಾರು ಹತ್ತು ನಿಮಿಷ ಕಾದ ಮೇಲೆ ಓಡುತ್ತಾ ಬೇಕರಿಯ ಕಡೆಗೆ ಬಂದ. “ಸಾರಿ ಯಾರ್, ಲೇಟ್ ಆಗೋಯ್ತು” ಎನ್ನುತ್ತಾ ತನ್ನ ನೀಲಿ ಬಣ್ಣದ ಪಗಡಿಯನ್ನು ಸರಿಪಡಿಸಿಕೊಂಡ.

“ನಾನು ಮದುವೆಯಾಗ್ತಾಯಿದ್ದೀನಿ!!”

“ಅರೇ! ನಿಜ್ವಾಗ್ಲು?!”

“ಹಾ ಯಾರ್… ಹೋದ ವಾರ ಫಿಕ್ಸ್ ಆಯ್ತು!”

ಜಸ್ಪ್ರೀತ್ ಬೀಗುತ್ತಲೇ ಪುಟ್ಟದೊಂದು ಆಮಂತ್ರಣ ಪತ್ರವನ್ನು ನನ್ನ ಕೈಯಲ್ಲಿಟ್ಟ. ಮುಂದಿನ ತಿಂಗಳು ಜಲಂದರ್ ನಲ್ಲಿ ಮದುವೆಯೆಂದು, ಖಂಡಿತಾ ಬರೆಬೇಕೆಂದು ಹೇಳುತ್ತಾ ಆಮಂತ್ರಣ ಪತ್ರಕ್ಕಿಂತ ಅಗಲವಾದ ಇನ್ನೊಂದು ಲಕೋಟೆಯನ್ನು ತನ್ನ ಬ್ಯಾಗಿನಿಂದ ತೆಗೆದ.

“ಆಮೇಲೆ ಇದನ್ನ ತೊಗೊ! This is for you.. Get a makeover man!” ಎಂದು ಲಕೋಟೆಯನ್ನು ನೀಡಿದ.

ಲೌಂಜಿನಲ್ಲಿದ್ದ ಪುಟ್ಟ ಕೊಳದಲ್ಲಿ ಎರಡು ಬಿಳಿಯ ತಾವರೆಗಳು ತೇಲುತ್ತಿದ್ದವು. ಸೋಫಾದ ಮೇಲೆ ಕೂತ ತಕ್ಷಣ ದುತ್ತೆಂದು ಕಂಡಿದ್ದು ಎದುರಿನ ಗೋಡೆಯ ಮೇಲೆ ಹಾಕಿದ್ದ ಬುದ್ಧನ ಪೈಂಟಿಂಗ್. ಅರ್ಧ ಗೋಡೆಗಿಂತ ಹೆಚ್ಚಿನ ಜಾಗವನ್ನು ತುಂಬಿದ್ದ ಬೃಹತ್ ಚಿತ್ರ; ಸಮಾನ್ಯವಾಗಿ ಎಲ್ಲೆಡೆ ಕಾಣುವ ಬುದ್ಧನ ಚಿತ್ರದಂತಿರಲಿಲ್ಲ. ಹಳದಿ, ಕಂದು ಬಣ್ಣದ ನಗ್ನ ಮೇಲ್ಮೈ. ಮುಖಕ್ಕಿಂತ ಉದ್ದವಾಗಿ ಜೋತು ಬಿದ್ದ ವಿಚಿತ್ರ ಕಿವಿಗಳು. ಕಿವಿಯುದ್ದಕ್ಕೂ ಇದ್ದ ರಂಧ್ರಗಳು. ಗಂಟುಗಂಟಾಗಿ ಸುತ್ತಿಕೊಂಡಿದ್ದ ಜಟೆಗಳು. ಜಟೆಗಳಿಗೆ ಬಿಡಿಸಲಾರದಂತೆ ಸುತ್ತಿಕೊಂಡಿದ್ದ ಮರದ ಎಲೆ ಹಾಗು ರೆಂಬೆಗಳು. ಸಮಾಧಾನದಿಂದ ಮುಚ್ಚಿದ ಕಣ್ಣು ಮತ್ತು ನೆಲವನ್ನು ಮುಟ್ಟಿದ ಅಜಾನುಬಾಹು ಕೈಗಳು.

“ಇ-ಸಿಟಿಯ ನಾಲ್ಕನೇ ಮೈನಿನಲ್ಲಿ ಹೊಸ ಥಾಯ್ ರೆಸ್ಟಾರೆಂಟ್ ಓಪನ್ ಆಗಿದೆ. ಅಲ್ಲಿನ ಫಿಶ್ ಲಾಕ್ಸಾ ತುಂಬಾ ಚೆನ್ನಾಗಿದೆಯಂತೆ. ಅಲ್ಲಿ ಹೋಗಿ ಊಟ ಮಾಡೋಣ”, ಎಂದು ಹೇಳಿದ. ತಕ್ಷಣ ಮಾಡಬೇಕಾದ ಕೆಲಸ ಏನೂ ಇರದಿದ್ದರಿಂದ ಒಪ್ಪಿಕೊಂಡೆ. ಇ-ಸಿಟಿಯ ಗಲ್ಲಿಗಳಲ್ಲಿ ನಡೆದು ಹೋಗ್ಗುತ್ತಿದ್ದಂತೆ ಯಾವುದೋ ಜಾಹೀರಾತಿನ ಸಂತೆಯಂತೆ ಪಂಜಾಬೀ ಢಾಭಾ, ಆಂಧ್ರಾ ಮೆಸ್ಸು, ಆಂಬೂರ್ ಬಿರಿಯಾನಿ ಹೋಟಲ್, ಕೋಲ್ಕಾತಾ ರೋಲ್ ಆಂಗಡಿ ಸಾಲಾಗಿ ಕಂಡವು. ಜಸ್ಪ್ರೀತ್ ಉತ್ಸಾಹದಿಂದ ಮಾತು ಮುಂದುವರಿಸಿದ. “ಜಲಂದರಿನ ನಿಕ್ಕೂ ಪಾರ್ಕ್ ಪಕ್ಕದಲ್ಲಿರುವ ಕಮ್ಯೂನಿಟಿ ಹಾಲಿನಲ್ಲಿ ಮದುವೆ. ಮೂರು ದಿನ. ರೋಕಾ, ಸಗಾಯಿ ಮತ್ತು ಸಂಗೀತ್. ಮೂರೂ ದಿನ ಇರ್ಬೇಕು!”

ನಾಲ್ಕನೇ ಮೈನಿನಲ್ಲಿ ಮಿನುಗುತ್ತಿರುವ ಸೀರಿಯಲ್ ಲೈಟುಗಳಿಂದ ಸಿಂಗರಿಸಿದ್ದ ಹೊಸ ಕಟ್ಟಡದ ಮೇಲೆ “ಸುವರ್ಣಭೂಮಿ ಥಾಯ್ ಕಿಚನ್” ಎಂದು ಬೋರ್ಡ್ ಹಾಕಿತ್ತು. ಒಳಗೆ ಹೋದ ಕೂಡಲೆ ಮ್ಯಾನೇಜರ್ ನಮ್ಮ ಹೆಸರನ್ನು ಬರೆದುಕೊಂಡು ಲೌಂಜಿನಲ್ಲಿ ಕೂತಿರಬೇಕೆಂದು, ಟೇಬಲ್ ಖಾಲಿಯಾದ ಕೂಡಲೆ ಕರೆಯುವುದಾಗಿ ಹೇಳಿದ. ಲೌಂಜಿನಲ್ಲಿದ್ದ ಪುಟ್ಟ ಕೊಳದಲ್ಲಿ ಎರಡು ಬಿಳಿಯ ತಾವರೆಗಳು ತೇಲುತ್ತಿದ್ದವು. ಸೋಫಾದ ಮೇಲೆ ಕೂತ ತಕ್ಷಣ ದುತ್ತೆಂದು ಕಂಡಿದ್ದು ಎದುರಿನ ಗೋಡೆಯ ಮೇಲೆ ಹಾಕಿದ್ದ ಬುದ್ಧನ ಪೈಂಟಿಂಗ್. ಅರ್ಧ ಗೋಡೆಗಿಂತ ಹೆಚ್ಚಿನ ಜಾಗವನ್ನು ತುಂಬಿದ್ದ ಬೃಹತ್ ಚಿತ್ರ; ಸಮಾನ್ಯವಾಗಿ ಎಲ್ಲೆಡೆ ಕಾಣುವ ಬುದ್ಧನ ಚಿತ್ರದಂತಿರಲಿಲ್ಲ. ಹಳದಿ, ಕಂದು ಬಣ್ಣದ ನಗ್ನ ಮೇಲ್ಮೈ. ಮುಖಕ್ಕಿಂತ ಉದ್ದವಾಗಿ ಜೋತು ಬಿದ್ದ ವಿಚಿತ್ರ ಕಿವಿಗಳು. ಕಿವಿಯುದ್ದಕ್ಕೂ ಇದ್ದ ರಂಧ್ರಗಳು. ಗಂಟುಗಂಟಾಗಿ ಸುತ್ತಿಕೊಂಡಿದ್ದ ಜಟೆಗಳು. ಜಟೆಗಳಿಗೆ ಬಿಡಿಸಲಾರದಂತೆ ಸುತ್ತಿಕೊಂಡಿದ್ದ ಮರದ ಎಲೆ ಹಾಗು ರೆಂಬೆಗಳು. ಸಮಾಧಾನದಿಂದ ಮುಚ್ಚಿದ ಕಣ್ಣು ಮತ್ತು ನೆಲವನ್ನು ಮುಟ್ಟಿದ ಅಜಾನುಬಾಹು ಕೈಗಳು. ಸಮತೋಲನವೇ ಇಲ್ಲದೆ ಬೆಳೆದಿದ್ದ ದೇಹ ಮತ್ತು ಅಂಗಾಗಳು. ಆದರೂ ವಿಕಾರವಾಗಿರಲಿಲ್ಲ.

ಟೇಬಲ್ ಖಾಲಿಯಾಯಿತೆಂದು ಒಳಗೆ ಕರೆದರು. ಕಿಟಕಿಯ ಪಕ್ಕದ ಎರಡು ಕುರ್ಚಿಯಿದ್ದ ಟೇಬಲ್ಲಿನಲ್ಲಿ ಕೂತೆವು. ಇ ಸಿಟಿಯ ಸುತ್ತಮುತ್ತಲಿಂದ ಬಂದ ಜನ ರೆಸ್ಟಾರೆಂಟಿನಲ್ಲಿ ತುಂಬಿದ್ದರು. ಕುರ್ಚಿಯ ಬೆನ್ನಿಗೆ ಬ್ಲೇಜರ್ ಹೊದ್ದಿಸಿ ಊಟ ಮಾಡುತ್ತಿದ್ದರು. ಜಸ್ಪ್ರೀತ್ ವೈಟರನ್ನು ಕರೆಯಲು ಹಿಂದೆ ತಿರುಗಿದಾಗ ಅಚ್ಚುಕಟ್ಟಾಗಿ ಸುತ್ತಿದ್ದ ಅವನ ನೀಲಿ ಪಗಡಿಯ ಹಿಂದೆ ನಾಜೂಕಾಗಿ ಹಾಕಿದ್ದ ಮೂರು ಗುಂಡು ಪಿನ್ನುಗಳು ಕಂಡವು. ಎರಡು ಫಿಶ್ ಲಾಕ್ಸಾ ಆರ್ಡರ್ ಮಾಡಿದ. “ತೆಂಗಿನ ಹಾಲು, ಕೆಂಪು ಮೆಣಸಿನಕಾಯಿ, ತುಳಸಿ ಎಲೆ, ಸಣ್ಣಗೆ ಹೆರೆದ ಶುಂಟಿ, ಬೆಳುಳ್ಳಿ, ಮೊಳಕೆ ಹೆಸರುಕಾಳು ಹಾಕಿ ಗಟ್ಟಿಯಾದ ಸೂಪ್ ಮಾಡುತ್ತಾರೆ. ಅದರೊಳಗೆ ಬೆಂದ ನೂಡಲ್ಸ್ ಹಾಕಿ ನಂತರ ಸ್ವಲ್ಪ ಉಪ್ಪು ಹಾಕಿ ಬೇಯಿಸಿದ ಬಾಸಾ ಮೀನನ್ನು ಈ ಸೂಪಿನಲ್ಲಿಹಾಕಿ ಕೊಡುತ್ತಾರೆ. ಮೊದಲು ಮೀನನ್ನು ನೂಡಲ್ಸ್ ಜೊತೆ ತಿಂದುಬಿಡಬೇಕು. ಕೊನೆಯಲ್ಲಿ ಉಳಿದ ಸೂಪನ್ನು ಕುಡಿಯಬೇಕು. ಬೌಲನ್ನೇ ಎತ್ತಿ ಕುಡಿಯಬೇಕು. ಅದು ನಿಜಕ್ಕು ಅದ್ಭುತ!” ಎಂದು ವಿವರಿಸಿದ. ಅವನ ಕಣ್ಣುಗಳು ಹೊಳೆಯುತ್ತಿತ್ತು.

ಲೌಂಜಿನಲ್ಲಿದ್ದ ಪುಟ್ಟ ಕೊಳದಲ್ಲಿ ಎರಡು ಬಿಳಿಯ ತಾವರೆಗಳು ತೇಲುತ್ತಿದ್ದವು. ಸೋಫಾದ ಮೇಲೆ ಕೂತ ತಕ್ಷಣ ದುತ್ತೆಂದು ಕಂಡಿದ್ದು ಎದುರಿನ ಗೋಡೆಯ ಮೇಲೆ ಹಾಕಿದ್ದ ಬುದ್ಧನ ಪೈಂಟಿಂಗ್. ಅರ್ಧ ಗೋಡೆಗಿಂತ ಹೆಚ್ಚಿನ ಜಾಗವನ್ನು ತುಂಬಿದ್ದ ಬೃಹತ್ ಚಿತ್ರ; ಸಮಾನ್ಯವಾಗಿ ಎಲ್ಲೆಡೆ ಕಾಣುವ ಬುದ್ಧನ ಚಿತ್ರದಂತಿರಲಿಲ್ಲ. ಹಳದಿ, ಕಂದು ಬಣ್ಣದ ನಗ್ನ ಮೇಲ್ಮೈ. ಮುಖಕ್ಕಿಂತ ಉದ್ದವಾಗಿ ಜೋತು ಬಿದ್ದ ವಿಚಿತ್ರ ಕಿವಿಗಳು. ಕಿವಿಯುದ್ದಕ್ಕೂ ಇದ್ದ ರಂಧ್ರಗಳು. ಗಂಟುಗಂಟಾಗಿ ಸುತ್ತಿಕೊಂಡಿದ್ದ ಜಟೆಗಳು.

ಲಾಕ್ಸಾ ಬಂದಮೇಲೆ ಖಾರ ಹೆಚ್ಚು ಬೇಕೆಂದು ಜಸ್ಪ್ರೀತ್ ಸ್ವಲ್ಪ ಚಿಲ್ಲಿ ಆಯಿಲ್ ತರಲು ಹೇಳಿದ. ನಾನು ಏನೂ ಮಾತಾಡದೇ ಊಟ ಮಾಡುತ್ತಿದ್ದೆ. ಸುಮಾರು ಹತ್ತು ನಿಮಿಷವಾಗಿರಬೇಕು. ಟೇಬಲ್ ಮೇಲೆ ಇಟ್ಟಿದ್ದ ಅವನ ಮೋಬೈಲ್ ಒಂದೆರೆಡು ಬಾರಿ ವೈಬ್ರೇಟಾಯಿತು. ಊಟದಲ್ಲಿ ಮೈಮರೆತಿದ್ದ ಅವನು ಮೊಬೈಲ್ ತೆಗೆದು ನೋಡಿದ. ಮೆಸೇಜ್ ಓದಿ ತಕ್ಷಣ ಕಾಲ್ ಮಾಡಿದ. ಕನೆಕ್ಟ್ ಆಗಲಿಲ್ಲವೇನೋ. ಜಸ್ಪ್ರೀತ್ ಪೆಚ್ಚಾದ. ಆಫೀಸ್ ಕಾಲಾ ಎಂದು ಕೇಳಿದಕ್ಕೆ ಉತ್ತರಿಸಲಿಲ್ಲ. ಚಡಪಡಿಸುತ್ತಾ ಎರಡು ನಿಮಿಷವಾದಮೇಲೆ ಎದ್ದು, “ಸಾರಿ ಯಾರ್.. ನಾನು ಹೊರಡಬೇಕು.. ನೀನು ನಿಧಾನಕ್ಕೆ ಊಟ ಮುಗಿಸು.. ಮದುವೆ ತಪ್ಪಿಸಬೇಡ” ಎಂದು ಹೇಳಿ ಹೊರಟುಬಿಟ್ಟ. ಚಿಲ್ಲಿ ಆಯಿಲ್, ಸೂಪ್ ಎಲ್ಲವೂ ಹಾಗೇ ಉಳಿದಿತ್ತು.

ಊಟ ಮುಗಿಸಿದ ಮೇಲೆ ತಕ್ಷಣ ಆಫೀಸಿಗೆ ಮರಳಲು ಮನಸ್ಸಾಗಲಿಲ್ಲ. ಮತ್ತೆ ಹೋಗಿ ಲೌಂಜಿನಲ್ಲಿ ಕೂತೆ. ಆಮಂತ್ರಣ ಪತ್ರದ ಜೊತೆಗಿದ್ದ ಅಗಲವಾದ ಲಕೋಟೆಯಲ್ಲಿ ಏನಿರಬಹುದೆಂದು ಕುತೂಹಲವಾಗಿ ಅದನ್ನು ಮೆಲ್ಲಗೆ ಒಡೆದೆ. ಒಂದು ತುದಿಯಿಂದ ಹರಿಯುತ್ತಿದ್ದಂತೆ ಹಳದಿ ಬಣ್ಣದ ಕಾರ್ಡ್ ಕಂಡಿತು. ಅದೊಂದು ಗಿಫ್ಟ್ ವೌಚರ್.

BODY CRAFT SPA & MASSAGE PARLOR
Men’s Grooming Therapy
Valid for one month

ಕಾರ್ಡಿನ ಹಿಂಬದಿಯಲ್ಲಿ ವಿಳಾಸವಿತ್ತು.

ರೆಸ್ಟಾರೆಂಟಿನ ಹೊರಗೆ ಹಾದು ಹೋಗುತ್ತಿದ್ದ ಆಟೋ ಒಂದನ್ನು ಕೂಗಿ ನಿಲ್ಲಿಸೇಬಿಟ್ಟೆ. ರಹೇಜಾ ಆರ್ಕೇಡ್ ಎಂದು ಹೇಳಿ ಒಳಗೆ ಕೂತೆ. ನನ್ನ ಕೊಲೀಗ್ ಶ್ರೇಯಾಗೆ ಅರ್ಜೆಂಟಾಗಿ ಒಂದು ಪರ್ಸನಲ್ ಕೆಲಸಕ್ಕಾಗಿ ಹೋಗಬೇಕಾಗಿದೆ, ಏನಾದ್ರು ವಿಷಯವಿದ್ದರೆ ಕಾಲ್ ಮಾಡು ಎಂದು ಮೆಸೇಜ್ ಕಳಿಸಿದೆ. ಮಧ್ಯಾಹ್ನದ ವೇಳೆ ಫ್ಲೈಯೊವರ್ ನಲ್ಲಿ ಯಾವ ಗಾಡಿಯೂ ಇರಲಿಲ್ಲ. ಸಾಲಗಿ ನಿಂತಿದ್ದ ಬಿಲ್ ಬೋರ್ಡುಗಳು, ಅದರೊಳಗೆ ನಗುತ್ತಿದ್ದ ಹುಡುಗಿಯರು, ಹುಡುಗರು, ಸುಖೀ ಕುಟುಂಬಗಳು, ಪ್ರಯಾಣದಲ್ಲಿ ಜೊತೆ ನೀಡಿದವು. ರಹೇಜಾ ಆರ್ಕೇಡ್ ಹತ್ತಿರ ಎಲ್ಲಿ ಹೋಗಬೇಕೆಂದು ಆಟೋದವ ಕೇಳಿದ. ಗೊತ್ತಿಲ್ಲ, ಅಲ್ಲಿ ಹೋಗಿ ಕೇಳಬೇಕೆಂದು ಹೇಳಿದೆ.

ಕೋರಮಂಗಲದ ರಹೇಜಾ ಆರ್ಕೇಡ್ ತಲುಪಿದೆವು. ಅಕ್ಕ ಪಕ್ಕ ನೋಡಿದಾಗ ಬಾಡಿಕ್ರಾಫ್ಟ್ ಸ್ಪಾ ಕಾಣಿಸಲಿಲ್ಲ. ಐದನೇ ಮೈನ್ ಹುಡುಕುತ್ತ ಮುಂದಕ್ಕೆ ಬಂದು ಬಲಕ್ಕೆ ತಿರುಗಿದಾಗ ಬಹು ಅಂತಸ್ತಿನ ಕಟ್ಟಡವೊಂದರ ಮೇಲೆ ಬಾಡಿಕ್ರಾಫ್ಟಿನ ಚಿಕ್ಕ ಬೋರ್ಡ್ ಕಾಣಿಸಿತು. ಆಟೋದವ ಹಿಂದಿರುಗುವ ದಾರಿಯಲ್ಲಿ ಗಿರಾಕಿಗಳು ಸಿಗುವುದಿಲ್ಲವೆಂದು ಇಪತ್ತು ರುಪಾಯಿ ಹೆಚ್ಚು ಕೇಳಿದ.

ರಸ್ತೆಯನ್ನು ದಾಟಿ ಕಟ್ಟಡವನ್ನು ಸಮೀಪಿಸುತ್ತಿದ್ದಂತೆ ವಿಚಿತ್ರವಾದ ಕಬ್ಬಿಣದ ಶಟರ್ ತಾನಾಗೆ ತೆರೆಯಿತು. ಕೋರಮಂಗಲಕ್ಕೆ ಬಹಳಷ್ಟು ಬಾರಿ ಬಂದಿದ್ದರೂ ಈ ಜಾಗವನ್ನು ಗಮನಿಸಿರಲಿಲ್ಲ. ನಾಲ್ಕು ಕಾರುಗಳು ದೂರದಲ್ಲಿ ನಿಂತಿದ್ದವು. ಬೆಳಕು ಕಡಿಮೆಯಿತ್ತು. ಬಾಡಿಕ್ರಾಫ್ಟ್ ಎಲ್ಲಿದೆಯೆಂದು ಹುಡುಕುತ್ತಿದ್ದಾಗ ತುಸು ದೂರದಲ್ಲಿ ಮೇಲ್ಮಹಡಿ ಕಂಡಿತು. ಆಕರ್ಷಕವಾದ ವರ್ತುಲಾಕಾರದ ಮರದ ಮೇಲ್ಮಹಡಿ. ಒಂದು ಮಹಡಿಯನ್ನು ಹತ್ತಿದ ಮೇಲೆ ಬಾಡಿಕ್ರಾಫ್ಟಿನ ಮತ್ತೊಂದು ಬೋರ್ಡ್ ಕಂಡಿತು. ಅದರಲ್ಲಿ ಹತ್ತೊಂಭತ್ತನೆಯ ಮಹಡಿಯಲ್ಲಿ ಪಾರ್ಲರ್ ಇರುವ ಸೂಚನೆಯಿತ್ತು. ಮೂಲೆಯಲ್ಲಿದ್ದ ಲಿಫ್ಟಿನೊಳಗೆ ಹೋದೆ. ಲಿಫ್ಟಿನೊಳಗೆ ನಾಲ್ಕೂ ಬದಿಯಲ್ಲಿ ಕನ್ನಡಿಗಳಿದ್ದವು, ಹಾಗು ನನ್ನದೇ ಮುಖದ ಅಸಂಖ್ಯಾತ ಅಪೂರ್ಣ ಬಿಂಬಗಳು.

ರಸ್ತೆಯನ್ನು ದಾಟಿ ಕಟ್ಟಡವನ್ನು ಸಮೀಪಿಸುತ್ತಿದ್ದಂತೆ ವಿಚಿತ್ರವಾದ ಕಬ್ಬಿಣದ ಶಟರ್ ತಾನಾಗೆ ತೆರೆಯಿತು. ಕೋರಮಂಗಲಕ್ಕೆ ಬಹಳಷ್ಟು ಬಾರಿ ಬಂದಿದ್ದರೂ ಈ ಜಾಗವನ್ನು ಗಮನಿಸಿರಲಿಲ್ಲ. ನಾಲ್ಕು ಕಾರುಗಳು ದೂರದಲ್ಲಿ ನಿಂತಿದ್ದವು. ಬೆಳಕು ಕಡಿಮೆಯಿತ್ತು. ಬಾಡಿಕ್ರಾಫ್ಟ್ ಎಲ್ಲಿದೆಯೆಂದು ಹುಡುಕುತ್ತಿದ್ದಾಗ ತುಸು ದೂರದಲ್ಲಿ ಮೇಲ್ಮಹಡಿ ಕಂಡಿತು. ಆಕರ್ಷಕವಾದ ವರ್ತುಲಾಕಾರದ ಮರದ ಮೇಲ್ಮಹಡಿ.

ಹತ್ತೊಂಭತ್ತನೆಯ ಮಹಡಿಯಲ್ಲಿ ಲಿಫ್ಟಿನ ಬಾಗಿಲು ತೆರೆದಾಗ ಎದುರಿಗೆ ಬಾಡಿಕ್ರಾಫ್ಟ್ ಪಾರ್ಲರ್ ಕಂಡಿತು. ಹೊರಗೆ ಬಂದು ಎರಡು ಹೆಜ್ಜೆ ಮುಂದಿಟ್ಟ ಕೂಡಲೆ ಮತ್ತೆ ಪಾರ್ಲರಿನ ಎರಡೂ ಬಾಗಿಲು ತಂತಾನೆ ತೆರೆದುಕೊಂಡವು. ರಿಸೆಪ್ಶನ್ನಿನಲ್ಲಿ ಯಾರೂ ಇರಲಿಲ್ಲ. ಕೌಂಟರಿನ ಮೇಲಿದ್ದ ಬ್ರೋಷರ್ಗಳನ್ನು ನೋಡುತ್ತಾ ನಿಂತೆ. ಹತ್ತು ನಿಮಿಷದ ನಂತರ ಮಹಿಳೆಯೊಬ್ಬಳು ಒಳಗಿನಿಂದ ಬಂದಳು. ಏನೂ ಮತಾಡಲಿಲ್ಲ. ನನ್ನ ಬಳಿಯಿದ್ದ ವೌಚರನ್ನು ಲಕೋಟೆಯಿಂದ ತೆಗೆದು ಅವಳಿಗೆ ಕೊಟ್ಟೆ. ಅವಳು ಅದರ ಕಡೆ ಕಣ್ಣು ಹಾಯಿಸಿ, ಸೋಫಾದ ಮೇಲೆ ಕುಳಿತುಕೊಳ್ಳುವಂತೆ ಕೈಮಾಡಿ ಪುನಃ ಒಳಗೆ ಹೋದಳು. ಅಲ್ಲೇ ಕುಳಿತೆ. ಕಿಟಕಿಗಳಿಗೆ ನೀಲಿ ಪರದೆಗಳು ಹಾಕಿದ್ದವು. ಅತ್ತಿತ್ತ ನೋಡುವಷ್ಟರಲ್ಲಿ ಅವಳು ಒಳಗಿನಿಂದ ಬಂದಳು. ನಾನು ಅವಳಿಗೆ ಕೊಟ್ಟ ವೌಚರಿನ ಹಿಂದೆ ಏನೋ ಬರೆದು ನನಗೆ ವಾಪಸ್ಸು ಕೊಟ್ಟಳು. ನಂತರ ಒಳಗಿರುವ ನಾಲ್ಕನೇ ನಂಬರ್ ಕೊಠಡಿಯಲ್ಲಿ ಕಾಯಲು ಹೇಳಿದಳು. ವೌಚರಿನ ಹಿಂದೆ “ಪ್ರಿಮಿಥ್ ಲೇಪ್ಚಾ” ಎನ್ನುವ ಹೆಸರನ್ನು ಸಣ್ಣ ಅಕ್ಷರದಲ್ಲಿ ಬರೆದಿದ್ದಳು. ಅದನ್ನು ಹಿಡಿದು ಒಳಗೆ ಹೋದೆ. ಇಟ್ಟಿಗೆ ಬಣ್ಣದ ಕಾರ್ಪೆಟ್ ಹಾಸಿದ್ದ ನೆಲ. ಮಂದ ಬೆಳಕು. ನಾಲ್ಕನೆಯ ನಂಬರಿನ ಕೊಠಡಿ ಕಾಣಲಿಲ್ಲ. ನೇರ ಹೋದಮೇಲೆ ಪ್ಯಾಸೇಜಿನ ತುದಿಯಲ್ಲಿ, ಎಡಕ್ಕೆ ಒಂದು ಕೋಣೆ ಇರುವಂತೆ ಕಂಡಿತು. ಹತ್ತಿರ ಹೋದರೆ ಕೋಣೆ ಇಲ್ಲ. ಬದಲಾಗಿ ಮತ್ತೊಂದು ವರ್ತುಲಾಕಾರದ ಮೇಲ್ಮಹಡಿ. ಮನುಷ್ಯರ ಸುಳಿವೇ ಇಲ್ಲ. ಅತ್ತಿತ್ತ ನೋಡುತ್ತಾ ಮಹಡಿ ಹತ್ತಿದೆ. ಮೇಲೆ ಹತ್ತುತಿದ್ದಂತೆ ಬೆಳಕು ಇನ್ನೂ ಕಡಿಮೆಯಾಯಿತು.

ಗಾಢವಾದ ನಿಶ್ಯಬ್ದ ಭಯ ಹುಟ್ಟಿಸುವಷ್ಟರಲ್ಲಿ ಸಣ್ಣದಾಗಿ ಹಾಕಿದ್ದ ವಯೊಲಿನ್ ಸಂಗೀತ ಕೇಳಿತು. ಇದು ಎಲ್ಲಿಂದ ಬರುತ್ತಿದೆ ಎಂದು ಹುಡುಕಲು ಪ್ರಯತ್ನಿಸಿದೆ. ಸ್ಪೀಕರ್ ಇದೆಯಾ ಎಂದು ಸುತ್ತಲೂ ನೋಡುತ್ತಿರುವಾಗ ನಾಲ್ಕನೆಯ ನಂಬರ್ ಕೊಠಡಿ ಕಂಡಿತು. ಸಂಗೀತ ಎಲ್ಲಿಂದ ಬರುತ್ತಿದೆ ಎಂದು ನಿಖರವಾಗಿ ಗೊತ್ತಾಗಲಿಲ್ಲ. ಬೇಸರವಾದರೂ ಕೊಠಡಿ ಅಂತೂ ಸಿಕ್ಕಿತೆಂದು ಕೊಂಚ ನಿರಾಳವಾಗಿ ಅದರ ಕಡೆಗೆ ನಡೆದೆ. ಮತ್ತೆ ಕೊಠಡಿಯ ಬಾಗಿಲು ತಂತಾನೆ ತೆರೆಯಿತು. ಒಳಕ್ಕೆ ನಡೆದೆ. ಅದೊಂದು ವಿಶಾಲವಾದ ಕೊಠಡಿ. ಮಧ್ಯಕ್ಕೆ ಸರಿಯಾಗಿ, ಸ್ವಲ್ಪ ಎತ್ತರವಾದ ಮಸಾಜ್ ಬೆಡ್ಡನಿರಿಸಿದ್ದರು. ಹೊರಗೆ ಕೇಳಿದ ಸಂಗೀತವೇ ಇಲ್ಲಿ ಇನ್ನು ಸ್ಫುಟವಾಗಿ ಕೇಳುತಿತ್ತು. ಒಂದು ಬದಿಯಲ್ಲಿದ್ದ ಕುರ್ಚಿಯ ಮೇಲೆ ಕುಳಿತೆ. ಎದುರಿನ ಗೋಡೆಯ ಮೇಲೆ ದೊಡ್ಡದೊಂದು ಪೈಂಟಿಂಗ್ ಕಂಡಿತು. ವಿಶಾಲವಾದ ಸಮುದ್ರ ತೀರ. ಒಂದು ಬದಿಯಿಂದ ಸ್ವಚ್ಛಂದವಾಗಿ ಓಡಿಬರುತ್ತಿರುವ ನಾಲ್ಕು ಕುದುರೆಗಳು. ಉಕ್ಕಿ ಉಕ್ಕಿ ಬರುತ್ತಿರುವ ಅಲೆಗಳು. ಹೊಳೆಯುತ್ತಿರುವ ಕಂದು ಬಣ್ಣದ ಕುದುರೆಯ ಮೈಮೇಲೆ ಚಿಮ್ಮುತ್ತಿರುವ ಅಲೆಗಳ ಉಪ್ಪು, ನೊರೆ. ಶುಭ್ರವಾದ ನೀಲಿ-ಬಿಳಿ ಆಕಾಶ.

ಬೆಡ್ಡಿನ ಹಿಂದಿನ ಮರದ ಕಟ್ಟೆಯ ಮೇಲೆ ಹಳದಿ ಮೇಣದ ಬತ್ತಿ ಉರಿಯುತಿತ್ತು. ಹೆಂಗಸೊಬ್ಬಳು ಅಷ್ಟರಲ್ಲಿ ಒಳಗೆ ಬಂದಳು. ಮುಖಕ್ಕೆ ತೆಳುವಾದ ಬಿಳಿಯ ಮಾಸ್ಕ್ ಹಾಕಿಕೊಂಡಿದ್ದಳು. ಒಳಗೆ ಬಂದವಳೇ ನಸುನಕ್ಕು, “please lie down sir” ಎಂದಳು. ನನ್ನ ಶೂಸನ್ನು ಕೂತಲ್ಲೆ ಕಳಚಿ ಪಕ್ಕಕ್ಕಿಟ್ಟು ಬೆಡ್ಡಿನ ಮೇಲೆ ಅಂಗಾತ ಮಲಗಿದೆ. ಇವಳೇ ಇರಬಹುದು ಪ್ರಿಮಿಥ್ ಲೇಪ್ಚಾ ಅಂದುಕೊಂಡೆ. ಕೋಣೆಯ ಒಂದು ಬದಿಯಲ್ಲಿದ್ದ ಸಿಂಕಿನಲ್ಲಿ ತನ್ನೆರಡೂ ಕೈಗಳನ್ನು ತೊಳೆದುಕೊಂಡು, ನನ್ನ ತಲೆಯ ಹಿಂದೆ ಬಂದು ಬಾಗಿದಳು. ಗೋಧಿ ಬಣ್ಣ. ದಟ್ಟವಾದ ಕಪ್ಪು ಕೂದಲನ್ನು ಒಟ್ಟುಮಾಡಿ ದುಂಡಗೆ ಕಟ್ಟಿದ್ದಳು. ಸಣ್ಣ ಕಣ್ಣುಗಳು.“Close your eyes and relax sir”, ಎಂದಳು.

ಕಣ್ಣು ಮುಚ್ಚಿದೆ. ಆದರೆ ಅಷ್ಟು ಸುಲಭವಾಗಿ ರಿಲ್ಯಾಕ್ಸ್ ಆಗಲು ಹೇಗೆ ಸಾಧ್ಯ?! ತಣ್ಣಗಿದ್ದ ತನ್ನೆರಡೂ ಅಂಗೈಯನ್ನು ನನ್ನ ಮುಖದ ಮೇಲಿರಿಸಿದಳು. ನನಗರಿವಿಲ್ಲದೇ ಬಿಗಿಯಾಗಿದ್ದ ನನ್ನ ಹುಬ್ಬುಗಳು ಕಂಪಿಸಿದವು. ಅವಳ ಕೈ ಮೆಲ್ಲಗೆ ಹಣೆಯತ್ತ ಸಾಗಿತು. ಬಿಗಿಯಾಗಿ ಚಡಪಡಿಸುತ್ತಿದ್ದ ನನ್ನ ಹುಬ್ಬುಗಳನ್ನು ನೇವರಿಸಿದಳು. ನನ್ನ ಕಣ್ಣುಗಳು ಮುಚ್ಚಿದ್ದರೂ ವಿಪರೀತ ವಿಚಲಿತವಾಗಿದ್ದನ್ನು ಅವಳು ಸ್ಪರ್ಶದಲ್ಲೇ ಗಮನಿಸಿರಬೇಕು. ತನ್ನ ಬೆರಳುಗಳಿಂದ ಸಮಾಧಾನವಾಗಿ ನನ್ನ ಕಣ್ಣು ರೆಪ್ಪೆಗಳನ್ನು ಮೆಲ್ಲಗೆ ತೀಡುತಿದ್ದಳು.

ಬೆಡ್ಡಿನ ಹಿಂದಿನ ಮರದ ಕಟ್ಟೆಯ ಮೇಲೆ ಹಳದಿ ಮೇಣದ ಬತ್ತಿ ಉರಿಯುತಿತ್ತು. ಹೆಂಗಸೊಬ್ಬಳು ಅಷ್ಟರಲ್ಲಿ ಒಳಗೆ ಬಂದಳು. ಮುಖಕ್ಕೆ ತೆಳುವಾದ ಬಿಳಿಯ ಮಾಸ್ಕ್ ಹಾಕಿಕೊಂಡಿದ್ದಳು. ಒಳಗೆ ಬಂದವಳೇ ನಸುನಕ್ಕು, “please lie down sir” ಎಂದಳು. ನನ್ನ ಶೂಸನ್ನು ಕೂತಲ್ಲೆ ಕಳಚಿ ಪಕ್ಕಕ್ಕಿಟ್ಟು ಬೆಡ್ಡಿನ ಮೇಲೆ ಅಂಗಾತ ಮಲಗಿದೆ. ಇವಳೇ ಇರಬಹುದು ಪ್ರಿಮಿಥ್ ಲೇಪ್ಚಾ ಅಂದುಕೊಂಡೆ.

ಸಂಗೀತದ ಲಯ ಕಡಿಮೆಯಾಯಿತು. ಈ ತಂಪಾದ ಸ್ಪರ್ಶ, ನೇವರಿಕೆ ಅಷ್ಟು ಸುಲಭಕ್ಕೆ ಒಗ್ಗುವಂತಿರಲಿಲ್ಲ. ನನ್ನ ಮಂಡಿ ಚಿಪ್ಪುಗಳು, ಕೈಕಾಲಿನ ಬೆರಳುಗಳು ಇದ್ದಲ್ಲೇ ಪ್ರತಿಭಟಿಸುತ್ತಿದ್ದವು. ಕ್ರಮೇಣ ಅಂಗೈಸ್ಪರ್ಶ ಬಿಗಿಯಾಗುತ್ತಿದ್ದಂತೆ ನನ್ನ ದೇಹದ ಪ್ರತೀ ಅಂಗಾಂಗಗಳಿಗೂ ಜೀವಂತಿಕೆ ಬಂದಂತೆನಿಸಿತು. ಹಣೆಯ ಮಧ್ಯದಿಂದ ಪ್ರಾರಂಭಿಸಿ ಎರಡೂ ಕೈಗಳಿಂದ ನಿಧಾನವಾಗಿ ಇಳಿಯುತ್ತ ಕಿವಿಯ ಬಳಿ ನಿಲ್ಲುವಳು. ನಂತರ ಕಿವಿಯ ಹಿಂಭಾಗದಿಂದ ಮೆಲ್ಲಗೆ ಇಳಿಯುತ್ತಾ ನನ್ನೆರಡೂ ಭುಜದವರೆಗೆ ನೀವುತ್ತಿದ್ದಳು. ನಂತರ ಸಣ್ಣದೊಂದು ಟ್ವೀಜರ್ರಿನ ಸಹಾಯದಿಂದ ಮುಖದ ಮೇಲೆ ಇಂಚಿಂಚಿಗೂ ಕವಿದುಕೊಂಡಿದ್ದ ಬ್ಲ್ಯಾಕ್ಹೆಡ್ಗಳನ್ನು ಅತ್ಯಂತ ಆಸ್ಥೆಯಿಂದ ಬಗೆದು ಬಗೆದು ಹೊರಹಾಕಿದಳು. ಅವಳ ದೃಢವಾದ ಸ್ಪರ್ಶಕ್ಕೆ ಸಂಪೂರ್ಣ ಶರಣಾಗದೆ ಬೇರೆ ವಿಧಿಯಿರಲಿಲ್ಲ. ನನ್ನ ಮುಖಕ್ಕೆ ದೇಹದ ಎಲ್ಲೆಡೆಯಿಂದ ರಕ್ತ ನುಗ್ಗಿದಂತಾಗಿ ಕೈಕಾಲುಗಳು ರೋಮಾಂಚನದಿಂದ ಹಿಂಜಿದವು. ಕಣ್ಣುಗಳಲ್ಲಿ ನೀರು ತುಂಬಿ ಕ್ಷಣಾರ್ಧದಲ್ಲಿ ಕಾರ್ಯಕಾರಣವಿಲ್ಲದ ದುಃಖ ಆವರಿಸಿತು. ಅವಳ ಎರಡೂ ಕೈಗಳನ್ನು ಬಿಗಿಯಾಗಿ ಹಿಡಿದು ನಿಲ್ಲಿಸಿಬಿಡು ಎಂದು ಬೇಡಿಕೊಳ್ಳಬೇಕು ಅನ್ನಿಸಿತು. ಅಷ್ಟರಲ್ಲಿ ಅವಳು ಮೆಲ್ಲಗೆ ಭುಜವನ್ನು ತಟ್ಟಿ ಬೋರಲಾಗಿಮಲಗಲು ಹೇಳಿದಳು. ತಿರುಗಿದೆ. ತನ್ನೆರಡೂ ಹೆಬ್ಬೆರಳುಗಳಿಂದ ನನ್ನ ಕತ್ತಿನ ಕೆಳಭಾಗನ್ನು ನೇವರಿಸುತ್ತಿದ್ದಳು. ಸಂಗೀತ ಮತ್ತೆ ಬದಲಾಗಿ ಅನಿರೀಕ್ಷಿತ ಏರಿಳಿತಗಳುಂಟಾದವು.

ಸಂಗೀತದ ಲಯ ಕಡಿಮೆಯಾಯಿತು. ಈ ತಂಪಾದ ಸ್ಪರ್ಶ, ನೇವರಿಕೆ ಅಷ್ಟು ಸುಲಭಕ್ಕೆ ಒಗ್ಗುವಂತಿರಲಿಲ್ಲ. ನನ್ನ ಮಂಡಿ ಚಿಪ್ಪುಗಳು, ಕೈಕಾಲಿನ ಬೆರಳುಗಳು ಇದ್ದಲ್ಲೇ ಪ್ರತಿಭಟಿಸುತ್ತಿದ್ದವು. ಕ್ರಮೇಣ ಅಂಗೈಸ್ಪರ್ಶ ಬಿಗಿಯಾಗುತ್ತಿದ್ದಂತೆ ನನ್ನ ದೇಹದ ಪ್ರತೀ ಅಂಗಾಂಗಗಳಿಗೂ ಜೀವಂತಿಕೆ ಬಂದಂತೆನಿಸಿತು. ಹಣೆಯ ಮಧ್ಯದಿಂದ ಪ್ರಾರಂಭಿಸಿ ಎರಡೂ ಕೈಗಳಿಂದ ನಿಧಾನವಾಗಿ ಇಳಿಯುತ್ತ ಕಿವಿಯ ಬಳಿ ನಿಲ್ಲುವಳು.

ಬೆಡ್ಡಿನಿಂದ ಇಳಿದು ಕೋಣೆಯ ಬಾಗಿಲಿನತ್ತ ನಡೆದೆ. ರೆಟ್ಟೆಗಳಲ್ಲಿ ಉಳಿದಿದ್ದ ಎಲ್ಲಾ ಶಕ್ತಿಯಿಂದ ಭಾರೀ ಕಬ್ಬಿಣದ ಬಾಗಿಲನ್ನು ನೂಕಿ ತೆಗೆದೆ. ಹೊರಗೆ ಚುಚ್ಚುವ ಗಾಳಿ ಬೀಸುತ್ತಿತ್ತು. ವಿಶಾಲವಾದ ಕಡಲ ತೀರ. ಸುತ್ತಲು ಮರಳು. ಎಲ್ಲವೂ ಹಗೂರ. ಹಿಂದೆಂದೂ ಕಂಡಿರದ ಸಂತೋಷದ ಘಳಿಗೆ ಅದಾಗಿತ್ತು. ಒಂದೆಡೆಯಿಂದ ಜಿಗಿದು ಬರುತ್ತಿರುವ ಕುದುರೆಗಳು, ಚಿಮ್ಮುವ ಸಮುದ್ರದಲೆಗಳು, ಮತ್ತು ಈಗಷ್ಟೆ ಹುಟ್ಟಿರುವ ನಾನು. ಹತ್ತಿರಕ್ಕೆ ಬಂದ ಕುದುರೆಯೊಂದರ ಜೊತೆ ಸೇರಿ ಓಡಿದೆ. ಸಣ್ಣ ರೋಮ ತುಂಬಿದ ಅದರ ಬಲಿಷ್ಟ ದೇಹವನ್ನು ನೇವರಿಸಿದೆ. ಅದು ಕೆನೆದು ಇನ್ನೂ ಜೋರಾಗಿ ಮುಂದಕ್ಕೆ ನೆಗೆಯಿತು. ದೂರದಲ್ಲಿ, ಮರಳ ರಾಶಿಯಲ್ಲಿ ಕೂತ ಪುಟ್ಟ ಮಕ್ಕಳ ಆಕಾರ ಕಂಡವು. ಹತ್ತಿರ ಹೋದಂತೆ ಸ್ಪಷ್ಟವಾಗಿ ಕಂಡ ಮಕ್ಕಳ ಗುಂಪು. ಮರಳಿನ ಗೋಪುರ ಕಟ್ಟಿ ನಡುನಡುವೆ ಕಪ್ಪೆಚಿಪ್ಪುಗಳನ್ನು ಅದುಮಿಡುತ್ತಿದ್ದವು. ಯಾರ ಮಕ್ಕಳು ಇವರು? ನನಗೆ ಪರಿಚಿತರಲ್ಲವೇ? ಅಪ್ಪ! ಅಮ್ಮ! ನೆರೆಗೂದಲು, ನಡುವಯಸ್ಸು ಮೀರಿದ ಸುಕ್ಕಿ ಸೊರಗಿದ ಮುಖ, ಆದರೆ ಅಂಬೆಗಾಲಿಡುವ ಮಗುವಿನ ದೇಹ! ಒಂದೇ ಸಮನೆ ಮರಳಿನ ಗುಡ್ಡೆಯನ್ನು ಕಟ್ಟುತ್ತಾ ಮನೆಯಾಟ ಆಡುತ್ತಿವೆ. ಪಕ್ಕದಲ್ಲಿ ನನ್ನ ಗೆಳೆಯ. ಈಗಷ್ಟೆ ಮದುವೆಯಾಗಿ ಬದುಕು ಕಟ್ಟಿಕೊಳ್ಳಬೇಕೆನ್ನುವ ಉತ್ಸಾಹದಲ್ಲಿರುವ ಜಸ್ಪ್ರೀತ್ ಇಲ್ಲಿ ಅಸಹಾಯಕ ಶಿಶುವಾಗಿ, ಯಾವುದೋ ಹಟದಲ್ಲಿ ಮರಳನ್ನು ಒಂದೇ ಸಮನೆ ಅಗೆಯುತ್ತಿದ್ದಾನೆ. ಹತ್ತಿರ ಹೋಗಿ ಪಕ್ಕದಲ್ಲಿ ಕೂತ ನನ್ನನ್ನು ಬಲವಾಗಿ ದೂಡಿ ರಚ್ಚೆ ಹಿಡಿದಿದ್ದಾನೆ. ಕೊಂಚ ದೂರದಲ್ಲಿ ಅವಳು. ಅಂಗಾತ ಮಲಗಿದ್ದಾಳೆ. ಮುಖಕ್ಕೆ ಅದೇ ತೆಳುವಾದ ಮಾಸ್ಕ್ ಹಾಕಿದ್ದಾಳೆ. ಕೂದಲು ಬಿಚ್ಚಿ ಹರಡಿವೆ. ನೀಳ ಕೈಬೆರಳುಗಳನ್ನು ಮರಳಿನೊಳಗೆ ಹುಗಿದು, ಎದೆಯನ್ನು ಮುಂದಕ್ಕೆ ಸೆಟೆದು ಮಲಗಿದ್ದಾಳೆ. ಆವಳು ನನ್ನನ್ನು ದಿಟ್ಟಿಸಿ ನೋಡುತಿದ್ದಾಳೆ. ಅದು ಹುಸಿತನಕ್ಕೆ, ಪೊಳ್ಳುತನಕ್ಕೆ ಎಳ್ಳಷ್ಟೂ ಅವಕಾಶ ನೀಡದಂಥ ತೀಕ್ಷ್ಣ ನೋಟ.  “ಯಾಕಿಷ್ಟು ತಡ?” “ಇಷ್ಟು ದಿನ ಎಲ್ಲಿದ್ದೆ?” “ಯಾಕಿಷ್ಟು ಹಿಂಜರಿಕೆ?” ಎಂದು ಅವಳ ಸಣ್ಣಕಣ್ಣುಗಳು ಕಾಳಜಿಯಿಂದ ಎಡಬಿಡದೆ ಪ್ರಶ್ನಿಸುತ್ತಿವೆ. ಕೇಳಿಸುತ್ತಿದ್ದ ಸಂಗೀತದ ಹಿಡಿತ ತಪ್ಪಿತು. ಸ್ವರಗಳು ದಿಕ್ಕಾಪಾಲಾಗಿ ಕಲ್ಪನೆಗೂ ಮೀರಿದ ಎತ್ತರಕ್ಕೆ ಏರಿದವು.

 

(ಇಲ್ಲಷ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)